ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಲ್ ನಿನೋ ಪರಿಣಾಮ; ತಾಪಮಾನ ಇನ್ನಷ್ಟು ಹೆಚ್ಚಳ: ವಿಶ್ವ ಹವಾಮಾನ ಸಂಸ್ಥೆ ಎಚ್ಚರಿಕೆ

ಮುಂಗಾರು ಮಾತ್ರವಲ್ಲ ಹಿಂಗಾರು ಮಳೆ ಕೂಡ ಈ ಬಾರಿ ಕೈಕೊಟ್ಟಿದೆ. ಎಲ್ ನಿನೋ ಪರಿಣಾಮ ಈಗಾಗಲೇ ಕೃಷಿ ಬೆಳೆಯ ಮೇಲೆ ಬಿದ್ದಿದೆ. ಇದರೊಂದಿಗೆ ತೀವ್ರ ಸೆಕೆ ಜನರನ್ನು ಕಂಗೆಡಿಸಿದೆ. ಇದು ಕೇವಲ ಆರಂಭ ಮಾತ್ರ. ಈ ಬಾರಿ ಚಳಿಗಾಲ ಇನ್ನಷ್ಟು ಭೀಕರವಾಗಲಿದೆ. ತಾಪಮಾನ ತೀವ್ರವಾಗಿ ಹೆಚ್ಚಳವಾಗಲಿದೆ ಎನ್ನುವ ಎಚ್ಚರಿಕೆಯನ್ನು ವಿಶ್ವ ಹವಾಮಾನ ಸಂಸ್ಥೆ ನೀಡಿದೆ.

ಸಂಗ್ರಹ ಚಿತ್ರ

ನವದೆಹಲಿ: ಮುಂದಿನ ನವೆಂಬರ್‌ನಿಂದ ಜನವರಿ ಅವಧಿಯಲ್ಲಿ ತಾಪಮಾನ ( weaher temperature) ಸರಾಸರಿಗಿಂತ 3.8 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಎಲ್ ನಿನೋ ಪರಿಣಾಮ ಈಗಾಗಲೇ ಮುಂಗಾರು ಮಳೆ ಕೈಕೊಟ್ಟಿದೆ, ಹಿಂಗಾರು ಮಳೆಯ (Rain) ಮೇಲೂ ಇದು ಪರಿಣಾಮ ಬೀರಿದೆ. ಕೃಷಿ ಬೆಳೆಗಾರರು (farmer) ಮಾತ್ರವಲ್ಲ ಜನಸಾಮಾನ್ಯರನ್ನು ಕೂಡ ತೀವ್ರ ಬಿಸಿಲು ಕಂಗೆಡಿಸಿದೆ. ಇದು ಮುಂದಿನ ನವೆಂಬರ್‌, ಡಿಸೆಂಬರ್‌, ಜನವರಿಯಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಎಲ್ ನಿನೋ ಪರಿಣಾಮವಾಗಿ ಜಾಗತಿಕ ಹವಾಮಾನ ಮಾದರಿಗಳಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ವಿಶ್ವ ಹವಾಮಾನ ಸಂಸ್ಥೆ (World Meteorological Organization) ತಿಳಿಸಿದೆ.

ವಿಶ್ವ ಹವಾಮಾನ ಸಂಸ್ಥೆಯು ಬುಧವಾರ ತಡರಾತ್ರಿ ಮುಂದಿನ ದಿನಗಳ ಹವಾಮಾನ ಮುನ್ಸೂಚನೆ ನೀಡಿದೆ. ಇದರಲ್ಲಿ ಮುಂದಿನ ದಿನಗಳಲ್ಲಿ ಭಾರತ ಸೇರಿದಂತೆ ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗಬಹುದು ಮತ್ತು ಮಳೆಯ ಪ್ರಮಾಣ ಕಡಿಮೆಯಾಗಬಹುದು. ನವೆಂಬರ್ ತಿಂಗಳಿನಿಂದ ಮುಂದಿನ ಜನವರಿ ಅವಧಿಯಲ್ಲಿ ತಾಪಮಾನ ಸರಾಸರಿ 3.8 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ.

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದುರಂತ: ದೋಣಿ ಮಗುಚಿ ನಾಪತ್ತೆಯಾಗಿದ್ದ ನಾಲ್ವರು ಯುವಕರ ಮೃತದೇಹ ಪತ್ತೆ

ಉಷ್ಣವಲಯದ ಪೆಸಿಫಿಕ್ ಮಹಾಸಾಗರದ ಮೇಲ್ಮೈ ತಾಪಮಾನ 0.5 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾದರೆ ಅದನ್ನು ವಿಶ್ವ ಹವಾಮಾನ ಸಂಸ್ಥೆ ಎಲ್ ನಿನೋ ಎಂದು ಘೋಷಿಸುತ್ತದೆ. ಅತ್ಯಂತ ಪ್ರಬಲವಾದ ಎಲ್ ನಿನೋ ಪರಿಣಾಮ ಮಳೆ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ತೀವ್ರ ಬರಗಾಲ, ಭಾರಿ ಮಳೆ ಅಥವಾ ಪ್ರವಾಹ ಉಂಟಾಗುವ ಸಾಧ್ಯತೆ ಇರುತ್ತದೆ.

ವಿಶ್ವ ಹವಾಮಾನ ಸಂಸ್ಥೆ ಬಿಡುಗಡೆ ಮಾಡಿರುವ ಹೊಸ ವರದಿಯ ಪ್ರಕಾರ ಈ ವರ್ಷಾಂತ್ಯದ ವೇಳೆಗೆ ಜಾಗತಿಕ ತಾಪಮಾನವು ತೀವ್ರವಾಗಿ ಏರಿಕೆಯಾಗಬಹುದು. ಹೀಗಾಗಿ ಇದನ್ನು ತಗ್ಗಿಸಲು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತುರ್ತಾಗಿ ಮತ್ತು ಕಠಿಣವಾಗಿ ತಗ್ಗಿಸುವ ಅಗತ್ಯವಿದೆ ಎಂದು ತಿಳಿಸಿದೆ.

ದಕ್ಷಿಣ ಏಷ್ಯಾದ ಮುಖ್ಯವಾಗಿ ಅಫ್ಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾದ ಬಹುತೇಕ ಭಾಗಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚಿರಬಹುದು ಎಂದು ಹೇಳಿದೆ.

ಪೂರ್ವ ಆಫ್ರಿಕಾದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದ್ದು, ಭಾರಿ ಮಳೆ ಮತ್ತು ಪ್ರವಾಹದ ಬಗ್ಗೆ ಆತಂಕ ವ್ಯಕ್ತವಾಗಿದೆ. ದಕ್ಷಿಣ ಆಫ್ರಿಕಾದಲ್ಲಿ ಒಣ ಹವಾಮಾನ, ಉತ್ತರ ಮತ್ತು ದಕ್ಷಿಣ ಅಮೆರಿಕಾದಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

ಪ್ರೀತಿಯ ಬಲೆಗೆ ಬೀಳಿಸಿ ದೇಶದ ಸೂಕ್ಷ್ಮ ಮಾಹಿತಿ ಪಡೆಯಲು ಪಾಕಿಸ್ತಾನದ ಯತ್ನ: ಜಮ್ಮು-ಕಾಶ್ಮೀರ ಪೊಲೀಸರಿಂದ ಎಚ್ಚರಿಕೆ

ದಕ್ಷಿಣ ಏಷ್ಯಾದ ಭಾಗಗಳಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್ ಅವಧಿಯಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಇದು ಕೃಷಿ ಚಟುವಟಿಕೆಗಳಿಗೆ ಅತ್ಯಂತ ನಿರ್ಣಾಯಕವಾಗಿರುತ್ತದೆ. ಆದರೆ ಎಲ್ ನಿನೋ ಈ ಮಳೆಯ ವ್ಯತ್ಯಯಕ್ಕೆ ಕಾರಣವಾಗಲಿದೆ. ಇದರ ಪರಿಣಾಮ ದೀರ್ಘಕಾಲದವರೆಗೆ ಕಂಡುಬರಲಿವೆ. ಹೀಗಾಗಿ ಈ ಸಂದರ್ಭದಲ್ಲಿ ವಿಶೇಷವಾಗಿ ಅತ್ಯಂತ ದುರ್ಬಲ ಸಮುದಾಯಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವ ಹವಾಮಾನ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಸೆಲೆಸ್ಟೆ ಸೌಲೋ ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author