Trump Tariffs: ಅಮೆರಿಕದಿಂದ ಶೇ. 50ರಷ್ಟು ಸುಂಕ ಜಾರಿ; ನಾಳೆ ಪ್ರಧಾನಿ ಕಚೇರಿಯಲ್ಲಿ ಮಹತ್ವದ ಸಭೆ
ವಾಷಿಂಗ್ಟನ್ ಭಾರತೀಯ ಸರಕುಗಳಿಗೆ ಸುಂಕಗಳನ್ನು ದ್ವಿಗುಣಗೊಳಿಸಿದ ಅನಂತರ ಭಾರತೀಯ ರಫ್ತುದಾರರ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡಲಿದೆ. ಈ ಹಿನ್ನೆಲೆಯಲ್ಲಿ ಇದಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡಬೇಕು ಎನ್ನುವ ಕುರಿತು ಮಂಗಳವಾರ (ಆಗಸ್ಟ್ 26) ಪ್ರಧಾನಿ ಮೋದಿ ಕಚೇರಿಯಲ್ಲಿ ಸಭೆ ಕರೆಯಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.


ನವದೆಹಲಿ: ಭಾರತೀಯ ಸರಕುಗಳಿಗೆ (Indian goods) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (US President Donald Trump) ವಿಧಿಸಿರುವ ಶೇ. 50ರಷ್ಟು ಸುಂಕಗಳು (Trump tariffs) ಜಾರಿಯಾದ ಬೆನ್ನಲ್ಲೇ ಮಂಗಳವಾರ (ಆಗಸ್ಟ್ 26) ಪ್ರಧಾನಿ ನರೇಂದ್ರ ಮೋದಿ ಅವರ ಕಚೇರಿಯಲ್ಲಿ (Prime Ministers Office) ಸಭೆ ಕರೆಯಲಾಗಿದೆ. ಭಾರತೀಯ ರಫ್ತುದಾರರಿಗೆ ಎದುರಾಗಬಹುದಾದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಈ ಸಭೆಯನ್ನು ಕರೆಯಲಾಗಿದೆ. ಈ ಸಭೆಯು ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಎಂದು ಸಂಬಂಧಪಟ್ಟ ಅಧಿಕಾರಿಗಳು ತಿಳಿಸಿದ್ದಾರೆ.
ವಾಷಿಂಗ್ಟನ್ ಭಾರತೀಯ ಸರಕುಗಳಿಗೆ ಸುಂಕಗಳನ್ನು ದ್ವಿಗುಣಗೊಳಿಸಿದ ಅನಂತರ ಭಾರತೀಯ ರಫ್ತುದಾರರ ಮೇಲೆ ಇದು ಹೆಚ್ಚಿನ ಒತ್ತಡ ಉಂಟು ಮಾಡಲಿದೆ. ಅಮೆರಿಕ ಮಾರುಕಟ್ಟೆಗೆ ಪ್ರವೇಶಿಸುವ ಭಾರತೀಯ ಸರಕುಗಳು ಇನ್ನು ಮುಂದೆ ಶೇ. 50ರಷ್ಟು ಸುಂಕಕ್ಕೆ ಒಳಪಡುತ್ತವೆ.
ಅಮೆರಿಕದಲ್ಲಿ ಹೆಚ್ಚಿನ ಸುಂಕಗಳ ಪರಿಣಾಮವನ್ನು ಎದುರಿಸಲು ಭಾರತೀಯ ರಫ್ತುದಾರರಿಗೆ ಸೂಕ್ತ ಕ್ರಮಗಳನ್ನು ನಿರ್ದೇಶಿಸಲು ನಡೆಯುವ ಉನ್ನತ ಮಟ್ಟದ ಈ ಸಭೆ ಪ್ರಧಾನ ಮಂತ್ರಿಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಶೇ. 25ರಷ್ಟು ತೆರಿಗೆಯನ್ನು ಅರ್ಥ ಮಾಡಿಕೊಳ್ಳಲು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ರಫ್ತುದಾರರು ಮತ್ತು ರಫ್ತು ಉತ್ತೇಜನಾ ಮಂಡಳಿಗಳೊಂದಿಗೆ ಸಮಾಲೋಚನೆ ನಡೆಸುತ್ತಿದೆ.
ಈಗಾಗಲೇ ಇದು ಲಾಭಾಂಶದ ಜತೆಗೆ ಸ್ಪರ್ಧೆಯನ್ನು ಕಡಿಮೆ ಮಾಡಿದೆ. ನೀತಿ ಆಯ್ಕೆಗಳಲ್ಲಿ ವಿಶಾಲವಾದ, ಆರ್ಥಿಕ- ವ್ಯಾಪಿ ಕ್ರಮಗಳಿಗಿಂತ ನಿರ್ದಿಷ್ಟ ಕೈಗಾರಿಕೆಗಳಿಗೆ ಉದ್ದೇಶಿತ ಬೆಂಬಲ ಸೇರಿವೆ ಎಂದು ಹಲವು ಸಂಸ್ಥೆಗಳು ತಿಳಿಸಿವೆ.
ರಫ್ತುಆಧಾರಿತ ಘಟಕಗಳು ಮತ್ತು ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು ರಕ್ಷಿಸುವುದು ಸರ್ಕಾರದ ಆದ್ಯತೆ. ಯಾಕೆಂದರೆ ಇವುಗಳು ಹೆಚ್ಚಾಗಿ ಬಾಹ್ಯ ಘರ್ಷಣೆಗಳಿಗೆ ಗುರಿಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: MLA Rahul Mamkootathil: ಮಹಿಳೆಯರಿಗೆ ಕಿರುಕುಳ ಆರೋಪ: ಕಾಂಗ್ರೆಸ್ ಶಾಸಕ ರಾಹುಲ್ ಮಮ್ಕೂಟತಿಲ್ ಪಕ್ಷದಿಂದ ಅಮಾನತು
ರಫ್ತುದಾರರು ಸುಂಕ ಹೆಚ್ಚಳಕ್ಕೆ ಸಿದ್ಧರಾಗುತ್ತಿದ್ದಂತೆ ಭಾರತ ಯಾವ ರೀತಿ ಇದಕ್ಕೆ ಪ್ರತಿಕ್ರಿಯಿಸಬೇಕು ಎನ್ನುವ ಅಂಶಗಳನ್ನು ಮಂಗಳವಾರದ ಸಭೆಯಲ್ಲಿ ಅಂತಿಮಗೊಳಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.