ಲಾವಣ್ಯ ಗೌಡ (ಶಿಕ್ಷಣ ತಜ್ಞೆ ಮತ್ತು ಉದ್ಯಮಿ)
ಕಳೆದ ಹತ್ತು ವರ್ಷಗಳ ನನ್ನ ಜೀವನದ ಬಹುಪಾಲು ಸಮಯವನ್ನು ನಾನು ದಾರಿಯಲ್ಲೇ ಕಳೆದಿ ದ್ದೇನೆ. ಭಾರತದ ಮೂಲೆಮೂಲೆಗಳನ್ನು ಸುತ್ತುತ್ತಾ, ಗಡಿಗಳನ್ನು ದಾಟಿ ಜಾಗತಿಕ ವೇದಿಕೆಗಳವರೆಗೆ ಪ್ರಯಾಣಿಸುತ್ತಾ ನಾನು ಒಂದು ಜೀವನಸತ್ಯವನ್ನು ಕಂಡುಕೊಂಡಿದ್ದೇನೆ: ಸಂಗೀತ ಎಂಬುದು ಮನುಷ್ಯರನ್ನು ಬೆಸೆಯವ ಅತಿ ದೊಡ್ಡ ಶಕ್ತಿ.
ನನ್ನ ಪಯಣದಲ್ಲಿ ಉತ್ತರ ಕರ್ನಾಟಕದ ಗವಾಯಿ ಮಠ ಮತ್ತು ಗವಿಮಠದಂತಹ ಪವಿತ್ರ ತಾಣ ಗಳಿಗೆ ಭೇಟಿ ನೀಡಿದಾಗ, ಅಲ್ಲಿನ ಸಂಗೀತದ ತಪಸ್ಸು ಮತ್ತು ಯುವ ಪ್ರತಿಭೆಗಳನ್ನು ಕಂಡು ನಾನು ಸಂಪೂರ್ಣವಾಗಿ ವಿನಮ್ರಳಾದೆ. ಅವರ ಕಣ್ಣುಗಳಲ್ಲಿನ ಕನಸುಗಳು, ಅವರ ಧ್ವನಿಯಲ್ಲಿನ ಆಳ, ಎಲ್ಲವೂ ನನ್ನನ್ನು ಆವರಿಸಿಕೊಂಡಿದ್ದವು. ಅಂದಿನಿಂದ, ಸಂಗೀತ ಶಿಕ್ಷಣವನ್ನು ಕೇವಲ ಹವ್ಯಾಸ ವಾಗಿ ಉಳಿಸದೆ, ಅದನ್ನೊಂದು ‘ಬದುಕಿನ ಬಂಡವಾಳ’ವನ್ನಾಗಿ ಮಾಡಬೇಕೆಂದು ನಿರ್ಧಾರ ಮಾಡಿದೆ.
ಇದನ್ನೂ ಓದಿ: Lavanya Gowda Column: ಎಐ ಯುಗದಲ್ಲಿ ರೆಕ್ಕೆ ಬಿಚ್ಚಲಿ ಗ್ರಾಮೀಣ ಪ್ರತಿಭೆ
ಸಂಗೀತವು ಮಗುವಿನ ಮನಸ್ಸಿನ ಮೇಲೆ ಮಾಡುವ ಪರಿಣಾಮಗಳು ಅದ್ಭುತ. ಅವು ಕೇವಲ ಸ್ವರ ಗಳಲ್ಲ, ಶಿಸ್ತು, ಏಕಾಗ್ರತೆ ಮತ್ತು ಆತ್ಮವಿಶ್ವಾಸಕ್ಕೆ ಬೇಕಾದ ಟಾನಿಕ್. ಸಂಗೀತದ ಪಾಠ ಕೇಳಿದಾಗ ಪೋಷಕರ ಕಣ್ಣಿನಲ್ಲಿ ಕಾಣುವ ಆಶಾಭಾವ, ಶಿಕ್ಷಕರು ಕಲಿಸುವಾಗ ಪಡೆಯವ ತೃಪ್ತಿ, ಇದೆಲ್ಲವೂ ಸಮಾಜದ ಆರೋಗ್ಯಕರ ಬೆಳವಣಿಗೆಯ ಲಕ್ಷಣಗಳು. ಸಂಗೀತ ಕುಟುಂಬಗಳ ನಡುವಿನ ಬಾಂಧವ್ಯಕ್ಕೆ ಸೇತು.
ಸಂಗೀತ ಕ್ಷೇತ್ರದಲ್ಲಿ ಎಲ್ಲರೂ ಪ್ರಸಿದ್ಧರಾಗಲು ಸಾಧ್ಯವಿಲ್ಲ ಎಂಬುದು ವಾಸ್ತವ. ಆದರೆ, ಪ್ರಸಿದ್ಧ ರಾಗದ ಸಾವಿರಾರು ಅದ್ಭುತ ಸಂಗೀತಗಾರರಿಗೆ ಗೌರವಯತವಾಗಿ ಬದುಕಲು ಹಣದ ಅವಶ್ಯಕತೆ ಯಿದೆ. ಅದಕ್ಕಾಗಿ ನಾನು ಸಂಗೀತವನ್ನು ‘ಕೌಶಲ್ಯಾಧಾರಿತ ಉದ್ಯೋಗ’ವನ್ನಾಗಿ ರೂಪಿಸುತ್ತಿದ್ದೇನೆ. ಪ್ರತಿಯೊಬ್ಬ ಕಲಾವಿದನಿಗೂ ತನ್ನ ಕಲೆಯ ಮೂಲಕ ಘನತೆಯಿಂದ ಬದುಕುವ ಅವಕಾಶ ಸಿಗಬೇಕು. ಮಖ್ಯಮಂತ್ರಿಗಳಿಗೆ ಮನವಿ ಒಬ್ಬ ಶಿಕ್ಷಣ ತಜ್ಞೆಯಾಗಿ, ಕಳೆದ ಒಂದು ದಶಕದ ನನ್ನ ಅನುಭವದಲ್ಲಿ ನಾನು ಕಂಡುಕೊಂಡಿದ್ದೇನೆ- ಶಿಕ್ಷಣ ಎಂದರೆ ಕೇವಲ ಅಕ್ಷರ ಜ್ಞಾನವಲ್ಲ.
ಅದು ಬದುಕಿನ ಕೌಶಲ್ಯ. ಈ ನಿಟ್ಟಿನಲ್ಲಿ, ಶಿಕ್ಷಣ ಕ್ಷೇತ್ರದಲ್ಲಿನ ತಮ್ಮ ಬದ್ಧತೆಯನ್ನು ಬಲ್ಲ ನಾನು, ಗೌರವಾನಿ ತ ಮಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ: ಸಂಗೀತ ಶಿಕ್ಷಣವನ್ನು ಕೇವಲ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಸೀಮಿತಗೊಳಿಸದೆ, ಅದನ್ನು ರಾಜ್ಯದ ಕೌಶಲ್ಯಾಧಾರಿತ ಪಠ್ಯಕ್ರಮದ ಭಾಗವನ್ನಾಗಿ ಮಾಡಿ. ಪ್ರತಿಯೊಂದು ಜಿಲ್ಲೆಯಲ್ಲಿ ‘ಸಂಗೀತ ಮತ್ತು ತಾಂತ್ರಿಕ ಕೌಶಲ್ಯ ಕೇಂದ್ರ’ಗಳನ್ನು ಸ್ಥಾಪಿಸಿದರೆ, ನಮ್ಮ ಯವ ಕಲಾವಿದರು ಸಂಗೀತದ ಜೊತೆಗೆ ಎಐ ಮತ್ತು ಡಿಜಿಟಲ್ ಕೌಶಲ್ಯಗಳನ್ನು ಕಲಿತು ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಗೆಲ್ಲಬಲ್ಲರು.
ಇದು ನಮ್ಮ ನಾಡಿನ ಸಾವಿರಾರು ಕಲಾವಿದರಿಗೆ ಉದ್ಯೋಗ ಭದ್ರತೆಯನ್ನು ನೀಡುತ್ತದೆ. ಯವ ಜನತೆಗೆ ನನ್ನ ಕರೆ ಇಷ್ಟೆ: ನಿಮ್ಮ ಕಲೆ ನಿಮ್ಮ ದೌರ್ಬಲ್ಯವಲ್ಲ, ಅದು ನಿಮ್ಮ ಅತಿ ದೊಡ್ಡ ಶಕ್ತಿ. ಕೇವಲ ಪದವಿಗಳ ಹಿಂದೆ ಓಡಬೇಡಿ. ನಿಮ್ಮೆಲ್ಲರ ಕೌಶಲ್ಯವನ್ನು ಜಾಗತಿಕ ತಂತ್ರಜ್ಞಾನದೊಂದಿಗೆ ಬೆಸೆಯಿರಿ. ಸಂಗೀತವು ಬದುಕನ್ನು ಬದಲಿಸುತ್ತದೆ, ಕೌಶಲ್ಯವು ಬದುಕನ್ನು ಬಲಪಡಿಸುತ್ತದೆ. ನಮ್ಮ ಕರ್ನಾಟಕವನ್ನು ಸಂಗೀತ ಮತ್ತು ಕೌಶಲ್ಯದ ಜಾಗತಿಕ ತಾಣವನ್ನಾಗಿ ಪರಿವರ್ತಿಸೋಣ.