ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Surendra Pai Column: ಸಂಪರ್ಕ ಸೇತುವೆ!

ಮಳೆಗಾಲದಲ್ಲಿ ನೀರಿನ ರಭಸ ಹೆಚ್ಚಿರುವುದರಿಂದ ಇಂತಹ ಅಡಿಕೆ ಮರದ ಕಾಂಡಗಳ ಸೇತುವೆ ಹೆಚ್ಚು ಪ್ರಚಲಿತವಿದೆ. ಹರಿಯುವ ನೀರಿನ ನಿನಾದದ ನಡುವೆ ತುಂತುರು ಮಳೆಯಲ್ಲಿ ತಲೆಯ ಮೇಲೆ ಕೊಪ್ಪಿ ಹಾಕಿಕೊಂಡೊ ಅಥವಾ ಕೊಡೆ ಹಿಡಿದುಕೊಂಡೋ ಇಂತಹ ಸೇತುವೆಯ ಮೇಲೆ ನಡೆದುಕೊಂಡು ದಾಟುವುದು ಹಿತಕರ ಹಾಗೂ ರೋಮಾಂಚಕಾರಿ ಅನುಭವ ನೀಡಬಲ್ಲದು.

ಸಂಪರ್ಕ ಸೇತುವೆ!

Ashok Nayak Ashok Nayak Aug 7, 2025 10:22 AM

ಸುರೇಂದ್ರ ಪೈ, ಭಟ್ಕಳ

ಮಳೆಗಾಲದ ಬಂತೆಂದರೆ ಸಾಕು ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮನೆಯ ಸಮೀಪ ವಿರುವ ಚಿಕ್ಕ ಹಳ್ಳ, ಕೊಳ್ಳ ನದಿ ತೋರೆಗಳನ್ನು ದಾಟಲು ಅನುಕೂಲವಾಗುವಂತೆ, ಮರದ ಕಾಂಡ ದಿಂದ ಸಂಪರ್ಕ ಸೇತುವೆಯನ್ನು ತಾವೇ ಸ್ವತಃ ನಿರ್ಮಿಸಿಕೊಳ್ಳುತ್ತಾರೆ. ಇದಕ್ಕೆ ಅಡಿಕೆ ಮರಗಳ ಬಳಕೆ ಜಾಸ್ತಿ. ಇದನ್ನು ಸಂಕ ಎನ್ನುವುದುಂಟು. ಬೇಸಿಗೆ ಹಾಗೂ ಮಳೆಗಾಲದಲ್ಲಿ ಅಷ್ಟಾಗಿ ನೀರು ತುಂಬಿ ಹರಿಯದಿರುವ ಕಾರಣ ಜನರು ನಿರಾಯಾಸವಾಗಿ ಸೇತುವೆಯ ಹಾಯವಿಲ್ಲದೇಯೂ ನೆಲದ ಮೇಲೆ ನಡೆದುಕೊಂಡು ಇತ್ತದಿಂದ ಅತ್ತ ಪಯಣಿಸುತ್ತಾರೆ.

ಇದನ್ನೂ ಓದಿ: Surendra Pai Column: ಸಿಬಿಎಸ್‌ಸಿ ಮಾದರಿಯ ಅಳವಡಿಕೆಯಿಂದ ಯಾರಿಗೆ ಲಾಭ ?

ಆದರೆ ಮಳೆಗಾಲದಲ್ಲಿ ನೀರಿನ ರಭಸ ಹೆಚ್ಚಿರುವುದರಿಂದ ಇಂತಹ ಅಡಿಕೆ ಮರದ ಕಾಂಡಗಳ ಸೇತುವೆ ಹೆಚ್ಚು ಪ್ರಚಲಿತವಿದೆ. ಹರಿಯುವ ನೀರಿನ ನಿನಾದದ ನಡುವೆ ತುಂತುರು ಮಳೆಯಲ್ಲಿ ತಲೆಯ ಮೇಲೆ ಕೊಪ್ಪಿ ಹಾಕಿಕೊಂಡೊ ಅಥವಾ ಕೊಡೆ ಹಿಡಿದುಕೊಂಡೋ ಇಂತಹ ಸೇತುವೆಯ ಮೇಲೆ ನಡೆದುಕೊಂಡು ದಾಟುವುದು ಹಿತಕರ ಹಾಗೂ ರೋಮಾಂಚಕಾರಿ ಅನುಭವ ನೀಡಬಲ್ಲದು.