ಭಾರತ ತಂಡದ ಮೂರನೇ ಕ್ರಮಾಂಕಕ್ಕೆ ಸೂಕ್ತ ಆಟಗಾರನನ್ನು ಆರಿಸಿದ ರಾಬಿನ್ ಉತ್ತಪ್ಪ!
Robin Uthappa on India's No 3: ಭಾರತ ಟಿ20ಐ ತಂಡದ ಮೂರನೇ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್ ಸೂಕ್ತ ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಸ್ಥಿರವಾಗಿ ಇದೇ ಕ್ರಮಾಂಕದಲ್ಲಿ ಆಡಿದರೆ, ಅವರು ತಂಡವು ಅವರಿಂದ ಉತ್ತಮ ಪ್ರದರ್ಶನವನ್ನು ಪಡೆಯಲಿದೆ ಎಂದು ಹೇಳಿದ್ದಾರೆ.
ಸೂರ್ಯಕುಮಾರ್ ಯಾದವ್‌ಗೆ ಬ್ಯಾಟಿಂಗ್ ಕ್ರಮಾಂಕ ಆರಿಸಿದ ರಾಬಿನ್ ಉತ್ತಪ್ಪ. -
ನವದೆಹಲಿ: ಭಾರತ ಟಿ20ಐ (India) ತಂಡದಲ್ಲಿ ಸೂರ್ಯಕುಮಾರ್ ಯಾದವ್ (Suryakumar Yadav) ಅವರು ಮೂರನೇ ಕ್ರಮಾಂಕಕ್ಕೆ ಸೂಕ್ತ ಬ್ಯಾಟ್ಸ್‌ಮನ್ ಎಂದು ಟೀಮ್ ಇಂಡಿಯಾ ಮಾಜಿ ಆರಂಭಿಕ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ (Robin Uthappa) ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಅವರು ಸ್ಥಿರವಾಗಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ, ಅವರ ಕಡೆಯಿಂದ ನೀವು ಉತ್ತಮ ಪ್ರದರ್ಶನವನ್ನು ಪಡೆಯಬಹುದೆಂದು ತಿಳಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಅವರ ಔಟ್ ಆಫ್ ಫಾರ್ಮ್ ಹೊರತಾಗಿಯೂ ಭಾರತ ತಂಡ ಟಿ20ಐ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನವನ್ನು ತೋರುತ್ತಿದೆ. ಆದರೆ, ಆಸ್ಟ್ರೇಲಿಯಾ ವಿರುದ್ಧ ಮೊದಲನೇ ಟಿ20ಐ ಪಂದ್ಯದಲ್ಲಿ ಸೂರ್ಯ ಅಜೇಯ 39 ರನ್ ಗಳಿಸಿ ಫಾರ್ಮ್‌ಗೆ ಮರಳುವ ಮುನ್ಸೂಚನೆಯನ್ನು ನೀಡಿದ್ದರು. ಆದರೆ, ಮಳೆಯ ಕಾರಣ ಈ ಪಂದ್ಯವನ್ನು ಮುಗಿಸಲು ಸಾಧ್ಯವಾಗಿರಲಿಲ್ಲ.
2025ರಲ್ಲಿ ಸೂರ್ಯಕುಮಾರ್ ಯಾದವ್ ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಎಡವುತ್ತಿದ್ದಾರೆ. ಅವರು ಆಡಿದ 12 ಇನಿಂಗ್ಸ್‌ಗಳಿಂದ 116.80 ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 139 ರನ್‌ಗಳನ್ನು ಕಲೆ ಹಾಕಿದ್ದಾರೆ. ಅವರು ಎಂದಿನಂತೆ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಲು ಸಾಧ್ಯವಾಗುತ್ತಿಲ್ಲ. ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ರಾಬಿನ್ ಉತ್ತಪ್ಪ, ಸೂರ್ಯಕುಮಾರ್ ಬಗ್ಗೆ ಸುದೀರ್ಘವಾಗಿ ವಿವರಿಸಿದ್ದಾರೆ.
IND vs AUS: ಎರಡನೇ ಟಿ20ಐ ಪಂದ್ಯಕ್ಕೆ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ!
"ನೀವು ಬಂಡೆ ಮತ್ತು ಕಠಿಣ ಸ್ಥಳದ ನಡುವೆ ಸಿಲುಕಿಕೊಂಡಂತೆ ಭಾಸವಾಗುತ್ತದೆ, ಏಕೆಂದರೆ ಇದು ನಿಮ್ಮ ಪ್ರದರ್ಶನವನ್ನು ನೋಡಬೇಕಾದ ಮತ್ತು ನಿಮ್ಮ ನಾಯಕತ್ವವನ್ನು ನಿರ್ವಹಿಸಬೇಕಾದ ನಿರ್ಧಾರ ಇದಾಗಿದೆ. ಆದ್ದರಿಂದ ಇದನ್ನು ತೆಗೆದುಕೊಳ್ಳುವುದು ತುಂಬಾ ಕಷ್ಟಕರವಾದ ನಿರ್ಧಾರ. ಆದಾಗ್ಯೂ, ಅವರು ಒಂದೇ ಸ್ಥಾನದಲ್ಲಿ ಬರಬೇಕೆಂದು ನಾನು ಭಾವಿಸುತ್ತೇನೆ. ನನ್ನ ಅಭಿಪ್ರಾಯದಲ್ಲಿ, ಸೂರ್ಯಕುಮಾರ್‌ಗೆ ಟಿ20ಐ ಕ್ರಿಕೆಟ್‌ನಲ್ಲಿ ನಂ. 3 ಗಿಂತ ಉತ್ತಮ ಸ್ಥಾನವಿಲ್ಲ," ಎಂದು ಉತ್ತಪ್ಪ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
"ನಿಮ್ಮ ತಂಡದ ಅಗ್ರ ಮೂರು ಕ್ರಮಾಂಕಗಳು ಬಲಿಷ್ಠವಾಗಿದ್ದರೆ, ತಂಡ ಅತ್ಯುತ್ತಮ ಸಂಯೋಜನೆಯಿಂದ ಕಾಣುತ್ತದೆ. ನೀವು ಎಡಗೈ ಹಾಗೂ ಬಲಗೈ ಸಂಯೋಜನೆಯನ್ನು ಕಾಣಬಹುದು. ಏಷ್ಯಾ ಕಪ್ ಟೂರ್ನಿಯಲ್ಲಿ ನೀವು ಮೂರನೇ ಕ್ರಮಾಂಕಕ್ಕೆ ತಿಲಕ್ ವರ್ಮಾ ಅವರನ್ನು ಪರಿಗಣಿಸಲಾಗಿತ್ತು. ಈ ವೇಳೆ ಎಡಗೈ ಬ್ಯಾಟ್ಸ್‌ಮನ್ ಔಟಾದರೆ, ತಿಲಕ್ ವರ್ಮಾ ಹಾಗೂ ಬಲಗೈ ಬ್ಯಾಟ್ಸ್‌ಮನ್ ಔಟಾದರೆ ಸೂರ್ಯಕುಮಾರ್ ಯಾದವ್ ಆಡುತ್ತಿದ್ದರು. ಸೂರ್ಯ ನಾಲ್ಕಕ್ಕಿಂತ ಕೆಳಗಿನ ಕ್ರಮಾಂಕದಲ್ಲಿ ಆಡಬಾರದು. ಅವರು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದರೆ, ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಸಾಕಷ್ಟು ಹೊಂದಿಕೊಳ್ಳಬೇಕಾಗುತ್ತದೆ," ಎಂದು ರಾಬಿನ್ ಉತ್ತಪ್ಪ ತಿಳಿಸಿದ್ದಾರೆ.
IND vs AUS: ಟಿ20ಐ ಸರಣಿಯ ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಆಘಾತ, ನಿತೀಶ್ ರೆಡ್ಡಿಗೆ ಗಾಯ!
ಸೂರ್ಯಕುಮಾರ್ ತಮ್ಮ ಬ್ಯಾಟಿಂಗ್ ಸ್ಥಾನದಲ್ಲಿ ಆಗಾಗ್ಗೆ ಹೊಂದಿಕೊಳ್ಳುವ ಮನೋಭಾವ ಹೊಂದಿದ್ದಾರೆ, ಫಾರ್ಮ್‌ನಲ್ಲಿರುವ ತಂಡದ ಸಹ ಆಟಗಾರರಿಗೆ ಅವಕಾಶ ನೀಡಲು ಆಗಾಗ್ಗೆ ತಮ್ಮ ಕ್ರಮಾಂಕವನ್ನು ಬದಲಿಸಿದ್ದಾರೆ. ಉದಾಹರಣೆಗೆ, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20ಐ ಸರಣಿಯ ಸಮಯದಲ್ಲಿ ತಿಲಕ್ ವರ್ಮಾ ಸ್ಥಿರ ಪ್ರದರ್ಶನವನ್ನು ತೋರುತ್ತಿದ್ದ ಕಾರಣ ಅವರನ್ನು 3ನೇ ಸ್ಥಾನಕ್ಕೆ ಬಡ್ತಿ ನೀಡಿದ್ದರು. ಆದಾಗ್ಯೂ, ಅಂದಿನಿಂದ, ಸೂರ್ಯಕುಮಾರ್ ಆಸ್ಟ್ರೇಲಿಯಾ ವಿರುದ್ಧದ ಇತ್ತೀಚಿನ ಕ್ಯಾನ್‌ಬೆರಾ ಟಿ20ಐ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಆಡಿದ್ದರು.