ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2026: ರೋಹಿತ್ ಶರ್ಮಾರನ್ನು ಕೆಕೆಆರ್‌ಗೆ ಬಿಟ್ಟುಕೊಡುವ ಬಗ್ಗೆ ಸ್ಪಷ್ಟನೆ ನೀಡಿದ ಮುಂಬೈ ಇಂಡಿಯನ್ಸ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮಿನಿ ಹರಾಜು ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಎಲ್ಲಾ ಫ್ರಾಂಚೈಸಿಗಳು ಆಟಗಾರರ ಖರೀದಿಗೆ ಈಗಾಗಲೇ ಲೆಕ್ಕಾಚಾರ ಹಾಕುತ್ತಿವೆ. ಈ ನಡುವೆ ಮುಂಬೈ ತಂಡ ರೋಹಿತ್ ಶರ್ಮಾ ಅವರನ್ನು ಕೆಕೆಆರ್ ತಂಡಕ್ಕೆ ಮಾರಾಟ ಮಾಡಲಿದೆ ಎನ್ನುವ ವದಂತಿ ಹಬ್ಬಿತ್ತು. ಮುಂಬೈ ಈ ವದಂತಿಗಳಿಗೆ ಹಾಸ್ಯಭರಿತ ಪೋಸ್ಟ್‌ ಮೂಲಕ ಸ್ಪಷ್ಟನೆ ನೀಡಿದೆ.

ರೋಹಿತ್‌ ಶರ್ಮಾರನ್ನು ಕೆಕೆಆರ್‌ ಬಿಡುವ ಬಗ್ಗೆ ಮುಂಬೈ ಸ್ಪಷ್ಟನೆ!

ರೋಹಿತ್‌ ಶರ್ಮಾರನ್ನು ಕೆಕೆಆರ್‌ಗೆ ಬಿಡುವ ಬಗ್ಗೆ ಸ್ಪಷ್ಟನೆ ನೀಡಿದ ಮುಂಬೈ ಫ್ರಾಂಚೈಸಿ. -

Profile Ramesh Kote Oct 30, 2025 8:12 PM

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ 19ನೇ (IPL 2026) ಆವೃತ್ತಿಯ ಮಿನಿ ಹರಾಜು ನವೆಂಬರ್ ತಿಂಗಳಲ್ಲಿ ನಡೆಯಲಿದೆ. ಹರಾಜಿಗೂ ಮುನ್ನ ಕೊಲ್ಕತ್ತಾ ಫ್ರಾಂಚೈಸಿ (KKR) ಮುಂದಿನ ಸೀಸನ್‌ಗೆ ಬಲಿಷ್ಠ ತಂಡ ಕಟ್ಟಲು ಎದುರು ನೋಡುತ್ತಿದೆ. ಈ ಹಿಂದೆ ಸ್ಟಾರ್ ಆಟಗಾರ ಕೆ ಎಲ್ ರಾಹುಲ್ ಅವರನ್ನು ಖರೀದಿಸುವ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಜೊತೆ ಮಾತುಕತೆ ನಡೆಸಿದೆ ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ರೋಹಿತ್ ಶರ್ಮಾ (Rohit Sharma) ಅವರನ್ನು ಕೆಕೆಆರ್‌ಗೆ ಟ್ರೇಡ್‌ ಡೀಲ್‌ ಮಾಡಿಕೊಳ್ಳಲಿದೆ ಎಂದು ಸುದ್ದಿಯಾಗಿತ್ತು. ಆದರೆ, ಎರಡೂ ಫ್ರಾಂಚೈಸಿಗಳಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವಾದರೂ, ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಷಯ ತುಂಬಾ ವೈರಲ್ ಆಗುತ್ತಿತ್ತು. ಈ ವದಂತಿಗಳ ಬಗ್ಗೆ ಮುಂಬೈ ಇಂಡಿಯನ್ಸ್ (Mumbai Indians) ರೋಹಿತ್ ಶರ್ಮಾ ಅವರ ಐಪಿಎಲ್ ಭವಿಷ್ಯದ ಬಗ್ಗೆ ಸ್ಪಷ್ಟನೆ ನೀಡಿದೆ.

ಮುಂಬೈ ಇಂಡಿಯನ್ಸ್ ಈ ವದಂತಿಗಳಿಗೆ ಹಾಸ್ಯಮಯ ಪೋಸ್ಟ್‌ನೊಂದಿಗೆ ಪ್ರತಿಕ್ರಿಯಿಸಿದ್ದು, "ನಾಳೆ ಸೂರ್ಯ ಮತ್ತೆ ಉದಯಿಸುತ್ತಾನೆ, ಇದು ದೃಢಪಟ್ಟಿದೆ - ಆದರೆ (ಕ)ರಾತ್ರಿಯಲ್ಲಿ... ಅದು ಕಷ್ಟ ಮಾತ್ರವಲ್ಲ, ಅಸಾಧ್ಯವೂ ಹೌದು!" ಎಂದು ಪೋಸ್ಟ್ ಮಾಡಿದೆ. ವಿಶೇಷವಾಗಿ, ಕೆಕೆಆರ್ ತಂಡದ ಮುಖ್ಯ ಕೋಚ್ ಆಗಿ ಅಭಿಷೇಕ್ ನಾಯರ್ ಅವರನ್ನು ನೇಮಕ ಮಾಡಿದ ದಿನವೇ ಮುಂಬೈ ತಂಡ ರೋಹಿತ್ ಅವರ ಈ ವದಂತಿಗಳಿಗೆ ಸ್ಪಷ್ಟನೆ ನೀಡಿತು.

IPL 2026: ಕೋಲ್ಕತಾ ನೈಟ್‌ ರೈಡರ್ಸ್‌ಗೆ ಅಭಿಷೇಕ್‌ ನಾಯರ್‌ ನೂತನ ಹೆಡ್‌ ಕೋಚ್‌!

ನಾಯರ್ ಮತ್ತು ರೋಹಿತ್ ನಡುವೆ ಉತ್ತಮ ಬಾಂಧವ್ಯವಿದೆ ಮತ್ತು ಈ ಹಿಂದೆ ನಾಯರ್ ಟೀಮ್ ಇಂಡಿಯಾದ ಮಾಜಿ ಸಹಾಯಕ ಕೋಚ್ ಆಗಿದ್ದಾಗ ಒಟ್ಟಿಗೆ ಕೆಲಸ ಮಾಡಿದ್ದರು. ಅವರನ್ನು ಏಪ್ರಿಲ್‌ನಲ್ಲಿ ಆ ಸ್ಥಾನದಿಂದ ತೆಗೆದುಹಾಕಲಾಯಿತು. ಬಳಿಕ ಕೆಕೆಆರ್‌ಗೆ ಮರಳಿದ್ದು, ತಂಡದ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ.



ರೋಹಿತ್ ಶರ್ಮಾ 2011 ರಿಂದ ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಸಕ್ರಿಯ ಆಟಗಾರರಾಗಿದ್ದಾರೆ. ಅವರು 2011ರ ಐಪಿಎಲ್ ಮೆಗಾ ಹರಾಜಿನಲ್ಲಿ ಮುಂಬೈ ಫ್ರಾಂಚೈಸಿಯನ್ನು ಸೇರಿಕೊಂಡಿದ್ದು, ಅವರನ್ನು 2014, 2018, 2022 ಮತ್ತು 2025ರ ಐಪಿಎಲ್‌ ಮೆಗಾ ಹರಾಜಿಗೂ ಮುನ್ನ ತಂಡದಲ್ಲಿ ಉಳಿಸಿಕೊಳ್ಳಲಾಯಿತು. 2013ರ ಐಪಿಎಲ್ ಟೂರ್ನಿಯಲ್ಲಿ ರೋಹಿತ್ ಮುಂಬೈ ತಂಡದ ನಾಯಕತ್ವ ವಹಿಸಿಕೊಂಡಿದ್ದರು ಮತ್ತು ಅದೇ ಆವೃತಿಯಲ್ಲಿ ತಂಡ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು.

IPL 2026 Auction: ಐಪಿಎಲ್ 2026ರ ಮಿನಿ ಹರಾಜು ದಿನಾಂಕ, ಸ್ಥಳ, ಸಮಯ ಬಹಿರಂಗ

ಇದಾದ ಬಳಿಕ ಮುಂಬೈ ತಂಡವು 2015, 2017, 2019 ಮತ್ತು 2020 ರಲ್ಲಿ ರೋಹಿತ್ ಅವರ ನಾಯಕತ್ವದಲ್ಲಿ ಅದ್ಭುತ ಪ್ರದರ್ಶನವನ್ನು ತೋರಿತ್ತು. ಇದಾದ ಬಳಿಕ ಮುಂದಿನ ಮೂರು ಸೀಸಿನ್‌ಗಳಲ್ಲಿ ಮುಂಬೈ ತಂಡದಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರಲಿಲ್ಲ. ಹಾಗಾಗಿ ತಂಡದ ಮ್ಯಾನೇಜ್‌ಮೆಂಟ್  2024ರ ಐಪಿಎಲ್‌ಗೂ ಮುನ್ನ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯ ಅವರಿಗೆ ನಾಯಕತ್ವವನ್ನು ನೀಡಿತ್ತು.

ಹಾರ್ದಿಕ ಪಾಂಡ್ಯ ಅವರು 2021ರಲ್ಲಿ ಮುಂಬೈ ಬಿಟ್ಟು ಗುಜರಾತ್ ಟೈಟನ್ಸ್ ತಂಡ ಸೇರಿ ಯಶಸ್ವಿಯಾಗಿ ಮುನ್ನಡೆಸಿ ಫ್ರಾಂಚೈಸಿಯ ಮೆಚ್ಚುಗೆಗೆ ಪಾತ್ರರಾಗಿದ್ದರು. ಇದಾದ ಬಳಿಕ ಮುಂಬೈ ಇಂಡಿಯನ್ಸ್‌ ಪಾಂಡ್ಯ ಅವರನ್ನು 2024ರ ಮೆಗಾ ಹರಾಜಿನಲ್ಲಿ ತಂಡಕ್ಕೆ ವಾಪಸ್ ಕರೆತಂದು ನಾಯಕತ್ವವನ್ನು ನೀಡಿತ್ತು.