ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Pathanjali Acharya Column: ಬೆನ್ನೆಲುಬು ಬಲವಾಗಲು ಧನುರಾಸನ ಹಾಕಿ

ಆಸನವನ್ನು ನಿಯತವಾಗಿ ಅಭ್ಯಾಸ ಮಾಡುವುದರಿಂದಾಗಿ ಬೆನ್ನುಮೂಳೆಯು ಮತ್ತಷ್ಟು ಶಕ್ತಿಶಾಲಿಯಾಗುತ್ತದೆ, ಅದರ ಸ್ಥಿತಿಸ್ಥಾಪಕತ್ವ ಹೆಚ್ಚುತ್ತದೆ. ಮಲಬದ್ಧತೆಯ ಸಮಸ್ಯೆ ದೂರ ವಾಗುತ್ತದೆ. ಉದರ ಭಾಗದ ಕೊಬ್ಬು ಕರಗುತ್ತದೆ. ಮಂಡಿ ಗಳ ಬಿಗಿತ, ಸೊಂಟನೋವು, ಸಂಧಿ ವಾತ ನಿವಾರಣೆಯಾಗುತ್ತವೆ. ಮಹಿಳೆಯರ ಮಾಸಿಕ ಋತುಧರ್ಮ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ

ಬೆನ್ನೆಲುಬು ಬಲವಾಗಲು ಧನುರಾಸನ ಹಾಕಿ

ಧನುರಾಸನ

Ashok Nayak Ashok Nayak Feb 28, 2025 9:31 AM

ವಿಶ್ವಯೋಗ

ಡಾ.ಪತಂಜಲಿ ಆಚಾರ್ಯ

ಅಭ್ಯಾಸಕ್ರಮ: ಚಿತ್ರದಲ್ಲಿ ತೋರಿಸಿರುವ ರೀತಿಯಲ್ಲಿ ಹೊಟ್ಟೆಯ ಮೇಲೆ ಮಲಗಿ. ಬೆನ್ನಿನ ಹಿಂದಿನಿಂದ ಹಿಂಗಾಲುಗಳನ್ನು ಹಿಡಿದುಕೊಳ್ಳಿ. ಹೀಗೆ ಮಾಡಿದಾಗ ಶರೀರವು ಬಗ್ಗಿಸಿದ ಬಿಲ್ಲಿನ ಆಕೃತಿಯನ್ನು ತಳೆಯುವುದು. ಈ ಹಂತದಲ್ಲಿ ಉಸಿರನ್ನು ಬಿಟ್ಟು ಶ್ವಾಸವನ್ನು ತಡೆಯಿರಿ. ಕುತ್ತಿಗೆಯನ್ನು ಸಾಧ್ಯವಾದಷ್ಟು ಮೇಲಕ್ಕೆ ಎತ್ತಿ, ತಲೆಯನ್ನು ಹಿಂದಕ್ಕೆ ದೂಡಿ ದೃಷ್ಟಿಯನ್ನು ಮೇಲ್ಮುಖವಾಗಿರಿಸಿ ಹೊಟ್ಟೆಯನ್ನು ನೆಲಕ್ಕೆ ಮುಟ್ಟಿಸಿ. ಈಗ ಸರಾಗವಾಗಿ ಉಸಿರಾಡಿ. 2 ಸೆಕೆಂಡುಗಳಿಂದ 2-3 ನಿಮಿಷಗಳವರೆಗೆ ಈ ಆಸನದ ಭಂಗಿಯಲ್ಲಿದ್ದು, 4-5 ಬಾರಿ ಪುನರಾವರ್ತಿಸಬೇಕು.

ಪ್ರಯೋಜನಗಳು: ಈ ಆಸನವನ್ನು ನಿಯತವಾಗಿ ಅಭ್ಯಾಸ ಮಾಡುವುದರಿಂದಾಗಿ ಬೆನ್ನುಮೂಳೆಯು ಮತ್ತಷ್ಟು ಶಕ್ತಿಶಾಲಿಯಾಗುತ್ತದೆ, ಅದರ ಸ್ಥಿತಿಸ್ಥಾಪಕತ್ವ ಹೆಚ್ಚುತ್ತದೆ. ಮಲಬದ್ಧತೆಯ ಸಮಸ್ಯೆ ದೂರವಾಗುತ್ತದೆ. ಉದರ ಭಾಗದ ಕೊಬ್ಬು ಕರಗುತ್ತದೆ. ಮಂಡಿ ಗಳ ಬಿಗಿತ, ಸೊಂಟನೋವು, ಸಂಧಿವಾತ ನಿವಾರಣೆಯಾಗುತ್ತವೆ. ಮಹಿಳೆಯರ ಮಾಸಿಕ ಋತುಧರ್ಮ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ.