ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vidya Shankar Sharma Column: ಆಹಾರ ಸೇವನೆ ಎಂಬ ಧ್ಯಾನ

ಊಟ, ಉಪರಗಳನ್ನು ಮಾಡುವಾಗ ನಾವು ಅನೇಕ ವಿಷಯಗಳ ಕಡೆ ಗಮನಹರಿಸಬೇಕು. ನಮ್ಮ ಮನಸ್ಸು ಪ್ರಶಾಂತವಾಗಿರಬೇಕು. ಭಾವೋದ್ರೇಕ, ದುಃಖ,ಅಸಮಾಧಾನ ಇರುವಂತಹ ಮನಸ್ಥಿತಿ ಯಲ್ಲಿ ನಾವು ಆಹಾರ ಸೇವನೆ ಮಾಡಬಾರದು. ಭಾವಾವೇಶಗಳು ಇರುವಾಗ ನಮ್ಮ ದೈಹಿಕ ಸ್ಥಿತಿಯು ಆಹಾರ ವನ್ನು ಸ್ವೀಕರಿಸಲು ಯೋಗ್ಯವಾಗಿರುವುದಿಲ್ಲ.

Vidya Shankar Sharma Column: ಆಹಾರ ಸೇವನೆ ಎಂಬ ಧ್ಯಾನ

-

Ashok Nayak
Ashok Nayak Jan 15, 2026 3:29 PM

ವಿದ್ಯಾಶಂಕರ ಶರ್ಮ

ದೇಹ ಪೋಷಣೆಗಾಗಿ ಆಹಾರದ ಅವಶ್ಯಕತೆ ಇರುವುದು ಈ ಸೃಷ್ಟಿಯ ರಹಸ್ಯವಾಗಿದೆ. ಹಸಿವು ನಮ್ಮ ಎಲ್ಲ ಹೋರಾಟಗಳ ಬೇರಾಗಿದೆ. ಶ್ರಮದಿಂದ ಸಂಪಾದಿಸಿದ ಆಹಾರಕ್ಕೆ ನಮ್ಮ ಗೌರವ ಸಲ್ಲಲೇ ಬೇಕು. ನಮ್ಮ ಎಲ್ಲ ಕೆಲಸದಂತೆ ನಮ್ಮ ಆಹಾರ ಸೇವನೆ ಎಂಬುದು ಒಂದು ಧ್ಯಾನದಂತಿರ ಬೇಕು ಎಂದು ಬಲ್ಲವರು ಹೇಳುತ್ತಾರೆ.

ಊಟ, ಉಪರಗಳನ್ನು ಮಾಡುವಾಗ ನಾವು ಅನೇಕ ವಿಷಯಗಳ ಕಡೆ ಗಮನಹರಿಸಬೇಕು. ನಮ್ಮ ಮನಸ್ಸು ಪ್ರಶಾಂತವಾಗಿರಬೇಕು. ಭಾವೋದ್ರೇಕ, ದುಃಖ,ಅಸಮಾಧಾನ ಇರುವಂತಹ ಮನಸ್ಥಿತಿ ಯಲ್ಲಿ ನಾವು ಆಹಾರ ಸೇವನೆ ಮಾಡಬಾರದು. ಭಾವಾವೇಶಗಳು ಇರುವಾಗ ನಮ್ಮ ದೈಹಿಕ ಸ್ಥಿತಿ ಯು ಆಹಾರವನ್ನು ಸ್ವೀಕರಿಸಲು ಯೋಗ್ಯವಾಗಿರುವುದಿಲ್ಲ.

ಹಾಗಾಗಿ ಶಾಂತ ಚಿತ್ತ ಬಹು ಅವಶ್ಯಕ. ದಿನವೂ ಆಹಾರದ ತಟ್ಟೆಯ ಮುಂದೆ ಕುಳಿತಾಗ, ಅಂದಿನ ಆಹಾರಕ್ಕಾಗಿ ಸೃಷ್ಟಿಕರ್ತನನ್ನು, ಪ್ರಕೃತಿಯನ್ನು ನಮಸ್ಕರಿಸಿ ಊಟ ಉಪಹಾರಗಳನ್ನು ಪ್ರಾರಂಭ ಮಾಡುವ ಸಂಸ್ಕೃತಿ ನಮ್ಮದಾಗಿದೆ. ನಮ್ಮ ಭೋಜನ ವಿಧಿಗಳಲ್ಲಿ, ದೇವತೆಗಳಿಗೆ ಅನ್ನವನ್ನು ಸಮರ್ಪಿಸುವ ಪದ್ಧತಿ ಇದೆ.

ಇದನ್ನೂ ಓದಿ: Makara Sankranti 2026: ಮಕರ ಸಂಕ್ರಾಂತಿ ಸಂಭ್ರಮ: ದುಬಾರಿ ದುನಿಯಾ ನಡುವೆಯೂ ಖರೀದಿ ಜೋರು

ಎರಡು ಹೊತ್ತಿನ ಆಹಾರವನ್ನು ಪಡೆಯಲು ಶಕ್ಯವಾಗದ ಬಹಳಷ್ಟು ಜನರು ಇಂದು ಜಗತ್ತಿನಲ್ಲಿ ದ್ದಾರೆ. ಹಾಗಾಗಿ ನಮಗೆ ದೊರೆತ ಆಹಾರದ ಬೆಲೆ ನಮಗೆ ಗೊತ್ತಿರಬೇಕು, ಅದರೆಡೆಗೆ ಕೃತಜ್ಞಾತ ಭಾವ ಇರಲೇ ಬೇಕು. ಆಹಾರ ಸೇವನೆಯ ಸಮಯದಲ್ಲಿ ಮೌನವಾಗಿ, ಮಿತ ಭಾಷಿಯಾಗಿ, ಬೇರೆ ಯಾವ ಕೆಲಸವನ್ನೂ ಮಾಡದೆ ಇರುವಂತಹ ಮೇಲ್ಪಂಕ್ತಿಯನ್ನು ನಮ್ಮ ಹಿರಿಯರು ಹಾಕಿಕೊಟ್ಟಿ ದ್ದಾರೆ. ಇದು ಆಹಾರದೆಡೆಗೆ ಗೌರವ ಸೂಚಿಸುವ ಪರಿಯಾಗಿದೆ.

ನಮ್ಮ ಜೀವನ ಶೈಲಿ ಬದಲಾಗಿದೆ, ಆದರೆ ಕೆಲವು ಮೂಲಭೂತವಾದ ರೀತಿ ನೀತಿಗಳನ್ನು ಬದಲಾ ವಣೆಯ ಹೆಸರಿನಲ್ಲಿ ಗಾಳಿಗೆ ತೂರುವುದು ನಮಗೆ ಶ್ರೇಯಸ್ಸು ತಾರದು. ಆಹಾರ ಸೇವನೆಯಲ್ಲಿ ನಾವು ಗಮನಿಸಬೇಕಾದ ಶಿಸ್ತು ಬಹು ಮುಖ್ಯ. ಅನಿಯಮಿತವಾದ ಆಹಾರ ಕ್ರಮ ಬಹುವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಿದೆ ಎಂಬುದನ್ನು ಆಹಾರ ತಜ್ಞರು, ವೈದ್ಯರು ಹೇಳುವುದನ್ನು ನಾವು ನೋಡುತ್ತಿದ್ದೇವೆ.

ನಮ್ಮ ಕೆಲಸ ಕಾರ್ಯಗಳು ಪ್ರಾಧಾನ್ಯತೆ ಪಡೆದಿರಬಹುದು, ಆದರೆ ನಾವು ಒಂದು ವಿಷಯವನ್ನು ಇಲ್ಲಿ ಮರೆಯುತ್ತಿದ್ದೇವೆ, ನಮ್ಮ ಆರೋಗ್ಯ ಸುಸ್ಥಿತಿಯಲ್ಲಿದ್ದರೆ ಮಾತ್ರ ನಾವು ನಮ್ಮ ಕರ್ತವ್ಯ ಗಳನ್ನು ದಕ್ಷವಾಗಿ ಪೂರ್ಣಗೊಳಿಸಲು ಸಾಧ್ಯ. ಹಾಗಾಗಿ ಸಮಯಕ್ಕೆ ಸರಿಯಾಗಿ ಹಿತಮಿತವಾದ ಆಹಾರ ಸೇವನೆ, ಆಹಾರ ಸೇವನೆಯ ಸಮಯದಲ್ಲಿ ಶಾಂತಿ, ಸಮಾಧಾನ, ತಿನ್ನುವುದರ ಮೇಲೆಯೇ ಏಕಾಗ್ರತೆ, ಜಂಗಮವಾಣಿ, ದೂರದರ್ಶನಗಳಿಂದ, ಗಣಕಯಂತ್ರಗಳಂತಹ ಪರಿಕರಗಳಿಂದ ಹೊರತಾದ ಪರಿಸರದಲ್ಲಿ ಕುಳಿತುಕೊಳ್ಳುವುದು ಮುಂತಾದವುಗಳನ್ನು ಸಾಧ್ಯವಾದ ಮಟ್ಟಿಗೆ ಮಾಡಲೇ ಬೇಕಾಗಿದೆ.