ಹೆದ್ದಾರಿಯಲ್ಲಿ 120 ಕಿಲೋ ಮೀಟರ್ ವೇಗದಲ್ಲಿ ಕಾರು ಓಡಿಸಿದ ಅಜ್ಜಿ; ವೃದ್ಧೆಯ ಕ್ರೇಝ್ ನೋಡಿ ಬೆಕ್ಕಸ ಬೆರಗಾದ ನೆಟ್ಟಿಗರು
Viral Video: ವೃದ್ದೆಯೊಬ್ಬರು ಹೆದ್ದಾರಿಯಲ್ಲಿ 110 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಆಲ್ಟೊ ಕಾರು ಚಲಾಯಿಸುತ್ತಿರುವ ದೃಶ್ಯ ಕಂಡು ಬಂದಿದ್ದು, ಎಲ್ಲರೂ ಬೆರಗಾಗಿದ್ದಾರೆ. ವಿಶಾಲ್ ಲಲೋತ್ರಾ ಎಂಬ ಕಂಟೆಂಟ್ ಕ್ರಿಯೇಟರ್ ಈ ವಿಡಿಯೊ ಹಂಚಿಕೊಂಡಿದ್ದು ಭಾರಿ ವೈರಲ್ ಆಗಿದೆ.
120 ಕಿಲೋ ಮೀಟರ್ ವೇಗದಲ್ಲಿ ಕಾರು ಓಡಿಸಿದ ಅಜ್ಜಿ. -
ಶ್ರೀನಗರ, ಮಾ. 4: ಸಾಧನೆಗೆ ವಯಸ್ಸಿನ ಹಂಗಿಲ್ಲ. ಶ್ರಮ ಪಟ್ಟರೆ ಎಲ್ಲವೂ ಸಾಧ್ಯ ಅನ್ನುವುದಕ್ಕೆ ಜಮ್ಮು ಕಾಶ್ಮೀರದ ಈ ಅಜ್ಜಿಯೇ ಸಾಕ್ಷಿ. ಹೌದು, 80 ವರ್ಷ ವಯಸ್ಸಿಕ್ಕಿಂತ ಮೇಲ್ಪಟ್ಟ ವೃದ್ಧೆಯೊಬ್ಬರು ಹೆದ್ದಾರಿಯಲ್ಲಿ 110 ಕಿ.ಮೀ.ಗಿಂತ ಹೆಚ್ಚಿನ ವೇಗದಲ್ಲಿ ಆಲ್ಟೊ ಕಾರು ಚಲಾಯಿಸುತ್ತಿರುವ ದೃಶ್ಯ ಕಂಡು ಬಂದಿದ್ದು, ಇದನ್ನು ನೋಡಿ ಎಲ್ಲರೂ ಬೆರಗಾಗಿದ್ದಾರೆ. ವಿಶಾಲ್ ಲಲೋತ್ರಾ ಎಂಬ ಕಂಟೆಂಟ್ ಕ್ರಿಯೇಟರ್ ಈ ವಿಡಿಯೊ ಹಂಚಿಕೊಂಡಿದ್ದು ಭಾರಿ ವೈರಲ್ (Viral Video) ಆಗಿದೆ.
ಈ ವಯಸ್ಸಿನಲ್ಲೂ ಅಜ್ಜಿ ಇಷ್ಟು ಸಾಲೀಸಾಗಿ ಕಾರು ಓಡಿಸುವುದನ್ನು ಕಂಡು ಯುವಕರೇ ಆಶ್ಚರ್ಯ ಪಟ್ಟಿದ್ದಾರೆ. ಅಜ್ಜಿ ಅತಿ ವೇಗದಲ್ಲಿ ಚಾಲನೆ ಮಾಡುವುದಲ್ಲದೆ ಕಾರನ್ನು ಸರಾಗವಾಗಿ ಓಡಿಸಿದ್ದಾರೆ. ವೈರಲ್ ಆದ ವಿಡಿಯೊದಲ್ಲಿ ಸ್ಪೀಡೋ ಮೀಟರ್ 110ರಿಂದ 120 ಕಿ.ಮೀ. ವೇಗವನ್ನು ತೋರಿಸುತ್ತಿದೆ. ಇಷ್ಟು ವೇಗದಲ್ಲೂ ಅಜ್ಜಿ ಯಾವುದೇ ಭಯಪಡದೆ ನಗುನಗುತ್ತಾ ಡ್ರೈವ್ ಮಾಡಿರುವುದು ವಿಶೇಷ.
ವಿಡಿಯೊ ನೋಡಿ:
ಯಾರ ಹಂಗಿಲ್ಲದೆ ಅಜ್ಜಿ ಅಲ್ಟೋ ಕಾರನ್ನು ಆತ್ಮವಿಶ್ವಾಸದಿಂದ ಚಲಾಯಿಸಿದ್ದಾರೆ. ವಯಸ್ಸಾದ ಅಜ್ಜಿ ಕಾರನ್ನು ಸರಾಗವಾಗಿ ಓಡಿಸುವುದು ಮಾತ್ರವಲ್ಲದೆ, ತನ್ನ ಮೊಮ್ಮಗನ ಸ್ಪೋರ್ಟ್ಸ್ ಬೈಕ್‌ನಲ್ಲಿ ಕುಳಿತುಕೊಳ್ಳುವ ಉತ್ಸಾಹವನ್ನೂ ತೋರಿದ್ದಾರೆ. ಈ ವಯಸ್ಸಿನಲ್ಲಿ ವೃದ್ಧೆಯ ಚಾಲನಾ ಕೌಶಲ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.
ಗರ್ಲ್‌ಫ್ರೆಂಡ್ ಪೋಷಕರನ್ನು ಮೆಚ್ಚಿಸಲು ಹೋಗಿ ಪ್ರಾಣವನ್ನೇ ಬಿಟ್ಟ ಯುವಕ
ಅಜ್ಜಿಯ ಈ ವೇಗದ ಚಾಲನೆಯನ್ನು ನೋಡಿ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಒಬ್ಬರು, ಅಜ್ಜಿ ಯಮರಾಜ್‌ಗಿಂತ ವೇಗವಾಗಿ ಡ್ರೈವ್ ಮಾಡುತ್ತಾರೆ ಎಂದು ಬರೆದಿದ್ದಾರೆ. ಮತ್ತೊಬ್ಬರು ಯಾರಾದರೂ ಮೊದಲು ಅಜ್ಜಿಯ ಸ್ಪೀಡೋಮೀಟರ್ ಪರಿಶೀಲನೆ ಮಾಡಿ ಎಂದಿದ್ದಾರೆ. ಕೆಲವರು ಇದು ಎಐ ವಿಡಿಯೊ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ.