Surendra Pai Column: ಸಂಕ್ರಾಂತಿ ನಾಡಿನೆಲ್ಲೆಡೆ ಸುಗ್ಗಿ ಸಂಭ್ರಮ
ಹಿಂದೂ ಪಂಚಾಂಗದ ಪ್ರಕಾರ, ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಅತ್ಯಂತ ಶುಭದಿನವೆಂದು ಪರಿಗಣಿಸಲಾಗುತ್ತದೆ.ಈ ಶುಭ ಸಂದರ್ಭವನ್ನೇ ‘ಮಕರ ಸಂಕ್ರಾಂತಿ’ ಎಂದು ಕರೆಯ ಲಾಗುತ್ತದೆ. ಮಕರ ಸಂಕ್ರಾಂತಿಯಂದು ಎಳ್ಳು-ಬೆಲ್ಲ ಬೀರುವುದಕ್ಕೆ, ಪವಿತ್ರ ಸ್ನಾನಕ್ಕೆ, ಸೂರ್ಯ ಪೂಜೆಗೆ, ದಾನ ಮಾಡುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ.
-
ಸುರೇಂದ್ರ ಪೈ, ಭಟ್ಕಳ
ದೇಶಾದ್ಯಂತ ಆಚರಿಸಲಾಗುವ ಅಪರೂಪದ ಭಾರತೀಯ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಹಬ್ಬವೂ ಒಂದಾಗಿದೆ. ರಾಜ್ಯದಿಂದ ರಾಜ್ಯಕ್ಕೆ ಸಂಪೂರ್ಣವಾಗಿ ಇದು ವಿಭಿನ್ನವಾಗಿ ಕಾಣು ತ್ತದೆ. ಮೂಲ ಕಲ್ಪನೆ ಒಂದೇ ಆಗಿದ್ದರೂ, ಸೂರ್ಯನ ಉತ್ತರಾಭಿಮುಖ ಪ್ರಯಾಣ ಮತ್ತು ಸುಗ್ಗಿ ಆಚರಣೆ, ಪ್ರಾದೇಶಿಕ ಪದ್ಧತಿಗಳು, ಆಹಾರಗಳು ಮತ್ತು ಆಚರಣೆಗಳು ಹಬ್ಬಕ್ಕೆ ಅದರ ಶ್ರೀಮಂತಿಕೆಯ ವೈವಿಧ್ಯತೆಯನ್ನು ನೀಡುತ್ತವೆ. ಇಂದು ಸಂಕ್ರಾಂತಿ ಹಬ್ಬದ ಸಂಭ್ರಮ-ಸಡಗರ, ಆ ಹಿನ್ನೆಲೆಯಲ್ಲಿ ಈ ವಿಶೇಷ ಲೇಖನ.
ಭಾರತದಲ್ಲಿ ಸುಗ್ಗಿ ಕಾಲದ ಆರಂಭವನ್ನು ಹೊಸ ವರ್ಷದ ಸಂಭ್ರಮವನ್ನಾಗಿ ಆಚರಿಸಲಾಗುತ್ತದೆ. ಹಿಂದೂ ಧರ್ಮೀಯರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಮಕರ ಸಂಕ್ರಾಂತಿಯೂ ಒಂದು. ಇದು ಕ್ಯಾಲೆಂಡರ್ ಹೊಸ ವರ್ಷದ ಮೊದಲ ಹಬ್ಬವಾಗಿ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿಯು ಕೇವಲ ಆಚರಣೆಯಲ್ಲ, ಅದಕ್ಕೆ ಖಗೋಳಶಾಸ್ತ್ರದ ಮಹತ್ವವೂ ಇದೆ. ಸೌರಮಾನ ಪದ್ಧತಿಯನ್ನು ಆಧರಿಸಿ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸೂರ್ಯನು ದಕ್ಷಿಣಾಯನದಿಂದ ಉತ್ತರಾ ಯಣಕ್ಕೆ (ಉತ್ತರ ದಿಕ್ಕಿಗೆ) ಚಲಿಸಲು ಪ್ರಾರಂಭಿಸುವ ಪುಣ್ಯಕಾಲವಾಗಿದೆ.
ಹಿಂದೂ ಪಂಚಾಂಗದ ಪ್ರಕಾರ, ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಅತ್ಯಂತ ಶುಭದಿನವೆಂದು ಪರಿಗಣಿಸಲಾಗುತ್ತದೆ.ಈ ಶುಭ ಸಂದರ್ಭವನ್ನೇ ‘ಮಕರ ಸಂಕ್ರಾಂತಿ’ ಎಂದು ಕರೆಯಲಾಗುತ್ತದೆ. ಮಕರ ಸಂಕ್ರಾಂತಿಯಂದು ಎಳ್ಳು-ಬೆಲ್ಲ ಬೀರುವುದಕ್ಕೆ, ಪವಿತ್ರ ಸ್ನಾನಕ್ಕೆ, ಸೂರ್ಯ ಪೂಜೆಗೆ, ದಾನ ಮಾಡುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ.
ಇದನ್ನೂ ಓದಿ: Makara Sankranti 2026: ಮಕರ ಸಂಕ್ರಾಂತಿ ಸಂಭ್ರಮ: ದುಬಾರಿ ದುನಿಯಾ ನಡುವೆಯೂ ಖರೀದಿ ಜೋರು
ಸಂಕ್ರಾಂತಿ ವಿಶೇಷತೆ
ಕರ್ನಾಟಕದಲ್ಲಿ ಸಂಕ್ರಾಂತಿಯಂದು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುವಾಗ ‘ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ’ ಎಂದು ಹೇಳುವುದು ರೂಢಿ. ಕಡಲೆಕಾಯಿ ಬೀಜ, ಹುರಿಗಡಲೆ, ಕೊಬ್ಬರಿ ಮತ್ತು ಬೆಲ್ಲದ ಮಿಶ್ರಣವಾದ ಈ ಎಳ್ಳು-ಬೆಲ್ಲ ಆರೋಗ್ಯಕರವೂ ಹೌದು.
ಮಂಡ್ಯ ಮತ್ತು ಮೈಸೂರು ಭಾಗಗಳಲ್ಲಿ ಕಿಚ್ಚು ಹಾಯಿಸುವುದು ಎಂಬ ರೋಮಾಂಚಕ ಆಚರಣೆ ನಡೆಯುತ್ತದೆ. ರೈತರು ತಮ್ಮ ಜಾನುವಾರುಗಳನ್ನು ಬಣ್ಣದ ಬಟ್ಟೆ ಮತ್ತು ಆಭರಣಗಳಿಂದ ಅಲಂಕರಿಸಿ, ಮೆರವಣಿಗೆಯ ಮೂಲಕ ಕರೆತಂದು ಬೆಂಕಿಯ ಮೇಲೆ ಹಾಯಿಸುತ್ತಾರೆ. ಇದು ಗ್ರಾಮ ಕ್ಕೆ ಮತ್ತು ಜನರಿಗೆ ಒಳಿತನ್ನು ತರುತ್ತದೆ ಎಂಬ ನಂಬಿಕೆಯಿದೆ. ಈ ದೃಶ್ಯವನ್ನು ನೋಡಲು ಪ್ರವಾಸಿ ಗರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸುತ್ತಾರೆ.
ವೈವಿಧ್ಯಮಯ ಸಂಕ್ರಾಂತಿ
ದೇಶಾದ್ಯಂತ ಆಚರಿಸಲಾಗುವ ಅಪರೂಪದ ಭಾರತೀಯ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಹಬ್ಬ ವೂ ಒಂದಾಗಿದೆ. ಆದರೂ ರಾಜ್ಯದಿಂದ ರಾಜ್ಯಕ್ಕೆ ಸಂಪೂರ್ಣವಾಗಿ ಇದು ವಿಭಿನ್ನವಾಗಿ ಕಾಣುತ್ತದೆ. ಮೂಲ ಕಲ್ಪನೆ ಒಂದೇ ಆಗಿದ್ದರೂ, ಸೂರ್ಯನ ಉತ್ತರಾಭಿಮುಖ ಪ್ರಯಾಣ ಮತ್ತು ಸುಗ್ಗಿಯನ್ನು ಆಚರಿಸುವುದು, ಪ್ರಾದೇಶಿಕ ಪದ್ಧತಿಗಳು, ಆಹಾರಗಳು ಮತ್ತು ಆಚರಣೆಗಳು ಹಬ್ಬಕ್ಕೆ ಅದರ ಶ್ರೀಮಂತ ವೈವಿಧ್ಯತೆಯನ್ನು ನೀಡುತ್ತವೆ.
ಕರ್ನಾಟಕ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ‘ಸಂಕ್ರಾಂತಿ ಹಬ್ಬ’, ಗುಜರಾತ್‌ನಲ್ಲಿ ‘ಉತ್ತರಾಯಣ’, ತಮಿಳುನಾಡಿನಲ್ಲಿ ‘ಪೊಂಗಲ್’, ಪಂಜಾಬ್ ಮತ್ತು ಉತ್ತರ ಭಾರತದಲ್ಲಿ ‘ಲೋಹ್ರಿ’, ಅಸ್ಸಾಂನಲ್ಲಿ ‘ಮಾಘ ಬಿಹು’ , ಪಶ್ಚಿಮ ಬಂಗಾಳನ ‘ಪೌಷ್ ಪರ್ಬನ್’, ಜಾರ್ಖಂಡ್ ಮತ್ತು ಬಿಹಾರ ನ ‘ಖಿಚಡಿ ಪರ್ವ್’ ಎಂಬ ಹೆಸರಿನಲ್ಲಿ ಸಂಭ್ರಮ, ಸಡಗರದಿಂದ ಆಚರಿಸುತ್ತಾರೆ. ಮಕರ ಸಂಕ್ರಾಂತಿ ಯ ಮುಂದಿನ ದಿನವನ್ನು ಕರಿದಿನ ಅಥವಾ ಕಿಂಕ್ರಾಂತ ಎಂದು ಕರೆಯಲಾಗುತ್ತದೆ.
ಸಂಕ್ರಾಂತಿ ದೇವತೆಯನ್ನು ಹೊರತುಪಡಿಸಿ, ಮಕರ ಸಂಕ್ರಾಂತಿಯನ್ನು ಭಾರತದ ಎರಡು ಮಹಾ ಕಾವ್ಯ ಗ್ರಂಥಗಳಾದ ಪುರಾಣಗಳು ಮತ್ತು ಮಹಾಭಾರತದಲ್ಲಿ ಉಲ್ಲೇಖಿಸಲಾಗಿದೆ. ಕೆಲವು ನಂಬಿಕೆ ಗಳ ಪ್ರಕಾರ, ವೈದಿಕ ಋಷಿ ವಿಶ್ವಾಮಿತ್ರನು ಈ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದನು ಮತ್ತು ಮಹಾಭಾರತದಲ್ಲಿ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಈ ಹಬ್ಬವನ್ನು ಆಚರಿಸಿದರು ಎನ್ನುವ ನಂಬಿಕೆಯೂ ಇದೆ.
ಸಂಕ್ರಾಂತಿ: ಪುರಾಣ ಹಿನ್ನೆಲೆ
ಪುರಾಣಗಳ ಪ್ರಕಾರ ಸಂಕ್ರಾಂತಿ ಹಬ್ಬದ ಹಿಂದೆ ಒಂದು ಸುಂದರವಾದ ಕಥೆಯಿದೆ. ಸೂರ್ಯದೇವ ಮತ್ತು ಆತನ ಮಗನಾದ ಶನಿದೇವನ (ಮಕರ ರಾಶಿಯ ಅಧಿಪತಿ) ನಡುವೆ ಮನಸ್ತಾಪವಿತ್ತು. ಇದರಿಂದಾಗಿ ಸೂರ್ಯನು ದಕ್ಷಿಣ ಪಥದಲ್ಲಿದ್ದಾಗ ಭೂಮಿಯ ಮೇಲೆ ಬರಗಾಲ ಮತ್ತು ಕತ್ತಲೆ ಆವರಿಸಿತ್ತು. ಆಗ ಬ್ರಹ್ಮಾಂಡದ ರಕ್ಷಕ ದೇವತೆಗಳು ಸೂರ್ಯನನ್ನು ಪ್ರಾರ್ಥಿಸಿ, ಶನಿಯ ಕ್ಷೇತ್ರವಾದ ಮಕರ ರಾಶಿಯನ್ನು ಪ್ರವೇಶಿಸುವಂತೆ ವಿನಂತಿಸಿದರು.
ಸಂಕರಾಸುರನಂತಹ ರಾಕ್ಷಸರು ಈ ಪಥವನ್ನು ತಡೆದಾಗ, ವಿಷ್ಣುವಿನ ತೇಜಸ್ಸಿನಿಂದ ಜನಿಸಿದ ದೇವತೆಯು ಆ ರಾಕ್ಷಸರನ್ನು ಸಂಹರಿಸಿ ದಾರಿಯನ್ನು ಸುಗಮಗೊಳಿಸಿದಳು. ಸೂರ್ಯನು ತನ್ನ ಮಗನಾದ ಶನಿಯ ಮನೆಗೆ (ಮಕರ ರಾಶಿ) ಭೇಟಿ ನೀಡಿದ ಈ ದಿನವೇ ಮಕರ ಸಂಕ್ರಾಂತಿ. ಈ ತಂದೆ-ಮಗನ ಮಿಲನವು ಭೂಮಿಯ ಮೇಲೆ ಶಾಂತಿ ಮತ್ತು ಸಮೃದ್ಧಿಯನ್ನು ತಂದಿತು. ಇದೇ ದಿನ ಭಗೀರಥನ ತಪಸ್ಸಿಗೆ ಮೆಚ್ಚಿ ಗಂಗೆಯು ಭೂಮಿಗೆ ಇಳಿದು ಬಂದಳು ಎಂಬ ಪ್ರತೀತಿ ಇದೆ.