ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಿನ್ನದ ತೋಳಿನ ವ್ಯಕ್ತಿ

ಸಾಮಾನ್ಯರಲ್ಲಿ ಅಸಾಮಾನ್ಯರಾದ ಆಸ್ಟ್ರೇಲಿಯಾದ ಜೇಮ್ಸ್ ಹ್ಯಾರಿಸನ್ ಅವರು 24 ಲಕ್ಷ ಶಿಶುಗಳ ಜೀವ ಉಳಿಸಲು ಕಾರಣರಾದವರು! ಶಿಶುಗಳನ್ನು ಉಳಿಸುವ ರಕ್ತದಾನಕ್ಕಾಗಿ ‘ಚಿನ್ನದ ತೋಳನ್ನು ಹೊಂದಿರುವ ವ್ಯಕ್ತಿ’ ಎಂದು ಪ್ರಸಿದ್ಧಿ ಪಡೆದ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು. ಜೇಮ್ಸ್ ಹ್ಯಾರಿಸನ್ ರು ರಕ್ತದಾನಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು; ಆ ಮೂಲಕ ಇಂದಿಗೂ ಲಕ್ಷಾಂತರ ಜೀವಗಳಲ್ಲಿ ಚಿರಂಜೀವಿಯಾಗಿದ್ದಾರೆ!

ಚಿನ್ನದ ತೋಳಿನ ವ್ಯಕ್ತಿ

Profile Ashok Nayak Apr 2, 2025 5:34 PM

ಸುರೇಶ ಗುದಗನವರ

ಅಪರೂಪ ಪ್ರಕಾರದ ರಕ್ತವನ್ನು ದಾನ ಮಾಡಿ, ಆ ಮೂಲಕ ಲಕ್ಷಾಂತರ ಮಕ್ಕಳ ಬದುಕನ್ನು ಬೆಳಗಿದ ಇವರು, ಇಂದು ಅವರೆಲ್ಲರ ಬದುಕಿನಲ್ಲಿ ಚಿರಂಜೀವಿಯಾಗಿದ್ದಾರೆ!

ಸಾಮಾನ್ಯರಲ್ಲಿ ಅಸಾಮಾನ್ಯರಾದ ಆಸ್ಟ್ರೇಲಿಯಾದ ಜೇಮ್ಸ್ ಹ್ಯಾರಿಸನ್ ಅವರು 24 ಲಕ್ಷ ಶಿಶುಗಳ ಜೀವ ಉಳಿಸಲು ಕಾರಣರಾದವರು! ಶಿಶುಗಳನ್ನು ಉಳಿಸುವ ರಕ್ತದಾನಕ್ಕಾಗಿ ‘ಚಿನ್ನದ ತೋಳನ್ನು ಹೊಂದಿರುವ ವ್ಯಕ್ತಿ’ ಎಂದು ಪ್ರಸಿದ್ಧಿ ಪಡೆದ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು. ಜೇಮ್ಸ್ ಹ್ಯಾರಿಸನ್ ರು ರಕ್ತದಾನಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು; ಆ ಮೂಲಕ ಇಂದಿಗೂ ಲಕ್ಷಾಂತರ ಜೀವಗಳಲ್ಲಿ ಚಿರಂಜೀವಿಯಾಗಿದ್ದಾರೆ!

ಜೇಮ್ಸ್ ಕ್ರಿಸ್ಟೋಪರ್ ಹ್ಯಾರಿಸನ್ ಅವರು ಆಸ್ಟ್ರೇಲಿಯಾ ನ್ಯೂ ಸೌತ್‌ವೇಲ್ಸ್‌ನ, ಜುನೆ ಎಂಬಲ್ಲಿ, 1936ರ ಡಿಸೆಂಬರ್ 27ರಂದು ಜನಿಸಿದರು. ಅವರ ತಂದೆ ರೆಗ್, ತಾಯಿ ರೆಜಿನಾಲ್ಡ್. ಜೇಮ್ಸ್ ಹ್ಯಾರಿಸನ್‌ರು ರೇಲ್ವೆ ಇಲಾಖೆಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸಿ, 2018ರಲ್ಲಿ ನಿವೃತ್ತರಾದರು. ಅವರು ಬಾರ್ಬರಾ ಲಿಂಡ್‌ಬೆಕ್ ಶಿಕ್ಷಕಿಯನ್ನು ಮದುವೆಯಾದರು. ಅವರು ಕೂಡಾ ರಕ್ತದಾನಿ ಯಾಗಿದ್ದರು.

ಇದನ್ನೂ ಓದಿ: Roopa Gururaj Column: ಭಗವದ್ಗೀತೆಯ ಸಾರ ತಿಳಿದವರು

ಅವರಿಗೆ ಒಬ್ಬಳೇ ಮಗಳು ಟ್ರೇಸಿ. ಜೇಮ್ಸ್ ಹ್ಯಾರಿಸನ್ ಅವರು 14ರ ಹರೆಯದಲ್ಲಿದ್ದಾಗ, ಶ್ವಾಸಕೋಶ ಸಂಬಂಧ ಕಾಯಿಲೆಗೆ ಒಳಗಾದರು. ಆಗ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಅವರಿಗೆ ಬೇಕಾಗಿದ್ದ 13 ಲೀಟರ್ ರಕ್ತವನ್ನು ದಾನಿಗಳು ನೀಡಿದ್ದರು. ನಂತರ ಅವರು ಚೇತರಿಸಿಕೊಂಡ ಕೂಡಲೇ ದಾನಿಗಳು ನೀಡಿದ ದೊಡ್ಡ ಪ್ರಮಾಣದ ರಕ್ತ ನಿನ್ನನ್ನು ಉಳಿಸಿದೆ ಎಂದು ತಂದೆಯವರು ಹೇಳಿದ್ದರು. ಆಗ ಜೇಮ್ಸ್‌ರು ನಾನು ಹರೆಯಕ್ಕೆ ಬಂದ ದಿನದಿಂದಲೇ ರಕ್ತದಾನ ಮಾಡಲು ಆರಂಭಿಸುವೆ ಎಂದು ಪಣತೊಟ್ಟರು.

ಹ್ಯಾರಿಸನ್ ಅವರು 1954ರಲ್ಲಿ ತಮ್ಮ 18ನೇ ವಯಸ್ಸಿನಿಂದ ರಕ್ತದಾನ ಮಾಡಲು ಪ್ರಾರಂಭಿಸಿದರು. ಅಚ್ಚರಿಯೆಂದರೇ ಜೇಮ್ಸ್ ಅವರ ರಕ್ತದಲ್ಲಿ ರೀಸಸ್ ಡಿ ಹೆಮೋಲಿಟಿಕ್ ಕಾಯಿಲೆಗೆ ರಾಮಬಾಣ ವಾಗಬಲ್ಲ ಪ್ಲಾಸ್ಮಾ ಪತ್ತೆಯಾಯಿತು. ಅವರ ರಕ್ತದ ಸಹಾಯದಿಂದ ಆಂಟಿ ಡಿ ಚುಚ್ಚುಮದ್ದು ಸೃಷ್ಟಿಸಿದ ವೈದ್ಯರು ಅದನ್ನು ಗರ್ಭಿಣಿಯರ ಮೇಲೆ ಪ್ರಯೋಗಿಸಿದರು. ಕಂದಮ್ಮಗಳು ಅಮ್ಮಂದಿರ ಗರ್ಭದಿಂದ ಹೊರಬಂದು ಕಣ್ಣುಬಿಡತೊಡಗಿದವು.

ಸಂತೋಷದಿಂದ ವೈದ್ಯರು ಕುಣಿದಾಡಿದರು. 1960ರ ದಶಕದಲ್ಲಿ ಜೇಮ್ಸ್‌ರ ರಕ್ತದಿಂದ ವೈದ್ಯಕೀಯ ಲೋಕದಲ್ಲಿ ಜಾದೂವೇ ನಡೆಯಿತು. ನವಜಾತ ಶಿಶುವಿನ ಹಿಮೋಲಿಟಿಕ್ ಕಾಯಿಲೆಯ ವಿರುದ್ಧ ಹೋರಾಡುವಲ್ಲಿ ಆಂಟಿ ಡಿ ಯ ಬಳಕೆಯು 1960ರ ದಶಕದವರೆಗೆ ಪತ್ತೆಯಾಗಿರಲಿಲ್ಲ. ಹ್ಯಾರಿಸನ್ ಪ್ಲಾಸ್ಮಾದಲ್ಲಿ ಆಂಟಿ ಡಿ ಎಂಬ ಅಪರೂಪದ ಪ್ರತಿಕಾಯವಿದ್ದು, ಅದು ಹೆರಿಗೆಯ ಸಮಯದಲ್ಲಿ ತಾಯಂದಿರಿಂದ ಅವರ ಶಿಶುಗಳಿಗೆ ಹಾನಿಕಾರಕ ಪ್ರತಿಕಾಯಗಳು ಹರಡುವುದನ್ನು ತಡೆಯುತ್ತದೆ.

ಜೇಮ್ಸ್ ಹ್ಯಾರಿಸನ್‌ರು ತಮ್ಮ 18ನೇ ವಯಸ್ಸಿನಿಂದ 81ನೇ ವಯಸ್ಸಿನವರೆಗೆ 1173 ಬಾರಿ ರಕ್ತದಾನ ಮಾಡಿದರು. ಅಂದರೆ 60 ವರ್ಷಗಳ ಕಾಲ ಪ್ರತಿ 15 ದಿನಗಳಿಗೊಮ್ಮೆ ಅವರು ತಪ್ಪದೇ ರಕ್ತದಾನ ಮಾಡಿ, 24 ಲಕ್ಷ ಶಿಶುಗಳಿಗೆ ಜೀವದಾನ ನೀಡಿದರು. ಅವರನ್ನು ಸಮಾಜ ಪ್ರೀತಿಯಿಂದ ಚಿನ್ನದ ತೋಳನ್ನು ಹೊಂದಿರುವ ವ್ಯಕ್ತಿ ಎಂದು ಕರೆದರು.

ಅವರು ಅತೀ ಹೆಚ್ಚು ಪ್ಲಾಸ್ಮಾ ದಾನ ಮಾಡಿದ್ದಕ್ಕಾಗಿ, ಗಿನ್ನೆಸ್ ವಿಶ್ವ ದಾಖಲೆಗೂ ಪಾತ್ರರಾದರು. 2005ರಲ್ಲಿ ಹ್ಯಾರಿಸನ್ ಗಿನ್ನೆಸ್ ವಿಶ್ವದಾಖಲೆ ಗೌರವವನ್ನು ಪಡೆದರು. 1999ರಲ್ಲಿ ಅವರಿಗೆ ಮೆಡಲ್ ಆಫ್ ದಿ ಆರ್ಡರ್ ಆಫ್ ಆಸ್ಟ್ರೇಲಿಯಾ ಪದಕ ನೀಡಿ ಗೌರವಿಸಿತು. 2011ರಲ್ಲಿ ಅವರು ಆಸ್ಟ್ರೇಲಿ ಯನ್ ಆಫ್ ದಿ ಇಯರ್ ಪ್ರಶಸ್ತಿಗಳ ಹೀರೋ ವಿಭಾಗದಲ್ಲಿ ನಾಮ ನಿರ್ದೇಶನಗೊಂಡರು.

ಹ್ಯಾರಿಸನ್ ಅವರನ್ನು ಲೈಫ್ ಬ್ಲಡ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸ್ಟೀಫನ್ ಕಾರ್ನೆಲಿಸ್ಸೆನ್ ಮೆಚ್ಚಿಕೊಂಡಿದ್ದಾರೆ. ಜೇಮ್ಸ್ ಒಬ್ಬ ಕರುಣಾಮಯಿ ಮತ್ತು ಉದಾರ ವ್ಯಕ್ತಿ ಯಾಗಿದ್ದು, ಜೀವಮಾನ ವಿಡೀ ರಕ್ತದಾನ ಮಾಡಲು ಬದ್ಧರಾಗಿದ್ದರು ಎಂದು ಅವರು ಹೇಳಿದ್ದಾರೆ. ಇವರು ಫೆಬ್ರವರಿ 17, 2025ರಂದು ಇಹಲೋಕ ತ್ಯಜಿಸಿದರು. ಇದೀಗ ಅವರು ರಕ್ತದಾನ ಮಾಡಿದ್ದ ಹಳೆಯ ವೀಡಿಯೋ ಗಳು ಸೋಶಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿವೆ!