ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dr Sadhanashree Column: ಬದುಕನ್ನು ಬೆಳಗಿಸುವ ಷೋಡಶ ಸಂಸ್ಕಾರಗಳು !

ಆಯುರ್ವೇದದಲ್ಲಿ ‘ಸಂಸ್ಕಾರೋ ಹಿ ಗುಣಾಂತರಾಧಾನ ಮುಚ್ಯತೆ’ ಎಂದು ಹೇಳಲಾಗಿದೆ. ಅಂದರೆ ಮಾನವನಲ್ಲಿ ಹುಟ್ಟಿನಿಂದಲೇ ಇರಬಹುದಾದ ದೋಷಗಳನ್ನು ತೆಗೆದು ಹಾಕಿ, ಕೊರತೆ ಇದ್ದರೆ ಅದನ್ನು ಪೂರ್ತಿ ಮಾಡಿ, ಇನ್ನಿತರ ಅವಶ್ಯಕತೆ ಇರುವ ಗುಣಗಳನ್ನು ತುಂಬಿ, ಒಳ್ಳೆಯ ಗುಣಗಳನ್ನು ಅತಿಶಯ ವಾಗಿ ಬೆಳೆಸುವುದೇ ‘ಸಂಸ್ಕಾರ’. ಇದನ್ನು ಆಯುರ್ವೇದದ ಪರಿಭಾಷೆಯಲ್ಲಿ ದೋಷಾಪನಯನ, ಗುಣಾಧಾನ ಮತ್ತು ಹೀನಾಂಗಪೂರಣ ಎಂದು ವಿವರಿಸುತ್ತಾರೆ

ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ

ಸಂಸ್ಕಾರಗಳ ಹಿಂದಿರುವ ವೈಜ್ಞಾನಿಕ, ಮಾನಸಿಕ ಮತ್ತು ಸಾಮಾಜಿಕ ಉದ್ದೇಶ ಅರಿತುಕೊಳ್ಳುವುದು ಇಂದಿನ ಅಗತ್ಯ. ಅಂಧಾನುಕರಣೆ ಅನುಸರಿಸುವ ಬದಲು, ಅದರ ತಾತ್ವಿಕ ಆಶಯವನ್ನು ಅರ್ಥ ಮಾಡಿಕೊಂಡು, ಕಾಲಕ್ಕೆ ಮತ್ತು ಆರೋಗ್ಯಕ್ಕೆ ಅನುಗುಣವಾಗಿ ಅಳವಡಿಸಿಕೊಳ್ಳಬೇಕು.

ಮಾನವನ ಬದುಕು ಕೇವಲ ಹುಟ್ಟು, ಬೆಳವಣಿಗೆ, ವಿದ್ಯಾಭ್ಯಾಸ, ಉದ್ಯೋಗ, ವಿವಾಹ ಮತ್ತು ವೃದ್ಧಾಪ್ಯಕ್ಕೆ ಸೀಮಿತವಾದುದಲ್ಲ. ಹುಟ್ಟಿನಿಂದ ಆರಂಭವಾಗಿ, ಬದುಕಿನ ಪ್ರತಿಯೊಂದು ಘಟ್ಟ ದಲ್ಲಿಯೂ ದೇಹ, ಇಂದ್ರಿಯ, ಮನಸ್ಸು ಮತ್ತು ಆತ್ಮಗಳ ಪರಿಪೂರ್ಣ ವಿಕಸನವನ್ನು ಸಾಧಿಸುತ್ತಾ, ಅಂತಿಮವಾಗಿ ಪರಮೋದ್ದೇಶದತ್ತ ಸಾಗುವುದೇ ಮಾನವ ಜೀವನದ ನಿಜವಾದ ಪಯಣ. ಈ ಪಯಣವನ್ನು ಅರ್ಥಪೂರ್ಣವಾಗಿಸುವುದಕ್ಕೆ ಭಾರತೀಯ ಪರಂಪರೆ ಯಲ್ಲಿ ಅನೇಕ ಸಾಧನ ಗಳನ್ನು ನೀಡಿದೆ. ಅವುಗಳಲ್ಲಿ ಪ್ರಮುಖವಾದವು ‘ಷೋಡಶ ಸಂಸ್ಕಾರಗಳು’.

ಆಯುರ್ವೇದವನ್ನು ಕೇವಲ ರೋಗಗಳ ಚಿಕಿತ್ಸೆಗೆ ಸೀಮಿತವಾದ ವೈದ್ಯಕೀಯ ಪದ್ಧತಿಯೆಂದು ಪರಿಗಣಿಸ ಲಾಗದು. ಅದು ಸ್ವಾಸ್ಥ್ಯಪೂರ್ಣ ಬದುಕನ್ನು ರೂಪಿಸುವ, ವ್ಯಕ್ತಿತ್ವವನ್ನು ಪರಿಷ್ಕರಿಸುವ ಮತ್ತು ಜೀವನದ ಪರಮ ಗುರಿಯೆಡೆಗೆ ಮನುಷ್ಯನನ್ನು ಮುನ್ನಡೆಸುವ ಜೀವನ ವಿಜ್ಞಾನ. ಈ ಹಿನ್ನೆಲೆಯಲ್ಲಿ ಗರ್ಭಧಾರಣೆ ಯಿಂದ ಹಿಡಿದು ಸಂನ್ಯಾಸದವರೆಗಿನ ಮಾನವನ ಜೀವನದ ವಿವಿಧ ಘಟ್ಟಗಳಿಗೆ ಸಂಬಂಧಿಸಿದ ಸಂಸ್ಕಾರಗಳ ಮಹತ್ವವನ್ನು ಆಯುರ್ವೇದ ಹಾಗೂ ಭಾರತೀಯ ಶಾಸ್ತ್ರಗಳಲ್ಲಿ ವಿವರಿಸಲಾಗಿದೆ.

ಇದನ್ನೂ ಓದಿ: Dr Sadhanashree Column: ಡೆಂಘೀ ಜ್ವರ: ಆಯುರ್ವೇದದ ಅರಿವು, ಆರೋಗ್ಯದ ಕಾಳಜಿ

ಹಾಗಾದರೆ ಸಂಸ್ಕಾರ ಎಂದರೇನು? ಷೋಡಶ ಸಂಸ್ಕಾರಗಳು ಯಾವುವು? ಅವುಗಳ ಹಿಂದಿರುವ ವೈಜ್ಞಾನಿಕ ಹಾಗೂ ತಾತ್ವಿಕ ಆಶಯಗಳೇನು? ಸಂಸ್ಕಾರವೆಂದರೆ ಕೇವಲ ಆಚರಣೆಯಲ್ಲ, ವ್ಯಕ್ತಿತ್ವದ ಪರಿಷ್ಕರಣೆ: ಸಂಸ್ಕಾರ ಎಂಬ ಪದಕ್ಕೆ ಶುದ್ಧೀಕರಣ, ಪರಿಷ್ಕರಣೆ, ಸುಧಾರಣೆ ಮತ್ತು ಯೋಗ್ಯತೆ ಯನ್ನು ಉಂಟುಮಾಡುವುದು ಎಂಬ ಅರ್ಥಗಳಿವೆ.

ಆಯುರ್ವೇದದಲ್ಲಿ ‘ಸಂಸ್ಕಾರೋ ಹಿ ಗುಣಾಂತರಾಧಾನ ಮುಚ್ಯತೆ’ ಎಂದು ಹೇಳಲಾಗಿದೆ. ಅಂದರೆ ಮಾನವನಲ್ಲಿ ಹುಟ್ಟಿನಿಂದಲೇ ಇರಬಹುದಾದ ದೋಷಗಳನ್ನು ತೆಗೆದು ಹಾಕಿ, ಕೊರತೆ ಇದ್ದರೆ ಅದನ್ನು ಪೂರ್ತಿ ಮಾಡಿ, ಇನ್ನಿತರ ಅವಶ್ಯಕತೆ ಇರುವ ಗುಣಗಳನ್ನು ತುಂಬಿ, ಒಳ್ಳೆಯ ಗುಣಗಳನ್ನು ಅತಿಶಯವಾಗಿ ಬೆಳೆಸುವುದೇ ‘ಸಂಸ್ಕಾರ’. ಇದನ್ನು ಆಯುರ್ವೇದದ ಪರಿಭಾಷೆಯಲ್ಲಿ ದೋಷಾ ಪನಯನ, ಗುಣಾಧಾನ ಮತ್ತು ಹೀನಾಂಗಪೂರಣ ಎಂದು ವಿವರಿಸುತ್ತಾರೆ. ಅಂದರೆ ಅನಗತ್ಯವಾದ ದೋಷ ಗಳನ್ನು ನಿವಾರಿಸುವುದು, ಅಗತ್ಯವಾದ ಉತ್ತಮ ಗುಣಗಳನ್ನು ಬೆಳೆಸುವುದು ಮತ್ತು ಕೊರತೆಯಿರುವ ಅಂಶ ಗಳನ್ನು ಪೂರೈಸುವುದು. ಈ ದೃಷ್ಟಿಯಿಂದ ಸಂಸ್ಕಾರಗಳು ಕೇವಲ ಧಾರ್ಮಿಕ ವಿಧಿವಿಧಾನಗಳಲ್ಲ; ಅವು ಮಾನವನ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ವಿಕಸನಕ್ಕೆ ಪೂರಕ ವಾದ ಜೀವನಪದ್ಧತಿ ಗಳಾಗಿವೆ. ಮಾನವನ ಜೀವನವನ್ನು ಹದಿನಾರು ಪ್ರಮುಖ ಘಟ್ಟಗಳಾಗಿ ಪರಿಗಣಿಸಿ, ಆಯಾ ಹಂತಗಳಿಗೆ ಅನುಗುಣ ವಾಗಿ ರೂಪಿಸಲಾದ ಸಂಸ್ಕಾರಗಳ ಸಮೂಹವೇ ಷೋಡಶ ಸಂಸ್ಕಾರಗಳು.

Deepavali

ಗರ್ಭಾವಸ್ಥೆಯ ಸಂಸ್ಕಾರಗಳು 1. ಗರ್ಭಾಧಾನ 2. ಪುಂಸವನ 3. ಸೀಮಂತ ಶೈಶವಾವಸ್ಥೆಯ ಸಂಸ್ಕಾರಗಳು 4. ಜಾತಕರ್ಮ 5. ನಾಮಕರಣ 6. ನಿಷ್ಕ್ರಮಣ ಬಾಲ್ಯಾವಸ್ಥೆಯ ಸಂಸ್ಕಾರಗಳು 7. ಅನಪ್ರಾಶನ 8. ಚೂಡಾಕರ್ಮ 9. ಕರ್ಣವೇಧ ಕೌಮಾರಾವಸ್ಥೆಯ ಸಂಸ್ಕಾರಗಳು 10. ಅಕ್ಷರಾಭ್ಯಾಸ 11. ಉಪನಯನ 12. ವೇದಾರಂಭ.

ಯೌವನಾವಸ್ಥೆಯ ಸಂಸ್ಕಾರಗಳು

  1. ಸಮಾವರ್ತನ 14. ವಿವಾಹ

ವೃದ್ಧಾವಸ್ಥೆಯ ಸಂಸ್ಕಾರಗಳು

  1. ವಾನಪ್ರಸ್ಥ 16. ಸಂನ್ಯಾಸ

ಗರ್ಭಾವಸ್ಥೆ: ಆರೋಗ್ಯಕರ ಸಂತತಿಯ ಸಂಕಲ್ಪ

  1. ಗರ್ಭಾಧಾನ: ಸಂತಾನೋತ್ಪತ್ತಿಗೆ ದಂಪತಿಗಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಿದ್ಧರಾಗುವ ಪ್ರಕ್ರಿಯೆಯೇ ಗರ್ಭಾಧಾನ ಸಂಸ್ಕಾರ. ಆರೋಗ್ಯ ವಂತ ಸಂತಾನವನ್ನು ಪಡೆಯಬೇಕೆಂಬ ಸಂಕಲ್ಪ ದೊಂದಿಗೆ, ಸೂಕ್ತ ಕಾಲದಲ್ಲಿ, ಶರೀರ ಮತ್ತು ಮನಸ್ಸಿನ ಶುದ್ಧತೆಯನ್ನು ಕಾಪಾಡಿಕೊಂಡು ದಾಂಪತ್ಯ ಜೀವನ ವನ್ನು ಆರಂಭಿಸು ವುದಕ್ಕೆ ಇಲ್ಲಿ ಮಹತ್ವ ನೀಡಲಾಗಿದೆ. ಆಯುರ್ವೇದದಲ್ಲಿ ಗರ್ಭಧಾರಣೆಗೆ ದಂಪತಿಗಳ ವಯಸ್ಸು, ಆರೋಗ್ಯ, ಆಹಾರ, ಮನಸ್ಥಿತಿ ಹಾಗೂ ಋತುಗಳ ಪರಿಗಣನೆಗೆ ವಿಶೇಷ ಪ್ರಾಮುಖ್ಯತೆಯಿದೆ.
  2. ಪುಂಸವನ: ಗರ್ಭಧಾರಣೆ ದೃಢಪಟ್ಟ ನಂತರ ಸಾಮಾನ್ಯವಾಗಿ ಎರಡನೇ ಅಥವಾ ಮೂರನೇ ತಿಂಗ ಳಲ್ಲಿ ಆಚರಿಸುವ ಸಂಸ್ಕಾರವಿದು. ಪುಂಸವನದ ಉದ್ದೇಶ ಕೇವಲ ಗಂಡು ಸಂತಾನವನ್ನು ಪಡೆಯುವು ದಲ್ಲ. ಬದಲಾಗಿ, ಆರೋಗ್ಯವಂತ, ಬಲಿಷ್ಠ ಮತ್ತು ಉತ್ತಮ ಗುಣಗಳಿಂದ ಕೂಡಿದ ಸಂತತಿಯ ಪ್ರಾಪ್ತಿ ಗಾಗಿ ಪ್ರಾರ್ಥಿಸುವುದಾಗಿದೆ. ಮಗುವಿನ ಲಿಂಗಕ್ಕಿಂತ ಅದರ ಆರೋಗ್ಯ ಮತ್ತು ಸಮಗ್ರ ಬೆಳವಣಿಗೆಯೇ ಮುಖ್ಯ ಎಂಬ ಆಶಯವನ್ನು ಈ ಸಂಸ್ಕಾರದಲ್ಲಿ ಗುರುತಿಸಬಹುದು.
  3. ಸೀಮಂತೋನ್ನಯನ: ತಲೆಯ ಮೇಲಿರುವ ಪಂಚ ಸಂಧಿಗೆ ‘ಸೀಮಂತ’ ಎಂದು ಹೆಸರು. ಅದರ ಉನ್ನಯನ ಅಂದರೆ ವೃದ್ಧೀಕಣೆ/ ರಕ್ಷಣೆಯು ಈ ಸಂಸ್ಕಾರದ ಪ್ರಧಾನ ಉದ್ದೇಶ. ಗರ್ಭಿಣಿಯ ಮತ್ತು ಗರ್ಭದಲ್ಲಿರುವ ಶಿಶುವಿನ ಕ್ಷೇಮವನ್ನು ಬಯಸಿ ಆಚರಿಸುವ ಸಂಸ್ಕಾರವೇ ಸೀಮಂತೋನ್ನಯನ. ಗರ್ಭಾವಸ್ಥೆಯ ನಾಲ್ಕನೇ, ಆರನೇ ಅಥವಾ ಎಂಟನೇ ತಿಂಗಳಲ್ಲಿ ಸಂಪ್ರದಾಯದಂತೆ ಇದನ್ನು ಆಚರಿಸಲಾ ಗುತ್ತದೆ. ಗರ್ಭಿಣಿಗೆ ಸಂತೋಷ, ಮಾನಸಿಕ ನೆಮ್ಮದಿ, ಕುಟುಂಬದ ಪ್ರೀತಿ ಮತ್ತು ಆತ್ಮವಿಶ್ವಾಸವನ್ನು ಒದಗಿ ಸುವುದು ಇದರ ಪ್ರಮುಖ ಆಶಯ. ತಾಯಿಯ ಮನಸ್ಸಿನ ಆರೋಗ್ಯವು ಗರ್ಭದಲ್ಲಿನ ಶಿಶುವಿನ ಬೆಳವಣಿಗೆ ಯೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂಬುದನ್ನು ಇಂದಿನ ವಿeನವೂ ಒತ್ತಿಹೇಳುತ್ತದೆ. ಶೈಶವಾವಸ್ಥೆ: ಹೊಸ ಜೀವದ ಸ್ವಾಗತ

೪. ಜಾತಕರ್ಮ: ಜಾತಕರ್ಮವು ಶಿಶುವಿನ ಜನನದ ತಕ್ಷಣ ಆಚರಿಸುವ ಪ್ರಮುಖ ಸಂಸ್ಕಾರವಾಗಿದೆ. ಈ ಸಂಸ್ಕಾರದ ಸಂದರ್ಭದಲ್ಲಿ ತಂದೆಯು ವೈದಿಕ ಮಂತ್ರೋಚ್ಚಾರಣೆಗಳೊಂದಿಗೆ ಮಗುವನ್ನು ಕುಟುಂಬಕ್ಕೆ ಸ್ವಾಗತಿಸುತ್ತಾರೆ. ಸಾಂಪ್ರದಾಯಿಕವಾಗಿ ಜೇನುತುಪ್ಪ, ತುಪ್ಪ ಹಾಗೂ ಮೇಧ್ಯ ದ್ರವ್ಯಗಳ ಉಲ್ಲೇಖವೂ ಈ ವಿಽಯಲ್ಲಿ ಕಂಡುಬರುತ್ತದೆ. ಈ ಸಂಸ್ಕಾರದ ಪ್ರಧಾನ ಉದ್ದೇಶವೇ ಮೇಧಾಜನನ, ಅಂದರೆ ಮಗುವಿನ ಬುದ್ಧಿಶಕ್ತಿ ಮತ್ತು ಗ್ರಹಣಶಕ್ತಿಯ ವಿಕಸನಕ್ಕಾಗಿ ಪ್ರಾರ್ಥಿಸು ವುದು. ತಾಯಿಯ ಗರ್ಭ ದಲ್ಲಿ ಶಿಶುವಿನ ಶಾರೀರಿಕ ಬೆಳವಣಿಗೆ ಪೂರ್ಣ ಡು ಭೂಮಿಗೆ ಆಗಮಿಸಿದ ನಂತರ, ಅದರ ಬೌದ್ಧಿಕ ಹಾಗೂ ಮಾನಸಿಕ ವಿಕಸನ ಉತ್ತಮವಾಗಿರಲಿ, ಮಗು ದೀರ್ಘಾಯುಷ್ಯ, ಆರೋಗ್ಯ ಮತ್ತು ತೇಜಸ್ಸಿನಿಂದ ಕೂಡಿರಲಿ ಎಂಬ ಶುಭಸಂಕಲ್ಪವನ್ನು ಈ ಸಂಸ್ಕಾರವು ಪ್ರತಿಬಿಂಬಿ ಸುತ್ತದೆ.

  1. ನಾಮಕರಣ: ಮಗುವಿಗೆ ಅರ್ಥಪೂರ್ಣವಾದ ಹೆಸರನ್ನು ನೀಡುವ ಸಂಸ್ಕಾರವೇ ನಾಮಕರಣ. ಸಾಮಾನ್ಯವಾಗಿ ಜನನದ ಹನ್ನೊಂದನೇ ಅಥವಾ ಹನ್ನೆರಡನೇ ದಿನದಲ್ಲಿ ಇದನ್ನು ಆಚರಿಸ ಲಾಗುತ್ತದೆ. ಹೆಸರು ಕೇವಲ ವ್ಯಕ್ತಿಯನ್ನು ಗುರುತಿಸುವ ಸಾಧನ ವಲ್ಲ; ಅದು ಆತನ ಸಾಮಾಜಿಕ ಮತ್ತು ಸಾಂಸ್ಕೃತಿಕ ಅಸ್ತಿತ್ವದ ಮೊದಲ ಗುರುತು. ಶುಭಾರ್ಥವುಳ್ಳ ಹೆಸರಿನ ಮೂಲಕ ಮಗುವಿಗೆ ಉತ್ತಮ ಭವಿಷ್ಯದ ಹಾರೈಕೆ ಯನ್ನು ನೀಡಲಾಗುತ್ತದೆ.
  2. ನಿಷ್ಕ್ರಮಣ: ಮಗುವನ್ನು ಮೊದಲ ಬಾರಿಗೆ ಮನೆ ಯಿಂದ ಹೊರಗೆ ಕರೆದುಕೊಂಡು ಹೋಗಿ ಪ್ರಕೃತಿ ಯೊಂದಿಗೆ ಪರಿಚಯಿಸುವ ಸಂಸ್ಕಾರವೇ ನಿಷ್ಕ್ರಮಣ. ಸಾಮಾನ್ಯವಾಗಿ ನಾಲ್ಕನೇ ತಿಂಗಳಲ್ಲಿ ಆಚರಿಸಲಾ ಗುತ್ತದೆ. ಸೂರ್ಯ ಮತ್ತು ಚಂದ್ರನ ದರ್ಶನ ಮಾಡಿಸುವುದು, ದೇವಾಲಯಕ್ಕೆ ಕರೆದೊಯ್ಯುವುದು ಮುಂತಾದ ಆಚರಣೆಗಳು ಇದರ ಭಾಗವಾಗಿವೆ. ಮಗುವನ್ನು ಕ್ರಮೇಣ ಹೊರಜಗತ್ತಿಗೆ ಪರಿಚಯಿಸುವುದು ಇದರ ಆಶಯ.
  3. ಬಾಲ್ಯಾವಸ್ಥೆ: ಪೋಷಣೆ ಮತ್ತು ಬೆಳವಣಿಗೆಯ ಹಂತ
  4. ಅನ್ನಪ್ರಾಶನ: ಮಗುವಿಗೆ ಮೊದಲ ಬಾರಿಗೆ ಘನ ಆಹಾರವನ್ನು ಪರಿಚಯಿಸುವ ಸಂಸ್ಕಾರವೇ ಅನ್ನ ಪ್ರಾಶನ. ಸಾಮಾನ್ಯವಾಗಿ ಆರನೇ ತಿಂಗಳಲ್ಲಿ ಆಚರಿಸ ಲಾಗುತ್ತದೆ. ತಾಯಿಯ ಹಾಲಿನ ಜೊತೆಗೆ ಮಗುವಿನ ಬೆಳವಣಿಗೆಗೆ ಪೂರಕವಾದ ಆಹಾರವನ್ನು ಪರಿಚಯಿ ಸುವ ಮಹತ್ವವನ್ನು ಇದು ಸಾರುತ್ತದೆ. ಮಗುವಿನ ಜೀರ್ಣಶಕ್ತಿ ಮತ್ತು ವಯಸ್ಸಿಗೆ ಅನುಗುಣವಾಗಿ ಸೂಕ್ತವಾದ ಆಹಾರವನ್ನು ಆಯ್ಕೆ ಮಾಡುವುದು ಇಲ್ಲಿ ಮುಖ್ಯ.
  5. ಚೂಡಾಕರ್ಮ: ಮಗುವಿನ ಮೊದಲ ಕೂದಲನ್ನು ತೆಗೆಯುವ ಅಥವಾ ಮುಂಡನ ಮಾಡುವ ಸಂಸ್ಕಾ ರವೇ ಚೂಡಾಕರ್ಮ. ಸಾಮಾನ್ಯವಾಗಿ ಮೊದಲ ಅಥವಾ ಮೂರನೇ ವರ್ಷದಲ್ಲಿ ಆಚರಿಸಲಾಗುತ್ತದೆ. ಚೂಡಾಕರ್ಮವು ಹುಟ್ಟಿನಿಂದಲೇ ಇದ್ದ ಕೂದಲನ್ನು ತೆಗೆಯುವ ಸಾಂಕೇತಿಕ ಕ್ರಿಯೆಯಾಗಿದ್ದು, ಇದು ಹಿಂದಿನಜನ್ಮದ ಕರ್ಮ ಅಥವಾ ನಕಾರಾತ್ಮಕ ಗುಣ ಲಕ್ಷಣಗಳೊಂದಿಗೆ ಸಂಬಂಧಿಸಿದೆ ಎಂದು ನಂಬಲಾ ಗಿದೆ. ಕೂದಲನ್ನು ಕ್ಷೌರ ಮಾಡುವುದು ಪೂರ್ವ ಕರ್ಮಗಳನ್ನು ಶುದ್ಧೀಕರಿಸಿ ಮಗುವಿಗೆ ಹೊಸ ಹಾದಿ ಯನ್ನು ಪ್ರಾರಂಭಿಸಲು ಅನುವು ಮಾಡಿಕೊಡುತ್ತದೆ.
  6. ಕರ್ಣವೇಧ: ಮಗುವಿನ ಕಿವಿಗಳನ್ನು ಚುಚ್ಚಿ ಆಭರಣ ಗಳನ್ನು ಧರಿಸುವ ಸಂಸ್ಕಾರವೇ ಕರ್ಣವೇಧ. ಇದಕ್ಕೆ ಅಲಂಕಾರಿಕ ಮತ್ತು ಸಾಂಪ್ರದಾಯಿಕ ಮಹತ್ವವಿದೆ. ಕೆಲವು ಶಾಸ್ತ್ರಗಳಲ್ಲಿ ಇದನ್ನು ಆರೋಗ್ಯ ರಕ್ಷಣೆಯ ಉದ್ದೇಶದಿಂದಲೂ ವಿವರಿಸಲಾಗಿದೆ. ಆದರೆ ಈ ಪ್ರಕ್ರಿಯೆಯನ್ನು ಸೋಂಕುಮುಕ್ತ ವಾತಾವರಣದಲ್ಲಿ, ಸೂಕ್ತ ವೈದ್ಯಕೀಯ ಸುರಕ್ಷತೆಯೊಂದಿಗೆ ನಡೆಸುವುದು ಅತ್ಯಗತ್ಯ.

ಕೌಮಾರಾವಸ್ಥೆ: ಜ್ಞಾನಾರ್ಜನೆಯ ಆರಂಭ

  1. ವಿದ್ಯಾರಂಭ ಅಥವಾ ಅಕ್ಷರಾಭ್ಯಾಸ: ಮಗುವಿನ ವಿದ್ಯಾಭ್ಯಾಸಕ್ಕೆ ಔಪಚಾರಿಕವಾಗಿ ಚಾಲನೆ ನೀಡುವ ಸಂಸ್ಕಾರವೇ ವಿದ್ಯಾರಂಭ. ಸಾಮಾನ್ಯವಾಗಿ ಐದನೇ ವಯಸ್ಸಿನಲ್ಲಿ ಶುಭದಿನದಂದು ಅಕ್ಷರಾಭ್ಯಾಸ ಮಾಡಿಸಲಾಗುತ್ತದೆ. ಅಕ್ಷರ ಜ್ಞಾನವು ಕೇವಲ ಓದು ಮತ್ತು ಬರವಣಿಗೆಗೆ ಸೀಮಿತವಾಗದೆ, ಜಗತ್ತನ್ನು ಅರಿಯುವ, ವಿವೇಚನಾಶಕ್ತಿಯನ್ನು ಬೆಳೆಸುವ ಮತ್ತು ಜವಾಬ್ದಾರಿ ಯುತ ನಾಗರಿಕನಾಗಿ ರೂಪುಗೊಳ್ಳುವ ಮೊದಲ ಹೆಜ್ಜೆಯಾಗಿದೆ.
  2. ಉಪನಯನ: ಈ ಸಂಸ್ಕಾರವು ಅತ್ಯಂತ ಮಹತ್ವ ಪೂರ್ಣವಾದುದು. ‘ಉಪ’ ಎಂದರೆ ಗುರುವಿನ ಸಮೀಪ, ‘ನಯನ’ ಎಂದರೆ ಕೊಂಡೊಯ್ಯುವುದು. ಗುರುವಿನಿಂದ ಉಪದೇಶವನ್ನು ಪಡೆಯುವುದಕ್ಕಾಗಿ ಗುರುವಿನ ಬಳಿ ಸೇರುವುದೆ ಉಪನಯನದ ಉದ್ದೇಶ. ಒಬ್ಬ ವ್ಯಕ್ತಿಯನ್ನು ಅರಿವು ಅಥವಾ ಜ್ಞಾನದ ಹತ್ತಿರ ಕರೆದುಕೊಂಡು ಹೋಗುವ ಒಂದು ವಿಧಾನ ಈ ಉಪನಯನ. ಒಬ್ಬ ವ್ಯಕ್ತಿಯು ವೇದ ಜ್ಞಾನ ವುಳ್ಳವ ನಾಗಬೇಕಾದರೆ ಅದಕ್ಕೆ ಪೂರ್ವ ಸಿದ್ಧತೆಗಳ ಅವಶ್ಯಕತೆ ಅತಿ ಮುಖ್ಯ. ಆದ್ದರಿಂದ ಜ್ಞಾನಾರ್ಜನೆಯನ್ನು ಬಯಸುವ ಪ್ರತಿಯೊಬ್ಬ ವ್ಯಕ್ತಿಗೂ ಉಪನಯನದ ಅವಶ್ಯಕತೆ ಇದೆ. ಉಪನಯನದ ಸಂಸ್ಕಾರದಿಂದ ಪುನರ್ಜನ್ಮವೇ ದೊರೆತಂತಾಗುತ್ತದೆ. ಸಾಮಾನ್ಯವಾಗಿ, ಇದನ್ನು ಜನನದಿಂದ ಅಥವಾ ಯಾವ ದಿನ ಗರ್ಭ ನಿಂತಿದೆಯೋ ಅಲ್ಲಿಂದ ಎಂಟನೇ ವರ್ಷದಲ್ಲಿ ಉಪನಯನ ಮಾಡತಕ್ಕದ್ದು.
  3. ವೇದಾರಂಭ: ಉಪನಯನದ ನಂತರ ವೇದಾಯನವನ್ನು ಪ್ರಾರಂಭಿಸುವ ಸಂಸ್ಕಾರವೇ ವೇದಾ ರಂಭ. ವೇದ ಎಂದರೆ ಕೇವಲ ಮಂತ್ರಗಳ ಸಂಗ್ರಹ ವಲ್ಲ; ಅದು ಜ್ಞಾನ ಮತ್ತು ಜೀವನದರ್ಶನದ ಮಹಾ ಸಾಗರ. ಸತ್ಯಾನ್ವೇಷಣೆ, ಧರ್ಮನಿಷ್ಠೆ, ಆತ್ಮಶಿಸ್ತು ಮತ್ತು ಜ್ಞಾನಸಾಧನೆಯ ಮೂಲಕ ವ್ಯಕ್ತಿಯ ಬೌದ್ಧಿಕ ಹಾಗೂ ನೈತಿಕ ವಿಕಸನಕ್ಕೆ ಈ ಸಂಸ್ಕಾರ ಪ್ರೇರಣೆ ನೀಡುತ್ತದೆ. ಯೌವನಾವಸ್ಥೆ: ಜವಾಬ್ದಾರಿಯುತ ಬದುಕಿನತ್ತ
  4. ಸಮಾವರ್ತನ: ಗುರುಕುಲದಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಗುರುಗಳ ಆಶೀರ್ವಾದ ಪಡೆದು

ಗೃಹಜೀವನಕ್ಕೆ ಮರಳುವ ಸಂದರ್ಭದಲ್ಲಿ ಆಚರಿಸುವ ಸಂಸ್ಕಾರವೇ ಸಮಾವರ್ತನ. ವಿದ್ಯಾಭ್ಯಾಸದ ಅಂತ್ಯವನ್ನು ಸೂಚಿಸುವುದರ ಜೊತೆಗೆ, ಕಲಿತ ಜ್ಞಾನವನ್ನು ಸಮಾಜದ ಒಳಿತಿಗಾಗಿ ಬಳಸುವ ಜವಾಬ್ದಾರಿಯನ್ನು ನೆನಪಿಸುತ್ತದೆ. ಗುರುದಕ್ಷಿಣೆ ಅರ್ಪಿಸುವುದು ಈ ಸಂಸ್ಕಾರದ ಪ್ರಮುಖ ಭಾಗವಾಗಿದೆ. 14. ವಿವಾಹ: ಬ್ರಹ್ಮಚರ್ಯಾಶ್ರಮದ ನಂತರ ಗೃಹಸ್ಥಾಶ್ರಮಕ್ಕೆ ಪ್ರವೇಶಿಸುವ ಸಂಸ್ಕಾರವೇ ವಿವಾಹ. ಇಬ್ಬರು ವ್ಯಕ್ತಿಗಳು ಪರಸ್ಪರ ಪ್ರೀತಿ, ನಂಬಿಕೆ, ಗೌರವ ಮತ್ತು ಜವಾಬ್ದಾರಿಯ ಆಧಾರದ ಮೇಲೆ ಜೀವನವನ್ನು ಹಂಚಿಕೊಳ್ಳುವ ಪವಿತ್ರ ಬಂಧನವಿದು. ಸಂತಾನೋತ್ಪತ್ತಿ ಮಾತ್ರವಲ್ಲದೆ, ಕುಟುಂಬದ ನಿರ್ಮಾಣ, ಸಮಾ ಜದ ಪೋಷಣೆ, ಧರ್ಮಾಚರಣೆ ಮತ್ತು ಪರಸ್ಪರ ಜೀವನೋನ್ನತಿಯೂ ವಿವಾಹದ ಉದ್ದೇಶಗಳಾಗಿವೆ.

ವೃದ್ಧಾಪ್ಯ: ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಪಯಣ

  1. ವಾನಪ್ರಸ್ಥ: ಜೀವನದ ಗೃಹಸ್ಥಾಶ್ರಮದ ಜವಾಬ್ದಾರಿಗಳನ್ನು ಕ್ರಮೇಣ ಮುಂದಿನ ಪೀಳಿಗೆಗೆ ಹಸ್ತಾಂತರಿಸಿ, ಭೋಗಾಸಕ್ತಿಯಿಂದ ದೂರ ಸರಿದು ಆಧ್ಯಾತ್ಮಿಕ ಸಾಧನೆಯತ್ತ ಮುಖ ಮಾಡುವ ಹಂತವೇ ವಾನ ಪ್ರಸ್ಥ. ಸಂಪ್ರದಾಯದ ಪ್ರಕಾರ ಮೊಮ್ಮಗುವಿನ ಜನನ, ಕೂದಲು ನರೆತಿರುವುದು ಮತ್ತು ದೇಹದಲ್ಲಿ ವೃದ್ಧಾಪ್ಯದ ಲಕ್ಷಣಗಳು ಕಾಣಿಸಿಕೊಂಡಾಗ ಈ ಆಶ್ರಮವನ್ನು ಸ್ವೀಕರಿಸಬಹುದು. ಇದರ ಅರ್ಥ ಕಡ್ಡಾಯವಾಗಿ ಕಾಡಿಗೆ ತೆರಳುವುದಲ್ಲ; ಬದಲಾಗಿ, ಆಸೆ-ಆಕಾಂಕ್ಷೆಗಳನ್ನು ನಿಯಂತ್ರಿಸಿಕೊಂಡು ಸರಳತೆ, ಸೇವೆ, ಧ್ಯಾನ ಮತ್ತು ಆತ್ಮಚಿಂತನೆಯಿಂದ ಬದುಕುವುದಾಗಿದೆ.
  2. ಸಂನ್ಯಾಸ: ಜೀವನದ ಅಂತಿಮ ಆಶ್ರಮವಾದ ಸಂನ್ಯಾಸವು ಸಂಪೂರ್ಣ ವೈರಾಗ್ಯ ಮತ್ತು ಆತ್ಮeನ ಸಾಧನೆಯ ಸಂಕೇತ. ಲೌಕಿಕ ಬಂಧನಗಳು, ಮೋಹ, ಅಹಂಕಾರ ಮತ್ತು ಸ್ವಾರ್ಥಗಳನ್ನು ತ್ಯಜಿಸಿ ಬ್ರಹ್ಮ eನದ ಅನ್ವೇಷಣೆಯಲ್ಲಿ ತೊಡಗುವುದೇ ಇದರ ಮೂಲ ಆಶಯ. ಸಂನ್ಯಾಸವೆಂದರೆ ಕೇವಲ ಕಾವಿ ಬಟ್ಟೆ ಧರಿಸುವುದಲ್ಲ; ಮನಸ್ಸಿನಲ್ಲಿರುವ ಆಸಕ್ತಿ ಮತ್ತು ಅಹಂಕಾರಗಳನ್ನು ತೊರೆದು ಆತ್ಮತತ್ತ್ವದಲ್ಲಿ ನೆಲೆಗೊಳ್ಳುವ ಸಾಧನೆ. ಆಚರಣೆಯಿಂದ ಅನುಭವದವರೆಗೆ!

ಷೋಡಶ ಸಂಸ್ಕಾರಗಳ ಸಮಗ್ರ ಆಶಯವನ್ನು ಗಮನಿಸಿದಾಗ, ಅವು ಮಾನವನ ಜೀವನದ ಪ್ರತಿಯೊಂದು ಘಟ್ಟಕ್ಕೂ ಒಂದು ನಿರ್ದಿಷ್ಟ ಉದ್ದೇಶ ಮತ್ತು ದಿಕ್ಕನ್ನು ನೀಡುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ಗರ್ಭದಲ್ಲಿರುವ ಜೀವದ ಕ್ಷೇಮದಿಂದ ಆರಂಭವಾಗಿ, ಬಾಲ್ಯದ ಪೋಷಣೆ, ವಿದ್ಯಾಭ್ಯಾಸ, ದಾಂಪತ್ಯ ಜೀವನ, ಸಾಮಾಜಿಕ ಜವಾಬ್ದಾರಿ ಮತ್ತು ಅಂತಿಮವಾಗಿ ಆತ್ಮಸಾಕ್ಷಾತ್ಕಾರ ದವರೆಗೆ ಮಾನವನನ್ನು ಮುನ್ನಡೆಸುವ ಜೀವನದರ್ಶನವೇ ಈ ಸಂಸ್ಕಾರಗಳು. ಇಂದಿನ ವೇಗದ ಬದುಕಿನಲ್ಲಿ ಅನೇಕ ಸಂಸ್ಕಾರಗಳು ಕೇವಲ ಸಂಪ್ರದಾಯದ ಆಚರಣೆಗಳಾಗಿ ಉಳಿದಿವೆ. ಅವುಗಳ ಹಿಂದಿರುವ ವೈಜ್ಞಾನಿಕ, ಮಾನಸಿಕ ಮತ್ತು ಸಾಮಾಜಿಕ ಉದ್ದೇಶಗಳನ್ನು ಅರಿತುಕೊಳ್ಳುವುದು ಇಂದಿನ ಅಗತ್ಯ.

ಯಾವುದೇ ಆಚರಣೆಯನ್ನು ಅಂಧಾ ನುಕರಣೆಯಿಂದ ಅನುಸರಿಸುವ ಬದಲು, ಅದರ ತಾತ್ವಿಕ ಆಶಯವನ್ನು ಅರ್ಥಮಾಡಿಕೊಂಡು, ಕಾಲಕ್ಕೆ ಮತ್ತು ಆರೋಗ್ಯಕ್ಕೆ ಅನುಗುಣವಾಗಿ ಅಳವಡಿಸಿ ಕೊಳ್ಳಬೇಕು. ಸಂಸ್ಕಾರಗಳು ವ್ಯಕ್ತಿಯೊಳಗೆ ಶಿಸ್ತು, ಸಂಯಮ, ಪ್ರೀತಿ, ಕರುಣೆ, ಕೃತಜ್ಞತೆ, ಸೇವಾ ಮನೋಭಾವ ಮತ್ತು ತ್ಯಾಗದಂತಹ ಮೌಲ್ಯಗಳನ್ನು ಬೆಳೆಸುತ್ತವೆ. ಇವುಗಳಿಂದ ಕುಟುಂಬದಲ್ಲಿ ಸಾಮರಸ್ಯ, ಸಮಾಜದಲ್ಲಿ ಸೌಹಾರ್ದ ಮತ್ತು ರಾಷ್ಟ್ರದಲ್ಲಿ ಸಾಂಸ್ಕೃತಿಕ ಪ್ರಜ್ಞೆ ವೃದ್ಧಿಯಾಗುತ್ತದೆ.

ಮಾನವನ ಜನನವು ಪ್ರಕೃತಿಯ ಕೊಡುಗೆಯಾದರೆ, ಆತನ ವ್ಯಕ್ತಿತ್ವವನ್ನು ರೂಪಿಸುವುದು ಸಂಸ್ಕಾರ ಗಳ ಕೊಡುಗೆ. ಹುಟ್ಟಿನಿಂದ ಸಾವಿನವರೆಗೆ ಬದುಕನ್ನು ಕೇವಲ ಸವೆಸದೆ, ಪ್ರತಿಯೊಂದು ಹಂತ ವನ್ನೂ ಅರ್ಥಪೂರ್ಣ ವಾಗಿಸಿ, ಮನುಷ್ಯತ್ವದಿಂದ ದೈವತ್ವದತ್ತ ಸಾಗಲು ನೆರವಾಗುವುದೇ ಷೋಡಶ ಸಂಸ್ಕಾರಗಳ ಮಹತ್ತರ ಸಂದೇಶ. ಸಂಸ್ಕಾರಗಳು ಬದುಕಿನಲ್ಲಿ ನೆಲೆಗೊಂಡಾಗಲೇ ಜೀವನದ ಪರಿಪೂರ್ಣತೆ ಸಾಕಾರವಾಗುತ್ತದೆ.

ಡಾ. ಸಾಧನಾಶ್ರೀ ಪಿ,

View all posts by this author