ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಡಾ. ಸಾಧನಾಶ್ರೀ ಪಿ,

columnist

[email protected]

ಡಾ. ಸಾಧನಾಶ್ರೀ ಪಿ, ಎಂ.ಡಿ. (ಆಯುರ್ವೇದ), ಒಬ್ಬ ವಿಶಿಷ್ಟ ಆಯುರ್ವೇದ ವೈದ್ಯೆ , ಪಂಚಕರ್ಮ ತಜ್ಞೆ ಮತ್ತು ಸಮಗ್ರ ಆರೋಗ್ಯ ತಜ್ಞೆ . 2017 ರಿಂದ ಬೆಂಗಳೂರಿನ ಆರೋಗ್ಯವರ್ಧಿನಿ ಆಯುರ್ವೇದಾಲಯದ ಸಂಸ್ಥಾಪಕ-ನಿರ್ದೇಶಕರಾಗಿ, ಅವರು ವಿಶ್ವಾದ್ಯಂತ ರೋಗಿಗಳಿಗೆ ಆರೋಗ್ಯ ಸಮಾಲೋಚನೆಗಳು ಮತ್ತು ವಿಶೇಷ ಪಂಚಕರ್ಮ ಚಿಕಿತ್ಸೆಯನ್ನು ಒದಗಿಸುತ್ತಿದ್ದಾರೆ. ಡಾ. ಸಾಧನ ಅವರು ಯೋಗ ತಜ್ಞರಾಗಿ ಪ್ರಸವಪೂರ್ವ ಮತ್ತು ಪ್ರಸವದ ನಂತರದ ಯೋಗ ಬೋಧಕರಾಗಿಯೂ ಪ್ರಮಾಣೀಕರಿಸಲ್ಪಟ್ಟಿದ್ದಾರೆ . ಇವರು ವಿಶ್ವವಾಣಿ ಪತ್ರಿಕೆಯ ಅಂಕಣಕಾರರಾಗಿದ್ದಾರೆ ಮತ್ತು ಭರತನಾಟ್ಯ ಕಲಾವಿದರಾಗಿದ್ದಾರೆ. ಇವರು ಸಾಧನ ಸಂಗಮ ನೃತ್ಯ ಕೇಂದ್ರವೆಂಬ ತಮ್ಮ ಸಂಸ್ಥೆಯಲ್ಲಿ ನೂರಾರು ಕಲಾಸಕ್ತರಿಗೆ ಭರತ ನಾಟ್ಯವನ್ನು ಹೇಳಿಕೊಡುತ್ತಿದ್ದಾರೆ. ಇವರು ಆಧುನಿಕ ಜೀವನಶೈಲಿಯ ಅಗತ್ಯತೆಗಳೊಂದಿಗೆ ಅಧಿಕೃತ ಆಯುರ್ವೇದ ತತ್ವಗಳನ್ನು ಸಂಯೋಜಿ ಚಿಕಿತ್ಸೆಯನ್ನು ನೀಡುತ್ತಾರೆ. ಇವರು ಪ್ರಿವೆಂಟಿವ್ ಮೆಡಿಸಿನ್, ಮಹಿಳೆಯರ ಆರೋಗ್ಯ, ರೋಗನಿರೋಧಕ ಚಿಕಿತ್ಸೆ, ಮಕ್ಕಳ ಆರೈಕೆ, ಮಾನಸಿಕ ಯೋಗಕ್ಷೇಮ, ಜೀವನಶೈಲಿ ಮತ್ತು ದಿನಚರಿಗಳಲ್ಲಿ ಪರಿಣಿತಿ ಹೊಂದ್ದಿದ್ದಾರೆ. ಇವರು ಕಳೆದ ೨ ವರ್ಷಗಳಿಂದ ಸತತವಾಗಿ ಪ್ರತಿ ತಿಂಗಳು ಉಚಿತ ವೈದ್ಯಕೀಯ ಶಿಬಿರಗಳನ್ನು ಹಳ್ಳಿ ಪ್ರದೇಶಗಳಲ್ಲಿ ಆಯೋಜಿಸುತ್ತಾ ಬಂದಿದ್ದಾರೆ ಮತ್ತು ಪಾಡ್ಕಾಸ್ಟ್ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಆಯುರ್ವೇದದ ಜಾಗತಿಕ ಜಾಗೃತಿಯ ಬಗ್ಗೆ ಶ್ರಮಿಸುತ್ತಿದ್ದಾರೆ. ಡಾ. ಸಾಧನಾ ಅವರು ಪಂಚಕರ್ಮದಲ್ಲಿ ಸ್ನಾತಕೋತ್ತರ ಎಂ.ಡಿ ಪರೀಕ್ಷೆಯಲ್ಲಿ (ಕರ್ನಾಟಕದಲ್ಲಿ 2 ನೇ ರ್ಯಾಂಕ್) ಮತ್ತು ಬಿ.ಎ.ಎಂ.ಎಸ್. ಶೈಕ್ಷಣಿಕ ಶ್ರೇಷ್ಠತೆಗಾಗಿ ಪ್ರತಿಷ್ಠಿತ ಜೀವಕ ಪ್ರಶಸ್ತಿಯನ್ನು ತಮ್ಮದಾ ಗಿಸಿಕೊಂಡಿದ್ದಾರೆ.ಅವರು ಭಾರತೀಯ ರಾಯಭಾರ ಕಚೇರಿ, ವಿಯೆಟ್ನಾಂ ಮತ್ತು ಭಾರತದಲ್ಲಿನ ರಾಷ್ಟ್ರೀಯ ಯುವ ಉತ್ಸವಗಳಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಆಯುರ್ವೇದವನ್ನು ಪ್ರತಿನಿಧಿಸಿದ್ದಾರೆ. ಐಐಟಿ-ದೆಹಲಿ ಮತ್ತು ಆರ್ಬಿಐ-ಚೆನ್ನೈನಲ್ಲಿ , ರೋಟರಿ ಕ್ಲಬ್- ಶಿಮ್ಲ, ಕೆ ಎಲ್ ಯೂನಿವರ್ಸಿಟಿ- ತೆಲಂಗಾಣ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಹೋಲಿಸ್ಟಿಕ್ ಹೆಲ್ತ್ ಕಾರ್ಯಾಗಾರ ಗಳನ್ನು ನಿರ್ವಹಿಸುವುದು, ಗೌರವಾನ್ವಿತ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಗಳನ್ನು ನೀಡುವುದು ಮತ್ತು ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಪ್ರೇರಕ ಉಪನ್ಯಾಸಗಳನ್ನು ಒಳಗೊಂಡಂತೆ ಅವರು ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಇವರಿಗೆ ಆರ್ಯಭಟ ಅಂತಾ ರಾಷ್ಟ್ರೀಯ ಯುವ ಪ್ರಶಸ್ತಿಯೂ ಲಭಿಸಿದೆ.

Articles
Dr Sadhanashree Column: ಆಮದಿಂದಲೇ ಅಲ್ಲವೇ ಆಮಯ ?

Dr Sadhanashree Column: ಆಮದಿಂದಲೇ ಅಲ್ಲವೇ ಆಮಯ ?

ದಿನನಿತ್ಯದ ಅಸಮರ್ಪಕ ಆಹಾರ ಪದ್ಧತಿ, ಅಸಮಯದ ಊಟ, ಮಾನಸಿಕ ಒತ್ತಡ ಮತ್ತು ಅನಿಯಂತ್ರಿತ ಜೀವನಶೈಲಿಗಳ ಸಂಯೋಗದಿಂದ ಆಮವು ದೇಹದಲ್ಲಿ ಕ್ರಮೇಣ ಹೆಚ್ಚುತ್ತದೆ. ಆಮವು ಕೇವಲ ಜೀರ್ಣಾಂಗಗಳಿಗೆ ಮಾತ್ರ ಸೀಮಿತವಾಗುವುದಿಲ್ಲ. ಅದು ದೇಹದ ಸ್ರೋತಸ್ಸುಗಳ ಮೂಲಕ ಸಂಚರಿಸಿ, ವಿವಿಧ ಅಂಗವ್ಯವಸ್ಥೆಗಳಲ್ಲಿ ಅಂಟಿಕೊಂಡು, ಅವುಗಳ ಸಹಜ ಕಾರ್ಯ ವೈಖರಿಯನ್ನು ವ್ಯತ್ಯಯ ಗೊಳಿಸುತ್ತದೆ.

Dr Sadhanashree Column: ಓಜಸ್ವೀ ಭವ- ಜೀವನದ ಪರಮ ಸಂಪತ್ತು

Dr Sadhanashree Column: ಓಜಸ್ವೀ ಭವ- ಜೀವನದ ಪರಮ ಸಂಪತ್ತು

ಆಯುರ್ವೇದದ ಪ್ರಕಾರ, ನಾವು ಸೇವಿಸುವ ಆಹಾರವು ಕ್ರಮೇಣ ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜಾ ಮತ್ತು ಶುಕ್ರ ಎಂಬ ಏಳು ಧಾತುಗಳಾಗಿ ಪರಿವರ್ತನೆಗೊಳ್ಳುತ್ತದೆ. ಈ ಧಾತುಗಳ ಸಮರ್ಪಕ ಪೋಷಣೆಯ ನಂತರ ಕೊನೆಯಲ್ಲಿ ಉತ್ಪತ್ತಿಯಾಗುವ ಸೂಕ್ಷ್ಮ ಸಾರವೇ ಓಜಸ್. ಇದು ದೇಹದ ಪ್ರತಿ ಯೊಂದು ಅಂಗಕ್ಕೂ ಜೀವಶಕ್ತಿಯನ್ನು ನೀಡುತ್ತದೆ. ಹೃದಯದಲ್ಲಿ ನೆಲೆಸಿರುವ ಈ ಓಜಸ್ ದೇಹದ ಸಂಪೂರ್ಣ ಕಾರ್ಯಚಟುವಟಿಕೆಯನ್ನು ನಿಯಂತ್ರಿಸುತ್ತದೆ.

Dr Sadhanashree Column: ಅತಿಸಾರದಲ್ಲಿ ಎಚ್ಚರಿಕೆ-ತಕ್ಷಣದ ಪರಿಹಾರವೇ ಸಮಸ್ಯೆಯಾಗಬಹುದು !

ಅತಿಸಾರದಲ್ಲಿ ಎಚ್ಚರಿಕೆ-ತಕ್ಷಣದ ಪರಿಹಾರವೇ ಸಮಸ್ಯೆಯಾಗಬಹುದು !

ಹಸಿವಿಲ್ಲದಿದ್ದರೂ ಸಹ ಪದೇ ಪದೇ ಏನಾದರೂ ತಿನ್ನುವ ಚಟವನ್ನು ನಾವು ಬೆಳೆಸಿಕೊಂಡಿ ದ್ದೇವೆ. ಸ್ವಲ್ಪ ಸ್ವಲ್ಪವಾಗಿ ಏನಾದರೂ ತಿನ್ನುತ್ತಿರಬೇಕು ಎಂಬ ಅಭ್ಯಾಸವು ಜೀರ್ಣಾಂಗವನ್ನು ದುರ್ಬಲಗೊಳಿಸುತ್ತದೆ. ಇಂತಹ ಸಂದರ್ಭದಲ್ಲಿ ಸೇವಿಸಿದ ಆಹಾರ ಸರಿಯಾಗಿ ಜೀರ್ಣವಾಗದೇ, ದೇಹವು ಅದನ್ನು ಮಲದ ರೂಪದಲ್ಲಿ ಪದೇ ಪದೇ ಹೊರಹಾಕುತ್ತದೆ. ಇದನ್ನು ಆಯುರ್ವೇದ ದಲ್ಲಿ ಆಮಾತಿಸಾರ ಎಂದು ಕರೆಯುತ್ತಾರೆ.

Dr Sadhanashree Column: ಸದ್ವೃರ್ಥದ ಸಾರ್ಥಕತೆ: ಶ್ರೀರಾಮನ ಆದರ್ಶ ಜೀವನ

ಸದ್ವೃರ್ಥದ ಸಾರ್ಥಕತೆ: ಶ್ರೀರಾಮನ ಆದರ್ಶ ಜೀವನ

ಪ್ರತಿ ವರ್ಷ ಶ್ರೀರಾಮನವಮಿ ಬಂದಾಗ ದೇವಾಲಯಗಳಲ್ಲಿ ರಾಮನಾಮದ ಘೋಷಗಳು ಮೊಳಗುತ್ತವೆ, ಮನೆಮನೆಗಳಲ್ಲಿ ರಾಮಾಯಣ ಪಾರಾಯಣ ನಡೆಯುತ್ತದೆ ಮತ್ತು ಭಕ್ತರ ಮನಸ್ಸಿನಲ್ಲಿ ಒಂದು ಪ್ರಶ್ನೆ ಉದಯಿಸುತ್ತದೆ: ಶ್ರೀರಾಮನ ಜೀವನವನ್ನು ಶತಮಾನ ಗಳಿಂದಲೂ ಏಕೆ ಮಾನವ ಜೀವನದ ಆದರ್ಶವೆಂದು ಕೊಂಡಾಡಲಾಗಿದೆ? ರಾಮಾಯಣವು ಶ್ರೀರಾಮನನ್ನು ಆದರ್ಶ ರಾಜ, ಆದರ್ಶ ಪುತ್ರ, ಆದರ್ಶ ಸಹೋದರ ಮತ್ತು ಆದರ್ಶ ಪತಿ ಎಂದು ವರ್ಣಿಸುತ್ತದೆ.

Dr Sadhanashree Column: ಬೇವಿನ ಕಹಿ ರುಚಿಯೊಳಗಿನ ಮಧುರ ರಹಸ್ಯವನ್ನು ಬಲ್ಲಿರಾ ?

ಬೇವಿನ ಕಹಿ ರುಚಿಯೊಳಗಿನ ಮಧುರ ರಹಸ್ಯವನ್ನು ಬಲ್ಲಿರಾ ?

ನಮ್ಮ ಸಂಸ್ಕೃತಿಯಲ್ಲಿ ಬೇವಿನ ಮರಕ್ಕೂ ಅದರ ಎಲೆಗೂ ನೀಡಿರುವ ಮಹತ್ವವನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಭಾರತೀಯ ಹಬ್ಬಗಳನ್ನು ಗಮನಿಸಿದರೆ ಅವು ಕೇವಲ ಆಚರಣೆ ಗಳಲ್ಲ; ಅವು ನಮ್ಮ ಆರೋಗ್ಯಕರ ಜೀವನಶೈಲಿಗೆ ಮಾರ್ಗದರ್ಶಿಗಳೂ ಆಗಿವೆ. ಋತು ಬದಲಾವಣೆಯ ಸಂದರ್ಭಗಳಲ್ಲಿ ದೇಹದೊಳಗಿನ ದೋಷಗಳ ಸಮತೋಲನವನ್ನು ಕಾಪಾಡಿ ಕೊಳ್ಳಲು ಯಾವ ರೀತಿಯ ಆಹಾರ ಮತ್ತು ಆಚರಣೆಗಳನ್ನು ಪಾಲಿಸಬೇಕು ಎಂಬುದನ್ನು ಹಬ್ಬಗಳ ಮೂಲಕ ನಮ್ಮ ಪೂರ್ವಜರು ತಿಳಿಸಿ ಕೊಟ್ಟಿದ್ದಾರೆ.

Dr Sadhanashree Column: ಕಾಡುವ ಕುರುವಿಗೆ ಹೀಗೆ ಮಾಡು ಎನ್ನುತ್ತದೆ ಆಯುರ್ವೇದ

ಕಾಡುವ ಕುರುವಿಗೆ ಹೀಗೆ ಮಾಡು ಎನ್ನುತ್ತದೆ ಆಯುರ್ವೇದ

ಕೆಲವೊಮ್ಮೆ ಇದು ಸಕ್ಕರೆ ಕಾಯಿಲೆಯ ಪರಿಣಾಮವಾಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗುತ್ತದೆ. ಈ ರೀತಿಯಾಗಿ ಹಲವು ಕಾರಣಗಳನ್ನು ಊಹಿಸಿ ಜನರು ವಿವಿಧ ಮಲಾಮು ಗಳು, ಲೇಪನಗಳು ಅಥವಾ ಮನೆಮದ್ದುಗಳನ್ನು ಬಳಸುತ್ತಾ ತಾತ್ಕಾಲಿಕವಾಗಿ ಶಮನಗೊಳಿಸಲು ಪ್ರಯತ್ನಿಸುತ್ತಾರೆ. ಆದರೆ ಈ ಸಮಸ್ಯೆಯ ಅಭ್ಯಂತರ ಕಾರಣವನ್ನು ಸರಿಯಾಗಿ ತಿಳಿಯದೆ ಕೇವಲ ಮೇಲ್ಮೈಯಲ್ಲಿ ಲೇಪನಗಳನ್ನು ಹಚ್ಚುವುದರಿಂದ ಶಾಶ್ವತ ಪರಿಹಾರ ದೊರಕುವುದು ಕಷ್ಟ.

Dr Sadhanashree Column: ಸ್ವರ್ಣಪ್ರಾಶನ: ಮಕ್ಕಳ ಆರೋಗ್ಯದ ಸುವರ್ಣ ಅಧ್ಯಾಯ

ಸ್ವರ್ಣಪ್ರಾಶನ: ಮಕ್ಕಳ ಆರೋಗ್ಯದ ಸುವರ್ಣ ಅಧ್ಯಾಯ

‘ಸ್ವರ್ಣ’ ಎಂದರೆ ಚಿನ್ನ, ‘ಪ್ರಾಶನ’ ಎಂದರೆ ತಿನ್ನಿಸುವುದು. ಅಂದರೆ ಶಾಸ್ತ್ರೋಕ್ತ ವಿಧಾನ ದಲ್ಲಿ ಸಂಸ್ಕರಿಸಲಾದ ಸ್ವರ್ಣವನ್ನು ಅತಿ ಸೂಕ್ಷ್ಮ ಪ್ರಮಾಣದಲ್ಲಿ ಮಗುವಿಗೆ ನೀಡುವುದು ಸ್ವರ್ಣ ಪ್ರಾಶನ. ಇದು ಕೇವಲ ಚಿನ್ನವನ್ನು ತಿನ್ನಿಸುವ ಪದ್ಧತಿಯಲ್ಲ. ಸಂಸ್ಕರಿತ, ಶೋಧಿತ, ಭಸ್ಮೀಕೃತ ಸ್ವರ್ಣವನ್ನು ಔಷಧಿಯ ರೂಪದಲ್ಲಿ ನೀಡುವ ರಸಾಯನ ಕ್ರಮ.

Dr Sadhanashree Column: ಬಾಧಿಸುವ ಬಾಯಿಹುಣ್ಣು: ವಿಟಮಿನ್‌ ಕೊರತೆಯೇ ?

ಬಾಧಿಸುವ ಬಾಯಿಹುಣ್ಣು: ವಿಟಮಿನ್‌ ಕೊರತೆಯೇ ?

ಆಯುರ್ವೇದದ ದೃಷ್ಟಿಯಲ್ಲಿ ಇದು ಕೇವಲ ಸ್ಥಳೀಯ ತೊಂದರೆ ಅಲ್ಲ; ಜೀರ್ಣ ದೌರ್ಬಲ್ಯದ, ಹೊರಪ್ರತಿಫಲ. ನಾನು ಅವರಿಗೆ ಸ್ಪಷ್ಟವಾಗಿ ತಿಳಿಸಿದೆ- “ನೀವು ವಿಟಮಿನ್ ಕೊರತೆಯನ್ನು ಚಿಕಿತ್ಸೆ ಮಾಡುತ್ತಿದ್ದೀರಿ; ಆದರೆ ನಿಮ್ಮ ಜೀರ್ಣಶಕ್ತಿಯನ್ನು ಪರಿಶೀಲಿಸಿಲ್ಲ. ದೇಹಕ್ಕೆ ನೀಡಿದ ಪೋಷಕಾಂಶಗಳು ಸರಿಯಾಗಿ ಜೀರ್ಣವಾಗದಿದ್ದರೆ ಮಾತ್ರೆಗಳ ಪ್ರಯೋಜನ ಸೀಮಿತವಾಗಿರು ತ್ತದೆ.

Dr Sadhanashree Column: ಶಿವರಾತ್ರಿ: ದೇಹಶುದ್ಧಿಯೆಂಬ ಚಿತ್ತಶುದ್ಧಿವರೆಗೆ

ಶಿವರಾತ್ರಿ: ದೇಹಶುದ್ಧಿಯೆಂಬ ಚಿತ್ತಶುದ್ಧಿವರೆಗೆ

ಆಹಾರದಲ್ಲಿ ಕಟು-ತಿಕ್ತ-ಕಷಾಯ ರಸ ಪ್ರಧಾನ, ಉಷ್ಣ, ಲಘು, ಸುಲಭವಾಗಿ ಜೀರ್ಣ ವಾಗುವ ಆಹಾರವನ್ನು ಬಳಸಿ; ಹಳೆಯ ಧಾನ್ಯಗಳು, ಜೋಳ, ಯವ, ಕೆಂಪು ಅಕ್ಕಿ, ಹೆಸರು ಬೇಳೆ, ಮಜ್ಜಿಗೆ ಉಪಯುಕ್ತ. ಸಿಹಿ-ಹುಳಿ-ಉಪ್ಪು, ಅತಿ ಸ್ನಿಗ್ಧ , ತಣ್ಣನೆಯ, ಜೀರ್ಣಕ್ಕೆ ಜಡವಾದ ಆಹಾರ, ಉದ್ದಿನಬೇಳೆ, ಮೈದಾ, ಪನ್ನೀರ್, ಸಿಹಿತಿಂಡಿಗಳು, ಹಾಲಿನ ಶೇಕ್, ಕರಿದ ಪದಾರ್ಥಗಳನ್ನು ತಪ್ಪಿಸಬೇಕು.

Dr Sadhanashree Column: ಮಿತಿ ಮೀರಿದರೆ ಉಪ್ಪು,  ಬೇಗ ಆವರಿಸುವುದು ಮುಪ್ಪು

ಮಿತಿ ಮೀರಿದರೆ ಉಪ್ಪು, ಬೇಗ ಆವರಿಸುವುದು ಮುಪ್ಪು

ಆಯುರ್ವೇದದ ದೃಷ್ಟಿಯಲ್ಲಿ ಆಹಾರವು ಕೇವಲ ಹಸಿವು ನಿವಾರಣೆಯ ಸಾಧನವಲ್ಲ; ಅದು ದೇಹ, ಇಂದ್ರಿಯಗಳು ಮತ್ತು ಮನಸ್ಸಿನ ಸಮತೋಲನವನ್ನು ಸಂರಕ್ಷಿಸುವ ಸೂಕ್ಷ್ಮ ಹಾಗೂ ಶಕ್ತಿಶಾಲಿ ಉಪಾಯವಾಗಿದೆ. ಈ ಕಾರಣದಿಂದಲೇ ಆಯುರ್ವೇದದಲ್ಲಿ ‘ಷಡ್ರಸ ಭೋಜನ’ ಎಂಬ ತತ್ತ್ವಕ್ಕೆ ವಿಶಿಷ್ಟ ಮಹತ್ವ ನೀಡಲಾಗಿದೆ.

Dr Sadhanashree Column: ದಿನನಿತ್ಯದ ಬೇಳೆಗಳು: ಆಯುರ್ವೇದ ಹೇಳೋದೇನು ?

ದಿನನಿತ್ಯದ ಬೇಳೆಗಳು: ಆಯುರ್ವೇದ ಹೇಳೋದೇನು ?

ಆಹಾರದ ಗುಣಮಟ್ಟವು ಕೇವಲ ಅಡುಗೆ ವಿಧಾನದಿಂದಲ್ಲ, ಅದು ಬೆಳೆಯುವ ಭೂಮಿ, ಹವಾಮಾನ ಮತ್ತು ಋತುವಿನ ಮೇಲೆಯೂ ಅವಲಂಬಿತವೆಂಬುದು ಆಯುರ್ವೇದದ ಸೂಕ್ಷ್ಮ ದೃಷ್ಟಿ. ಜಗತ್ತಿನಾ ದ್ಯಂತ ಲಭ್ಯವಿರುವ ಪದಾರ್ಥಗಳಲ್ಲಿ ಬೇಳೆಗಳ ಬಳಕೆ ಸರ್ವೇಸಾಮಾನ್ಯ. ಚಪಾತಿ ಪ್ರಧಾನ ವಾದ, ಅನ್ನ ಪ್ರಧಾನವಾದ, ಮಾಂಸ ಪ್ರಧಾನವಾದ ಆಹಾರವಿರಲಿ ಅದಕ್ಕೆ ಬೇಳೆಯಿಂದ ತಯಾರಾದ ಪಲ್ಯ/ಮೇಲೋಗರ ಜತೆಗೆ ಇದ್ದೇ ಇರುತ್ತದೆ.

Dr Sadhanashree Column: ಆಹಾರ-ಆಸನ-ಆಯುಷ್ಯ: ನಮ್ಮ ಸಂಸ್ಕೃತಿಯ ಆರೋಗ್ಯ ವಿಜ್ಞಾನ

ಆಹಾರ-ಆಸನ-ಆಯುಷ್ಯ: ನಮ್ಮ ಸಂಸ್ಕೃತಿಯ ಆರೋಗ್ಯ ವಿಜ್ಞಾನ

ಸುಖಾಸನದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವಾಗ ಬೆನ್ನೆಲುಬು ಸಹಜವಾಗಿ ನೇರ ವಾಗಿರುತ್ತದೆ ಮತ್ತು ಭುಜಗಳು ಎತ್ತಲ್ಪಟ್ಟ ಸ್ಥಿತಿಯಲ್ಲಿ ಇರುತ್ತವೆ. ಇದು ದೇಹದ ತೂಕವನ್ನು ಸಮವಾಗಿ ಹಂಚಿ, ಕತ್ತು, ಬೆನ್ನು ಹಾಗೂ ಭುಜಗಳ ಮೇಲೆ ಬರುವ ಅನಗತ್ಯ ಒತ್ತಡವನ್ನು ಕಡಿಮೆ ಮಾಡುತ್ತದೆ.

Dr Sadhanashree Column: ಆಚರಣೆಯಿಂದ ಅರಿವಿಗೆ: ಎಳ್ಳಿನ ಸಂಕ್ರಾಂತಿಯ ಸಂದೇಶ

ಆಚರಣೆಯಿಂದ ಅರಿವಿಗೆ: ಎಳ್ಳಿನ ಸಂಕ್ರಾಂತಿಯ ಸಂದೇಶ

ಗೋಶಾಲೆಯಲ್ಲಿ ಹಸುಗಳಿಗೆ ಸ್ನಾನ ಮಾಡಿಸಿ, ಕೊಂಬುಗಳಿಗೆ ನೀಲಿ ಬಣ್ಣ ಹಚ್ಚಿ, ಪೂಜೆ ನಡೆಯುತ್ತದೆ. ರೈತರಿಗೆ ಇದು ಕೇವಲ ಹಬ್ಬವಲ್ಲ; ಅದು ಭೂಮಿಗೆ, ಸೂರ್ಯನಿಗೆ ಮತ್ತು ಪ್ರಕೃತಿಗೆ ಸಲ್ಲಿಸುವ ಕೃತಜ್ಞತೆ ಯ ದಿನ. ಆಕಾಶದಲ್ಲಿ ಸೂರ್ಯ ಉತ್ತರಾಯಣಕ್ಕೆ ಪಯಣ ಆರಂಭಿಸಿದಂತೆ, ಮನೆಗಳಲ್ಲೂ ಹೊಸ ಉತ್ಸಾಹ, ಹೊಸ ತಾಪಮಾನ ಮತ್ತು ಹೊಸ ಸಮತೋಲನ ಪ್ರವೇಶಿಸುತ್ತದೆ.

Dr Sadhanashree Column: ಆಯುರ್ವೇದದ ಕುರಿತಾದ ಆತ್ಮಪರಿಶೀಲನೆ

Dr Sadhanashree Column: ಆಯುರ್ವೇದದ ಕುರಿತಾದ ಆತ್ಮಪರಿಶೀಲನೆ

ಪ್ರತಿಯೊಬ್ಬರೂ ತಾವು ಅನುಭವಿಸಿದ ಭಾಗವನ್ನು ಆಧರಿಸಿ ತಮ್ಮ ಮಾತೇ ಸತ್ಯವೆಂದು ನಂಬುತ್ತಾರೆ. ಆದರೆ ವಾಸ್ತವದಲ್ಲಿ ಆನೆ ಎಂದರೆ ಅವರ ಅನುಭವಕ್ಕಿಂತ ಬಹಳ ದೊಡ್ಡದು, ಸಮಗ್ರವಾದದ್ದು. ಭಾಗಶಃ ಸತ್ಯವನ್ನು ಸಂಪೂರ್ಣ ಸತ್ಯವೆಂದು ಭಾವಿಸಿದಾಗ ಉಂಟಾಗುವ ಗೊಂದಲಕ್ಕೆ ಈ ಕಥೆ ಅತ್ಯು ತ್ತಮ ಉದಾಹರಣೆ.

Dr Sadhanashree Column: ಆಯರ್ವೇದದ ಹತ್ತು ಆರೋಗ್ಯ ಸೂತ್ರಗಳು

ಆಯರ್ವೇದದ ಹತ್ತು ಆರೋಗ್ಯ ಸೂತ್ರಗಳು

ಹೊಸ ವರ್ಷ ಎಂದರೆ ಕೇವಲ ಕ್ಯಾಲೆಂಡರ್ ಬದಲಾವಣೆ ಮಾತ್ರವಲ್ಲ; ಅದು ಜೀವನದ ಹೊಸ ಅಧ್ಯಾಯವನ್ನು ಜಾಗೃತಿ ಮತ್ತು ವಿವೇಚನೆಯಿಂದ ಆರಂಭಿಸುವ ಒಂದು ಅಪರೂಪದ ಅವಕಾಶ. ಆರೋಗ್ಯ, ಸಂತೋಷ ಮತ್ತು ಶಾಂತಿ- ಇವುಗಳನ್ನು ಬಯಸದೆ ಇರುವವನು ಯಾರೂ ಇಲ್ಲ. ಆದರೆ ಮೂರು ಕೂಡ ಔಷಧಾಲಯದಲ್ಲೂ ಅಲ್ಲ, ಆಸ್ಪತ್ರೆಯಲ್ಲೂ ಅಲ್ಲ; ಅವು ನಮ್ಮ ದಿನನಿತ್ಯದ ಜೀವನಶೈಲಿಯಲ್ಲಿ ಅಡಗಿವೆ ಎಂದು ಆಯುರ್ವೇದ ಸ್ಪಷ್ಟವಾಗಿ ಹೇಳುತ್ತದೆ.

Dr Sadhanashree Column: ಇಲ್ಲಿದೆ ನೋಡಿ ಆಯುರ್ವೇದ ಹೇಳುವ ರಾತ್ರಿಯ ರಹಸ್ಯ

ಇಲ್ಲಿದೆ ನೋಡಿ ಆಯುರ್ವೇದ ಹೇಳುವ ರಾತ್ರಿಯ ರಹಸ್ಯ

ಆಯುರ್ವೇದವು ಸ್ವಾಸ್ಥ್ಯವನ್ನು ಕೇವಲ ರೋಗವಿಲ್ಲದ ಸ್ಥಿತಿಯಾಗಿ ಅಷ್ಟೇ ಕಾಣದೆ, ಕಾಲಕ್ಕೆ ಹೊಂದಿ ಕೊಂಡ ಜೀವನಶೈಲಿಯ ಫಲವಾಗಿ ನೋಡುತ್ತದೆ. ದಿನಚರ್ಯೆ ಮತ್ತು ಋತುಚರ್ಯೆಯಂತೆ ರಾತ್ರಿ ಚರ್ಯೆ ಕೂಡ ಆಯುರ್ವೇದದಲ್ಲಿ ಅತ್ಯಂತ ಪ್ರಮುಖ ಸ್ಥಾನ ಪಡೆದಿದೆ. ಇಂದಿನ ಜೀವನಶೈಲಿಯಲ್ಲಿ ತಡರಾತ್ರಿ ಊಟ, ನಿದ್ರಾಭಂಗ, ಮೊಬೈಲ-ಟಿವಿ-ಲ್ಯಾಪ್‌ಟಾಪ್ ಬಳಕೆ, ಅಸ್ಥಿರ ಮನಸ್ಥಿತಿ ಇವೆಲ್ಲವೂ ರಾತ್ರಿ ಚರ್ಯೆಯ ಸಹಜ ಕ್ರಮವನ್ನು ಭಂಗಗೊಳಿಸುತ್ತಿವೆ.

Dr Sadhanashree Column: ಮಾಲಿನ್ಯ: ಆಯುರ್ವೇದದ ರಕ್ಷಣಾ ಮಾರ್ಗಗಳು

Dr Sadhanashree Column: ಮಾಲಿನ್ಯ: ಆಯುರ್ವೇದದ ರಕ್ಷಣಾ ಮಾರ್ಗಗಳು

ಆಯುರ್ವೇದದ ತ್ರಿಫಲಾ ನೀರು, ಅಭ್ಯಂಗ ಸ್ನಾನ ಮತ್ತು ಪಿತ್ತಶಾಮಕ ಆಹಾರ ಕ್ರಮಗಳು ತೊಂದರೆ ಯನ್ನು ಹತೋಟಿಗೆ ತಂದವು. ೪೦ ದಿನಗಳಲ್ಲಿ ತುರಿಕೆ ಸಂಪೂರ್ಣವಾಗಿ ನಿಂತು ಚರ್ಮ ಶಾಂತ ವಾಯಿತು. ಮಾಲಿನ್ಯದಿಂದ ಉಂಟಾಗುವ ರಕ್ತದುಷ್ಟಿಗೆ ಸರಳ ಕ್ರಮಗಳೇ ಪರಿಣಾಮಕಾರಿ ಯೆಂದು ಆಕೆ ಅರಿತುಕೊಂಡಳು.

Dr Sadhanashree Column: ಈ ಆರು ಬಗೆಯ ತರಕಾರಿಗಳ ಬಗ್ಗೆ ಬಲ್ಲಿರಾ ?

Dr Sadhanashree Column: ಈ ಆರು ಬಗೆಯ ತರಕಾರಿಗಳ ಬಗ್ಗೆ ಬಲ್ಲಿರಾ ?

ಆಯುರ್ವೇದದ ‘ಭಾವಪ್ರಕಾಶ ನಿಘಂಟು’ ಎಂಬ ಗ್ರಂಥವು ತರಕಾರಿಗಳನ್ನು ಆರು ಮುಖ್ಯ ವರ್ಗ ಗಳಾಗಿ ವಿಂಗಡಿಸುತ್ತದೆ- ಪತ್ರ, ಪುಷ್ಪ, ಫಲ, ನಾಲ, ಕಂದ ಮತ್ತು ಸಂಸ್ವೇದಜ. ಪ್ರತಿಯೊಂದು ವರ್ಗಕ್ಕೂ ತನ್ನದೇ ಆದ ಹಿತ-ಅನಿಷ್ಟ ಗುಣಗಳಿವೆ. ಸರಿಯಾದ ರೀತಿಯಲ್ಲಿ ಸಂಸ್ಕರಿಸಿದ ತರಕಾರಿಯು ಔಷಧ ವಾಗುತ್ತದೆ; ತಪ್ಪಾಗಿ ಬಳಸಿದರೆ ಅದು ದೋಷಗಳನ್ನು ಉತ್ತೇಜಿಸಿ ರೋಗಕ್ಕೆ ಕಾರಣವಾಗುತ್ತದೆ.

Dr Sadhanashree Column: ಆಯುರ್ವೇದ ಹೇಳುವ ಕಿವಿಗಳ ಕಾಳಜಿ

Dr Sadhanashree Column: ಆಯುರ್ವೇದ ಹೇಳುವ ಕಿವಿಗಳ ಕಾಳಜಿ

ಕಿವಿ ಮತ್ತು ವಾತದೋಷ ನಮ್ಮ ದೇಹದಲ್ಲಿ ಕಿವಿಗಳು ಬಹು ಮಹತ್ವದ ಸ್ಥಾನ ಹೊಂದಿವೆ. ಮಾತು ಗಳನ್ನು ಆಲಿಸುವುದರ ಜತೆಗೆ ಸುತ್ತಮುತ್ತಲ ಸದ್ದು-ನಾದ ಗಳನ್ನು ಗ್ರಹಿಸುವ ಮೂಲಕ ನಮ್ಮ ಜೀವನದ ಗುಣಮಟ್ಟವನ್ನು ಹೆಚ್ಚಿಸುವಲ್ಲಿ ಕಿವಿಗಳ ಪಾತ್ರ ಅಪಾರ. ಇಂದಿನ ಯುಗದಲ್ಲಿ ಮೊಬೈಲ, ಇಯರ್ ಫೋನ್, ಜೋರಾದ ಸಂಗೀತ, ಶಬ್ದ ಮಾಲಿನ್ಯ ಮತ್ತು ಒತ್ತಡದ ಜೀವನಶೈಲಿ- ಇವುಗಳಿಂದ ಕಿವಿಯ ಸಂಬಂಧಿ ಸಮಸ್ಯೆಗಳು ಎಲ್ಲ ವಯೋಮಾನ ದವರಲ್ಲೂ ಹೆಚ್ಚುತ್ತಿವೆ.

Dr Sadhanashree Column: ಆರೋಗ್ಯದಲ್ಲಿ ವೈಜ್ಞಾನಿಕತೆ ಎಂದರೆ- ವೈಯಕ್ತಿಕತೆ !

ಆರೋಗ್ಯದಲ್ಲಿ ವೈಜ್ಞಾನಿಕತೆ ಎಂದರೆ- ವೈಯಕ್ತಿಕತೆ !

ಇಂದಿನ ಹೆಲ್ತ್ ಇನ್‌ ಫ್ಲ್ಯೂಯೆನ್ಸರ್‌ಗಳಿಂದ ಕೇಳಲಿಕ್ಕೆ ಸಿಗುವ ಸಾಮಾನ್ಯ ಸಲಹೆಗಳು: ದಿನಕ್ಕೆ ೪-೫ ಲೀಟರ್ ನೀರು ಕುಡಿಯಿರಿ, ಪ್ರತಿದಿನ 10000 ಹೆಜ್ಜೆಗಳು ನಡೆಯಿರಿ, ದಿನವೂ ಆಪಲ್ ಸೈಡರ್ ವಿನೆಗರ್ ಸೇವಿಸಿ, ಹಸಿ ಮೊಳಕೆಯ ನಿತ್ಯಸೇವನೆ ಇರಲಿ, ಆಹಾರದಲ್ಲಿ ಹೆಚ್ಚಾಗಿ ಪ್ರೋಟೀನ್ ಇರಲಿ ಇತ್ಯಾದಿ- ಇವೆಲ್ಲವೂ ವೈಜ್ಞಾನಿಕ ಎನಿಸಿದರೂ, ಪ್ರತಿಯೊಬ್ಬ ರಿಗೂ ಸೂಕ್ತ ಎನ್ನಲಾಗುವುದಿಲ್ಲ.

Dr Sadhanashree Column: ಆರೋಗ್ಯವನ್ನು ಗರಿಷ್ಠಗೊಳಿಸುವ ಕಾಲವಿದು

Dr Sadhanashree Column: ಆರೋಗ್ಯವನ್ನು ಗರಿಷ್ಠಗೊಳಿಸುವ ಕಾಲವಿದು

ಹೇಮಂತ ಋತುವು ಆರೋಗ್ಯದ ದೃಷ್ಟಿಯಿಂದ ಮಹತ್ತರವಾದದ್ದು. ಇದು ದೇಹಬಲವು ಗರಿಷ್ಠವಾಗಿರುವ ಕಾಲ ಎನ್ನುತ್ತದೆ ಆಯುರ್ವೇದ. ಪ್ರಕೃತಿಯ ಶೀತಲತೆಯ ಪರಿಣಾಮ ವಾಗಿ ಆಂತರಿಕ ಜಠರಾಗ್ನಿಯು (ಜೀರ್ಣಶಕ್ತಿ) ಅತ್ಯಂತ ಬಲಿಷ್ಠವಾಗುತ್ತದೆ. ಆದ್ದರಿಂದ ದೇಹಕ್ಕೆ ಹೆಚ್ಚಿನ ಆಹಾರ ಬೇಕಾಗುತ್ತದೆ. ಈ ಕಾಲದಲ್ಲಿ ಸೂಕ್ತ ಆಹಾರವನ್ನು ಕೊಟ್ಟರೆ ದೇಹದ ರಸ ಧಾತುವು ಸಮೃದ್ಧವಾಗಿ ರೂಪಗೊಂಡು ಆರೋಗ್ಯವು ಉತ್ತಮವಾಗುತ್ತದೆ.

Dr Sadhanashree Column: ಅಮೃತ ಸಮಾನವೀ ಆಚಾರ ರಸಾಯನ...

ಅಮೃತ ಸಮಾನವೀ ಆಚಾರ ರಸಾಯನ...

ನಿತ್ಯವೂ ಜಪ ಮಾಡುವುದು ರಸಾಯನದ ಒಂದು ಮುಖ್ಯವಾದ ತತ್ವ. ‘ಜಪ’ಎಂದರೆ ಯಾವುದೋ ವಿಷಯದ, ಸರಿಯಾದ ಸತತವಾದ ಹೇಳುವಿಕೆ ಎನ್ನಬಹುದಾದರೂ, ನಾವು ಮಾಡುವ ಪ್ರತಿಯೊಂದು ಕೆಲಸದಲ್ಲಿಯೂ ನಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಏಕಾಗ್ರತೆಯಿಂದ ವಿಧಿಪೂರ್ವಕವಾಗಿ ಆ ಕಾರ್ಯವನ್ನು ಸಂಪನ್ನಗೊಳಿಸುವುದು ಎಂಬುದು ಇದರ ಸಂಪೂರ್ಣ ಅರ್ಥ. ಇದೇ ಯೋಗ , ಇದೇ ರಸಾಯನ!

Dr Sadhanashree Column: ಹೇಮಂತದ ಧಾವಂತ: ಮುಗ್ಧ ಮನಸು, ಸ್ನಿಗ್ಧ ತಿನಿಸು

Dr Sadhanashree Column: ಹೇಮಂತದ ಧಾವಂತ: ಮುಗ್ಧ ಮನಸು, ಸ್ನಿಗ್ಧ ತಿನಿಸು

ಪ್ರಕೃತಿಮಾತೆಯ ಹೊಸ ರೂಪವನ್ನು ನೋಡಲು ನಾವೆಲ್ಲರೂ ಸಿದ್ಧರಾಗೋಣ. ಅರೆ, ಏನಪ್ಪಾ ಇದು ಎಂದು ಯೋಚಿಸುತ್ತಿದ್ದೀರಾ? ಪ್ರಕೃತಿಯಲ್ಲಿ ಶರತ್ ಋತುವು ಕಳೆದು ಈಗ ಹೇಮಂತ ಋತು ಪ್ರಾರಂಭ ವಾಗುವ ಕಾಲ. ಹೇಮಂತ ಋತು ಎಂದರೆ ಚಳಿಗಾಲದ ಆಗಮನ. ಈ ಸಮಯದಲ್ಲಿ ಹೊರಗಿನ ಶೀತಲತೆ ಯ ಪ್ರಭಾವದಿಂದ ನಮ್ಮ ದೇಹದಲ್ಲಿ ಅಗ್ನಿಯು ಉತ್ತೇಜನಗೊಳ್ಳುತ್ತದೆ.

Dr Sadhanashree Column: ಚರ್ಮದ ಕಾಂತಿಯೆಂದರೆ ಮನಸ್ಸಿನ ಶಾಂತಿ

ಚರ್ಮದ ಕಾಂತಿಯೆಂದರೆ ಮನಸ್ಸಿನ ಶಾಂತಿ

ಸ್ವಸ್ಥಸ್ಯ ಸ್ವಾಸ್ಥ್ಯರಕ್ಷಣಂ ಆತುರಸ್ಯ ವಿಕಾರಪ್ರ ಶಮನಂ ಚ’ ಎಂಬ ಆಯುರ್ವೇದದ ಮೂಲ ತತ್ತ್ವವು ಸ್ವಾಸ್ಥ್ಯದ ರಕ್ಷಣೆಯನ್ನೂ ಹಾಗೂ ರೋಗಗಳ ನಿವಾರಣೆಯನ್ನೂ ಒಟ್ಟಾಗಿ ನೋಡುತ್ತದೆ. ಮಾನವ ಶರೀರದ ಅತ್ಯಂತ ದೊಡ್ಡ ಅಂಗವಾದ ಚರ್ಮವು ದೇಹದ ಒಳಗಿನ ಸ್ಥಿತಿಯನ್ನು ಪ್ರತಿಬಿಂಬಿಸುವ ಕನ್ನಡಿ ಎಂದರೆ ತಪ್ಪಾಗಲಾರದು. ಆಯುರ್ವೇದದಲ್ಲಿ ಚರ್ಮರೋಗಗಳನ್ನು ‘ಕುಷ್ಠ’ ಎಂಬ ಸಾಮಾನ್ಯ ಶೀರ್ಷಿಕೆಯಡಿಯಲ್ಲಿ ವಿವರಿಸಲಾಗಿದೆ.

Loading...