ಲೇಖಕ ಯಾವ ಪಕ್ಷಕ್ಕೂ ಸೇರಬಾರದು !
ರೈತರು ಕಾರ್ಮಿಕರು ಉಗ್ರ ಹೋರಾಟ ನಡೆಸಿದರು. ಈ ಸಂದರ್ಭದಲ್ಲಿ ಗಾಯಗೊಂಡ ಪೊಲೀಸ್ ಪೇದೆ ಮರಣ ಹೊಂದಿದ. ಈ ಪ್ರಕರಣದ ನಾಲ್ಕು ಆರೋಪಿಗಳಿಗೆ ಮರಣದಂಡನೆ ನೀಡಿ 1943 ಮಾರ್ಚ್ 29ರಂದು ನೇಣು ಹಾಕಲಾಯಿತು. ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದ ನಿರಂಜನರು ವಾಸ್ತವ ಸಂಗತಿಯನ್ನು ಆಧರಿಸಿ ಚಿರಸ್ಮರಣೆ ರಚಿಸಿದ್ದಾರೆ. ಕೈಯೂರಿನಲ್ಲಿ ಈ ನಾಲ್ಕು ಹುತಾತ್ಮರ ಮಂದಿರಗ ಳನ್ನು ಸ್ಮಾರಕ ರೂಪದಲ್ಲಿರಿಸಿದ್ದಾರೆ. ಪತ್ನಿ ಅನುಪಮಾ ಅವರು 1991 ಫೆಬ್ರವರಿ 15ರಂದು ಅಸು ನೀಗಿದರು.


ಮಲ್ಲಿಕಾರ್ಜುನ ಹೆಗ್ಗಳಗಿ, ಮುಧೋಳ
ನಿರಂಜನ ಎಂದು ಕನ್ನಡ ಸಾಹಿತ್ಯ ಲೋಕದಲ್ಲಿ ಹೆಸರಾದ ಕುಳಕುಂದ ಶಿವರಾಯ (1924 -1995) ಬದುಕಿದ್ದರೆ 101ನೇ ವರ್ಷದಲ್ಲಿ ಕಾಲಿಡುತ್ತಿದ್ದರು. ನಿರಂಜನರು 1943 ರಲ್ಲಿ ‘ಎಣ್ಣೆ ಚಿಮಿಣಿ ಎಣ್ಣೆ’ ಎಂಬ ಕಥೆ ಬರೆದಿದ್ದರು, ರಾಷ್ಟ್ರಬಂಧು ಪತ್ರಿಕೆಯಲ್ಲಿ ಪ್ರಕಟವಾಯಿತು ಮತ್ತು ಆಗಿನ ಬ್ರಿಟಿಷ್ ಆಡಳಿತ ಕೋಪಕ್ಕೆ ಕಥೆ ಗುರಿಯಾದರು. ಲೇಖಕ ಮತ್ತು ಸಂಪಾದಕ ವಿಚಾರಣೆ ಎದುರಿಸ ಬೇಕಾ ಯಿತು. ಮುಂದೆ 1975ರಲ್ಲಿ ಈ ಕಥೆ ಮರು ಮುದ್ರಣ ಮಾಡಲು ಮಂಗಳೂರು ಪತ್ರಿಕೆ ಸಿದ್ಧತೆ ಮಾಡಿ ಕೊಂಡಿತ್ತು. ಆಗ ದೇಶದಲ್ಲಿ ತುರ್ತು ಪರಿಸ್ಥಿತಿ ಇತ್ತು. ಮಂಗಳೂರು ಜಿಲ್ಲಾ ಆಡಳಿತ ಕಥೆಯಲ್ಲಿ ಸರ್ಕಾರದ ಟೀಕೆ ಇದೆ ಎಂದು ಪ್ರಕಟಣೆಗೆ ಒಪ್ಪಿಗೆ ನೀಡಲಿಲ್ಲ. ನಿರಂಜನರ ‘ಎಣ್ಣೆ ಚಿಮಣಿ ಎಣ್ಣೆ’ ಕಥೆ ಬ್ರಿಟಿಷ್ ಆಡಳಿತ ಮತ್ತು ಸ್ವತಂತ್ರ ಭಾರತದ ಸರಕಾರದ ಕೆಂಗಣ್ಣಿಗೆ ಗುರಿಯಾದದ್ದು ಒಂದು ಅಪರೂಪದ ಸಂಗತಿ.
ಇದು ಅವರ ಬರಹದ ಶಕ್ತಿ. ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರದಲ್ಲಿ 1976ರಲ್ಲಿ ಪ್ರಗತಿ ಪಂಥ ಸಮ್ಮೇಳನ ನಡೆದಿತ್ತು. ಈ ಸಮ್ಮೇಳನಕ್ಕೆ ನಿರಂಜನ, ಡಾ. ಅನುಪಮಾ ನಿರಂಜನ, ಅವರ ಮಕ್ಕಳಾದ ಸೀಮಂತಿನಿ ಮತ್ತು ತೇಜಸ್ವಿನಿ ಬಂದಿದ್ದರು. ಅವರ ಊಟ, ವಾಸ್ತವ್ಯದ ವ್ಯವಸ್ಥೆ ನೋಡಿಕೊಳ್ಳುವ ಭಾಗ್ಯ ನನ್ನದಾಗಿತ್ತು. ಇದು ಒಡನಾಟವಾಗಿ ಬೆಳೆಯಲು ಸಹಾಯವಾಯಿತು.
ಇದನ್ನೂ ಓದಿ: Vinayak V Bhat Column: ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ
ನೋಡುವುದಕ್ಕೆ ಸುರದ್ರೂಪಿಯಾಗಿದ್ದ ಅವರ ವೇಷ ಭೂಷಣ ಬಹಳ ಸರಳವಾಗಿತ್ತು. ಬಿಳಿಯ ಪೈಜಾಮು, ಶರ್ಟು ಇಷ್ಟೇ. ತಮ್ಮ ಕಮ್ಯುನಿಸ್ಟ್ ಚಳುವಳಿಯ ದಿನಗಳನ್ನು ನೆನಪಿಸಿಕೊಂಡರು. ಒಬ್ಬ ಲೇಖಕ ಯಾವ ಪಕ್ಷಕ್ಕೂ ಸೇರಬಾರದು.ಎಲ್ಲ ಪಕ್ಷಗಳಲ್ಲಿ ಲೇಖಕರನ್ನು, ಕವಿಗಳನ್ನು, ಕಲಾ ವಿದರನ್ನು ಎಳೆದು ಕಟ್ಟುವ ಕೆಲಸ ನಡೆಯುತ್ತದೆ’ ಎಂದು ಹೇಳಿದರು.‘ಲೇಖಕ ಸ್ವತಂತ್ರ ನಾಗಿರ ಬೇಕು. ಜನರೊಂದಿಗೆ ನಿಲ್ಲಬೇಕು. ಕಂಡದ್ದನ್ನು ಕಂಡ ಹಾಗೆ ಬರೆಯುವ ಎದೆಗಾರಿಕೆ ಬೆಳೆಸಿಕೊಳ್ಳ ಬೇಕು. ಸಮಾನತೆ ನೆಲೆಯಲ್ಲಿ ಮಾತ್ರ ಸಂವಾದ ಮತ್ತ ಚರ್ಚೆ ಸಾಧ್ಯ’ ಎಂಬುದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು.
ಮುಂದೆ ದಾವಣಗೆರೆಯಲ್ಲಿ ಪ್ರಗತಿಪಂಥ ಸಾಹಿತ್ಯ ಸಮ್ಮೇಳನ ನಡೆಯಿತು. ಸಿದ್ದಲಿಂಗಯ್ಯನವರ ಹೊಲೆ ಮಾದಿಗರ ಹಾಡು ಅಲ್ಲಿ ಬಿಡುಗಡೆಯಾಯಿತು. ನಿರಂಜನರು ಮಾತನಾಡುವಾಗ ತುಂಬಾ ಭಾವುಕರಾಗಿ ಒಮ್ಮೆ ಕಣ್ಣೀರು ಹಾಕಿದರು. ಅದು ತುರ್ತು ಪರಿಸ್ಥಿತಿಯ ಕಾಲ. ಬೇರೆಲ್ಲ ಸ್ವಾತಂತ್ರ್ಯ ಗಳಿಗಿಂತಲೂ ಮಿಗಿಲಾಗಿ ಅರಿಯುವ ನುಡಿಯುವ ಆತ್ಮಸಾಕ್ಷಿಗೆ ಅನುಗುಣವಾಗಿ ಅನಿರ್ಬಂಧಿತ ವಾಗಿ ಚರ್ಚಿಸುವ ಸ್ವಾತಂತ್ರ್ಯವನ್ನು ನನಗೆ ಕೊಡಿ ಎಂದು ಬ್ರಿಟಿಷ್ ಪಾರ್ಲಿಮೆಂಟ್‌ನಲ್ಲಿ ಮಹಾ ಕವಿ ಮಿಲ್ಟನ್ ಉಲ್ಲೇಖಿಸಿದ ಮಾತನ್ನು ಹೇಳುವ ಮೂಲಕ ನಿರಂಜನರು ಸೂಕ್ಷ್ಮವಾಗಿ ಅಸಮಾ ಧಾನ ವ್ಯಕ್ತಪಡಿಸಿದರು.
ಆದರೆ ಕಾಂಗ್ರೆಸ್ ಜೊತೆಗೆ ಗುರುತಿಸಿಕೊಂಡಿದ್ದ ಬಸವರಾಜ ಕಟ್ಟಿಮನಿ ಅವರು ತುರ್ತು ಪರಿಸ್ಥಿತಿ ಯನ್ನು ಸಮರ್ಥಿಸಿ ಇಂದಿರಾ ಗಾಂಧಿಯವರ ಬಗ್ಗೆ ಕವನ ಬರೆದ ವಾಚಿಸಿದರು! ಕುಕ್ಕೆ ಸುಬ್ರಮಣ್ಯ ಬಳಿಯ ಕುಳಕುಂದ ನಿರಂಜನರ ಹುಟ್ಟೂರು. ಕಾಸರಗೋಡು ಜಿಲ್ಲೆಯ ನೀಲೇಶ್ವರದ ರಾಜಸ್ ಹೈಸ್ಕೂಲಿನಲ್ಲಿ ಓದಿ ಮೆಟ್ರಿಕ್ ಪರೀಕ್ಷೆ ಪಾಸಾದರು. ಹೈಸ್ಕೂಲ್ ನಲ್ಲಿ ಇದ್ದಾಗಲೇ 13 ಕಥೆಗಳು ಪ್ರಕಟವಾಗಿದ್ದವು.
ವಿದ್ಯಾರ್ಥಿಯಾಗಿದ್ದಾಗ ಸುಳ್ಯದಲ್ಲಿ ಗಾಂಧೀಜಿಯ ದರ್ಶನ ಪಡೆದಿದ್ದರು. ಇದು ಅವರ ಮೇಲೆ ಆಳ ವಾದ ಪರಿಣಾಮ ಬೀರಿತ್ತು. ಇದರಿಂದಾಗಿ ಸರ್ಕಾರಿ ನೌಕರಿಗೆ ಸೇರಿಕೊಳ್ಳುವುದಕ್ಕೆ ಅವರು ಪ್ರಯತ್ನಿ ಸಲಿಲ್ಲ. ಪತ್ರಿಕಾ ವೃತ್ತಿಯನ್ನು ಆಯ್ಕೆಗೊಂಡರು. ಕಥೆ, ಕಾದಂಬರಿ,ಅಂಕಣ ಬರಹಗಳಿಂದ ಓದುಗರ ಗಮನ ಸೆಳೆದರು.
ತೀರ್ಥಹಳ್ಳಿಯ ಯುವತಿ ವೆಂಕಟಲಕ್ಷ್ಮಿ ಮತ್ತು ನಿರಂಜನರು ಪರಸ್ಪರ ಪ್ರೀತಿಸಿದರು. ಮದುವೆಯ ನಂತರ ವೆಂಕಟಲಕ್ಷ್ಮಿ, ಅನುಪಮಾ ಎಂಬ ಹೆಸರಿನಲ್ಲಿ ಹಾಗೂ ಶಿವರಾಯ ನಿರಂಜನ ಎಂಬ ಹೆಸರಿನಲ್ಲಿ ಸಾಹಿತ್ಯ ರಚನೆ ಮುಂದುವರಿಸುತ್ತಾರೆ. ಅದೇ ಹೆಸರಿನಲ್ಲಿ ಕನ್ನಡ ನಾಡಿನಲ್ಲಿ ಮನೆ ಮಾತಾಗಿದ್ದಾರೆ.
‘ಚಿರಸ್ಮರಣೆ’ ನಿರಂಜನರ ಪ್ರಮುಖ ಮೇರು ಕೃತಿ. ಕೈಯೂರಿನ ರೈತ ಹೋರಾಟದ ನಿಜ ಘಟನೆ ಯನ್ನು ಆಧರಿಸಿ ನಿರಂಜನರು ಈ ಕಾದಂಬರಿ ರಚಿಸಿದ್ದಾರೆ. 1941 ರಲ್ಲಿ ಕೈಯೂರ ಗ್ರಾಮದಲ್ಲಿ ಭೂ ಮಾಲೀಕರ ವಿರುದ್ಧ ಲೇಖಕ ಯಾವ ಪಕ್ಷಕ್ಕೂ ಸೇರಬಾರದು!
ರೈತರು ಕಾರ್ಮಿಕರು ಉಗ್ರ ಹೋರಾಟ ನಡೆಸಿದರು. ಈ ಸಂದರ್ಭದಲ್ಲಿ ಗಾಯಗೊಂಡ ಪೊಲೀಸ್ ಪೇದೆ ಮರಣ ಹೊಂದಿದ. ಈ ಪ್ರಕರಣದ ನಾಲ್ಕು ಆರೋಪಿಗಳಿಗೆ ಮರಣದಂಡನೆ ನೀಡಿ 1943 ಮಾರ್ಚ್ 29ರಂದು ನೇಣು ಹಾಕಲಾಯಿತು. ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದ ನಿರಂಜನರು ವಾಸ್ತವ ಸಂಗತಿಯನ್ನು ಆಧರಿಸಿ ಚಿರಸ್ಮರಣೆ ರಚಿಸಿದ್ದಾರೆ. ಕೈಯೂರಿನಲ್ಲಿ ಈ ನಾಲ್ಕು ಹುತಾತ್ಮರ ಮಂದಿರಗಳನ್ನು ಸ್ಮಾರಕ ರೂಪದಲ್ಲಿರಿಸಿದ್ದಾರೆ. ಪತ್ನಿ ಅನುಪಮಾ ಅವರು 1991 ಫೆಬ್ರವರಿ 15ರಂದು ಅಸು ನೀಗಿದರು.
ಈ ದುಃಖ ಅವರನ್ನು ಬಹಳ ಬಾಧಿಸಿತು. ಅವರು ಅದೇ ನೋವಿನಲ್ಲಿ 1992 ಮಾರ್ಚ್ 12ರಂದು ಅಸ್ತಂಗತರಾದರು. ಅವರ ಪುತ್ರಿ ತೇಜಸ್ವಿನಿ ಅವರು ನಿರಂಜನ ದಂಪತಿಯ ಬದುಕು ಬರಹ ಓಡಾಟ ವಾಸವಾಗಿದ್ದ ಸ್ಥಳ, ಮುಂತಾದ ಸಂಗತಿಗಳ ದಾಖಲೀಕರಣ ಮಾಡಿದ್ದಾರೆ. ಅವರೆಲ್ಲ ಕೃತಿಗಳ ಮರು ಮುದ್ರಣ ಕಾರ್ಯವನ್ನು ಮಾಡುತ್ತಿದ್ದಾರೆ.
ನಿರಂಜನರು ಬರೆದಂತೆ ಬದುಕಿದ ಲೇಖಕರು. ಅವರನ್ನು ಕನ್ನಡದ ಕೌಂಟ್ ಲಿಯೋ ಟಾಲ್ಸ್ಟಾಯ್ ಎಂದು ಗುರುತಿಸಲಾಗುತ್ತದೆ. ಕನ್ನಡದಲ್ಲಿಅಂಕಣ ಬರಹದ ಪರಂಪರೆ ಆರಂಭಿಸಿದವರು. ‘ಸೋವಿ ಯತ್ ಲ್ಯಾಂಡ್ ನೆಹರು ಪ್ರಶಸ್ತಿ’ ನಿರಂಜನ ಮತ್ತು ಅವರ ಪತ್ನಿಡಾ. ಅನುಪಮಾ ನಿರಂಜನ ಸಂದಿರುವುದು ಕನ್ನಡ ಸಾಹಿತ್ಯ ಚರಿತ್ರೆಯ ಅಪರೂಪದ ಸಂಗತಿಯಾಗಿದೆ.