ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hari Paraak Column: ಪ್ಲಂಬರ್‌ಗೆ ಇಷ್ಟ ಆಗೋ ಡಿಷ್ - ನಲ್ಲಿ ಮೂಳೆ

ಹೃದಯಾಘಾತ ಕಾಮನ್ ಆಗಿರುವ ಈ ಸಂದರ್ಭದಲ್ಲಿ ಎಷ್ಟೋ ಜನ ಅದನ್ನು ನಂಬಿಯೂ ಬಿಟ್ಟಿದ್ದರು. ಆದರೆ ಅಸಲಿಗೆ ಸತ್ತಿದ್ದು ಚಿಕ್ಕಪುಟ್ಟ ಪಾತ್ರ ಮಾಡುತ್ತಿದ್ದ ಅದೇ ಹೆಸರಿನ ಇನ್ನೊಬ್ಬ ನಟಿ. ಒಟ್ಟಿನಲ್ಲಿ ಇನ್ನೊಬ್ಬರ ಸಾವು ಕೂಡಾ ನಮ್ಮ ಸಾವಿನಷ್ಟೇ ಗಂಭೀರ ವಿಷಯ ಅನ್ನೋದು ಅರಿವಾಗುವರೆಗೂ ಇಂಥ ಅವಘಡಗಳು ನಡೆಯುತ್ತಲೇ ಇರುತ್ತವೆ ಅನ್ನೋದು ವಿಷಾದಕರ.

ತುಂಟರಗಾಳಿ

ಸಿನಿಗನ್ನಡ

ಸಾವು ಅಂದ್ರೆ ಅದು ಜೀವನದ ಅಂತ್ಯ ಮತ್ತು ತುಂಬಾ ಗಂಭೀರವಾದ ವಿಷಯ. ಆದರೆ ಕೆಲವರಿಗೆ ಮಾತ್ರ ಅದು, ಇದು ನನಗೇ ಮೊದಲು ಗೊತ್ತಾಯಿತು ಅಂತ ಹೇಳಿಕೊಳ್ಳುವ ನ್ಯೂಸ್ ಐಟಂ. ಇದು ಸೆಲೆಬ್ರಿಟಿಗಳನ್ನಂತೂ ಇನ್ನಿಲ್ಲದಂತೆ ಕಾಡುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಹಲವಾರು ಸೆಲೆಬ್ರಿಟಿಗಳು ಅದರಲ್ಲೂ ಸಿನಿಮಾ ನಟ ನಟಿಯರು, ಕ್ರೀಡಾ ಪಟುಗಳು ಸಾಯೋಕೆ ಮುಂಚೆಯೇ ಅದೆಷ್ಟು ಬಾರಿ ಸತ್ತಿರುತ್ತಾರೋ ಗೊತ್ತಿಲ್ಲ.

ಮೊನ್ನೆ ಮೊನ್ನೆ ನಟ ಶರತ್ ಬಾಬು, ಜಿಂಬಾಬ್ವೆ ಕ್ರಿಕೆಟ್ ಆಟಗಾರ ಹೀತ್ ಸ್ಟ್ರೀಕ್ ಕೂಡಾ ಸಾಯುವ 2 ವಾರ ಮುಂಚೆಯೇ ಸತ್ತು ಹೋಗಿದ್ದರು. ನಮ್ಮ ಕನ್ನಡದ ನಟ ಅಂಬರೀಷ್, ದೊಡ್ಡಣ್ಣ ಅವರನ್ನು ಈ ಸುಡುಗಾಡು ಟ್ರೆಂಡ್ ಹಲವಾರು ಬಾರಿ ಕಾಡಿದ್ದಿದೆ.

ಆದರೆ ಹಾಗಂತ ಇದನ್ನು ನ್ಯೂಸ್ ಚಾನೆಲ್‌ಗಳು ಮಾಡುತ್ತಿವೆ ಎಂದುಕೊಳ್ಳಬೇಡಿ. ಇದು ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಟಿವ್ ಆಗಿರುವವರು ಮಾಡುವ ಕೆಲಸ. ಮತ್ತು ಇದಕ್ಕೆ ಚಿತ್ರರಂಗದ ದೊಡ್ಡ ಸೆಲೆಬ್ರಿಟಿಗಳೂ ಹೊರತಾಗಿಲ್ಲ ಅನ್ನೋದು ವಿಷಾದ. ಎಲ್ಲರಿಗೂ ನಾವೇ ಮೊದಲು ಸಾವಿನ ಸುದ್ದಿ ಕೊಟ್ಟೆವು ಎನ್ನುವ ಸಂಭ್ರಮದಲ್ಲಿ ಆರ್‌ಐಪಿ ಅಂತ ಪೋಸ್ಟ್ ಹಾಕಿ ನಿಟ್ಟುಸಿರು ಬಿಡುವ ಈ ಮಹಾನುಭಾವರು ಮೊನ್ನೆ ಸ್ಯಾಂಡಲ್‌ವುಡ್‌ನ ದೊಡ್ಡ ನಟಿಯೊಬ್ಬರು ಹೃದಯಾಘಾತದಿಂದ ನಿಧನ ಅಂತ ಪೋಸ್ಟ್‌ಗಳನ್ನು ಹಾಕಿ ಕೊಂಡಿದ್ದರು.

ಇದನ್ನೂ ಓದಿ: Hari Paraak Column: ದುಡ್ಡಿನ ಫಿಲಾಸಫಿ: ಹನಿ ಹನಿ ಸೋರಿದ್ರೆ ಹಳ್ಳ

ಹೃದಯಾಘಾತ ಕಾಮನ್ ಆಗಿರುವ ಈ ಸಂದರ್ಭದಲ್ಲಿ ಎಷ್ಟೋ ಜನ ಅದನ್ನು ನಂಬಿಯೂ ಬಿಟ್ಟಿದ್ದರು. ಆದರೆ ಅಸಲಿಗೆ ಸತ್ತಿದ್ದು ಚಿಕ್ಕಪುಟ್ಟ ಪಾತ್ರ ಮಾಡುತ್ತಿದ್ದ ಅದೇ ಹೆಸರಿನ ಇನ್ನೊಬ್ಬ ನಟಿ. ಒಟ್ಟಿನಲ್ಲಿ ಇನ್ನೊಬ್ಬರ ಸಾವು ಕೂಡಾ ನಮ್ಮ ಸಾವಿನಷ್ಟೇ ಗಂಭೀರ ವಿಷಯ ಅನ್ನೋದು ಅರಿವಾಗುವರೆಗೂ ಇಂಥ ಅವಘಡಗಳು ನಡೆಯುತ್ತಲೇ ಇರುತ್ತವೆ ಅನ್ನೋದು ವಿಷಾದಕರ.

ಲೂಸ್‌ ಟಾಕ್‌ -ದಳಪತಿ ವಿಜಯ್

ಏನ್ ಸಾರ್, ಕೈಯಿಗೆ ಬಂದಿದ್ದು ಬಾಯಿಗೆ ಬರಲಿಲ್ಲ ಅನ್ನೋ ಪರಿಸ್ಥಿತಿಯಿಂದ ಕೊನೆಗೂ ಮುಖ್ಯಮಂತ್ರಿ ಆಗೇಬಿಟ್ರಲ್ಲ?

- ಕೈ ಪಕ್ಷ ಕಾಂಗ್ರೆಸ್ ಕೈ ಹಿಡಿದ ಮೇಲೆ ಕೈಯಿಗೆ ಬಂದಿದ್ದು ಬಾಯಿಗೆ ಬರಲೇಬೇಕಲ್ಲ.‌

ಆದ್ರೂ, ಮುಖ್ಯಮಂತ್ರಿ ಆಗ್ತಿನೋ ಇಲ್ವೋ ಅಂತ ಟೆನ್ಶನ್ ಆಗಿತ್ತು ಅಲ್ವಾ?

- ಖಂಡಿತ. ನಿಮ್ಮ ಆರ್‌ಸಿಬಿ ಬಾಯಿಗೆ ಬರಿಸಿ ಗೆಲ್ತಾರೆ, ಆದ್ರೆ ನಂಗೆ ಗೆದ್ದ ಮೇಲೆ ಬಾಯಿಗೆ ಬರೋ ಥರ ಆಗಿತ್ತು.

ಬಹುಮತ ಸಿಕ್ಕ ಮೇಲೂ ನಿಮಗೆ ಜನ ಬಹಳ ತೊಂದ್ರೆ ಕೊಟ್ರು ಅಲ್ವಾ?

- ರಾಜಕೀಯದಲ್ಲಿ ಅದೆಲ್ಲ ಕಾಮನ್. ನಮ್ಮ ಕೈ ಬಾಯಿ ಶುದ್ಧ ಇದ್ರೆ ಸಾಕು, ಒಳ್ಳೇದಾಗುತ್ತೆ.

ಹೋಗ್ಲಿ, ನೀವ್ಯಾಕೆ ಬಿಜೆಪಿ ಜತೆ ಸರಕಾರ ಮಾಡಲಿಲ್ಲ?

- ರೀ, ಕೆಸರಲ್ಲಿರೋ ಕಮಲದ ಸಹವಾಸ ಮಾಡೋಕೆ ಹೋಗಿ ಅದಕ್ಕೆ ಕೈ ಹಾಕಿದ್ರೆ ಕೈಯಷ್ಟೇ ಕೆಸರಾಗುತ್ತೆ. ಬಾಯಿ ಮೊಸರಾಗಲ್ಲ. ನಮಗೆ ಒಳ್ಳೆ ಹೆಸರೂ ಬರಲ್ಲ.

ಅದೂ ಸರಿನೇ. ಆದ್ರೆ ಅದ್ಯಾಕೆ ನೀವು ಸಿಎಸ್‌ಕೆ ಅಭಿಮಾನಿಗಳ ಥರ ವಿಶಲ್ ಸಿಂಬಲ್ ಆಯ್ಕೆ ಮಾಡಿಕೊಂಡಿದ್ದು?

- ರೀ ನಮ್ದು ಟಿವಿಕೆ, ಅದು ಸಿಎಸ್‌ಕೆ ಅದಕ್ಕೂ ನಮಗೂ ಯಾಕ್ರೀ ಕಂಪೇರ್ ಮಾಡ್ತೀರ. ಅದರ ಕ್ಯಾಪ್ಟನ್ ರಿಟೈರ್ ಆಗೋ ಹಂತದಲ್ಲಿದ್ದಾರೆ. ನಾನು ಇನ್ನೂ ಈಗ ಕ್ಯಾಪ್ಟನ್ ಆಗಿದ್ದೀನಿ.

(ಕಾಲ್ಪನಿಕ ಸಂದರ್ಶನ)

Screenshot_4

ನೆಟ್‌ ಪಿಕ್ಸ್

ರಾತ್ರಿ ಹೊತ್ತು ಮಳೆ ಧಾರಾಕಾರವಾಗಿ ಸುರಿಯುತ್ತಿತ್ತು. ಸಿಡಿಲು, ಗುಡುಗು ಸಹಿತ ಭಾರೀ ಮಳೆ ಬಂದು ರಸ್ತೆಗಳೆಲ್ಲ ಅಸ್ತವ್ಯಸ್ತವಾಗಿದ್ದವು. ಸೋಮು ತನ್ನ ಗಾಡಿ ಮೇಲೆ ಆ ಮಳೆಯ ಹೊರಗೆ ಹೊರಟ. ಗಾಡಿ ಓಡಿಸುತ್ತಿದ್ದ ಸೋಮು ಹಾಕಿಕೊಂಡಿದ್ದ ಜರ್ಕಿನ್ ನ ಜಿಪ್ ಕಿತ್ತು ಹೋಗಿತ್ತು. ಹಾಗಾಗಿ, ಅದು ಗಾಳಿಗೆ ಅಗಲ ಆಗಿ ಹಾರಾಡುತ್ತಾ ತೊಂದರೆ ಕೊಡುತ್ತಿತ್ತು. ಅದಕ್ಕೆ ಸೋಮು ತನ್ನ ಜರ್ಕಿನ್ ಅನ್ನು ಬಿಚ್ಚಿ ಅದರ ಜಿಪ್ ಬೆನ್ನಿನ ಮೇಲೆ ಬರುವಂತೆ, ಅದರ ಹಿಂಭಾಗ ತನ್ನ ಎದೆ ಮೇಲೆ ಬರುವಂತೆ ಮಾಡಿ ಹಾಕಿಕೊಂಡು ಹೊರಟ. ಸ್ವಲ್ಪ ಹೊತ್ತಿನ ನಂತರ ರಾತ್ರಿ ಮನೆಯ ಇದ್ದ ಖೇಮುಗೆ ಒಂದ್ ಕಾಲ್ ಬಂತು. ನೋಡಿದ್ರೆ ಸೋಮುದು. ಕಾಲ್ ಎತ್ತಿದ ತಕ್ಷಣ, ಖೇಮು, ಆಕ್ಸಿಡೆಂಟ್ ಆಗಿದೆ, ಹೈ-ವೇ ಪಕ್ಕ ಗಾಡಿ ಸ್ಕಿಡ್ ಆಗಿ ಪಕ್ಕದ ಹಳ್ಳಕ್ಕೆ ಬಿದ್ದಿದ್ದೇನೆ. ‘ಬೇಗ ಬಾ’ ಅಂತ ಲೊಕೇಶನ್ ಹೇಳಿದ ಸೋಮು.

ಮಳೆಯಲ್ಲಿ ಹೈ-ವೇ ರೋಡಿನ ಪಕ್ಕದ ಮನೆಯಿದ್ದ ಖೇಮು ಅವಸರವಾಗಿ ಸುರಿಯುವ ಮಳೆಯ ಗಾಡಿ ಹತ್ತಿ ಹೈ-ವೇನಲ್ಲಿ ಹೊರಟ. ಸೋಮು ಹೇಳಿದ ಲೊಕೇಶನ್ ತಲುಪಿದಾಗ ಅಲ್ಲಿ ಸೋಮು ಗಾಡಿ ಬಿದ್ದಿತ್ತು. ಪಕ್ಕದಲ್ಲಿ ಬಗ್ಗಿ ನೋಡಿದಾಗ ಆಳವಾದ ಹಳ್ಳದಲ್ಲಿ ಬಿದ್ದಿದ್ದ ಸೋಮು ಕಾಣಿಸಿದ. ಖೇಮು ಏನೇ ಪ್ರಯತ್ನ ಪಟ್ಟರೂ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಅಲ್ಲಿನ ವೈದ್ಯರು, ಆಸ್ಪತ್ರೆಗೆ ತರೋಕೆ ಮುಂಚೆನೇ ಇವರ ಪ್ರಾಣ ಹೋಗಿದೆ ಅಂತ ಹೇಳಿಬಿಟ್ಟರು. ‌

ದುಃಖದಲ್ಲಿ ಕೂತಿದ್ದ ಖೇಮುವನ್ನು ಪೊಲೀಸರು ವಿಚಾರಿಸಲು ಬಂದರು. ಖೇಮುವನ್ನು ಕುರಿತು ‘ಪೊಲೀಸ್ ಆಫೀಸರ್ ಕೇಳಿದ ನೀವು ಅಲ್ಲಿಗೆ ಹೋದಾಗ ಅವರ ಪ್ರಾಣ ಹೋಗಿತ್ತಾ?’. ಅದಕ್ಕೆ ಖೇಮು ಹೇಳಿದ, ‘ಇಲ್ಲಾ ಸಾರ್, ಆಕ್ಸಿಡೆಂಟ್ ಆಗಿ ಬಿದ್ದ ರಭಸಕ್ಕೆ ಸೋಮುನ ತಲೆ ಉಲ್ಟಾ ತಿರುಗಿಕೊಂಡಿತ್ತು. ನಾನು ಅದನ್ನ ಸರಿ ಮಾಡಿದೆ. ತಕ್ಷಣ ಪ್ರಾಣ ಹೋಯ್ತು’

ಲೈನ್‌ ಮ್ಯಾನ್

ನಿಂತ್ಕೊಳ್ಳೋಕೂ ಆಗದಷ್ಟು ಕುಡಿದು ತೂರಾಡುತ್ತಿರುವವನದ್ದು

- ಸ್ಟ್ಯಾಂಡ್ ಅಪ್ ಕಾಮಿಡಿ

ಪ್ಲಂಬರ್‌ಗೆ ಯಾವ ನಾನ್ ವೆಜ್ ಡಿಷ್ ಇಷ್ಟ?

- ನಲ್ಲಿ ಮೂಳೆ

ಚಳಿಗಾಲದಲ್ಲಿ ತಿನ್ನೋಕಾಗದ ಚಿಕನ್ ಡಿಷ್

- ಚಿಲ್ಲಿ ಚಿಕನ್

ಮಾತ್ರೆ ತಿನ್ನುವ ಚಟದ ಪರಮಾವಧಿ

- ಮೆಡಿಕಲ್ ಸ್ಟೋರಿಗೆ ಹೋಗಿ, ಯಾವುದಾದ್ರೂ ಹೊಸ ಟ್ಯಾಬ್ಲೆಟ್ ಬಂದಿದೆಯಾ ಅಂತ ಕೇಳೋದು.

ಕುಡುಕನ ಹತ್ರ ಹೋಗಿ ನಿನ್ನ ಮೇಲೆ ಕೇಸ್ ಹಾಕ್ತೀವಿ ಅಂತ ಹೇಳಿದ್ರೆ ಏನಂತಾನೆ

- ಯಾವ ಬ್ರ್ಯಾಂಡು, ಎಷ್ಟ್ ಕೇಸು? ಹಾಕಿ ಹಾಕಿ ಕೇಸಿದ್ರೆ ಕೈಲಾಸ.

ಶಾರ್ಟ್ ಟರ್ಮ್ ಮೆಮೋರಿ ಲಾಸ್ ಅಂದ್ರೇನು?

- ರಾತ್ರಿ ಗುಂಡು ಹಾಕಿ, ಕಷ್ಟಗಳನ್ನು ಬೆಳಗ್ಗೆವರೆಗೂ ಮರೆಯೋದು

ಮೇಕ್ ಇಟ್ ಲಾರ್ಜ್ ಅನ್ನೋ ಆಲ್ಕೋಹಾಲ್ ಜಾಹೀರಾತು ನೋಡಿ ಗಾಬರಿ ಯಾಗೋದು ಯಾರು ?

- ಹಾರ್ಟು, ಲಿವರ್

ಸದಾ ಉಗುರು ಕಡಿಯುವವನು

- ಉಗುರು-ಗಾಮಿ

ಎಂಥಾ ಅನಕ್ಷರಸ್ಥ ಹುಡುಗನ ಎದೆ ಸೀಳಿದರೂ ಎರಡಕ್ಷರ ಇದ್ದೇ ಇರುತ್ತೆ

- ಯಾವುದಾದರೂ ಹುಡುಗಿಯ ಹೆಸರಿನದ್ದು

ದುಬಾರಿ ಕಾರುಗಳನ್ನು ಇನ್ಸ್‌ ಟಾಲ್‌ಮೆಂಟ್ ನ ತಗೋಬೇಕು

- ಮೊದಲು, ಎಂಜಿನ್, ಆಮೇಲೆ ಬಾಡಿ, ಟೈರು, ಸೀಟು ಹೀಗೆ

ಹರಿ ಪರಾಕ್‌

View all posts by this author