Hari Paraak Column: ದುಡ್ಡಿನ ಫಿಲಾಸಫಿ: ಹನಿ ಹನಿ ಸೋರಿದ್ರೆ ಹಳ್ಳ
ಫೇಸ್‌ಬುಕ್‌ನಲ್ಲಿ ಯಾರೋ ಪೋಸ್ಟ್ ಹಾಕಿದ್ರು, ಅವರು ಪ್ರತಿದಿನ ಮಾಲ್‌ಗೆ ಸಿನಿಮಾ ನೋಡೋಕೆ ಹೋಗೋದ್ ನೋಡಿ, ಅಲ್ಲಿನ ಸೆಕ್ಯುರಿಟಿ, ಸಾರ್, ನೀವು ಇಲ್ಲೇ ಕೆಲಸ ಮಾಡೋದಾ ಅಂತ ಕೇಳಿದ್ನಂತೆ. ಇದು ಕೇಳೋಕೆ ತಮಾಷೆಯಾಗಿ ಕೇಳಿಸಿದರೂ ಇದು ವಾಸ್ತವ ಸತ್ಯ. ಸಿನಿಮಾ ಪ್ರಿಯರ ಬಳಿ ಈಗ ನೋಡ್ಬೇಕು ಅಂತಿರೋ ಸಿನಿಮಾಗಳ ಪಟ್ಟಿಗಿಂತ, ನೋಡಿರುವ ಸಿನಿಮಾಗಳ ಪಟ್ಟಿಗಿಂತ, ನೋಡಬೇಕಾ ಗಿತ್ತು.
-
ತುಂಟರಗಾಳಿ
ಸಿನಿಗನ್ನಡ
ಫೇಸ್‌ಬುಕ್‌ನಲ್ಲಿ ಯಾರೋ ಪೋಸ್ಟ್ ಹಾಕಿದ್ರು, ಅವರು ಪ್ರತಿದಿನ ಮಾಲ್‌ಗೆ ಸಿನಿಮಾ ನೋಡೋಕೆ ಹೋಗೋದ್ ನೋಡಿ, ಅಲ್ಲಿನ ಸೆಕ್ಯುರಿಟಿ, ಸಾರ್, ನೀವು ಇಲ್ಲೇ ಕೆಲಸ ಮಾಡೋದಾ ಅಂತ ಕೇಳಿದ್ನಂತೆ. ಇದು ಕೇಳೋಕೆ ತಮಾಷೆಯಾಗಿ ಕೇಳಿಸಿದರೂ ಇದು ವಾಸ್ತವ ಸತ್ಯ. ಸಿನಿಮಾ ಪ್ರಿಯರ ಬಳಿ ಈಗ ನೋಡ್ಬೇಕು ಅಂತಿರೋ ಸಿನಿಮಾಗಳ ಪಟ್ಟಿಗಿಂತ, ನೋಡಿರುವ ಸಿನಿಮಾಗಳ ಪಟ್ಟಿಗಿಂತ, ನೋಡಬೇಕಾಗಿತ್ತು.
ಆದ್ರೆ ಆಗ್ಲಿಲ್ಲ ಅನ್ನೋ ಸಿನಿಮಾಗಳ ಪಟ್ಟಿಯೇ ದೊಡ್ಡದಾಗಿದೆ. ಪ್ರತಿವಾರ ಹಲವಾರು ಚಿತ್ರಗಳ ಬಿಡುಗಡೆ. ಅದರಲ್ಲಿ ನೋಡುವಂಥವು ಕಮ್ಮಿ ಇದ್ದರೂ, ಹಲವು ಚಿತ್ರಗಳು ಇನ್ನೂ ನೋಡಬೇಕು ಅಂತ ಅಂದುಕೊಳ್ಳುತ್ತಿರುವಾಗಲೇ ಚಿತ್ರ ಮಂದಿರಗಳಿಂದ ಮಾಯವಾಗುತ್ತಿವೆ.
ಹೋಗ್ಲಿ, ಓಟಿಟಿಯಲ್ಲಿ ನೋಡೋಣ ಅಂದ್ರೆ ಅರಳಿದ ಎಲ್ಲ ಹೂವೂ ಭಗವಂತನ ಪಾದ ಸೇರೊಲ್ಲ, ಬಿಡುಗಡೆ ಆದ ಎಲ್ಲ ಚಿತ್ರಗಳೂ ಓಟಿಟಿಗೆ ಬರಲ್ಲ. ಹಾಗಾಗಿ ಅಪ್ಪಟ ಚಿತ್ರಪ್ರೇಮಿಗಳು, ಅಯ್ಯೋ, ಆ ಸಿನಿಮಾ ನೋಡೋಕಾಗ್ಲಿಲ್ಲ, ಈ ಸಿನಿಮಾ ನೋಡೋಕಾಗ್ಲಿಲ್ಲ ಅಂತ ಕೊರಗೋದು ತಪ್ಪುತ್ತಿಲ್ಲ.
ಇದನ್ನೂ ಓದಿ: Hari Paraak Column: ಸ್ವಚ್ಛವಾಗಿರೋ ಖಾಸಗಿ ಆಸ್ಪತ್ರೆ : Clean-ik
ಬರೀ ಸಿನಿಮಾ ಪ್ರೇಮಿಗಳು ಯಾಕೆ, ಸ್ವತಃ ಸಿನಿಮಾ ಪತ್ರಕರ್ತರು ಮತ್ತು ವಿಮರ್ಶಕರಿಗೇ ಎಲ್ಲ ಸಿನಿಮಾಗಳನ್ನು ನೋಡೋಕೆ ಆಗ್ತಿಲ್ಲ. ಹಾಗೊಂದು ವೇಳೆ ಹಠಕ್ಕೆ ಬಿದ್ದು ದಿನಕ್ಕೆರಡು ಸಿನಿಮಾ ನೋಡಿದರೂ ಕೊನೆಯ ಸಿನಿಮಾ ವಿಮರ್ಶೆ ಮಾಡುವ ಹೊತ್ತಿಗೆ ಮುಂದಿನ ವಾರದ ಸಿನಿಮಾಗಳು ಬಿಡುಗಡೆ ಆಗಿರುತ್ತವೆ.
ಒಟ್ಟಿನಲ್ಲಿ ಕೆಲವು ಸಿನಿಮಾಗಳು ತಮ್ಮ ಕಳಪೆ ಕ್ವಾಲಿಟಿಯಿಂದ ಜನರನ್ನು ತಲುಪಲು ವಿಫಲ ವಾಗುತ್ತಿದ್ದರೆ. ಹಲವು ಸಿನಿಮಾಗಳು ಎಲ್ಲ ಇದ್ದರೂ ಓರ್ವ ಕಾಂಪಿಟೇಶನ್‌ನಿಂದ ಜನರಿಗೆ ತಲುಪು ತ್ತಿಲ್ಲ ಅನ್ನೋದಂತೂ ನಿಜ.
ಲೂಸ್ ಟಾಕ್-ವಾಟಾಳ್ ನಾಗರಾಜ್
ಅಲ್ಲಾ ಸಾರ್, ಎಲ್ರೂ ಏನಾದ್ರೂ ಶುರು ಮಾಡಿ, ಕ್ರಿಯೇಟಿವ್ ಕೆಲ್ಸ ಮಾಡೋಣ ಅಂತ ಇಷ್ಟ ಪಟ್ರೆ, ನೀವು ಯಾವಾಗ್ಲೂ ಬಂದ್ ಮಾಡೋದೇ ಸಾಧನೆ ಅಂತಿರ್ತೀರಲ್ಲ ಯಾಕೆ?
- ನೋಡೀ, ಯಾರಾದ್ರೂ ಸಿಕ್ಕಾಗ ಏನ್ ಸಮಾಚಾರ ಅನ್ನಿ ಸಾಕು. ಅವ್ರು ಮಾತಾಡೋಕೆ ಶುರು ಮಾಡ್ತಾರೆ. ಶುರು ಮಾಡ್ಸೋದು ಸುಲಭ. ಆದ್ರೆ ಈ ಟಿವಿ ಚಾನೆಲ್ ಗಳಲ್ಲಿ ಡಿಬೇಟ್ ಮಾಡ್ತಾರಲ್ಲ, ಅಲ್ಲಿ ತಾವೇ ಮಾತಾಡ್ಬೇಕು ಅಂತ ಒಂದೇ ಸಮನೆ ಬಡ್ಕೊತಾ ಇರ್ತರಲ್ಲ, ಅವರ ಮಾತು ಬಂದ್ ಮಾಡಿಸೋಕೆ ಎಲ್ಲಾ ಕಷ್ಟ ಆಗುತ್ತೆ ಅಂತ ನೋಡಿದ್ದೀರಲ್ಲ. ಅದಕ್ಕೇ ನಾನ್ ಹೇಳೋದು ಬಂದ್ ಮಾಡೋದೇ ಗ್ರೇಟ್.
ಆದ್ರೂ ಯಾವಾಗ್ಲೂ ಬಂದ್ ಮಾಡಿಸ್ತೀರ ಅಂತ ಜನ ನಿಮ್ಮನ್ನ ಬಯ್ಕೊತಾರಪ್ಪ.
- ಅದು ಸಹಜ. ನಾವು ಊರು, ರಾಜ್ಯ ಬಂದ್ ಮಾಡಿದ್ರೂ ಅದು ಸಮಸ್ಯೆಗಳ ಬಗ್ಗೆ ಜನಗಳ ಕಣ್ಣು ತೆರೆಸೋಕೆ. ಕಣ್ಣು ತೆರೆಸೋ ಒಳ್ಳೆ ಕೆಲಸ ಮಾಡೋರನ್ನ ನಮ್ಮ ಜನ ಬಯ್ಕೊಳ್ಳೋದು ಮೊದ್ಲಿಂದ ಇದ್ದಿದ್ದೇ ಬಿಡಿ.
ವಾವ್ ಏನ್ ಫಿಲಾಸಫಿ ಸಾರ್ ನಿಮ್ದು. ಗ್ರೇಟ್. ಸರಿ, ನೀವು ಕಾವೇರಿ ನೀರಿಗಾಗಿ ಎಷ್ಟ್ ಸಲ ಬಂದ್ ಮಾಡಿಸಿದ್ದೀರ?
- ಅಯ್ಯೋ, ನಂಗೇ ನೆನಪಿಲ್ಲಪ್ಪ, ಇದು ಹಿಂಗೇ ಮುಂದುವರಿದು ನಾನು ನೀರಿಗಾಗಿ ಬಂದ್ ಮಾಡಿಸ್ತಾನೇ ಇದ್ರೆ, ಮುಂದೆ ಇತಿಹಾಸ ನನ್ನನ್ನ ವಾಟಾಳ್ ನಾಗರಾಜ್ ಬದ್ಲು ವಾಟರ್ ನಾಗರಾಜ್ ಅಂತನೇ ನೆನಪಿಟ್ಕೊಳ್ಳುತ್ತೆ.
ಅದೂ ಸರಿನೇ, ಹಂಗಾದ್ರೆ, ನೀವ್ ಬಂದ್ ಮಾಡೋದ್ ಮಾತ್ರ ಬಿಡಲ್ಲ ಅಂತೀರಾ.
- ಯಾವುದೇ ಕಾರಣಕ್ಕೂ ಬಿಡಲ್ಲ, ಬೆಂದಕಾಳೂರು ಅನ್ನೋ ಹೆಸರು ಹೋಗಿ ‘ಬಂದ್’ ಕಾಳೂರು ಆದ್ರೂ ಪರವಾಗಿಲ್ಲ. ನಾನಂತೂ ಬಂದ್ ಮಾಡೇ ಮಾಡ್ತೀನಿ.
ಆಯ್ತು ಸರ್, ಒಂದ್ ಕೊನೆ ಪ್ರಶ್ನೆ. ಕಾವೇರಿ ಹೋರಾಟದಲ್ಲಿ ಈ ಬಂದ್ ಕಾನ್ಸೆ ಯಾವಾಗ ಶುರು ಆಯ್ತು?
- ತುಂಬಾ ಸಿಂಪಲ್ ಕಣ್ರೀ. ಹಿಂದೆ ಒಂದ್ ಸಲ ತಮಿಳುನಾಡಿನವ್ರು ನೀವು ನಮಗೆ ನೀರು ಕೊಡ್ಲೇಬೇಕು ಅಂದ್ರು. ನಾವು ಅದಕ್ಕೆ ಹ್ಞೂ, ಬಿಟ್ಬುಡ್ತೀವಿ, ‘ಬಂದ್’ ಬುಡಿ ಅಂದ್ವಿ. ಅದನ್ನ ಕೇಳಿ ಅವ್ರು ಕರ್ನಾಟಕದವ್ರು ಬಂದ್ ಮಾಡ್ತಾರೆ ಅಂತ ಗುಬ್ಬಿಸಿದ್ರು. ನಾವು ಸಿಕ್ಕಿದ್ದೇ ಛಾ ಅಂತ ಬಂದ್ ಮಾಡೋಕೆ ಶುರು ಹಚ್ಕೊಂಡ್ವಿ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಟ್ರೈನ್‌ನಲ್ಲಿ ಟಿಸಿ ಆಗಿದ್ದ. ಅವತ್ತು ಟ್ರೈನ್ ಫುಲ್ ರಷ್ ಇತ್ತು. ಟ್ರೈನ್ ತುಂಬಾ ಗಿಜಿಗುಡು ವಷ್ಟು ಜನ. ಹೇಗೋ ಟ್ರೈನ್ ಒಳಗೆ ಹತ್ತಿ ಬಂದು ತನ್ನ ಸೀಟಿನಲ್ಲಿ ಕೂರುವಷ್ಟರಲ್ಲಿ ಖೇಮು ಫುಲ್ ಸುಸ್ತು. ಖೇಮು ಪಕ್ಕದಲ್ಲಿ ಒಬ್ಬ ಸರ್ದಾರ್‌ಜಿ ಕೂತಿದ್ದ. ಟಿಸಿ ತನ್ನ ಪಕ್ಕದ ಬಂದು ಕೂತಿದ್ದನ್ನು ನೋಡಿದ ಸರ್ದಾರ್‌ಜಿ ಖುಷಿಯಾಗಿ, ಸದ್ಯ ಅಂದುಕೊಂಡು, ಸಾರ್, ನಾನು ಜಲಂಧರ್ ನಲ್ಲಿ ಇಳಿಯಬೇಕು, ಈಗ ನಿz ಬರ್ತಿದೆ . ನಾನು ಮಲಗಿರ್ತೀನಿ. ಜಲಂಧರ್ ಬಂದ ಕೂಡ್ಲೇ ಎಬ್ಬಿಸ್ತೀರಾ ಅಂತ ಕೇಳಿದ. ಅದಕ್ಕೆ ಖೇಮು ಆಯ್ತು ಬಿಡಿ ಅದಕ್ಕೇನು ಎಬ್ಬಿಸ್ತೀನಿ ಅಂದ.
ಅಲ್ಲಿಗೆ ಸುಮ್ಮನಾಗದ ಸರ್ದಾರ್‌ಜಿ, ಸಾರ್, ಇನ್ನೊಂದು ಮಾತು, ನಾನು ಪೂರ್ತಿ ನಿದ್ದೆಯಲ್ಲಿದ್ದಾಗ ಯಾರಾದ್ರೂ ಎಚ್ಚರಿಸಿದ್ರೆ ಸ್ವಲ್ಪ ಕೋಪ ಬರುತ್ತೆ, ನಾನು ಏನೇ ಅಂದ್ರೂ ಬೇಜಾರು ಮಾಡ್ಕೊಬೇಡಿ, ನಾನು ಇಳಿಯಲ್ಲ ಅಂತ ಏನೇ ಹಠ ಮಾಡಿದ್ರೂ ಬಲವಂತವಾಗಿಯಾದ್ರೂ ನನ್ನನ್ನ ಜಲಂಧರ್ ನಲ್ಲಿ ಇಳಿಸಿ ಅಂದ. ಸರಿ, ಟ್ರೈನ್ ಹೊರಟಿತು. ಖೇಮು ತನ್ನ ಕೆಲಸದಲ್ಲಿ ಬ್ಯುಸಿ ಆದ. ಸರಿ ಎಲ್ಲರೂ ನಿದ್ದೆ ಹೋದರು. ಸರ್ದಾರ್‌ಜಿ ಬೆಳಗ್ಗೆ ಎದ್ದು ನೋಡುವಾಗ ಬೆಳಗಾಗಿತ್ತು.
ಇನ್ನೂ ಜಲಂಧರ್ ಬಂದಿಲ್ವಾ ಅಂತ ಹೊರಗೆ ನೋಡಿದಾಗ. ಜಲಂಧರ್ ಆಗ್ಲೇ ಹಿಂದೆ ಹೋಗಿದೆ ಅಂತ ಗೊತ್ತಾಗಿ ಅವನಿಗೆ ಬೇಜಾರು, ಸಿಟ್ಟು ಎರಡೂ ಬಂತು. ಟಿಸಿ ಖೇಮು ಹತ್ರ ಸೀದಾ ಬಂದವನೇ, ನಾನು ಜಲಂಧರ್‌ನಲ್ಲಿ ಇಳಿಸಿ ಅಂತ ಹೇಳಿರಲಿಲ್ವಾ ನಿಮಗೆ, ಆಗಲ್ಲ ಅಂದ್ರೆ ಮೊದ್ಲೇ ಹೇಳಬೇಕಿತ್ತು. ನಾನು ಬೇರೆಯವರಿಗೆ ಹೇಳ್ತಾ ಇದ್ದೆ. ಹಿಂಗಾ ನೀವು ಕೆಲ್ಸ ಮಾಡೋದು ಅಂತ ಕೆಟ್ಟ ಕೆಟ್ಟ ಪದಗಳನ್ನೆಲ್ಲ ಪ್ರಯೋಗಿಸಿ ಹಿಗ್ಗಾ ಮುಗ್ಗಾ ಜಾಡಿಸತೊಡಗಿದ. ಅವನನ್ನು ನೋಡಿ ಖೇಮು ಗರಬಡಿದವನಂತೆ ನಿಂತಿದ್ದನೇ ಹೊರತು ಒಂದು ಮಾತೂ ಆಡಲಿಲ್ಲ.
ಪಕ್ಕದಲ್ಲಿದ್ದ ಇದ್ದ ಜನ, ಖೇಮುವನ್ನು ನೋಡಿ ಅಲ್ರೀ, ಅವನು ನಿಮಗೆ ಅಷ್ಟೊಂದು ಬಯ್ತಾ ಇದ್ದಾನೆ. ಸ್ವಲ್ಪ ಸಮಾಧಾನ ಮಾಡೋದ್ ಬಿಟ್ಟು ಏನ್ ಯೋಚ್ನೆ ಮಾಡ್ತಾ ಇದ್ದೀರ ಅಂತ ಕೇಳಿದ್ರು. ಅದಕ್ಕೆ ಖೇಮು ಮೆಲ್ಲಗೆ ಹೇಳಿದ, ‘ಇವಂದು ಹೋಗ್ಲಿ ಬಿಡಿ, ಆವಾಗ್ಲೇ ನಾನು ಜಲಂಧರ್ ನಲ್ಲಿ ಒಬ್ಬ ಸರ್ದಾರ್‌ಜಿಯನ್ನ, ಬೇಡ ನಾನ್ ಇಳಿಯಲ್ಲ, ಇಳಿಸಬೇಡಿ ಅಂತ ಎಷ್ಟು ಬೇಡಿ ಕೊಂಡ್ರೂ ಕೇಳದೆ, ಒದ್ದು ಒದ್ದು ಟ್ರೈನಿಂದ ಕೆಳಗೆ ಇಳಿಸಿದ್ದೆ. ಆಕ್ಟುಯಲಿ ನಾನು ಅವನ ಪರಿಸ್ಥಿತಿ ಬಗ್ಗೆ ಯೋಚನೆ ಮಾಡ್ತಾ ಇದ್ದೀನಿ’.
ಲೈನ್ ಮ್ಯಾನ್
ದುಡ್ಡಿನ ವಿಚಾರದಲ್ಲಿನ ಫಿಲಾಸಫಿ
- ಹನಿ ಹನಿ ಸೇರಿದ್ರೆ ಹಳ್ಳ, ಹನಿ ಹನಿ ಸೋರಿದ್ರೆ ‘ಹಳ್ಳ’
ಜೀವನ ಅನ್ನೋದು ಒಂಥರಾ ಆರ್ಕೆಸ್ಟ್ರಾ ಇದ್ದಂಗೆ
- ಜೀವನ ಎಂಡ್ ಆಗೋದು ಸ್ಮಶಾನದಲ್ಲಿ
- ಆರ್ಕೆಸ್ಟ್ರಾ ಎಂಡ್ ಆಗೋದು ಕುಲದಲ್ಲಿ ಕೀಳ್ಯಾವುದೋ ಅನ್ನೋ ಸ್ಮಶಾನದ ಸಾಂಗ್‌ನಲ್ಲಿ
ರಸ್ತೆಯಲ್ಲಿ ಅಡ್ಡಾದಿಡ್ಡಿ ಗಾಡಿ ಓಡಿಸುವವರು ಯಾರು?
- ಎಲ್‌ಬೋರ್ಡ್‌ಗಳು, ಎಲ್ಲೋ ಬೋರ್ಡ್ʼಗಳು ಮತ್ತು ಲೇಡಿ ಬರ್ಡ್‌ಗಳು ದೇವಸ್ಥಾನದ ಶಂಖ ಕದ್ದಿದ್ದಾರೆ ಅನ್ನೋ ಆರೋಪದಲ್ಲಿ ಬಂಧಿತರಾದವರು
- ‘ಶಂಖಿ’ತರು
ಗೀತಾ ಪ್ರಕಾರಗಳು
- ಸ್ಯಾಡ್ ಸಾಂಗ್ - ಶೋಕ ಗೀತೆ
- ಡಿವೋಶನಲ್ ಸಾಂಗ್- ಶ್ಲೋಕ ಗೀತೆ
- ಐಟಂ ಸಾಂಗ್- ಶಾಖ ಗೀತೆ
ಮೀಡಿಯಾಗಳು ಮಾಡುವ ಸಾಧಾರಣ ಸಾಧನೆ
- ‘ಮೀಡಿಯಾ’ಕರ್
ಕೆಆರ್‌ಎಸ್‌ನಲ್ಲಿ ಬಳಕೆಗೆ ಯೋಗ್ಯವಲ್ಲದ ನೀರೇ ಜಾಸ್ತಿ ಇದೆಯಂತೆ
- ಬೆಳ್ಳಗಿರುವುದೆಲ್ಲ ಹಾಲಲ್ಲ, ಕೊಳದಲ್ಲಿರುವದೆಲ್ಲ ನೀರಲ್ಲ
ಕಾಳು ಹಾಕಿದ ಮೇಲೆ ಹುಡುಗಿಯ ಪ್ರೀತಿಯಲ್ಲಿ ಬಿದ್ದಾಗ ಬರುವ ಜ್ವರ
- ‘ಹಕ್ಕಿ’ ಜ್ವರ
ಮುಂದುವರೆಯುತ್ತಿರುವ ಟಿವಿ ಚಾನಲ್ ಒಂದರ ಸಾಧನೆ
- ‘ಚನಲ’ಶೀಲತೆ
ಯಾರೋ ಶ್ರೀಮಂತ ಚಿನ್ನದ ಕಾರನ್ನೇ ತೆಗೆದುಕೊಂಡಿದ್ದಾನಂತೆ
- ‘ಉಜ್ಜಿಕೊಂಡು’ ಹೋದವನಿಗೂ ಲಾಭ ಬಿಡಿ.