ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮೋದಿ ಮೂಲಕ ಕಾಣುತ್ತಿರುವ ನವೋತ್ಸಾಹ

ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ, ಇದು ಸಂಪೂರ್ಣ ಕ್ರಿಕೆಟ್ ವೃತ್ತಿಜೀವನಕ್ಕಿಂತಲೂ ಹೆಚ್ಚು. ಮೋದಿಯವರು 2014ರಲ್ಲಿ ಭಾರತದ ಪ್ರಧಾನ ಮಂತ್ರಿಯಾದಾಗಿನಿಂದ ನನ್ನ ತಾಯ್ನಾಡಾದ ಬ್ರಿಟನ್‌ನಲ್ಲಿ ಆರು ಜನ ಪ್ರಧಾನ ಮಂತ್ರಿಗಳು ಬಂದು ಹೋಗಿದ್ದಾರೆ. ಆದ್ದರಿಂದ, ಇಂತಹ ಚೈತನ್ಯಶೀಲ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ದೀರ್ಘಾವಧಿಯಲ್ಲಿ ಅಧಿಕಾರದಲ್ಲಿರುವುದು ಅಸಾಧಾರಣವಾದ ಸಂಗತಿ.

ನವಭಾರತ

ಕೆವಿನ್‌ ಪೀಟರ್ಸನ್

ನಾನು ಮೊದಲು ಭಾರತಕ್ಕೆ ಬಂದದ್ದು 2003ರಲ್ಲಿ. ಆಗ ನರೇಂದ್ರ ಮೋದಿಯವರ ಬಗ್ಗೆ ನನಗೆ ಹೆಚ್ಚು ತಿಳಿದಿರಲಿಲ್ಲವಾದರೂ, ಅವರು ಆಗಲೇ ಎರಡು ವರ್ಷಗಳಿಂದ ಗುಜರಾತಿನ ಮುಖ್ಯಮಂತ್ರಿ‌ ಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಈಗ ಸರ್ಕಾರದ ಮುಖ್ಯಸ್ಥರಾಗಿ 25 ವರ್ಷಗಳನ್ನು ಪೂರೈಸಿದ್ದಾರೆ ಎಂದು ಕೇಳಿದಾಗ ನನಗೆ ಅದೇ ನೆನಪಿಗೆ ಬಂದಿತು. ಯಾವುದೇ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸುದೀರ್ಘವಾದ ಅವಧಿ.

ಕ್ರಿಕೆಟ್ ಭಾಷೆಯಲ್ಲಿ ಹೇಳುವುದಾದರೆ, ಇದು ಸಂಪೂರ್ಣ ಕ್ರಿಕೆಟ್ ವೃತ್ತಿಜೀವನಕ್ಕಿಂತಲೂ ಹೆಚ್ಚು. ಮೋದಿಯವರು 2014ರಲ್ಲಿ ಭಾರತದ ಪ್ರಧಾನ ಮಂತ್ರಿಯಾದಾಗಿನಿಂದ ನನ್ನ ತಾಯ್ನಾಡಾದ ಬ್ರಿಟನ್‌ನಲ್ಲಿ ಆರು ಜನ ಪ್ರಧಾನ ಮಂತ್ರಿಗಳು ಬಂದು ಹೋಗಿದ್ದಾರೆ. ಆದ್ದರಿಂದ, ಇಂತಹ ಚೈತನ್ಯಶೀಲ ಪ್ರಜಾಪ್ರಭುತ್ವದಲ್ಲಿ ಈ ರೀತಿಯ ದೀರ್ಘಾವಧಿಯಲ್ಲಿ ಅಧಿಕಾರದಲ್ಲಿರುವುದು ಅಸಾಧಾರಣವಾದ ಸಂಗತಿ. ನನ್ನ ವಯಸ್ಕ ಜೀವನದ ಬಹುಭಾಗವನ್ನು ನಾನು ಭಾರತಕ್ಕೆ ಭೇಟಿ ನೀಡುವುದರ ಕಳೆದಿದ್ದೇನೆ. ನಾನು ಇಲ್ಲಿ ಕ್ರಿಕೆಟ್ ಆಡಿದ್ದೇನೆ, ದೇಶಾದ್ಯಂತ ಸಂಚರಿಸಿದ್ದೇನೆ, ಅಸಾಧಾರಣ ವ್ಯಕ್ತಿಗಳನ್ನು ಭೇಟಿಯಾಗಿದ್ದೇನೆ, ಇಲ್ಲಿನ ವನ್ಯಪ್ರದೇಶಗಳಲ್ಲಿ ಸಮಯ ಕಳೆದಿದ್ದೇನೆ ಮತ್ತು ಸ್ನೇಹಿತರನ್ನು ಸಂಪಾದಿಸಿದ್ದೇನೆ.

ಒಬ್ಬ ಹೊರಗಿನವನಾಗಿದ್ದರೂ, ನಾನು ಭಾರತದ ಬದಲಾವಣೆಯನ್ನು ಹತ್ತಿರದಿಂದ ಗಮನಿಸಿರುವೆ. ಇಂದು ನನ್ನನ್ನು ಹೆಚ್ಚು ಆಕರ್ಷಿಸುತ್ತಿರುವುದು ಯಾವುದೋ ರಸ್ತೆ, ಕಟ್ಟಡ ಅಥವಾ ನೀತಿಯಲ್ಲ. ಬದಲಾಗಿ, ದೇಶದಾದ್ಯಂತ ಎದ್ದು ಕಾಣುವ ಆತ್ಮವಿಶ್ವಾಸ. ಅದು ಅಹಂಕಾರದ ಭಾವನೆಯಲ್ಲ, ಬದಲಿಗೆ ತಮ್ಮ ಸ್ವಂತ ಭವಿಷ್ಯದ ಬಗೆಗಿನ ಉತ್ಸಾಹಭರಿತ ನಂಬಿಕೆ. ನಾನು ಮೊದಲಿಗೆ ಭಾರತಕ್ಕೆ ಬಂದಾಗ, ಇದು ಅದ್ಭುತ ಪ್ರತಿಭೆಯನ್ನು ಹೊಂದಿರುವ ವಿಶಾಲ ದೇಶ ಎಂದು ನನಗೆ ತಿಳಿದಿತ್ತು. ಆದರೆ ಇಲ್ಲಿ ಒಂದು ರೀತಿಯ ಹಿಂಜರಿಕೆಯೂ ಇತ್ತು, ಅಂದರೆ ತಮ್ಮ ಸ್ವಂತ ಸಾಮರ್ಥ್ಯದ ಬಗ್ಗೆ ಪೂರ್ಣ ಅರಿವು ಇಲ್ಲದಂತೆ ಭಾಸವಾಗುತ್ತಿತ್ತು. ಆದರೆ ಇಂದು ಪರಿಸ್ಥಿತಿ ಭಿನ್ನವಾಗಿದೆ. ಭಾರತೀಯರು ನಾವು ಇದನ್ನು ಸಾಧಿಸಬಲ್ಲೆವು ಎಂದು ದೃಢವಾಗಿ ಹೇಳಬಲ್ಲವರಾಗಿದ್ದಾರೆ. ಅವರು ದೊಡ್ಡದಾಗಿ ಯೋಚಿಸುತ್ತಾರೆ.

ಇದನ್ನೂ ಓದಿ: Kiran Upadhyay Column: ಇಸ್ರೇಲ್‌ ಇಲೆಕ್ಷನ್‌ʼನ ಯೋಗಿ, ಅಮಿತ್‌ ಶಾ

ಕಠಿಣ ಪೈಪೋಟಿ ನೀಡುತ್ತಾರೆ. ಅಹಂಕಾರವಿಲ್ಲದೆ ಆತ್ಮವಿಶ್ವಾಸದಿಂದ ಇರುತ್ತಾರೆ. ಅವರು ತಮ್ಮಿಂದ ಮತ್ತು ತಮ್ಮ ದೇಶದಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ. ಕ್ರೀಡೆಯಲ್ಲಿ ನಾನು ಇದನ್ನು ಬಹಳ ಸ್ಪಷ್ಟವಾಗಿ ಕಂಡಿದ್ದೇನೆ. ಉದಾಹರಣೆಗೆ ಭಾರತೀಯ ಕ್ರಿಕೆಟ್ ಅನ್ನೇ ತೆಗೆದುಕೊಳ್ಳಿ. ನಾನು ಮೊದಲು ಭಾರತಕ್ಕೆ ಬಂದಾಗ, ಅದ್ಭುತ ಆಟಗಾರರಿದ್ದರು ಮತ್ತು ಕ್ರಿಕೆಟ್ ಬಗ್ಗೆ ಅಪಾರ ಉತ್ಸಾಹವಿತ್ತು. ಆದರೆ ಭಾರತದ ಯಶಸ್ಸು ಹೆಚ್ಚಾಗಿ ಕೆಲವೇ ಕೆಲವು ಅಸಾಧಾರಣ ಪ್ರತಿಭೆಯುಳ್ಳ ‘ಸೂಪರ್ ಸ್ಟಾರ್’ಗಳನ್ನು ಅವಂಬಿಸಿತ್ತು.

ಇಂದು, ಭಾರತೀಯ ತಂಡಗಳಲ್ಲಿ ಇರುವ ಸಂಪೂರ್ಣ ತಂಡದ ಪ್ರತಿಭೆಗಳು ಅಸಾಧಾರಣವಾಗಿದೆ. ಆಟವಾಡಲು ಕಾಯತ್ತಿರುವ ಕ್ರೀಡಾ ತಂಡದ ಸದಸ್ಯರು ವಿಶ್ವದ ಅತ್ಯುತ್ತಮ ತಂಡಗಳನ್ನೂ ಸೋಲಿಸಬಲ್ಲ ಸಾಮರ್ಥ್ಯ ಹೊಂದಿರುವರು. ಯುವ ಆಟಗಾರರು ತಾವು ಅತ್ಯುನ್ನತ ಮಟ್ಟಕ್ಕೆ ಅರ್ಹರು ಎಂಬ ದೃಢವಿಶ್ವಾಸದೊಂದಿಗೆ ಮೈದಾನಕ್ಕೆ ಇಳಿಯುತ್ತಾರೆ. ಫಿಟ್ನೆಸ್, ಪೂರ್ವ ತಯಾರಿ ಮತ್ತು ವೃತ್ತಿಪರತೆಯ ಮಾನದಂಡಗಳು ಅಪಾರವಾಗಿ ಬದಲಾಗಿವೆ. ಪುರುಷರ ತಂಡವು ಯಾವಾಗಲೂ ಪ್ರಬಲವಾಗಿದ್ದರೂ, ಭಾರತದಲ್ಲಿ ಮಹಿಳಾ ಕ್ರಿಕೆಟ್ ಎಷ್ಟು ದೂರ ಸಾಗಿದೆ ಎಂಬುದನ್ನು ನೋಡಲು ವಿಶೇಷವಾಗಿ ಸಂತೋಷ ತಂದಿದೆ. ಕಳೆದ ವರ್ಷ ಅವರ ವಿಶ್ವಕಪ್ ಗೆದ್ದಿರುವುದು ಈ ಬೆಳವಣಿಗೆಗೆ ಮತ್ತೊಂದು ಉದಾಹರಣೆಯಾಗಿದೆ. ಭಾರತವು ಕ್ರಿಕೆಟ್‌ನ ಮಹಾನ್ ಶಕ್ತಿಯಾಗಿದೆ, ಹಾಗಾಗಿ ಇಲ್ಲಿ ಮಹಿಳಾ ಕ್ರಿಕೆಟ್ ಬೆಳೆದು ಯಶಸ್ವಿಯಾದಾಗ, ಅದರ ಪ್ರಭಾವವು ಭಾರತದ ಗಡಿಗಳನ್ನು ಮೀರಿ ಜಗತ್ತಿನಾದ್ಯಂತ ಪಸರಿಸುತ್ತದೆ. ಇದು ವಿಶ್ವದಾದ್ಯಂತ ಮಹಿಳಾ ಕ್ರಿಕೆಟ್‌ನ ಮಟ್ಟವನ್ನು ಹೆಚ್ಚಿಸುತ್ತದೆ. ‌

72 k

ಅಥ್ಲೆಟಿಕ್ಸ್, ಶೂಟಿಂಗ್, ಕುಸ್ತಿ, ಬಾಕ್ಸಿಂಗ್, ಬ್ಯಾಡ್ಮಿಂಟನ್, ಹಾಕಿ, ಟೆನ್ನಿಸ್ ಮತ್ತು ಇತರ ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಜಗತ್ತಿನಾದ್ಯಂತ ಹೊಸ ಛಾಪನ್ನು ಮೂಡಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಹಿಂದೆ ಹೆಚ್ಚು ಪರಿಚಯವಿರದ ಕ್ರೀಡೆಗಳಲ್ಲಿಯೂ ಭಾರತೀಯರ ಹೆಸರುಗಳು ಪದಕ ವಿಜೇತರ ವೇದಿಕೆಗಳಲ್ಲಿ ಮತ್ತು -ನಲ್‌ಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ವಿವಿಧ ವಿಭಾಗಗಳಲ್ಲಿ ಭಾರತದ ಇತ್ತೀಚಿನ ಸಾಧನೆಗಳು ಇಲ್ಲಿನ ಕ್ರೀಡಾ ಕ್ಷೇತ್ರವು ಎಷ್ಟು ವಿಸ್ತಾರಗೊಂಡಿದೆ ಎಂಬುದಕ್ಕೆ ಮತ್ತೊಂದು ಸಾಕ್ಷಿಯಾಗಿದೆ. ಇಂತಹ ಬದಲಾವಣೆಗಳು ಆಕಸ್ಮಿಕವಾಗಿ ಸಂಭವಿಸುವುದಿಲ್ಲ. ಇದಕ್ಕೆ ಉತ್ತಮ ಸೌಲಭ್ಯಗಳು, ಉತ್ತಮ ವ್ಯವಸ್ಥೆಗಳು ಮತ್ತು ಯುವಕರು ಅತ್ಯುನ್ನತ ಮಟ್ಟದಲ್ಲಿ ಸ್ಪರ್ಧಿಸ ಬಹುದು ಎಂಬ ನಂಬಿಕೆಯನ್ನು ಮೂಡಿಸುವ ಸಂಸ್ಕೃತಿಯ ಅಗತ್ಯವಿರುತ್ತದೆ.

ಭಾರತದಲ್ಲಿ ಸ್ಪಷ್ಟವಾದ ಕ್ರೀಡಾ ಸಂಸ್ಕೃತಿ ರೂಪುಗೊಳ್ಳುತ್ತಿದ್ದು, ಕ್ರೀಡೆಗಳ ಬಗ್ಗೆ ಖುದ್ದು ಮೋದಿ ಯವರಿಗಿರುವ ಉತ್ಸಾಹವು ಖಂಡಿತವಾಗಿಯೂ ಇದಕ್ಕೆ ಹೆಚ್ಚಿನ ಚೈತನ್ಯ ನೀಡಿದೆ. ಇದರ ಪ್ರಭಾವವನ್ನು ಕ್ರೀಡೆಯಲ್ಲಿ ಮಾತ್ರವಲ್ಲದೆ, ಸಾಮಾನ್ಯ ಜೀವನದಲ್ಲೂ ಕಾಣಬಹುದು. ಮೋದಿ ಯವರ ‘ಫಿಟ್ ಇಂಡಿಯಾ’ ಕರೆಯು ದೇಶಾದ್ಯಂತ ಗೋಚರಿಸುವ ಬದಲಾವಣೆಯನ್ನು ಪ್ರೋತ್ಸಾಹಿಸಿದೆ ಮತ್ತು ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.

ಯುವ ಭಾರತೀಯರು ಮ್ಯಾರಥಾನ್ ಗಳಲ್ಲಿ ಓಡುತ್ತಿದ್ದಾರೆ, ಹೊಸ ರೀತಿಯ ಫಿಟ್ನೆಸ್ ರೂಢಿಸಿ ಕೊಳ್ಳುತ್ತಿದ್ದಾರೆ ಮತ್ತು ಒಂದು ತಲೆಮಾರಿನ ಹಿಂದೆ ಅಸಾಧ್ಯವೆಂದು ತೋರುತ್ತಿದ್ದ ರೀತಿಯಲ್ಲಿ ತಮ್ಮನ್ನು ತಾವು ಸವಾಲಿಗೆ ಒಡ್ಡಿಕೊಳ್ಳುತ್ತಿದ್ದಾರೆ. ನರೇಂದ್ರ ಮೋದಿಯವರು ಸ್ವತಃ ಯೋಗಾಭ್ಯಾಸ ಮಾಡುತ್ತಾರೆಂದು ತಿಳಿದಾಗ ನನಗೆ ತುಂಬಾ ಅಚ್ಚರಿಯಾಯಿತು. ನಾನು ಅವರನ್ನು ಭೇಟಿಯಾಗಿದ್ದೇನೆ ಮತ್ತು ಅವರಲ್ಲಿರುವ ಚೈತನ್ಯವನ್ನು ಕಂಡಿದ್ದೇನೆ; ಆದರೆ ಯೋಗವು ಅವರ ದೈನಂದಿನ ದಿನಚರಿಯ ಭಾಗವಾಗಿದೆ ಎಂದು ತಿಳಿದಾಗ ನನಗೆ ಸಂತೋಷವಾಯಿತು. ಇದು ಅಪ್ಪಟ ಭಾರತೀಯವೂ ಹೌದು ಹಾಗೂ ಅತ್ಯಂತ ಆಧುನಿಕವೂ ಹೌದು.

ಹಾಗಾಗಿ ಯೋಗವು ಜಗತ್ತಿನ ಮೂಲೆ ಮೂಲೆಗೂ ತಲುಪಿರುವುದಲ್ಲಿ ಆಶ್ಚರ್ಯವೇನಿಲ್ಲ. 2014ರಲ್ಲಿ ವಿಶ್ವಸಂಸ್ಥೆಯಲ್ಲಿ ಮೋದಿಯವರೇ ಮೊದಲು ಪ್ರಸ್ತಾಪಿಸಿದ ‘ಅಂತಾರಾಷ್ಟ್ರೀಯ ಯೋಗ ದಿನ’ವು ಈಗ ಜಾಗತಿಕವಾಗಿ ಆಚರಿಸಲ್ಪಡುತ್ತಿದೆ. ಭಾರತವು ಮಾನಸಿಕವಾಗಿ ಮಾತ್ರವಲ್ಲದೆ ಭೌತಿಕವಾಗಿಯೂ ಬದಲಾಗಿದೆ. ನಾನು ಭಾರತದಲ್ಲಿ ಸಂಚರಿಸುವಾಗಲೆಲ್ಲಾ ಇದನ್ನು ಗಮನಿಸುತ್ತೇನೆ. ವಿಮಾನ ನಿಲ್ದಾಣಗಳು ಬದಲಾಗಿವೆ. ರಸ್ತೆಗಳು ಮತ್ತು ಮೆಟ್ರೋಗಳು ಬದಲಾಗಿವೆ. ಹೋಟೆಲ್‌ಗಳು ಮತ್ತು ಅಲ್ಲಿನ ಗುಣಮಟ್ಟಗಳೂ ಬದಲಾಗಿವೆ. ಹಿಂದೆ ನನ್ನ ತಾಯ್ನಾಡಿನಲ್ಲಿರುವ ಸ್ನೇಹಿತರು ಭಾರತದ ಬಿಸಿಲು, ಜನದಟ್ಟಣೆ ಮತ್ತು ಆಹಾರದ ಬಗ್ಗೆ ಕೇಳುತ್ತಿದ್ದರು. ಆದರೆ ಈಗ ಅವರು ಭಾರತ ಕಳುಹಿಸಿದ ಕೋವಿಡ್-೧೯ ಲಸಿಕೆಗಳು, ಭಾರತದ ನವೋದ್ಯಮಗಳು, ಚಂದ್ರನ ಅಂಗಳದಲ್ಲಿ ನೌಕೆ ಇಳಿದಿರುವುದು ಮತ್ತು ಡಿಜಿಟಲ್ ಪಾವತಿಗಳ ಬಗ್ಗೆ ಮಾತನಾಡುತ್ತಾರೆ.

ಇಲ್ಲಿ ಜನರು ತಂತ್ರಜ್ಞಾನವನ್ನು ಬಳಸುವ ರೀತಿ ಅದ್ಭುತವಾಗಿದೆ. ಬೀದಿ ಬದಿ ವ್ಯಾಪಾರಿಗಳು ಸಹ ಕ್ಯೂಆರ್ ಕೋಡ್‌ಗಳ ಮೂಲಕ ಹಣ ಪಾವತಿಸಿಕೊಳ್ಳುತ್ತಿದ್ದಾರೆ. ಇಂತಹ ಸಂಗತಿಗಳು ವಿಶ್ವದ ಹಲವು ಭಾಗಗಳಲ್ಲಿ ಭವಿಷ್ಯದ ಕಲ್ಪನೆಯಂತೆ ಅನಿಸಬಹುದು, ಆದರೆ ಭಾರತದಲ್ಲಿ ಅವು ಈಗಾಗಲೇ ದೈನಂದಿನ ಜೀವನದ ಭಾಗವಾಗಿವೆ. ಭಾರತವು ದೊಡ್ಡದಾಗಿ ಯೋಚಿಸಲು ಹೆಚ್ಚು ಒಗ್ಗಿಕೊಂಡಿದೆ ಹೆಚ್ಚು ಮುಕ್ತವಾಗಿದೆ. ವಿಶೇಷವಾಗಿ ಗುಜರಾತನ್ನು ನೆನಪಿಸಿಕೊಳ್ಳುತ್ತೇನೆ. ಇದು ವಿಶ್ವದ ಅತಿ ದೊಡ್ಡ ಕ್ರಿಕೆಟ್ ಕ್ರೀಡಾಂಗಣ ಮತ್ತು ವಿಶ್ವದ ಅತ್ಯಂತ ಎತ್ತರದ ಪ್ರತಿಮೆಯನ್ನು ಹೊಂದಿದೆ.

ಸಣ್ಣದಾಗಿ ಯೋಚಿಸುವ ಮೂಲಕ ಯಾರೂ ಇಂತಹ ಬೃಹತ್ ಮಟ್ಟದಲ್ಲಿ ನಿರ್ಮಾಣ ಮಾಡಲು ಸಾಧ್ಯವಿಲ್ಲ. ರಾಜಕೀಯವಾಗಿ ಮೋದಿಯವರ ಬಗ್ಗೆ ಏನೇ ಅಭಿಪ್ರಾಯವಿರಲಿ, ದೊಡ್ಡ ಪ್ರಮಾಣ ದಲ್ಲಿ ಮತ್ತು ಸಾಧ್ಯತೆಗಳ ದೃಷ್ಟಿಯಿಂದ ಯೋಚಿಸುವ ಪ್ರವೃತ್ತಿ ಅವರಲ್ಲಿದೆ ಎಂಬುದು ಸ್ಪಷ್ಟ. ಜಗತ್ತಿನಲ್ಲಿ ತನ್ನ ಸ್ಥಾನದ ಬಗ್ಗೆ ಭಾರತ ಮಾತನಾಡುವ ರೀತಿಯಲ್ಲೂ ನಾನು ಅದೇ ಪ್ರವೃತ್ತಿಯನ್ನು ಕಂಡಿದ್ದೇನೆ. ಭಾರತವು ಮುನ್ನಡೆಸಲು, ಸ್ಪರ್ಧಿಸಲು, ನಿರ್ಮಿಸಲು, ನಾವೀನ್ಯತೆ ತರಲು ಮತ್ತು ತನ್ನ ಧ್ವನಿಯನ್ನು ಜಗತ್ತಿಗೆ ಕೇಳಿಸಲು ಬಯಸುತ್ತದೆ. ಪ್ರಕೃತಿಯು ನನ್ನ ಹೃದಯಕ್ಕೆ ಅತ್ಯಂತ ಹತ್ತಿರವಾದ ವಿಷಯವಾಗಿದೆ.

ನಾನು ಕಾಜಿರಂಗದಲ್ಲಿ ಸಮಯ ಕಳೆದಿದ್ದೇನೆ ಮತ್ತು ಖಡ್ಗಮೃಗಗಳ ಸಂರಕ್ಷಣೆಯ ಬಗ್ಗೆ ನನಗೆ ಅಪಾರ ಕಾಳಜಿಯಿದೆ. ಭಾರತದ ವನ್ಯಜೀವಿಗಳನ್ನು ರಕ್ಷಿಸಲು ನಡೆಯುತ್ತಿರುವ ಕೆಲಸಗಳನ್ನು ನಾನು ಕಣ್ಣಾರೆ ಕಂಡಿದ್ದೇನೆ ಮತ್ತು ಅದನ್ನು ಅಪಾರವಾಗಿ ಮೆಚ್ಚುತ್ತೇನೆ. ಭಾರತವು ತನ್ನ ಖಡ್ಗಮೃಗಗಳು ಮತ್ತು ಹುಲಿಗಳನ್ನು ರಕ್ಷಿಸುವಲ್ಲಿ ಮಹತ್ವದ ಪ್ರಗತಿ ಸಾಧಿಸಿದೆ. ನಂತರ ಇಡೀ ದೇಶದ ಗಮನ ಸೆಳೆದ ಚೀತಾಗಳ ಮರುಪರಿಚಯವು ನಡೆಯಿತು. ಗುಜರಾತಿನ ಅಪರೂಪದ ಏಷ್ಯನ್ ಸಿಂಹಗಳ ಸಂರಕ್ಷಣೆಯ ಬಗ್ಗೆಯೂ ನಾನು ತಿಳಿದುಕೊಂಡಿದ್ದೇನೆ. ನಾನು ಮೋದಿಯವ ರನ್ನು ಭೇಟಿಯಾದಾಗ ವನ್ಯಜೀವಿಗಳ ಬಗ್ಗೆ ಅವರಲ್ಲಿದ್ದ ಉತ್ಸಾಹ ಸ್ಪಷ್ಟವಾಗಿ ಗೋಚರಿಸಿತು.

ನಾವು ಚೀತಾಗಳನ್ನು ಕಾಡಿಗೆ ಬಿಡುವ ಬಗ್ಗೆ ಉತ್ಸಾಹದಿಂದ ಮಾತನಾಡಿದೆವು ಮತ್ತು ಅದರಿಂದ ಅವರು ಎಷ್ಟು ರೋಮಾಂಚನಗೊಂಡಿದ್ದರು ಎಂಬುದನ್ನು ನಾನು ಗಮನಿಸಿದೆ. ಅವರು ‘ಅಂತಾರಾಷ್ಟ್ರೀಯ ಬಿಗ್ ಕ್ಯಾಟ್ ಅಲಯ’ ಸ್ಥಾಪನೆಗೂ ಸಹಾಯ ಮಾಡಿದ್ದು, ದೊಡ್ಡ ಬೆಕ್ಕಿನ ಜಾತಿಗೆ ಸೇರಿದ ಪ್ರಾಣಿಗಳ ಸಂರಕ್ಷಣೆಗಾಗಿ ದೇಶಗಳನ್ನು ಒಗ್ಗೂಡಿಸುವಲ್ಲಿ ಭಾರತವು ನಾಯಕತ್ವ ವನ್ನು ವಹಿಸಿದೆ. ಇದು ಇಂದಿನ ಭಾರತದ ಬಗ್ಗೆ ನನಗೆ ಅಚ್ಚರಿ ತರುವ ಸಂಗತಿ. ಕ್ಷಿಪ್ರ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಯನ್ನು ಸಾಧಿಸುತ್ತಿರುವ ಅದೇ ದೇಶವು, ಪ್ರಾಣಿಗಳನ್ನು ರಕ್ಷಿಸುವ ಮತ್ತು ತನ್ನ ಪ್ರಾಕೃತಿಕ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿಯೂ ಆಳವಾಗಿ ತೊಡಗಿಸಿಕೊಂಡಿದೆ.

2022ರಲ್ಲಿ, ಮೋದಿಯವರ ಕಡೆಯಿಂದ ಬಂದ ಅದ್ಭುತ ಪತ್ರವನ್ನು ಸ್ವೀಕರಿಸಿದ ನಂತರ ನಾನು ಒಂದು ಪೋ ಬರೆದಿz. ಅದರಲ್ಲಿ ನಾನು 2003ರಲ್ಲಿ ಭಾರತಕ್ಕೆ ಕಾಲಿಟ್ಟಾಗಿನಿಂದ, ಇಲ್ಲಿಗೆ ಬರುವ ಪ್ರತಿ ಸಲವೂ ದೇಶದ ಮೇಲಿನ ನನ್ನ ಪ್ರೀತಿ ಹೆಚ್ಚುತ್ತಲೇ ಬಂದಿದೆ ಎಂದು ತಿಳಿಸಿದ್ದೆ.

ಭಾರತದಲ್ಲಿ ನನಗೆ ಅತ್ಯಂತ ಇಷ್ಟವಾದದ್ದು ಯಾವುದು ಎಂದು ಕೇಳಿದರೆ ನನ್ನ ಉತ್ತರ ಸರಳ: ಅದು ಇಲ್ಲಿನ ಜನರು. ಇಂದಿಗೂ, ಇಲ್ಲಿನ ಜನರೇ ನಾನು ಪದೇ ಪದೆ ಭಾರತಕ್ಕೆ ಬರಲು ಪ್ರೇರಣೆ. ಇಪ್ಪತ್ತೈದು ವರ್ಷಗಳು ಅಸಾಧಾರಣ ಮೈಲಿಗಲ್ಲು. ಈ ಸುದೀರ್ಘ ಪ್ರಯಾಣಕ್ಕಾಗಿ ಮೋದಿಯವರಿಗೆ ಅಭಿನಂದನೆ ಗಳನ್ನು ಸಲ್ಲಿಸುತ್ತೇನೆ ಮತ್ತು ಅವರಿಗೆ ಉತ್ತಮ ಆರೋಗ್ಯ ಹಾಗೂ ಇನ್ನೂ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸುವಂತಾಗಲಿ ಎಂದು ಹಾರೈಸುತ್ತೇನೆ. ದೇಶವು ರೋಚಕವಾದ ಹೊಸ ಅಧ್ಯಾಯದತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಭಾರತಕ್ಕೆ ಶುಭ ಹಾರೈಸುತ್ತೇನೆ. (ಲೇಖಕರು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕರು