ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vinayaka V Bhat Column: ಅಭಂಗವಾರಿ: ಭಾರತೀಯ ಭಜನಾ ಸಂಸ್ಖೃತಿಯ ಪುನರುತ್ಥಾನ

ಭಜನೆ ಎನ್ನುವುದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವೇ ಆಗಿದೆ. ಬೆಳಗ್ಗೆ ಎದ್ದೇಳುವಾಗಿ ನಿಂದ ಹಿಡಿದು ರಾತ್ರಿ ಮಲಗುವವರೆಗೆ, ಊಟ ಮಾಡುವಾಗ, ಅಷ್ಟೇಕೆ ಸಂಗಾತಿಯೊಡನೆ ಸರಸವಾಡು ವಾಗಲೂ ಪ್ರತಿಕ್ಷಣಕ್ಕೂ ಭಜನೆ ಯುಕ್ತವಾಗಿದೆ ಎಂಬುದಾಗಿ ‘ಕೃಷ್ಣ ಎನಬಾರದೆ..’ ಎಂಬ ಪ್ರಸಿದ್ಧ ಕೀರ್ತನೆಯಲ್ಲಿ ಪುರಂದರದಾಸರು ಹೇಳುತ್ತಾರೆ.

ವಿದ್ಯಮಾನ

vinayakavbhat@autoaxle.com

ಯಾವುದೇ ದೇಶದ ಜನಪದಕ್ಕೆ ಅದರದ್ದೇ ಆದ ಸಂಸ್ಕೃತಿಗಳಿರುತ್ತವೆ. ಹಾಗೆ ನೋಡಿದರೆ, ದೇಶಗಳು ತಮ್ಮ ಸಂಸ್ಕೃತಿಗಳಿಂದಾಗಿಯೇ ತಮ್ಮದೇ ಆದ ಪ್ರತ್ಯೇಕತೆಯನ್ನು ದಕ್ಕಿಸಿಕೊಳ್ಳುತ್ತವೆ. ಇನ್ನು ಭಾರತವಂತೂ ತನ್ನ ವೈವಿಧ್ಯಮಯ ಸಂಸ್ಕೃತಿಗಳಿಂದಲೇ ಜಗತ್ತಿನಾದ್ಯಂತ ಆದರಕ್ಕೆ ಪಾತ್ರವಾಗಿದೆ. ಅದು ಯೋಗವಿರಬಹುದು, ಧ್ಯಾನ, ಸಿದ್ಧೌಷಧ, ಸಂಗೀತ-ಸಾಹಿತ್ಯ ಅಥವಾ ವಿವಿಧ ಹಬ್ಬಗಳ ಆಚರಣೆ ಇರಬಹುದು.

ಶಾಸ್ತ್ರೀಯವೂ ವೈಜ್ಞಾನಿಕವೂ ಆದ, ಪರಂಪರಾಗತವಾಗಿ ಹರಿದುಕೊಂಡು ಬರುತ್ತಿರುವ ಇಂಥ ಅನೇಕ ವೈಶಿಷ್ಟ್ಯಪೂರ್ಣ ಜೀವನಕ್ರಮದಿಂದಾಗಿ ಭಾರತ ಸಮೃದ್ಧವಾಗಿದೆ. ಇಂಥ ಸಂಸ್ಕೃತಿಗಳ ಸಮೂಹದ ಪೈಕಿ ನಾನು ಹೇಳಹೊರಟಿರುವುದು, ವಿಶಿಷ್ಟ ಭಜನಾ ಸಂಸ್ಕೃತಿಯ ಕುರಿತು. ಭಾರತ ದಲ್ಲಿ ಅನಾದಿಯಿಂದಲೂ ‘ಭೋಜನ’ಕ್ಕಿಂತ ಮೊದಲು ‘ಭಜನೆ’ಗೆ ಪ್ರಧಾನ ಸ್ಥಾನವನ್ನು ಕೊಟ್ಟಿರು ವುದು ಕಂಡುಬರುತ್ತದೆ.

ಭಜನೆ ಎನ್ನುವುದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವೇ ಆಗಿದೆ. ಬೆಳಗ್ಗೆ ಎದ್ದೇಳುವಾಗಿ ನಿಂದ ಹಿಡಿದು ರಾತ್ರಿ ಮಲಗುವವರೆಗೆ, ಊಟಮಾಡುವಾಗ, ಅಷ್ಟೇಕೆ ಸಂಗಾತಿಯೊಡನೆ ಸರಸ ವಾಡುವಾಗಲೂ ಪ್ರತಿಕ್ಷಣಕ್ಕೂ ಭಜನೆ ಯುಕ್ತವಾಗಿದೆ ಎಂಬುದಾಗಿ ‘ಕೃಷ್ಣ ಎನಬಾರದೆ..’ ಎಂಬ ಪ್ರಸಿದ್ಧ ಕೀರ್ತನೆಯಲ್ಲಿ ಪುರಂದರದಾಸರು ಹೇಳುತ್ತಾರೆ.

ಇದನ್ನೂ ಓದಿ: Vinayak V Bhat Column: ಕಂಡವರೆಲ್ಲ ಮಾತಾಡುವಾಗ ಖಾವಂದರದೇಕೆ ಮೌನ ?

“ನರಜನ್ಮ ಬಂದಾಗ ನಾಲಿಗೆ ಇರುವಾಗ, ಮಲಗಿದ್ದು ಮೈಮುರಿದು ಏಳುತಲೊಮ್ಮೆ, ಸುಳಿದಾಡುತ ಮನೆಯೊಳಗಾದರು ಒಮ್ಮೆ, ಮೇರೆ ತಪ್ಪಿ ಮಾತಾಡುವಾಗಲೊಮ್ಮೆ, ದೊಡ್ಡದಾರಿಯ ನಡೆದಾಗ ಹಾಗೂ ಭಾರವ ಹೊರುವಾಗ, ಗಂಧವ ಪೂಸಿ ತಾಂಬೂಲವ ಮೆಲುವಾಗ, ತನ್ನ ಮಂದಗಮನೆ ಕೂಡ ಸರಸವಾಡುತಲೊಮ್ಮೆ, ಪರಿಹಾಸ್ಯದ ಮಾತಾಡುತಲೊಮ್ಮೆ, ಪರಿಪರಿ ಕೆಲಸದೊಳೊಂದು ಕೆಲಸವೆಂದು, ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ, ಬಹು ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ, ನೀಗದಾಲೋಚನೆ ರೋಗೋಪದ್ರವದಲೊಮ್ಮೆ ಹಾಗೂ ಒಳ್ಳೆ ಭೋಗ ಪಡೆದು ಅನುರಾಗದಿಂದಿರುವಾಗಲಾದರೂ ಕೃಷ್ಣಾ ಎನಬಾರದೆ" ಎಂದು ಕೇಳುತ್ತಾರೆ ದಾಸರು.

ಹೀಗೆ ದಕ್ಷಿಣದೇಶದಲ್ಲಿ ದಾಸರುಗಳು,ಆಳ್ವಾರರುಗಳು ಬಹುದೊಡ್ಡ ಭಜನಾ ಸಾಹಿತ್ಯವನ್ನೇ ಸೃಷ್ಟಿ ಮಾಡಿಟ್ಟಿರುವುದನ್ನು ನೋಡುವಾಗ, ಹಿಂದೆ ಭಜನೆಗೆ ಎಷ್ಟು ಮಹತ್ವವನ್ನು ನೀಡಲಾಗಿತ್ತು ಎನ್ನುವುದು ತಿಳಿದು ಬರುತ್ತದೆ. ಪ್ರಯತ್ನ ನಿಷ್ಫವಾಗಬಹುದು, ಆದರೆ ಪ್ರಾರ್ಥನೆಯು ಫಲವನ್ನು ನೀಡೇ ನೀಡುತ್ತದೆ ಎನ್ನುವ ನಂಬಿಕೆ ಭಾರತೀಯರದ್ದಾಗಿದೆ.

ಅದರಲ್ಲೂ ಸಾರ್ವತ್ರಿಕ ಭಜನೆ ಎನ್ನುವುದು ನಮಗೆ ಸಂಪ್ರದಾಯವೇ ಆಗಿದೆ ಮತ್ತು ಅದಕ್ಕೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಎಲ್ಲ ದೇವರುಗಳ ಕುರಿತು ಭಜನೆಯಿರುವುದಾದರೂ ಹರಿಯು ಭಜನಾಪ್ರಿಯನಾದ್ದರಿಂದ ‘ಹರಿಭಜನೆ’ಗೆ ದಾಸರುಗಳು ಹೆಚ್ಚು ಒತ್ತುಕೊಟ್ಟಿದ್ದಾರೆ. ಬಹಳ ಹಿಂದೆ ಹೋಗುವುದು ಬೇಡ, ನಾವೆಲ್ಲ ಚಿಕ್ಕಂದಿನಲ್ಲಿದ್ದಾಗ ಹಳ್ಳಿಗಳಲ್ಲಿ ಮುಸ್ಸಂಜೆಯಲ್ಲಿ ಪ್ರತಿಮನೆಯಲ್ಲಿ ಭಜನೆಯ ನಾದ ಕೇಳುತ್ತಿತ್ತು. ಇನ್ನು ಮಠ-ಮಂದಿರಗಳಲ್ಲಂತೂ ನಿತ್ಯ ಭಜನೆಯ ಪದ್ಧತಿ ಇತ್ತು.

7 R

ಕೆಲವು ಕಡೆ ಈಗಲೂ ಇದೆ ಎನ್ನಿ. ಈ ಭಜನೆಗೆ ಜಾತಿ ಮತಗಳ ಅಥವಾ ಸ್ತ್ರೀ ಪುರುಷ ಎನ್ನುವ ಭೇದ ಇಲ್ಲದಿರುವುದು ಇನ್ನೊಂದು ವಿಶೇಷ. ಯಾರು ಬೇಕಾದರೂ ತಮಗಿಷ್ಟವಾದ ಭಜನೆಗಳನ್ನು ಹೇಳಿಕೊಳ್ಳಬಹುದು. ಭಜಕ ಮತ್ತು ಭಗವಂತನನ್ನು ಬೆಸೆಯುವ ಉತ್ತಮ ಸಾಧನವಾಗಿ ಭಜನೆ ಯೆಂಬ ಭಕ್ತಿಯ ಸಾಧನವನ್ನು ರೂಢಿಸಿಕೊಳ್ಳಲಾಗಿತ್ತು.

ಅನೇಕ ಮಠ-ಮಂದಿರಗಳಲ್ಲಿ ಶ್ರಾವಣ ಅಥವಾ ಕಾರ್ತೀಕಮಾಸದಲ್ಲಿ ವಾರ್ಷಿಕವಾಗಿ ಏಳುದಿನ ಅಹೋರಾತ್ರಿ ಭಜನೆ ಮಾಡುವ ಕ್ರಮವೂ ಇತ್ತು. ಈ ಕಾರ್ಯಕ್ರಮವನ್ನು ಭಜನಾ ಸಪ್ತಾಹವೆಂದು ಕರೆಯಲಾಗುತ್ತದೆ. ಈಗ ಈ ಸಪ್ತಾಹಕ್ರಮದ ಭಜನೆ ಅಪರೂಪವಾಗಿದ್ದರೂ, ಕೆಲವು ಕಡೆ ಇನ್ನೂ ನಡೆದುಕೊಂಡುಬರುತ್ತಿರುವುದು ಕಾಣುತ್ತದೆ. ರಾಜ್ಯದ ಕುಮಟಾ ತಾಲೂಕಿನ ಅಘನಾಶಿನಿ ನದೀ ತೀರದಲ್ಲಿ ದೀವಗಿ ಎನ್ನುವ ಊರಿದೆ. ಅಲ್ಲಿ ತಪಸ್ವಿಗಳಾಗಿದ್ದ ಶ್ರೀ ರಾಮಾನಂದ ಅವಧೂತರ ಆಶ್ರಮವಿದೆ.

ಇಲ್ಲಿ ಬಹಳ ಕಾಲದಿಂದ ಸಪ್ತಾಹ ಕ್ರಮದಲ್ಲಿ ಭಜನೆ ನಡೆಯುತ್ತಿದೆ. ಸರಿಸುಮಾರು ನಾಲ್ಕು ದಶಕ ಗಳಿಂದ, ಕೇವಲ ‘ಶ್ರೀರಾಮ ಜಯರಾಮ ಜಯಜಯ ರಾಮ’ ಎನ್ನುವ ತಾರಕಮಂತ್ರ ಪೂರ್ವಕ ವಾಗಿ ಅಹರ್ನಿಶಿ ಏಳುದಿನ ಭಜನೆ ನಡೆಯುತ್ತದೆ. ಅನೇಕ ಗಾಯಕರು, ಯಕ್ಷಗಾನದ ಭಾಗವತರು ಗಳು ಈ ರಾಮನಾಮವನ್ನು ತಮ್ಮ ಪದ್ಧತಿಯ ಗಾಯನಕ್ಕೆ ಅಳವಡಿಸಿಕೊಂಡು ವಿವಿಧ ರಾಗಗಳಲ್ಲಿ ಹಾಡುವುದು ವಿಷೇಷವಾಗಿದೆ.

ಹೀಗೆ ಕರ್ನಾಟಕದಲ್ಲಿ ಅಗಾಧವಾದ ದಾಸ ಸಾಹಿತ್ಯ ರಚನೆಯಾದಂತೆ, ಮಹಾರಾಷ್ಟ್ರ ಪ್ರಾಂತದಲ್ಲಿ ಭಕ್ತಿಪಂಥದ ಹರಿಕಾರರಾದ ಸಂತರುಗಳು ಅಗಾಧವಾದ ‘ಅಭಂಗವಾಣಿ’ಯನ್ನು ಸೃಜಿಸಿದ್ದಾರೆ. ಹಾಗೆ ರಚಿತವಾದ ಅಭಂಗಗಳನ್ನು ಮಹಾರಾಷ್ಟ್ರದ ಕೆಲವು ಪ್ರಾಂತಗಳ ಜನಪದರು ಶತಮಾನ ಗಳಿಂದ ಹಾಡಿಕೊಂಡು ಬಂದಿದ್ದಾರೆ. ಈ ಅಭಂಗ ಸಾಹಿತ್ಯವನ್ನು ರಾಗಗಳಿಗೆ ಹೊಂದಿಸಿ ತಮ್ಮ ಕಚೇರಿಗಳಲ್ಲಿ ಹಾಡುವ ಮೂಲಕ ಜಗತ್ತಿಗೆ ಪರಿಚಯಿಸಿದವರು ಅಲ್ಲಿನ ಹಿಂದುಸ್ತಾನಿ ಸಂಗೀತ ಕಲಾವಿದರುಗಳು.

ಕನ್ನಡಿಗರಿಗೆ ಅಭಂಗಗಳನ್ನು ಪರಿಚಯಿಸಿದವರು ಪಂಡಿತ್ ಭೀಮಸೇನ ಜೋಶಿಯವರು ಅಂತ ಹೇಳಬಹುದು. ಅವರ ಅಭಂಗವಾಣಿಗಳನ್ನು ನಾವು ಕೇಳುತ್ತಲೇ ಬೆಳೆದಿದ್ದೇವೆ. ‘ಮಾಝೆ ಮಾಹೇರ ಪಂಢರಿ’, ‘ವಿಠ್ಠಲ ಗೀತಿಗಾವ’ ಹಾಗೂ ‘ಪಂಢರೀನಿವಾಸ ಸಖಾ ಪಾಂಡುರಂಗ’ ಮುಂತಾದ ಅವರು ಹಾಡಿದ ಅಭಂಗಗಳು ಕನ್ನಡದ ಸಂಗೀತ ರಸಿಕರಿಗೆ ಚಿರಪರಿಚಿತವಾಗಿವೆ.

ಈಗ ಮತ್ತೆ, ಭಾರತೀಯ ಭಕ್ತಿ ಸಂಪ್ರದಾಯದ ಮುಕುಟಮಣಿಯಾದ ಅಭಂಗಗಳು ಜಗತ್ತಿನಾ ದ್ಯಂತದ ಜನರನ್ನು ಆಕರ್ಷಿಸುವಂತೆ ಮಾಡುತ್ತಿರುವವರು ಯುವ ಹಿಂದುಸ್ತಾನಿ ಗಾಯಕ ಮಹೇಶ ಕಾಳೆಯವರು. ಮಾಲ್ ಕೌಂಸ್ ರಾಗದಲ್ಲಿ ಅವರು ಪ್ರಸ್ತುತಪಡಿಸಿರುವ ‘ಕಾನಡಾ ರಾಜಾ ಪಂಢರಿಚಾ’ ಎನ್ನುವ ಹಾಡು ದೇಶಾದ್ಯಂತ ಭಾಷೆಯ ಗಡಿದಾಟಿ ಇಂದು ಎಲ್ಲರ ಬಾಯತುದಿಯದೆ. ದಕ್ಷಿಣಾದಿ ಸಂಗೀತಗಾರರೂ ಈ ಹಾಡನ್ನು ತಮ್ಮ ಕಛೇರಿಗಳಲ್ಲಿ ಹಾಡಲು ಮನ ಮಾಡುತ್ತಿದ್ದಾರೆ.

ಅತ್ಯಂತ ಭಾವಪೂರ್ಣವಾಗಿ ಪ್ರಸ್ತುತಪಡಿಸಿದ ಈ ಅಭಂಗವನ್ನು ಅಂತರ್ಜಾಲದಲ್ಲಿ ಇಲ್ಲಿಯವರೆಗೆ 35 ಮಿಲಿಯನ್ ಜನ ವೀಕ್ಷಣೆ ಮಾಡಿದ್ದಾರೆ. ಶುದ್ಧ ಶಾಸ್ತ್ರೀಯ ಖಯಾಲ್ ಗಾಯನದ ಕಛೇರಿ ಯಾದರೂ, ಕಾಳೆಯವರು ‘ಕಾನಡಾ ರಾಜಾ ಪಂಢರಿಚಾ’ ಅಭಂಗವನ್ನು ಹಾಡಲೇಬೇಕಾಗುತ್ತದೆ. ಈ ಹಾಡನ್ನು ಕಾಳೆಯವರು ಅಷ್ಟು ಪ್ರಸಿದ್ಧ ಮಾಡಿದ್ದಾರೆ.

ಅಂತೂ, ಕಾಳೆಯವರು ತಮ್ಮ ವಿಶಿಷ್ಟವಾದ ‘ಅಭಂಗವಾರಿ’ ಕಾರ್ಯಕ್ರಮಗಳ ಮೂಲಕ ಭಾರತೀಯ ಭಜನಾ ಸಂಸ್ಕೃತಿಯನ್ನು ವಿದೇಶದಲ್ಲೂ ಜನಪ್ರಿಯಗೊಳಿಸುತ್ತಿರುವುದು ಅತ್ಯಂತ ಸ್ತುತ್ಯರ್ಹವಾದ ಕಾರ್ಯವಾಗಿದೆ. ಕಾಳೆಯವರ ‘ಅಭಂಗವಾರಿ’ ಒಂದು ವಿಶಿಷ್ಟ ಮತ್ತು ರೋಮಾಂಚಕ ಭಕ್ತಿ ಸಂಗೀತ ಕಾರ್ಯಕ್ರಮವಾಗಿದ್ದು, ಇದು ಮಹಾರಾಷ್ಟ್ರದಲ್ಲಿ ಶತಮಾನ ಗಳಷ್ಟು ಹಳೆಯದಾದ ಭಕ್ತಿ ಚಳವಳಿಯಾದ ‘ವಾರಕರಿ’ ಸಂಪ್ರದಾಯವನ್ನು ಯಥಾವತ್ತಾಗಿ ವೇದಿಕೆಯ ಮೇಲೆ ತರುವ ಪ್ರಯತ್ನವಾಗಿದೆ.

‘ಅಭಂಗ’ ಎನ್ನುವ ಶಬ್ದಕ್ಕೆ ಅಖಂಡ- ಅವಿಚ್ಛಿನ್ನ, ಭಂಗವಿಲ್ಲದ್ದು ಅಥವಾ ನಿರಂತರವಾದದ್ದು (ಅ-ಭಂಗ) ಎಂದರ್ಥವಿದೆ. ‘ವಾರಿ’ ಎಂದರೆ ಯಾತ್ರೆ ಎಂದರ್ಥವಾಗುತ್ತದೆ. ಇದು ವಾರ್ಷಿಕವಾಗಿ ರುಗುವ ಪಂಢರಪುರ ವಾರಿಯನ್ನೇ ಉಲ್ಲೇಖಿಸುತ್ತದೆ. ಅಲ್ಲಿ ಲಕ್ಷಾಂತರ ವಾರಕರಿ ಭಕ್ತರು ತಮ್ಮ ಪಟ್ಟಣ ಗಳು ಮತ್ತು ಹಳ್ಳಿಗಳಿಂದ ಪಂಢರಪುರಕ್ಕೆ ನಡೆದುಕೊಂಡು ಹೋಗುತ್ತಾರೆ, ಹಾಗೆ ಪಾದಯಾತ್ರೆ ಹೋಗುವಾಗ ಭಕ್ತಿಯಿಂದ ಅಭಂಗಗಳನ್ನು ಹಾಡುತ್ತಾರೆ ಮತ್ತು ಸುಮತ್ತರಾಗಿ ನೃತ್ಯ ಮಾಡುತ್ತಾರೆ.

ಅದೇ ಭಾವನಾತ್ಮಕ ವಾತಾವರಣವನ್ನು ಕಾಳೆಯವರು ತಮ್ಮ ಕಾರ್ಯಕ್ರಮದಲ್ಲಿ ತೋರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಭಕ್ತಿ ಚಳವಳಿಯ ಪುನರುಜ್ಜೀವನದ ಭಾಗವಾಗಿ ವಾರಕರಿ ಚಳುವಳಿಯು 13ರಿಂದ 17ನೇ ಶತಮಾನಗಳಲ್ಲಿ ಪ್ರವರ್ಧಮಾನಕ್ಕೆ ಬಂತು. ಆಧ್ಯಾತ್ಮಿಕ ಮತ್ತು ನೈತಿಕ ಬೋಧನೆ ಗಳನ್ನು ಸರಳ ಮರಾಠಿಯಲ್ಲಿ ಸಾಮಾನ್ಯ ಜನರಿಗೆ ಹರಡಲು eನೇಶ್ವರ್, ತುಕಾರಾಂ, ನಾಮದೇವ್, ಏಕನಾಥ್ ಮತ್ತು ಜನಾಬಾಯಿ ಅವರಂಥ ನೂರಾರು ಸಂತರುಗಳು ಸಾವಿರಾರು ಅಭಂಗಗಳನ್ನು ರಚಿಸಿದ್ದಾರೆ.

ಕಾಲಾ ನಂತರದಲ್ಲಿ, ಈ ಅಭಂಗಗಳ ಹಾಡುವಿಕೆಯು ಪಂಢರಪುರದ ವಾರ್ಷಿಕ ಯಾತ್ರೆಯ ಸಮಯದಲ್ಲಿ ಸಂಘಟಿತವಾಗಿ ಹಾಡುವ ಸಾಮೂಹಿಕ ಚಟುವಟಿಕೆಯಾಯಿತು. ಆಧುನೀಕರಣದ ಹೊರತಾಗಿಯೂ, ಅಭಂಗದ ಮೂಲ ಆಧ್ಯಾತ್ಮಿಕ ಸಾರವು ಇನ್ನೂ ಹಾಗೆಯೇ ಉಳಿಯಲು ಕಾಳೆ ಯವರಂಥ ಯುವಕರ ಕೊಡುಗೆ ಬಹಳಷ್ಟಿದೆ.

ಸಾಮೂಹಿಕ ಗಾಯನದ ಮೂಲಕ ವಿಠ್ಠಲನಿಗೆ ಹೃತ್ಪೂರ್ವಕ ಶರಣಾಗತಿ ಕೋರುವ ಈ ಪರಂಪರೆ ಯನ್ನು ಸಂರಕ್ಷಿಸಲು, ಅನೇಕ ಯುವ ಗುಂಪುಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳು ಅಭಂಗ ಗಾಯನ ಪದ್ಧತಿಯನ್ನು ಉತ್ತೇಜಿಸುತ್ತಿವೆ. ಕಾಳೆಯವರ ಈ ‘ಅಭಂಗವಾರಿ’ ಕಛೇರಿಗಳು ಮೂಲ ವಾರಕರಿ ಚಳವಳಿಯ ಹೃದಯಬಡಿತವಾಗಿವೆ.

ಇದು ಸಾಮೂಹಿಕ ಭಕ್ತಿ, ಸರಳತೆ ಮತ್ತು ಭಗವಾನ್ ವಿಠ್ಠಲನ ಮೇಲಿನ ಅಚಲ ಪ್ರೀತಿಯ ಮನೋ ಭಾವವನ್ನು ವೇದಿಕೆಯಲ್ಲಿ ಸಾಕಾರಗೊಳಿಸುತ್ತದೆ. ಹಾಗಾಗಿ, ಶತಮಾನಗಳಷ್ಟು ಹಳೆಯದಾದ ಈ ಸಂಪ್ರದಾಯವು ಲಕ್ಷಾಂತರ ಜನರಿಗೆ ಸ್ಪೂರ್ತಿ ನೀಡುತ್ತಲೇ ಇದೆ. ಕಾಳೆಯವರ ಪ್ರತಿಯೊಂದು ‘ಅಭಂಗವಾರಿ’ ಕಾರ್ಯಕ್ರಮವೂ ವಿಭಿನ್ನವಾಗಿರುತ್ತದೆಯಾದರೂ, ನಿರೂಪಣೆ ಮಾತ್ರ ಮೂಲ ಚೌಕಟ್ಟಿನೊಳಗೇ ಇರುತ್ತದೆ. ಮಹೇಶ್ ಕಾಳೆ ಆಗಾಗ್ಗೆ ಹಾಡುಗಳ ನಡುವೆ ವಿರಾಮ ನೀಡಿ ಅರ್ಥ ವನ್ನು ಅಥವಾ ಅಭಂಗ್‌ಗಳ ಹಿಂದಿನ ಭಾವನೆಯನ್ನು ವಿವರಿಸುತ್ತಾರೆ.

ಅವರ ಈ ಉಪಕ್ರಮ, ಮರಾಠಿಯೇತರ ಪ್ರೇಕ್ಷಕರಿಗೆ ಸಹಾಯಕವಾಗುತ್ತದೆ. ಕೆಲವೊಮ್ಮೆ ಇಂಗ್ಲಿಷಿ ನಲ್ಲಿ ಅನುವಾದಗಳು ಅಥವಾ ಸಾರಾಂಶವನ್ನು ಸಹ ನೀಡಲಾಗುತ್ತದೆ. ಆದ್ದರಿಂದ ಎಲ್ಲ ಭಾಷೆಯ ಜನರೂ ಅಭಂಗದ ಮರಾಠಿ ಪದಗಳೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗುತ್ತದೆ. (ಮರಾಠಿ ಅಭಂಗಗಳ ಕನ್ನಡ ಅನುವಾದವಿರುವ ಶಿವಶಂಕರ ಪ್ರಭುಗಳವರ ‘ವೆಬ್ ಲಿಂಕ್’ ಅನ್ನು, ನಮ್ಮ ಸಹ ಅಂಕಣಕಾರರಾದ ಶ್ರೀವತ್ಸ ಜೋಶಿಯವರು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದು ಅದನ್ನು ಇಲ್ಲಿ ದಾಖಲಿಸುತ್ತಿದ್ದೇನೆ.

ಆಸಕ್ತರು ಇದನ್ನು ಬಳಸಿಕೊಳ್ಳಬಹುದಾಗಿದೆ: http:// marathiabhangtranslation.blogspot. com/p/all-list.html). ಕಾಳೆಯವರ ‘ಅಭಂಗವಾರಿ’ ಕಾರ್ಯಕ್ರಮ ವರ್ಷದಿಂದ ವರ್ಷಕ್ಕೆ ವಿಕಸನ ಗೊಳ್ಳುತ್ತ ಹೊಸ ಹೊಸ ಅಭಂಗ ಗಳನ್ನು ಸೇರಿಸಿಕೊಳ್ಳುತ್ತ ಸಾಗಿದೆ. ಬಹುಬೇಡಿಕೆಯಿರುವ ಈ ಕಾರ್ಯಕ್ರಮದ 2025ರ ಸಾಲಿನ ಪ್ರವಾಸವು ಈಗಾಗಲೇ ಭಾರತದ ಮುಂಬೈ, ಪುಣೆ, ದೆಹಲಿ, ಚೆನ್ನೈ, ಬೆಂಗಳೂರು, ಕೋಲ್ಕತ್ತಾ ಇತ್ಯಾದಿ ನಗರಗಳಲ್ಲಿ ನಡೆದಿದೆ.

ಅಷ್ಟೇ ಅಲ್ಲದೆ, ನಮ್ಮ ದೇಶದ ಗಡಿ ದಾಟಿ, ಅಮೆರಿಕ, ಕೆನಡಾ, ಯುರೋಪ್ ಸೇರಿದಂತೆ ಅನೇಕ ದೇಶಗಳಲ್ಲಿ ಯಶಸ್ವಿಯಾಗಿ ಸಾಗುತ್ತಿದೆ. ಅಮೆರಿಕ ಮತ್ತು ಕೆನಡಾದ ಆಯ್ದ ನಗರಗಳಲ್ಲಿ ಅಭಂಗ ಗಳ ಕುರಿತ ಶೈಕ್ಷಣಿಕ ಕಾರ್ಯಾಗಾರಗಳನ್ನೂ ಅವರು ನಡೆಸಿಕೊಟ್ಟಿದ್ದಾರೆ. ಭಕ್ತಿ ಮತ್ತು ಶುದ್ಧ ಶಾಸ್ತ್ರೀಯ ಸಂಗೀತದ ಮಿಶ್ರಣ, ರಾಗದ ಕಟ್ಟುನಿಟ್ಟು ಪ್ರಸ್ತುತಿ, ಮರಾಠಿ ಭಕ್ತಿ ಕಾವ್ಯದ ಭಾವನಾತ್ಮಕ ಅನುರಣನೆ, ಆತ್ಮೀಯ ನಿರೂಪಣೆಗಳು ಈ ಅಭಂಗವಾರಿ ಕಾರ್ಯಕ್ರಮದಲ್ಲಿ ದೊರೆಯುವುದರಿಂದ, ಮರಾಠಿ ಅಥವಾ ಅಭಂಗ ಸಂಪ್ರದಾಯದ ಪರಿಚಯವಿಲ್ಲದವರು ಸಹ ಈ ಕಛೇರಿಯಲ್ಲಿ ಮೈ ಮರೆತು ತೊಡಗಿಸಿಕೊಳ್ಳುವಂತೆ ಅದು ಮಾಡುತ್ತದೆ.

ಉತ್ತಮ ಸಂಗೀತಗಾರರು, ಸಾಂಪ್ರದಾಯಿಕ ವಾದ್ಯಗಳು, ಗುಣಮಟ್ಟದ ಗಾಯನಗಳಿಂದ ಸಂಗೀತ ಮತ್ತು ಸಾಹಿತ್ಯದ ಸೂಕ್ಷ್ಮತೆಗಳನ್ನು ಇಲ್ಲಿ ಸಂರಕ್ಷಿಸಲಾಗುತ್ತದೆ. ಭಾವನಾತ್ಮಕ ಮತ್ತು ಆಧ್ಯಾತ್ಮಿಕ ವಾತಾವರಣ, ಭಕ್ತಿ, ಕೆಲವೊಮ್ಮೆ ಧ್ಯಾನ, ಕೆಲವೊಮ್ಮೆ ಗಾನ ಆಗಾಗ್ಗೆ ಸಾಮೂಹಿಕ ಗಾಯನ ಗಳಿಂದಾಗಿ ಈ ಕಾರ್ಯಕ್ರಮವು ಪ್ರೇಕ್ಷಕರನ್ನು ಭಾವಯಾನದಲ್ಲಿ ತೇಲಿಸಿ ಬಿಡುತ್ತದೆ.

ಎಲ್ಲ ವಯೋಮಾನದ ಪ್ರೇಕ್ಷಕರು ಭೈರವಿ ರಾಗದ ಕಾರ್ಯಕ್ರಮದ ಅಂತಿಮ ಪ್ರಸ್ತುತಿ ಬರುವಾಗ ಭಾವೋದ್ವೇಗಕ್ಕೆ ಒಳಗಾಗಿ ಬಿಡುತ್ತಾರೆ. ಅವರ ಕಣ್ಣುಗಳು ಸ್ವಾಭಾವಿಕವಾಗಿ ಸಜಲವಾಗಿ ಬಿಡುತ್ತವೆ. ಅನೇಕ ಸಂಗೀತ ಕಛೇರಿಗಳಲ್ಲಿ, ಪ್ರೇಕ್ಷಕರಿಗೆ ಹಣೆಯ ಮೇಲೆ ತಿಲಕವಿಡಲಾಗುತ್ತದೆ ಮತ್ತು ಕೆಲವೊಮ್ಮೆ ಮಹಾರಾಷ್ಟ್ರದ ಸಾಂಪ್ರದಾಯಿಕ ಗಾಂಧಿ ಟೋಪಿಗಳನ್ನು ನೀಡಲಾಗುತ್ತದೆ. ಇದು ಭಕ್ತಿಯ ವಾತಾವರಣವನ್ನು ಗಾಢವಾಗಿಸಲು ಸಹಾಯ ಮಾಡುತ್ತದೆ.

ಅವರ ಕಾರ್ಯಕ್ರಮಗಳಲ್ಲಿ ಪಂಢರಪುರ ಯಾತ್ರೆಯ ದೃಶ್ಯಗಳು ಅಥವಾ ವಾರಕರಿ ಸಂಪ್ರದಾಯದ ಅಭ್ಯಾಸಗಳನ್ನು ಪ್ರದರ್ಶಿಸುವ ದೃಶ್ಯಗಳನ್ನು ಹಿನ್ನೆಲೆಯಲ್ಲಿ ತೋರಿಸಲಾಗುತ್ತದೆ. ಮಹೇಶ್ ಕಾಳೆ ಅವರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಅರೆ-ಶಾಸೀಯ ಪ್ರಕಾರಗಳಲ್ಲಿ ತಮಗಿರುವ ಬಲವಾದ ಹಿನ್ನೆಲೆಯನ್ನು ಬಳಸಿಕೊಂಡು, ಅಭಂಗ ಸಂಪ್ರದಾಯವನ್ನೂ ಗೌರವಿಸುತ್ತ ವ್ಯಾಪಕವಾಗಿ ಪ್ರೇಕ್ಷಕ ರಿಗೆ ಒಪ್ಪಿಗೆಯಾಗುವ ರೀತಿಯಲ್ಲಿ ಮತ್ತು ಅವರೊಂದಿಗೆ ಬೆರೆತು ತಮ್ಮ ಅಭಂಗ ಕಛೇರಿಯನ್ನು ಪ್ರಸ್ತುತಪಡಿಸುತ್ತಾರೆ.

ಅನೇಕ ಪ್ರದರ್ಶನಗಳಲ್ಲಿ, ಸ್ಥಳೀಕ ಸಂಗೀತ ವಿದ್ಯಾರ್ಥಿಗಳು ಅಥವಾ ಪ್ರೇಕ್ಷಕರು ಚಪ್ಪಾಳೆ ತಟ್ಟುತ್ತಾ ಗಾಯನದಲ್ಲಿ ಅವರೊಂದಿಗೆ ಸೇರಿಕೊಳ್ಳುವಂತೆ ಮಾಡುತ್ತಾರೆ. ಒಟ್ಟಿಗೆ ಹಾಡುವಂಥ ಸಮಷ್ಟಿಯ ಭಾವನೆಯನ್ನು ಉತ್ತೇಜಿಸಲು ಹಾಗೂ ಪ್ರೇಕ್ಷಕರನ್ನು ಹೆಚ್ಚು ಆಳವಾಗಿ ತೊಡಗಿಸಲು ಈ ಎಲ್ಲ ಉಪಕ್ರಮಗಳು ಸಹಾಯ ಮಾಡುತ್ತವೆ.

ಪ್ರತಿ ವರ್ಷ ಅವರು ಈ ಅಭಂಗವಾರಿಯ ತಿರುಗಾಟದ ಸುತ್ತ ಹೊಸ ಸ್ಕ್ರಿಪ್ಟ್ ಅಥವಾ ನಿರೂಪಣೆ‌ ಯನ್ನು ಹೊಂದಿಸುತ್ತಾರೆ. ಈ ಅಭಂಗವಾರಿ ಕಾರ್ಯಕ್ರಮಕ್ಕೆ ಹೊಸ ಹಾಡುಗಳನ್ನು ಶೀರ್ಷಿಕೆ (ಟೈಟಲ್) ಯಂತೆಯೂ ಸಂಯೋಜಿಸಿದ್ದಾರೆ.‌ ವಿದೇಶಗಳಲ್ಲಿನ ಕಾರ್ಯಕ್ರಮಗಳಲ್ಲಿ ನಮ್ಮ ಅಭಂಗ ಸಂಪ್ರ ದಾಯವನ್ನು ಜಾಝ್ ಇನ್ನಿತರ ಪಾಶ್ಚಿಮಾತ್ಯ ಅಂಶಗಳೊಂದಿಗೆ ಸಮ್ಮಿಳಿಸುತ್ತಾರೆ. ಆದರೆ, ಭಕ್ತಿ ಮತ್ತು ಶಾಸ್ತ್ರೀಯತೆಗೆ ಭಂಗ ಬಾರದಂತೆ ಮೂಲವನ್ನು ಹಾಗೇ ಇಟ್ಟುಕೊಳ್ಳುವುದು ವಿಶೇಷ ವಾಗಿದೆ. ಮಹೇಶ್ ಕಾಳೆಯವರು ರಾಷ್ಟ್ರ ಪ್ರಶಸ್ತಿ ವಿಜೇತ ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ ರಾಗಿದ್ದಾರೆ.

ಅವರು ಜೈಪುರ್ ಅತ್ರೌಲಿ ಘರಾನಾದ ಶ್ರೇಷ್ಠ ಗಾಯಕರಾದ ಪಂಡಿತ್ ಜಿತೇಂದ್ರ ಅಭಿಷೇಕಿ ಅವರಲ್ಲಿ ಅನೇಕ ವರ್ಷ ಶಿಷ್ಯತ್ವ ಮಾಡಿ ಸಂಗೀತಾಭ್ಯಾಸ ಮಾಡಿರುತ್ತಾರೆ. ತಮ್ಮ ಜೀವನವನ್ನು ಸಂಗೀತ ಕ್ಕಾಗಿಯೇ ಮುಡಿಪಾಗಿಡಬೇಕು ಎನ್ನುವ ಕಾರಣಕ್ಕೆ, ಎಂಜಿನಿಯರಿಂಗ್ ಕೆಲಸವನ್ನು ತೊರೆದು, ಈಗ ಪೂರ್ಣ ಸಮಯದ ಸಂಗೀತಗಾರರಾಗಿದ್ದಾರೆ. ಅವರು ಯುವ ಸಂಗೀತಗಾರರಿಗೆ ಸಹಾಯ ಮಾಡಲು, ICMA ಫೌಂಡೇಷನ್ ಎನ್ನುವ ಲಾಭರಹಿತ ಸಂಸ್ಥೆಯನ್ನು ಸ್ಥಾಪಿಸಿ ಮುನ್ನಡೆಸುತ್ತಿದ್ದಾರೆ ಕೂಡ.

ಸಾಮಾನ್ಯವಾಗಿ, ಶಾಸ್ತ್ರೀಯ ಸಂಗೀತಗಾರನೊಬ್ಬ ತನ್ನನ್ನು ಸುಗಮಸಂಗೀತಕ್ಕೆ ಮಾತ್ರ ನಿರ್ಬಂಧಿಸಿಕೊಳ್ಳುವುದು ಕಮ್ಮಿ. ಆದರೆ, ಶತಮಾನಗಳ ಇತಿಹಾಸ ಹೊಂದಿರುವ ಅಭಂಗ ಸಂಪ್ರದಾಯವನ್ನು ಉಳಿಸಲು, ವಿದೇಶಗಳಲ್ಲೂ ಜನಮನ್ನಣೆ ಗಳಿಸಿಕೊಡಲು ಶಾಸ್ತ್ರೀಯ ರಾಗ ಸಂಗೀತವನ್ನು ಸ್ವಲ್ಪ ಬದಿಗಿಟ್ಟು, ಸುಗಮ ಸಂಗೀತಕ್ಕೆ ತಮ್ಮನ್ನು ಸಮರ್ಪಿಸಿಕೊಳ್ಳುವ ಕಾಳೆಯವ ರಂಥ ನಿಸ್ವಾರ್ಥಿ ಮತ್ತು ಸಮರ್ಪಿತ ಕಲಾವಿದರನ್ನು, ಅವರ ‘ಅಭಂಗವಾರಿ’ಯಂಥ ಯಶಸ್ವಿ ಪ್ರಯತ್ನಗಳನ್ನು ನೋಡುವಾಗ, ನಮ್ಮ ಶಾಸ್ತ್ರೀಯ ಸಂಗೀತ ಮತ್ತು ಸನಾತನ ಸಂಸ್ಕೃತಿ ಎರಡೂ ಇನ್ನೂ ಸುರಕ್ಷಿತವಾಗಿವೆ ಎಂದು ಸಮಾಧಾನವಾಗುತ್ತದೆ ಮತ್ತು ಅನೇಕಕಾಲ ಸುರಕ್ಷಿತವಾಗಿರಲಿದೆ ಎನ್ನುವ ಭರವಸೆಯೂ ಮೂಡುತ್ತದೆ.

ವಿನಾಯಕ ವೆಂ ಭಟ್ಟ

View all posts by this author