ವಿದೇಶ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಕ್ರೈಂ ಫ್ಯಾಷನ್‌ ಲೋಕ ಉದ್ಯೋಗ

Roopa Gururaj Column: ಕೂಡಿಟ್ಟ ಸಂಪತ್ತು ಹಾಳುಬಿದ್ದ ಬಾವಿಯಂತೆ

‘ಅರೆ! ಊಟದ ಅವಾಂತರದ ನಡುವೆ ಈ ಬಾವಿ ತೋಡುವ ಕೆಲಸ ಎಲ್ಲಿಂದ ಬಂತು?!’ ಎಂದು ಧರ್ಮದಾಸ ಅಸಮಾಧಾನದಿಂದಲೇ ಗೊಣಗಿಕೊಂಡ. ಆದರೆ ಆ ಮಹಾತ್ಮರೋ ರಾತ್ರಿಯಿಡೀ ಧರ್ಮದಾಸನ ಮನೆಯ ಬಾಗಿಲಲ್ಲೇ ನಿಂತುಬಿಟ್ಟಿದ್ದರು. ಇದನ್ನು ಕಂಡ ಧರ್ಮ ದಾಸ, ‘ಈಗ ಇವರಿಗೆ ಬಾವಿಯನ್ನು ತೋಡಿಸಿಕೊಡದಿದ್ದರೆ, ಇವರು ಹಸಿವು-ನೀರಡಿಕೆಗಳಿಂದ ಇಲ್ಲೇ ಸತ್ತು ಹೋಗುವುದು ನಿಶ್ಚಿತ.

ಕೂಡಿಟ್ಟ ಸಂಪತ್ತು ಹಾಳುಬಿದ್ದ ಬಾವಿಯಂತೆ

ಒಂದೊಳ್ಳೆ ಮಾತು

ಒಂದೂರಿನಲ್ಲಿ ಧರ್ಮದಾಸ ಎಂಬ ವ್ಯಕ್ತಿಯಿದ್ದ. ಆತನ ಮಾತುಗಳು ಬಹಳ ಮೃದು- ಮಧುರವಾಗಿದ್ದರೂ ಸ್ವಭಾವದಲ್ಲಿ ಆತ ಬಹಳ ಜಿಪುಣ. ಒಮ್ಮೆ ಅವನ ಮನೆಗೆ ಒಬ್ಬರು ಮಹಾತ್ಮರು ಬಂದರು, ಊಟ ನೀಡುವಂತೆ ಧರ್ಮದಾಸನಿಗೆ ಕೇಳಿದರು. ಮೊದಮೊದಲಿಗೆ ಆ ಮಹಾತ್ಮರಿಗೆ ಏನನ್ನೂ ಕೊಡಲು ಧರ್ಮದಾಸನಿಗೆ ಮನಸ್ಸು ಬಾರ ದಿದ್ದರೂ, ಅವರು ರಾತ್ರಿಯಾದರೂ ಜಾಗ ಬಿಟ್ಟು ಕದಲದಿರುವುದನ್ನು ನೋಡಿ, “ಬನ್ನಿ ಪೂಜ್ಯರೇ, ನೀವು ಹೊಟ್ಟೆ ತುಂಬ ಊಟ ಮಾಡಿ!" ಎಂದು ಬಾಯುಪಚಾರದ ಮಾತು ಗಳನ್ನಾಡಿದ. ಆ ಮಹಾತ್ಮರು ಕೂಡ ಅಂತಿಂಥವರಲ್ಲ. ಅವನಿಗೆ ತಿರುಗೇಟು ನೀಡುವ ಉದ್ದೇಶದಿಂದ, “ಈಗ ನನಗೆ ಊಟ ಬೇಕಾಗಿಲ್ಲ, ನಾನು ಊಟ ಮಾಡಲಾರೆ. ನನಗೊಂದು ಬಾವಿಯನ್ನು ತೋಡಿಸಿ ಕೊಡು" ಎಂದು ಹೇಳಿದರು.

‘ಅರೆ! ಊಟದ ಅವಾಂತರದ ನಡುವೆ ಈ ಬಾವಿ ತೋಡುವ ಕೆಲಸ ಎಲ್ಲಿಂದ ಬಂತು?!’ ಎಂದು ಧರ್ಮದಾಸ ಅಸಮಾಧಾನದಿಂದಲೇ ಗೊಣಗಿಕೊಂಡ. ಆದರೆ ಆ ಮಹಾತ್ಮರೋ ರಾತ್ರಿಯಿಡೀ ಧರ್ಮದಾಸನ ಮನೆಯ ಬಾಗಿಲಲ್ಲೇ ನಿಂತುಬಿಟ್ಟಿದ್ದರು. ಇದನ್ನು ಕಂಡ ಧರ್ಮ ದಾಸ, ‘ಈಗ ಇವರಿಗೆ ಬಾವಿಯನ್ನು ತೋಡಿಸಿಕೊಡದಿದ್ದರೆ, ಇವರು ಹಸಿವು-ನೀರಡಿಕೆಗಳಿಂದ ಇಲ್ಲೇ ಸತ್ತುಹೋಗುವುದು ನಿಶ್ಚಿತ.

ಇದನ್ನೂ ಓದಿ: Roopa Gururaj Column: ಸ್ವಾತಂತ್ರ್ಯದ ಬದುಕಿಗಿಂತ ಬೇರೆ ಯಾವುದೂ ಮುಖ್ಯವಲ್ಲ

ಹಾಗಾದರೆ, ವಿನಾಕಾರಣ ನಾನು ಜನರ ನಿಂದನೆಯ ಮಾತಿಗೆ ಗುರಿಯಾಗಬೇಕಾಗುತ್ತದೆ’ ಎಂದು ಆಳವಾಗಿ ಯೋಚನೆ ಮಾಡಿ, “ನಿಮ್ಮ ಮಾತಿನಂತೆಯೇ ಆಗಲಿ ಸ್ವಾಮಿ, ಒಳಗೆ ಬನ್ನಿ" ಎಂದು ಕರೆದ. ಆಗ ಆ ಮಹಾತ್ಮರು ತಮ್ಮ ವರಸೆಯನ್ನು ಬದಲಿಸಿ, “ಒಂದಲ್ಲ... ಎರಡು ಬಾವಿಗಳನ್ನು ತೋಡಿಸಿಕೊಡಬೇ ಕಾಗುವುದು..!" ಎಂದು ಒಗಟಿನಂತೆ ಮಾತನಾಡಿ ದರು.

ಈಗ ಜಿಪುಣನಿಗೆ ನಿಜಕ್ಕೂ ಆತಂಕವಾಯಿತು. ‘ನಾನು ಎರಡು ಬಾವಿಗಳನ್ನು ತೋಡಿಸಿ ಕೊಡಲು ಒಪ್ಪದಿದ್ದರೆ, ಇವರು ಮುಂದೆ ನಾಲ್ಕು ಬಾವಿಗಳನ್ನು ತೋಡಿಸಿ ಕೊಡುವಂತೆ ಆಗ್ರಹಿಸಬಹುದು. ಹೀಗಾಗಿ ಅವರಿಗೆಂದು ಎರಡು ಬಾವಿಗಳನ್ನು ತೋಡಿಸುವುದೇ ಕ್ಷೇಮ’ ಎಂದು ತನ್ನಲ್ಲೇ ಹೇಳಿಕೊಂಡ ಜಿಪುಣ ಧರ್ಮದಾಸ. ಅಂತೆಯೇ ಬಾವಿ ತೋಡುವ ಕೆಲಸ ಮುಗಿಯಿತು, ಅವುಗಳಲ್ಲಿ ನೀರು ಜಿನುಗತೊಡಗಿತು. ಆ ಬಾವಿಗಳು ನೀರಿನಿಂದ ತುಂಬಿ ಕೊಳ್ಳುತ್ತಿದ್ದಂತೆ ಆ ಮಹಾತ್ಮರು ಧರ್ಮದಾಸನನ್ನು ಉದ್ದೇಶಿಸಿ, “ನೋಡು, ಎರಡು ಬಾವಿ ಗಳಲ್ಲಿ ಒಂದನ್ನು ನಿನಗೆ ಕೊಟ್ಟು ಮತ್ತೊಂದನ್ನು ನಾನು ಇಟ್ಟುಕೊಳ್ಳುತ್ತೇನೆ.

ಕೆಲವು ದಿನಗಳವರೆಗೆ ನಾನು ಬೇರೆಲ್ಲಿಗೋ ಹೋಗ ಬೇಕಾಗಿ ಬಂದಿದೆ. ಆದರೆ, ಗಮನ ವಿರಲಿ, ನನ್ನ ಬಾವಿ ಯಲ್ಲಿನ ಒಂದು ಹನಿನೀರನ್ನೂ ನೀನು ಮುಟ್ಟಕೂಡದು! ಜತೆಗೆ, ಊರಿನ ಜನರಿಗೆಲ್ಲ ನಿನ್ನ ಬಾವಿಯಲ್ಲಿರೋ ನೀರನ್ನೇ ಕೊಡತಕ್ಕದ್ದು. ನಾನು ಹಿಂದಿರುಗಿ ಬಂದು ನನ್ನ ಬಾವಿಯೊಳಗಿನ ನೀರನ್ನು ಕುಡಿದು ದಾಹವನ್ನು ತೀರಿಸಿಕೊಳ್ಳುವೆ" ಎಂದ ರು.

ಈ ಮಾತಿಗೆ ಒಪ್ಪಿದ ಧರ್ಮದಾಸನು ಮಹಾತ್ಮರಿಗೆ ಮೀಸಲಾದ ಬಾವಿಯ ಬಾಯಿಗೆ ದೊಡ್ಡ ಮುಚ್ಚಳವನ್ನು ಮಾಡಿಸಿ ಮುಚ್ಚಿಸಿಬಿಟ್ಟ. ತರುವಾಯದಲ್ಲಿ ಆ ಊರಿನ ಜನರೆ ಲ್ಲರೂ ಧರ್ಮ ದಾಸನ ಬಾವಿಯಲ್ಲಿನ ನೀರನ್ನೇ ಬಳಸತೊಡಗಿದರು. ಅವರೆಲ್ಲ ನೀರು ಒಯ್ದರೂ ಬಾವಿಯ ನೀರಿನ ಮಟ್ಟ ತಗ್ಗುತ್ತಲೇ ಇರಲಿಲ್ಲ. ಅದರಲ್ಲಿನ ಸ್ವಚ್ಛ ಸಿಹಿನೀರನ್ನು ಮನದಣಿಯೆ ಸೇವಿಸಿದ ಊರಿನ ಜನರೆಲ್ಲ ಸಂಭ್ರಮ ಪಟ್ಟರು, ಮಹಾತ್ಮರ ಗುಣಗಾನ ಮಾಡತೊಡಗಿದರು.

ಒಂದು ವರ್ಷದ ಬಳಿಕ ಆ ಊರಿಗೆ ಮರಳಿದ ಮಹಾತ್ಮರು, ತಮಗೆ ಮೀಸಲಾಗಿದ್ದ ಬಾವಿ ಯ ಮುಚ್ಚಳವನ್ನು ತೆಗೆಯಲು ಹೇಳಿದರು. ಧರ್ಮದಾಸ ಅಂತೆಯೇ ಮಾಡಿದಾಗ, ಜನ ರೆಲ್ಲಾ ಅದರೊಳಗೆ ಬಗ್ಗಿ ನೋಡಿದರು. ಏನಾಶ್ಚರ್ಯ! ಅದರೊಳಗೆ ಒಂದು ಹನಿ ನೀರೂ ಇರಲಿಲ್ಲ!

ಆಗ ಮಹಾತ್ಮರು ಜಿಪುಣ ಧರ್ಮದಾಸನನ್ನು ಉದ್ದೇಶಿಸಿ, “ಬಾವಿಯಿಂದ ಎಷ್ಟು ನೀರು ತೆಗೆದರೂ ಅದು ಮುಗಿಯುವುದೇ ಇಲ್ಲ, ಬದಲಿಗೆ ವೃದ್ಧಿಯಾಗುತ್ತಾ ಹೋಗುತ್ತದೆ; ಬಾವಿ ಯಿಂದ ನೀರನ್ನೇ ತೆಗೆಯದಿದ್ದರೆ, ಆ ಬಾವಿ ಹಾಳುಬಿದ್ದು ಒಣಗಿಹೋಗುತ್ತದೆ. ಧನ ಸಂಪತ್ತೂ ಬಾವಿಯ ನೀರಿನ ಹಾಗೆಯೇ; ಅದರ ಸದುಪಯೋಗ ಮಾಡದಿದ್ದಲ್ಲಿ ಅದು ಕೂಡ ಬಾವಿಯ ನೀರಿನಂತೆ ವ್ಯರ್ಥವಾಗಿ ಹೋಗುತ್ತದೆ ಅಥವಾ ಬೇರೆ ಯಾರೋ ದುರು ಳರು ಅದರ ಉಪಯೋಗವನ್ನು ಪಡೆಯುತ್ತಾರೆ" ಎಂದು ಸೂಚ್ಯವಾಗಿ ಹೇಳಿದರು. ನಿಜ ವಲ್ಲವೇ? ಇದು ನಾವೆಲ್ಲರೂ ಅರಿಯಬೇಕಾದ ವಿಷಯವೂ ಹೌದು.