Vinayaka Bhat Column: ಹವ್ಯಾಸಿ ರಂಗಸ್ಥಳದ ಸವಾಲುಗಳು ಮತ್ತು ಪರಿಹಾರ
ತಾವು ಕಲಿತ ಕಲೆಯನ್ನು ಉತ್ತಮ ಮಟ್ಟದಲ್ಲಿ ಪ್ರದರ್ಶನ ಮಾಡಬೇಕೆಂಬ ಕನಸು ಎಲ್ಲರದೂ. ಕಲಾ ವಿದರೇನೋ ಒಳ್ಳೆಯ ಪ್ರಯತ್ನವನ್ನು ಮಾಡುತ್ತಾರೆ ಆದರೆ ಕೆಲವೊಷ್ಟು ಬಾಹ್ಯ ಸವಾಲುಗಳು ಕಲಾ ಪ್ರದರ್ಶನ ಕಡಿಮೆ ಗುಣಮಟ್ಟದ್ದಾಗಿ ಕಾಣಿಸಿಕೊಳ್ಳಲು ಕಾರಣ ಆಗುತ್ತಿವೆ. ಒಬ್ಬ ಪ್ರೇಕ್ಷಕನ ದೃಷ್ಟಿಕೋನ ದಿಂದ ಅವುಗಳಲ್ಲಿ ಕೆಲವೊಂದನ್ನ ನೋಡುವ, ಪರಾಮರ್ಶಿಸುವ, ಪರಿಹಾರ ಕಂಡು ಕೊಳ್ಳುವ ಇರಾದೆ ಈ ಲೇಖನದ್ದು
ಅಭಿಮತ
ವಿನಾಯಕ ಭಟ್
ಇತ್ತೀಚೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಕ್ರಮಗಳ ಜೊತೆಗೆ ಯಕ್ಷಗಾನ ಕ್ಕೊಂದು ಸ್ಥಾನ ಕಂಡುಬರುತ್ತಿದೆ. ಬೇಸಿಗೆಯಲ್ಲಿ ಮೇಳಗಳು ಪ್ರವಾಸದಲ್ಲಿರುವುದರಿಂದ, ಅನೇಕ ಹವ್ಯಾಸಿಗಳ ಪ್ರದರ್ಶನಗಳು ರಾಜ್ಯದ ವಿವಿಧೆಡೆಗಳಲ್ಲಿ, ಬೆಂಗಳೂರು ಮಹಾನಗರದಲ್ಲಿ ಆಗುತ್ತಲೇ ಇರುತ್ತವೆ.
ವಿವಿಧ ಭಾಗಗಳಲ್ಲಿ, ಸ್ಥಳೀಯ ಯಕ್ಷ ಗುರುಗಳು ಕಲಾವಿದರನ್ನು ತಯಾರಿ ಮಾಡಿ, ಪ್ರದರ್ಶನಕ್ಕೆ ಅಣಿ ಗೊಳಿಸುತ್ತಿರುವುದು ಯಕ್ಷಗಾನ ವಿಸ್ತಾರದ ದೃಷ್ಟಿಯಿಂದ ಒಳ್ಳೆಯದೇ ಹೌದು. ಆದರೆ, ಪ್ರದರ್ಶ ನಗಳ ಗುಣಮಟ್ಟ? ಅದು ಚರ್ಚಾರ್ಹ ವಿಷಯ. ಇರಲಿ. ಈಗ ಹೇಳ ಹೊರಟಿರುವುದು ಈ ರೀತಿಯ ಹವ್ಯಾಸಿಗಳ ಪ್ರದರ್ಶನಗಳಲ್ಲಿ ಕಂಡು ಬರುತ್ತಿರುವ ಸವಾಲುಗಳ ಕುರಿತು.
ಇದನ್ನೂ ಓದಿ:Vishweshwar Bhat Column: ಅಣುಬಾಂಬ್ ಚರ್ಚೆ ಬಾಂಬ್ ನಿಷಿದ್ಧ
ತಾವು ಕಲಿತ ಕಲೆಯನ್ನು ಉತ್ತಮ ಮಟ್ಟದಲ್ಲಿ ಪ್ರದರ್ಶನ ಮಾಡಬೇಕೆಂಬ ಕನಸು ಎಲ್ಲರದೂ. ಕಲಾವಿದರೇನೋ ಒಳ್ಳೆಯ ಪ್ರಯತ್ನವನ್ನು ಮಾಡುತ್ತಾರೆ ಆದರೆ ಕೆಲವೊಷ್ಟು ಬಾಹ್ಯ ಸವಾಲುಗಳು ಕಲಾ ಪ್ರದರ್ಶನ ಕಡಿಮೆ ಗುಣಮಟ್ಟದ್ದಾಗಿ ಕಾಣಿಸಿಕೊಳ್ಳಲು ಕಾರಣ ಆಗುತ್ತಿವೆ. ಒಬ್ಬ ಪ್ರೇಕ್ಷಕನ ದೃಷ್ಟಿಕೋನದಿಂದ ಅವುಗಳಲ್ಲಿ ಕೆಲವೊಂದನ್ನ ನೋಡುವ, ಪರಾಮರ್ಶಿಸುವ, ಪರಿಹಾರ ಕಂಡು ಕೊಳ್ಳುವ ಇರಾದೆ ಈ ಲೇಖನದ್ದು. ಸಾಮಾನ್ಯವಾಗಿ ಇಂಥ ಪ್ರದರ್ಶನಗಳು ಬೇರೆ ಯಾವುದೊ ಕಾರ್ಯಕ್ರಮದ ಸಂದರ್ಭದಲ್ಲಿ ಆಗುತ್ತಿವೆ.
ಅದು ಸಂಸ್ಥೆಯ ವಾರ್ಷಿಕೋತ್ಸವವೋ , ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮವೋ ಮುಂತಾಗಿ. ಸಂಗೀತ, ನಾಟ್ಯಗಳ ನಡುವೆ ಒಂದೊಂದು ಯಕ್ಷಗಾನವನ್ನೂ ಆಡಿಸುತ್ತಾರೆ. ಹಾಗಾಗಿ, ಮೊಟ್ಟ ಮೊದಲ ಸವಾಲು ಸರಿಯಾದ ರಂಗಸ್ಥಳ. ಅದ್ಯಾವುದೋ ರಸ್ತೆಯ ಮಧ್ಯದಲ್ಲಿ ಒಂದು ಪೆಂಡಾಲ. ಅದರ ಮೇಲೆ ಯಕ್ಷಗಾನ ಮಾಡುವ ಸ್ಥಿತಿ ಕಲಾವಿದರದ್ದು. ಬಹುತೇಕ ಇಂಥ ಕಾರ್ಯಕ್ರಮಗಳ ರಂಗಸ್ಥಳದ ಚೌಕಟ್ಟು 10 ಚದರ ಅಡಿ ಇದ್ದರೆ ಹೆಚ್ಚು ಅನ್ನುವ ಪರಿಸ್ಥಿತಿ.
ಜೊತೆಗೆ ಮೇಲೆ ಕಿರೀಟಕ್ಕೋ, ಕೇದಗೆ ಮುಂದಲೆಗೊ ತಗಲುವಷ್ಟು ಕಡಿಮೆ ಎತ್ತರದ ಪೆಂಡಾಲಿನ ಚಾವಣಿ. ಯಾವುದೇ ಪಾತ್ರ ಪೋಷಣೆ ಪೂರ್ಣ ಆಗುವುದಕ್ಕೆ ನೃತ್ಯ ಬೇಕಲ್ಲವೇ. ಈ ರೀತಿಯ ಚಿಕ್ಕ ರಂಗಸ್ಥಳದಲ್ಲಿ ಆ ಕಲಾವಿದ ತನ್ನ ಪೂರ್ಣ ಪ್ರಮಾಣದ ನೃತ್ಯವನ್ನು ಹೇಗೆ ಮಾಡಿಯಾನು? ಕುಣಿ ಯಲು ಸ್ಥಳ ಇಲ್ಲ, ಹಾರಲು ಎತ್ತರ ಇಲ್ಲ. ಅದೇನು ನೃತ್ಯ ಮಾಡಲು ಸಾಧ್ಯ? ಜೊತೆಗೆ, ಆ ರಂಗ ಸ್ಥಳವೋ, ಅದರ ಸುತ್ತ ಮುತ್ತಲಿನ ವಾತಾವರಣವೋ, ಕಲಾವಿದರಿಗೆ ಅದೆಷ್ಟು ಕಿರಿಕಿರಿ ಉಂಟು ಮಾಡಬಹುದು!
ಆ ಪರಿಸರದಲ್ಲಿ ಅದೆಷ್ಟು ಒಳ್ಳೆಯ ಪ್ರದರ್ಶನ ಕೊಟ್ಟಾರು!. ಯಕ್ಷಗಾನದ ಮುಖ್ಯವಾದ ಒಂದು ಅಂಗ ಯಕ್ಷಗಾನದ ವೇಷ ಭೂಷಣಗಳು. ಅವುಗಳ ವೈಭವ ಹೆಚ್ಚಲು ಬೆಳಕಿನ ಪರಿಣಾಮ ಬಹಳ ಮುಖ್ಯ. ಮುಖವರ್ಣಿಕೆಗೆ ಬಳಸುವ ಬಣ್ಣಗಳೂ, ಅವುಗಳ ಚಿತ್ತಾರ ರಂಗಸ್ಥಳದ ಬೆಳಕಿನ ವ್ಯವಸ್ಥೆಗೆ ಹೊಂದಿಕೊಂಡಿದ್ದರೆ ಚೆನ್ನ. ಆದರೆ, ಈ ರೀತಿಯ ಪ್ರದರ್ಶನಗಳ ರಂಗಸ್ಥಳಗಳಲ್ಲಿ ಬೆಳಕಿನ ತೀರಾ ಕೊರತೆ ಕಂಡು ಬರುತ್ತದೆ. ಪಾತ್ರಗಳ ಮುಖ ಭಾವವೋ, ಅಭಿನಯವೋ, ವೇಷ ವೈಭವವೋ, ಬೆಳಕಿನ ಕೊರತೆಯಿಂದ ಚೆನ್ನಾಗಿ ಕಾಣುವುದೇ ಇಲ್ಲ.
ಮತ್ತದೇ ಸಮಸ್ಯೆ. ವೇಷಧಾರಿ ಅದೆಷ್ಟೇ ಪ್ರಯತ್ನ ಪಟ್ಟರೂ ನಿಜವಾದ ಅನುಭವವನ್ನು ಪ್ರೇಕ್ಷಕನಿಗೆ ಕೊಡುವುದು ಸಾಧ್ಯ ಆಗುವುದೇ ಇಲ್ಲ. ಮುಂದಿನದು ವಾಚಿಕ ವೈಭವಕ್ಕೆ ಸವಾಲೊಡ್ಡುವ ಮೈಕ್ ವ್ಯವಸ್ಥೆ. ಸಾಧಾರಣ ಸಂಗೀತಕ್ಕೋ, ನೃತ್ಯಕ್ಕೋ ಸಾಕಾಗುವ ಮೈಕ್ ವ್ಯವಸ್ಥೆ ಯಕ್ಷಗಾನಕ್ಕೆ ಸಾಕಾ ಗುವುದಿಲ್ಲ.
ಒಂದು ಪರಿಪೂರ್ಣ ಕಲೆಯಾದ ಯಕ್ಷಗಾನದಲ್ಲಿ ಹಾಡುಗಾರಿಕೆ, ಪಕ್ಕ ವಾದ್ಯಗಳೂ, ಮಾತೂ ಅಷ್ಟೇ ಮುಖ್ಯ. ಇವೆಲ್ಲವೂ ಪ್ರೇಕ್ಷಕನ ಕಿವಿಗಳಿಗೆ ತಲುಪಿದಾಗ ಮಾತ್ರ ಸಂಪೂರ್ಣ ಅನುಭೂತಿ. ಆದರೆ ಮೈಕ್ ವ್ಯವಸ್ಥೆ ಸರಿ ಇಲ್ಲದಿರುವುದು ಕೂಡಾ, ಒಟ್ಟಂದದಲ್ಲಿ ಪ್ರದರ್ಶನ ಚೆನ್ನಾಗಿ ಆಗದಿರುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ.
ಹಾಗಾದರೆ ನಾವು ಏನು ಮಾಡಬಹುದು!? ಕೆಲವೊಂದಿಷ್ಟನ್ನ ಚರ್ಚಿಸೋಣ. ಈ ಚರ್ಚೆಯ ಉದ್ದೇಶ ಪ್ರದರ್ಶನಗಳು ಚೆನ್ನಾಗಿ ಆಗಬೇಕು. ಬರುವ ಹೊಸ ಪ್ರೇಕ್ಷಕ ಯಕ್ಷಗಾನದ ಕಾಯಂ ಪ್ರೇಕ್ಷಕ ನಾಗಿ ಹೋಗಬೇಕು. ಮೊದಲ ಸಲ ನೋಡಲು ಬಂದಾಗಲೇ ಅದು ನೋಡಲು, ಕೇಳಲು, ಅನು ಭವಿಸಲು ಸಂತೋಷ ಆಗಬೇಕು. ಆಗ ಮಾತ್ರ ಆ ಹೊಸ ಪ್ರೇಕ್ಷಕ ಕಾಯಂ ಪ್ರೇಕ್ಷಕ ಆಗುವುದಲ್ಲವೇ!.
ಹಾಗಾಗಿ, ಎಲ್ಲಾ ಈ ಹವ್ಯಾಸಿ ಕಲಾವಿದರ ಒಂದು ಸಂಘಟನೆ ಆದರೆ ಚೆನ್ನ. ಆ ಸಂಘಟನೆಯ ಮೂಲಕ ಪ್ರದರ್ಶನ ಸಂಘಟಕರಿಗೆ ಒಂದು ಮಾರ್ಗದರ್ಶಿ ಕೈ ಪಿಡಿಯನ್ನು ಮಾಡಿದರೆ ಹೇಗೆ? ರಂಗಸ್ಥಳದ ಆಯ , ಆಕಾರ, ಬೇಕಾದ ವ್ಯವಸ್ಥೆಗಳು, ಬೆಳಕು ಯಾವ ರೀತಿ ಇರಬೇಕು, ಎಷ್ಟಿರಬೇಕು, ಮೈಕ್ ಎಲ್ಲಿ, ಹ್ಯಾಗೆ, ಚೌಕಿ ಮನೆಯ ವ್ಯವಸ್ಥೆ ಮುಂತಾದ ವಿವರಣೆಗಳನ್ನು ಒಳಗೊಂಡ ಒಂದು ಚಿಕ್ಕ ಪುಸ್ತಕದ ರೂಪದಲ್ಲಿ ಮಾಡಿದರೆ ಹೊಸ ಸಂಘಟಕರಿಗೆ ಸಹಾಯ ಆದೀತು. ಸಂಘಟಕ ಕಲಾ ತಂಡವನ್ನು ಸಂಪರ್ಕಿಸಿ, ಪ್ರದರ್ಶನವನ್ನು ನಿಗದಿ ಮಾಡುವಾಗ, ಈ ಕೈಪಿಡಿ ಖಂಡಿತಾ ಸಹಾಯ ಮಾಡುತ್ತದೆ.
ಯಾಕೆಂದರೆ, ಬಹುತೇಕ ಯಕ್ಷಗಾನೇತರ ಸಂಘಟಕರಿಗೆ ಮಾಹಿತಿಯ ಕೊರತೆ ಇದ್ದಿರಬಹುದು. ನೂರು ಪ್ರತಿಶತ ಅಲ್ಲದೇ ಇದ್ದರೂ ಮೂಲಭೂತ ಅವಶ್ಯಕತೆಗಳ ಪೂರೈಕೆ ಆದೀತು. ಆಟವನ್ನು ಒಪ್ಪಿಕೊಂಡ ಮುಖ್ಯ ಕಲಾವಿದ ಅಥವಾ ತಂಡದ ನಾಯಕ, ಆಟ ಆಗುವ ಹಿಂದಿನ ದಿನ ಸ್ಥಳ ವೀಕ್ಷಣೆ ಮಾಡಿ, ಬೇಕಾದ ಸೂಕ್ತ ಸಲಹೆ, ಸೂಚನೆಗಳನ್ನು ಕೊಡಬಹುದು. ಸ್ಥಳದಲ್ಲಿನ ಕುಂದು ಕೊರತೆಗಳನ್ನು ಹಿಂದಿನ ದಿನವೇ ಸಂಘಟಕರಿಗೆ ತಿಳಿಸಿದ್ದಲ್ಲಿ ಅವರೂ ಕ್ರಮ ಕೈಗೊಂಡಾರು. ಒಟ್ಟಾರೆಯಾಗಿ, ನಮ್ಮ ಯಕ್ಷಗಾನ ಪ್ರದರ್ಶನ ಬಾಹ್ಯ ಕೊರತೆಗಳಿಂದ ಪೇಲವ ಆಗುವುದು ಕಲೆಯ ದೃಷ್ಟಿಯಿಂದ, ಪ್ರೇಕ್ಷಕನ ದೃಷ್ಟಿಯಿಂದ ಒಳ್ಳೆಯದಲ್ಲ.
ಚೌಕಿ ಮನೆ, ಶೌಚಾಲಯ, ಆಹಾರ, ನೀರು ಮುಂತಾದ ಅದೆಷ್ಟೋ ಸವಾಲುಗಳು ಇವೆ. ಇವೆಲ್ಲವೂ ಪ್ರದರ್ಶನದ ಗುಣಮಟ್ಟದ ಮೇಲೆ ಪರಿಣಾಮ ಬೀರುವಂಥಹುದೇ ಆಗಿವೆ. ಇವೆಲ್ಲವನ್ನೂ ಒಬ್ಬ ಕಲಾವಿದ ಹೇಳಿದರೆ, ಕುಣಿಯಲು ಬಾರದವ ವ್ಯವಸ್ಥೆ ಸರಿ ಇಲ್ಲ ಎಂದ ಅನ್ನುವ ಕುಹಕಗಳು ಕೇಳಿಯಾವು.
ಆದರೆ ಒಬ್ಬ ಕಲಾವಿದನ ಪ್ರದರ್ಶನ ಚೆನ್ನಾಗಿ ಆಗಬೇಕೆಂದರೆ ಇವೆಲ್ಲವೂ ಗಂಭೀರ ಪರಿಣಾಮ ಬೀರಿಯೇ ಬೀರುತ್ತವೆ. ಹಾಗಾಗಿ ಯಕ್ಷಗಾನವನ್ನು ಪ್ರೀತಿಸುವ , ಆರಾಽಸುವ ಪ್ರೇಕ್ಷಕ ಈ ಸಮಸ್ಯೆಗಳಿಗೆ ಪರಿಹಾರವನ್ನು ಬಯಸುತ್ತಾನೆ. ನಮ್ಮ ಪ್ರೀತಿಯ ಯಕ್ಷಗಾನ ಪ್ರದರ್ಶನ ಒಟ್ಟೂ ಒಂಥರಾ ಆಗಬಾ ರದು. ಹೇಗೆ ಆಗಬೇಕೋ ಹಾಗೆಯೇ ಆಗಿ ವೈಭವೋಪೇತವಾಗಿ ಆಗಬೇಕು.
ಒಮ್ಮೆ ಬಂದ ಪ್ರೇಕ್ಷಕ ಎಲ್ಲಾ ಪ್ರದರ್ಶನ ಆದರೂ ಹುಡುಕಿಕೊಂಡು ಹೋಗಿ ಆಟ ನೋಡುವಂತೆ ಆಗಬೇಕು. ಹಾಗೆ ಆಗಬೇಕೆಂದರೆ ಮೇಲಿನ ವ್ಯವಸ್ಥೆಗಳೂ ಸರಿಯಾಗಿ, ಯಕ್ಷಗಾನ ವಿಜೃಂಭಿಸಬೇಕು ಎಂಬುದು ಆಶಯ.