Vishweshwar Bhat Column: ಅಣುಬಾಂಬ್ ಚರ್ಚೆ ಬಾಂಬ್ ನಿಷಿದ್ಧ
ಜಪಾನಿನ ಇತಿಹಾಸದಲ್ಲಿ ಅಣುಬಾಂಬ್ ದಾಳಿಯ ಬಗ್ಗೆ ಚರ್ಚಿಸಲು ಜನರು ಹಿಂಜರಿಯುವುದು ಸಾಮಾನ್ಯ. ಇದನ್ನು ಕೆಲವೆಡೆ ನಿಷಿದ್ಧ ಎಂದು ಪರಿಗಣಿಸುವ ಮಟ್ಟಿಗೆ ಅವರು ಕಡೆಗಣಿಸುವುದನ್ನು ಗಮನಿಸ ಬಹುದು.
ಸಂಪಾದಕರ ಸದ್ಯಶೋಧನೆ
ವಿಶ್ವೇಶ್ವರ ಭಟ್
ಜಪಾನಿಗೆ ಹೋದವರು ಅಲ್ಲಿನ ಜನರೊಂದಿಗೆ ಸಾಮಾನ್ಯವಾಗಿ ಹಿರೋಶಿಮಾ, ನಾಗಾಸಕಿ ಅಣು ಬಾಂಬ್ ದಾಳಿಯ ಬಗ್ಗೆ ಚರ್ಚಿಸಲು, ತಿಳಿದುಕೊಳ್ಳಲು ಬಯಸುವುದು ಸಹಜ. ಅಷ್ಟೇ ಅಲ್ಲ, ಅಣು ಬಾಂಬ್ ದಾಳಿಗೆ ಕಾರಣವಾದ ಸಂಗತಿಗಳ ಬಗ್ಗೆ ತಿಳಿದುಕೊಳ್ಳಲು ಬಯಸುವುದೂ ಸಾಮಾನ್ಯ. ಆದರೆ ಅಲ್ಲಿ ಅನೇಕ ವರ್ಷಗಳ ಕಾಲ ವಾಸವಿದ್ದ ಸ್ನೇಹಿತರೊಬ್ಬರು, ‘ಜಪಾನಿಗೆ ಹೋದಾಗ ನೀವು ಸ್ಥಳೀಯರೊಂದಿಗೆ ಚರ್ಚಿಸಲೇಬಾರದ ವಿಷಯ ಅಂದ್ರೆ ಹಿರೋಷಿಮಾ, ನಾಗಾಸಕಿ ಅಣುಬಾಂಬ್ ದಾಳಿ’ ಅಂತ ನನಗೆ ಹೇಳಿದ್ದರು.
‘ಅದು ನಿಷಿದ್ಧ ಎಂಬಷ್ಟು ಜಪಾನಿಯರು ಆ ವಿಷಯವನ್ನು ಚರ್ಚಿಸಲು ಬಯಸುವುದಿಲ್ಲ’ ಎಂದೂ ಹೇಳಿದ್ದರು. ನಿಜ, ದ್ವಿತೀಯ ವಿಶ್ವ ಮಹಾಯುದ್ಧ ಮತ್ತು ಅದರ ಪರಿಣಾಮಗಳ ಬಗ್ಗೆ ಜಪಾನಿಯರು ಚರ್ಚಿಸಲು ಬಯಸುವುದಿಲ್ಲ. ಅದರಲ್ಲೂ ಯಾರು ತಪ್ಪು, ಯಾರು ಸರಿ ಎಂಬ ವಿಷಯವನ್ನು ಚರ್ಚಿಸಲು ಇಷ್ಟಪಡುವುದಿಲ್ಲ. ಕಾರಣ ಆ ವಾದ-ಸಂವಾದ ಯಾವತ್ತೂ ಮತ್ತಷ್ಟು ವಿವಾದವನ್ನು ಹುಟ್ಟು ಹಾಕುತ್ತದೆ ಮತ್ತು ಸಂಘರ್ಷಕ್ಕೆ ಕಾರಣವಾಗುತ್ತದೆ ಎಂಬುದು. ಜಪಾನಿನ ಇತಿಹಾಸದಲ್ಲಿ ಅಣುಬಾಂಬ್ ದಾಳಿಯ ಬಗ್ಗೆ ಚರ್ಚಿಸಲು ಜನರು ಹಿಂಜರಿಯುವುದು ಸಾಮಾನ್ಯ. ಇದನ್ನು ಕೆಲವೆಡೆ ನಿಷಿದ್ಧ ಎಂದು ಪರಿಗಣಿಸುವ ಮಟ್ಟಿಗೆ ಅವರು ಕಡೆಗಣಿಸುವುದನ್ನು ಗಮನಿಸ ಬಹುದು.
ಇದನ್ನೂ ಓದಿ: Vishweshwar Bhat Column: ಪದಕ ವಿಜೇತರ ಮನಸ್ಥಿತಿ
1930ರ ದಶಕದಲ್ಲಿ ಜಪಾನ್ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಪೆಸಿಫಿಕ್ ಪ್ರದೇಶದಲ್ಲಿ ಆಕ್ರಮಣಾತ್ಮಕ ನೀತಿಯನ್ನು ಅನುಸರಿಸಿತು. 1941ರ ಡಿಸೆಂಬರ್ 7ರಂದು ಅಮೆರಿಕದ ಪರ್ಲ್ ಹಾರ್ಬರ್ ಮೇಲೆ ಜಪಾನ್ ನಡೆಸಿದ ದಾಳಿ, ದ್ವಿತೀಯ ವಿಶ್ವಯುದ್ಧದಲ್ಲಿ ದೇಶದ ಪಾತ್ರವನ್ನು ತೀವ್ರಗೊಳಿಸಿತು. ಯುದ್ಧದ ಅಂತಿಮ ಘಟ್ಟದಲ್ಲಿ, 1945ರ ಆಗಸ್ಟ್‌ನಲ್ಲಿ ಹಿರೋಶಿಮಾ ಮತ್ತು ನಾಗಾಸಕಿ ನಗರಗಳ ಮೇಲೆ ನಡೆಸಿದ ಪರಮಾಣು ಬಾಂಬ್ ದಾಳಿಗೆ ಜಪಾನ್ ದಯನೀಯವಾಗಿ ಸೋತಿತು.
ಹಿರೋಶಿಮಾ ಮತ್ತು ನಾಗಾಸಕಿ ಪೂರ್ತಿಯಾಗಿ ನಾಶವಾದವು. ಲಕ್ಷಾಂತರ ಜನರು ಸಾವನ್ನಪ್ಪಿದರು ಮತ್ತು ಅನೇಕರು ದೀರ್ಘಕಾಲದ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದರು. ಯುದ್ಧದ ನಂತರ ಜಪಾನ್ ತೀವ್ರ ಆರ್ಥಿಕ ಕುಸಿತಕ್ಕೆ ಒಳಪಟ್ಟಿತು ಮತ್ತು ದೇಶವನ್ನು ಮರು ನಿರ್ಮಿಸಲು ಹಲವಾರು ದಶಕಗಳ ಕಾಲ ತೆಗೆದುಕೊಂಡಿತು.
1947ರಲ್ಲಿ ಜಪಾನ್ ತನ್ನ ಹೊಸ ಶಾಂತಿ ಸಂವಿಧಾನವನ್ನು ರಚಿಸಿ, ಯುದ್ಧವನ್ನು ತ್ಯಜಿಸಿತು. ಇದು ಸಂಕ್ಷಿಪ್ತ ಹಿನ್ನೆಲೆ. ಇಂಥ ವಿಷಯಗಳು ಚರ್ಚೆಗೆ ಬರುವುದು ಸಾಮಾನ್ಯ. ಜಪಾನ್ ಎಂದ ತಕ್ಷಣ ಸಾಮಾನ್ಯವಾಗಿ ಕಣ್ಣ ಮುಂದೆ ಬರುವುದು ಅಣುಬಾಂಬ್ ದಾಳಿಗೆ ತುತ್ತಾದ ಹಿರೋಶಿಮಾ ಮತ್ತು ನಾಗಾಸಕಿ ನಗರಗಳು. ಅಣುಬಾಂಬ್ ದಾಳಿಯ ವಿಷಯ ಸೂಕ್ಷ್ಮವಾಗಿರುವುದರಿಂದ ಯಾವತ್ತೂ ಆಕ್ರೋಶಭರಿತವಾಗಿರುತ್ತದೆ.
ಈ ವಿಷಯದ ಬಗ್ಗೆ ನಡೆಯುವ ಯಾವ ಚರ್ಚೆಯೂ ಶಾಂತಿಯುತವಾಗಿ ಇರಲು ಸಾಧ್ಯವಿಲ್ಲ. ಅದಕ್ಕಿಂತ ಹೆಚ್ಚಾಗಿ ಆ ವಿಷಯವನ್ನು ಈಗ ಚರ್ಚಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಕೆಲವರು ಜಪಾನಿನ ಯುದ್ಧದ ಕಾರ್ಯತಂತ್ರಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಾರೆ, ಇನ್ನೊಬ್ಬರು ಅದನ್ನು ತೀವ್ರವಾಗಿ ವಿರೋಧಿಸುತ್ತಾರೆ. ಯುದ್ಧದ ಸಮಯದ ದಾರಿ ತಪ್ಪಿದ ತೀರ್ಮಾ ನಗಳು ಮತ್ತು ಅದರ ಪರಿಣಾಮವಾಗಿ ಉಂಟಾದ ಹಾನಿ ಬಗ್ಗೆ ಚರ್ಚಿಸುವುದು ಯಾವತ್ತೂ ನೋವಿ ನೊಂದಿಗೆ ಕೂಡಿರುತ್ತದೆ.
ಅಷ್ಟೇ ಅಲ್ಲ, ಜಪಾನಿಯರು ಹಿರೋಶಿಮಾ ಮತ್ತು ನಾಗಾಸಕಿ ಮೇಲೆ ನಡೆದ ದಾಳಿಯನ್ನು ಇಂದಿ ಗೂ ರಾಷ್ಟ್ರೀಯ ನೋವಿನ ಘಟನೆಯಾಗಿ ಪರಿಗಣಿಸುತ್ತಾರೆ. ನೋವು ತರುವ ವಿಷಯವನ್ನು ಚರ್ಚಿ ಸಲು ಯಾರೂ ಬಯಸುವುದಿಲ್ಲ. ಅದಕ್ಕಿಂತ ಮುಖ್ಯವಾಗಿ, ಜಪಾನ್ ಇಂದು ಶಾಂತಿ ಮತ್ತು ತಂತ್ರಜ್ಞಾನದ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ.
ದ್ವಿತೀಯ ವಿಶ್ವಯುದ್ಧವನ್ನು ಚರ್ಚಿಸುವುದರಿಂದ ಆಧುನಿಕ ಜಪಾನಿನ ಘನತೆಯ ಮೇಲೆ ಬೇಜಾ ರಿನ ಪ್ರತಿಫಲಗಳು ಉಂಟಾಗಬಹುದು. ಹಾಗಂತ ಆ ವಿಷಯವನ್ನು ಯಾರೂ ಚರ್ಚಿಸುವುದೇ ಎಂದೇನೂ ಇಲ್ಲ. ಪ್ರತಿವರ್ಷ ಆಗ 6ರಂದು ನಡೆಯುವ ಶ್ರದ್ಧಾಂಜಲಿ ಕಾರ್ಯಕ್ರಮಗಳಲ್ಲಿ ಯುದ್ಧ ದ ಕುರಿತು ಚರ್ಚೆ ನಡೆಯುತ್ತದೆ. ಆದರೆ ಅದನ್ನು ಉಳಿದ ದಿನಗಳಿಗೂ ವಿಸ್ತರಿಸಲು ಅವರು ಬಯ ಸುವುದಿಲ್ಲ. ಜಪಾನಿಯರು ಚರ್ಚೆಗಳಲ್ಲಿ ತನ್ನ ಶಾಂತಿಯ ಪ್ರಾತಿನಿಧ್ಯವನ್ನು ತೋರಿಸುವಲ್ಲಿ ಹೆಚ್ಚಿನ ಒತ್ತು ನೀಡುತ್ತಾರೆ ಮತ್ತು ಯುದ್ಧದ ಕಾಲದ ಇತಿಹಾಸವನ್ನು ಗಮನಕ್ಕೆ ತರುವ ಸಂದರ್ಭ ಗಳಲ್ಲಿ ಮೌನಕ್ಕೆ ಶರಣಾಗುತ್ತಾರೆ.