ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Hari Paraak Column: ಎಲ್ಲದಕ್ಕೂ ಡೆಮೋ ತೋರಿಸಿ ಅಂತ ಕೇಳೋದು- ʼಡೆಮೋʼ ಕ್ರಸಿ

ಚಿತ್ರದ ಭಾಗವಾಗಿದ್ದ ಎಲ್ಲರಿಗೂ ಇದು ಒಂಥರಾ ಪ್ಲೆಸೆಂಟ್ ಸರ್‌ಪ್ರೈಸ್. ಮತ್ತೆ ಹಳೆಯ ವೈಭವದ ದಿನಗಳು ಮರುಕಳಿಸುತ್ತಿವೆ ಎಂಬಂತೆ ಜನ ತಂಡೋಪ ತಂಡವಾಗಿ ಬಂದು ಸಂಸಾರ ಸಮೇತ ಸಿನಿಮಾ ನೋಡುತ್ತಿದ್ದಾರೆ. ಹಳೆಯ ಕಾಲದಲ್ಲಿ ಎತ್ತಿನ ಗಾಡಿ ಕಟ್ಟಿಕೊಂಡು ಬರ್ತಾ ಇದ್ರು. ಈಗ ಅದೇ ಹಳ್ಳಿ ಜನ ಟ್ರ್ಯಾಕ್ಟರ್‌ಗಳಲ್ಲಿ ಬರ್ತಾ ಇದ್ದಾರೆ ಅನ್ನೋದಷ್ಟೇ ವ್ಯತ್ಯಾಸ.

ತುಂಟರಗಾಳಿ

ಸಿನಿಗನ್ನಡ

ಪ್ರೇಮದ ಊರಲಿ ಸಿನಿಮಾದ ಸದ್ದು ಮತ್ತಷ್ಟು ಜೋರಾಗಿದೆ. ಪಾಪ ಸಿನಿಮಾ ಮಾಡಿದವರೇ ನಮ್ಮ ಸಿನಿಮಾ ಪ್ರೇಕ್ಷಕರಿಗೆ ಇಷ್ಟ ಆಗುತ್ತೋ ಇಲ್ವೋ ಅಂದ್ಕೊಡಿದ್ವಿ ಆದ್ರೆ ಇಷ್ಟರ ಮಟ್ಟಿಗೆ ಇಷ್ಟ ಆಗುತ್ತೆ ಅಂತ ಗೊತ್ತಿರಲಿಲ್ಲ ಅಂತ ಗಾಬರಿಯಾಗಿದ್ದಾರೆ. ಇದನ್ನು ಚಿತ್ರದ ನಾಯಕ ಶ್ರೀರಾಮ್ ಅವರೇ ಸ್ವತಃ ಹೇಳಿಕೊಂಡಿದ್ದಾರೆ.

ಚಿತ್ರದ ಭಾಗವಾಗಿದ್ದ ಎಲ್ಲರಿಗೂ ಇದು ಒಂಥರಾ ಪ್ಲೆಸೆಂಟ್ ಸರ್‌ಪ್ರೈಸ್. ಮತ್ತೆ ಹಳೆಯ ವೈಭವದ ದಿನಗಳು ಮರುಕಳಿಸುತ್ತಿವೆ ಎಂಬಂತೆ ಜನ ತಂಡೋಪ ತಂಡವಾಗಿ ಬಂದು ಸಂಸಾರ ಸಮೇತ ಸಿನಿಮಾ ನೋಡುತ್ತಿದ್ದಾರೆ. ಹಳೆಯ ಕಾಲದಲ್ಲಿ ಎತ್ತಿನ ಗಾಡಿ ಕಟ್ಟಿಕೊಂಡು ಬರ್ತಾ ಇದ್ರು. ಈಗ ಅದೇ ಹಳ್ಳಿ ಜನ ಟ್ರ್ಯಾಕ್ಟರ್‌ಗಳಲ್ಲಿ ಬರ್ತಾ ಇದ್ದಾರೆ ಅನ್ನೋದಷ್ಟೇ ವ್ಯತ್ಯಾಸ.

ಸಿನಿಮಾ ಹೆಸರು ಕೇಳಿ ಇದ್ಯಾವುದೋ ಹಳೆಯ ಕಾಲದ ಸಿನಿಮಾ ಅಂತ ಸುಮ್ಮನಾಗಿದ್ದವರೂ ಕೂಡಾ ಈಗ ಈ ಸಿನಿಮಾದ ಜನಪ್ರಿಯತೆಯ ಹಾವಳಿಗೆ ತುತ್ತಾಗಿದ್ದಾರೆ. ಪ್ರೇಮದ ಊರಲಿ ಸಿನಿಮಾ ನೋಡಿದ್ರಾ ಅಂದಾಗ ಇಲ್ಲ ಅಂದ್ರೆ ನೋಡಿಲ್ವಾ ಅಂತ ಊರಗಲ ಬಾಯಿ ತೆರೆದು ಆಶ್ಚರ್ಯದಿಂದ ಪ್ರಶ್ನೆ ಕೇಳುವವರಿಗಾಗಿಯಾದರೂ ಸಿನಿಮಾವನ್ನ ಒಮ್ಮೆ ನೋಡಿಬಿ ಡೋಣ ಅಂತ ಚಿತ್ರಮಂದಿರದ ಕಡೆಗೆ ದಾಪುಗಾಲು ಹಾಕುತ್ತಿದ್ದಾರೆ. ಮತ್ತು ಎಂದಿನಂತೆ ಚಿತ್ರ ಬಹುತೇಕರಿಗೆ ಇಷ್ಟ ಆಗಿದ್ರೂ ಒಂದು ವರ್ಗ ಮಾತ್ರ ಈ ಚಿತ್ರದಲ್ಲಿ ಅಂಥಾದ್ದೇನಿದೆ ಅಂತ ಗೊತ್ತಾಗಲಿಲ್ಲ.

ಇದೊಂದು ಸಾಧಾರಣ ಚಿತ್ರ ಅಷ್ಟೇ. ಇಷ್ಟು ದೊಡ್ಡ ಹಿಟ್ ಆಗುವಂಥದ್ದು ಏನೂ ಇಲ್ಲ ಅಂತ ಗೊಣಗು ತ್ತಿರುವುದೂ ಇದೆ. ಅದರಲ್ಲೂ ಚಿತ್ರದ ಮೈನಸ್ ಪಾಯಿಂಟ್ ಬಗ್ಗೆ ಮಾತಾ ಡುವವವರಿಗೆ ತುತ್ತಾಗಿರೋದು ಅಜ್ಜಿ ಪಾತ್ರ ಮಾಡಿದ ನಟಿ ಮತ್ತು ಅವರ ಮೇಕಪ್. ಅದೇನೇ ಇರಲಿ. ಇಲ್ಲಿ ಪಾಯಿಂಟ್ ಅಂದ್ರೆ ಸಿನಿಮಾ ಸಕ್ಸಸ್ ಆಗಿದೆ ಅನ್ನೋದು ಅಷ್ಟೇ.

ಇದನ್ನೂ ಓದಿ: H‌ari Paraak Column: ಆರ್ಟ್‌ ಆಫ್‌ ಸೈನಿಂಗ್-‌ ಸೈನ್ಸ್

ಲೂಸ್‌ ಟಾಕ್‌- ಲಾಲೂ ಪ್ರಸಾದ್‌ ಯಾದವ್

ಏನ್ ಲಾಲೂ ಪ್ರಸಾದ್ ಅವ್ರೇ, ಪುಣ್ಯಕೋಟಿ ಹೆಸರಲ್ಲಿ ಕೋಟಿ ಕೋಟಿ ತಿಂದ್ರಲ್ಲ, ಈಗ ಹೆಂಗಿದೆ ಪರಿಸ್ಥಿತಿ? ‌

- ಹುಟ್ಟಿಸಿದ್ ದೇವ್ರು ಹುಲ್ಲು ಮೇಯಿಸ್ದೇ ಇರ್ತಾನಾ ಅಂತ ತಿಂದೆ. ಆದ್ರೆ, ಹಾಲು ಕುಡಿದ ಮಕ್ಕಳು ಬದುಕೋದೇ ಕಷ್ಟ, ಇನ್ನು ಹುಲ್ಲು ತಿನ್ನೋ ಮಕ್ಕಳು ಬದುಕ್ತಾರಾ? ಹುಲ್ಲು ತಿಂದಿದ್ದಕ್ಕೆ ಗಲ್ಲು ಶಿಕ್ಷೆ ಕೊಡಲಿಲ್ಲ ಪುಣ್ಯ. ಜೈಲಲ್ಲಿ ಕಲ್ಲು ಕುಟ್ಟಿಸಿದ್ರು ಅಷ್ಟೇ.

ಅಂತೂ ಕೊಟ್ಟಿಗೆಯಲ್ಲೂ ಕೋಟಿ ದುಡೀಬಹುದು ಅಂತ ತೋರಿಸಿ ‘ಫಾಡರ್’ ಆಫ್ ದಿ ನೇಶನ್’ ಅಂತ ಹೆಸರು ಮಾಡಿಬಿಟ್ರಿ. ಸರಿ ನೀವು ಹುಲ್ಲು ದೋಚುತ್ತಾ ಮೇವಿನ ಹಾಡು ಹಾಡುವಾಗ ನಿಮ್ಮ ಮನೆಯವ್ರು ಎಚ್ಚರಿಕೆ ಕೊಡಲಿಲ್ವಾ? ‌

- ಅಯ್ಯೋ, ಅವರೇ ಇದಕ್ಕೆಲ್ಲ ಕುಮ್ಮಕ್ಕು ಕೊಟ್ಟಿದ್ದು.. ಹೆಸರೇ ‘ರಾಬರಿ’ ದೇವಿ..

ಸರಿ, ಈ ಮೇವು ಹಗರಣದಲ್ಲಿ ನಿಮ್ಮ ಪಾಲಿನ ಒಟ್ಟು ‘ಗ್ರಾಸ್’ ಕಲೆಕ್ಷನ್ ಎಷ್ಟಾಗಿತ್ತು?

- ಎಷ್ಟ್‌ ಸಿಕ್ರೆ ಏನು ಬಂತು. ಹಸು ಎಮ್ಮೆ ವಿಷ್ಯದಲ್ಲಿ ‘ಮೇಯೋ’ ಹಾಲ್’ನಲ್ಲಿ ಹೋದ ಮಾನ ಆನೆ ಕೊಟ್ರೂ ಬರಲ್ಲ ಬಿಡಿ. ‌

ಏನೇ ಆದ್ರೂ ನಿಮ್ಮಂಥವ್ರಿಗೆ ಏನು ಕಷ್ಟ ಆಗಲ್ಲ ಬಿಡಿ, ಜೈಲಿಗೂ ಹುಲ್ಲಿನ ಹಾಸಿಗೆ ಮೇಲೆ ನಡೆಸಿಕೊಂಡೇ ಕರ್ಕೊಂಡ್ ಹೋಗ್ತಾರೆ ಅಲ್ವಾ?

- ರೀ ಸ್ವಾಮಿ.. ಇನ್ನೊಂದ್ ಸಲ ಆ ಹುಲ್ಲಿನ್ ಬಗ್ಗೆ ಮಾತ್ರ ದಯವಿಟ್ಟು ಮಾತಾಡ್ಬೇಡಿ, ಸಾಕು..

ಹೋಗ್ಲಿ, ಬಿಹಾರದಲ್ಲಿ ಏಕ‘ಮೇವಾ’ಧಿಪತಿ ಅಂದ್ಕೊಂಡಿದ್ದ ನಿಮ್ಮ ಸದ್ಯದ ಪರಿಸ್ಥಿತಿ ನೋಡಿ ಜನ ಏನಂತಿದಾರೆ?

- ನನ್ ಹಳೇ ಡೈಲಾಗ್‌ನ ಸ್ವಲ್ಪ ಬದಲಾಯಿಸಿಕೊಂಡು ನನ್ನನ್ನೇ ಆಡ್ಕೊತಿದಾರೆ ‘ಜಬ್ ತಕ್ ರಹೇಗಾ ಸಮೋಸೇ ಮೇ ಆಲೂ, ತಬ್ ತಕ್ ರಹೇಗಾ ತಿಹಾರ್ ಮೇ ಲಾಲೂ’ ಅಂತ.

(ಕಾಲ್ಪನಿಕ ಸಂದರ್ಶನ)

ನೆಟ್‌ ಪಿಕ್ಸ್

ಒಬ್ಬ ಪೊಲೀಸ್ ಆಫೀಸರ್ ಹಳ್ಳಿಯಲ್ಲಿದ್ದ ಖೇಮುವಿನ ಮನೆಗೆ ಹೋದ, ಖೇಮುವನ್ನು ಕರೆದು ‘ನಾನು ಪೊಲೀಸ್ ಆಫೀಸರ್. ನಿಮ್ಮ ಹೊಲದಲ್ಲಿ ಗಾಂಜಾ ಬೆಳಿತಾ ಇದ್ದೀರ ಅಂತ ನಮಗೆ ದೂರು ಬಂದಿದೆ. ಚೆಕ್ ಮಾಡ್ಬೇಕು’ ಅಂದ. ಖೇಮು ಪೊಲೀಸ್ ಆಫೀಸರ್‌ನನ್ನು ಕರೆದುಕೊಂಡು ತನ್ನ ವಿಶಾಲವಾದ ಹೊಲಕ್ಕೆ ಕರೆದುಕೊಂಡು ಹೋಗಿ ‘ಸರಿ ಅದೇನ್ ಬೇಕೋ ಚೆಕ್ ಮಾಡಿ ಸರ್, ಆದ್ರೆ ದಯವಿಟ್ಟು ಹೊಲದ ಕೊನೆಯಲ್ಲಿರೋ ಹಳ್ಳದ ಕಡೆಗೆ ಮಾತ್ರ ಹೋಗಬೇಡಿ’ ಅಂದ. ಪೊಲೀಸ್ ಆಫೀಸರ್ ಕಳ್ಳ ಸಿಕ್ಕಾಕ್ಕೊಂಡ ಎನ್ನುವ ಹುಮ್ಮಸ್ಸಿನಲ್ಲಿ, ‘ನಂಗೆ ಅಲ್ಲಿಗೆ ಹೋಗ್ಬೇಡ, ಇಲ್ಲಿಗೆ ಹೋಗ್‌ಬೇಡ ಅಂತ ಹೇಳೋಕೆ ನೀನ್ಯಾರೋ. ನಾನು ಪೊಲೀಸ್ ಆಫೀಸರ್, ಇಲ್ ನೋಡು ನನ್ನ ಐಡೆಂಟಿಟಿ ಕಾರ್ಡ್. ನಂಗೆ ಎಲ್ಲಿಗ್ ಬೇಕಾದ್ರೂ ಹೋಗೋಕೆ ಅಧಿಕಾರ ಇದೆ. ಯಾರೂ ದೂಸ್ರಾ ಮಾತಾಡಂಗಿಲ್ಲ’ ಎಂದು ಅಬ್ಬರಿಸಿದ. ತಪ್ಪಾಯ್ತು ಸರ್ ಎಂದ ಖೇಮು ‘ಹೋಗಿ ಎಲ್ ಬೇಕಾದ್ರೂ ಚೆಕ್ ಮಾಡ್ಕೊಳಿ’ ಅಂತ ಕಳಿಸಿದ. ಸ್ವಲ್ಪ ಹೊತ್ತು ಕಳೆದ ಮೇಲೆ ಆ ಪೊಲೀಸ್ ಆಫೀಸರ್ ಹೋದ ದಾರಿಯಲ್ಲಿ ಒಂದೇ ಉಸಿರಲ್ಲಿ ಓಡ್ತಾ ವಾಪಸ್ ಬರ್ತಾ ಇದ್ದ. ಆ ರಸ್ತೆ ಪಕ್ಕದ ಮೇಲಿನ ದಿನ್ನೆ ಮೇಲೆ ಕೂತಿದ್ದ ಖೇಮುವನ್ನು ನೋಡಿ, ‘ಅಯ್ಯೋ ಕೊನೇಲಿರೋ ಆ ಹಳ್ಳದ ಕಡೆಗೆ ಹೋಗಿದ್ದೆ, ಅಲ್ಲಿದ್ದ ಭಯಂಕರ ಗೂಳಿ ನನ್ನ ಅಟ್ಟಿಸಿಕೊಂಡ್ ಬರ್ತಿದೆ. ಪ್ಲೀಸ್ ಹೆಲ್ಪ್ ಮಾಡು’ ಅಂತ ಅಂಗಲಾಚಿಕೊಂಡ. ಅದಕ್ಕೆ ಖೇಮು ದಿನ್ನೆಯ ಮೇಲಿಂದನೇ ಕೂಗಿ ಹೇಳಿದ ‘ಸಾರ್, ನೀವು ಪೊಲೀಸ್ ಆಫೀಸರ್ ಅಂತ ಗೂಳಿಗೆ ಗೊತ್ತಿಲ್ಲ ಅನ್ಸುತ್ತೆ, ನಿಮ್ಮತ್ರ ಐಡಿ ಕಾರ್ಡ್ ಇದ್ಯಲ್ಲ ಅದನ್ನ ತೋರ್ಸಿ, ಬೇಗ ತೋರ್ಸಿ ಸಾರ್’

ಲೈನ್‌ ಮ್ಯಾನ್

ಸಿಕ್ಕ ಸಿಕ್ಕ ವಸ್ತುಗಳಿಗೆಲ್ಲ ಡೆಮೋ ತೋರಿಸಿ ಅಂತ ಕೇಳುವ ವ್ಯವಸ್ಥೆ

- ‘ಡೆಮೋ’ಕ್ರಸಿ ನಮಗೆ ವಯಸ್ಸಾಗಿದೆ ಅಂತ ಗೊತ್ತಾಗೋದು ಯಾವಾಗ?

- ಹೊರಗೆ ಸುತ್ತಾಡಬೇಕು ಅನ್ನೋ ಆಸೆಗಿಂತ ಸೇಫ್ ಆಗಿ ಮನೆ ತಲುಪಿದರೆ ಸಾಕಪ್ಪಾ ಅನ್ನಿಸಿದಾಗ. ‌

- ಏನು? ಯಾವಾಗ? ಅನ್ನೋ ಪದಗಳನ್ನು ನೀವು ಹೆಚ್ಚಾಗಿ ಬಳಸ್ತಿದ್ದೀರಾ ಅಂದಾಗ.

- ಪ್ರಪಂಚದಲ್ಲಿ ಸೌಂಡ್ ಪೊಲ್ಯೂಷನ್ ಕಡಿಮೆ ಆಗಿದೆ ಅನ್ನಿಸಿದಾಗ.

ನೀವು ಆಗಾಗ ಮೊಬೈಲ್ ಕಳೆದುಕೊಳ್ಳುತ್ತಿದ್ದರೆ

- ಮುಂದಿನ ಬಾರಿ ಅತಿ ದುಬಾರಿ ಮೊಬೈಲ್ ಕೊಂಡುಕೊಳ್ಳಿ.

ದೇವರಿಗೂ ಸಚಿನ್ ತೆಂಡೂಲ್ಕರ್‌ಗೂ ಏನು ವ್ಯತ್ಯಾಸ?

- ದೇವರ ಅಭಿಮಾನಿಗಳು ಅವನನ್ನ ‘ಸಚಿನ್ ತೆಂಡೂಲ್ಕರ್’ ಅಂತ ಕರೆಯೊಲ್ಲ.

ಸ್ವಚ್ಛತಾ ಆಂದೋಲನದ ಸ್ಲೋಗನ್

- ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು, ಸುಸು ಮಾಡಿದ ಮೇಲೆ ನೀರು ಹಾಕಲೇಬೇಕು.

ಗಾಂಧಿ ಜಯಂತಿ ದಿನ ಎಲ್ಲರೂ ಗಲೀಜು ಕ್ಲೀನ್ ಮಾಡ್ತಾ ಇದ್ರು

- ಖೇಮು: ಇವತ್ತು ಗಾಂಧಿ ಜಯಂತಿನಾ ಇಲ್ಲ ‘ಗಂಧಿ’ ಜಯಂತಿನಾ?

- ಮೋದಿಯಿಂದಾಗಿ ದೇಶದಲ್ಲಿ ಯಾರು ಬೇಕಾದರೂ ಕಸ ಹೊಡೆಯುವ ಅವಕಾಶ ಸಿಕ್ಕಿದೆ.

- ಹಾಗಾಗಿ ಭಾರತ ಈಗ ‘ಗುಡಿಸಲು’ ಮುಕ್ತ ದೇಶ

ಕಾಯಕವೇ ಕೈಲಾಸ

- ಡಾಕ್ಟರ್ ಒಬ್ಬರ ಕಾರ್ ಅನ್ನು ಸರ್ವೀಸ್ ಮಾಡಿದ ಮೆಕ್ಯಾನಿಕ್ ಕೇಳಿದ ‘ಅಲ್ಲ ಡಾಕ್ಟ್ರೇ ನೀವು ಮಾಡೋ ಕೆಲಸನೇ ನಾವೂ ಮಾಡ್ತೀವಿ. ಈಗ ನಿಮ್ಮ ಕಣ್ಮುಂದೆನೇ ನಿಮ್ಮ ಕಾರಿನ ಹಾರ್ಟು, ಬ್ರೇನು, ಕಿಡ್ನಿ ಎಲ್ಲ ತೆಗೆದು ಕ್ಲೀನ್ ಮಾಡಿ ಕೊಟ್ಟಿ ದ್ದೇನೆ. ನೀವೂ ರೋಗಿಗಳ ದೇಹಕ್ಕೆ ಇದನ್ನೇ ಅಲ್ವೇ ಮಾಡೋದು. ಆದ್ರೂ ನಮಗೆ ಕಡಿಮೆ ದುಡ್ಡು, ನಿಮಗೆ ಜಾಸ್ತಿ ದುಡ್ಡು ಯಾಕೆ?’. ಅದಕ್ಕೆ ಡಾಕ್ಟರ್ ಹೇಳಿದ ‘ಸರಿ ಇಷ್ಟೊತ್ತು ಮಾಡಿದಿಯಲ್ಲ ಅದನ್ನೆಲ್ಲ ಎಂಜಿನ್ ರನ್ನಿಂಗ್‌ನಲ್ಲಿ ಇರುವಾಗ ಮಾಡು ನೋಡೋಣ’.

ಹರಿ ಪರಾಕ್‌

View all posts by this author