ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gururaj Gantihole Column: ಲೆಕ್ಕ ಪರಿಶೋಧಕ ಸಿಎಜಿ: ಜನರ ಹಣದ ಮೌನ ಕಾವಲುಗಾರ !

ಪ್ರಜಾಪ್ರಭುತ್ವ ಎಂದರೆ ಕೇವಲ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಮಾತ್ರವಲ್ಲ; ಅದು ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಕೂಡ ಹೌದು. ವಿಶೇಷವಾಗಿ, ಸರ್ಕಾರವು ಹಣವನ್ನು ಹೇಗೆ ಬಳಸುತ್ತದೆ ಎಂಬುದನ್ನು ಪ್ರಶ್ನಿಸುವ ಹಕ್ಕು- ಇದೇ ಪ್ರಜಾಪ್ರಭುತ್ವದ ಮೂಲಭೂತ ತತ್ವ. ಆದರೆ ಆಡಳಿತದ ಪ್ರಕ್ರಿಯೆಯಲ್ಲಿ ಈ ಸತ್ಯವು ಮಸುಕಾಗುತ್ತದೆ.

ಗಂಟಾಘೋಷ

ತೆರಿಗೆ ರೂಪದಲ್ಲಿ ಸಂಗ್ರಹಿಸಲ್ಪಟ್ಟ ಹಣ, ಸರ್ಕಾರದ ಯೋಜನೆಗಳ ಮೂಲಕ ರ್ಚಾಗುತ್ತದೆ. ಆದರೆ ಈ ಹಣದ ಹಾದಿಯನ್ನು ಯಾರು ಗಮನಿಸುತ್ತಾರೆ? ಈ ಹಣ ನಿಜವಾಗಿಯೂ ಜನರಿಗೆ ತಲುಪುತ್ತಿದೆಯೇ ಎಂಬುದನ್ನು ಯಾರು ಪರಿಶೀಲಿಸು ತ್ತಾರೆ? ಇಲ್ಲಿ ಪ್ರಜಾಪ್ರಭುತ್ವದ ಅಗೋಚರ ಮುಖ ಕಾಣಿಸುತ್ತದೆ. ಅದು ಲೆಕ್ಕ ಪರಿಶೋಧನೆ (ಆಡಿಟಿಂಗ್) ವ್ಯವಸ್ಥೆ. ಆ ವ್ಯವಸ್ಥೆಯ ಕೇಂದ್ರಬಿಂದುವೇ ಕಾಂಪ್ಟ್ರೋ ಲರ್ ಆಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ.

ಭಾರತದ ಪ್ರಜಾಪ್ರಭುತ್ವವನ್ನು ನಾವು ಸಾಮಾನ್ಯವಾಗಿ ಚುನಾವಣೆಯ ಮೂಲಕ ಅಳೆಯುತ್ತೇವೆ. ಮತದಾನದ ಹಕ್ಕು, ಸರ್ಕಾರವನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ, ಆಡಳಿತ ಬದಲಾಯಿಸುವ ಸಾಮರ್ಥ್ಯ - ಇವೆಲ್ಲವೂ ಅದರ ಗೋಚರ ಮುಖಗಳು. ಚುನಾವಣಾ ದಿನದಂದು ಜನರು ಸಾಲಿನಲ್ಲಿ ನಿಂತು ಮತ ಹಾಕುವ ದೃಶ್ಯ ಪ್ರಜಾಪ್ರಭುತ್ವದ ಹಬ್ಬದಂತಿರುತ್ತದೆ. ಆದರೆ ಪ್ರಜಾಪ್ರಭುತ್ವವನ್ನು ಕೇವಲ ಈ ಒಂದು ಕ್ಷಣಕ್ಕೆ ಸೀಮಿತ‌ ಗೊಳಿಸಿದರೆ, ಅದರ ನಿಜವಾದ ಅರ್ಥವನ್ನು ನಾವು ಕಳೆದುಕೊಳ್ಳುತ್ತೇವೆ.

ಪ್ರಜಾಪ್ರಭುತ್ವ ಎಂದರೆ ಕೇವಲ ಸರ್ಕಾರವನ್ನು ಆಯ್ಕೆ ಮಾಡುವ ಹಕ್ಕು ಮಾತ್ರವಲ್ಲ; ಅದು ಸರ್ಕಾರವನ್ನು ಪ್ರಶ್ನಿಸುವ ಹಕ್ಕು ಕೂಡ ಹೌದು. ವಿಶೇಷವಾಗಿ, ಸರ್ಕಾರವು ಹಣವನ್ನು ಹೇಗೆ ಬಳಸುತ್ತದೆ ಎಂಬುದನ್ನು ಪ್ರಶ್ನಿಸುವ ಹಕ್ಕು- ಇದೇ ಪ್ರಜಾಪ್ರಭುತ್ವದ ಮೂಲಭೂತ ತತ್ವ. ಆದರೆ ಆಡಳಿತದ ಪ್ರಕ್ರಿಯೆಯಲ್ಲಿ ಈ ಸತ್ಯವು ಮಸುಕಾಗುತ್ತದೆ.

ತೆರಿಗೆ ರೂಪದಲ್ಲಿ ಸಂಗ್ರಹಿಸಲ್ಪಟ್ಟ ಹಣ, ಸರ್ಕಾರದ ಯೋಜನೆಗಳ ಮೂಲಕ ಖರ್ಚಾಗು ತ್ತದೆ. ಆದರೆ ಈ ಹಣದ ಹಾದಿಯನ್ನು ಯಾರು ಗಮನಿಸುತ್ತಾರೆ? ಈ ಹಣ ನಿಜವಾಗಿಯೂ ಜನರಿಗೆ ತಲುಪುತ್ತಿದೆಯೇ ಎಂಬುದನ್ನು ಯಾರು ಪರಿಶೀಲಿಸುತ್ತಾರೆ? ಇಲ್ಲಿ ಪ್ರಜಾಪ್ರಭುತ್ವದ ಅಗೋಚರ ಮುಖ ಕಾಣಿಸುತ್ತದೆ. ಅದು ಲೆಕ್ಕಪರಿಶೋಧನೆ (ಆಡಿಟಿಂಗ್) ವ್ಯವಸ್ಥೆ. ಆ ವ್ಯವಸ್ಥೆಯ ಕೇಂದ್ರಬಿಂದುವೇ ಕಾಂಪ್ಟ್ರೋಲರ್ ಆಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ. ‌

ಸಾರ್ವಜನಿಕ ಹಣದ ಬಳಕೆಯ ಮೂಲ ತತ್ವ ಏನೆಂದರೆ, ಅದು ಜನರ ಹಿತಕ್ಕಾಗಿ ಮಾತ್ರ ಬಳಸಲ್ಪಡಬೇಕು. ಇದು ಕೇವಲ ಆರ್ಥಿಕ ತತ್ವವಲ್ಲ; ಇದು ಒಂದು ನೈತಿಕ ಬದ್ಧತೆ. ಸರ್ಕಾರವು ಜನರ ವಿಶ್ವಾಸವನ್ನು ಹೊತ್ತುಕೊಂಡಿದೆ. ಈ ವಿಶ್ವಾಸವನ್ನು ಉಳಿಸಿಕೊಳ್ಳಲು ಪಾರದರ್ಶಕತೆ ಮತ್ತು ಹೊಣೆಗಾರಿಕೆ ಅಗತ್ಯ.

ಇದನ್ನೂ ಓದಿ: Gururaj Gantihole Column: ಅಗ್ನಿವೀರರಿಗೆ ಸಿಕ್ಕ ಕಾಯಕಲ್ಪ ಎನ್‌ʼಸಿಸಿಗೂ ವಿಸ್ತರಿಸಬೇಕಿದೆ !

ಆದರೆ ವಾಸ್ತವಿಕ ಆಡಳಿತದಲ್ಲಿ ಏನಾಗುತ್ತದೆ?: ಹಣ ದುರ್ಬಳಕೆ ಆಗುತ್ತದೆ. ಯೋಜನೆ ಗಳು ವಿಳಂಬವಾಗುತ್ತವೆ. ಕೆಲವೊಮ್ಮೆ ಹಣವೇ ಗುರಿಯವರೆಗೂ ತಲುಪುವುದಿಲ್ಲ. ಈ ಸಂದರ್ಭಗಳಲ್ಲಿ ಆಡಿಟಿಂಗ್ ಒಂದು ನೈತಿಕ ಕನ್ನಡಿಯಾಗಿ ಕೆಲಸ ಮಾಡುತ್ತದೆ. ನೀವು ಜನರ ಹಣವನ್ನು ಹೇಗೆ ಬಳಸಿದ್ದೀರಿ? ಹೇಗೆ ನಿಭಾಯಿಸಿದ್ದೀರಿ ಎಂದು ಅದು ಸರ್ಕಾರದ ಮುಂದೆ ನಿಂತು ಹೇಳುತ್ತದೆ.

ಸಾಮಾನ್ಯವಾಗಿ ಆಡಿಟಿಂಗ್ ಅನ್ನು ಲೆಕ್ಕಪತ್ರಗಳ ಪರಿಶೀಲನೆ ಎಂದು ಮಾತ್ರ ಅರ್ಥ ಮಾಡಿ ಕೊಳ್ಳಲಾಗುತ್ತದೆ. ಆದರೆ ಆಡಿಟಿಂಗ್ ನಿಜವಾದ ಅರ್ಥ ಅದಕ್ಕಿಂತ ಬಹಳ ಆಳವಾಗಿದೆ. ಲೆಕ್ಕ ಪರಿಶೋಧನೆ ಎಂದರೆ ಕೇವಲ ಲೆಕ್ಕಪತ್ರಗಳ ಶುದ್ಧತೆ ಪರಿಶೀಲನೆ ಮಾತ್ರವಲ್ಲ; ಅದು ನಿರ್ಧಾರಗಳ ಉದ್ದೇಶ ಮತ್ತು ಪರಿಣಾಮಗಳನ್ನು ಅಳೆಯುವ ಪ್ರಕ್ರಿಯೆ ಯಾಗಿದೆ. ಉದಾಹರಣೆಗೆ, ಸರ್ಕಾರ 100 ಕೋಟಿ ರುಪಾಯಿಯನ್ನು ಒಂದು ಯೋಜನೆಗೆ ಖರ್ಚು ಮಾಡಿತು ಎಂದು ಊಹಿಸೋಣ.

ಸಾಮಾನ್ಯ ಲೆಕ್ಕಪತ್ರ ಆಡಿಟಿಂಗ್ ಹೇಳುವುದು: ಹಣ ಸರಿಯಾಗಿ ಖರ್ಚಾಗಿದೆ. ಆದರೆ --ರ್ಮೆನ್ಸ್ ಆಡಿಟಿಂಗ್ ಕೇಳುವುದು: ಈ 100 ಕೋಟಿ ರುಪಾಯಿಯಿಂದ ಜನರಿಗೆ ಏನು ಸಿಕ್ಕಿತು? ಈ ಎರಡರ ನಡುವೆ ಇರುವ ವ್ಯತ್ಯಾಸವೇ ಆಡಿಟಿಂಗ್‌ನ ತಾತ್ವಿಕ ಆಳವಾಗಿದೆ.

ಹಾಗೆ ನೋಡಿದರೆ, ಸಂವಿಧಾನದ ದೃಷ್ಟಿಯಲ್ಲಿ ಸಿಎಜಿ ಒಂದು ರೀತಿ ಸ್ವಾತಂತ್ರ್ಯದ ಕಾವಲುಗಾರ ಎನ್ನಬಹುದು. ಭಾರತದ ಸಂವಿಧಾನವು ಸಿಎಜಿಗೆ ನೀಡಿರುವ ಸ್ಥಾನಮಾನವು ಅದರ ಮಹತ್ವವನ್ನು ತೋರಿಸುತ್ತದೆ. ಆರ್ಟಿಕಲ್ 148ರಿಂದ 151ರವರೆಗೆ ಈ ಸಂಸ್ಥೆಯ ರಚನೆ, ಅಧಿಕಾರ ಮತ್ತು ಕಾರ್ಯವೈಖರಿ ಕುರಿತು ವಿವರಿಸಲಾಗಿದೆ. ಈ ನಿಯಮಗಳ ಮೂಲಕ ಸಿಎಜಿಗೆ ಮೂರು ಪ್ರಮುಖ ಭದ್ರತೆಗಳನ್ನು ನೀಡಲಾಗಿದೆ.

ರಾಷ್ಟ್ರಪತಿ ಮೂಲಕ ನೇಮಕವಾಗುತ್ತದೆ. ತೆಗೆದು ಹಾಕುವ ಪ್ರಕ್ರಿಯೆಯು ಸುಪ್ರೀಂ ಕೋರ್ಟ್ ಆಫ್ ಇಂಡಿಯಾದ ನ್ಯಾಯಮೂರ್ತಿಯಷ್ಟೇ ಕಠಿಣವಾಗಿರುತ್ತದೆ ಮತ್ತು ಸಂಬಳ ಮತ್ತು ಸೌಲಭ್ಯಗಳಿಗೆ ಭದ್ರತೆ ಇರುತ್ತದೆ. ಇದರಿಂದ ನಮಗೆ ತಿಳಿಯುವುದು, ಸಿಎಜಿ ಸರ್ಕಾರದ ಅಧೀನದಲ್ಲಿರುವ ಅಧಿಕಾರಿ ಅಥವಾ ಸಂಸ್ಥೆಯಲ್ಲ, ಅದು ಸರ್ಕಾರವನ್ನು ಪರಿಶೀಲಿಸುವ ಸ್ವತಂತ್ರ ಸಂಸ್ಥೆ. ಇದು ಪ್ರಜಾಪ್ರಭುತ್ವದ ಮೂಲತತ್ವ - ಪರಿಶೀಲಿಸುವವನು ಪರಿಶೀಲಿಸಲ್ಪಡುವವನ ಅಧೀನದಲ್ಲಿರಬಾರದು.

CAG

ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ ಬಿ.ಆರ್.ಅಂಬೇಡ್ಕರ್ ಅವರು ಸಿಎಜಿ ಬಗ್ಗೆ ಅತ್ಯಂತ ಮಹತ್ವದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಅವರ ಪ್ರಕಾರ: ಸಂಸತ್ತಿನ ಹಣಕಾಸು ನಿಯಂತ್ರಣವು ಆಡಿಟಿಂಗ್ ಇಲ್ಲದೆ ಅರ್ಥಹೀನ. ಸಂಸತ್ತು ಸರ್ಕಾರದ ಮೇಲೆ ನಿಯಂತ್ರಣ ಸಾಧಿಸಲು ಆಡಿಟಿಂಗ್ ಅಗತ್ಯ.

ಇಲ್ಲದಿದ್ದರೆ, ಸರ್ಕಾರವು ಹಣವನ್ನು ಹೇಗೆ ಬಳಸುತ್ತದೆ ಎಂಬುದನ್ನು ಯಾರೂ ಪ್ರಶ್ನಿಸಲು ಸಾಧ್ಯವಾಗುವುದಿಲ್ಲ. ಈ ದೃಷ್ಟಿಯಿಂದ ನೋಡಿದರೆ, ಸಿಎಜಿ ಒಂದು ತಾಂತ್ರಿಕ ಸಂಸ್ಥೆ ಯಲ್ಲ; ಅದು ಪ್ರಜಾಪ್ರಭುತ್ವದ ಆರ್ಥಿಕ ಕಾವಲುಗಾರ ಎಂದೂ ಸಹ ನಾವು ಹೇಳಬಹು ದಾಗಿದೆ.

ಸಾಮಾನ್ಯವಾಗಿ ಸಿಎಜಿ ಅನ್ನು ಆಡಿಟರ್ ಎಂದೂ ಕರೆಯಲಾಗುತ್ತದೆ. ಆದರೆ ಅದರ ಪಾತ್ರ ಅದಕ್ಕಿಂತ ಬಹಳ ದೊಡ್ಡದು. ಸಿಎಜಿ ಎಂಬುದು ಕೇವಲ ಆಡಿಟರ್ ಅಲ್ಲ, ಹೊಣೆಗಾರಿಕೆ ಯ ಮುಖ್ಯಸ್ಥನಂತೆ ವರ್ತಿಸುತ್ತದೆ. ಸಂಸ್ಥೆಯು, ಸರ್ಕಾರದ ಖರ್ಚನ್ನು ಪರಿಶೀಲಿಸುತ್ತದೆ. ತಪ್ಪುಗಳನ್ನು ಗುರುತಿಸುತ್ತದೆ.

ವರದಿಗಳನ್ನು ಸಂಸತ್ತಿಗೆ ಸಲ್ಲಿಸುತ್ತದೆ. ಆದರೆ ಇದರ ನಿಜವಾದ ಪಾತ್ರ ಹೊಣೆಗಾರಿಕೆ ಯನ್ನು ನಿರ್ಮಿಸುವುದು. ಸಿಎಜಿ ವರದಿಗಳು ಕೇವಲ ದಾಖಲೆಗಳಲ್ಲ; ಅವು ಸಂಸತ್ತಿನ ಪಬ್ಲಿಕ್ ಅಕೌಂಟ್ ಕಮಿಟಿ (PAC) ಮೂಲಕ ವಿಶ್ಲೇಷಿಸಲ್ಪಟ್ಟು, ಸರ್ಕಾರವನ್ನು ನೇರವಾಗಿ ಪ್ರಶ್ನಿಸುವ ಸಾಧನವಾಗುತ್ತವೆ. ಹೊಣೆಗಾರಿಕೆ ಎಂದರೆ; ಅಧಿಕಾರಕ್ಕೆ ಜವಾಬ್ದಾರಿ ಇರಬೇಕು. ನಿರ್ಧಾರಗಳಿಗೆ ಉತ್ತರ ಇರಬೇಕು. ಸಿಎಜಿ ಈ ಹೊಣೆಗಾರಿಕೆಗೆ ಚಾಲನೆ ನೀಡುವ ಎಂಜಿನ್ ಆಗಿದೆ.

ಆಡಿಟಿಂಗ್ ಒಂದು ನಿಶ್ಶಬ್ದ ಪ್ರಕ್ರಿಯೆ. ಅದು ರಸ್ತೆಯಲ್ಲಿ ಪ್ರತಿಭಟನೆ ಮಾಡುವುದಿಲ್ಲ. ಅದು ಭಾಷಣ ಮಾಡುವುದಿಲ್ಲ. ಆದರೆ ಅದು ವರದಿಗಳ ಮೂಲಕ ಮಾತನಾಡುತ್ತದೆ. ಆ ವರದಿ ಗಳು ಸರ್ಕಾರವನ್ನು ಪ್ರಶ್ನಿಸುತ್ತವೆ, ನೀತಿಗಳನ್ನು ಪ್ರಶ್ನೆ ಮಾಡುತ್ತವೆ, ಸಾರ್ವಜನಿಕ ಚರ್ಚೆಗೆ ಕಾರಣವಾಗುತ್ತವೆ. ಈ ಕಾರಣಕ್ಕೆ ಆಡಿಟಿಂಗ್ ಅನ್ನು ಮೌನಶಕ್ತಿ ಎಂದು ಕರೆಯಬಹುದು.

ಸಿಎಜಿ ಪ್ರಜಾಪ್ರಭುತ್ವದ ಗೋಚರ ಭಾಗವಲ್ಲ; ಅದು ಅದರ ಅಡಿಪಾಯ. ಅದು ಸರ್ಕಾರದ ಮೇಲೆ ನಿಗಾವಹಿಸುವ ಮೌನ ಶಕ್ತಿ. ಅದು ಜನರ ಹಣದ ಕಾವಲುಗಾರ. ಅದು ಹೊಣೆಗಾರಿಕೆ ನಿರ್ಮಿಸುವ ಯಂತ್ರ. ಪ್ರಜಾಪ್ರಭುತ್ವವು ಕೇವಲ ಮತದಾನದಿಂದ ಬದುಕುವುದಿಲ್ಲ; ಅದು ಪ್ರಶ್ನೆಯಿಂದ ಬದುಕುತ್ತದೆ. ಆ ಪ್ರಶ್ನೆಯನ್ನು ಜೀವಂತವಾಗಿಡುವ ಸಂಸ್ಥೆಯೇ ಸಿಎಜಿ. ಆಡಿಟಿಂಗ್ ಒಂದು ಕ್ರಮಬದ್ಧ, ಸಾಕ್ಷ್ಯಾಧಾರಿತ, ವಿಶ್ಲೇಷಣಾತ್ಮಕ ಪ್ರಕ್ರಿಯೆ.

ಇದು ಕೇವಲ ಲೆಕ್ಕಪತ್ರಗಳನ್ನು ಪರಿಶೀಲಿಸುವುದಲ್ಲ; ಅದು ಒಂದು ಸಂಪೂರ್ಣ ವ್ಯವಸ್ಥೆ ಯ ಕಾರ್ಯವೈಖರಿಯನ್ನು ಪರಿಶೀಲಿಸುವ ವಿಧಾನ. ಆಡಿಟಿಂಗ್ ಪ್ರಕ್ರಿಯೆ ಮೂರು ಮೂಲ ತತ್ವಗಳ ಮೇಲೆ ನಿಂತಿದೆ. 1. ಸತ್ಯ 2. ನಿಖರತೆ 3. ಪಾರದರ್ಶಕತೆ ಈ ಮೂರು ಇಲ್ಲದೆ ಆಡಿಟಿಂಗ್ ಅರ್ಥಹೀನವಾಗುತ್ತದೆ.

ಸಿಎಜಿ ಆಡಿಟಿಂಗ್ ಎಂಬುದು ಒಮ್ಮೆ ಮಾಡಿ ಸುಮ್ಮನಾಗಿ ಬಿಡುವ ಕಾರ್ಯವಲ್ಲ; ಅದು ಹಲವಾರು ಹಂತಗಳಲ್ಲಿ ನಡೆಯುತ್ತದೆ. ಈ ಆಡಿಟ್ ಸೈಕಲ್ ಅನ್ನು ಅರ್ಥ ಮಾಡಿಕೊಳ್ಳು ವುದು ಬಹಳ ಮುಖ್ಯ. ಯಾವ ಇಲಾಖೆ/ಯೋಜನೆ ಆಡಿಟ್ ಮಾಡಬೇಕು? ಯಾವ ಅಪಾಯಗಳು ಇವೆ? ಯಾವ ಮಾಹಿತಿಯನ್ನು ಪರಿಶೀಲಿಸಬೇಕು? ಇದು ಅಪಾಯಕಾರಿ ಆಧಾರಿತ ಪ್ರಕ್ರಿಯೆಯಾಗಿದೆ.

ಆಡಿಟಿಂಗ್ ಪ್ರಕ್ರಿಯೆಯಲ್ಲಿ ದಾಖಲೆ ಪರಿಶೀಲನೆ, ಸ್ಥಳ ಪರಿಶೀಲನೆ ಮತ್ತು ಸಾಕ್ಷ್ಯಾಧಾರ ಸಂಗ್ರಹದ ಮೂಲಕ ನಿಜವಾದ ಸ್ಥಿತಿ ಅನಾವರಣಗೊಳ್ಳುತ್ತದೆ. ಪ್ರಾಥಮಿಕ ಸಾಕ್ಷಿ-ಆಧಾರ ಗಳು, ಇಲಾಖೆಗೆ ಉತ್ತರ ಕೇಳುವುದು. ಇದು ‘ಸ್ವಾಭಾವಿಕ ನ್ಯಾಯ’ ತತ್ವವನ್ನು ಅನುಸರಿಸು ವಂತಾಗಿದೆ.

ಸಿಎಜಿ ಅಂತಿಮ ವರದಿ ಸಿದ್ಧಪಡಿಸಿದ ಬಳಿಕ ದೇಶದ ಸಂಸತ್ತಿಗೆ ಸಲ್ಲಿಸುತ್ತದೆ. ಸಿಎಜಿ ಆಡಿಟಿಂಗ್ ಅನ್ನು ಮೂರು ಪ್ರಮುಖ ವಿಭಾಗಗಳಲ್ಲಿ ಮಾಡುತ್ತದೆ. ಇವು ಆಡಿಟಿಂಗ್‌ನ ಮೂರು ಕಣ್ಣುಗಳು ಎಂದು ಹೇಳಬಹುದು. ಹಣಕಾಸು ಪರಿಶೀಲನೆ (ಫೈನಾನ್ಶಿಯಲ್ ಆಡಿಟ್), ಇದು ಆಡಿಟಿಂಗ್‌ನ ಮೂಲ ರೂಪ.

ಇದರಲ್ಲಿ, ಲೆಕ್ಕಪತ್ರಗಳು ಸರಿಯಾಗಿದೆಯೇ? ಆದಾಯ ಸರಿಯಾಗಿ ದಾಖಲಾಗಿದೆಯಾ? ಖರ್ಚು ಸರಿಯಾಗಿ ತೋರಿಸಲಾಗಿದೆಯಾ? ಲೆಕ್ಕಪತ್ರಗಳಲ್ಲಿ ತಪ್ಪುಗಳಿವೆಯೇ? ಉದಾಹರಣೆ: ಒಂದು ಇಲಾಖೆಯು 500 ಕೋಟಿ ರು. ಖರ್ಚು ಮಾಡಿದೆ ಎಂದು ಹೇಳಿದರೆ, ಹಣಕಾಸು ಆಡಿಟ್ ಪರಿಶೀಲಿಸುತ್ತದೆ. ಆ 500 ಕೋಟಿ ರು. ನಿಜವಾಗಿಯೂ ಖರ್ಚಾಗಿದೆಯೇ? ಇತ್ಯಾದಿ ಯಾಗಿ ಇಲ್ಲಿ ಪರಿಶೀಲಿಸುವುದು.

ನಿಯಮಾನುಸರಣೆ ಪರಿಶೀಲನೆ (ಕಾಂಪ್ಲಯನ್ಸ್ ಆಡಿಟ್)ಯಲ್ಲಿ, ಕಾನೂನು ಪಾಲಿಸಲಾಗಿ ದೆಯಾ? ಹರಾಜು ಪ್ರಕ್ರಿಯೆ ಸರಿಯಾಗಿದೆಯೇ? ನಿಯಮ ಪಾಲನೆ ಆಗಿದೆಯೇ? ಎಂಬು ದನ್ನು ಇಲ್ಲಿ ಗಮನಿಸುವುದು. ಉದಾಹರಣೆ: ಒಂದು ರಸ್ತೆ ಕಾಮಗಾರಿ ಒಪ್ಪಂದ ನಿಯಮ ಉಲ್ಲಂಘನೆ ಮಾಡಿ ನೀಡಿದರೆ, ನಿಯಮಾನುಸಾರ ಪರಿಶೀಲನೆ ಅದನ್ನು ಪತ್ತೆಹಚ್ಚುತ್ತದೆ.

ಕಾರ್ಯಕ್ಷಮತಾ ಪರಿಶೀಲನೆ (ಫರ್ಫಾರ್ಮೆನ್ಸ್ ಆಡಿಟ್) ಎಂಬುದು ಅತ್ಯಂತ ಶಕ್ತಿಶಾಲಿ ಆಡಿಟಿಂಗ್ ಆಗಿದ್ದು, ಹಣದಿಂದ ಫಲಿತಾಂಶ ಏನು? ಯೋಜನೆ ಗುರಿ ತಲುಪಿದೆಯೇ? ಜನರಿಗೆ ಪ್ರಯೋಜನ ಆಗಿದೆಯೇ? ಹಣ ವ್ಯರ್ಥವಾಗಿದೆಯೇ? ಎಂಬುದನ್ನು ಇದು ನೋಡು ತ್ತದೆ. ಉದಾಹರಣೆ: 100 ಕೋಟಿ ರೂಪಾಯಿ ಶಾಲೆಗಳಿಗೆ ಖರ್ಚು ಮಾಡಿದರೆ, ಅದರ ಮೂಲಕ - ಮಕ್ಕಳು ಶಿಕ್ಷಣ ಪಡೆದರಾ? ಕ್ವಾಲಿಟಿ ಇಂಪ್ರೂವ್ ಆಯಿತಾ? ಎಂಬುದನ್ನು ಕೂಲಂಕಷವಾಗಿ ಗಮನಿಸುತ್ತದೆ.

ಫರ್ಫಾರ್ಮೆನ್ಸ್ ಆಡಿಟ್ ಆಡಳಿತ ವೈಖರಿಯ ನಿಜವಾದ ಮುಖ ತೋರಿಸುತ್ತದೆ. ಇದು ಮೂರು ಪ್ರಶ್ನೆ ಕೇಳುತ್ತದೆ: ಎಕಾನಮಿ- ಕಡಿಮೆ ವೆಚ್ಚದಲ್ಲಿ ಮಾಡಬಹುದಿತ್ತೇ? ಎಫಿಶಿ ಯೆನ್ಸಿ - ಮೂಲಸೌಕರ್ಯಗಳನ್ನು ಸರಿಯಾಗಿ ಬಳಸಿದರಾ? ಎಫೆಕ್ಟಿವ್‌ನೆಸ್- ಗುರಿ ತಲುಪಿ ದೆಯೇ? ಈ ಮೂರು ಸೇರಿ, ಇ-ಆಡಿಟಿಂಗ್ ಮಾಡೆಲ್ ಎಂದೆನಿಸಿಕೊಳ್ಳುತ್ತದೆ. ಕಾಗದದಲ್ಲಿ ಎಲ್ಲವೂ ಸರಿಯಾಗಿದ್ದರೂ, ವಾಸ್ತವದಲ್ಲಿ ಬೇರೆ ಚಿತ್ರ ಕಾಣಬಹುದು. ಈ ಅಂತರವನ್ನು ಹೊರತರುವುದೇ ಆಡಿಟಿಂಗ್‌ನ ಮುಖ್ಯ ಕಾರ್ಯ.

ನಂಬರ್ಸ್ ವರ್ಸಸ್ ನಿಜವಾದ ಸಂಘರ್ಷದ ವಿಚಾರಕ್ಕೆ ಬಂದಾಗ, ಸರ್ಕಾರದ ಡೇಟಾ ಹೇಳುವುದು ಒಂದು ಸತ್ಯ. ಸ್ಥಳದ ವಾಸ್ತವಿಕತೆಯಿಂದಾಗಿ ಇನ್ನೊಂದು ಸತ್ಯ ಕಂಡು ಬರುತ್ತದೆ. ಆಡಿಟಿಂಗ್ ಕೆಲಸವೆಂದರೆ, ಈ ಎರಡರ ನಡುವಿನ ವ್ಯತ್ಯಾಸವನ್ನು ಹೊರ ತರುವುದು. ಆಡಿಟ್ ಎವಿಡೆನ್ಸ್ ಯಾಕೆ ಮುಖ್ಯವಾಗುತ್ತದೆಯೆಂದರೆ, ಸಿಎಜಿ ಯಾವ ಆರೋಪವನ್ನೂ ಆಧಾರವಿಲ್ಲದೆ ಮಾಡುವುದಿಲ್ಲ.

ಆಡಿಟಿಂಗ್ ಸಂಪೂರ್ಣವಾಗಿ ಸಾಕ್ಷ್ಯಾಧಾರಿತ ಪ್ರಕ್ರಿಯೆಯಾಗಿದ್ದು, ದಾಖಲೆಗಳು ಮತ್ತು ಸ್ಥಳ ಪರಿಶೀಲನೆಗಳ ಮೂಲಕ ನಿಖರತೆಯನ್ನು ಖಚಿತಪಡಿಸುತ್ತದೆ.ಸಣ್ಣದಾಗಿ ಕಾಣುವ ದೊಡ್ಡ ಸಮಸ್ಯೆ. ಆಡಿಟ್ ಅಬ್ಜೆಕ್ಷನ್ಸ್ ಎಂದರೆ; ಇರ್‌ರೆಗ್ಯುಲಾರಿಟೀಸ್, ವಯೋಲೇಷನ್ಸ್, ಇನ್ ಎಫಿಶಿಯೆನ್ಸಿ ಇತ್ಯಾದಿ ಇವು ಸಣ್ಣದಾಗಿ ಕಾಣಬಹುದು. ಆದರೆ ದೊಡ್ಡ ಭ್ರಷ್ಟಾಚಾರ ಗಳಿಗೆ ಮೂಲವಾಗಬಹುದು. ಕಾಗದದ ಶಕ್ತಿ ಅಸಾಮಾನ್ಯವಾಗಿದ್ದು, ಸಿಎಜಿ ವರದಿಗಳು ಭ್ರಷ್ಟಾಚಾರಿಗಳ ಎದೆಯಲ್ಲಿ ನಡುಕ ಹುಟ್ಟಿಸಬಲ್ಲವಾಗಿವೆ.

ಟೆಕ್ನಿಕಲ್ ಡಾಕ್ಯುಮೆಂಟ್ಸ್ ಪೊಲಿಟಿಕಲ್ ಇಂಪ್ಯಾಕ್ಟ್ ಉಂಟು ಮಾಡುತ್ತವೆ. ಒಂದು ಆಡಿಟ್ ರಿಪೋರ್ಟ್ ಸರ್ಕಾರವನ್ನು ಸಂಕಷ್ಟಕ್ಕೆ ತಳ್ಳಬಹುದು. ಪಾಲಿಸಿಗಳನ್ನೇ ಬದಲಾವಣೆ ಮಾಡಿಸಬಹುದು.

ಸ್ವೀಡನ್ ರೇಡಿಯೋ ಮತ್ತು ಭಾರತದ ಪತ್ರಿಕೆಗಳ ನಿರಂತರ ವರದಿಯಿಂದ ಬಯಲಾದ ಬೊಫೋರ್ಸ್ ಹಗರಣವು, ಸಿಎಜಿ ತಲುಪಿತು. ತನಿಖೆಯ ನಂತರ, ಒಪ್ಪಂದ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯ ಕೊರತೆ, ಮಧ್ಯವರ್ತಿಗಳ ಪಾತ್ರ ಅನುಮಾನಾಸ್ಪದ ಎಂದು ವರದಿ ನೀಡಿತು.

ಇದು ಸರ್ಕಾರದ ಮೇಲೆ ಒತ್ತಡವನ್ನು ಹೆಚ್ಚಿಸಿತು. ಮುಂದೆ ಸಿಬಿಐ ತನಿಖೆಗೆ ಇಳಿಯಿತು. ಸ್ವಚ್ಛ ಇಮೇಜ್ ಹೊಂದಿದ್ದ ರಾಜೀವ್ ಗಾಂಧಿಯವರಿಗೆ ಧಕ್ಕೆ ಉಂಟು ಮಾಡಿತಲ್ಲದೆ, ಮುಂದಿನ ಚುನಾವಣೆಯಲ್ಲಿ ಸೋಲುವಂತಾಯಿತು.

ಹರ್ಷದ್ ಮೆಹತಾ ಸೆಕ್ಯುರಿಟೀಸ್ ಹಗರಣ (1992), 2ಎ ಸ್ಪೆಕ್ಟ್ರಂ ಹಗರಣ (2008), ಕಾಮನ್‌ ವೆಲ್ತ್ ಗೇಮ್ಸ್ ಹಗರಣ (2010), ಕೋಲ್ ಅಲೊಕೇಶನ್ (Coalgate) ಹಗರಣ (2012), ಆಗಸ್ತಾ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ ಹಗರಣ (2013) ಸೇರಿದಂತೆ ಹಲವು ಪ್ರಮುಖ ಹಗರಣಗಳು ಸಿಎಜಿ ವರದಿಯಿಂದಾಗಿ ಬೆಳಕಿಗೆ ಬಂದಿದ್ದಲ್ಲದೆ, ತನಿಖೆಯನ್ನೂ ಎದುರಿಸು ತ್ತಿವೆ. ‌

ಆಡಿಟಿಂಗ್ ಒಂದು ಸರಳ ಪ್ರಕ್ರಿಯೆ ಅಲ್ಲ; ಅದು ಒಂದು ಸಂಪೂರ್ಣ ಆಡಳಿತ ವಿಶ್ಲೇಷಣಾ ವ್ಯವಸ್ಥೆ. ಹಣಕಾಸಿನ ಅಂಗೀಕಾರ, ಕಾರ್ಯಕ್ಷಮತೆ ಇತ್ಯಾದಿಗಳನ್ನು ಆಡಿಟಿಂಗ್ ಮೂಲಕ ಸರ್ಕಾರದ ಪ್ರತಿಯೊಂದು ಚಲನವಲನವನ್ನು ಇದು ಪರಿಶೀಲಿಸುತ್ತದೆ. ಕಾಂಪ್ಟ್ರೋಲರ್ ಆಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ ಈ ಆಡಿಟಿಂಗ್ ವ್ಯವಸ್ಥೆಯ ಹೃದಯವಾಗಿದೆ. ‌ಸಿಎಜಿ ಅಂಕಿ-ಅಂಶಗಳನ್ನು ಮಾತ್ರ ಪರಿಶೀಲಿಸುವುದಿಲ್ಲ; ಆಡಳಿತದ ಆತ್ಮವನ್ನು ಪ್ರಶ್ನಿಸುತ್ತದೆ. ಸರ್ಕಾರದ ಶಕ್ತಿಗೆ ಮಿತಿಯನ್ನು ಹಾಕುವ ಮೌನ ಶಕ್ತಿ ಅದು. ಪ್ರಜಾಪ್ರಭುತ್ವ ದಲ್ಲಿ ಜನರ ಹಣಕ್ಕೆ ಕಾವಲು ನಿಲ್ಲುವ ಅಸಲಿ ಆತ್ಮಸಾಕ್ಷಿಯಾಗಿದೆ.

ಗುರುರಾಜ್ ಗಂಟಿಹೊಳೆ

View all posts by this author