ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Janamejaya Umarji Column: ಬಸವ ಸಂಸ್ಕೃತಿ ಅಭಿಯಾನ: ಪ್ರಚಾರವೋ ವಿಭಜನೆಯೋ ?

ಒಬ್ಬ ಪೂಜ್ಯರು ಸ್ಥಳೀಯ ಭಾವನೆಗಳಿಗೆ ಅನುಗುಣವಾಗಿ ಸಮಜಾಯಿಷಿ ನೀಡುತ್ತಿರುವಾಗಲೇ ಕೈಯಿಂದ ಮೈಕು ಕಸಿದುಕೊಂಡ ಇನ್ನೊಬ್ಬ ಪೂಜ್ಯರು, ಪೂಜ್ಯ ಶರಣಬಸಪ್ಪ ಅಪ್ಪಂಗಳವರ ಕ್ರಿಯಾ ಸಮಾಧಿಯ ವಿಧಿ-ವಿಧಾನವನ್ನು ಟೀಕಿಸಿದರು. ಅವಿವೇಕ ಶಬ್ದ ಪ್ರಯೋಗವೂ ಆಯಿತು. ಬಾಗಲಕೋಟೆಗೆ ಬರುವ ಹೊತ್ತಿಗೆ ಹಾನಗಲ್ಲ ಕುಮಾರಸ್ವಾಮಿಗಳ ಬಗ್ಗೆ, ವೀರಶೈವ ಮಠಾಧಿಪತಿ ಗಳ ಬಗ್ಗೆ ಅಪಶಬ್ದವಾಡಿ ಅಸಹಕಾರ ಎದುರಿಸುವಂತಾಯಿತು.

ಯಕ್ಷ ಪ್ರಶ್ನೆ

ಜನಮೇಜಯ ಉಮರ್ಜಿ

ಈಗಿನ ಬಸವ ಸಂಸ್ಕೃತಿ ಅಭಿಯಾನವು ಬಸವಣ್ಣನವರ ಮೌಲ್ಯಗಳ ಪ್ರಚಾರಕ್ಕಿಂತಲೂ ಹಿಂದೂ ಒಗ್ಗಟ್ಟನ್ನು ಒಡೆಯುವ ರಾಜಕೀಯ ಲೆಕ್ಕಾಚಾರದೊಂದಿಗೆ ನಡೆಯುತ್ತಿದೆ. ಕಮ್ಯುನಿಸ್ಟರು ಲಿಂಗಾ ಯತದ ಒಗ್ಗಟ್ಟನ್ನು ದುರ್ಬಲಗೊಳಿಸಲು ಸತತ ಪ್ರಯತ್ನಿಸು ತ್ತಿದ್ದಾರೆ. ಅವರು ಜಾತಿ-ಸಮುದಾಯ ಗಳನ್ನು ವಿಭಜಿಸುವುದರ ಮೂಲಕ ಸಮಾಜದ ಶಿಥಿಲತೆಯನ್ನು ಉತ್ತೇಜಿಸುತ್ತಿದ್ದಾರೆ. ಶೈಕ್ಷಣಿಕ ವಲಯದಲ್ಲಿಯೂ ಇದನ್ನು ತುರುಕಲಾಗಿದೆ.

ಕಳೆದ ಕೆಲವು ದಿನಗಳಿಂದ ‘ಬಸವ ಸಂಸ್ಕೃತಿ ಅಭಿಯಾನ’ ಸದ್ದು ಮಾಡುತ್ತಿದೆ ಮತ್ತು ರಾಜ್ಯದ ಸಾಂಸ್ಕೃತಿಕ ಚರ್ಚೆಯ ಕೇಂದ್ರಬಿಂದುವಾಗಿದೆ. ಆದರೆ ಇದರ ನಿಜಸ್ವರೂಪವನ್ನು ವಿಶ್ಲೇಷಿಸಿದಾಗ, ಇದು ಬಸವಣ್ಣನ ಸಮಗ್ರ ಚಿಂತನೆಗಳನ್ನು ಹರಡುವ ಆಶಯವನ್ನು ಬಿಟ್ಟು ಬೇರೆ ಹಾದಿ ಹಿಡಿದಿದೆ ಎನಿಸುತ್ತದೆ.

ಲಿಂಗಾಯತ-ವೀರಶೈವ ಎಂಬ ಒಡಕು ಸೃಷ್ಟಿಸುವುದನ್ನು ಜನ ಅರಿತು ಅದಕ್ಕೆ ಸೊಪ್ಪು ಹಾಕುವು ದನ್ನು ತಿಳಿದ ಜಾಗತಿಕ ನಾಯಕರೊಬ್ಬರು, ‘ಬಸವಂ ಶರಣಂ ಗಚ್ಛಾಮಿ’, ‘ಸಂಘಂ ಶರಣಂ ಗಚ್ಛಾಮಿ’ ಎಂಬ ಹೊಸ ಹೆಸರು ಹೊಸ ದಿಕ್ಕು ನೀಡಿ, ಅಭಿಯಾನ ಶುರು ಮಾಡಿದರು.

ಸಮಾನತಾವಾದಿ ಬಸವಣ್ಣನವರಿಗೆ ಶರಣು ಹೋಗುವುದು ಸರಿಯಾದದ್ದೇ, ಆದರೆ ಪ್ರತ್ಯೇಕತೆ ಬಿತ್ತುವಿಕೆ ಮೊಸರಲ್ಲಿ ಕಲ್ಲು ಹುಡುಕಿದಂತೆ. ಬಸವನ ಬಾಗೇವಾಡಿಯಲ್ಲಿ ಶುರುವಾದ ಅಭಿಯಾನ ಕಲಬುರಗಿಗೆ ಹೋದಾಗ ಸ್ವಾರಸ್ಯವೊಂದು ನಡೆಯಿತು. ಪುಟ್ಟ ಮಗುವಿನ ಕೈಗೆ ಮಹಾಶಯ ರೊಬ್ಬರು ಬರೆದು ಕೊಟ್ಟು ಹಿಂದೆ ನಿಂತು ಪ್ರಶ್ನೆಯೊಂದನ್ನು ಕೇಳಿಸಿದರು.

ಇದನ್ನೂ ಓದಿ: Janamejaya Umarji Column: ಇದು ಸು ಫ್ರಂ ಕೋ ಎಂಬ ಧರ್ಮಸ್ಥಳ ಪ್ರಹಸನ

ಒಬ್ಬ ಪೂಜ್ಯರು ಸ್ಥಳೀಯ ಭಾವನೆಗಳಿಗೆ ಅನುಗುಣವಾಗಿ ಸಮಜಾಯಿಷಿ ನೀಡುತ್ತಿರುವಾಗಲೇ ಕೈಯಿಂದ ಮೈಕು ಕಸಿದುಕೊಂಡ ಇನ್ನೊಬ್ಬ ಪೂಜ್ಯರು, ಪೂಜ್ಯ ಶರಣಬಸಪ್ಪ ಅಪ್ಪಂಗಳವರ ಕ್ರಿಯಾ ಸಮಾಧಿಯ ವಿಧಿ-ವಿಧಾನವನ್ನು ಟೀಕಿಸಿದರು. ಅವಿವೇಕ ಶಬ್ದ ಪ್ರಯೋಗವೂ ಆಯಿತು. ಬಾಗಲಕೋಟೆಗೆ ಬರುವ ಹೊತ್ತಿಗೆ ಹಾನಗಲ್ಲ ಕುಮಾರಸ್ವಾಮಿಗಳ ಬಗ್ಗೆ, ವೀರಶೈವ ಮಠಾಧಿಪತಿ ಗಳ ಬಗ್ಗೆ ಅಪಶಬ್ದವಾಡಿ ಅಸಹಕಾರ ಎದುರಿಸುವಂತಾಯಿತು.

ಧಾರವಾಡಕ್ಕೆ ಬರುವಷ್ಟರ ಹೊತ್ತಿಗೆ ಹಣಕಾಸಿನ ಶುದ್ಧತೆಯ ಬಗ್ಗೆ ಸಾರ್ವಜನಿಕವಾಗಿ ಸ್ವಯಂ ಸಮಜಾಯಿಷಿ ಕೊಡುವಂತಾಯಿತು. ಇದೆಲ್ಲವೂ ಪತ್ರಿಕೆಗಳಲ್ಲಿ, ವಿಡಿಯೋಗಳಲ್ಲಿ ಬಂದದ್ದೇ ಆಗಿದೆ. ಅಭಿಯಾನವು ಬಸವ ತತ್ವಗಳಿಂದ ಸಮಾಜವನ್ನು ಬಲಪಡಿಸುವ ಬದಲು, ಹಿಂದೂ ಗಳನ್ನು ವಿಭಜಿಸುವ ಹಾಗೂ ‘ಇವನಾರವ’ ಎನ್ನುತ್ತ ‘ಇವ ನಮ್ಮವ’ ಎಂಬ ಬಸವಣ್ಣನವರ ಆಶಯಗಳನ್ನು ಗಾಳಿಗೆ ತೂರುವ ರಾಜಕೀಯ ಉಪಕರಣವಾಗಿ ಪರಿಣಮಿಸಿದೆ.

ಕರ್ನಾಟಕದ ಸಮಾಜವಾದಿ ಸಾಂಸ್ಕೃತಿಕ ನಾಯಕರ ಕುರ್ಚಿ ಅಲುಗಾಡುತ್ತಿರುವ ಸಂದರ್ಭದಲ್ಲಿ ಅವರೊಂದಿಗೆ ದೊಡ್ಡ ಸಮಾಜವಿದೆ ಎಂದು ಬಿಂಬಿಸುವ, ಬೆಂಗಳೂರಿನಲ್ಲಿ ಅವರನ್ನು ಸನ್ಮಾನಿಸುವ ಅಂತಿಮ ಉದ್ದೇಶ ಹೊಂದಿದ ಅಭಿಯಾನಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಒತ್ತಾಸೆ ಎಲ್ಲವೂ ಪ್ರಸ್ತುತ ಸರಕಾರದ ಎಡ ‘ಥಿಂಕ್ ಟ್ಯಾಂಕಿನದ್ದೇ’ ಆಗಿದೆ.

basava San ok

ಅಭಿಯಾನದ ಸಮಯಕ್ಕೆ ಸಾಮಾಜಿಕ, ಶೈಕ್ಷಣಿಕ, ಜಾತಿ ಸಮಿಕ್ಷೆಯ ಸಮಯವನ್ನು ಹೊಂದಿಸಿ ಕೊಡಲಾಗಿದೆ. 2017 ರಲ್ಲಿ ಧರ್ಮ ವಿಭಜನೆಗೆ ದುಡಿದ ತಂಡದ ಒಂದು ಪುಡಿಗುಂಪು ಇಲ್ಲಿ ಕೆಲಸ ಮಾಡುತ್ತಿದೆ. ಬಸವಣ್ಣನವರು ಮಹಾನ್ ಹಿಂದೂ ಸಂತರು, ಸಮಾಜ ಸುಧಾರಕರು, ಸಾಮರಸ್ಯ ಪ್ರತಿಪಾದಕರು. ಅನುಭವ ಮಂಟಪದ ಸ್ಥಾಪಕರು. ಅವರ ವಚನಗಳು ಸಾಮರಸ್ಯ, ಭಕ್ತಿ, ಕಾಯಕ, ದಾಸೋಹದ ಮಹತ್ವವನ್ನು ಹೇಳುತ್ತವೆ. ‘ಕಾಯಕವೇ ಕೈಲಾಸ’ ಎಂಬ ಮಾತು ಅದಕ್ಕೆ ಸಾಕ್ಷಿ. ಅವರು ಶಿವಭಕ್ತಿಯ ಕುರಿತು ಹಾಗೂ ಸನಾತನ ಧರ್ಮದ ಒಳಗೆ ಸುಧಾರಣೆ ನಡೆಸಿದರು, ಅದನ್ನು ಸಾರಾಸಗಟಾಗಿ ನಿರಾಕರಿಸಲಿಲ್ಲ.

‘ಶಿವನೇ ಬಸವಾ, ಬಸವಾ ಶಿವನೇ’, ಬಸವಣ್ಣನವರೆಂದರೆ ದ್ವಿತೀಯ ಶಂಭು, ಕಲ್ಯಾಣವೇ ಕೈಲಾಸ ಎಂದು ಜನಮಾನಸ ಬಸವಣ್ಣನವರನ್ನು ಶಿವನ ಸಮನಾಗಿ ಆರಾಽಸುತ್ತಿತ್ತು. ಶಿವ ನೆಂದರೆ ಹಿಂದೂ, ಸನಾತನ ಆಗಿಬಿಡುತ್ತದೆ. ಹಿಂದೂ ಬೇರುಗಳಿಂದ ಇದನ್ನು ಬೇರ್ಪಡಿಸಲು ಸಾಂಸ್ಕೃತಿಕ ಮಾರ್ಕ್ಸ್‌ ವಾದಿಗಳು ವಿಶ್ವಗುರು ಬಸವಣ್ಣನವರಿಗೆ ‘ಕರ್ನಾಟಕದ ಸಾಂಸ್ಕೃತಿಕ ನಾಯಕ’ ಎಂಬ ಬಿರುದು ಘೋಷಣೆ ಮಾಡಿಸಿದರು.

ಇದಾಗಿ ವರ್ಷವಾದರೂ ಪರಿಣಾಮ ಏನೂ ಆಗಿಲ್ಲ ಎಂದು ಕೊಟ್ಟವರು ಲೆಕ್ಕ ಕೇಳಿದರು. ಆವಾಗಲೇ ಈ ಅಭಿಯಾನದ ವಿಚಾರ ಮೊಳಕೆ ಒಡೆದಿದೆ ಮತ್ತು ಘೋಷಣಾಕಾರರ ಗುಣಗಾನಕ್ಕಾಗಿ ಅಭಿಯಾನ ಮೀಸಲಾಗಿದೆ. ರಾಜ್ಯಾದ್ಯಂತ ವೇದಿಕೆ ಇದೆ, ಹೀಗಾಗಿ ಈ ಘೋಷಣೆಯ ಹೊರತಾಗಿ ಪ್ರಸ್ತುತ ಸರಕಾರದಿಂದ ಸಮಾಜಕ್ಕೆ ಏನು ಲಾಭವಾಗಿದೆ? ಎಷ್ಟು ಅನುದಾನ ಬಂದಿದೆ? ಮೀಸಲಾತಿ ಮತ್ತಿತರ ಏನು ಲಾಭಗಳಾಗಿವೆ? ಎಂಬುದನ್ನು ಅಭಿಯಾನದ ನೇತೃತ್ವ ವಹಿಸಿದ ಮೂವರು ಪೂಜ್ಯರು ಹೇಳಲಿ.

ಆದರೂ, ಕಳೆದ 2-3 ದಶಕಗಳಿಂದ ರಾಜಕೀಯ ಮುಖವಾಡ ಹೊಂದಿದ ಬಲಿಷ್ಠ ಕಮ್ಯುನಿಸ್ಟ್ ವರ್ಗವು ಬಸವಣ್ಣನವರನ್ನು ‘ಹಿಂದೂ ವಿರೋಧಿ’ ಎಂದು ತೋರಿಸಲು ಪ್ರಯತ್ನಿಸುತ್ತಿದೆ. 2017-18ರಲ್ಲಿ ಇದೇ ನಾಯಕತ್ವದ ಸರಕಾರ ಇದ್ದಾಗ, ಇದೇ ರೀತಿ ಧರ್ಮ ಒಡೆದು ಪ್ರತ್ಯೇಕ ಧರ್ಮ ಮಾಡಲು ಪ್ರಯತ್ನ ಮಾಡಲಾಗಿತ್ತು, ಆದರೆ ಯಶಸ್ಸು ಸಿಕ್ಕಿರಲಿಲ್ಲ.

ಅದೇ ಪಕ್ಷದ ಪ್ರಭಾವಿ ನಾಯಕರೊಬ್ಬರು “ಧರ್ಮ ಒಡೆಯಲು ಮಾಡಿದ ಪ್ರಯತ್ನ ತಪ್ಪು" ಎಂದು ಬಳ್ಳಾರಿ ಉಪಚುಣಾವಣಾ ಸಂದರ್ಭದಲ್ಲಿ ಪ್ರಾಯಶ್ಚಿತ್ತವೇನೋ ಎಂಬಂತೆ ಸಾರ್ವಜನಿಕವಾಗಿ ಹೇಳಿಕೆ ಕೊಡುವಂತಾಗಿತ್ತು. ಈಗಿನ ಬಸವ ಸಂಸ್ಕೃತಿ ಅಭಿಯಾನವೂ ಬಸವಣ್ಣನವರ ಮೌಲ್ಯಗಳ ಪ್ರಚಾರಕ್ಕಿಂತಲೂ ಹಿಂದೂ ಒಗ್ಗಟ್ಟನ್ನು ಒಡೆಯುವ ರಾಜಕೀಯ ಲೆಕ್ಕಾಚಾರದೊಂದಿಗೆ ನಡೆಯುತ್ತಿದೆ.

ಕಮ್ಯುನಿಸ್ಟರು ಲಿಂಗಾಯತದ ಒಗ್ಗಟ್ಟನ್ನು ದುರ್ಬಲಗೊಳಿಸಲು ಸತತ ಪ್ರಯತ್ನಿಸುತ್ತಿದ್ದಾರೆ. ಅವರು ಜಾತಿ-ಸಮುದಾಯಗಳನ್ನು ವಿಭಜಿಸುವುದರ ಮೂಲಕ ಸಮಾಜದ ಶಿಥಿಲತೆಯನ್ನು ಉತ್ತೇಜಿಸುತ್ತಿದ್ದಾರೆ. ಶೈಕ್ಷಣಿಕ ವಲಯದಲ್ಲಿಯೂ ಇದನ್ನು ತುರುಕಲಾಗಿದೆ. ಒಂದು ಅಂದಾಜಿನ ಪ್ರಕಾರ, ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ಹೊರಬಂದ ಬಹುಪಾಲು ಸಂಶೋಧನಾ ಪ್ರಬಂಧ ಗಳು ಇದೇ ಕಮ್ಯುನಿಸ್ಟ್ ಜಾಡಿನಿಂದ ಭಕ್ತಿ-ವಚನ ಪರಂಪರೆಯನ್ನು ‘ಹಿಂದೂ ವಿರೋಧಿ ಚಳವಳಿ, ಕ್ರಾಂತಿ’ ಎಂದು ವ್ಯಾಖ್ಯಾನಿಸುತ್ತವೆ.

ಇದು ಲಿಂಗಾಯತವನ್ನು ಹಿಂದೂ ಧರ್ಮದಿಂದ ದೂರ ಮಾಡುವ ಉದ್ದೇಶಿತ ಪ್ರಚಾರವೇ ಆಗಿದೆ. ಪ್ರಸ್ತುತ ಬಸವ ಸಂಸ್ಕೃತಿ ಅಭಿಯಾನದ ಹಲವಾರು ನಾಯಕರ ಭಾಷಣಗಳು ಕಮ್ಯುನಿಸ್ಟ್ ಪ್ರಣೀತ ಸಂಶೋಧನೆಯ ಒಪ್ಪಿಸುವಿಕೆಯೇ ಆಗಿದೆ. ಅವುಗಳಲ್ಲಿ ಹೊಸದೇನೂ ಇಲ್ಲ. ಎಲ್ಲ ಕಡೆ ಸ್ಥಾವರ ಪೂಜೆಯು ಮೂಢನಂಬಿಕೆ, ಜಂಗಮದ ಪೂಜೆ ಕೇವಲ ವೈeನಿಕ, ಜಂಗಮವೆಂದರೆ ಸಮಾಜ ಎನ್ನುತ್ತಲೇ ದೇವಸ್ಥಾನ, ಪೂಜೆ, ಹಿಂದೂ ಶೃದ್ಧೆಯನ್ನು ಅಪಮಾನಗೊಳಿಸಲು ವೇದಿಕೆ ಬಳಕೆ ಯಾಗುತ್ತಿದೆ.

ವೀರಶೈವ ವರ್ಸಸ್ ಲಿಂಗಾಯತ, ವೈದಿಕ ವರ್ಸಸ್ ಅವೈದಿಕ, ಸನಾತನ ವರ್ಸಸ್ ಪುರಾತನ ಪದಪುಂಜಗಳನ್ನು ಹರಿ ಬಿಡುತ್ತ ಗೊಂದಲ ಎಬ್ಬಿಸಿ ಧರ್ಮಭಂಜನೆಯ ಕೆಲಸ ಮಾಡುತ್ತಿದೆ. ಇದು ಮಾರ್ಕ್ಸ್‌ವಾದಿ ರಾಜಕೀಯದ ಗುರಿ, ಬಸವಣ್ಣನವರು ಹೇಳಿದ ಆತ್ಮಸಾಕ್ಷಾತ್ಕಾರವಲ್ಲ. ಸ್ಥಾವರ - ಜಂಗಮದ ಬಗ್ಗೆ ಬಸವಣ್ಣನವರ ವಾಕ್ಯಗಳು ಇಂತಿವೆ: “ಸ್ಥಾವರ ಜಂಗಮ ಒಂದೇ ಎಂದುದು ಕೂಡಲಸಂಗನ ವಚನ", “ಸ್ಥಾವರ ಜಂಗಮ ಒಂದೇಯೆಂದರಿದರೆ ಕೂಡಲ ಸಂಗಮದೇವ ಶರಣಸನ್ನಿಹಿತ", “ಸ್ಥಾವರ ಜಂಗಮ ವೆಂಬುಭಯ ಪಕ್ಷ ಒಂದೇ, ಆವ ಮುಖದಲಿ ಬಂದರೂ ತೃಪ್ತಿ ಯೊಂದೇ ಕೂಡಲಸಂಗಮದೇವರ ಆಪ್ಯಾಯನವೊಂದೇ".

2011ರ ಅಂದಾಜಿನ ಪ್ರಕಾರ, ಕರ್ನಾಟಕದಲ್ಲಿ ಸುಮಾರು 1.2 ಕೋಟಿ ಲಿಂಗಾಯತರು ಇದ್ದು, ಇದು ರಾಜ್ಯದ ಜನಸಂಖ್ಯೆಯ ಸುಮಾರು ಶೇ.17ರಷ್ಟು ಭಾಗವಾಗಿದೆ. ಇಷ್ಟು ದೊಡ್ಡ ಸಮುದಾಯವು ಹಿಂದೂ ಒಗ್ಗಟ್ಟಿನ ಭಾಗವಾಗಿರುವುದರಿಂದಲೇ ಬಲಶಾಲಿಯಾಗಿದೆ. ಪ್ರತ್ಯೇಕ ಧರ್ಮವೆಂದು ಬೇರ್ಪಟ್ಟರೆ, ಅವರ ರಾಜಕೀಯ-ಸಾಂಸ್ಕೃತಿಕ ಶಕ್ತಿ ಕುಗ್ಗುತ್ತದೆ, ಜತೆಗೆ ಉಳಿದ ಹಿಂದೂ ಸಮುದಾಯದ ಬೆಂಬಲವೂ ಕಳೆದುಹೋಗುತ್ತದೆ.

ಕಮ್ಯುನಿಸ್ಟರಿಗೆ ಬೇಕಾಗಿರುವುದೂ ಇದೇ. ಅಭಿಯಾನದ ಮೂಲಕ ಸಾಮಾಜಿಕ-ಶೈಕ್ಷಣಿಕ-ಆರ್ಥಿಕ ಸಮೀಕ್ಷೆಯಲ್ಲಿ ವಿಭಜಿತ ಅಂಕಿ-ಅಂಶಗಳು ಬರುವಂತೆ ವೇದಿಕೆಯಿಂದ ನಿರ್ದೇಶನ ಹೋಗುತ್ತಿದೆ. ಹಿಂದೂ ಸಮಾಜ ವಿಭಜಿತವಾಗಿದ್ದಾಗಲೇ ವಿದೇಶಿ ಆಕ್ರಮಣಕಾರರು ಮತ್ತು ವಸಾಹತುಶಾಹಿಗಳು ದುರುಪಯೋಗ ಮಾಡಿಕೊಂಡರು. ಬಸವಣ್ಣನವರ ಸಂದೇಶವು ‘ಒಗ್ಗಟ್ಟಿನ ಮೂಲಕ ಸಾಮರಸ್ಯ’ ವೇ ಹೊರತು, ‘ವಿಭಜನೆಯ ಮೂಲಕ ದುರ್ಬಲತೆ’ ಅಲ್ಲ.

ಈ ನಡುವೆ ದಿಂಗಾಲೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ವೀರಶೈವ-ಲಿಂಗಾಯತ ಏಕತಾ ಸಮಾವೇಶವು ಹುಬ್ಬಳ್ಳಿಯಲ್ಲಿ ಆಯೋಜಿತವಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಇದರ ಬೆಂಬಲಕ್ಕಿದೆ. ಸಾವಿರಾರು ಮಠಾಧಿಪತಿಗಳು ಇಲ್ಲಿ ಭಾಗವಹಿಸುವ ನಿರೀಕ್ಷೆಯೂ ಇದೆ. ಒಂದಾಗಿರು ವುದೇ ಸಮಾಜದ ಅಭಿಪ್ರಾಯವೂ ಆಗಿದೆ.

ವೀರಶೈವ ಮತ್ತು ಲಿಂಗಾಯತ ಒಂದು ಎಂಬುದರ ಜತೆಗೆ ನಾವೆಲ್ಲರೂ ಹಿಂದೂ ಎಂದಾಗ ಮುಂಬರುವ ದಿನಗಳಲ್ಲಿ ಇದಕ್ಕೆ ಇನ್ನೂ ವ್ಯಾಪಕತೆ ಸಿಗಬಹುದು. ಈ ಅರ್ಥದಲ್ಲಿ ವಚನಾನಂದ ಶ್ರೀಗಳ ಹೇಳಿಕೆ ಇನ್ನೂ ಸ್ಪಷ್ಟತೆಯಿಂದ ಕೂಡಿದೆ. ಭಾರತೀಯ ಸಂವಿಧಾನವು ಈ ವಿಚಾರದಲ್ಲಿ ಸ್ಪಷ್ಟವಾಗಿದೆ. ಪರಿಚ್ಛೇದ 25, ವಿವರಣೆ ಐಐರ ಪ್ರಕಾರ “ಹಿಂದೂ ಎಂಬುದರಲ್ಲಿ ಸಿಖ್, ಜೈನ, ಬೌದ್ಧರೂ ಸೇರಿ ಪರಿಗಣಿಸಲ್ಪಡುವರು".

Constitution (Scheduled Castes) Order, 1950 ಪ್ರಕಾರ ಆರಂಭದಲ್ಲಿ SC ಸ್ಥಾನಮಾನವನ್ನು ಹಿಂದೂಗಳಿಗೆ ಮಾತ್ರ ನೀಡಲಾಗಿತ್ತು. 1956ರಲ್ಲಿ ಇದನ್ನು ಸಿಖ್ಖರಿಗೂ ವಿಸ್ತರಿಸಲಾಯಿತು. 1990ರಲ್ಲಿ ಇದನ್ನು ಬೌದ್ಧರಿಗೆ ವಿಸ್ತರಿಸಲಾಯಿತು. ಅರ್ಥಾತ್, ಮೀಸಲಾತಿ ಸೌಲಭ್ಯಗಳು ಹಿಂದೂ, ಸಿಖ್ ಹಾಗೂ ಬೌದ್ಧರಿಗೆ ಮಾತ್ರ ಅನ್ವಯಿಸುತ್ತವೆ. ಪ್ರಸ್ತುತ ಸಂವಿಧಾನ ಮಾನ್ಯತೆಯ ಪ್ರಕಾರ ‘ಇತರೆ’ ಎಂದು ಬರೆಸುವುದರಲ್ಲಿ ಯಾವ ಪುರುಷಾರ್ಥವೂ ಕಾಣಿಸುವುದಿಲ್ಲ. ಇದು ಸಮೀಕ್ಷೆಯಲ್ಲಿ ಸಮುದಾಯದ ಕಡಿಮೆ ಸಂಖ್ಯೆ ಬರುವಲ್ಲಿ ಸಹಾಯ ಮಾಡಬಹುದೇ ಹೊರತು, ಸಮುದಾಯಕ್ಕೆ ಸೌಲಭ್ಯಗಳ ದೃಷ್ಟಿಯಲ್ಲಿ ಯಾವ ಲಾಭವೂ ಆಗುವುದಿಲ್ಲ.

ಹಿಂದೂ ಎಂದು ಉಳಿಯುವುದೇ ತಾತ್ವಿಕವಾಗಿ, ಆಧ್ಯಾತ್ಮಿಕವಾಗಿ ಸರಿ, ಸಾಮಾಜಿಕ-ಆರ್ಥಿಕವಾಗಿ -ಕಾನೂನಾತ್ಮಕವಾಗಿ ಅಗತ್ಯ. ತಮ್ಮ ಸಮುದಾಯದ ಜನರ ಹಿತ ನೋಡಬೇಕೋ ಅಥವಾ ಜಾಗತಿಕ ಮಠಾಧೀಶರ ವಿಚಾರಕ್ಕೆ ಬದ್ಧರಾಗಿರಬೇಕೋ ಎಂಬ ಸಂದಿಗ್ಧದಲ್ಲಿ ಅಭಿಯಾನದಲ್ಲಿ ಭಾಗವಹಿಸು ತ್ತಿರುವ ಅನೇಕ ಸ್ವಾಮಿಗಳು ಇದ್ದಾರೆ...

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)