Dr N Someshwara Column: ರಾಸಾಯನಿಕಗಳ ಇತ್ಯಾತ್ಮಕ-ನೇತ್ಯಾತ್ಮಕ ಜಗತ್ತು
Dr N Someshwara Column: ರಾಸಾಯನಿಕಗಳ ಇತ್ಯಾತ್ಮಕ-ನೇತ್ಯಾತ್ಮಕ ಜಗತ್ತು

ಹಿಂದಿರುಗಿ ನೋಡಿದಾಗ
ಡಾ.ನಾ.ಸೋಮೇಶ್ವರ
ನಮ್ಮ ದೇಹವು 60 ನಮೂನೆಯ ರಾಸಾಯನಿಕ ಧಾತುಗಳಿಂದ ರಚನೆಯಾಗಿದೆ. ನಮ್ಮ ದೇಹ ಹಾಗೂ ಮನಸ್ಸಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯವೂ ರಾಸಾಯನಿಕ ಲೀಲೆ. ನಾವು ತಿನ್ನುವ ಆಹಾರವು ಸಂಕೀರ್ಣ ರಾಸಾಯನಿಕ ಪದಾರ್ಥಗಳ ಸಮುಚ್ಚಯ. ನಮ್ಮ ಜೀರ್ಣಾಂಗಗಳು ಈ ಪದಾರ್ಥಗಳನ್ನು ಸರಳಗೊಳಿಸುತ್ತವೆ. ಆ ಸರಳ ಪದಾರ್ಥಗಳು ‘ಸುಟ್ಟು’ ಅಗತ್ಯ ಶಕ್ತಿಯನ್ನು ಉತ್ಪಾದಿಸುತ್ತವೆ. ಆ ಜೈವಿಕ ಶಕ್ತಿಯೇ ನಮ್ಮ ದೇಹ-ಮನಸ್ಸುಗಳ ಕಾರ್ಯಗಳಿಗೆ ನೆರವಾಗುತ್ತದೆ.
ಮರ್ಲಿನ್ ಮನ್ರೋ 50-60ರ ದಶಕದ ಹಾಲಿವುಡ್ ಇಂಗ್ಲಿಷ್ ಚಿತ್ರಗಳಲ್ಲಿ ನಟಿಸುತ್ತಿದ್ದ ಮಹಾನ್ ಸುಂದರಿ.ಈಕೆಯ ಮೂಲ ಹೆಸರು ನಾರ್ಮಾ ಜೀನ್ ಮಾರ್ಟೆನ್ಸನ್. ಜನನ 1926ರ ಜೂನ್ 1ರಂದು. ಈಕೆ ನಟಿ, ರೂಪದರ್ಶಿಹಾಗೂ ಗಾಯಕಿಯಾ ಗಿದ್ದಳು. 50ರ ದಶಕದಲ್ಲಿ ಹಾಲಿವುಡ್ಡಿಗೆ ಹೆಜ್ಜೆಯಿಟ್ಟ ಮನ್ರೋ ‘ಸೆಕ್ಸ್ ಬಾಂಬ್’ ಎಂದು ಹೆಸರಾಗಿ ಪಡ್ಡೆ ಹುಡುಗರ ನಿದ್ದೆಗೆಡಿಸಿ ದಳು. ‘ಜಂಟ್ಲ್‌ಮೆನ್ ಪ್ರಿಫರ್ ಬ್ಲಾಂಡ್ಸ್’, ‘ಸೆವೆನ್ ಇಯರ್ ಇಚ್’ ಮತ್ತು ‘ಸಮ್ ಲೈಕ್ ಇಟ್ ಹಾಟ್’ ಚಿತ್ರಗಳು ಈಕೆಯನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದವು.
ಅಮೆರಿಕದ ಅಧ್ಯಕ್ಷರಾಗಿದ್ದ ಜಾನ್ ಎಫ್.ಕೆನಡಿ ಹಾಗೂ ಆತನ ಸೋದರ ರಾಬರ್ಟ್ ಎಫ್.ಕೆನಡಿ ಈಕೆಯ ಪ್ರೇಮ ಪಾಶದಲ್ಲಿ ಸಿಲುಕಿದ್ದರು. ಹಣ, ಹೆಸರು, ಪ್ರಚಾರಗಳು ಬೇಡವೆಂದರೂ ತನ್ನ ಬೆನ್ನುಹತ್ತಿ ಬರುತ್ತಿದ್ದ ಹಿನ್ನೆಲೆಯಲ್ಲಿ, ಈಕೆ ಮಾನಸಿಕ ರೋಗಗಳಿಗೆ ತುತ್ತಾದಳು.
ಮನೋವೈದ್ಯ ಡಾ.ರಾಲ್ ಗ್ರೀನ್ಸನ್ ಈಕೆಗೆ ‘ಖಿನ್ನತೆಯಿದೆ’ ಎಂದು ರೋಗನಿದಾನವನ್ನು ಮಾಡಿ ಚಿಕಿತ್ಸೆ ನೀಡಲಾ ರಂಭಿಸಿದ. ಆಗಸ್ಟ್ 4, 1962. ಸ್ಥಳ ಕ್ಯಾಲಿ-ರ್ನಿಯಾದ ಲಾಸ್ ಏಂಜಲೀಸ್ ನಗರದಲ್ಲಿದ್ದ ಆಕೆಯ ಮನೆ. ‘ಯೂನಿಸ್ ಮುರ್ರೆ’ ಎಂಬ ಮನೆಗೆಲಸದವಳು ಮನ್ರೋ ಸತ್ತಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದಳು. ವೈದ್ಯರು ಪೋಸ್ಟ್ ಮಾರ್ಟೆಮ್ ನಡೆಸಿ ಆಕೆ ‘ಕ್ಲೋರಾಲ್ ಹೈಡ್ರೇಟ್’ ಮತ್ತು ‘ಪೆಂಟೋಬಾರ್ಬಿಟಾಲ್’ ಎಂಬ ಔಷಧಗಳ ಅತ್ಯಧಿಕ ಸೇವನೆಯಿಂದ ಸತ್ತಿದ್ದಾಳೆ ಎಂದು ಘೋಷಿಸಿದರು. ಮನ್ರೋ ಯಾಕೆ, ಹೇಗೆ, ಯಾರಿಂದ ಸತ್ತಳು ಎಂಬುದು ಹಾಲಿವುಡ್ ನಲ್ಲಿ ಇಂದಿಗೂ ಅತ್ಯಂತ ಚರ್ಚೆಗೆ ಒಳಗಾಗಿರುವ ವಿಚಾರವಾಗಿದೆ.
ನಮ್ಮ ದೇಹವು ೬೦ ನಮೂನೆಯ ರಾಸಾಯನಿಕ ಧಾತುಗಳಿಂದ ರಚನೆಯಾಗಿದೆ. ನಮ್ಮ ದೇಹ ಹಾಗೂ ಮನಸ್ಸಿನಲ್ಲಿ ನಡೆಯುವ ಪ್ರತಿಯೊಂದು ಕಾರ್ಯವೂ ರಾಸಾಯನಿಕ ಲೀಲೆ. ನಾವು ತಿನ್ನುವ ಆಹಾರವು ಸಂಕೀರ್ಣ ರಾಸಾಯನಿಕ ಪದಾರ್ಥಗಳ ಸಮುಚ್ಚಯ. ನಮ್ಮ ಜೀರ್ಣಾಂಗಗಳು ಈ ಪದಾರ್ಥಗಳನ್ನು ಸರಳಗೊಳಿಸುತ್ತವೆ. ಆ ಸರಳ ಪದಾರ್ಥ ಗಳು ‘ಸುಟ್ಟು’ ಅಗತ್ಯ ಶಕ್ತಿಯನ್ನು ಉತ್ಪಾದಿಸುತ್ತವೆ. ಆ ಜೈವಿಕ ಶಕ್ತಿಯೇ ನಮ್ಮ ದೇಹ-ಮನಸ್ಸುಗಳ ಕಾರ್ಯಗಳಿಗೆ ನೆರವಾಗುತ್ತದೆ. ಒಂದು ಹುಚ್ಚುನಾಯಿ ಅಟ್ಟಿಸಿಕೊಂಡು ಬಂದರೆ ನಮ್ಮನ್ನು ಓಡುವಂತೆ ಮಾಡುವುದು ‘ಅಡ್ರಿನ ಲಿನ್’ ಎಂಬ ರಾಸಾಯನಿಕ. ನಾಯಿಯಿಂದ ತಪ್ಪಿಸಿಕೊಂಡ ಮೇಲೆ ನಮ್ಮ ದೇಹ-ಮನಸ್ಸುಗಳಿಗೆ ವಿಶ್ರಾಂತಿ ನೀಡುವುದು ‘ನಾರ್ -ಅಡ್ರಿನಲಿನ್’ ಎಂಬ ಮತ್ತೊಂದು ರಾಸಾಯನಿಕ. ಹೊರಜಗತ್ತಿನ ಪ್ರಚೋದನೆಗಳೇ ನಮ್ಮನ್ನು ಕೆರಳಿಸಬೇಕು ಎಂದೇನಿಲ್ಲ.
ನಮ್ಮ ಮನಸ್ಸೂ ಅಜ್ಞಾತ ಭಯಗಳಿಂದ ಭ್ರಮಿತವಾದಾಗ ಇಂಥ ರಾಸಾಯನಿಕಗಳನ್ನು ಪ್ರಚೋದಿಸಿ ನಮ್ಮನ್ನು ಭಯ, ಆತಂಕ, ಖಿನ್ನತೆಯಲ್ಲಿ ದೂಡುತ್ತದೆ. ಹೀಗೆ ಹಲವು ರಾಸಾಯನಿಕ ಕ್ರಿಯೆಗಳಿಂದ ಅಸ್ತವ್ಯಸ್ತವಾದ ನಮ್ಮದೇಹ-ಮನಸ್ಸುಗಳನ್ನು ನಿಯಂತ್ರಿಸಲು ಮತ್ತೆ ಹಲವು ರಾಸಾಯನಿಕಗಳ ಮೊರೆಹೋಗಬೇಕಾಗುತ್ತದೆ. ವಜ್ರವನ್ನುಕತ್ತರಿಸಲು ವಜ್ರವೇ ಬೇಕು. ಹಾಗಾಗಿ ರಾಸಾಯನಿಕಗಳಿಂದ ಆತಂಕಕ್ಕೆ ಒಳಗಾಗಿ, ಭೀತಿಯಿಂದ ಬಳಲುತ್ತಾ, ‘ನನ್ನಬದುಕು ಏಕೆ ಹೀಗಾಯಿತು?’ ಎಂದು ಖಿನ್ನತೆಯಿಂದ ನರಳುತ್ತಾ, ‘ನಾನು ಯಾಕೆ ಸಾಯಬಾರದು?’ ಎಂದು ಯೋಚಿಸುತ್ತಾ ಸಾವಿಗೆ ಪ್ರಚೋದಿಸುವುದೂ ಈ ರಾಸಾಯನಿಕಗಳೇ!
ನಮ್ಮನ್ನು ನಾನಾ ಮಾನಸಿಕ ಹಾಗೂ ಮನೋದೈಹಿಕ ಕಾಯಿಲೆಗಳಿಗೆ ದೂಡುವ ಈ ಅಪಾಯಕಾರಿ ರಾಸಾಯ ನಿಕಗಳನ್ನು ಹದ್ದುಬಸ್ತಿನಲ್ಲಿಡಲು ‘ಶಾಮಕಗಳು’ (ಸೆಡೆಟೀವ್ಸ್) ಹಾಗೂ ‘ನಿದ್ರಾಜನಕಗಳು’ (ಹಿಪ್ನಾಟಿಕ್ಸ್) ಎಂಬ 2ವರ್ಗದ ಔಷಧಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿರುವರು. ಹೆಸರೇ ಸೂಚಿಸುವಂತೆ ಶಾಮಕಗಳು, ಅಜ್ಞಾತ ಭಯ ದಿಂದ ಆತಂಕಕ್ಕೆ ಒಳಗಾಗಿರುವ ನಮ್ಮ ಮನಸ್ಸನ್ನು ಶಾಂತಗೊಳಿಸುತ್ತವೆ. ಕೆಲವು ಸಂದರ್ಭಗಳಲ್ಲಿ, ಆತಂಕಿತವ್ಯಕ್ತಿಯು ಸ್ವಲ್ಪ ಹೊತ್ತು ಸ್ವಸ್ಥವಾಗಿ ನಿದ್ರಿಸಲೆಂದು ನಿದ್ರಾ ಪ್ರಚೋದಕಗಳನ್ನು ನೀಡುವುದುಂಟು. ಕೆಲವು ಔಷಧಗಳು ಶಾಮಕ ಹಾಗೂ ನಿದ್ರಾಜನಕ ಗುಣಗಳನ್ನು ಒಳಗೊಂಡಿರುತ್ತವೆ.
ಹಾಗಾಗಿ ವೈದ್ಯರು ರೋಗಿಯ ಸಮಗ್ರ ರೋಗ ಚರಿತ್ರೆಯನ್ನು ತಿಳಿದು, ಅವರಿಗೆ ಸೂಕ್ತವಾಗುವ ಔಷಧವನ್ನು,ಸೂಕ್ತ ಪ್ರಮಾಣದಲ್ಲಿ, ನಿಗದಿತ ಅವಧಿಯವರೆಗೆ ಮಾತ್ರ ನೀಡುವರು. ನಂತರ ನಿಲ್ಲಿಸುವರು. ಔಷಧಗಳ ಜತೆಯಲ್ಲಿಅವರಿಗೆ ಅಗತ್ಯವಾದ ಆಪ್ತಸಲಹೆ, ಜೀವನಶೈಲಿಯ ಬದಲಾವಣೆಗಳನ್ನು ಸೂಚಿಸಿ ಅವರ ಮನಸ್ಸಿನ ಹಾಗೂಮನೋದೈಹಿಕ ಸಮಸ್ಯೆಗಳನ್ನು ನಿವಾರಿಸುವರು.
ಅನಾದಿ ಕಾಲದಿಂದಲೂ ಮದ್ಯಸಾರ, ಗಾಂಜಾ ಮತ್ತು ಅಫೀಮನ್ನು ಶಾಮಕ ಹಾಗೂ ನಿದ್ರಾಜನಕ ಔಷಧಗಳಾಗಿ ಬಳಸು ತ್ತಿದ್ದರು. 1832ರಲ್ಲಿ ಕ್ಲೋರಾಲ್ (ಟ್ರೈಕ್ಲೋರೊಅಸಿಟಾಲ್ಡಿಹೈಡ್) ಎಂಬ ರಾಸಾಯನಿಕವನ್ನು ಜರ್ಮನಿಯ ಜಸ್ಟಸ್ ವಾನ್ ಲೀಬಿಗ್ ಸಿದ್ಧಪಡಿಸಿದ. ಇದಕ್ಕೆ ಸಂಬಂಧಿಸಿ 1832ರಿಂದ 1860ರವರೆಗೆ ವಿವಿಧ ಪ್ರಯೋಗಗಳು ನಡೆದವು. ಕ್ಲೋರಾಲನ್ನು ನೀರಿನಲ್ಲಿ ಕರಗಿಸಿದರೆ ‘ಕ್ಲೋರಾಲ್ ಹೈಡ್ರೇಟ್’ ಎಂಬ ದ್ರಾವಣ ದೊರೆಯುತ್ತದೆ ಎಂಬುದು ಗೊತ್ತಾಯಿತು.
1869ರಲ್ಲಿ, ಜರ್ಮನಿಯ ಮಥಿಯಾಸ್ ಯೂಜೀನ್ ಅಸ್ಕರ್ ಲೈಬ್ರೀಚ್ ಎಂಬ ಔಷಧ ವಿಜ್ಞಾನಿ ಮೊದಲ ಬಾರಿಗೆ ಈ ಕ್ಲೋರಾಲ್ ಹೈಡ್ರೇಟನ್ನು ಸೇವಿಸಿದಾಗ, ಅದು ದೇಹದಲ್ಲಿ ‘ಟ್ರೈಕ್ಲೋರೋಇಥನಾಲ್’ ಎಂಬ ರಾಸಾಯನಿಕವನ್ನು ಯಕೃತ್ತಿ ನಲ್ಲಿ ಉತ್ಪಾದಿಸಿ, ಆತಂಕವನ್ನು ಶಮನಗೊಳಿಸಿ, ನಿದ್ರೆಯನ್ನು ತರುತ್ತದೆ ಎಂಬುದನ್ನು ಗಮನಿಸಿದ. ಹಾಗಾಗಿ ಮೊಟ್ಟ ಮೊದಲ ಬಾರಿಗೆ ಮಾನವ ನಿರ್ಮಿತ ಶಾಮಕ ಹಾಗೂ ನಿದ್ರಾಜನಕ ಔಷಧವೊಂದು ವೈದ್ಯರಿಗೆಲಭಿಸಿತು. ಈ ಔಷಧವು ಅಲ್ಪಕಾಲದಲ್ಲೇ ಜನಪ್ರಿಯವಾಯಿತು.
ಇದನ್ನೂ ಓದಿ: Dr N Someshwara Column: ಎರಡು ಅಲಗಿನ ಖಡ್ಗ ಫೀನಾಲ್ !
ವೈದ್ಯರು ಕ್ಲೋರಾಲ್ ಹೈಡ್ರೇಟನ್ನು ಆತಂಕ ಲಯಕಾರಕವಾಗಿ ಬಳಸಲಾರಂಬಿಸಿದರು. ಇದು ನಿದ್ರಾಹೀನತೆಯ ಪ್ರಕರಣಗಳಲ್ಲಿ, ಆತಂಕವನ್ನು ಶಮನಗೊಳಿಸಿ, ಉತ್ತಮ ನಿದ್ರೆಯನ್ನು ತರಲಾರಂಬಿಸಿತು. ಹಾಗೆಯೇ ಪ್ರಧಾನ ಶಸ್ತ್ರ ಚಿಕಿತ್ಸೆಗೆ ಒಳಗಾಗುವ ಮೊದಲು ‘ಅರಿವಳಿಕೆ-ಪೂರ್ವ’ ಔಷಧವಾಗಿ ಬಳಸಲಾರಂಭಿಸಿದರು. ಶಸ್ತ್ರಚಿಕಿತ್ಸೆ ಯಶಸ್ವಿ ಯಾಗುವುದೋ ಇಲ್ಲವೋ ಎಂದು ರೋಗಿ ಆತಂಕಕ್ಕೆ ಒಳಗಾಗಿರುತ್ತಾನೆ. ಅಂಥ ರೋಗಿಯನ್ನು ಶಾಂತಗೊಳಿಸಲು ಕ್ಲೋರಾಲ್ ಹೈಡ್ರೇಟನ್ನು ಪರಿಣಾಮಕಾರಿಯಾಗಿ ಉಪಯೋಗಿಸಲಾರಂಭಿಸಿದರು.
ಆತಂಕವನ್ನು ಅಲ್ಪಾವಧಿವರೆಗೆ ನಿಗ್ರಹಿಸಲು ಕ್ಲೋರಾಲ್ ಹೈಡ್ರೇಟ್ ಅತ್ಯುತ್ತಮ ಔಷಧ ಎಂದು ಪ್ರಸಿದ್ಧವಾಯಿತು.ಇದನ್ನು ದೀರ್ಘಾವಧಿವರೆಗೆ ಬಳಸಿದರೆ, ಇದು ‘ತಾಳಿಕೆ’ ಅಥವಾ ‘ಟಾಲರನ್ಸ್’ ಬೆಳೆಸಿಕೊಳ್ಳುವುದರ ಜತೆಯಲ್ಲಿ‘ಅವಲಂಬನೆ’ ಅಥವಾ ‘ಡಿಪೆಂಡೆನ್ಸ್’ಗಳನ್ನು ಬೆಳೆಸಿಕೊಳ್ಳುತ್ತದೆ ಎನ್ನುವ ಅಪಾಯಕಾರಿ ಹಾಗೂ ಬೇಸರದ ವಿಚಾರವು ಹೊರಬಂದಿತು. ತಾಳಿಕೆ ಎನ್ನುವುದಕ್ಕೆ ಉದಾಹರಣೆ- ದಿನಕ್ಕೆ ಒಂದು ಮಾತ್ರೆ ನಿದ್ರೆಯನ್ನು ತಂದರೆ, ಒಂದು ವಾರದ ನಂತರ ಒಂದು ಮಾತ್ರೆ ಸಾಕಾಗಲ್ಲ 2 ಬೇಕು; 4 ವಾರಗಳಾದ ಮೇಲೆ 3 ಮಾತ್ರೆ ಬೇಕು ಎನ್ನುವ ಸ್ಥಿತಿ. ಒಂದು ಘಟ್ಟದಲ್ಲಿ ಮಾತ್ರೆಯಿಲ್ಲದೇ ನಿದ್ರೆಯೇ ಬರುವುದಿಲ್ಲ ಎನ್ನುವಂತಾಗಬಹುದು.
ಆಗ ಆತ ನಿದ್ರೆ ಮಾಡಲು ಮಾತ್ರೆಯನ್ನು ಅವಲಂಬಿಸಲೇಬೇಕಾದ ಅಸಹಾಯಕತೆಯುಂಟಾಗುತ್ತದೆ. 20ನೇ ಶತಮಾನದ ಆರಂಭದಲ್ಲಿ ‘ಬಾರ್ಬಿಚುರೇಟ್ಸ್’ ಮತ್ತು ‘ಬೆಂಜ಼ೋಡಯಾಜ಼ಿಪೈನ್ಸ್’ ಎಂಬ ಹೊಸ ವರ್ಗದ ಔಷಧಗಳ ಸಂಶೋಧನೆ ಯಾದವು. ಇವು ಕ್ಲೋರಾಲ್ ಹೈಡ್ರೇಟಿಗಿಂತ ಉತ್ತಮ ಹಾಗೂ ಸುರಕ್ಷಿತ ಔಷಧಗಳಾಗಿದ್ದ ಕಾರಣ ಹೆಚ್ಚು ಬಳಕೆಗೆ ಬಂದವು. ಹಾಗಾಗಿ ವೈದ್ಯರು ಕ್ಲೋರಾಲ್ ಹೈಡ್ರೇಟಿನ ಉಪಯೋಗವನ್ನು ಕ್ರಮೇಣ ಕಡಿಮೆ ಮಾಡಿದರು. ಇಂದು ಕ್ಲೋರಾಲ್ ಹೈಡ್ರೇಟನ್ನು ಸಾಮಾನ್ಯವಾಗಿ ಯಾರೂ ಬಳಸುವುದಿಲ್ಲ.
ಅಮೆರಿಕದ ‘ಫುಡ್ ಆಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್’ ಮತ್ತು ‘ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ’ ಕ್ಲೋರಾಲ್ಹೈಡ್ರೇಟ್ ಮಾರಾಟಕ್ಕೆ ಅನುಮತಿಸಿಲ್ಲ. ಅನುಮತಿಗಾಗಿ ಕಾಯುತ್ತಿರುವ ಔಷಧಗಳ ಪಟ್ಟಿಯಲ್ಲಿ ಕ್ಲೋರಾಲ್ಹೈಡ್ರೇಟ್ ಸೇರಿದೆ. ಬ್ರಿಟನ್ ನಲ್ಲಿ ತೀವ್ರ ಸ್ವರೂಪದ ನಿದ್ರಾಹೀನತೆಯ ಅಲ್ಪಾವಧಿ ಚಿಕಿತ್ಸೆಗೆ ಕ್ಲೋರಾಲ್ಹೈಡ್ರೇಟನ್ನು ಬಳಸಬಹುದಾಗಿದೆ. ಭಾರತದಲ್ಲಿ ಕ್ಲೋರಾಲ್ ಹೈಡ್ರೇಟನ್ನು ಒಂದು ಔಷಧವಾಗಿ ಜೂನ್ 7, 1991 ಗೆಜ಼ೆಟ್ ಸೂಚನೆ ಜಿ.ಎಸ್.ಆರ್.ನಂ 304 (ಇ) ಅನ್ವಯ ಸಂಪೂರ್ಣ ನಿಷೇಧಿಸಲಾಗಿದೆ.
ಆದರೆ ಕ್ಲೋರಾಲ್ ಹೈಡ್ರೇಟನ್ನು ಕಾರ್ಖಾನೆಗಳಲ್ಲಿ ನಾನಾ ಕಾರ್ಯಗಳಿಗೆ ಬಳಸುವ ಕಾರಣ, ಅದರ ಉತ್ಪಾದನೆ ಯನ್ನು ಪೂರ್ಣ ನಿಲ್ಲಿಸಿಲ್ಲ. ಬಹುಶಃ ನಿಲ್ಲಿಸಲು ಸಾಧ್ಯವೂ ಇಲ್ಲ. ಆದರೆ ಔಷಧವಾಗಿ ಮಾರುವುದನ್ನು ನಿಷೇಧಿಸಿದೆ. ಅಮೆರಿಕದಲ್ಲಿ ಕ್ಲೋರಾಲ್ ಹೈಡ್ರೇಟನ್ನು ‘ತಲೆತಲಾಂತರದ ಔಷಧ’ (ಲೆಗಸಿ ಡ್ರಗ್) ಎಂಬ ಹಿನ್ನೆಲೆಯಲ್ಲಿ ಮಾರು ತ್ತಿದ್ದರು. ಅಲ್ಲಿ 1938ರಲ್ಲಿ ‘ಫೆಡರಲ್ ಫುಡ್, ಡ್ರಗ್ ಆಂಡ್ ಕಾಸ್ಮೆಟಿಕ್ ಆಕ್ಟ್’ ಬಂದ ಕಾರಣ, ಇದಕ್ಕೂ ಮೊದಲು ಬಳಕೆಯಲ್ಲಿದ್ದ ಔಷಧಗಳಿಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ ಎಂದು ಗುಲ್ಲೆದ್ದಿತು.
ಆದರೆ ೨೦೧೨ರ ವೇಳೆಗೆ ಅಮೆರಿಕದಲ್ಲಿದ್ದ ಎಲ್ಲ ಔಷಧ ಉತ್ಪಾದಕರು ಕ್ಲೋರಾಲ್ ಹೈಡ್ರೇಟ್ ಉತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸಿದರು. ಜಗತ್ತಿನ ಕಳ್ಳ ಮಾರುಕಟ್ಟೆಯಲ್ಲಿ ನಾನಾ ವಸ್ತುಗಳು ಮುಕ್ತವಾಗಿ ದೊರೆಯುವಂತೆ, ಕ್ಲೋರಾಲ್ ಹೈಡ್ರೇಟ್ ಸಹ ದೊರೆಯುತ್ತದೆ. ಇದು ತನ್ನ ‘ಮಿಕಿ ಫಿನ್’ ಪರಿಣಾಮಕ್ಕಾಗಿ ಕುಖ್ಯಾತವಾಗಿದೆ. ಅಮೆರಿಕದ ಚಿಕಾಗೊ ನಗರದ ಲೋನ್ ಸ್ಟಾರ್ ಸಲೂನ್ ಮತ್ತು ಪಾಮ್ ಗಾರ್ಡೆನ್ ರೆಸ್ಟೋರೆಂಟಿನಲ್ಲಿ, ಮೈಕೇಲ್ ಮಿಕಿ ಫಿನ್ ಎಂಬಾತ ಮಾದಕ ಪಾನೀಯಗಳನ್ನು ಸರಬರಾಜು ಮಾಡುವ ಮಾಣಿಯಾಗಿ ಕೆಲಸ ಮಾಡುತ್ತಿದ್ದ. ಇವನು ಸೂಕ್ತ ಗಿರಾಕಿಗಳನ್ನು ಆರಿಸಿಕೊಂಡು ಅವರ ಪಾನೀಯದಲ್ಲಿ ಕ್ಲೋರಾಲ್ ಹೈಡ್ರೇಟನ್ನು ಬೆರೆಸಿ ನೀಡುತ್ತಿದ್ದ. ಕ್ಲೋರಾಲ್ ಹೈಡ್ರೇಟಿನ ಪರಿಣಾಮವಾಗಿ ಅವರು ಆಳನಿದ್ರೆಗೆ ಜಾರುತ್ತಿದ್ದರು. ಆಗ ಅವರ ಬಳಿಯಿದ್ದ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ. ಈ ಕೆಲಸವನ್ನು ಫಿನ್ ಮತ್ತು ಅವನ ಸಂಗಡಿಗರು ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದರು. ಕೊನೆಗೆ ಈ ಗುಟ್ಟು ರಟ್ಟಾಯಿತು.
೧೯೦೩-೦೫ರ ನಡುವೆ ನಡೆದ ಇವರ ಎಲ್ಲ ಚಟುವಟಿಕೆಗಳು ಬಹಿರಂಗವಾದವು. ಆಗ ಶಿಕಾಗೋ ದಿನಪತ್ರಿಕೆಗಳು, ಒಬ್ಬ ವ್ಯಕ್ತಿಯನ್ನು ಮತ್ತಿಗೀಡು ಮಾಡಿ ಅವನನ್ನು ದೋಚುವ ತಂತ್ರವನ್ನು ಸೂಚಿಸಲು ‘ಮಿಕಿ ಫಿನ್’ ಎಂಬ ಹೊಸನುಡಿಗಟ್ಟನ್ನು ಜಾರಿಗೆ ತಂದವು. ಇಂದು ‘ಮಿಕಿ ಫಿನ್’ ನುಡಿಗಟ್ಟು ತನ್ನ ಮೂಲಕ್ಕಿಂತ ಹೆಚ್ಚಿನ ಅರ್ಥವನ್ನು ಒಳಗೊಂಡಿದೆ. ಒಬ್ಬ ವ್ಯಕ್ತಿಯನ್ನು ಚೆನ್ನಾಗಿ ಹೊಡೆಯಲು ಅಥವಾ ಅಪಹರಿಸಿ, ದೊಡ್ಡ ಮೊತ್ತದ ಹಣ ಕೇಳಲು ಮಿಕಿ ಫಿನ್ ತಂತ್ರಗಳನ್ನು ಬಳಸುವ ಪದ್ಧತಿಯಿದೆ. ಎಲ್ಲಕ್ಕಿಂತಲೂ ಅಪಾಯಕಾರಿ ಹಾಗೂ ಖಂಡನೀಯವಾದದ್ದು ‘ಡೇಟ್ ರೇಪಿಂಗ್’ ಎಂಬ ಕುಪ್ರಸಿದ್ಧ ವರ್ತನೆ. ಈಗಿನ ಕೆಲ ಹೆಣ್ಣು ಮಕ್ಕಳು ಗಂಡಸರಿಗಿಂತ ತಾವೇನೂ ಕಮ್ಮಿ ಯಿಲ್ಲವೆಂದು ತೋರಿಸಲು ತಡರಾತ್ರಿಯ ಪಾರ್ಟಿಗಳಿಗೆ ಹೋಗುವು ದುಂಟು.
ಅಲ್ಲಿ ಅವರ ಸಹೋದ್ಯೋಗಿಗಳೇ ಕ್ಲೋರಾಲ್ ಹೈಡ್ರೇಟಿನಂಥ ಮತ್ತು ಬರಿಸುವ ಔಷಧಗಳನ್ನು ಆ ಹೆಣ್ಣು ಮಕ್ಕಳ ಪಾನೀಯ ದಲ್ಲಿ ಬೆರೆಸುವರು. ಅದನ್ನು ಸೇವಿಸಿದ ಅವರು ಮತ್ತಿಗೀಡಾಗಿ ಪ್ರಜ್ಞೆ ಕಳೆದುಕೊಳ್ಳುವುದುಂಟು. ಆಗ ಅವರ ಮೇಲೆ ಹಠಸಂಭೋಗ ಮಾಡಿ, ಅದನ್ನು ಚಿತ್ರೀಕರಿಸಿ, ಜೀವನಪರ್ಯಂತ ಬ್ಲಾಕ್ ಮೇಲ್ ಮಾಡುವುದುಂಟು. ಹೀಗೆ ಮೋಸಕ್ಕೊಳ ಗಾದ ಬಹಳಷ್ಟು ಹೆಣ್ಣು ಮಕ್ಕಳು ‘ಮಾನಕ್ಕಂಜಿ’ ಸುಮ್ಮನಿರಬೇಕಾಗುತ್ತದೆ. ಇಂಥ ಪ್ರಕರಣಗಳುಹೊರಬರುವುದು ಬಹಳ ಕಡಿಮೆ. ಪೊಲೀಸಿಗೆ ದೂರಿತ್ತರೂ ಪ್ರಯೋಜನವಾಗದು.
ಏಕೆಂದರೆ ಇಂಥ ಔಷಧಗಳು ಅಲ್ಪಾವಧಿಯಲ್ಲಿ ದೇಹದಿಂದ ವಿಸರ್ಜನೆಗೊಳ್ಳುತ್ತವೆ. ರಕ್ತ ಇಲ್ಲವೇ ಮೂತ್ರ ಪರೀಕ್ಷೆ ಗಳ ಮೂಲಕ ಪತ್ತೆ ಹಚ್ಚುವ ಸಾಧ್ಯತೆ ಕ್ಷೀಣವಾಗುತ್ತದೆ. ಹಾಗಾಗಿ ‘ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್’ ಎಂಬಂತೆ, ನಮ್ಮ ಹೆಣ್ಣು ಮಕ್ಕಳು ತಂತಮ್ಮ ಎಚ್ಚರಿಕೆಯಲ್ಲಿ ತಾವಿರುವುದು ಉತ್ತಮ.