ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Mohan Vishwa Column: ಮುಂಬೈ ದಾಳಿಯ ಚಿದಂಬರ ರಹಸ್ಯ

ಅಕ್ಟೋಬರ್ ೨೦೦೫ರಲ್ಲಿ ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ದೆಹಲಿಯ ಜನನಿಬಿಡ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ದಾಳಿಯಲ್ಲಿ 70 ಜನ ಮೃತಪಟ್ಟಿ ದ್ದರು, 250ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ದೆಹಲಿಯಲ್ಲಿ ನಡೆದ ಭಯೋತ್ಪಾದಕ ಕೃತ್ಯದ ಹಿಂದೆ ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕ ಸಂಘಟನೆಗಳ ಕೈವಾಡವಿದ್ದದ್ದು ಜಗಜ್ಜಾಹೀರಾಗಿತ್ತು.

Mohan Vishwa Column: ಮುಂಬೈ ದಾಳಿಯ ಚಿದಂಬರ ರಹಸ್ಯ

-

ಮೋಹನ್‌ ವಿಶ್ವ ಮೋಹನ್‌ ವಿಶ್ವ Oct 11, 2025 6:21 AM

ವೀಕೆಂಡ್‌ ವಿತ್‌ ಮೋಹನ್‌

camohanbn@gmail.com

ಮುಂಬೈ ಭಯೋತ್ಪಾದಕ ದಾಳಿಯಾದ ಹದಿನೇಳು ವರ್ಷಗಳ ನಂತರ ಮತ್ತೊಮ್ಮೆ ಅದನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದು ಕಾಂಗ್ರೆಸ್ಸಿನ ಸಂಸದ ಹಾಗೂ ಮಾಜಿ ವಿತ್ತಸಚಿವ ಪಿ.ಚಿದಂಬರಂ. ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಪಿ.ಚಿದಂಬರಂ, ‘ಅಂದು ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದು ಪಾಕಿಸ್ತಾನದ ವಿರುದ್ಧ ದಾಳಿ ನಡೆಸಲಾಗಲಿಲ್ಲ’ ಎಂದು ಹೇಳಿದರು. 2011ರ ನವೆಂಬರ್ 26, ಮುಂಬೈ ನಗರ ಅಕ್ಷರಶಃ ನರಕಸದೃಶವಾಗಿತ್ತು.

ಸಮುದ್ರಮಾರ್ಗದ ಮೂಲಕ ಮುಂಬೈ ಪ್ರವೇಶಿಸಿದ ಪಾಕಿಸ್ತಾನಿ ಪ್ರಾಯೋಜಿತ ಉಗ್ರರು ಅಮಾಯಕ ನಾಗರಿಕರ ಮೇಲೆ ಮನಬಂದಂತೆ ಗುಂಡಿನ ಸುರಿಮಳೆಗೈದಿದ್ದರು. ಮೂರು ದಿನಗಳ ಕಾಲ ಸತತ ವಾಗಿ ಮುಂಬೈ ನಗರದ ಪ್ರಮುಖ ಸ್ಥಳಗಳನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಿದ ಕೃತ್ಯ ಗಳನ್ನು ಇಡೀ ವಿಶ್ವ ನೋಡಿತ್ತು.

ಛತ್ರಪತಿ ಶಿವಾಜಿ ರೈಲು ನಿಲ್ದಾಣಕ್ಕೆ ನುಗ್ಗಿ, ಪ್ರಯಾಣಿಕರ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದರು. ಪ್ರತಿಷ್ಠಿತ ತಾಜ್ ಹೋಟೆಲಿನೊಳಗೆ ನುಗ್ಗಿ ಗುಂಡಿನ ಮಳೆ ಸುರಿಸಿದ್ದರು. ವಿದೇಶಿಗರು ಹೆಚ್ಚಾಗಿ ಭೇಟಿ ನೀಡುವ ಲಿಯೊಪಾಲ್ಡ್ ಕೆಫೆ ಮೇಲೆ ದಾಳಿ ನಡೆಸಿದ್ದರು. ಅಜ್ಮಲ್ ಕಸಬ್ ಎಂಬ ಪಾಕಿಸ್ತಾನಿ ಉಗ್ರ ಪೋಲೀಸರ ಕೈಗೆ ಸಿಕ್ಕಿ, ದಾಳಿಯ ಹಿಂದಿನ ರಹಸ್ಯವನ್ನು ಬಹಿರಂಗಪಡಿಸಿದ್ದ. ‌

ಪಾಕಿಸ್ತಾನದಲ್ಲಿ ಕುಳಿತಿದ್ದವರು ದಾಳಿಯ ಇಂಚಿಂಚು ಕಾರ್ಯಾಚರಣೆಯನ್ನು ನಿಯಂತ್ರಿಸು ತ್ತಿದ್ದರು. 2004ರಿಂದ 2014ರ ನಡುವೆ ನಡೆದಿದ್ದ ಭಯೋತ್ಪಾದಕ ದಾಳಿಗಳು, ವಿದೇಶಿಗರು ಭಾರತಕ್ಕೆ ಬರುವುದಕ್ಕೆ ಹೆದರುವಂತೆ ಮಾಡಿದ್ದವು. ಮುಂಬೈ ಭಯೋತ್ಪಾದಕ ದಾಳಿಯಾದ ಹದಿನೇಳು ವರ್ಷಗಳ ನಂತರ ಮತ್ತೊಮ್ಮೆ ಅದನ್ನು ನೆನಪಿಸಿಕೊಳ್ಳುವಂತೆ ಮಾಡಿದ್ದು ಕಾಂಗ್ರೆಸ್ಸಿನ ಸಂಸದ ಹಾಗೂ ಮಾಜಿ ವಿತ್ತಸಚಿವ ಪಿ.ಚಿದಂಬರಂ.

ಇದನ್ನೂ ಓದಿ: Mohan Vishwa Column: ನಗರ ನಕ್ಸಲರ ಬಂಧನ ಯಾವಾಗ ?

ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡುತ್ತಿದ್ದ ಸಂದರ್ಭದಲ್ಲಿ ಮಾತನಾಡಿದ ಪಿ.ಚಿದಂಬರಂ, ‘ಅಂದು ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿದು ಪಾಕಿಸ್ತಾನದ ವಿರುದ್ಧ ದಾಳಿ ನಡೆಸಲಾಗಲಿಲ್ಲ’ ಎಂದು ಹೇಳಿದರು. ಭಾರತದಲ್ಲಿ 2004ರಿಂದ ೨೦೧೪ರ ನಡುವೆ ನಡೆದ ಸರಣಿ ಭಯೋತ್ಪಾದಕ ದಾಳಿಗಳ ಹಿಂದೆ ಪಾಕಿಸ್ತಾನದ ನಂಟಿರುವುದು ಸ್ಪಷ್ಟವಾಗಿ ತಿಳಿದಿದ್ದರು ಸಹ, ಅಂದಿನ ಕಾಂಗ್ರೆಸ್ ಸರಕಾರ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಂಡು ತಕ್ಕಪಾಠ ಕಲಿಸುವಲ್ಲಿ ವಿಫಲವಾಗಿತ್ತು.

2004ರಿಂದ ೨೦೧೪ರ ನಡುವೆ ದೇಶದಾದ್ಯಂತ ನಡೆಯುತ್ತಿದ್ದ ಉಗ್ರ ಕೃತ್ಯಗಳಿಗೆ ಕೊನೆ ಇರಲಿಲ್ಲ. ವರ್ಷದಲ್ಲಿ ಕನಿಷ್ಠವೆಂದರೂ ನಾಲ್ಕರಿಂದ ಐದು ನಗರಗಳಲ್ಲಿ ಭಯೋತ್ಪಾದಕ ಕೃತ್ಯಗಳು ನಡೆಯುತ್ತಿದ್ದವು. ಕಾಶ್ಮೀರದ ಮೂಲಕ ದೇಶದ ವಿವಿಧೆಡೆ ಉಗ್ರರ ರವಾನೆಯಾಗುತ್ತಿತ್ತು.

ಭಾರತೀಯ ಸೈನಿಕರಿಗೆ ಸಂಪೂರ್ಣ ಸ್ವಾತಂತ್ರವಿರಲಿಲ್ಲ. ಪಾಕಿಸ್ತಾನವು ‘ಐಎಸ್‌ಐ’ ಮೂಲಕ ತರಬೇತಿ ನೀಡಿ, ಉಗ್ರರನ್ನು ಭಾರತದೊಳಗೆ ನುಸುಳಿಸುತ್ತಿತ್ತು. ಜುಲೈ 2005ರಲ್ಲಿ ಅಯೋಧ್ಯೆಯಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದರು.

ಅಕ್ಟೋಬರ್ ೨೦೦೫ರಲ್ಲಿ ದೆಹಲಿಯಲ್ಲಿ ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ್ದವು. ದೆಹಲಿಯ ಜನನಿಬಿಡ ಮಾರುಕಟ್ಟೆಗಳನ್ನು ಗುರಿಯಾಗಿಸಿಕೊಂಡು ನಡೆಸಿದ್ದ ದಾಳಿಯಲ್ಲಿ ೭೦ ಜನ ಮೃತಪಟ್ಟಿ ದ್ದರು, ೨೫೦ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. ದೆಹಲಿಯಲ್ಲಿ ನಡೆದ ಭಯೋತ್ಪಾದಕ ಕೃತ್ಯದ ಹಿಂದೆ ಪಾಕಿಸ್ತಾನಿ ಪ್ರೇರಿತ ಭಯೋತ್ಪಾದಕ ಸಂಘಟನೆಗಳ ಕೈವಾಡವಿದ್ದದ್ದು ಜಗಜ್ಜಾಹೀರಾಗಿತ್ತು.

ದೆಹಲಿಯ ಭಯೋತ್ಪಾದಕ ಕೃತ್ಯ ನಡೆದ ಕೇವಲ ಎರಡು ತಿಂಗಳ ನಂತರ ಡಿಸೆಂಬರ್ ೨೦೦೫ರಲ್ಲಿ ಬೆಂಗಳೂರಿನ ‘ಐಐಎಸ್‌ಸಿ’ಯಲ್ಲಿ ಭಯೋತ್ಪಾದಕರಿಂದ ಗುಂಡಿನ ದಾಳಿಯಾಗಿತ್ತು. ೨೦೦೬ರಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳಲ್ಲಿ ದೊಡ್ಡ ದೊಡ್ಡ ನಗರಗಳೇ ಉಗ್ರರ ಟಾರ್ಗೆಟ್ ಆಗಿದ್ದವು. ೨೦೦೬ರ ಮಾರ್ಚ್ ತಿಂಗಳಲ್ಲಿ ವಾರಾಣಸಿಯಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ೨೮ ಜನ ಮೃತಪಟ್ಟಿದ್ದರು ಮತ್ತು ೧೫೦ಕ್ಕೂ ಹೆಚ್ಚಿನ ಜನ ಗಾಯಗೊಂಡಿದ್ದರು.

ಜುಲೈ ೨೦೦೬ರಲ್ಲಿ ಮುಂಬೈ ನಗರದಲ್ಲಿ ಲೋಕಲ್ ರೈಲುಗಳ ಮೇಲೆ ಏಳು ಕಡೆ ಭಯೋತ್ಪಾದಕ ರಿಂದ ಬಾಂಬುಗಳ ದಾಳಿ ನಡೆದಿತ್ತು. ಈ ದಾಳಿಯಲ್ಲಿ ೨೦೯ ಜನ ಮೃತಪಟ್ಟಿದ್ದರು ಮತ್ತು ೭೦೯ ಜನ ಗಾಯಗೊಂಡಿದ್ದರು. ೨೦೦೭ರಲ್ಲಿ ಹರಿಯಾಣದಲ್ಲಿ ಸಂಝೋತಾ ಎಕ್ಸ್‌ಪ್ರೆಸ್ ರೈಲಿನ ಮೇಲೆ ದಾಳಿಯಾಗಿತ್ತು, ಈ ದಾಳಿಯಲ್ಲಿ ೭೦ ಜನ ಮೃತಪಟ್ಟರು. ನಂತರ ಆಗ ತಿಂಗಳಲ್ಲಿ ಹೈದರಾಬಾದಿ ನಲ್ಲಿ ಎರಡು ಕಡೆ ನಡೆದ ಭಯೋತ್ಪಾದಕ ದಾಳಿಯಲ್ಲಿ ೪೨ ಜನ ಮೃತಪಟ್ಟು, ೫೪ ಜನ ಗಾಯಗೊಂಡಿದ್ದರು.

ನಂತರ ನವೆಂಬರ್ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ದಾಳಿಯಲ್ಲಿ ೧೬ ಜನ ಮೃತಪಟ್ಟರು. ೨೦೦೮ರಲ್ಲಿ ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ೭೧ ಜನ ಮೃತಪಟ್ಟು, ೨೦೦ಕ್ಕೂ ಅಧಿಕ ಜನ ಗಾಯಗೊಂಡಿದ್ದರು. ಜೈಪುರದ ಆರು ಕಡೆಗಳಲ್ಲಿ ಒಂಬತ್ತು ಬಾಂಬುಗಳನ್ನು ಸ್ಫೋಟಿಸಲಾಗಿತ್ತು.

ಜುಲೈ ೨೦೦೮ರಲ್ಲಿ ಬೆಂಗಳೂರಿನಲ್ಲಿ ಭಯೋತ್ಪಾದಕ ದಾಳಿ ನಡೆದು ಒಬ್ಬರು ಮೃತಪಟ್ಟಿದ್ದರು ಮತ್ತು ೨೦ ಜನ ಗಾಯಗೊಂಡಿದ್ದರು. ಅಹಮದಾಬಾದ್ ನಗರದಲ್ಲಿ ಜುಲೈ ೨೦೦೮ರಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ೫೬ ಮಂದಿ ಮೃತಪಟ್ಟು, ೨೦೦ ಜನ ಗಾಯಗೊಂಡಿದ್ದರು. ನಗರದ ೧೭ ಕಡೆಗಳಲ್ಲಿ ಭಯೋತ್ಪಾದಕರು ಬಾಂಬ್ ಸ್ಫೋಟಿಸಿದ್ದರು.

ತದನಂತರ ನವೆಂಬರ್ ತಿಂಗಳಲ್ಲಿ ದೆಹಲಿಯ ಮಾರುಕಟ್ಟೆಗಳ ಮೇಲೆ ನಡೆದ ದಾಳಿಯಲ್ಲಿ ೩೩ ಮಂದಿ ಮೃತಪಟ್ಟಿದ್ದರು. ನಂತರ ಅಕ್ಟೋಬರ್ ತಿಂಗಳಲ್ಲಿ ಅಸ್ಸಾಂ ರಾಜ್ಯದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ೪೦ ಮಂದಿ ಸಾವನ್ನಪ್ಪ್ಪಿದ್ದರು. ಭಯೋತ್ಪಾದಕರು ವಿದೇಶಿಗರನ್ನು ಗುರಿ ಯನ್ನಾಗಿಸಿಕೊಂಡು ಮುಂಬೈ ಮತ್ತು ದೆಹಲಿ ನಗರಗಳ ಮೇಲೆ ದಾಳಿ ನಡೆಸಿದ್ದರು.

ಫೆಬ್ರವರಿ ೨೦೧೦ರಲ್ಲಿ ಪುಣೆ ನಗರದಲ್ಲಿ ನಡೆದ ಸರಣಿ ಬಾಂಬ್ ಸೋಟದಲ್ಲಿ ೧೭ ಜನ ಮೃತಪಟ್ಟಿ ದ್ದರು. ಈ ಸ್ಫೋಟದ ಹಿಂದೆ ಭಟ್ಕಳ ಮೂಲದ ಸಹೋದರರ ಪಾತ್ರವಿತ್ತು. ಏಪ್ರಿಲ್ ಮತ್ತು ಮೇ ೨೦೧೦ರಲ್ಲಿ ನಕ್ಸಲರು ದಾಂತೇವಾಡದಲ್ಲಿ ನಡೆಸಿದ ದಾಳಿಯಲ್ಲಿ ೧೩೦ಕ್ಕೂ ಅಧಿಕ ಜನ ಮೃತಪಟ್ಟಿ ದ್ದರು. ದಾಂತೇವಾಡದಲ್ಲಿ ನಡೆದ ದಾಳಿಯನ್ನು ನಕ್ಸಲರ ಹೋರಾಟದ ಭಾಗವೆಂದು ಎಡಚರರ ಪತ್ರಕರ್ತೆ ಬರ್ಖಾ ದತ್ ಹೇಳಿದ್ದರು.

೨೦೧೧ರಲ್ಲಿ ಮತ್ತೊಮ್ಮೆ ಮುಂಬೈ ನಗರದಲ್ಲಿ ಸರಣಿ ಬಾಂಬ್ ಸ್ಫೋಟವಾಗಿ ೨೬ ಮಂದಿ ಮೃತ ಪಟ್ಟರೆ, ಅದೇ ವರ್ಷ ದೆಹಲಿಯಲ್ಲಿ ಮತ್ತೊಮ್ಮೆ ನಡೆದ ಸರಣಿ ಭಯೋತ್ಪಾದಕ ಕೃತ್ಯದಲ್ಲಿ ೧೫ ಮಂದಿ ಮೃತಪಟ್ಟಿದ್ದರು. ೨೦೧೩ರಲ್ಲಿ ಹೈದರಾಬಾದಿನಲ್ಲಿ ನಡೆದ ಭಯೋತ್ಪಾದಕ ಕೃತ್ಯದಲ್ಲಿ ೧೮ ಮಂದಿ ಮೃತಪಟ್ಟಿದ್ದರು. ಸಾವಿರಾರು ನಾಗರಿಕರು ಮತ್ತು ಸೈನಿಕರು ಹತ್ತು ವರ್ಷಗಳಲ್ಲಿ ಭಯೋತ್ಪಾದಕ ದಾಳಿಗೆ ಮೃತಪಟ್ಟಿದ್ದರೂ ಅಂದಿನ ಕಾಂಗ್ರೆಸ್ ಸರಕಾರ ಕೈಕಟ್ಟಿ ಕುಳಿತಿತ್ತು.

ಭಾರತೀಯ ಸೇನೆಗೆ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸುವ ಸ್ವಾತಂತ್ರ್ಯವನ್ನು ಅದು ನೀಡಿರಲಿಲ್ಲ. ಪಾಕಿಸ್ತಾನದ ವಿರುದ್ಧ ದಾಳಿ ನಡೆಸಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಎದುರಿಸಬೇಕಾಗುತ್ತದೆ ಎಂಬ ಭಯವು ೫೬ ಪುಟದ ಬಯೋಡೇಟಾ ಹೊಂದಿದ್ದ ಮನಮೋಹನ್ ಸಿಂಗ್ ಅವರಿಗಿತ್ತು.

ಬೆನ್ನುಮೂಳೆ ಇಲ್ಲದ ಅಂದಿನ ಕಾಂಗ್ರೆಸ್ ಸರಕಾರ ಕೈಕಟ್ಟಿ ಕುಳಿತಿದ್ದುದನ್ನೇ ಅಸ್ತ್ರ ಮಾಡಿಕೊಂಡ ಪಾಕಿಸ್ತಾನವು ಭಾರತದಲ್ಲಿ ನಿರಂತರವಾಗಿ ಉಗ್ರಕೃತ್ಯಗಳನ್ನು ನಡೆಸುತ್ತಿತ್ತು. ಒಂದು ಕಾಲದಲ್ಲಿ ಪಿ.ಚಿದಂಬರಂ ಕಂದುಬಣ್ಣದ ಸೂಟ್ ಕೇಸ್ ಹಿಡಿದು ಸಂಸತ್ತಿಗೆ ಬಜೆಟ್ ಮಂಡಿಸಲು ಬರುತ್ತಿದ್ದರೆ ಇಡೀ ದೇಶವೇ ಅವರತ್ತ ತಿರುಗಿ ನೋಡುತ್ತಿತ್ತು. ಆದರೆ ಅಂದಿನ ಕಾಲದ ತೆರೆಯ ಹಿಂದಿನ ಕಥೆಗಳನ್ನು ಒಂದೊಂದಾಗಿ ಅವರೇ ಇಂದು ಹೇಳುತ್ತಿದ್ದಾರೆ.

೨೦೦೮ರ ಮುಂಬೈ ಮೇಲಿನ ಉಗ್ರರ ದಾಳಿಯ ಸಂದರ್ಭದಲ್ಲಿ ಪಾಕಿಸ್ತಾನದ ವಿರುದ್ಧ ದಾಳಿ ನಡೆಸಲು ಅಂದಿನ ಕಾಂಗ್ರೆಸ್ ಸರಕಾರ ವಿಫಲವಾದ ವಿಷಯವನ್ನು ಅವರ ಬಾಯಿಂದ ಕೇಳಿದ ಮೇಲೆ ಅನಿಸಿದ್ದು- ಅಮೂಲ್ಯವಾದ ಹತ್ತು ವರ್ಷಗಳನ್ನು ಭಾರತವು ಕಾಂಗ್ರೆಸ್ ಅವಧಿಯಲ್ಲಿ ಕಳೆದುಕೊಂಡಿತು.

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಪಾಕಿಸ್ತಾನಿ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರವಾಗಿ ‘ಆಪರೇಷನ್ ಸಿಂದೂರ್’ ಕಾರ್ಯಾಚರಣೆಯ ಮೂಲಕ ಪಾಕಿಸ್ತಾನದ ಒಳಗೆ ನುಗ್ಗಿ ನಮ್ಮ ವಾಯುಸೇನಾ ಪಡೆಗಳು ಉಗ್ರರ ನೆಲೆಯನ್ನು ನಾಶಗೊಳಿಸಿದವು. ಭಾರತದ ದಾಳಿಗೆ ಪಾಕಿಸ್ತಾನ ಕೈಗೊಂಡ ಪ್ರತಿದಾಳಿಯನ್ನು ಎದುರಿಸುವಲ್ಲಿ ಭಾರತೀಯ ಸೇನೆ ಯಶಸ್ವಿಯಾಯಿತು. ಪಾಕಿಸ್ತಾನದ ಸೇನಾ ಮುಖ್ಯಸ್ಥರ ಬೇಡಿಕೆಯ ನಂತರ ಕಾರ್ಯಾಚರಣೆಯನ್ನು ನಿಲ್ಲಿಸಲಾಯಿತು. ಆದರೆ ಸೈನಿಕರು ನಡೆಸಿದ ದಾಳಿಯನ್ನು ಅಣಕಿಸಿದ ಕಾಂಗ್ರೆಸ್ಸಿನ ನಾಯಕರು ನಾಲಗೆಯ ಮೇಲೆ ಹಿಡಿತ ಇಲ್ಲದಂತೆ ಮಾತನಾಡಿದರು.

ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ಮೋದಿ ಕಾರ್ಯಾಚರಣೆ ನಿಲ್ಲಿಸಿದರೆಂಬ ಸುಳ್ಳನ್ನು ಪದೇ ಪದೆ ಹೇಳಿದರು. ಸಂಸತ್ತಿನಲ್ಲಿ ಮೋದಿಯವರು ಕಾಂಗ್ರೆಸ್ಸಿನ ಚಳಿ ಬಿಡಿಸಿ ಆಪರೇಷನ್ ಸಿಂದೂರ್ ಬಗ್ಗೆ ನಿರರ್ಗಳವಾಗಿ ಮಾತನಾಡಿದರು.

ಬದಲಾದ ಭಾರತದಲ್ಲಿ ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಮೋದಿಯವರ ಬಗ್ಗೆ ಮಾತನಾಡುವ ಕಾಂಗ್ರೆಸ್ಸಿಗರು, ತಮ್ಮ ಅಧಿಕಾರಾವಧಿಯಲ್ಲಿ ಮುಂಬೈ ಮೇಲೆ ದಾಳಿ ನಡೆಸಿದ ಉಗ್ರರ ನೆಲೆಗಳ ಮೇಲೆ ಕಾರ್ಯಾ ಚರಣೆ ನಡೆಸಲು ತಮಗೆ ಸಾಧ್ಯವಾಗಲಿಲ್ಲವೆಂದು ಹೇಳಿದ ಪಿ.ಚಿದಂಬರಂ ಬಗ್ಗೆ ಏನು ಹೇಳುತ್ತಾರೆ? ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ತುಟಿ ಬಿಚ್ಚದೆ, ಪ್ರತಿಯೊಂದು ವಿಷಯಕ್ಕೂ ಮೂಗು ತೂರಿಸುವ ಪ್ರಿಯಾಂಕ್ ಖರ್ಗೆಯವರು ಚಿದಂಬರಂ ಹೇಳಿಕೆಯ ನಂತರ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ.

2019ರಲ್ಲಿ ಪುಲ್ವಾಮದಲ್ಲಿ ಸೈನಿಕರ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಪಾಕಿಸ್ತಾನಿ ಪ್ರಾಯೋಜಿತ ಭಯೋತ್ಪಾದಕರ ನೆಲೆಗಳು ಸರ್ವನಾಶವಾಗಿದ್ದವು. ಕಾಶ್ಮೀರದಲ್ಲಿ ಸಂವಿಧಾನದ ಪರಿಚ್ಛೇದ 970ನ್ನು ತೆಗೆದ ಬಳಿಕ ರಕ್ತಪಾತವಾಗುತ್ತದೆಯೆಂದು ಹೇಳಲಾಗಿತ್ತು. ಆದರೆ ಕಳೆದ ಆರು ವರ್ಷಗಳಲ್ಲಿ ಏನೂ ಆಗಲಿಲ್ಲ.

ಭಾರತ ಇಂದು ಭಯೋತ್ಪಾದಕರ ನೆಚ್ಚಿನ ತಾಣವಾಗಿ ಉಳಿದಿಲ್ಲ, ಬದಲಾಗಿ ಭಾರತದೊಳಗೆ ಭಯೋತ್ಪಾದಕ ಕೃತ್ಯ ನಡೆಸಲು ಉಗ್ರರು ಹೆದರುವ ಕಾಲವಾಗಿದೆ. ಬಾಲಾಕೋಟ್ ವೈಮಾನಿಕ ದಾಳಿಯಲ್ಲಿ ಪಾಕಿಸ್ತಾನಿಗಳ ಕೈಗೆ ಸಿಲುಕಿದ್ದ ಅಭಿನಂದನ್ ಕೇವಲ 72 ಗಂಟೆಗಳಲ್ಲಿ ಭಾರತಕ್ಕೆ ವಾಪಾಸ್ ಬಂದರು. ದೆಹಲಿಯ ಕೆಂಪುಕೋಟೆಯಲ್ಲಿ ೨೦೧೩ರವರೆಗೂ ಗುಂಡು ನಿರೋಧಕ ಗಾಜಿನ ಆವರಣದೊಳಗೆ ನಿಂತು ಪ್ರಧಾನಮಂತ್ರಿಗಳು ಭಾಷಣ ಮಾಡುತ್ತಿದ್ದರು.

ಆದರೆ ನರೇಂದ್ರ ಮೋದಿಯವರು ಕಳೆದ ೧೧ ವರ್ಷಗಳಿಂದ ಒಮ್ಮೆಯೂ ಗುಂಡು ನಿರೋಧಕ ಗಾಜಿನ ಆವರಣವನ್ನು ಬಳಸಿಕೊಂಡು ಭಾಷಣ ಮಾಡಿಲ್ಲ. ಕೈಲಾಗದವನು ಮೈ ಪರಚಿಕೊಂಡ ಎಂಬಂತಾಗಿದೆ ಕಾಂಗ್ರೆಸ್ಸಿನ ಪರಿಸ್ಥಿತಿ. ತಮ್ಮ ಅವಧಿಯಲ್ಲಿ ಕೈಕಟ್ಟಿ ಕುಳಿತು ಮೋದಿಯವರ ಅವಧಿ ಯ ಉಗ್ರರ ವಿರುದ್ದದ ಕಾರ್ಯಾಚರಣೆಗಳ ಬಗ್ಗೆ ಕೊಂಕು ಮಾತನಾಡುವುದು ಅವರಿಗೆ ರೂಢಿ ಯಾಗಿ ಬಿಟ್ಟಿದೆ..!