ಸಂಪಾದಕೀಯ ಸದ್ಯಶೋಧನೆ
ವಿಮಾನ ಪ್ರವಾಸವೆಂದರೆ ಪ್ರತಿಯೊಬ್ಬರಿಗೂ ಒಂದು ವಿಶೇಷ ಹಾಗೂ ಸುಂದರ ಅನುಭವ. ಆದರೆ, ಒಬ್ಬ ವ್ಯಕ್ತಿ ಅಥವಾ ಪ್ರಯಾಣಿಕನ ನಿರ್ಲಕ್ಷ , ಹಠ ಅಥವಾ ಬೇಜವಾಬ್ದಾರಿಯ ನಡೆವಳಿಕೆ ಹೇಗೆ ನೂರಾರು ಇತರ ಪ್ರಯಾಣಿಕರ ಕನಸು, ಸಮಯ ಹಾಗೂ ಹಣವನ್ನು ಹಾಳುಮಾಡಬಲ್ಲದು ಎಂಬುದಕ್ಕೆ ಕೆನಡಾದ ಪೋರ್ಟರ್ ಏರ್‌ಲೈನ್ಸ್ ವಿಮಾನದಲ್ಲಿ ನಡೆದ ಈ ಘಟನೆ ಜೀವಂತ ಉದಾ ಹರಣೆಯಾಗಿದೆ.
ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಸುರಕ್ಷತೆಗಾಗಿ ಜಾರಿಗೆ ತಂದಿರುವ ಕಟ್ಟುನಿಟ್ಟಿನ ನಿಯಮ ಗಳನ್ನು ಪಾಲಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ, ಅದನ್ನು ನಿರ್ಲಕ್ಷಿಸಿದಾಗ ಇಡೀ ವ್ಯವಸ್ಥೆ ಯೇ ಹೇಗೆ ತಲೆಕೆಳಗಾಗುತ್ತದೆ ಎಂಬುದನ್ನು ಈ ಘಟನೆ ನಮಗೆ ಸ್ಪಷ್ಟವಾಗಿ ತೋರಿಸಿ ಕೊಡುತ್ತದೆ. ಕೆನಡಾದ ವಿಕ್ಟೋರಿಯಾ ಅಂತಾರಾಷ್ಟ್ರೀಯ ಏರ್ ಪೋರ್ಟ್‌ನಿಂದ ಹೊರಡಬೇಕಿದ್ದ ಪೋರ್ಟರ್ ಏರ್‌ಲೈನ್ಸ್ ವಿಮಾನದಲ್ಲಿ, ಮಗುವೊಂದು ಸೀಟ್‌ನಲ್ಲಿ ಕುಳಿತು ಬೆಲ್ಟ್ ಧರಿಸಲು ನಿರಾಕರಿಸಿತು.
ವಿಮಾನವು ಟೇಕಾಫ್ ಆಗಲು ಸಿದ್ಧವಾಗುತ್ತಿದ್ದ ಸಮಯದಲ್ಲಿ ಮಗುವನ್ನು ಸೀಟ್‌ನಲ್ಲಿ ಕುಳ್ಳಿರಿಸಿ, ಸುರಕ್ಷತಾ ಬೆಲ್ಟ್ ಹಾಕಲು ವಿಮಾನದ ಸಿಬ್ಬಂದಿ ಹಾಗೂ ಮಗುವಿನ ಪೋಷಕರು ಎಷ್ಟು ಪ್ರಯತ್ನಿಸಿ ದರೂ ಸಾಧ್ಯವಾಗಲಿಲ್ಲ. ವಿಮಾನಯಾನ ನಿಯಮಗಳ ಪ್ರಕಾರ, ವಿಮಾನದಲ್ಲಿ ಪ್ರತಿಯೊಬ್ಬ ಪ್ರಯಾಣಿಕನೂ (ಸಣ್ಣ ಮಕ್ಕಳೂ ಸೇರಿದಂತೆ) ಟೇಕಾಫ್ ಮತ್ತು ಲ್ಯಾಂಡಿಂಗ್ ಸಮಯದಲ್ಲಿ ಸೀಟ್ ಬೆಲ್ಟ್ ಧರಿಸುವುದು ಕಡ್ಡಾಯ.
ಇದನ್ನೂ ಓದಿ: Vishweshwar Bhat Column: ಬಿನ್ ಅಂದ್ರೆ ಏನರ್ಥ ?
ಮಗು ಹಠ ಹಿಡಿದು ಕುಳಿತುಕೊಳ್ಳಲು ಒಪ್ಪದ ಕಾರಣ, ವಿಮಾನ ಸಿಬ್ಬಂದಿಗೆ ಸುರಕ್ಷತೆಯ ದೃಷ್ಟಿ ಯಿಂದ ಬೇರೆ ದಾರಿಯಿರಲಿಲ್ಲ. ಮಗುವನ್ನು ಸಮಾಧಾನಪಡಿಸಿ ಸೀಟ್‌ನಲ್ಲಿ ಕುಳ್ಳಿರಿಸಲು ವಿಮಾನ ಸಿಬ್ಬಂದಿ ಮತ್ತು ಪೋಷಕರು ಸಾಕಷ್ಟು ಸಮಯ ವ್ಯರ್ಥ ಮಾಡಿದರು. ಅಂತಿಮವಾಗಿ ಮಗು ಕುಳಿತುಕೊಳ್ಳಲು ನಿರಾಕರಿಸಿದಾಗ, ವಿಮಾನದ ಪೈಲಟ್ ಮತ್ತು ಸಿಬ್ಬಂದಿ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ, ವಿಮಾನವನ್ನು ಮತ್ತೆ ಟರ್ಮಿನಲ್‌ಗೆ (ಗೇಟ್‌ಗೆ) ವಾಪಸ್ ತೆಗೆದುಕೊಂಡು ಹೋಗಲು ನಿರ್ಧರಿಸಿದರು.
ನಿಯಮಗಳ ಪ್ರಕಾರ ಸುರಕ್ಷತೆ ಇಲ್ಲದೇ ವಿಮಾನವನ್ನು ಗಾಳಿಯಲ್ಲಿ ಹಾರಿಸಲು ಸಾಧ್ಯವಿಲ್ಲದಿರುವು ದರಿಂದ, ಆ ಮಗು ಮತ್ತು ಅದರ ಪೋಷಕರನ್ನು ವಿಮಾನದಿಂದ ಕೆಳಗಿಳಿಸಲು ಈ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಟರ್ಮಿನಲ್‌ಗೆ ವಾಪಸ್ ಬಂದ ನಂತರ, ಆ ಮಗು, ಪೋಷಕರು ಹಾಗೂ ಅವರ ಲಗೇಜುಗಳನ್ನು ವಿಮಾನದಿಂದ ಹೊರತೆಗೆಯಲು ಸಾಕಷ್ಟು ಸಮಯ ಹಿಡಿಯಿತು. ಈ ಪ್ರಕ್ರಿಯೆಯು ಕೇವಲ ಕೆಲವು ನಿಮಿಷಗಳಲ್ಲಿ ಮುಗಿಯುವಂಥದ್ದಾಗಿರಲಿಲ್ಲ.
ಲಗೇಜ್ ವಿಭಾಗದಿಂದ ನಿರ್ದಿಷ್ಟ ಪ್ರಯಾಣಿಕರ ಬ್ಯಾಗ್‌ಗಳನ್ನು ಹುಡುಕಿ ಹೊರತೆಗೆಯುವುದು, ದಾಖಲೆ ಗಳನ್ನು ಪರಿಶೀಲಿಸುವುದು ಇತ್ಯಾದಿ ಕೆಲಸಗಳಿಗೆ ನಿರೀಕ್ಷೆಗಿಂತ ಹೆಚ್ಚಿನ ಸಮಯ ವ್ಯರ್ಥ ವಾಯಿತು. ಇದರಿಂದಾಗಿ ವಿಮಾನವು ನಿಗದಿತ ಸಮಯಕ್ಕಿಂತ ಬಹಳಷ್ಟು ತಡವಾಗಿ ಓಡುದಾರಿ (ರನ್‌ವೇ) ಯಲ್ಲಿ ನಿಲ್ಲುವಂತಾಯಿತು. ಈ ವಿಳಂಬದ ಪರಿಣಾಮ ಅತ್ಯಂತ ತೀವ್ರವಾಗಿತ್ತು. ವಿಕ್ಟೋರಿಯಾ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಮಧ್ಯರಾತ್ರಿ 12.30ಕ್ಕೆ ರನ್‌ವೇ ಮುಚ್ಚುವ ನಿಯಮವಿತ್ತು. ವಿಮಾನ ನಿಲ್ದಾಣದ ಸುರಕ್ಷತೆ ಮತ್ತು ಶಬ್ದ ನಿಯಂತ್ರಣದ ಕಾರಣಕ್ಕಾಗಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.
ಮಗು ಮತ್ತು ಪೋಷಕರನ್ನು ಕೆಳಗಿಳಿಸುವ ಪ್ರಕ್ರಿಯೆಯಲ್ಲಿ ಸಮಯ ಮೀರಿ ಹೋಗಿ, ಮಧ್ಯರಾತ್ರಿ 12.30ರ ಗಡಿ ದಾಟಿತು. ಪರಿಣಾಮವಾಗಿ, ರನ್‌ವೇ ಮುಚ್ಚಲ್ಪಟ್ಟು, ವಿಮಾನಕ್ಕೆ ಟೇಕಾಫ್ ಆಗಲು ಅನುಮತಿ ಸಿಗಲಿಲ್ಲ. ರನ್‌ವೇ ಮುಚ್ಚಿದ್ದರಿಂದಾಗಿ, ವಿಮಾನದಲ್ಲಿದ್ದ ಇತರೆ ನೂರಾರು ಪ್ರಯಾಣಿಕ ರು ಅನಿವಾರ್ಯವಾಗಿ ವಿಮಾನದಿಂದ ಕೆಳಗಿಳಿಯಬೇಕಾಯಿತು. ಅಲ್ಲಿಯವರೆಗೆ ತಾಳ್ಮೆಯಿಂದ ಕುಳಿತಿದ್ದ ಪ್ರಯಾಣಿಕರಿಗೆ ಇದು ದೊಡ್ಡ ಆಘಾತವಾಗಿತ್ತು. ಒಬ್ಬ ಸಣ್ಣ ಮಗುವಿನ ಹಠ ಹಾಗೂ ಅದನ್ನು ಸರಿಯಾಗಿ ನಿಯಂತ್ರಿಸಲು ಸಾಧ್ಯವಾಗದ ಪೋಷಕರ ವೈಫಲ್ಯದಿಂದ ಇಡೀ ವಿಮಾನದ ಪ್ರಯಾಣವೇ ರದ್ದಾಯಿತು.
ಪ್ರಯಾಣಿಕರು ತಡರಾತ್ರಿ ವಿಮಾನ ನಿಲ್ದಾಣದಲ್ಲಿಯೇ ಪರದಾಡುವಂತಾಯಿತು. ಈ ಘಟನೆ ಯಿಂದಾಗಿ ಉಳಿದ ಪ್ರಯಾಣಿಕರಿಗೆ ಉಂಟಾದ ತೊಂದರೆಗಳು ಅಷ್ಟಿಷ್ಟಲ್ಲ. ಪ್ರತಿಯೊಬ್ಬ ಪ್ರಯಾಣಿಕನಿಗೂ ತನ್ನದೇ ಆದ ತುರ್ತು ಕೆಲಸಗಳಿರುತ್ತವೆ. ಯಾರೋ ಒಬ್ಬರು ತುರ್ತು ವೈದ್ಯಕೀಯ ಚಿಕಿತ್ಸೆಗೆ ಹೋಗುತ್ತಿರಬಹುದು, ಇನ್ನೊಬ್ಬರು ಮುಖ್ಯವಾದ ಉದ್ಯೋಗದ ಸಂದರ್ಶನಕ್ಕೆ ತೆರಳುತ್ತಿರಬಹುದು, ಇನ್ಯಾರೋ ಪ್ರೀತಿಪಾತ್ರರ ಅಂತಿಮ ಸಂಸ್ಕಾರಕ್ಕೆ ಅಥವಾ ಮದುವೆ ಸಮಾರಂಭಕ್ಕೆ ಹೊರಟಿರುತ್ತಾರೆ. ಕೆಲವರಿಗೆ ಮುಂದುವರಿಯುವ ಕನೆಕ್ಟಿಂಗ್ ಫ್ಲೈಟ್ ಗಳಿರುತ್ತವೆ. ಒಬ್ಬರ ಸಣ್ಣ ತಪ್ಪಿನಿಂದಾಗಿ ನೂರಾರು ಜನರ ಇಡೀ ದಿನದ ಕೆಲಸ-ಕಾರ್ಯ ಹಾಳಾಯಿತು. ಏರ್‌ಲೈನ್ಸ್ʼಗೆ ಲಕ್ಷಾಂತರ ರುಪಾಯಿ ನಷ್ಟವಾಯಿತು