ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

T Devidas Column: ಪ್ರಜ್ಞೆ, ವಾಸ್ತವ ಮತ್ತು ರಾಮಚಂದ್ರ ಗುಹಾ

ಇವರೊಬ್ಬ ಇಂಟೆಲೆಕ್ಚುವಲ್ ಸ್ಕಾಲರ್. ಆದರೆ, ತಮ್ಮ ಚಿಂತನೆಗಳನ್ನು ನೆಹರೂ ಆದಿಯಾಗಿ ಸೋನಿ ಯಾ, ರಾಹುಲ್ ಗಾಂಧಿಯವರೆಗೆ ನಿಷ್ಠರಾಗಿದ್ದುಕೊಂಡೇ ಪ್ರಚುರ ಪಡಿಸಿಕೊಂಡವರು. ಇವರು ಹಿಂದೂಗಳನ್ನು ಹೀಯಾಳಿಸುವುದು, ಮೋದಿ ಮತ್ತು ಟೀಮ್, ಬಿಜೆಪಿ, ಆರ್‌ಎಸ್‌ಎಸ್ ಅನ್ನು ನಖ ಶಿಖಾಂತ ವಿರೋಧಿಸಿ ತಾನೊಬ್ಬ ಪ್ರಮುಖ ಬುದ್ಧಿಜೀವಿ ಅಂತ ಗಾಂಧಿ ಕುಟುಂಬದ ಸದಸ್ಯರಿಗೆ ಮೆಚ್ಚಿಸುವುದರ ಇವರು ಬಹುವಾಗಿ ಶ್ರಮಿಸಿದವರು. ಇವರಿಗೆ ೨೦೦೯ರಲ್ಲಿ ಪದ್ಮಭೂಷಣ ಕೊಡಮಾಡ ಲ್ಪಟ್ಟಿದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ನೀಡಲ್ಪಟ್ಟಿದೆ.

ಸಕಾಲಿಕ

ಟಿ.ದೇವಿದಾಸ್

ರಾಮಚಂದ್ರ ಗುಹಾ (ಜನನ: ಏಪ್ರಿಲ್ 29, 1958) ಭಾರತದ ಪ್ರಸಿದ್ಧ ಇತಿಹಾಸಕಾರ, ಪರಿಸರವಾದಿ, ಮತ್ತು ಸಾರ್ವಜನಿಕ ಬುದ್ಧಿಜೀವಿ. ಇವರು ಆಧುನಿಕ ಭಾರತದ ಇತಿಹಾಸ, ಗಾಂಧೀಜಿ, ಸಾಮಾಜಿಕ ಚಳುವಳಿಗಳು, ಪರಿಸರ, ಮತ್ತು ಕ್ರಿಕೆಟ್ ಇತಿಹಾಸದ ಕುರಿತು ಬರೆದಿರುವ ಕೃತಿಗಳಿಗೆ ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿದ್ದಾರೆ. ಇವರು ಡೆಹ್ರಾಡೂನ್ʼನಲ್ಲಿ ತಮಿಳು ಮೂಲದ ಕುಟುಂಬ ದಲ್ಲಿ ಜನಿಸಿದವರು.

ದೆಹಲಿ ವಿಶ್ವವಿದ್ಯಾಲಯ ಮತ್ತು ಇಂಡಿಯನ್ ಇನ್ʼಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕೋಲ್ಕತ್ತಾ ದಲ್ಲಿ ತಮ್ಮ ಶಿಕ್ಷಣವನ್ನು ಪೂರೈಸಿದರು. ಇವರ ‘ಗಾಂಧಿ ಬಿಫೋರ್ ಇಂಡಿಯಾ’ ಮತ್ತು ‘ಗಾಂಧಿ: ದಿ ಇಯರ್ಸ್ ದಟ್ ಚೇಂಜ್ಡ್‌ ದಿ ವರ್ಲ್ಡ್’ ಕೃತಿಗಳು ಗಾಂಧೀಜಿಯವರ ಜೀವನ ಕುರಿತ ಆಳವಾದ ಸಂಶೋಧನೆಗಳಾಗಿವೆ. ಅಲ್ಲದೆ, ‘ಇಂಡಿಯಾ ಆಫರ್ ಗಾಂಧಿ’ ಭಾರತದ ಇತಿಹಾಸದ ಪ್ರಮುಖ ಪುಸ್ತಕಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: T Devidas Column: ಪೇಜಾವರರ ಜನಪ್ರಿಯತೆಯ ವ್ಯಾಪ್ತಿ ಬಹುದೊಡ್ಡದು ಎಂದವರು ಅವರು !

ಕೇಂದ್ರ ಸರಕಾರ ಗೋಮಾಂಸ ನಿಷೇಧವನ್ನು ಜಾರಿಗೊಳಿಸಿದ ಸಂದರ್ಭದಲ್ಲಿ, ಸಂಪೂರ್ಣ ಸಹಿಷ್ಣುತೆ ಅಥವಾ ವಾಕ್ ಸ್ವಾತಂತ್ರ್ಯವನ್ನು ಹೊಂದಿದ್ದ ಸ್ವತಂತ್ರ ರಾಷ್ಟ್ರವಾಗಿ ನಮ್ಮ ಇತಿಹಾಸ ದಲ್ಲಿ ಎಂದಿಗೂ ಸುವರ್ಣಯುಗ ಇರಲಿಲ್ಲ ಎಂಬುದನ್ನು ಗುರುತಿಸುವುದು ಮುಖ್ಯ. ರಾಜಕಾರಣಿ ಗಳು ಮತ್ತು ಸರಕಾರಗಳಿಂದ ಯಾವಾಗಲೂ ನಿರ್ಬಂಧಗಳು ಮತ್ತು ದಬ್ಬಾಳಿಕೆ ಇದ್ದೇ ಇರುತ್ತದೆ. ಆದರೆ, ನಾವು ಖಂಡಿತವಾಗಿಯೂ ಹೆಚ್ಚು ಅಸಹಿಷ್ಣುತೆ ಹೊಂದುತ್ತಿದ್ದೇವೆ ಮತ್ತು ಹಿಂಸಾಚಾರವಿದೆ ಎಂದಿದ್ದರು.

ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವನ್ನು ಖಂಡಿಸುತ್ತ, ವಿರೋಧಿಸುತ್ತ, ಟೀಕಿಸುತ್ತಲೇ ಇರುವವರು ಗುಹಾ. ಇದಕ್ಕೆ ಅಂಥಾ ಪರಿಯ ಕಾರಣವಾದರೂ ಏನು? ಎಡಪಂಥೀಯ ಸಿದ್ಧಾಂತ ವನ್ನು ಮೆಚ್ಚಿದ ಗುಹಾ ಅವರು ಗಾಂಧಿ, ನೆಹರೂ, ಮತ್ತು ಸರಿಹೊತ್ತಿನ ಗಾಂಧಿ ಕುಟುಂಬ ಅಂದರೆ ಸೋನಿಯಾ ಗಾಂಧಿ ಕುಟುಂಬದ ಅಪ್ಪಟ ಬೆಂಬಲಿಗರಾಗಿ ಅಭಿವ್ಯಕ್ತಿಸಿಕೊಂಡವರು. ತಪ್ಪೇನಿಲ್ಲ. ಆದರೆ ಅರಾಷ್ಟ್ರೀಯವಾದಿಯಾಗಿ ಇಂಥವರು ಸಾರ್ವಜನಿಕವಾಗಿ ತಮ್ಮನ್ನು ಅಭಿವ್ಯಕ್ತಿಸಿಕೊಳ್ಳ ಬಾರದು, ಅಷ್ಟೆ.

ಹಿಂದೂ, ಹಿಂದುತ್ವ, ಬಿಜೆಪಿ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಖಂಡಿಸುತ್ತ, ವಿರೋಧಿಸುತ್ತ ಇಷ್ಟೂ ವರ್ಷಗಳ ಕಾಲ ಗಾಂಧಿ ಕುಟುಂಬಕ್ಕೆ ವಿಧೇಯರಾಗಿ, ಅವರ ರಾಜಕೀಯ ನಡೆನುಡಿಯನ್ನು ಉತ್ಪ್ರೇಕ್ಷೆಯ ರೀತಿಯಲ್ಲಿ ಶ್ಲಾಘಿಸುತ್ತ ಅದುವೇ ತನ್ನ ನಿತ್ಯ ಪರಮಕಾರ್ಯ ಎಂಬಂತೆ ಗುಹಾ ಅವರು ಪಾಲಿಸಿಕೊಂಡು ಬಂದವರು ಎಂದರೆ ತಪ್ಪಿಲ್ಲ.ಆದರೆ, ಇವರ ಬರೆಹ, ಚಿಂತನೆಯನ್ನು ಯಾರೂ ಮೆಚ್ಚುವಂಥದ್ದೇ. ಸಂದೇಹವೇ ಇಲ್ಲ.

Guha R

ಇವರೊಬ್ಬ ಇಂಟೆಲೆಕ್ಚುವಲ್ ಸ್ಕಾಲರ್. ಆದರೆ, ತಮ್ಮ ಚಿಂತನೆಗಳನ್ನು ನೆಹರೂ ಆದಿಯಾಗಿ ಸೋನಿಯಾ, ರಾಹುಲ್ ಗಾಂಧಿಯವರೆಗೆ ನಿಷ್ಠರಾಗಿದ್ದುಕೊಂಡೇ ಪ್ರಚುರ ಪಡಿಸಿಕೊಂಡವರು. ಇವರು ಹಿಂದೂಗಳನ್ನು ಹೀಯಾಳಿಸುವುದು, ಮೋದಿ ಮತ್ತು ಟೀಮ್, ಬಿಜೆಪಿ, ಆರ್‌ಎಸ್‌ಎಸ್ ಅನ್ನು ನಖಶಿಖಾಂತ ವಿರೋಧಿಸಿ ತಾನೊಬ್ಬ ಪ್ರಮುಖ ಬುದ್ಧಿಜೀವಿ ಅಂತ ಗಾಂಧಿ ಕುಟುಂಬದ ಸದಸ್ಯರಿಗೆ ಮೆಚ್ಚಿಸುವುದರ ಇವರು ಬಹುವಾಗಿ ಶ್ರಮಿಸಿದವರು. ಇವರಿಗೆ ೨೦೦೯ರಲ್ಲಿ ಪದ್ಮಭೂಷಣ ಕೊಡಮಾಡಲ್ಪಟ್ಟಿದೆ. ಸಾಹಿತ್ಯ ಅಕಾಡೆಮಿ ಪ್ರಶಸ್ತಿಯೂ ನೀಡಲ್ಪಟ್ಟಿದೆ.

ಈಗ ರಾಮಚಂದ್ರ ಗುಹಾ ಕೂಡ ರಾಹುಲ್ ಗಾಂಧಿಯ ರಾಜಕೀಯ ವಿಧಾನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆಂದರೆ ಇದು ಕಾಂಗ್ರೆಸ್ ಬಗ್ಗೆ ಕಳವಳಗಳು, ಪಕ್ಷದ ರೇಖೆಗಳು ಮತ್ತು ಸಿದ್ಧಾಂತಗಳನ್ನು ಮೀರಿವೆ ಎಂದು ಅದು ತೋರಿಸುತ್ತದೆ.

ವಿಷಯವಿಷ್ಟೆ: ‘ನಾನು ಮೋದಿ ಮತ್ತು ಬಿಜೆಪಿಯನ್ನು ದ್ವೇಷಿಸಿದಷ್ಟು ಬೇರಾರೂ ದ್ವೇಷಿಸಿಲ್ಲ. ಆದರೆ ಇಂದಿನ ಯುದ್ಧದ ಪರಿಸ್ಥಿತಿ, ಇಂಧನ ಸಮಸ್ಯೆಗಳಂತಹ ಸಂದಿಗ್ಧ ಮತ್ತು ತುರ್ತು ಸಮಯ ದಲ್ಲಿ ಮೋದಿಯಲ್ಲದೆ ಬೇರೆ ಯಾರೂ ಇಷ್ಟು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತಿರ ಲಿಲ್ಲ ಎಂದು ಧೃಡವಾಗಿ ಹೇಳುತ್ತೇನೆ. ಮತ್ತು ರಾಹುಲ್ ಗಾಂಧಿಗೆ ಪ್ರಧಾನಿ ಆಗೋ ಯಾವ ಯೋಗ್ಯತೆಯೂ ಸಹ ಇಲ್ಲ. ತನ್ನ ಮುತ್ತಾತ, ಅಜ್ಜಿ, ಅಪ್ಪ ಅರ್ಹತೆ ಇಲ್ಲದಿದ್ದರೂ ಪ್ರಧಾನಿಗಳು ಆಗಿದ್ದರು.

ಆದ್ದರಿಂದ ನಾನು ಸಹ ಅರ್ಹತೆ ಇಲ್ಲದಿದ್ದರೂ ಪ್ರಧಾನಿಯಾಗಬೇಕು ಅನ್ನೋದು ಹುಂಬತನವಷ್ಟೆ’ ಅಂತ ರಾಮಚಂದ್ರ ಗುಹಾ ಹೇಳಿದ್ದಾರೆ. ತಡವಾಗಿಯಾದರೂ ಕೇಂದ್ರ ಸರಕಾರದ ನೀತಿ ಮತ್ತು ಮೋದಿಯ ದಕ್ಷತೆಯ ಬಗ್ಗೆ ಗುಹಾ ಅವರಿಗೆ ಜ್ಞಾನೋದಯ ಅಂದರೆ ಅರಿವು ಆದಂತಿದೆ ಎಂದು ಅವರ ಈ ಮಾತುಗಳು ಹೇಳುತ್ತಿವೆ.

ಇವರಿಗೇ ಹೀಗಾದರೆ ಇನ್ನು ಜನಸಾಮಾನ್ಯರ ಪಾಡೇನು? ಸರಿಹೊತ್ತಿನ ಬಿಕ್ಕಟ್ಟನ್ನು ಮೋದಿ ನಿರ್ವಹಿಸಿದ ರೀತಿಯನ್ನು ಗುಹಾ ಅವರು ಸೂಕ್ಷ ವಾಗಿ ಅವಲೋಕಿಸಿದ್ದಾರೆ ಎಂಬುದಂತೂ ಸುಸ್ಪಷ್ಟ. ಇಂಥ ಅವಲೋಕನದ ಅಗತ್ಯ ಸದಾಕಾಲ ಪ್ರಜಾಪ್ರಭುತ್ವದಲ್ಲಿ ತೀರಾ ಅನಿವಾರ್ಯವೂ ಆವಶ್ಯಕವೂ ಅಗತ್ಯವೂ ಆದುದಾಗಿದೆ. ಪ್ರeಯಿದ್ದರಲ್ಲವೆ ಪ್ರಜಾಪ್ರಭುತ್ವದ ಯಶಸ್ಸು?

ಜಾಗತಿಕವಾಗಿ ಪೆಟ್ರೋಲ್ ರೇಟು ಸರಿಸುಮಾರು 146 ರೂಪಾಯಿಯಿದೆ. 140 ಕೋಟಿ ಜನಸಂಖ್ಯೆ ಯನ್ನು ಮೀರಿದ ಭಾರತದಂಥ ದೇಶದಲ್ಲಿ ಸರಿಸುಮಾರು 102-113 ರೂ. ಇದೆ. ಕರ್ನಾಟಕದಲ್ಲಿ ಸರಾಸರಿ 110- 112 ರೂ.ಇದೆ. ಅಮೆರಿಕಾ 86- 105 ರೂ., ಚೀನಾ 113 ರೂ., ರಷಿಯಾ 89-92 ರೂ., ಪಾಕಿಸ್ತಾನ 141 ರೂ., - 268-270 ರೂ., ಜರ್ಮನಿ 216 ರೂ., ಇರಾನ್ 30-33 ರೂ., ಇಸ್ರೇಲ್ ‌215-220 ರೂ., ಶ್ರೀಲಂಕಾ 434 ರೂ., ಸೌದಿ ಅರೇಬಿಯಾ 55-60 ರೂ., ದ.ಆಫ್ರಿಕಾ 200 ರೂ., ಕುವೈತ್ 26-52 ರೂ., ಜಪಾನ್ 101-105 ರೂ., ಆಸ್ಟ್ರೇಲಿಯಾ 90-95 ರೂ., ಇಂಗ್ಲೆಂಡ್ 201-223 ರೂ., ಟರ್ಕಿ 130-133 ರೂ.- ಹೀಗೆ ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಪೆಟ್ರೋಲ್ ದರ ಇದೆ.

ಯುದ್ಧದಿಂದಾಗಿ ಜಾಗತಿಕವಾಗಿ ಪೆಟ್ರೋಲ್ ದರ ಹೆಚ್ಚಿದೆ. ಹಾಗೆಯೇ ಡೀಸೆಲ್ ಮತ್ತು ಎಲ್ಪಿಜಿ ದರವೂ ಕಚ್ಚಾತೈಲದ ಬೆಲೆಯೇರಿಕೆಯನ್ನೇ ಅವಲಂಬಿಸಿದೆ. ಇದಕ್ಕೆ ಭಾರತವೇನೂ ಹೊರತಲ್ಲ. ಕಚ್ಚಾತೈಲದ ಬೆಲೆಯಲ್ಲಿ ಏರಿಕೆಯಾಗದೇ ಹೋಗಿದ್ದರೆ ಇಂಧನ ಅಥವಾ ಅಡುಗೆ ಅನಿಲದ ಬೆಲೆ ಏರುವ ಸಾಧ್ಯತೆಯಿತ್ತೆ? ಅದರಲ್ಲೂ ಇರಾನ್‌ನಿಂದ ಹೆಚ್ಚು ಪ್ರಮಾಣದಲ್ಲಿ ಕಚ್ಚಾತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿರುವುದರಿಂದ ಭಾರತದಂಥ ಜನಸಂಖ್ಯೆ ಹೆಚ್ಚಿರುವ ರಾಷ್ಟ್ರಕ್ಕೆ ಬೆಲೆಯೇರಿಕೆಯ ಬಿಸಿ ತಕ್ಷಣ ತಟ್ಟುತ್ತದೆ.

ಯಾಕೆಂದರೆ, ನಮ್ಮಲ್ಲಿ ತೈಲ ಉತ್ಪಾದನೆಯ ಪ್ರಮಾಣ ಕಡಿಮೆಯಿದೆ. ಯುದ್ಧ ಆರಂಭವಾಗಿ ಸುಮಾರು 72 ದಿನಗಳ ಅನಂತರ ಭಾರತದಲ್ಲಿ ಬೆಲೆಯೇರಿಕೆ ಬಿಸಿ ತಟ್ಟಿತು. ಆದರೂ ಕೊರತೆ ಇಲ್ಲದಂತೆ ಕೇಂದ್ರ ಸರಕಾರ ನೋಡಿಕೊಂಡಿದೆ. ಜಾಗತಿಕವಾಗಿ ಹೋಲಿಸಿದರೆ ಇದ್ದುದರಲ್ಲಿ ನಮ್ಮ ದೇಶಕ್ಕೆ ಯುದ್ಧದ ಪರಿಣಾಮ ಅಷ್ಟಾಗಿ ತಟ್ಟದಿರಲು ಕಾರಣ, ಕೇಂದ್ರ ಸರಕಾರ ಈ ಸನ್ನಿವೇಶವನ್ನು ನಿರ್ವಹಿಸಿದ ರೀತಿಯೆಂಬುದನ್ನು ಯಾರೂ ಒಪ್ಪಬೇಕಾದ ಸತ್ಯ! ಇದನ್ನೇ ಗುಹಾ ಅವರು ಹೇಳಿದ್ದು.

ಉಚಿತವಾಗಿ ಕೊಟ್ಟಿದ್ದನ್ನು ಅನುಭವಿಸಿ ದೈಹಿಕವಾದ ಶ್ರಮವನ್ನೇ ಮರೆತು ನಿತ್ಯದ ಬದುಕನ್ನು ಬಾಳುವ ನಮಗೆ ಅಷ್ಟು ಸುಲಭವಾಗಿ ಯಾವ ಸಮಸ್ಯೆಯೂ ವೈಯಕ್ತಿಕವಾಗಿ ಆಗಬಾರದು ಎಂಬ ವಿಚಿತ್ರ ಧೋರಣೆಯೊಂದು ಬೆಳೆದುಬಿಟ್ಟಿದೆ. ನಾವೊಂದು ಸಾವಯವ ಸಮಗ್ರ ಸಮೃದ್ಧ ರಾಷ್ಟ್ರ ವಾಗಿದ್ದು ಯಾರೊಬ್ಬನ ವೈಚಾರಿಕತೆಯೂ ದಿವಾಳಿತನಕ್ಕೆ ಬಿದ್ದರೆ ಇಡಿಯ ರಾಷ್ಟ್ರ ಅವನತಿಯ ಪಾರಸ್ಪರ್ಯವನ್ನು ಹೊಂದಿದೆ ಎಂಬುದು ಅರ್ಥವಾಗುವವರೆಗೂ ಈ ದೇಶದ ಜನರ ಮನಃಸ್ಥಿತಿ ಮತ್ತು ಅಲೋಚನೆಯ ಗತಿ ಹೀಗೆಯೇನೋ!