M J Akbar Column: ಡೊನಾಲ್ಡ್ ಟ್ರಂಪ್ ಈ ಕಾಲದ ರಿಚರ್ಡ್ ನಿಕ್ಸನ್...!
ರಷ್ಯಾಕ್ಕೆ ಜಾಗತಿಕ ಶಕ್ತಿಯಾಗಿ ಬೆಳೆಯುವ ಭೂಲಕ್ಷಣವಾಗಲೀ ತಾಂತ್ರಿಕ ಶಕ್ತಿ ಯಾಗಲೀ ಇಲ್ಲ. ಹೀಗಾಗಿ ಅದು ಅಂಥ ಮಹತ್ವಾಕಾಂಕ್ಷೆಯನ್ನೂ ಇರಿಸಿಕೊಂಡಿಲ್ಲ. ಅದಕ್ಕೆ ಭದ್ರತೆಗೆ ಸಂಬಂಧಿ ಸಿದ ಅಪಾಯಗಳಿವೆ. ನಾಲ್ಕು ದಶಕಗಳ ಹಿಂದೆ ಅದರ ವ್ಯೂಹಾತ್ಮಕ ಗಡಿಗಳು ಅಮೆರಿಕ ಮತ್ತು ಪಶ್ಚಿಮ ಯುರೋಪಿನ ದಬಾವಣೆ ಯಿಂದಾಗಿ ಕುಸಿದು ಬಿದ್ದಿದ್ದವು. ಆಗ ರಷ್ಯಾ ಅಕ್ಷರಶಃ ನಪುಂಸಕನಾಗಿಬಿಟ್ಟಿತ್ತು. ಈಗ ಅದಕ್ಕೆ ಬರ್ಲಿನ್ ಗೋಡೆಗಿಂತ ಕೀವ್ ಬಹಳ ಹತ್ತಿರದಲ್ಲಿದೆ.

ಅಂಕಣಕಾರ ಎಂ.ಜೆ.ಅಕ್ಬರ್

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ‘ನೊಬೆಲ್ ಶಾಂತಿ ಪ್ರಶಸ್ತಿ’ ಸದ್ಯಕ್ಕೆ ದೊರಕುವ ಯಾವುದೇ ಸುಳಿವು ಇಲ್ಲದಿರಬಹುದು. ಆದರೆ ಟ್ರಂಪ್ ಮತ್ತು ರಷ್ಯಾದ ಅಧ್ಯಕ್ಷ ವ್ಲಾದಿ ಮಿರ್ ಪುಟಿನ್ 2025ರ ಮಾರ್ಚ್ 18ರ ಮಂಗಳವಾರ ನಡೆಸಿದ ಸುದೀರ್ಘ ದೂರವಾಣಿ ಮಾತುಕತೆ ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾಗಿದೆ. ಅಮೆರಿಕ ಮತ್ತು ರಷ್ಯಾದ ನಡುವಿನ ದ್ವಿಪಕ್ಷೀಯ ಸಂಬಂಧದ ಇತಿಹಾಸದ ಅದು ಅತ್ಯಂತ ದೀರ್ಘ ಮಾತುಕತೆಯಾಗಿತ್ತು.
ಎರಡೂ ದೇಶಗಳ ಅಧ್ಯಕ್ಷರು ಬರೋಬ್ಬರಿ ಎರಡೂವರೆ ತಾಸು ಫ್ರಾನ್‌ನಲ್ಲಿ ಚರ್ಚೆ ನಡೆಸಿ ದರು. ಇದರರ್ಥ ಏನೆಂದರೆ, ಅವರ ಅಜೆಂಡಾ ಈಗ ಉಕ್ರೇನ್ ಯುದ್ಧವನ್ನು ದಾಟಿ ಇಡೀ ವಿಶ್ವಕ್ಕೆ ವಿಸ್ತರಿಸಿಕೊಂಡಿದೆ. ಇದರ ಸಂದೇಶವೆಂದರೆ: ರಷ್ಯಾ ಮೇಲಿನ ದಿಗ್ಬಂಧನವೀಗ ಮುಗಿದ ಕತೆ. ಉಕ್ರೇನ್ ಯುದ್ಧದ ಬಗ್ಗೆ ಚರ್ಚೆ ನಡೆಯುತ್ತಿರುವ ಕೋಣೆಯಲ್ಲೀಗ ಎರಡು ದೇಶಗಳು ಮಾತ್ರ ಉಳಿದುಕೊಂಡಿವೆ.
ಒಂದು ಅಮೆರಿಕ, ಇನ್ನೊಂದು ರಷ್ಯಾ. ಉಕ್ರೇನ್ ಪರ ವಹಿಸಿಕೊಂಡು ಓಡಾಡುತ್ತಿದ್ದ ಯುರೋಪಿಯನ್ ದೇಶಗಳು ವೇಟಿಂಗ್ ರೂಮ್ ನಲ್ಲಿ ಕುಳಿತುಕೊಂಡಿವೆ. ಇನ್ನೂ ಅನಿಶ್ಚಿ ತತೆಯ ತೊಯ್ದಾಡುತ್ತಿರುವ ಕದನ ವಿರಾಮದ ಮಾತುಕತೆಯೇನಾದರೂ ಫಲ ನೀಡಿ ಉಭಯ ದೇಶಗಳ ನಡುವೆ ಶಾಂತಿ ಸ್ಥಾಪನೆಯ ಒಪ್ಪಂದ ಜಾರಿಗೆ ಬಂದರೆ, ಅದು ಅಮೆರಿಕ ಮತ್ತು ರಷ್ಯಾ ನಡುವಿನ ಚರ್ಚೆಯ ಫಲವೇ ಆಗಿರುತ್ತದೆ.
ಜೋ ಬೈಡೆನ್‌ರ ಶ್ವೇತಭವನವು ಬೆನ್ನುಮೂಳೆಯಿಲ್ಲದ ಲಂಡನ್, ಪ್ಯಾರಿಸ್ ಮತ್ತು ಬರ್ಲಿ ನ್‌ನ ‘ಚಿಯರ್ ಲೀಡರ್’ಗಳ ಜತೆಗೆ ಸೇರಿಕೊಂಡು ರಷ್ಯಾದ ಆರ್ಥಿಕತೆ ಮತ್ತು ಮಿಲಿ ಟರಿ ಶಕ್ತಿಯನ್ನು ಹೊಸಕಿಹಾಕಲು ತೆಗೆದುಕೊಂಡಿದ್ದ ಆರ್ಥಿಕ ಮತ್ತು ರಾಜಕೀಯ ದಿಗ್ಬಂ ಧನದ ನಿರ್ಧಾರವೀಗ ಆಳವಾದ ಕೋಮಾಕ್ಕೆ ಜಾರಿದೆ.
ಹೀಗಾಗಿ ಪಶ್ಚಿಮ ಯುರೋಪ್‌ನಲ್ಲೀಗ ಹಲ್ಲು ಕಚ್ಚಿಕೊಳ್ಳುವುದು, ಅಸಹಾಯಕತೆಯಿಂದ ಲೊಚಗುಟ್ಟುವುದು ಆರಂಭವಾಗಿದೆ. ನೀವು ಪ್ಯಾರಿಸ್‌ನ ನಿಷ್ಪ್ರಯೋಜಕ ಅಧ್ಯಕ್ಷರಾಗಿದ್ದರೆ ನಿಮ್ಮ ಕೂಗು ಚಾಂ ಎಲಿಸೀಸ್‌ರನ್ನು ತಲುಪುವುದರೊಳಗೇ ಕ್ಷೀಣಿಸಿರುತ್ತದೆ.
ಮ್ಯಾನುಯೆಲ್ ಮ್ಯಾಕ್ರನ್ ತಮ್ಮ ಹೊಸ ವ್ಯರ್ಥಾಲಾಪದಲ್ಲಿ, ಅಮೆರಿಕದಿಂದ ಶಸ್ತ್ರಾಸ್ತ್ರಗಳ ಖರೀದಿ ನಿಲ್ಲಿಸುವಂತೆ ಯುರೋಪಿಯನ್ನರಿಗೆ ಕರೆ ನೀಡಿದ್ದಾರೆ. 1980ರ ದಶಕದಿಂದಲೇ ಯುರೋಪಿಯನ್ ದೇಶಗಳು ದಾಸ್ತಾನು ಇರಿಸಿಕೊಂಡಿರಬೇಕಾಗಿದ್ದ ಶಸ್ತ್ರಾಸ್ತ್ರಗಳನ್ನು ಈಗ ದಾಸ್ತಾನು ಮಾಡಿಕೊಳ್ಳಲು ಹೊರಡಬಹುದು ಎಂಬ ಅಂದಾಜಿನ ಮೇಲೆ ಮ್ಯಾಕ್ರನ್ ಈ ಕರೆ ನೀಡಿದ್ದಾರೆ.
ಅದರರ್ಥ ಏನು ಎಂಬುದು ಮ್ಯಾಕ್ರನ್ ಹೊರತುಪಡಿಸಿ ಇನ್ನೆಲ್ಲರಿಗೂ ಗೊತ್ತಿರಬಹುದು. ಅವರ ಕರೆಯನ್ನು ಯಾರಾದರೂ ಕೇಳಿಸಿಕೊಂಡರು ಕೂಡ, ಡಸಾಲ್ಟ್ ಏವಿಯೇಷನ್ ಕಂಪನಿಯು ಅದೃಶ್ಯ ಅಣ್ವಸ ಡ್ರೋನ್ ಗಳ ತಯಾರಿಯತ್ತ ತನ್ನ ಸಂಪೂರ್ಣ ಗಮನ ಹರಿಸಿದರೆ ಮಾತ್ರ ರಫೆಲ್ ಯುದ್ಧವಿಮಾನಗಳನ್ನು ತಯಾರಿಸುವ ಕಂಪನಿಗೆ 2040ರಲ್ಲಿ ಮೊದಲ ಆರ್ಡರ್ ಸಿಗಬಹುದು. ನೀವು ಡೌನಿಂಗ್ ಸ್ಟ್ರೀಟ್‌ನಲ್ಲಿ ವಾಸಿಸುವ ಅಸಹಾಯಕ ಪ್ರಧಾನಿಯಾಗಿದ್ದರೆ ನಿಮ್ಮ ಮಾತು ಫ್ಲೀಟ್ ಸ್ಟ್ರೀಟ್ ಅಥವಾ ವ್ಯಾಪಿಂಗ್‌ನಲ್ಲಿರುವ ಮಾಧ್ಯ ಮಗಳ ಹೆಡ್ ಕ್ವಾರ್ಟರ‍್ಸ್‌ನಿಂದ ಆಚೆಗೆ ಹೋಗುವುದಿಲ್ಲ.
ಏಕೆಂದರೆ ಆ ಮಾಧ್ಯಮಗಳಿಗೆ ಮಾತಿನ ಯುದ್ಧದಲ್ಲಿ ಗೆಲ್ಲುವುದು ಬೇಕಿದೆಯೇ ಹೊರತು ರಣರಂಗದಲ್ಲಿ ನಡೆಯುವ ನಿಜವಾದ ರಕ್ತಸಿಕ್ತ ಯುದ್ಧದಲ್ಲಿ ಗೆಲ್ಲುವುದು ಬೇಕಿಲ್ಲ. ನೀವು ಬರ್ಲಿನ್‌ನ ಅಲ್ಯುಮಿನಿಯಂ ಚಾನ್ಸಲರ್ ಆಗಿದ್ದರೆ, 2026ರಲ್ಲಿ ಹೋಮ್ ಗಾರ್ಡ್‌ಗಳಿಗೆ ಭಯಂಕರ ಶಕ್ತಿ ತುಂಬುವ ಕ್ರಾಂತಿಕಾರಿ ರಕ್ಷಣಾ ಬಜೆಟ್ಟನ್ನು ಪಾಸು ಮಾಡಿಕೊಂಡಿದ್ದೇ ವೆಂದು ಸಂಭ್ರಮಾಚರಣೆ ನಡೆಸಬಹುದು. ಎಲ್ಲವೂ ಅಂದುಕೊಂಡಂತೆ ನಡೆದರೆ 2035ರ ವೇಳೆಗೆ ಜರ್ಮನಿಯ ಸೇನಾಪಡೆಗೂ ಒಂದಷ್ಟು ಸಹಾಯ ಮಾಡಬಹುದು. ವಾಷಿಂಗ್ಟನ್ ಮತ್ತು ಮಾಸ್ಕೋಗೆ ಇದು ಗೊತ್ತಿದೆ.
1871ರಿಂದ 1890ರವರೆಗೆ ಜರ್ಮನಿಯ ಕಬ್ಬಿಣದ ಚಾನ್ಸಲರ್ ಆಗಿದ್ದ ರಾಜಕುಮಾರ ಒಟ್ಟೋವನ್ ಬಿಸ್ಮಾರ್ಕ್, ನಂತರದ ಕೆಲ ತಲೆಮಾರುಗಳ ಕಾಲ ಮರೆತೇಹೋಗಿದ್ದರು. ಅವರ ನೆನಪನ್ನು ಮತ್ತೊಮ್ಮೆ ಮುನ್ನೆಲೆಗೆ ತರುವುದಾದರೆ ಅವರ ಪ್ರಸಿದ್ಧ ಹೇಳಿಕೆ ಯೊಂದನ್ನು ನೆನಪಿಸಿಕೊಳ್ಳಬಹುದು- “ಗಡಿಯಲ್ಲಿ ನಿಂತು ಅಬ್ಬರಿಸುತ್ತಿರುವ ದೇಶವನ್ನು ವಾಕ್ಚಾತುರ್ಯದಿಂದ ಸೋಲಿಸಲು ಸಾಧ್ಯವಿಲ್ಲ".
ತಮ್ಮ ಧ್ವನಿಯ ಬಗ್ಗೆ ಹೊಂದಿರುವಷ್ಟೇ ಪ್ರೀತಿಯನ್ನು ಪಶ್ಚಿಮ ಯುರೋಪಿನ ನಾಯಕರು ದೇಶದ ಭದ್ರತೆಯ ಬಗ್ಗೆಯೂ ಹೊಂದಿದ್ದರೆ 2022ರಲ್ಲಿ ನ್ಯಾಟೋ ಪರ ಉಕ್ರೇನ್ ವಾಲಿದ್ದಾ ಗಲೇ ರಷ್ಯಾ ಮಾತುಕತೆಗೆ ಬಂದಿರುತ್ತಿತ್ತು. ಪರಸ್ಪರ ಎದುರಾಳಿಗಳು ಸಾಮರ್ಥ್ಯದಲ್ಲಿ ಸಮ ಬಲರಾಗಿದ್ದಾಗ ಮಾತ್ರ ಎರಡೂ ದೇಶಗಳಿಗೆ ಒಪ್ಪಿತವಾಗುವ ರೀತಿಯಲ್ಲಿ ಶಾಂತಿ ಮಾತು ಕತೆ ಸಾಧ್ಯವಾಗುತ್ತದೆ.
ಒಂದು ದೇಶ ದುರ್ಬಲವಾಗಿದ್ದರೆ ಶಾಂತಿ ಒಪ್ಪಂದಕ್ಕೆ ಅದು ದೊಡ್ಡ ಬೆಲೆ ತೆರಬೇಕಾ ಗುತ್ತದೆ. ಉಕ್ರೇನಿನ ನತದೃಷ್ಟ ಅಧ್ಯಕ್ಷ ವೋಲೋದಿಮಿರ್ ಜೆಲೆನ್ಸ್ಕಿಗೆ ಇತಿಹಾಸವು ಕಲಿಸಿದ ಪಾಠ ಬಹಳ ಸರಳ ಮತ್ತು ತೀಕ್ಷ್ಣವಾಗಿದೆ. ಬೆಕ್ಕು ಮುಖ್ಯವೇ ಹೊರತು ಬೆಕ್ಕಿನ ಪಂಜವಲ್ಲ. ಕೇಳಲು ಇಂಪಾಗಿರುವಂತೆ ಮಾತನಾಡುವುದಕ್ಕೆ ಟ್ರಂಪ್ ಆಗಲೀ ಪುಟಿನ್ ಆಗಲೀ ಪ್ರಸಿದ್ಧ ರಲ್ಲ.
ಪುಟಿನ್ ಬಹಳ ಚುಟುಕಾಗಿ ಮತ್ತು ಹರಿತವಾಗಿ ಮಾತನಾಡುತ್ತಾರೆ. ಟ್ರಂಪ್ ರೋಷಾ ವೇಶದಿಂದ ಅಬ್ಬರಿಸುತ್ತಾರೆ. ಪುಟಿನ್‌ರನ್ನು ಈಗ ಕೀಳಂದಾಜು ಮಾಡುವ ರಿಸ್ಕನ್ನು ಅವರ ಪರಮ ಶತ್ರುಗಳೂ ಸೇರಿದಂತೆ ಯಾರೂ ತೆಗೆದುಕೊಳ್ಳುವುದಿಲ್ಲ. ಆದರೆ ಸ್ಥಾಪಿತ ನಂಬಿಕೆ ಗಳನ್ನೆಲ್ಲ ಮುರಿದು, ದೊಡ್ಡ ದೊಡ್ಡವರನ್ನೇ ಎದುರು ಹಾಕಿಕೊಳ್ಳುತ್ತಿರುವ ಟ್ರಂಪ್‌ಗೆ ಸಾಕಷ್ಟು ವಿರೋಧ ಬರುತ್ತಿದೆ.
ಯುರೋಪಿಯನ್ ಮಾಧ್ಯಮಗಳಂತೂ ಟ್ರಂಪ್ ಇರಿಸಿದ ಒಂದೊಂದು ಹೆಜ್ಜೆಯಲ್ಲೂ ಹುಳುಕು ಹುಡುಕುತ್ತಿವೆ, ಅವರ ನೀತಿಗಳಲ್ಲಿ ಏನು ಲಾಜಿಕ್ ಇದೆ ಎಂದು ಜಾಲಾಡುತ್ತಿವೆ. ಜೋ ಬೈಡೆನ್ ಆಡಳಿತ ಎಷ್ಟೇ ನಿಧಾನವಾಗಿದ್ದರೂ ಮತ್ತು ಅವರು ಪದೇಪದೆ ಮುಗ್ಗರಿಸು ತ್ತಿದ್ದರೂ ಅದನ್ನು ಇವೇ ಯುರೋಪಿಯನ್ ಮೀಡಿಯಾಗಳು ‘ಆಳವಾದ ಚಿಂತನೆಯಿಂದ ಇರಿಸುತ್ತಿರುವ ದೃಢವಾದ ಹೆಜ್ಜೆ’ ಎಂದು ಬಣ್ಣಿಸುತ್ತಿದ್ದವು.
ಹೊರಗಿನ ಅಲಂಕಾರಗಳನ್ನೆಲ್ಲ ತೆಗೆದಿರಿಸಿ ಬರೀ ಅಸ್ಥಿಪಂಜರವನ್ನು ನೋಡಿದರೆ 150 ನಿಮಿಷಗಳ ಫೋನ್ ಮಾತುಕತೆಯಲ್ಲಿರುವ ತಂತ್ರಗಾರಿಕೆ ಯಾರಿಗೆ ಬೇಕಾದರೂ ಗೋಚರಿ ಸುತ್ತದೆ. ಡೊನಾಲ್ಡ್ ಟ್ರಂಪ್ ಇದೀಗ 2025ರ ರಿಚರ್ಡ್ ನಿಕ್ಸನ್ ಆಗಿ ಹೊರ ಹೊಮ್ಮು ತ್ತಿದ್ದಾರೆ. ಶೀತಲ ಸಮರದ ಅತ್ಯಂತ ಶೀತಲ ಬಿಂದುವಿನಲ್ಲಿ, ಅಂದರೆ 1970ರಲ್ಲಿ, ವಿಯೆ ಟ್ನಾಂನಲ್ಲಿ ಉಂಟಾದ ಸೋಲಿನಿಂದ ಅಮೆರಿಕದ ಆತ್ಮವಿಶ್ವಾಸ ಅಕ್ಷರಶಃ ಪತರು ಗುಟ್ಟಿತ್ತು.
ಆದರೂ ಅದರ ಮಿಲಿಟರಿ ಶಕ್ತಿ ಮಾತ್ರ ಪ್ರಶ್ನಾತೀತವಾಗಿತ್ತು. ಆಗ ಅಮೆರಿಕದ ಅಧ್ಯಕ್ಷ ರಾಗಿದ್ದವರು ರಿಚರ್ಡ್ ನಿಕ್ಸನ್. ಅವರಿಗೆ ಸೋವಿಯತ್ ಒಕ್ಕೂಟ ಮತ್ತು ಚೀನಾ ಜತೆ ಕೈಜೋಡಿಸಿದರೆ ಒಳ್ಳೆಯದು ಅನ್ನಿಸಿತ್ತು. ಈಗ ನರೇಂದ್ರ ಮೋದಿಯವರಿಗೆ ಹೇಗೆ ಅಜಿತ್ ದೋವಲ್ ವ್ಯೂಹಾತ್ಮಕ ರಣತಂತ್ರಗಳನ್ನು ಹೆಣೆದು ಕೊಡುತ್ತಿzರೋ ಹಾಗೆ ಆಗ ರಿಚರ್ಡ್ ನಿಕ್ಸನ್‌ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಹೆನ್ರಿ ಕಿಸಿಂಜರ್ ಇದ್ದರು.
ಅವರು ರಹಸ್ಯವಾಗಿ ಚೀನಾಕ್ಕೆ ಭೇಟಿ ನೀಡಿದರು. ಆ ಭೇಟಿಯಲ್ಲಿ ರಷ್ಯಾ ಮತ್ತು ಚೀನಾ ನಡುವಿನ ಅಕ್ಷವನ್ನು ಭೇದಿಸಿದರು. ನಂತರದ ಒಂದು ದಶಕದಲ್ಲಿ ಇದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ಎಸಗಿದ ಪ್ರಮಾದದಂಥ ಬೆಳವಣಿಗೆಗಳು ಸೋವಿಯತ್ ಒಕ್ಕೂಟದ ಪತನಕ್ಕೆ ಕಾರಣವಾದವು.
ಜನಪ್ರಿಯ ನಂಬಿಕೆಗಳ ರೀತಿಯಲ್ಲಿ ಇತಿಹಾಸ ಯಾವಾಗಲೂ ಯಥಾವತ್ತು ಮರು ಕಳಿಸು ವುದಿಲ್ಲ. 2025 ಖಂಡಿತ 1970 ಅಲ್ಲ. ಕಮ್ಯುನಿಸಂ ಎಂಬುದು ಚೀನಾದ ಈಗ ಕಟ್ಟುಕತೆ ಯಾಗಿದೆ. ರಷ್ಯಾ ಮತ್ತು ಚೀನಾ ಇಂದು ರಾಷ್ಟ್ರೀಯವಾದಿ ಶಕ್ತಿಗಳು. ಅವುಗಳಿಗೆ ಯಾವುದೇ ಸಿದ್ಧಾಂತವೆಂಬ ಹೊಕ್ಕಳು ಬಳ್ಳಿಯ ಸಂಪರ್ಕವಿಲ್ಲ. ಮಾರ್ಚ್ 2023ರಲ್ಲಿ ಮಾಸ್ಕೋಗೆ ಭೇಟಿ ನೀಡಿದ್ದ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಚೀನಾ ಮತ್ತು ರಷ್ಯಾ ನಡುವಿನ ಸಂಬಂಧವನ್ನು ಯಾರೂ ಮುರಿಯಲು ಸಾಧ್ಯವಿಲ್ಲ ಎಂದು ಘೋಷಿಸಿದ್ದರು.
ತಮ್ಮ ಬಳಿ ಉಕ್ರೇನ್ ವಿಷಯದಂದು ಶಾಂತಿಯ ಯೋಜನೆಯೂ ಇದೆ ಎಂದು ಹೇಳಿದ್ದರು. ಎರಡು ವರ್ಷಗಳ ಬಳಿಕ ಇದೀಗ ಪುಟಿನ್ ಶಾಂತಿ ಮಾತುಕತೆಯನ್ನು ಕ್ಸಿ ಬದಲು ಟ್ರಂಪ್ ಜತೆಗೆ ನಡೆಸುತ್ತಿದ್ದಾರೆ. ಏಕೆಂದರೆ ವಾಷಿಂಗ್ಟನ್‌ಗೆ ಉಕ್ರೇನ್ ಮೇಲೆ ಹಿಡಿತವಿದೆ. ಚೀನಾಕ್ಕೆ ಒಳ್ಳೆಯ ಉದ್ದೇಶಗಳಿದ್ದವು. ಆದರೆ ಒಳ್ಳೆಯ ಉದ್ದೇಶವೆಂಬುದು ಯಾವಾಗ ಬೇಕಾದರೂ ಬಣ್ಣ ಬದಲಿಸುವ ಸರಕಿದ್ದಂತೆ.
ಟ್ರಂಪ್‌ಗೆ ನಟನೆ ಗೊತ್ತಿಲ್ಲ. ಹೀಗಾಗಿ ಪುಟಿನ್ ಜತೆಗಿನ ಫೋನ್ ಮಾತುಕತೆಯ ನಂತರವೂ ಅವರು ಖುಲ್ಲಂಖು ಇದ್ದರು. ಅವರಿಗೆ ರಷ್ಯಾ ಮತ್ತು ಚೀನಾ ನಡುವಿನ ಸಂಬಂಧವನ್ನು ತೀರಾ ಮುರಿಯುವುದು ಬೇಕಿಲ್ಲ ಅಂತಾದರೂ ಕಲಕುವುದಂತೂ ಬೇಕಿದೆ. ಟ್ರಂಪ್ ಬಹಳ ಪಾರದರ್ಶಕವಾಗಿದ್ದಾರೆ. ಅವರ ಆಡಳಿತ ನೈಜವಾಗಿದೆ.
ಮುಂದಿನ ಮೂರು ದಶಕಗಳಲ್ಲಿ ಅಮೆರಿಕಕ್ಕೆ ಸವಾಲು ಬರುವುದು ಚೀನಾದಿಂದಲೇ ಹೊರತು ರಷ್ಯಾದಿಂದ ಅಲ್ಲ. ಚೀನಾ ಬಹಳ ದೊಡ್ಡ ಆರ್ಥಿಕ ಸಂಪತ್ತಿನ ಮೇಲೆ ಪೃಷ್ಠ ವಿರಿಸಿ ಕುಳಿತುಕೊಂಡಿದೆ. ಹೈಟೆಕ್ ಅನ್ವೇಷಣೆಗಳಲ್ಲಿ ಚೀನಾ ಇಂದು ಎಲ್ಲರಿಗಿಂತ ಮುಂದಿ ದೆ. ಜಾಗತಿಕ ಮಾರುಕಟ್ಟೆಯನ್ನು ಅಲುಗಾಡಿಸಲು ಬಹಳ ದೊಡ್ಡ ಬಂಡವಾಳವನ್ನು ತೊಡಗಿಸಿದೆ.
ಚೀನಾ ಶೀಘ್ರದ ಜಾಗತಿಕ ದೈತ್ಯ ಶಕ್ತಿಯಾಗಿ ನಿಲ್ಲುವುದು ದೇಶದ ಹಣೆಯಲ್ಲಿ ಬರೆದಿದೆ ಎಂದೇ ಕ್ಸಿ ಜಿನ್‌ಪಿಂಗ್ ನಂಬಿದ್ದಾರೆ. ಅದನ್ನು ಯುದ್ಧವಿಲ್ಲದೆಯೇ ಸಾಧ್ಯವಾಗಿಸುತ್ತೇನೆ ಎಂಬ ಆತ್ಮವಿಶ್ವಾಸ ಅವರಲ್ಲಿದೆ. ಯುದ್ಧವೇ ಅನಿವಾರ್ಯವಾದರೆ ಅದಕ್ಕೂ ಅವರು ಸಿದ್ಧವಿದ್ದಾರಾದರೂ, ತಮ್ಮ ಗುರಿ ಸಾಧನೆಗೆ ಅವರು ಕಡಿಮೆ ಕಷ್ಟದ ದಾರಿಯನ್ನೇ ಆಯ್ದು ಕೊಳ್ಳುತ್ತಾರೆ.
ಆರ್ಥಿಕವಾಗಿ ಪ್ರಾಬಲ್ಯ ಸಾಧಿಸಿದರೆ ಅದರಿಂದ ಪ್ರಾದೇಶಿಕ ಹಿಡಿತವೂ ಲಭಿಸುತ್ತದೆ ಎಂಬು ದು ಅವರಿಗೆ ಗೊತ್ತಿದೆ. ದಕ್ಷಿಣಕ್ಕೆ ಹಿಮಾಲಯವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳದಿದ್ದರೆ ಅಥವಾ ತನ್ನ ವಾಯವ್ಯಕ್ಕಿರುವ ರಷ್ಯನ್ ಸೈಬೀರಿಯಾದ ಖನಿಜ ಸಂಪತ್ತಿನ ಮೇಲೆ ಹಿಡಿತ ಸಾಧಿಸದಿದ್ದರೆ ಜಾಗತಿಕ ‘ಸೂಪರ್ ಪವರ್’ ಆಗಿ ಬೆಳೆಯಲು ಸಾಧ್ಯವಿಲ್ಲ ಎಂಬುದು ಅವರಿಗೆ ಅರ್ಥವಾಗಿದೆ.
ಆದರೆ ರಷ್ಯಾಕ್ಕೆ ಜಾಗತಿಕ ಶಕ್ತಿಯಾಗಿ ಬೆಳೆಯುವ ಭೂಲಕ್ಷಣವಾಗಲೀ ಅಥವಾ ತಾಂತ್ರಿಕ ಶಕ್ತಿಯಾಗಲೀ ಇಲ್ಲ. ಹೀಗಾಗಿ ಅದು ಅಂಥ ಮಹತ್ವಾಕಾಂಕ್ಷೆಯನ್ನೂ ಇರಿಸಿಕೊಂಡಿಲ್ಲ. ಅದಕ್ಕೆ ಭದ್ರತೆಗೆ ಸಂಬಂಧಿಸಿದ ಅಪಾಯಗಳಿವೆ. ನಾಲ್ಕು ದಶಕಗಳ ಹಿಂದೆ ಅದರ ವ್ಯೂಹಾತ್ಮಕ ಗಡಿಗಳು ಅಮೆರಿಕ ಮತ್ತು ಪಶ್ಚಿಮ ಯುರೋಪಿನ ದಬಾವಣೆಯಿಂದಾಗಿ ಕುಸಿದು ಬಿದ್ದಿದ್ದವು.
ಆಗ ರಷ್ಯಾ ಅಕ್ಷರಶಃ ನಪುಂಸಕನಾಗಿಬಿಟ್ಟಿತ್ತು. ಈಗ ಅದಕ್ಕೆ ಬರ್ಲಿನ್ ಗೋಡೆಗಿಂತ ಕೀವ್ ಬಹಳ ಹತ್ತಿರದಲ್ಲಿದೆ. ಅಮೆರಿಕದ ಲೆಕ್ಕಾಚಾರ ಏನೆಂದರೆ, ಇಂಥ ಆತಂಕಗಳನ್ನು ರಷ್ಯಾ ನಿವಾರಿಸಿಕೊಂಡರೆ ಅದು ಮತ್ತೆ ಶಕ್ತಿಯುತ ರಾಷ್ಟ್ರವಾಗಿ ಹೊರಹೊಮ್ಮಲಿದೆ. ಆಗ ಚೀನಾ ದ ಪ್ರಾಬಲ್ಯವನ್ನು ಮಟ್ಟಹಾಕಲು ಅಮೆರಿಕ ತನ್ನ ಶಕ್ತಿಯನ್ನೆಲ್ಲ ವಿನಿಯೋಗಿಸಬಹುದು.
21ನೇ ಶತಮಾನದ ಸಂಘರ್ಷವಿದು. 20ನೇ ಶತಮಾನವನ್ನು ತನ್ನದಾಗಿಸಿಕೊಳ್ಳಲು ಅಮೆರಿಕ ತನ್ನನ್ನು ಮೂಲೆಗುಂಪು ಮಾಡಿದವರನ್ನೆಲ್ಲ ಮಟ್ಟಹಾಕಿ ಮೇಲೆದ್ದು ಬಂದಿತ್ತು. ಆ ಸೂಪರ್ ಪವರ್ ಪಟ್ಟವನ್ನು ಇಂದು ಉಳಿಸಿಕೊಳ್ಳಬೇಕು ಎಂದಾದರೆ ಅದು ಚೀನಾ ವನ್ನು ಹಣಿಯಲೇಬೇಕು. ಬೀಜಿಂಗ್ ಭೇಟಿ ಮತ್ತು ಅದರ ಅಧ್ಯಕ್ಷ ಮಾವೋ ಜೆಡಾಂಗ್ ಜತೆಗಿನ ಮಾತುಕತೆಯ ನಂತರ ನಿಕ್ಸನ್ ಬಲಶಾಲಿಯಾಗಿದ್ದರು.
2026ರಲ್ಲಿ ವಾಷಿಂಗ್ಟನ್‌ಗೆ ಪುಟಿನ್ ನೀಡುವ ಭೇಟಿಗಿಂತ ಮಾಸ್ಕೋಗೆ ಟ್ರಂಪ್ ಭೇಟಿ ನೀಡಿ ದರೆ ಅದು ಕಡಿಮೆ ನಾಟಕೀಯವಾಗಿರುತ್ತದೆ. ಆದರೆ ಇವರಿಬ್ಬರಲ್ಲಿ ಯಾರು ಯಾವ ದೇಶಕ್ಕೆ ಭೇಟಿ ನೀಡಿದರೂ ಅದು ಫಲಪ್ರದವೇ ಆಗುತ್ತದೆ. ಅದರ ಪರಿಣಾಮ ಮುಂದಿನ ದಶಕದ ಮೇಲೂ ಆಗುತ್ತದೆ. ರಷ್ಯಾಕ್ಕೆ ಇನ್ನಾವುದೇ ಯುದ್ಧ ಮಾಡುವುದು ಬಾಕಿಯಿಲ್ಲ.
ಹೀಗಾಗಿ ಅದು ಈಗ ಶಾಂತಿಯ ಒಪ್ಪಂದ ಮಾಡಿಕೊಳ್ಳಬಹುದು. ಬೌದ್ಧಿಕವಾಗಿ ನಮ್ಮನ್ನು ನಾವು ತಿದ್ದಿಕೊಳ್ಳಲು ‘ಕಬ್ಬಿಣದ ಚಾನ್ಸಲರ್’ ಮೇಲೆ ಅವಲಂಬಿತವಾಗುತ್ತಿರುವುದರಿಂದ ನಿಕ್ಸನ್‌ರ ಇನ್ನೊಂದು ಪ್ರಸಿದ್ಧ ಹೇಳಿಕೆಯನ್ನು ಇಲ್ಲಿ ನೆನೆಯುವುದು ತಪ್ಪಾಗಲಿಕ್ಕಿಲ್ಲ- “ಯಾವುದನ್ನಾದರೂ ತಡೆಯುವುದಕ್ಕೆಂದು ಯುದ್ಧ ಮಾಡುವುದು ಸಾವಿನ ಭಯದಿಂದ ಆತ್ಮಹತ್ಯೆ ಮಾಡಿಕೊಂಡಂತೆ".
ಸೋವಿಯತ್ ಒಕ್ಕೂಟವನ್ನು ಹದ್ದುಬಸ್ತಿನಲ್ಲಿ ಇಡಬೇಕೆಂಬ ಉದ್ದೇಶದಿಂದ ನ್ಯಾಟೋ ರಚನೆಯಾಗಿತ್ತು. ಅದರಲ್ಲಿದ್ದ ಅಮೆರಿಕದ ಸ್ನೇಹಿತರು ಕೊಬ್ಬಿಹೋದರು. ಆದರೆ ಅದರಿಂದ ಹಾನಿಯೇನೂ ಆಗಲಿಲ್ಲ. ಏಕೆಂದರೆ ರಷ್ಯಾದ ಜತೆಗೆ ನೇರವಾಗಿ ಯುದ್ಧ ಮಾಡದೆಯೇ ಸೋವಿಯತ್ ಪ್ರಾಬಲ್ಯವನ್ನು ನ್ಯಾಟೋ ಮಟ್ಟಹಾಕಿತ್ತು. ಯುದ್ಧವನ್ನೇನಾದರೂ ಮಾಡಿ ದ್ದರೆ ಅದು ಅಣ್ವಸ ಬಳಕೆಯಂಥ ವಿಕೋಪಕ್ಕೂ ಹೋಗಬಹುದಿತ್ತು.
ಆದರೆ ಹಾಗಾಗಲಿಲ್ಲ. ಆದರೆ ಅಮೆರಿಕಕ್ಕೆ ಆರ್ಥಿಕ ಮತ್ತು ಭೂರಾಜಕೀಯ ಪಾಲುದಾರರು ಬೇಕಾಗಿದ್ದರು. ಈಗ ಚೀನಾದ ಜತೆಗಿನ ಸಂಘರ್ಷಕ್ಕೂ ಅಮೆರಿಕ ಕೆಲ ಪಾಲುದಾರರನ್ನು ಹುಡುಕುತ್ತಿದೆ. ಆದರೆ ಆ ಮೈತ್ರಿಕೂಟವನ್ನು, ಮಿಲಿಟರಿಗಳ ಅಟಾಟೋಪವನ್ನು ತಡೆ ಯಲು ಬೇಕಾದ ಸ್ನೇಹಕೂಟವೆಂದು ಅದು ಹೇಳಿಕೊಳ್ಳುತ್ತಿದೆ. ಕೇಳುವುದಕ್ಕೆ ಇದು ಕಡಿಮೆ ಕಠೋರವಾಗಿದೆ.
ಆದರೆ, ಜಗತ್ತು ಈ ಹಿಂದೆ ಎಷ್ಟು ಕಠಿಣವಾಗಿತ್ತೋ ಅಷ್ಟೇ ಈಗಲೂ ಕಠಿಣವಾಗಿದೆ. ಭಾಷೆ ಮೃದುವಾಗಿದೆಯಷ್ಟೆ. ಗುಲಾಬಿಯನ್ನು ಯಾವ ಹೆಸರಿನಿಂದ ಕರೆದರೂ ಗುಲಾಬಿಯೇ ಆಗಿರುತ್ತದೆ. ಮುಳ್ಳು ಕೂಡ ಹಾಗೆಯೇ. ಹಿಂದೆ ಚೀನಾ ಜತೆ ಸ್ನೇಹ ಸಂಪಾದಿಸಿದ ಕಾರಣಕ್ಕೆ ರಿಚರ್ಡ್ ನಿಕ್ಸನ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗಲಿಲ್ಲ. ಅದು 1973ರಲ್ಲಿ ಹೆನ್ರಿ ಕಿಸಿಂಜರ್‌ಗೆ ಲಭಿಸಿತು. ಆ ಪ್ರಶಸ್ತಿ ಅವರಿಗೆ ಲಭಿಸಿದ್ದು ಚೀನಾಕ್ಕೆ ನೀಡಿದ ರಹಸ್ಯ ಭೇಟಿಗಾಗಿ ಅಲ್ಲ. ಬದಲಿಗೆ ತನ್ನ ದೇಶವು ಸೋತ ವಿಯೆಟ್ನಾಂ ಯುದ್ಧಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಅಮೆರಿಕಕ್ಕೆ ಬೇಕಾದ ಹಾಗೆ ಬದಲಿಸಿಕೊಳ್ಳಲು ನಡೆಸಿದ ಚೌಕಾಸಿಗಾಗಿ.
ನಿಮ್ಮ ರಾಜಕಾರಣ ಅಥವಾ ವ್ಯಕ್ತಿತ್ವವನ್ನು ಪಶ್ಚಿಮ ಯುರೋಪಿನ ದೇಶಗಳು ಇಷ್ಟಪಡದೆ ಇದ್ದರೆ ಆಗುವುದೇ ಹಾಗೆ. ಆದರೂ ಅರ್ಧ ಶತಮಾನದ ಬಳಿಕ ಜಗತ್ತು ನಿಕ್ಸನ್‌ರನ್ನು ನೆನಪಿ ಸಿಕೊಳ್ಳುತ್ತದೆಯೇ ಹೊರತು 1973ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಸ್ವೀಕರಿಸಿದ ವರನ್ನಲ್ಲ.
(ಲೇಖಕರು ಹಿರಿಯ ಪತ್ರಕರ್ತರು)