Dr Sadhanashree Column: ಊಟವಾದ ಮೇಲೆ ಬಾಳೆಹಣ್ಣನ್ನು ತಿನ್ನಬಾರದು
ಬಾಳೆಹಣ್ಣು, ಕಬ್ಬು, ಕಮಲ ಕಂದ, ಕಮಲಬೀಜಗಳನ್ನು ಊಟದ ಶುರುವಿನಲ್ಲಿ ಸೇವಿಸ ಬೇಕು. ಇವು, ವಿಶೇಷವಾಗಿ ಬಾಳೆಹಣ್ಣು ಮತ್ತು ಕಬ್ಬುಗಳು ರುಚಿಯಲ್ಲಿ ಸಿಹಿ ಮತ್ತು ಜೀರ್ಣಕ್ಕೆ ಜಡ- ಎಂದರೆ ಇವು ಗಳು ಜೀರ್ಣವಾಗುವುದಕ್ಕೆ ಹೆಚ್ಚು ಸಮಯವನ್ನು ತೆಗೆದು ಕೊಳ್ಳುತ್ತವೆ
ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಡಾ.ಸಾಧನಶ್ರೀ
ಜೀವಿಗಳಿಗೆ ಆಹಾರವೇ/ಅನ್ನವೇ ಪ್ರಾಣ. ಲೋಕದ ಸ್ಥಿತಿ, ವರ್ಣ, ಪ್ರಸಾದ, ಉತ್ತಮ ಸ್ವರ, ಬದುಕು, ಪ್ರತಿಭೆ, ಸುಖ, ಸಂತೋಷ, ಪುಷ್ಟಿ, ಬಲ, ಮೇಧಾಶಕ್ತಿ ಎಲ್ಲವೂ ಆಹಾರವನ್ನೇ ಆಧರಿಸಿವೆ.
ಎಲ್ಲಾ ಲೌಕಿಕ ಕರ್ಮಗಳು, ಸ್ವರ್ಗ ಪ್ರಾಪ್ತಿಗಿರುವ ವೈದಿಕ ವಿಧಿಗಳು, ಮೋಕ್ಷ ಪ್ರಾಪ್ತಿಗಾಗಿರುವ ಎಲ್ಲಾ ಕರ್ಮಗಳಲ್ಲೂ ಆಹಾರವೇ ಪ್ರಧಾನವಾಗಿದೆ" ಎಂದಿದ್ದಾರೆ ನಮ್ಮ ಆಯುರ್ವೇದ ಆಚಾರ್ಯರು. ಆದ್ದರಿಂದ, ಆಹಾರದ ಬಗ್ಗೆ ನಾವೆಲ್ಲರೂ ಸಮಗ್ರ ಮಾಹಿತಿಯನ್ನು ಅರಿಯಬೇಕು. ಈ ನಿಟ್ಟಿನಲ್ಲಿ ಮೊದಲಿಗೆ ತಿಳಿಯಬೇಕಾದ ವಿಷಯ ಏನೆಂದರೆ, ಆಹಾರವನ್ನು ಹೇಗೆ ಸೇವಿಸಬೇಕು ಎಂಬುದು.
ಇದರ ಬಗ್ಗೆ ಸವಿಸ್ತಾರವಾಗಿ ನಿಮ್ಮ ಜತೆ ಹಂಚಿಕೊಳ್ಳುವ ಮುನ್ನ, ಇಂದಿನ ಕಾಲದಲ್ಲಿ ಆಹಾರ ಸೇವನಾ ವಿಷಯದಲ್ಲಿ ಸಾಮಾನ್ಯವಾಗಿ ಕಾಣುವ ತಪ್ಪುಗಳನ್ನ ಮೊದಲು ನೋಡೋಣ. ಆಹಾರ ವನ್ನು ಸಕಾಲದಲ್ಲಿ ಸೇವಿಸದೆ ಇರುವುದು. ಹಸಿವೆ ಇದೆಯೋ ಇಲ್ಲವೋ ಎಂದು ಗಮನಿಸದೆ ಸೇವಿ ಸುವುದು.
ಇದನ್ನೂ ಓದಿ: Dr Sadhanashree Column: ನಿಧಾನವೇ ಆಯುರ್ವೇದದ ವಿಧಾನ ?
ಕೇವಲ ಗಡಿಯಾರದ ಸಮಯವನ್ನು ಮಾತ್ರ ನೋಡಿ ಉಣ್ಣುವುದು. ಕ್ರೇವಿಂಗ್ ಎಂಬ ಹೆಸರಿನಲ್ಲಿ ಹೊತ್ತಲ್ಲದ ಹೊತ್ತಿನಲ್ಲಿ ಅಪಥ್ಯವನ್ನು ಸೇವಿಸುವುದು. ಆಹಾರವನ್ನು ಸೇವಿಸುವಾಗ ಹರಟೆಯಲ್ಲಿ ಅಥವಾ ಮೊಬೈಲ್‌ನಲ್ಲಿ ನಿರತರಾಗುವುದು. ನಿಂತುಕೊಂಡು, ಓಡಾಡಿಕೊಂಡು ಊಟ ಮಾಡು ವುದು ಅಥವಾ ಗಾಡಿಯಲ್ಲಿ ಚಲಿಸುವಾಗ ತಿನ್ನುವುದು. ಊಟವಾದ ನಂತರ ಒಟ್ಟಿಗೆ ಸಾಕಷ್ಟು ನೀರನ್ನು ಒಮ್ಮೆಲೇ ಕುಡಿಯುವುದು. ಆಹಾರ ಸೇವಿಸಿದ ಕೂಡಲೇ ಬಸ್ ಹಿಡಿಯಲು ಅಥವಾ ನಿಗದಿತ ಸ್ಥಳವನ್ನು ತಲುಪಲು ಓಡುವುದು. ತಣ್ಣಗಾದ ಆಹಾರವನ್ನು ಸೇವಿಸುವುದು. ಆಹಾರ ಕಾಲಗಳ ಮಧ್ಯೆ ಪದೇ ಪದೆ ಏನನ್ನಾದರೂ ಸೇವಿಸುತ್ತಿರುವುದು.
ಅತಿಯಾದ ದುಃಖ, ಕೋಪ-ತಾಪಗಳಲ್ಲಿಯೂ ಆಹಾರವನ್ನು ಸೇವಿಸುವುದು. ಭೂರಿ ಭೋಜನ ಮಾಡಲು ರಾತ್ರಿಯ ಸಮಯವನ್ನು ಆಯ್ಕೆ ಮಾಡಿಕೊಳ್ಳುವುದು. ಆಹಾರದ ಮೊದಲೇ ಉಪ್ಪು-ಖಾರ-ಹುಳಿ ಅತಿಯಾಗಿರುವ ಸೂಪ್, ಮಂಚೂರಿಯನ್ ಗಳನ್ನು ಸೇವಿಸಿ ಆಹಾರದ ನಂತರ ‘ಡೆಸರ್ಟ್’ ಹೆಸರಿನಲ್ಲಿ ಐಸ್ ಕ್ರೀಮ್ ಮತ್ತು ಫ್ರುಟ್ ಸಲಾಡ್ ಗಳನ್ನು ಸೇವಿಸುವುದು. ಭೋಜನದ ನಂತರ ಬಾಳೆಹಣ್ಣನ್ನು ತಿನ್ನುವುದು. ಹಿಂದಿನ ದಿನ ತಯಾರಿಸಿದ ಆಹಾರವನ್ನು ಫ್ರಿಜ್‌ನಲ್ಲಿಟ್ಟು ಮರುದಿನ ಬಿಸಿ ಮಾಡಿ ತಿನ್ನುವುದು. ತಿಂದ ಕೂಡಲೇ ವ್ಯಾಯಾಮ ಮಾಡುವುದು. ನಮ್ಮ ಪ್ರದೇಶಕ್ಕೆ ಸೇರದ/ಶರೀರಕ್ಕೆ ಅಭ್ಯಾಸವಿರದ ಆಹಾರವನ್ನು ಪದೇಪದೆ ಬಳಸುವುದು...
ಹೀಗೆ ಹೇಳುತ್ತಾ ಹೋದರೆ ಇಡೀ ಲೇಖನವೇ ತಪ್ಪುಗಳ ಪಟ್ಟಿಯಾದೀತು. ಇವೆಲ್ಲ ನಾವು ಮಾಡು ತ್ತಿರುವ ‘ತಪ್ಪುಗಳು’ ಎಂದರೆ ಆಶ್ಚರ್ಯವಾಯ್ತಾ? ಹೌದು! ಇದರಿಂದಲೇ, ನಮ್ಮ ಆರೋಗ್ಯದಲ್ಲಿ ಪ್ರತಿನಿತ್ಯ ಏರುಪೇರುಗಳನ್ನು ನಾವು ಅನುಭವಿಸುತ್ತಿರುವುದು. ‘ಆಹಾರಸಂಭವಂ ವಸ್ತು ರೋಗಾ ಶ್ಚಾಹಾರ ಸಂಭವಾಃ’- ಈ ಶರೀರವು ಆಹಾರದಿಂದಲೇ ಆಗಿದೆ. ಇದಕ್ಕೆ ಬರುವ ರೋಗಗಳೂ ಆಹಾರ ದಿಂದಲೇ ಉಂಟಾಗುತ್ತವೆ. ಹಾಗಾದರೆ, ಆರೋಗ್ಯವನ್ನು ಸಂರಕ್ಷಿಸಿಕೊಳ್ಳಬೇಕಾದರೆ ಆಹಾರ ಒಂದೇ ಮಾರ್ಗ. ಈ ಮಾರ್ಗವು ಸರಿಯಾದ ಗುರಿಯನ್ನು ಮುಟ್ಟಬೇಕಾದರೆ ಆಹಾರಸೇವನಾ ನಿಯಮವೂ ಅಷ್ಟೇ ಮುಖ್ಯವಾಗುತ್ತದೆ. ಹಾಗಾಗಿ, ಆಯುರ್ವೇದದ ಶಾಸೋಕ್ತ ಆಹಾರ ಸೇವನಾ ನಿಯಮಗಳನ್ನ ತಿಳಿದುಕೊಳ್ಳೋಣ.
ಆಹಾರವನ್ನು ಸೇವಿಸುವ ಮೊದಲು ಮಲಮೂತ್ರಗಳನ್ನು ಅವಶ್ಯವಾಗಿ ವಿಸರ್ಜಿಸಿರಬೇಕು. ಸಾಮಾ ನ್ಯವಾಗಿ ಬೆಳಗ್ಗೆ ಎದ್ದ ಕೂಡಲೇ ಪ್ರಾಕೃತವಾಗಿ ಮಲಮೂತ್ರಗಳ ವಿಸರ್ಜನೆ ಆಗಬೇಕು. ಇದು ಆದಾಗ ಮಾತ್ರ ಜಠರಾಗ್ನಿ ಉತ್ತೇಜನಗೊಂಡು, ಹಸಿವು ಚುರುಕಾಗಿ, ನಾವು ಸೇವಿಸಿದ ಆಹಾರವು ಸರಿಯಾಗಿ ಜೀರ್ಣವಾಗುವುದು. ಬೆಳಗ್ಗೆ ಎದ್ದ ಕೂಡಲೇ ವಿಸರ್ಜನೆಯ ತೊಂದರೆ ಇದ್ದರೆ ಅದನ್ನು ಸರಿಪಡಿಸಿಕೊಳ್ಳಬೇಕು. ಅದು ಸರಿಯಾಗುವ ತನಕ ಆಹಾರ ಪ್ರಮಾಣವನ್ನು ಸ್ವಲ್ಪ ಕಡಿಮೆ ಮಾಡಿ ಜೀರ್ಣಶಕ್ತಿ ಹಾಳಾಗದಂತೆ ಎಚ್ರ ವಹಿಸಬೇಕು.
ಆಯುರ್ವೇದದ ಪ್ರಕಾರ ಸ್ನಾನವು ‘ಅಗ್ನಿದೀಪಕ’. ಅಂದರೆ, ಸ್ನಾನ ಮಾಡುವುದರಿಂದ ನಮ್ಮ ಹಸಿವು ಚುರುಕಾಗುತ್ತದೆ, ಅಗ್ನಿ ಉದ್ದೀಪನಗೊಳ್ಳುತ್ತದೆ. ಹಾಗಾಗಿ, ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸ್ನಾನ ಮಾಡಿ ನಂತರ ಆಹಾರ ಸೇವಿಸುವುದು ಬಹಳ ಆರೋಗ್ಯಕರ. ಅಂತೆಯೇ, ಆಹಾರ ಸೇವಿಸಿದ ತಕ್ಷಣ ವೇ ಸ್ನಾನ ಮಾಡುವುದು ಅಷ್ಟೇ ಅನಾರೋಗ್ಯಕರ. ನಂತರದ ಬಹಳ ಮುಖ್ಯವಾದ ನಿಯಮ ವೆಂದರೆ ಹಸಿವೆ ಇದ್ದಾಗ ಮಾತ್ರ ಆಹಾರವನ್ನು ಸೇವಿಸಬೇಕು. ಏನನ್ನೂ ಸೇವಿಸುವ ಮೊದಲು ಹಿಂದೆ ತಿಂದ ಆಹಾರವು ಜೀರ್ಣವಾಗಿದೆಯೇ? ಹಸಿವೆ ಇದೆಯೇ? ಎಂದು ನಮ್ಮನ್ನು ನಾವು ಪರೀಕ್ಷಿಸಿ ಕೊಂಡು, ನಂತರವೇ ಹಸಿವೆಗೆ ತಕ್ಕಂತೆ ಆಹಾರವನ್ನು ಸೇವಿಸಬೇಕು.
ಹಸಿವೆ ಇಲ್ಲದಿದ್ದಾಗ ಆಹಾರ ಸೇವಿಸುವುದರಿಂದ ಅಜೀರ್ಣ, ಹುಳಿತೇಗು, ಎದೆ ಉರಿ, ತಲೆನೋವು, ಮಲಬದ್ಧತೆ, ಅನಿದ್ರತೆ- ಹೀಗೆ ಅನೇಕ ಸಮಸ್ಯೆಗಳು ಉದ್ಭವಿಸಬಹುದು. ಆಹಾರ ಸೇವಿಸುವ ಕಾಲ ಬಹಳ ಮುಖ್ಯ. ಆಯುರ್ವೇದದ ಪ್ರಕಾರ ಮೂರು ಆಹಾರ ಕಾಲಗಳನ್ನು ನಾವು ನಿಗದಿಪಡಿಸಿ ಕೊಂಡು, ಪ್ರತಿನಿತ್ಯ ಅದೇ ಸಮಯದಲ್ಲಿ ಆಹಾರವನ್ನು ಸೇವಿಸಬೇಕು. ಇದು ಆಹಾರ ಜೀರ್ಣ ಕ್ರಿಯೆಯಲ್ಲಿ ಸಹಕಾರಿಯಾಗುವುದಲ್ಲದೆ ಇಡೀ ಶರೀರದ ಆಂತರಿಕ ಜೈವಿಕ ಗಡಿಯಾರವನ್ನು ಸಂತು ಲನದಲ್ಲಿ ಇಟ್ಟುಕೊಳ್ಳಲು ಸಹಾಯಕಾರಿ.
ದಿನಕ್ಕೊಂದು ಸಮಯವನ್ನು ಬದಲಾಯಿಸುತ್ತಿದ್ದರೆ ತೊಂದರೆ ತಪ್ಪಿದ್ದಲ್ಲ. ನಾವು ಸೇವಿಸುವ ಆಹಾರವು ಬಿಸಿಯಾಗಿದ್ದು, ಶುಚಿಯಾಗಿದ್ದು, ಪಚನಕ್ಕೆ ಹಗುರವಾಗಿರಬೇಕು. ಆಯುರ್ವೇದದ ಪ್ರಕಾರ ಒಮ್ಮೆ ತಯಾರಿಸಿದ ಆಹಾರವನ್ನು ತಣ್ಣಗಾಗುವ ಮೊದಲೇ ಸೇವಿಸಬೇಕು. ಮತ್ತೆ ಆಹಾರ ವನ್ನು ಬಿಸಿ ಮಾಡಕೂಡದು. ಇದು ವಿಷಕ್ಕೆ ಸಮಾನ.
ಆಹಾರವು ಸ್ನಿಗ್ಧವಾಗಿರಬೇಕು. ಸೇವಿಸುವ ಬಿಸಿ ಆಹಾರಕ್ಕೆ ಕಡ್ಡಾಯವಾಗಿ ನಮ್ಮ ದೇಹಕ್ಕೆ ಒಗ್ಗಿರುವ ಒಳ್ಳೆಯ ಜಿಡ್ಡನ್ನು ಸೇರಿಸಿಯೇ ಸೇವಿಸಬೇಕು. ಉತ್ತಮವಾದಂಥ ಹಸುವಿನ ತುಪ್ಪ ಸೇರಿಸಿದ ಆಹಾರ ವು ಅಮೃತಕ್ಕೆ ಸಮಾನ. ತುಪ್ಪ ಸೇವಿಸಿದರೆ ದಪ್ಪವಾಗುತ್ತೇನೆ ಎಂಬ ಭಯವಿದ್ದರೆ ಅದನ್ನು ಇಂದೇ ದೂರ ಮಾಡಿ. ತುಪ್ಪವನ್ನು ಸರಿಯಾಗಿ ಸೇವಿಸುವುದರಿಂದ ಬೊಜ್ಜು ಬಾರದು. ನಾವು ಸೇವಿಸುವ ಆಹಾರವು ಷಡ್ರಸಗಳು- ಅಂದರೆ ಸಿಹಿ, ಹುಳಿ, ಉಪ್ಪು, ಖಾರ, ಕಹಿ ಮತ್ತು ಒಗರು ರಸಗಳ ಸಂತುಲಿತ ಮಿಶ್ರಣವಾಗಿರಬೇಕೇ ಹೊರತು, ಯಾವುದೋ ಒಂದು ರಸವನ್ನೇ ಅತಿಯಾಗಿ ಸೇವಿಸಬಾರದು.
ಆಯುರ್ವೇದದ ಪ್ರಕಾರ ಯಾವುದೋ ಒಂದು ರುಚಿಯನ್ನೇ ದಿನನಿತ್ಯವೂ ಸೇವಿಸುವುದು ನಮ್ಮ ಶರೀರ-ಇಂದ್ರಿಯ-ಮನಗಳನ್ನು ದುರ್ಬಲ ಮಾಡುತ್ತದೆ. ಉದಾಹರಣೆಗೆ, ಸುಮಾರು ಜನ ಕಟು (ಖಾರ) ಪ್ರಧಾನವಾದ ಆಹಾರವನ್ನೇ ಸದಾ ಸೇವಿಸುತ್ತಾರೆ. ಇದು ಅನೇಕ ರೋಗಗಳಿಗೆ ನಾಂದಿ. ನಾವು ತಯಾರಿಸುವ ತರಕಾರಿ ಸಾಂಬಾರಿನ ಉದಾಹರಣೆಯನ್ನು ಕೊಡುತ್ತೇನೆ. ಇದರಲ್ಲಿ ಸಿಹಿಗೆ ಬೆಲ್ಲ, ಹುಳಿಗೆ ಹುಣಸೆಹಣ್ಣು, ಲವಣಕ್ಕೆ ಉಪ್ಪು, ಖಾರಕ್ಕೆ ಮೆಣಸು, ಕಹಿ ರಸಕ್ಕೆ ಮೆಂತ್ಯ ಮತ್ತು ಒಗರು ರಸಕ್ಕೆ ಕರಿಬೇವನ್ನು ಸಂತುಲಿದ ಪ್ರಮಾಣದಲ್ಲಿ ಸೇರಿಸಿ ಮಾಡಿದಾಗ ಅತ್ಯಂತ ಆರೋಗ್ಯಕರ.
ಅದರ ಬದಲಾಗಿ ಅತಿಯಾಗಿ ಟೊಮೆಟೊ ಒಂದನ್ನೇ ಹಾಕಿ ಮಾಡುವುದು ಅಥವಾ ಹಸಿಮೆಣಸು-ಶುಂಠಿ-ಬೆಳ್ಳುಳ್ಳಿಯಂಥ ಕಟು ರಸ ಪ್ರಧಾನವಾದ ಪದಾರ್ಥಗಳನ್ನೇ ಹಾಕಿ ಮಾಡುವುದು ಅಥವಾ ಕೇವಲ ಹುಣಸೆಹಣ್ಣು ಒಂದರ ತಯಾರಿಸುವುದರಿಂದ ತೊಂದರೆ ತಪ್ಪಿದ್ದಲ್ಲ. ಷಡ್ರಸಭೋಜನವು ಸದಾ ಆರೋಗ್ಯ ಸಂರಕ್ಷಕ. ಸಾಮಾನ್ಯವಾಗಿ, ಆಹಾರದ ಮೊದಲನೆಯ ಭಾಗವಾಗಿ ಸಿಹಿ ರುಚಿ ಪ್ರಧಾನವಾದ ಆಹಾರಗಳನ್ನು ಸೇವಿಸತಕ್ಕದ್ದು.
ಉದಾಹರಣೆಗೆ, ಪಾಯಸ, ಹೋಳಿಗೆ, ಶ್ರೀಖಂಡ, ಫ್ರೂಟ್ ಸಲಾಡ್ ಇತ್ಯಾದಿ. ನೆನಪಿಡಿ! ಆಯುರ್ವೇ ದದ ಪ್ರಕಾರ ಹಣ್ಣನ್ನು ಭೋಜನದ ಪ್ರಥಮ ಭಾಗದಲ್ಲಿಯೇ ಸೇವಿಸತಕ್ಕದ್ದು. ಊಟ ವಾದ ನಂತರ ಹಣ್ಣು ಸೇವನೆ ವರ್ಜ್ಯ. ಇನ್ನು ಊಟದ ಮಧ್ಯ ಭಾಗದಲ್ಲಿ ಆಮ್ಲ ಮತ್ತು ಲವಣ ರಸಪ್ರಧಾನವಾದ ಖಾದ್ಯಗಳನ್ನು ಸೇವಿಸುವುದು. ಉದಾಹರಣೆಗೆ, ಕೋಸಂಬರಿ, ಚಿತ್ರಾನ್ನ, ಫುಳಿಯೋಗರೆ, ಪೈನಾಪಲ್ ಗೊಜ್ಜು ಇತ್ಯಾದಿ. ಊಟದ ಕೊನೆಯಲ್ಲಿ ಕಟು, ತಿಕ್ತ ಮತ್ತು ಕಷಾಯ ಪ್ರಧಾನವಾದ ರಸಗಳಿಂದ ತಯಾರಿಸಿದ ಭಕ್ಷ್ಯಗಳನ್ನು ಸೇವಿಸಬೇಕು.
ಉದಾಹರಣೆಗೆ, ಅನ್ನ-ಹುಳಿ, ಅನ್ನ-ಸಾರುಗಳನ್ನು ಸೇವಿಸಿ, ನಂತರ ಕಷಾಯ ಪ್ರಧಾನವಾದ ಮಜ್ಜಿಗೆ ಯೊಂದಿಗೆ ಭೋಜನವನ್ನು ಸಮಾಪ್ತಗೊಳಿಸುವುದು. ಈ ರೀತಿಯಾಗಿ ನಮ್ಮ ಭೋಜನ ವನ್ನು ಸಂಯೋಜಿಸಿಕೊಂಡರೆ ಹೆಚ್ಚು ತೊಂದರೆ ಕೊಡದೆ ಸಲೀಸಾಗಿ ಜೀರ್ಣವಾಗಿ, ಧಾತುಗಳಿಗೆ ಪುಷ್ಟಿ ಯನ್ನು ನೀಡುತ್ತದೆ.
ಅಂತೆಯೇ, ಬಾಳೆಹಣ್ಣು, ಕಬ್ಬು, ಕಮಲ ಕಂದ, ಕಮಲಬೀಜಗಳನ್ನು ಊಟದ ಶುರುವಿನಲ್ಲಿ ಸೇವಿಸ ಬೇಕು. ಇವು, ವಿಶೇಷವಾಗಿ ಬಾಳೆಹಣ್ಣು ಮತ್ತು ಕಬ್ಬುಗಳು ರುಚಿಯಲ್ಲಿ ಸಿಹಿ ಮತ್ತು ಜೀರ್ಣಕ್ಕೆ ಜಡ- ಎಂದರೆ ಇವುಗಳು ಜೀರ್ಣವಾಗುವುದಕ್ಕೆ ಹೆಚ್ಚು ಸಮಯವನ್ನು ತೆಗೆದು ಕೊಳ್ಳುತ್ತ ವೆ. ಊಟ ಮಾಡಿದ ನಂತರ ಜಠರಾಗ್ನಿಯ ಕ್ಷಮತೆ ಕುಂದಿರುತ್ತದೆ, ಇಂಥ ಸಮಯದಲ್ಲಿ ಬಾಳೆ ಹಣ್ಣನ್ನು ಅಥವಾ ಕಬ್ಬನ್ನು ಸೇವಿಸಿದರೆ ಸರಿಯಾಗಿ ಜೀರ್ಣವಾಗದೆ ನೆಗಡಿ, ಗಂಟಲು ಬಾವು, ಕೆಮ್ಮುಗಳಂಥ ಕಫದ ಸಮಸ್ಯೆಯನ್ನು ಉಂಟುಮಾಡುತ್ತದೆ.
ಬದಲಾಗಿ, ಊಟದ ಮೊದಲಿಗೆ ಹೊಟ್ಟೆ ಖಾಲಿ ಇzಗ, ಜೀರ್ಣಶಕ್ತಿ ಉತ್ತಮವಾಗಿದ್ದಾಗ, ಅಗ್ನಿ ಚೆನ್ನಾ ಗಿ ಉರಿಯುತ್ತಿದ್ದಾಗ ಇವನ್ನು ಸೇವಿಸಿದರೆ ಸರಾಗವಾಗಿ ಜೀರ್ಣವಾಗಿ ಧಾತುಗಳಿಗೆ ಪುಷ್ಟಿ ದೊರೆಯು ತ್ತದೆ. ಹಾಗಾಗಿಯೇ, ಆಯುರ್ವೇದ ‘ಏನನ್ನು’ ಸೇವಿಸುತ್ತಿದ್ದೀಯಾ ಅನ್ನುವುದಕ್ಕಿಂತ ‘ಹೇಗೆ’ ಮತ್ತು ‘ಯಾವಾಗ’ ಸೇವಿಸುತ್ತಿದ್ದೀಯಾ ಅನ್ನುವುದಕ್ಕೆ ಹೆಚ್ಚಿನ ಪ್ರಾಮುಖ್ಯವನ್ನು ನೀಡಿದೆ.
ಭೋಜನದ ಮುಂಚೆ ನೀರು ಕುಡಿಯುವುದು ಮತ್ತು ಭೋಜನವಾದ ತಕ್ಷಣವೇ ಜಲಪಾನ ಮಾಡು ವುದು ತೊಂದರೆ ಉಂಟು ಮಾಡಬಹುದು. ಹಾಗಾಗಿ, ಆಯುರ್ವೇದದ ಪ್ರಕಾರ ಬೇಸಗೆಯಲ್ಲಿ ಕಾದಾ ರಿದ ನೀರನ್ನು ಮತ್ತು ಚಳಿಗಾಲದಲ್ಲಿ ಕುದಿಸಿದ ಬಿಸಿನೀರನ್ನು ಊಟದ ಮಧ್ಯೆ ಮಧ್ಯೆ ಗುಟುಕು ಗುಟುಕಾಗಿ ಹೀರುವುದು ಅತ್ಯಂತ ಪ್ರಶಸ್ತವಾದ ಅಭ್ಯಾಸ. ಇದರಿಂದ ಜೀರ್ಣಕ್ರಿಯೆ ಸಲೀಸಾಗಿ ಮಲ ಮೂತ್ರ ವಿಸರ್ಜನೆ ಸರಾಗವಾಗಿ, ಆರೋಗ್ಯ ಸಂರಕ್ಷಣೆಯಾಗುತ್ತದೆ.
ಆಹಾರವನ್ನು ಅತಿ ನಿಧಾನವಾಗಿ ಅಥವಾ ಅತಿ ವೇಗವಾಗಿ ಸೇವಿಸದೆ, ಸರಿಯಾದ ಗತಿಯಲ್ಲಿ ಸೇವಿ ಸುವುದು ಬಹಳ ಮುಖ್ಯ. ಊಟ ಮಾಡುವಾಗ ಶುಚಿಯಾದ ಶಾಂತವಾದ ಸ್ಥಳವನ್ನು ಆಯ್ಕೆ ಮಾಡಿ ಸುಖವಾದ ಆಸನದಲ್ಲಿ ಕುಳಿತು ಸೇವಿಸಬೇಕು. ಇಷ್ಟ ಜನರೊಂದಿಗೆ, ಇಷ್ಟವಾದ ಆಹಾರ ವನ್ನು ಸೇವಿಸುವುದು ಸದಾ ಶ್ರೇಯಸ್ಕರ. ಊಟ ಮಾಡುವಾಗ ಬೈಯದೆ, ನಗದೆ, ಅಳದೆ, ಹರಟದೆ ಮನ ಸ್ಸಿಟ್ಟು ಸೇವಿಸಬೇಕು.
ಆಯುರ್ವೇದ ಶಾಸದ ಪ್ರಕಾರ ಚಿಂತಾ, ಶೋಕ, ಭಯ ಕ್ರೋಧವಿದ್ದಾಗ ಆಹಾರವನ್ನು ಸೇವಿಸದೆ, ಮನಸ್ಸನ್ನು ಪ್ರಶಾಂತಗೊಳಿಸಿದ ನಂತರವೇ ಭೋಜನವನ್ನು ಸೇವಿಸಬೇಕು. ಇನ್ನು, ಆಹಾರದ ಪ್ರಮಾಣ ಎಷ್ಟಿರಬೇಕು ಎಂದರೆ, ಹೊಟ್ಟೆ ತುಂಬುವಷ್ಟು ಎಂಬುದು ಸಾಮಾನ್ಯದ ಉತ್ತರ. ಆದರೆ, ಇದು ಸರಿಯಾದ ಉತ್ತರವಲ್ಲ. ಒಬ್ಬ ವ್ಯಕ್ತಿಯು ಆಹಾರದ ಪ್ರಮಾಣವನ್ನು ತನ್ನ ಜೀರ್ಣಶಕ್ತಿ ಯನ್ನು ಮತ್ತು ತನ್ನ ಕೆಲಸವನ್ನು ಅನುಸರಿಸಿ ನಿರ್ಧರಿಸಿಕೊಳ್ಳಬೇಕು. ಒಮ್ಮೆ ಸೇವಿಸಿದ ಆಹಾರವು ದೇಹದಲ್ಲಿ ಯಾವುದೇ ರೀತಿಯಲ್ಲೂ ತೊಂದರೆಯನ್ನುಂಟು ಮಾಡದೆ, ಮುಂದಿನ ಆಹಾರ ಕಾಲದ ಒಳಗೆ ಪಚನವಾಗಿ, ಸರಾಗವಾಗಿ ಮಲ-ಮೂತ್ರಗಳನ್ನು ಹೊರಗೆ ಹೋಗುವ ಹಾಗೆ ಮಾಡಿದರೆ ಅದು ಆ ವ್ಯಕ್ತಿಗೆ ಸರಿಯಾದ ಆಹಾರ ಪ್ರಮಾಣ.
ಉದಾಹರಣೆಗೆ, ಉಪಾಹಾರದಲ್ಲಿ ಮೂರು ಇಡ್ಲಿಯನ್ನು ನೀವು ಸೇವಿಸಿದರೆ, ಅದು ನಿಮ್ಮ ಮಧ್ಯಾ ಹ್ನ ಭೋಜನದ ಸಮಯದ ಹೊತ್ತಿಗೆ ಜೀರ್ಣವಾಗಿ, ಪುನಃ ಹಸಿವೆಯನ್ನು ನಿಮಗೆ ನೀಡ ಬೇಕು. ಮಧ್ಯಾಹ್ನದ ನಿಗದಿತ ಆಹಾರ ಕಾಲದ ವೇಳೆಗೂ ನಿಮಗೆ ಹಸಿವಾಗಿಲ್ಲವೆಂದರೆ ಮೂರು ಇಡ್ಲಿ ನಿಮ್ಮ ಜೀರ್ಣಶಕ್ತಿಗೆ ಹೆಚ್ಚು ಎಂದರ್ಥ. ಇನ್ನು, ಶಾಸ್ತ್ರೋಕ್ತವಾಗಿ ಹೇಳಬೇಕಾದರೆ- ಹೊಟ್ಟೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿಕೊಂಡರೆ, ಅದರಲ್ಲಿ ಎರಡು ಭಾಗಗಳನ್ನು ಘನಾಹಾರದಿಂದ, ಒಂದು ಭಾಗವನ್ನು ದ್ರವಹಾರದಿಂದ ತುಂಬಿಸಬೇಕು ಮತ್ತು ನಾಲ್ಕನೆಯ ಭಾಗವನ್ನು ವಾತದಿ ದೋಷಗಳ ಕಾರ್ಯಕ್ಕಾಗಿ ಖಾಲಿ ಬಿಡಬೇಕು.
ಇನ್ನು ಊಟವಾದ ನಂತರ ಏನು ಮಾಡಬೇಕು? ಸಾಮಾನ್ಯವಾಗಿ, ಗಡಿಬಿಡಿಯಲ್ಲಿ ಆಹಾರವನ್ನು ಸೇವಿಸಿ ತಕ್ಷಣವೇ ಮತ್ತೊಂದು ಕೆಲಸಕ್ಕೆ ಧಾವಿಸುವುದು ನಾವೆಲ್ಲರೂ ಮಾಡುವ ಒಂದು ತಪ್ಪು ಅಭ್ಯಾಸ. ಹೀಗೆ ಮಾಡುವುದರಿಂದ ವಾತದ ಸಮಸ್ಯೆಗಳು- ಉದಾಹರಣೆಗೆ ಹೊಟ್ಟೆ ನೋವು, ಹೊಟ್ಟೆ ಉಬ್ಬರ, ಗುಲ್ಮಶೂಲದಂಥ ಕಾಯಿಲೆಗಳು ಕಾಣಿಸಿಕೊಳ್ಳಬಹುದು.
ಆದ್ದರಿಂದ, ಆಯುರ್ವೇದದ ಸಲಹೆಯ ಪ್ರಕಾರ ಊಟ ಮಾಡಿದ ನಂತರ ಸ್ವಲ್ಪ ಸಮಯ ರಾಜ ನಂತೆ ಅಂದರೆ ಬೆನ್ನನ್ನು ನೇರ ಮಾಡಿ ಕುಳಿತುಕೊಂಡು, ಹೊಟ್ಟೆಯ ಭಾರ ಸ್ವಲ್ಪ ಕಡಿಮೆಯಾದ ನಂತರ ಎದ್ದು ನೂರು ಹೆಜ್ಜೆಗಳನ್ನು ಹಾಕುವುದು ಒಳ್ಳೆಯ ಅಭ್ಯಾಸ. ರಾತ್ರಿ ಆಗಿದ್ದರೆ ಆಹಾರ ಜೀರ್ಣವಾದ ನಂತರ ಎಡ ಬದಿ ತಿರುಗಿ ಮಲಗುವುದರಿಂದ ತೊಂದರೆಯಾಗದು. ಆಹಾರ ಸೇವಿಸಿದ ತಕ್ಷಣವೇ ಮಲಗುವುದು ಆಯುರ್ವೇದದ ಪ್ರಕಾರ ನಿಷಿದ್ಧ.
ಹಾಗಾಗಿ ರಾತ್ರಿಯ ಭೋಜನವಾಗಿ ಕನಿಷ್ಠ ಒಂದೂವರೆ ಗಂಟೆ ಅವಽಯ ನಂತರವೇ ಮಲಗ ತಕ್ಕದ್ದು. ಮಧ್ಯಾಹ್ನವೂ ಊಟದ ನಂತರ ತಕ್ಷಣವೇ ಮಲಗುವುದು ಬೊಜ್ಜಿನ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹದಂಥ ಘೋರ ತೊಂದರೆಗಳಿಗೆ ಕಾರಣವಾಗಬಹುದು. ‘ಲಂಘನಂ ಪರಮೌಷಧಮ’- ಅಂದರೆ, ಊಟವನ್ನು ತ್ಯಜಿಸುವುದು ಉತ್ತಮ ಔಷಧಿ.
ಹಾಗಾಗಿ ಜೀರ್ಣ ಸಂಬಂಧಿ ಯಾವುದೇ ಕಾಯಿಲೆ ಇದ್ದರೂ ಆಹಾರಕಾಲದ ವೇಳೆ ಹಸಿವು ಕಾಣಿಸಿ ಕೊಳ್ಳಲಿಲ್ಲವೆಂದರೆ ಆ ಆಹಾರಕಾಲದಲ್ಲಿ ಆಹಾರವನ್ನು ತ್ಯಜಿಸಿ, ಕೇವಲ ಚೆನ್ನಾಗಿ ಕುದಿಸಿದ ಬಿಸಿನೀರನ್ನು ಸ್ವಲ್ಪ ಸ್ವಲ್ಪವೇ ಹೀರುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಅಂತೆಯೇ, ರಾತ್ರಿಯ ಭೋಜನದ ವೇಳೆಗೆ ಹಸಿವಿಲ್ಲವೆಂದರೆ ಭೋಜನವನ್ನು ತ್ಯಜಿಸಿ ಮಲಗುವುದರಿಂದ ಮುಂದಿನ ದಿನದ ಕ್ರಿಯೆಗಳು ಸಲೀಸಾಗಿ ಸಾಗುತ್ತವೆ.