Laxman Rao Nirani Column: ಸಶಕ್ತ ಭಾರತ: ಆರ್‌ಎಸ್‌ಎಸ್ ಗುರಿ
ಆrfಎಸ್‌ಎಸ್‌ನ ಅಗಾಧ ಬೆಳವಣಿಗೆಯನ್ನು ಅರಿತುಕೊಳ್ಳಲು ಈ ಅಂಕಿ ಅಂಶಗಳನ್ನು ಗಮನಿಸ ಬಹುದು. ದೇಶದಾದ್ಯಂತ ೭೫,೦೦೦ ಸ್ಥಳಗಳಲ್ಲಿ ದಿನನಿತ್ಯ ಶಾಖಾ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ವಯಂಸೇವಕರು ಪ್ರತಿವಾರ ೩೦,೦೦೦ ಸ್ಥಳಗಳಲ್ಲಿ ಸಭೆ (ಮಿಲನ್)ಗಳನ್ನು ನಡೆಸುತ್ತಾರೆ
ರಾಷ್ಟ್ರೀಯ ಪ್ರeಯ ಜನರ ಒಂದು ಸಣ್ಣ ಗುಂಪು ಬದ್ಧತೆಯಿಂದ ಕೆಲಸ ಮಾಡಿದರೆ ಜಗತ್ತನ್ನೇ ಬದಲಿಸಬಹುದು ಎಂದು ಸಾಂಸ್ಕೃತಿಕ ಮಾನವಶಾಸಜ್ಞ ಮಾರ್ಗರೇಟ್ ಮಿಡ್ ಹೇಳುತ್ತಾರೆ. ಡಾ. ಕೇಶವ ಬಲಿರಾಮ್ ಹೆಡಗೆವಾರ್ ಅವರ ನೇತೃತ್ವದಲ್ಲಿ ಆರಂಭವಾದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಾಧನೆ ಗಮನಿಸಿದಾಗ ಮಾರ್ಗರೇಟ್ ಅವರು ಹೇಳಿದ ಮಾತು ಸರಿ ಅನ್ನಿಸುತ್ತದೆ.
ಮಹಾರಾಷ್ಟ್ರದ ನಾಗಪುರ ಮನೆಯೊಂದರಲ್ಲಿ ಕೇವಲ ಒಂಬತ್ತು ಜನ ಸಮಾನ ಮನಸ್ಕರು ಸೇರಿ 1925 ಸೆಪ್ಟೆಂಬರ್ 27ರ ವಿಜಯದಶಮಿ ದಿನದಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪಿಸಿ ದರು. ಪ್ರಖರ ರಾಷ್ಟ್ರೀಯ ಭಕ್ತಿ ಹೊಂದಿದ್ದ, ಜನಾನುರಾಗಿ ವೈದ್ಯರಾಗಿದ್ದ ಡಾ.ಹೆಡಗೆವಾರ ಅವರನ್ನು ಸರಸಂಘಸಂಚಾಲಕರನ್ನಾಗಿ ಆಯ್ಕೆ ಮಾಡಲಾಯಿತು. ಈಗ ಈ ಸಂಘಟನೆಗೆ ನೂರರು ಸಂಭ್ರಮ.
ಇದನ್ನೂ ಓದಿ: Dr Karaveera Prabhu Kyalakonda Column: ಕ್ಯಾನ್ಸರ್ ಎಂಬ ಮಾರಿ: ಬದಲಾದ ಜೀವನಶೈಲಿಯ ಪ್ರತಿಬಿಂಬ
ಆರ್ ಎಸ್‌ಎಸ್‌ನ ಅಗಾಧ ಬೆಳವಣಿಗೆಯನ್ನು ಅರಿತುಕೊಳ್ಳಲು ಈ ಅಂಕಿ ಅಂಶಗಳನ್ನು ಗಮನಿಸ ಬಹುದು. ದೇಶದಾದ್ಯಂತ 75000 ಸ್ಥಳಗಳಲ್ಲಿ ದಿನನಿತ್ಯ ಶಾಖಾ ಕಾರ್ಯಕ್ರಮಗಳು ನಡೆಯುತ್ತಿವೆ. ಸ್ವಯಂಸೇವಕರು ಪ್ರತಿವಾರ 30000 ಸ್ಥಳಗಳಲ್ಲಿ ಸಭೆ (ಮಿಲನ್)ಗಳನ್ನು ನಡೆಸುತ್ತಾರೆ. 30 ದೇಶಗಳಲ್ಲಿ ಶಾಖೆಗಳು ಕೆಲಸ ಮಾಡುತ್ತಿವೆ.
ಇದಲ್ಲದೆ ಲಕ್ಷಾಂತರ ಸ್ಥಳಗಳಲ್ಲಿ ಜನಸೇವಾಕಾರ್ಯಗಳನ್ನು ನಡೆಸುವ ಮೂಲಕ ದೇಶದ ಅತೀ ದೊಡ್ಡ ಸಂಸ್ಥೆಯಾಗಿ ರೂಪುಗೊಂಡಿದೆ. ನಮ್ಮ ಜನರಲ್ಲಿ ಭಾರತದ ರಾಷ್ಟ್ರೀಯ ನೀತಿಯ ಬಗ್ಗೆ ಭಕ್ತಿಯನ್ನು ಬೆಳೆಸುವುದು, ಸಾಮಾಜಿಕ ಜವಾಬ್ದಾರಿ ಹೊರಲು ಅವರ ದೇಹ ಸದೃಢವಾಗಿರಲು ತರಬೇತಿ ನೀಡುವುದು, ನಮ್ರತೆ, ಪ್ರೀತಿ, ಉತ್ತಮ ಚಾರಿತ್ಯ್ರ ರೂಪಿಸುವುದು, ಸದ್ಗುಣಗಳನ್ನು ಬೆಳೆಸು ವುದು ಆರ್‌ಎಸ್‌ಎಸ್‌ನ ಮುಖ್ಯ ಧ್ಯೇಯ. ಭಾರತಕ್ಕೆ ಸ್ವಾತಂತ್ರ್ಯ ದೊರಕುವ 22 ವರ್ಷ ಪೂರ್ವದಲ್ಲಿ ಆರ್‌ಎಸ್‌ಎಸ್ ಜನ್ಮವಾಯಿತು.
ಬ್ರಿಟಿಷರ ವಸಾಹತು ಆಡಳಿತದಿಂದ ಬಿಡುಗಡೆಯಾಗಬೇಕಾದರೆ ಸ್ವಜಾಗೃತೆ ಆಗಬೇಕು. ಸ್ವರಾಜ್ಯ, ಸ್ವದೇಶ, ಸ್ವಧರ್ಮ ಇವು ಜಾಗೃತವಾಗದೆ ಸ್ವಾತಂತ್ರ್ಯ ಪಡೆಯುವುದು ಸಾಧ್ಯವಿಲ್ಲ ಎಂಬುದು ಆರ್‌ಎಸ್‌ಎಸ್ ಸಂಘಟಕರ ಗಟ್ಟಿಯಾದ ನಂಬಿಕೆಯಾಗಿತ್ತು. ಈ ದೃಷ್ಟಿಕೋನವನ್ನು ಕಾರ್ಯಸೂಚಿ ಯಾಗಿ ಮಾಡಿಕೊಂಡು ಅವರೆಲ್ಲ ಮುನ್ನಡೆದರು.
ವ್ಯಕ್ತಿಯನ್ನು ದಮನ ಮಾಡಿ ಸಮಾಜ ಕಟ್ಟುವುದು ಆಗುವುದಿಲ್ಲ. ವ್ಯಕ್ತಿ ಮುಖ್ಯ ಎಂದು ಡಾ. ಹೆಡಗೆವಾರ್ ಪ್ರತಿ ಸಭೆಯಲ್ಲಿ ಹೇಳುತ್ತಿದ್ದರು. ಅದಕ್ಕಾಗಿ ಯುವಕರನ್ನು ಹುರಿದುಂಬಿಸುವದಕ್ಕೆ ಆದ್ಯತೆ ನೀಡಿದರು. ಸ್ವಾತಂತ್ರ್ಯ ಚಳುವಳಿಯ ಕಾಲಘಟ್ಟದಲ್ಲಿ ಯುವಕರಲ್ಲಿ ಧೈರ್ಯ ತುಂಬುವ, ರಾಷ್ಟ್ರೀಯ ಪ್ರಜ್ಞೆ ಮೂಡಿಸುವ ಕೆಲಸವನ್ನು ಬಹಳ ಶಿಸ್ತಿನಿಂದ ಸಂಘವು ಮಾಡಿತು.
ಹೆಡಗೆವಾರ ಅವರು 1937ರಲ್ಲಿ ಚಿಕ್ಕೋಡಿಗೆ ಭೇಟಿ ನೀಡಿದ್ದು ವಿಶೇಷ ಸಂಗತಿ. ಅವರಿಗೆ ಕನ್ನಡ ಚೆನ್ನಾಗಿ ಅರ್ಥವಾಗುತ್ತಿತ್ತು. ಅವರು 1940ರಲ್ಲಿ ಕೇವಲ 51 ವರ್ಷ ವಯಸ್ಸಿಗೆ ಅಸ್ತಂಗತರಾದರು. ಅಲ್ಪ ಕಾಲದಲ್ಲಿ ಸಂಘವನ್ನು ಸುಸಂಪzಗಿ ಕಟ್ಟಿದ್ದು ಅವರ ಘನ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿದೆ. ಅವರ ನಂತರ ಕ್ರಮವಾಗಿ ಶ್ರೀ ಗುರೂಜಿ ಗೋಳವಳ್ಕರ್, ಬಾಳಾಸಾಹೇಬ್ ದೇವರಸ್, ರಾಜೇಂದ್ರ ಸಿಂಗ್, ಕು.ಸಿ.ಸುದರ್ಶನ್ ಜೀ ಸಂಘವನ್ನು ಜವಾಬ್ದಾರಿಯಿಂದ ಮುನ್ನಡೆಸಿದ್ದಾರೆ. ಋಷಿ ಸಮಾನ ಜೀವನ ನಡೆಸಿದ ಇವರ ಕೊಡುಗೆ ಅಪಾರ.
2009ರಲ್ಲಿ ಸರಸಂಘ ಸಂಚಾಲಕರಾಗಿರುವ ಡಾ. ಮೋಹನ್ ಭಾಗವತ್ ಅವರು ಸಂಘವನ್ನು ಬಹು ವ್ಯವಸ್ಥಿತವಾಗಿ ಮುನ್ನಡೆಸುತ್ತಿದ್ದಾರೆ. ಅಧಿಕಾರ ಕೇಂದ್ರೀಕರಣವಾಗಬಾರದು, ಅದು ಸದಾ ವಿಕೇಂದ್ರೀಕೃತವಾಗಿರಬೇಕು. ಜನರ ಮಧ್ಯೆ ಅಧಿಕಾರ ಇರಬೇಕು. ಬಡ ತನ, ನಿರುದ್ಯೋಗ, ಅಸ್ಪೃಶ್ಯ ತೆ ತೊಲಗಬೇಕು ಎಂಬ ವಿಚಾರವನ್ನು ಭಾಗವತ್ ಸ್ಪಷ್ಟವಾಗಿ ಪ್ರತಿಪಾದಿಸುತ್ತಿದ್ದಾರೆ.
ಇಲ್ಲಿ ಹೇಳಲೇಬೇಕಾದ ಮುಖ್ಯ ಅಂಶ ಎಂದರೆ, ಯಾವುದೇ ಸಾರ್ವಜನಿಕ ನಿಧಿಯ ಮೇಲೆ ಅವಲಂಬಿತವಾಗದೆ ಸಂಘ ನಡೆಯುತ್ತದೆ. ಸ್ವಯಂ ಸೇವಕರೇ ಸಂಸ್ಥೆಯನ್ನು ಕಟ್ಟಿದ್ದಾರೆ ಮತ್ತು ತಮ್ಮ ತನು-ಮನ-ಧನ ಅರ್ಪಿಸಿ ಯಾವುದೇ ಫಲಾಪೇಕ್ಷೆ ಇಲ್ಲದೆ ಮುನ್ನಡೆಸುತ್ತಿದ್ದಾರೆ. ದೇಶವನ್ನು ಉತ್ತವಾಗಿ ಮುನ್ನಡೆಸುವಲ್ಲಿ ಮಹಿಳೆಯರ ಪಾತ್ರ ಮುಖ್ಯ ಎಂದು ಸಂಘ ನಂಬಿದೆ.
ರಾಷ್ಟ್ರ ಸೇವಿಕಾ ಸಮಿತಿ, ಭಾರತೀಯ ವಿದ್ಯಾರ್ಥಿ ಪರಿಷತ್ ಸೇರಿ ಇನ್ನಿತರ ಸಂಘಟನೆಗಳ ಮೂಲಕ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹಿಳೆಯರು ಭಾಗವಹಿಸುವಂತೆ ಸಂಘಟನೆ ಪ್ರೇರೇಪಿಸುತ್ತಿದೆ. ಆರ್‌ಎಸ್‌ಎಸ್ ಸಂಘಟನೆಯ ಬಗ್ಗೆ ಕೆಲವು ವಿರೋಧಿಗಳು ಅಪಪ್ರಚಾರ ಮಾಡುತ್ತಲೇ ಬಂದಿದ್ದಾರೆ. ಇದು ಎಲ್ಲ ಸಂಘಟನೆಗಳು ಎದುರಿಸಬೇಕಾದ ಅನಿವಾರ್ಯತೆ.
ಆರ್‌ಎಸ್‌ಎಸ್ 100 ವರ್ಷದ ಹಾದಿಯಲ್ಲಿ ಮೂರು ಬಾರಿ ನಿಷೇಧಕ್ಕೆ ಒಳಗಾಗಿದೆ. ಅದು ತನ್ನ ಶಕ್ತಿ ಮತ್ತು ಸಾಮರ್ಥ್ಯದಿಂದ ಮತ್ತೆ ಮತ್ತೆ ಫೀನಿP ಪಕ್ಷಿಯಂತೆ ಎದ್ದು ನಿಲ್ಲುತ್ತಾ ಬಂದಿದೆ. ಸಂಘ ಕಾಲಕಾಲಕ್ಕೆ ತನ್ನ ವಿಚಾರ ಧಾರೆ ಯನ್ನು ಪರಿಷ್ಕರಣೆಗೆ ಒಳಪಡಿಸುತ್ತದೆ. ಜನಪರವಾದ ಯೋಗ್ಯ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತದೆ. ಈ ಕಾರಣಕ್ಕೆ ಸಂಘ ಈಗಲೂ ದೇಶ ಕಟ್ಟುವ ಕಾರ್ಯ ದಲ್ಲಿ ಸಕ್ರಿಯವಾಗಿದೆ. ರಾಮಮಂದಿರ ನಿರ್ಮಾಣದಲ್ಲಿ ಸಂಘ ಮಹತ್ವದ ಪಾತ್ರ ವಹಿಸಿದೆ.
ಭಾರತೀಯರ ಅಸ್ಮಿತೆ, ಘನತೆ ಕಾಪಾಡುವುದು ಆ ಮೂಲಕ ಆತ್ಮನಿರ್ಭರ ಭಾರತ ನಿರ್ಮಿಸುವುದು ಈ ಹೋರಾಟದ ಗುರಿಯಾಗಿದೆ. ಆರ್‌ಎಸ್‌ಎಸ್ ಸಂಘಟನೆ ಭೂಕಂಪ, ಕರೋನಾ ಪಿಡುಗು, ಅತಿವೃಷ್ಟಿ, ಅನಾವೃಷ್ಟಿ, ನೈಸರ್ಗಿಕ ವಿಕೋಪಗಳ ತೊಂದರೆ ಉಂಟಾದಾಗ ಸೇವೆಗೆ ಧಾವಿಸುತ್ತದೆ. ಸೇವೆಯೇ ಶಕ್ತಿ ಎಂದು ಭಾವಿಸಿ ರಾಷ್ಟ್ರೀಯ ಕಾರ್ಯದಲ್ಲಿ ತೊಡಗಿದೆ. ಭಾರತೀಯ ಜನತಾ ಪಕ್ಷ ಸಮರ್ಪಣಾ ಮನೋಭಾವದಿಂದ ಕಾರ್ಯ ಮಾಡಲಿ ಎಂಬುದು ಆರ್‌ಎಸ್‌ಎಸ್‌ನ ಧ್ಯೇಯ.
ಲೇಖಕರು ಕೈಗಾರಿಕೋದ್ಯಮಿಗಳು