ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ಎವ್ವೆರಿ ಡೇ ಈಸ್‌ ನಾಟ್‌ ಫ್ರೈಡೇ

ಸಿಂಗಲ್ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಎರಡೂ ಕಡೆ ಬುಕ್ಕಿಂಗ್ ಪರಿಸ್ಥಿತಿ ತೀರಾ ಅಧ್ವಾನವಾಗಿದೆ. ಎಲ್ಲ ಕಡೆ ಹಸಿರು ಬಣ್ಣವೇ ಕಾಣಿಸುತ್ತಿದ್ದು, ಬುಕ್ಕಿಂಗ್ʼಗಳೇ ಇಲ್ಲದೆ ಸಿನಿಮಾ ನಲುಗಿದೆ. ಹಾಗಾಗಿ ‘ಡೆವಿಲ್’ ಸಿನಿಮಾ ‘ಸಾರಥಿ’ ಥರ ಆಗದೇ ಅವರ ಇನ್ನೊಂದು ಫ್ಲಾಪ್ ಚಿತ್ರ ‘ಕ್ರಾಂತಿ’ ಥರ ಆಗಿದೆ. ಹಾಗಾ ಗಿಯೇ “ಹಸಿರುಕ್ರಾಂತಿ ಆಗ್ತಾ ಇದೆ, ಎವ್ವೆರಿ ಡೇ ಈಸ್ ನಾಟ್ ‘ಫ್ರೈಡೇ’.... " ಅಂತ ಅವರ ವಿರೋಧಿಗಳು ಆಡಿಕೊಳ್ಳಲು ಅನುಕೂಲವಾದಂತಿದೆ.

ತುಂಟರಗಾಳಿ

ಸಿನಿಗನ್ನಡ

ದರ್ಶನ್ ಅಭಿನಯದ ‘ಡೆವಿಲ್’ ಚಿತ್ರ ಬಿಡುಗಡೆ ಆಗಿದೆ. ದರ್ಶನ್ ಜೈಲಿನಲ್ಲಿದ್ದಾಗ ಬಿಡುಗಡೆ ಆಗ್ತಾ ಇರೋ ಚಿತ್ರ ಅಂತಾನೇ ಇದಕ್ಕೆ ಹೆಚ್ಚಿನ ಪ್ರಚಾರ ಸಿಕ್ಕಿತ್ತು. ಹಿಂದೆ ಅವರು ಜೈಲಿನಲ್ಲಿ ಇದ್ದಾಗ ಬಿಡುಗಡೆ ಆಗಿದ್ದ ‘ಸಾರಥಿ’ ಚಿತ್ರ ಸೂಪರ್‌ಹಿಟ್ ಆಗಿತ್ತು. ಹಾಗಾಗಿ ‘ಡೆವಿಲ್’ ಕೂಡಾ ಹಿಟ್ ಆಗುತ್ತೆ ಅಂತ ಅವರ ಅಭಿಮಾನಿಗಳು ನಂಬಿಕೊಂಡಿದ್ದರು. ಆದರೆ ಸಾರಥಿ ಚಿತ್ರದ ಮಟ್ಟಕ್ಕೆ ಹಿಟ್ ಆಗೋ ದಿರಲಿ, ಅದರ ಹತ್ತಿರಕ್ಕೆ ಹೋಗೋ ಯಾವ ಲಕ್ಷಣಗಳನ್ನೂ ಡೆವಿಲ್ ತೋರಿಸುತ್ತಿಲ್ಲ. ಅದಕ್ಕೆ ಕಾರಣ ಚಿತ್ರಮಂದಿರಗಳು ಎರಡನೇ ದಿನವೇ ಭಣಗುಟ್ಟುತ್ತಿರೋದು. “ನಮ್ಮ ಬಾಸ್ ಸಿನಿಮಾ ಗೆಲ್ಲಿಸೋಕೆ ನಾವೇ ಸಾಕು" ಎಂದೆ ಡೈಲಾಗ್ ಹೊಡೆಯುತ್ತಿದ್ದ ಅವರ ಅಭಿಮಾನಿಗಳು ಈಗ ತಣ್ಣಗಾ ಗಿದ್ದಾರೆ. ಕೇವಲ ಅಭಿಮಾನಿಗಳು ನೋಡಿದ ಮಾತ್ರಕ್ಕೆ ಯಾವ ಸಿನಿಮಾವೂ ಹಿಟ್ ಆಗಲ್ಲ ಅನ್ನೋದು ಈ ಮೂಲಕ ಪ್ರೂವ್ ಆಗಿದೆ. ‌

ಸಿಂಗಲ್ ಥಿಯೇಟರ್ ಮತ್ತು ಮಲ್ಟಿಪ್ಲೆಕ್ಸ್ ಎರಡೂ ಕಡೆ ಬುಕ್ಕಿಂಗ್ ಪರಿಸ್ಥಿತಿ ತೀರಾ ಅಧ್ವಾನವಾಗಿದೆ. ಎಲ್ಲ ಕಡೆ ಹಸಿರು ಬಣ್ಣವೇ ಕಾಣಿಸುತ್ತಿದ್ದು, ಬುಕ್ಕಿಂಗ್ʼಗಳೇ ಇಲ್ಲದೆ ಸಿನಿಮಾ ನಲುಗಿದೆ. ಹಾಗಾಗಿ ‘ಡೆವಿಲ್’ ಸಿನಿಮಾ ‘ಸಾರಥಿ’ ಥರ ಆಗದೇ ಅವರ ಇನ್ನೊಂದು ಫ್ಲಾಪ್ ಚಿತ್ರ ‘ಕ್ರಾಂತಿ’ ಥರ ಆಗಿದೆ. ಹಾಗಾಗಿಯೇ “ಹಸಿರುಕ್ರಾಂತಿ ಆಗ್ತಾ ಇದೆ, ಎವ್ವೆರಿ ಡೇ ಈಸ್ ನಾಟ್ ‘ಫ್ರೈಡೇ’.... " ಅಂತ ಅವರ ವಿರೋಧಿಗಳು ಆಡಿಕೊಳ್ಳಲು ಅನುಕೂಲವಾದಂತಿದೆ.

ದರ್ಶನ್ ಅಭಿಮಾನಿಗಳು ನೋಡದೇ ಇದ್ರೆ ಯಾವ ಕನ್ನಡ ಸಿನಿಮಾನೂ ಹಿಟ್ ಆಗಲ್ಲ ಅಂತಿದ್ದ ಅವರ ಅಭಿಮಾನಿಗಳು ಈಗ ಅವರ ಬಾಸ್ ಚಿತ್ರವನ್ನೇ ಉಳಿಸಿಕೊಳ್ಳಲು ಕಷ್ಟಪಡ್ತಾ ಇದ್ದಾರೆ ಅನ್ನೋದು ವಿಪರ್ಯಾಸ.

ಇದನ್ನೂ ಓದಿ: Hari Paraak Column: ಬಾಲಿವುಡ್‌ ಖಾನ್‌ ಗಳ ʼಕಿವಿʼಮಾತು: ʼಕಾನ್‌ʼ ಕೀ ಬಾತ್‌

ಲೂಸ್‌ ಟಾಕ್-ಯೋಗಿ ಆದಿತ್ಯನಾಥ್

ನಿಮ್ಮನ್ನ ‘ಸ್ವಾಮಿ’ ಅಂತ ಕರಿಬೇಕಾ, ‘ಸರ್’ ಅಂತ ಕರಿಬೇಕಾ ಅನ್ನೋದೇ ಕನ್ ಫ್ಯೂಷನ್.

- ಮುಖ್ಯಮಂತ್ರಿ ಆಗಿರೋದ್ರಿಂದ ಸರ್ ಅನ್ಬೋದು. ಆದ್ರೆ, ಹೇಳಿ ಕೇಳಿ ಶಬರಿಮಲೆ ಸೀಸನ್ನು, ಹಂಗಾಗಿ, ಸ್ವಾಮಿ ಅಂತ ಕರೆದ್ರೂ ಅಡ್ಡಿಯಿಲ್ಲ.

ಸರಿ, ನಿಮ್ಮ ಯುಪಿ ದೇಶದ ನಂಬರ್ ಒನ್ ಅಂತ ಎಲ್ಲಾ ಕಡೆ ಜಾಹೀರಾತು ಕೊಡ್ತಾ ಇದ್ದೀರಲ್ಲ, ಇದು ನಿಜ್ವಾಗ್ಲೂ ನಿಜನಾ?

- ನಂಬರ್ ಒನ್ ಅಂತ ಹೇಳಿದ್ದೀವಿ, ಯಾವುದರಲ್ಲಿ, ಯಾವ ಕಡೆಯಿಂದ ಅಂತೆ ಮಾತ್ರ ಕೇಳಬೇಡಿ.

ಆದ್ರೂ, ಯುಪಿಯಲ್ಲಿ ಕ್ರೈಮ್ ರೇಟ್ ಜಾಸ್ತಿ ಇದೆ ಅಂತ ವರದಿಗಳು ಹೇಳ್ತಾವಲ್ಲ?

- ಏನ್ ಮಾಡೋದು ಅಲಹಾಬಾದ್ ಹೆಸರನ್ನು ‘ಪ್ರಯಾಗ್‌ರಾಜ್’ ಅಂತ ಬದಲಾವಣೆ ಮಾಡಿದ ಮೇಲೆ, ನಮ್ಮ ಆಡಳಿತ ‘ಪ್ರಯಾಸ್‌ರಾಜ್’ ಆಗಿಬಿಟ್ಟಿದೆ.

ಅದ್ಸರಿ, ಯುಪಿಯಲ್ಲಿ ಏನ್ ತೊಂದರೆ ಆದ್ರೂ ಅದಕ್ಕೆ ಹಿಂದಿನ ಸರಕಾರಗಳೇ ಕಾರಣ ಅಂತ ಹೇಳ್ತಾ ಇರ್ತೀರಲ್ಲ?

- ಏನ್ ಮಾಡೋದು, ಹಿಸ್ಟರಿ ಕ್ರಿಯೇಟ್ ಮಾಡೋದು ಕಷ್ಟ, ಅದಕ್ಕೆ ತಿದ್ದುತ್ತಾ ಇದ್ದೀವಿ.

ಸರಿ, ನೀವು ಪೇಪರ್ ಓದ್ತೀರಾ ಅಂತ ಗೊತ್ತು. ಪೇಪರ್‌ಗಳಲ್ಲಿ ನಿಮ್ಮ ಇಷ್ಟದ ಸೆಕ್ಷನ್ ಯಾವುದು?

- ಹೆಸರು ಬದಲಾವಣೆ

(ಕಾಲ್ಪನಿಕ ಸಂದರ್ಶನ)

Darshan: ʻದಿ ಡೆವಿಲ್ʼ ಫ್ಯಾನ್ಸ್‌ ಶೋನಿಂದಲೇ ಹರಿದುಬಂತು ಕೋಟಿ ಕೋಟಿ ಹಣ!

ನೆಟ್‌ ಪಿಕ್ಸ್

ಖೇಮು ಮತ್ತು ಖೇಮುಶ್ರೀ ಯಾವುದೋ ವಿಷಯಕ್ಕೆ ಮುನಿಸಿಕೊಂಡು ಮನೆಯಲ್ಲಿ ದೊಡ್ಡ ಜಗಳ ಆಗಿತ್ತು. ಖೇಮು ಕೂಡಾ ಅವತ್ತು ತುಂಬಾ ಸಿಟ್ಟಲ್ಲಿದ್ದ. ಹಂಗಾಗಿ ಖೇಮುಶ್ರೀಯನ್ನು ಬಾಯಿಗೆ ಬಂದಂತೆ ಬೈದಿದ್ದ. ಖೇಮುಶ್ರೀ ಏನೂ ಕಡಿಮೆ ಇರಲಿಲ್ಲ. ಗಂಡನ ಮೇಲೆ ತಿರುಗಿ ಬಿದ್ದು ಅವನನ್ನು ಎಲ್ಲ ರೀತಿಯಲ್ಲೂ ಹೀಯಾಳಿಸಿದ್ದಳು. ಅದಕ್ಕೆ ಖೇಮುಗೆ ಸಿಕ್ಕಾಪಟ್ಟೆ ಬೇಜಾರಾಗಿ ಎದ್ದು ಗಾಡಿ ತಗೊಂಡು ಹೊರಗೆ ಹೋದ. ಹೋದ್ರೆ ಹೋಗ್ಲಿ ಅಂತ ಖೇಮುಶ್ರೀ ಸುಮ್ಮನಾದಳು. ‌

ಆದರೆ, ಎಷ್ಟೊತ್ತಾದರೂ ಖೇಮು ವಾಪಸ್ ಬರಲಿಲ್ಲ. ಊಟದ ಟೈಮಿಗೆ ಬರ್ತಾನೆ ಅಂತ ಕಾದು ಕೂತಿದ್ದ ಖೇಮುಶ್ರೀಗೆ ಕೊಂಚ ಗಾಬರಿ ಆಯ್ತು. ಹಂಗಾಗಿ ಗಂಡನಿಗೆ ಕಾಲ್ ಮಾಡಿದಳು. ಮೊದಲೆ ರಡು ಸಲ, ಖೇಮು ಕಾಲ್ ರಿಸೀವ್ ಮಾಡಲಿಲ್ಲ. ಆಮೇಲೆ ಮೂರ್ನಾಲ್ಕು ಸಲ ಆದ್ಮೇಲೆ ಕಾಲ್ ತೆಗೆದು ಖೇಮು “ಏನು?" ಅಂದ. ಸದ್ಯ ಅಂತ ಸಮಾಧಾನಪಟ್ಟುಕೊಂಡ ಖೇಮುಶ್ರೀ, “ಎಲ್ಲಿದ್ದೀರಾ?" ಅಂತ ಕೇಳಿದಳು.

ಅದಕ್ಕೆ ಖೇಮು ಸ್ವಲ್ಪ ಎಮೋಷನಲ್ ಆಗಿ ಮಾತನಾಡತೊಡಗಿದ- “ನಿಂಗೆ ನೆನಪಿದೆಯಾ, 5 ವರುಷದ ಹಿಂದೆ ಸಿಟಿ ಸೆಂಟರ್‌ನಲ್ಲಿರೋ ಜ್ಯೂವೆಲ್ಲರ್ಸ್ ಒಂದಕ್ಕೆ ಹೋಗಿದ್ವಿ, ಅಲ್ಲಿ ನಿಂಗೊಂದು, ಡೈಮಂಡ್ ನೆಕ್ಲೇಸ್ ತುಂಬಾ ಇಷ್ಟ ಆಗಿತ್ತು". ಖೇಮುಶ್ರೀ ಎಕ್ಸೈಟ್ ಆಗಿ “ಹೌದು, ಹೌದು" ಅಂದ್ಳು. ಖೇಮು ಮುಂದುವರಿಸಿದ- “ಆದ್ರೆ ಅವತ್ತು ನನ್ನತ್ರ ದುಡ್ಡಿರಲಿಲ್ಲ. ಮುಂದೊಂದಿನ ಏನೇ ಆಗ್ಲಿ ಆ ನೆಕ್ಲೇಸ್‌ನ ನಾನು ನಿಂಗೆ ಕೊಡಿಸೇ ಕೊಡಿಸ್ತೀನಿ ಅಂತ ಹೇಳಿದ್ದೆ".

ಖೇಮುಶ್ರೀ ಇನ್ನೂ ಎಕ್ಸೈಟ್ ಆಗಿ “ಹೌದು, ನಿಜ, ತುಂಬಾ ಚೆನ್ನಾಗಿ ನೆನಪಿದೆ" ಅಂದ್ಳು. ಅದಕ್ಕೆ ಖೇಮು “ಆ ಜ್ಯೂವೆಲ್ಲರಿ ಮುಂದಿರೋ ಬಾರಲ್ಲಿ ಕುಂತು ಕುಡಿತಾ ಇದ್ದೀನಿ. ಏನ್ ಕಾಲ್ ಮಾಡಿ ದ್ದು?" ಅಂತ ರೇಗಿದ.

ಲೈನ್‌ ಮ್ಯಾನ್

ಲೈಫಲ್ಲಿ ಏನೂ ಸಾಧನೆ ಮಾಡಿರದ ತಮ್ಮ ಮಕ್ಕಳನ್ನ ಬಾಲಿವುಡ್ ಮಂದಿ ಹೆಂಗೆ ಬಯ್ತಾರೆ?

- ಆ ಹೀರೋನ ನೋಡಿ ಕಲ್ತ್ಕೋ, ನಿನ್ ವಯಸ್ಸಿಗೆ ಮೂರ್ ಮೂರ್ ಮದ್ವೆ ಆಗಿದ್ದ ಅವ್ನು

ಹಂಗಾದ್ರೆ ಸಲ್ಮಾನ್ ಖಾನ್ ಕಥೆ?

- ಅವ್ನಿಗೆ ಅವ್ನ್ ಅಪ್ಪ ಅಮ್ಮನೇ ಬಯ್ತಾರೆ, “ನಿನ್ ಜತೆಗಿದ್ದ ‘ಹುಡಿಗೀರಿಗೆ’ ಮದ್ವೆ ಆಗಿ ಮಕ್ಕಳಾಯ್ತು, ನಿಂದ್ಯಾವಾಗ್ಲೋ?"

ಕಿವಿ ಚುಚ್ಚುವವರ ಕೆಲಸಕ್ಕೆ ಏನಂತಾರೆ?

- ಇಯರ್ ರಿಂಗ್ ಏಯ್ಡ್‌

ಡಿಕ್ಷನರಿಗೆ ಇನ್ನೊಂದು ಹೆಸರು-

‘ಅರ್ಥ’ ಶಾಸ್ತ್ರ

ಅಮೆರಿಕಕ್ಕೆ ಸಂಬಂಧ ಪಟ್ಟ ಸುದ್ದಿ

- ‘ಸ್ಟೇಟ್ಸ್’ ಲೆವೆಲ್ ಸುದ್ದಿ

ಒನ್ ಡೇ ಮ್ಯಾಚಲ್ಲಿ ಸೆಂಚುರಿ ಹೊಡೆದು ಟೆಸ್ಟ್ ಮ್ಯಾಚಲ್ಲಿ ಸೊನ್ನೆಗೆ ಔಟಾಗೋ ಬ್ಯಾಟ್ಸ್ ಮನ್ ನೋಡಿ ಹೇಳೋ ಮಾತು‌

- ಎವ್ವೆರಿ ಡೇ ಈಸ್ ನಾಟ್ ಒನ್ ಡೇ

‘ಸಿನಿಮಾರಂಗ’ದಲ್ಲಿ ಒಂದು ಸೂಪರ್‌ಹಿಟ್ ಕೊಟ್ಟು ನಂತರದ ಸಿನಿಮಾ ಫ್ಲಾಪ್ ಆದ್ರೆ ಜನ ಏನಂತಾರೆ?

- ಎವ್ವೆರಿ ಡೇ ಈಸ್ ನಾಟ್ ‘ಫ್ರೈಡೇ’

ಕಾಲೇಜಿನಲ್ಲಿ ವಿದ್ಯಾರ್ಥಿಗಳು ಡೆಸ್ಕ್ ಅಥವಾ ಬೆಂಚ್ ಮೇಲೆ ಬರೆಯುವ ಕವಿತೆಗಳು

- ಬೆಂಚ್‌ಮಾರ್ಕ್ ಸಾಹಿತ್ಯ

ಅಂಥ ಸಾಹಿತ್ಯ ಬರೆಯುವ ವಿದ್ಯಾರ್ಥಿಯನ್ನ ಏನಂತಾರೆ?

- ಡೆಸ್ಕ್ ಟಾಪ್ ಐಕಾನ್ ಹಾಸಿಗೆಯಲ್ಲಿ ಕಕ್ಕ ಮಾಡಿಕೊಳ್ಳೋ ಪುಟ್ಟ ಮಗನನ್ನು ಏನಂತಾರೆ?

- ‘ಮಲ’ ಮಗ

ಹರಿ ಪರಾಕ್‌

View all posts by this author