ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr N Someshwara Column: ಮಿಲಿಟರಿಯಿಂದ ತಾಯಂದಿರ ಆರೋಗ್ಯದವರೆಗೆ...

ಶಬ್ದ ಪ್ರಪಂಚವು ವಿಶಾಲವಾದದ್ದು. ನಾವು ಕೇಳುವ ಶಬ್ದಗಳ ವ್ಯಾಪ್ತಿ 20 ಹರ್ಟ್ಜ್ ಇಂದ 20000 ಹರ್ಟ್ಜ್‌ವರೆಗೆ ಮಾತ್ರ. 20 ಹರ್ಟ್ಜ್‌ಗಿಂತಲೂ ಕಡಿಮೆ ವ್ಯಾಪ್ತಿಯ ಶಬ್ದದ ಅಲೆಗಳಿಗೆ ‘ಅವಶ್ರವಣ ಅಲೆಗಳು’ ಅಥವಾ ‘ಇನ್- ಸೌಂಡ್’ ಎಂದು ಹೆಸರು. ಆನೆ, ಜಿರಾಫೆ, ಹಿಪ್ಪೋಪೊಟೋಮಸ್ ಮುಂತಾದ ಪ್ರಾಣಿಗಳು ಈ ವ್ಯಾಪ್ತಿಯಲ್ಲಿ ನಡೆಸುವ ಸಂವಹನವನ್ನು ನಾವು ಕೇಳಲಾರೆವು.

ಹಿಂದಿರುಗಿ ನೋಡಿದಾಗ

naasomeswara@gmail.com

ಅಲ್ಟ್ರಾಸೌಂಡ್ ಸಾಧನಗಳು 1960-80ರವರೆಗಿನ ಅವಧಿಯಲ್ಲಿ ಬಹಳ ದೊಡ್ಡ ಪ್ರಮಾಣ ದಲ್ಲಿ ಸುಧಾರಣೆಗೆ ಒಳಗಾದವು. ‘ಬಿ-ಮೋಡ್’ ಹಾಗೂ ‘ರಿಯಲ್ ಟೈಮ್ ಅಲ್ಟ್ರಾಸೌಂಡ್’ ಸಾಧನಗಳು ರೂಪುಗೊಂಡವು. ಈಗ ಭ್ರೂಣದ ರಚನೆಯನ್ನು ದ್ವಿ-ಆಯಾಮದಲ್ಲಿ ನೋಡು ವುದರ ಜತೆಯಲ್ಲಿ, ಭ್ರೂಣದ ವಿವಿಧ ಭಾಗಗಳನ್ನು ಹಾಗೂ ಅವುಗಳ ಕಾರ್ಯವನ್ನು ನೋಡಲು ಸಾಧ್ಯವಾಯಿತು. ಈ ಸಾಧನಗಳು ಮಾರುಕಟ್ಟೆಯಲ್ಲಿ ಮುಕ್ತವಾಗಿ ದೊರೆಯ ಲಾರಂಭಿಸಿದವು.

ಬ್ದ ಪ್ರಪಂಚವು ವಿಶಾಲವಾದದ್ದು. ನಾವು ಕೇಳುವ ಶಬ್ದಗಳ ವ್ಯಾಪ್ತಿ 20 ಹರ್ಟ್ಜ್ ಇಂದ 20000 ಹರ್ಟ್ಜ್‌ವರೆಗೆ ಮಾತ್ರ. 20 ಹರ್ಟ್ಜ್‌ಗಿಂತಲೂ ಕಡಿಮೆ ವ್ಯಾಪ್ತಿಯ ಶಬ್ದದ ಅಲೆಗಳಿಗೆ ‘ಅವಶ್ರವಣ ಅಲೆಗಳು’ ಅಥವಾ ‘ಇನ್- ಸೌಂಡ್’ ಎಂದು ಹೆಸರು. ಆನೆ, ಜಿರಾಫೆ, ಹಿಪ್ಪೋಪೊಟೋಮಸ್ ಮುಂತಾದ ಪ್ರಾಣಿಗಳು ಈ ವ್ಯಾಪ್ತಿಯಲ್ಲಿ ನಡೆಸುವ ಸಂವಹನವನ್ನು ನಾವು ಕೇಳಲಾರೆವು.

ಹಾಗೆಯೇ 20000 ಹರ್ಟ್ಜ್ ಮೀರಿದ ಶಬ್ದದ ಅಲೆಗಳಿಗೆ ‘ಅತಿಶ್ರವಣ ಅಲೆಗಳು’ ಅಥವಾ ‘ಅಲ್ಟ್ರಾ ಸೌಂಡ್’ ಎಂದು ಹೆಸರು. ಬಾವಲಿ, ತಿಮಿಂಗಲ, ಡಾಲಿನ್ ಮುಂತಾದ ಜೀವಿಗಳು ಈ ವ್ಯಾಪ್ತಿಯಲ್ಲಿ ಸಂವಹನವನ್ನು ನಡೆಸುತ್ತವೆ. ಅದನ್ನು ನಾವು ಕೇಳಲಾರೆವು.

ಲಜಾರೋ ಸ್ಪೆಲಾಂಜಿನಿ (1729-1799): ಓರ್ವ ಇಟಾಲಿಯನ್ ಜೀವವಿಜ್ಞಾನಿ ಹಾಗೂ ಅಂಗ ಕ್ರಿಯಾ ವಿಜ್ಞಾನಿಯಾಗಿದ್ದ ಇವನು ಆಹಾರ ಜೀರ್ಣಕ್ರಿಯೆ, ಸಂತಾನವರ್ಧನೆ ಹಾಗೂ ಪ್ರಾಣಿಗಳ ಸಂವೇ ದನಾ ಸಾಮರ್ಥ್ಯಗಳನ್ನು ಕುರಿತು ಅಧ್ಯಯನ ಮಾಡುತ್ತಿದ್ದ. ಬಾವಲಿಗಳು ಹೇಗೆ ಕಗ್ಗತ್ತಲಿ ನಲ್ಲಿ ಹಾರಾಡುತ್ತವೆ ಎನ್ನುವ ವಿಷಯದ ಬಗ್ಗೆ ಇವನಿಗೆ ಕುತೂಹಲವುಂಟಾಯಿತು.

ಹಾಗಾಗಿ ಅತ್ಯಂತ ತೆಳುವಾದ ಒಂದು ತಂತಿಯನ್ನು ಕಟ್ಟಿದ. ಬಾವಲಿಗಳನ್ನು ಹಾರಲು ಬಿಟ್ಟ. ಅವು ತಂತಿಗೆ ಡಿಕ್ಕಿ ಹೊಡೆಯದ ಹಾಗೆ ಹಾರಿದವು. ಇವು ಹೇಗೆ ಹಾರಿದವು ಎನ್ನುವುದನ್ನು ತಿಳಿಯಲು ಆತ 1793ರಲ್ಲಿ ಸರಣಿ ಪ್ರಯೋಗಗಳನ್ನು ಕೈಗೊಂಡ. ಇವು ಅತ್ಯಂತ ಕ್ರೂರ ಪ್ರಯೋಗಗಳಾಗಿದ್ದವು.

ಇದನ್ನೂ ಓದಿ: Dr N Someshwara Column: ಜೀವಗಳನ್ನು ಉಳಿಸುತ್ತಿರುವ ಪ್ರೇಮಪ್ರಸಂಗದ ಫಲ

- ಬಾವಲಿಗಳ ಕಣ್ಣನ್ನು ಬಟ್ಟೆಯಿಂದ ಕಟ್ಟಿದ. ಹಾರಲು ಬಿಟ್ಟ. ಅವು ತಂತಿಗೆ ತಾಗದೇ ಹಾರಾಡಿ ದವು. ಬಾವಲಿಗಳ ಕಣ್ಣನ್ನು ಕಿತ್ತು ಹಾಕಿ ಹಾರಲು ಬಿಟ್ಟ. ಅವು ಕಣ್ಣುಗಳು ಇಲ್ಲದಿದ್ದರೂ ಯಶಸ್ವಿ ಯಾಗಿ ಹಾರಾಟವನ್ನು ನಡೆಸಿದವು.

- ಸ್ಪೆಲಾಂಜಿನಿಗೆ ಬಾವಲಿಗಳು ತಮ್ಮ ಮೂಗು ಅಥವಾ ನಾಲಿಗೆಯ ನೆರವಿನಿಂದ ಹಾರುತ್ತಿರ ಬಹುದೇ ಎಂಬ ಗುಮಾನಿಯುಂಟಾಯಿತು. ಬಾವಲಿಗಳ ನಾಲಿಗೆಯನ್ನು ಕತ್ತರಿಸಿದ. ಮೂಗಿಗೆ ಬಟ್ಟೆಯನ್ನು ತುರುಕಿ ಹಾರಲು ಬಿಟ್ಟ. ಅವು ಸರಾಗವಾಗಿ ಹಾರಾಡಿದವು.

- ಸ್ಪರ್ಶಜ್ಞಾನದಿಂದ ಇವು ಹಾರಾಡುತ್ತಿರಬಹುದೇ ಎನ್ನುವ ಅನುಮಾನ ಬಂದಿತು. ಬಾವಲಿಗಳ ಮುಖ ಮತ್ತು ಮೈಕೈಗಳಲ್ಲಿ ಸ್ಪರ್ಶದರಿವು ತಿಳಿಯದಂತೆ ಕೆಲವು ಲೇಪನಗಳನ್ನು ಹಚ್ಚಿ ಬಿಟ್ಟ. ಅವು ಆರಾಮವಾಗಿ ಹಾರಾಡುತ್ತಿದ್ದವು.

- ಬಾವಲಿಗಳ ಕಿವಿಗೆ ಮೇಣವನ್ನು ಸುರಿದ. ಹಾರಲು ಬಿಟ್ಟ. ಅವು ಸರಾಗವಾಗಿ ಹಾರಲು ವಿಫಲ ವಾದವು. ಬಾವಲಿಗಳ ಕಿವಿಗಳನ್ನು ಶಸ್ತ್ರಚಿಕಿತ್ಸೆಯಿಂದ ನಾಶಪಡಿಸಿದ. ಬಾವಲಿಗಳು ತಂತಿಗೆ ತಾಗಿಸಿಕೊಂಡು ಕೆಳಗೆ ಬೀಳುತ್ತಿದ್ದವು. ಅವುಗಳ ಸರಾಗ ಹಾರಾಟ ಸಾಮರ್ಥ್ಯವು ಪೂರ್ಣವಾಗಿ ನಷ್ಟ ವಾಗಿತ್ತು.

- ಆಗ ಸ್ಪೆಲಾಂಜ಼ಿನಿ ‘ಬಾವಲಿಗಳು ಆರನೆಯ ಇಂದ್ರಿಯದ ನೆರವಿನಿಂದ ಹಾರುತ್ತವೆ’ ಎನ್ನುವ ತೀರ್ಮಾನಕ್ಕೆ ಬಂದ. ಸ್ಪೆಲಾಂಜ಼ಿನಿ, ಲೂಯಿಸ್ ಜೂರಿನ್, ಪಾಲೋ ಸ್ಪಾಂಡೆನಿ ಮುಂತಾದವರ ಪ್ರಯೋಗಗಳಿಂದ ಸೂರ್ತಿಯನ್ನು ಪಡೆದ ಡೊನಾಲ್ಡ್ ರೆಡ್ ಫೀಲ್ಡ್ ಗ್ರಿಫಿನ್ (1915-2003) ಹಾಗೂ ರಾಬರ್ಟ್ ಕಾರ್ಲ್ ಗ್ಯಾಲಂಬೋಸ್ (1914-2010) ಎಂಬ ವಿಜ್ಞಾನಿಗಳು, ‘ಬಾವಲಿಗಳು ತಮ್ಮ ಧ್ವನಿಪೆಟ್ಟಿಗೆಗಲ್ಲಿರುವ ಧ್ವನಿತಂತುಗಳಿಂದ (ವೋಕಲ್ ಕಾರ್ಡ್ಸ್) ಅತಿಶ್ರವಣ ಅಲೆಗಳನ್ನು ಉತ್ಪಾದಿ ಸುತ್ತವೆ. ಈ ಅಲೆಗಳು ಯಾವುದಾದರೂ ಅಡಚಣೆಗೆ ತಾಗಿ ಪ್ರತಿಫಲಿಸಿದಾಗ, ಅದನ್ನು ತಮ್ಮ ಕಿವಿ ಗಳಿಂದ ಆಲಿಸುವ ಬಾವಲಿಗಳು, ಆ ಅಡಚಣೆಗಳನ್ನು ತಪ್ಪಿಸಿಕೊಂಡು ಹಾರುತ್ತವೆ’ ಎನ್ನುವುದನ್ನು ಸಾಧಾರವಾಗಿ ನಿರೂಪಿಸಿದರು.

61 R

ಜಾಕ್ವೆಸ್ ಕ್ಯೂರಿ (1855-1941) ಮತ್ತು ಪಿಯರಿ ಕ್ಯೂರಿ (1859-1906): ಪ್ರಕೃತಿಯಲ್ಲಿ ಕೆಲವು ಜೀವಿ ಗಳು ಅತಿಶ್ರವಣ ಧ್ವನಿಯ ಅಲೆಗಳನ್ನು ಬಳಸಿ ತಮ್ಮ ಬದುಕನ್ನು ನಡೆಸುವುದನ್ನು ಮನ ಗಂಡ ಈ ವಿಜ್ಞಾನಿಗಳು, ಆ ಅತಿಶ್ರವಣ ಅಲೆಗಳನ್ನು ಕೃತಕವಾಗಿ ಉತ್ಪಾದಿಸಲು ಸ್ವಾಧ್ಯವೇ, ಹಾಗೆ ಉತ್ಪಾದಿಸಲು ಸಾಧ್ಯವಾದರೆ, ಅವನ್ನು ಸ್ವಯಮಿಚ್ಛೆಯಿಂದ ನಿಯಂತ್ರಿಸಲು ಸಾಧ್ಯವೇ ಎಂದು ಯೋಚಿಸಿದರು.

ಕೊನೆಗೆ ಕ್ಯೂರಿ ಸೋದರರು, ಬೆಣಚುಕಲ್ಲು ಅಥವಾ ಕ್ವಾರ್ಟ್ಜ್ ಹರಳುಗಳನ್ನು ಅಧಿಕ ಒತ್ತಡಕ್ಕೆ ಒಳಪಡಿಸಿದರು. ಆಗ ಆ ಹರಳುಗಳು ವಿದ್ಯುತ್ ವೋಲ್ಟೇಜನ್ನು ಉತ್ಪಾದಿಸುತ್ತವೆ ಎನ್ನುವುದನ್ನು ಗಮನಿಸಿದರು. ಹಾಗೆಯೇ ಹರಳುಗಳಿಗೆ ವಿದ್ಯುತ್ ವೋಲ್ಟೇಜನ್ನು ಹರಿಸಿದಾಗ, ಹರಳುಗಳು ಕಂಪಿಸ ಲಾರಂಭಿಸಿದವು. ಶಬ್ದದಲೆಗಳನ್ನು ಹೊರಡಿಸಿದವು. ಈ ಅಲೆಗಳು ಅತಿಶ್ರವಣ ಅಲೆಗಳಾಗಿದ್ದವು.

ಇದನ್ನು ‘ಪಿಯಾಜ಼ೋ ವಿದ್ಯುತ್ ಪರಿಣಾಮ’ (ಪಿಯಾಜ಼ೋ ಇಲೆಕ್ಟ್ರಿಕ್ ಎಫೆಕ್ಟ್) ಎಂದು ಕರೆದರು. ಸೋನಾರ್: ವಿಶ್ವದ ಮೊದಲನೆಯ ಮಹಾಯುದ್ಧದ ಕಾಲ ನೀರಿನಲ್ಲಿರುವ ಮಂಜುಗಡ್ಡೆಯನ್ನು ಗುರುತಿಸಲಾಗದೆ, 1912ರಲ್ಲಿ ಟೈಟಾನಿಕ್ ಹಡಗು ಮುಳುಗಿತ್ತು. ಹಾಗಾಗಿ ನೀರಿನ ಒಳಗಿರುವ ವಸ್ತುಗಳನ್ನು ಪತ್ತೆಹಚ್ಚುವ ಪ್ರಯತ್ನಗಳನ್ನು ಹಲವು ದೇಶದ ವಿಜ್ಞಾನಿಗಳು ಕೈಗೊಂಡಿದ್ದರು.

ಅವರಲ್ಲಿ ಫ್ರೆಂಚ್ ವಿಜ್ಞಾನಿ ಪಾಲ್ ಲಾಂಜೆವಿನ್ (1872-1946) ಮುಖ್ಯನಾದವನು. ಇವನು ಪಿಯಾಜ಼ೋ ಇಲೆಕ್ಟ್ರಿಕ್ ಪರಿಣಾಮವನ್ನು ಬಳಸಿಕೊಂಡು ಮೊದಲ ‘ಹೈಡ್ರೋಫೋನ್’ ರೂಪಿಸಿದ. ಇದು ಸಮುದ್ರದ ಒಳಗೆ ಸಾಗುವ ಜಲಾಂತರ್ಗತ ನೌಕೆಗಳನ್ನು ಪತ್ತೆ ಹಚ್ಚಲು ನೆರವಾಯಿತು. ಈ ತಂತ್ರಜ್ಞಾನವು ಸಾಕಷ್ಟು ಸುಧಾರಣೆಯಾಗಿ ‘ಸೋನಾರ್’ (ಸೌಂಡ್ ನ್ಯಾವಿಗೇಶನ್ ಆಂಡ್ ರೇಂಜಿಂಗ್) ಎಂಬ ಸಾಧನದ ಆವಿಷ್ಕಾರಕ್ಕೆ ಕಾರಣವಾಯಿತು. ಈ ಸಾಧನವು ಇಂದಿಗೂ ಬಳಕೆ ಯಲ್ಲಿದೆ.

ವೈದ್ಯಕೀಯ ಕ್ಷೇತ್ರ: ಮಿಲಿಟರಿಯಲ್ಲಿ ಬಳಕೆಯಲ್ಲಿದ್ದ ಅತಿಶ್ರವಣ ಅಲೆಗಳನ್ನು ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೆ, ಬಳಸಿದ ಕೀರ್ತಿ ಆಸ್ಟ್ರಿಯಾ ದೇಶದ ಡಾ.ಕಾರ್ಲ್ ಥಿಯೋಡರ್ ಡಸಿಕ್‌ಗೆ ಸಲ್ಲುತ್ತದೆ. ಈತ ‘ಹೈಪರ್ ಫೋನೋಗ್ರಫಿ’ ಎಂಬ ಸಾಧನದ ಮೂಲಕ, ಅತಿಶ್ರವಣದ ಅಲೆಗಳನ್ನು ಹಾಯಿಸಿ ಮಿದುಳಿನಲ್ಲಿರುವ ಕುಹುರಗಳ ವಿವರಗಳನ್ನು (ವೆಂಟ್ರಿಕಲ್ಸ್) ತಿಳಿಯುವ ಪ್ರಯತ್ನವನ್ನು ಮಾಡಿದ. ಈ ಸಾಧನವು ಇನ್ನೂ ಶೈಶವಾವಸ್ಥೆಯಲ್ಲಿತ್ತು.

ಹಾಗಾಗಿ ಅಂಥ ಉತ್ತಮ ಚಿತ್ರಗಳೇನೂ ಮೂಡಲಿಲ್ಲ. ಆದರೆ ಇಂಥ ಒಂದು ಸಾಧ್ಯತೆಯನ್ನು ವೈದ್ಯಕೀಯ ಲೋಕದ ಮುಂದಿಟ್ಟ ಕೀರ್ತಿ ಡಸಿಕನಿಗೆ ಸಲ್ಲುತ್ತದೆ. 1948ರಲ್ಲಿ ಅಮೆರಿಕದ ವೈದ್ಯ ಜಾರ್ಜ್ ಲಡ್ವಿಗ್ (1922-1973) ಏಕ ಆಯಾಮದ (ಒನ್ ಡೈಮೆನ್ಷನಲ್) ಸಾಧನವನ್ನು ರೂಪಿಸಿ ಪಿತ್ತಕೋಶದ ಕಲ್ಲುಗಳನ್ನು ಪತ್ತೆ ಹಚ್ಚಿದ. 1950ರ ದಶಕದಲ್ಲಿ ಸ್ವೀಡನ್ನಿನ ಡಾ.ಕಾರ್ಲ್ ಹೆಲ್ಮುತ್ ಹರ್ಟ್ಜ್ (1920-1990), ಸೀಮನ್ಸ್ ಸಂಸ್ಥೆಯವರು ಒದಗಿಸಿದ ಸಾಧನವನ್ನು ಬಳಸಿ ಮಿಡಿಯುತ್ತಿರುವ ಹೃದಯದ ಚಿತ್ರಣವನ್ನು ದ್ವಿ-ಆಯಾಮದಲ್ಲಿ ಮೂಡಿಸಿದ. ಮೊದಲ ಬಾರಿಗೆ ಅತಿಶ್ರವಣ ಅಲೆ ಗಳನ್ನು ಬಳಸಿ, ಅಂಗವೊಂದನ್ನು ಅದು ಕೆಲಸ ಮಾಡುತ್ತಿರುವಂತೆಯೇ ಅದರ ಎಲ್ಲ ವಿವರ ಗಳನ್ನು ಅಧ್ಯಯನ ಮಾಡಲು ಸಾಧ್ಯವಾಯಿತು.

ಇದು ಮುಂದಿನ ದಿನಗಳಲ್ಲಿ ಪ್ರಮಾಣಬದ್ಧ ಯಂತ್ರಕ್ಕೆ ಜನ್ಮವನ್ನು ನೀಡಿ, ಹೃದಯ ವಿಜ್ಞಾನದಲ್ಲಿ ಈಗ ಬಳಕೆಯಾಗುತ್ತಿರುವ ‘ಇಕೋಕಾರ್ಡಿಯೋಗ್ರಫಿ’ ಎನ್ನುವ ತಪಾಸಣೆ ಸರ್ವತ್ರ ದೊರೆಯು ವಂತಾಗಿದೆ. 1958ರಲ್ಲಿ ಸ್ಕಾಟಿಶ್ ಪ್ರಸೂತಿ ತಂತ್ರ ತಜ್ಞನಾಗಿದ್ದ ಡಾ.ಅಯಾನ್ ಡೊನಾಲ್ಡ್ (1910-1987) ಮತ್ತು ತಂಡದವರು ‘ಬಿ-ಮೋಡ್ ಇಮೇಜ್’ ಅಥವಾ ‘ಪ್ರಜ್ವಲ ಚಿತ್ರ’ವನ್ನು ಗ್ರಹಿಸಬಹು ದಾದಂಥ ಸುಧಾರಿತ ಯಂತ್ರಕ್ಕೆ ಕಾರಣರಾದರು.

ಕಾರ್ಖಾನೆಗಳಲ್ಲಿ ಲೋಹದಲ್ಲಿರುವ ದೋಷಗಳನ್ನು ಪತ್ತೆ ಹಚ್ಚುವ ಪರಿವರ್ತಕವನ್ನು ಬಳಸಿ, ಅವರು ಓರ್ವ ಗರ್ಭಿಣಿಯ ಉದರವನ್ನು ಪರೀಕ್ಷಿಸಿದರು. ಆಗ ಅವರಿಗೆ ಬೆಳೆಯುತ್ತಿರುವ ಭ್ರೂಣದ ತಲೆಯಲ್ಲಿ ಒಂದು ಗಂತಿ ಇರುವುದು ಕಂಡುಬಂದಿತು. ಮೊದಲ ಬಾರಿಗೆ ವೈದ್ಯರು ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣದ ದೋಷವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದರು.

ಇದು ಜಗತ್ತಿನ ಪ್ರಖ್ಯಾತ ವೈದ್ಯಕೀಯ ನಿಯಕಾಲಿಕ ‘ಲ್ಯಾನ್ಸೆಟ್’ನಲ್ಲಿ ಪ್ರಕಟವಾಯಿತು. ಕೂಡಲೇ ಜಗತ್ತಿನ ಎಲ್ಲ ಪ್ರಸೂತಿ ತಂತ್ರ ಪರಿಣತರು ಅತಿಶ್ರವಣ ಅಲೆಗಳನ್ನು ಬಳಸಿ ಭ್ರೂಣದ ಆರೋಗ್ಯ ವನ್ನು ತಿಳಿಯಲು ಮುಂದಾದರು. 1960-80ರವರೆಗಿನ ಅವಧಿಯಲ್ಲಿ ಅಲ್ಟ್ರಾಸೌಂಡ್ ಸಾಧನಗಳು ಬಹಳ ದೊಡ್ಡ ಪ್ರಮಾಣದಲ್ಲಿ ಸುಧಾರಣೆಗೆ ಒಳಗಾದವು.

‘ಬಿ-ಮೋಡ್’ ಹಾಗೂ ‘ರಿಯಲ್ ಟೈಮ್ ಅಲ್ಟ್ರಾಸೌಂಡ್’ ಸಾಧನಗಳು ರೂಪುಗೊಂಡವು. ಈಗ ಭ್ರೂಣದ ರಚನೆಯನ್ನು ದ್ವಿ-ಆಯಾಮದಲ್ಲಿ ನೋಡುವುದರ ಜತೆಯಲ್ಲಿ, ಭ್ರೂಣದ ವಿವಿಧ ಭಾಗ ಗಳನ್ನು ಹಾಗೂ ಅವುಗಳ ಕಾರ್ಯವನ್ನು ನೋಡಲು ಸಾಧ್ಯವಾಯಿತು. ಈ ಸಾಧನಗಳು ಮಾರುಕಟ್ಟೆಯಲ್ಲಿ ಮುಕ್ತವಾಗಿ ದೊರೆಯಲಾರಂಭಿಸಿದವು.

1970ರ ದಶಕದಲ್ಲಿ ‘ಗ್ರೇ ಸ್ಕೇಲ್’ ಮತ್ತು ‘ಡಾಪ್ಲರ್’ ಸೌಲಭ್ಯಗಳು ದೊರೆತವು. ಗ್ರೇ-ಸ್ಕೇಲ್ ಇಮೇಜಿಂಗ್ ಅತ್ಯಂತ ಸ್ಪಷ್ಟವಾದ ಚಿತ್ರಗಳನ್ನು ನೀಡಿತು. ಡಾಪ್ಲರ್ ತಂತ್ರಜ್ಞಾನವನ್ನು ಅಳವಡಿಸಿ, ಭ್ರೂಣದ ಒಡಲಿನಲ್ಲಿರುವ ರಕ್ತನಾಳಗಳ ಪ್ರವಾಹದ ಸ್ಥಿತಿಗತಿಯನ್ನು ತಿಳಿಯುವುದು ಸುಲಭ ವಾಯಿತು. ಇದು ಹೃದಯ ಮತ್ತು ರಕ್ತನಾಳಗಳ ಆರೋಗ್ಯವನ್ನು ಕರಾರುವಾಕ್ಕಾಗಿ ನೀಡಿತು.

3-ಡಿ ಮತ್ತು 4-ಡಿ: 1980ರ ದಶಕದಲ್ಲಿ ಡಿಜಿಟಲ್ ತಂತ್ರಜ್ಞಾನವು ಸುಧಾರಣೆಗೊಂಡಿತು. ಹಾಗಾಗಿ ಬಿ-ಮೋಡ್ ಡಾಪ್ಲರ್ ಅಲ್ಟ್ರಾಸೌಂಡಿನ ಜತೆಯಲ್ಲಿ ಭ್ರೂಣವನ್ನು ತ್ರಯಾಕೃತಿಯಲ್ಲಿ, ಮೂರೂ ಆಯಾಮಗಳಲ್ಲಿ (3-ಡೈಮೆನ್ಷನಲ್) ನೋಡಲು ಸಾಧ್ಯವಾಯಿತು. 90ರ ದಶಕದಲ್ಲಿ ‘4-ಡಿ ತಂತ್ರ ಜ್ಞಾನ’ವನ್ನು ಒಳಗೊಂಡ ಯಂತ್ರಗಳು ದೊರೆಯಲಾರಂಭಿಸಿದವು.

ಹಾಗೆಯೇ ‘ಪೋಕಸ್ ಅಥವಾ ಪಾಯಿಂಟ್ ಆಫ್ ಕೇರ್ ಅಲ್ಟ್ರಾಸೌಂಡ್’ ಅಂದರೆ ಸಂಚಾರಿ ಅಲ್ಟ್ರಾಸೌಂಡ್ ಸಾಧನಗಳು ಮಾರುಕಟ್ಟೆಗೆ ಬಂದವು. ವೈದ್ಯರು‌ ತಮ್ಮೊಡನೆ ಒಯ್ಯಬಹುದಾದ ಸಾಧನಗಳು ರೂಪುಗೊಳ್ಳುತ್ತಲೇ, ವೈದ್ಯರು ಅವನ್ನು ತುರ್ತುಸ್ಥಿತಿಗಳಲ್ಲಿ ಬಳಸಲಾರಂಭಿಸಿದರು. ಆಂಬುಲೆನ್ಸ್‌ನಲ್ಲಿಯೂ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ನಡೆಸಿ, ಚಿತ್ರಗಳನ್ನು 5-ಜಿ ತಂತ್ರಜ್ಞಾನದ ಮೂಲಕ ಆಸ್ಪತ್ರೆಯ ಪ್ರಧಾನ ಕೇಂದ್ರಕ್ಕೆ ರವಾನಿಸುವುದು ಸಾಧ್ಯವಾಯಿತು. ಈ ಚಿತ್ರವನ್ನು ಅಧ್ಯಯನ ಮಾಡಿ, ಅಗತ್ಯ ಪ್ರಥಮ ಚಿಕಿತ್ಸೆ ಅಥವಾ ಸೂಚನೆಗಳನ್ನು ನೀಡುವುದು ಸಾಧ್ಯ ವಾಯಿತು.

ಈಗ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಅಲ್ಟ್ರಾಸೌಂಡ್ ಯಂತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಯನ್ನು ಅಳವಡಿಸಲಾಗಿದೆ. ಹಾಗಾಗಿ ಯಂತ್ರಗಳು ‘ಬುದ್ಧಿವಂತ’ ಯಂತ್ರಗಳಾಗಿ ಪರಿಣಮಿಸಿವೆ. ಇವು ಸ್ಕ್ಯಾನ್ ಮಾಡುತ್ತಿದ್ದ ಹಾಗೆ, ಚಿತ್ರವನ್ನು ವಿಶ್ಲೇಷಿಸುತ್ತವೆ, ಭ್ರೂಣದ ಅಂಗಾಂಗಗಳ ಉದ್ದಳತೆ ಗಳನ್ನು ಸ್ವಯಂ ಲೆಕ್ಕ ಹಾಕಿ ದಾಖಲಿಸುತ್ತವೆ ಹಾಗೂ ನಿಖರವಾದ ರೋಗ ನಿಧಾನವನ್ನು ಮಾಡಲು ಸಹಾಯ ಮಾಡುತ್ತವೆ.

ಮಾದರಿ ಯಂತ್ರ: ಸ್ತ್ರೀರೋಗ ಹಾಗೂ ಪ್ರಸೂತಿ ತಂತ್ರ ವಿಜ್ಞಾನದಲ್ಲಿ ಬಳಸುವ ಒಂದು ಮಾದರಿ ಅಲ್ಟ್ರಾಸೌಂಡ್ ಯಂತ್ರದ ರಚನೆ ಹಾಗೂ ಕಾರ್ಯ ಈ ಕೆಳಕಂಡಂತಿದೆ.

1. ಪರಿವರ್ತಕ (ಟ್ರಾನ್ಸ್‌ಡ್ಯೂಸರ್): ಇದು ಕೈಯಲ್ಲಿ ಹಿಡಿದುಕೊಳ್ಳಬಹುದಾದ ಪುಟ್ಟ ಸಾಧನ. ಅತಿಶ್ರವಣಯಂತ್ರತಜ್ಞ ಅಥವಾ ಸೋನಾಲಜಿಸ್ಟ್, ಈ ಸಾಧನವನ್ನು ಗರ್ಭವತಿಯ ಉದರದ ಚರ್ಮದ ಮೇಲೆ ಒತ್ತಿ ಹಿಡಿಯುತ್ತಾರೆ. ಆಗ ಈ ಸಾಧನವು ಉಚ್ಚಾವರ್ತನ ಶಬ್ದದ ಅಲೆಗಳನ್ನು (ಹೈ-ಫ್ರೀಕ್ವೆನ್ಸಿ ಸೌಂಡ್ ವೇವ್ಸ್) ಉತ್ಪಾದಿಸಿ, ಅದನ್ನು ಹಾಯಿಸುತ್ತದೆ. ಈ ಶಬ್ದದ ಅಲೆಗಳು ತಾಯಿಯ ಗರ್ಭಕೋಶದಲ್ಲಿರುವ ಭ್ರೂಣವನ್ನು ತಲುಪುತ್ತವೆ. ಅಲ್ಲಿಂದ ಪ್ರತಿಫಲಿತಗೊಂಡು, ಭ್ರೂಣದ ಎಲ್ಲ ವಿವರಗಳೊಡನೆ ಮತ್ತೆ ಪರಿವರ್ತಕಕ್ಕೆ ಬರುತ್ತವೆ.

2. ಕೇಂದ್ರ ಸಂಸ್ಕರಣ ಘಟಕ (ಸೆಂಟ್ರಲ್ ಪ್ರೋಸೆಸ್ ಯೂನಿಟ್, ಸಿಪಿಯು): ಇದು ಅಲ್ಟ್ರಾ ಸೌಂಡ್ ಯಂತ್ರದ ‘ಮಿದುಳು’. ಪ್ರತಿಫಲಿತ ಶಬ್ದದ ಅಲೆಗಳನ್ನು ಸ್ವೀಕರಿಸಿದ ಪರಿವರ್ತಕವು, ಅವನ್ನು ಈ ಘಟಕಕ್ಕೆ ರವಾನಿಸುತ್ತದೆ. ಆ ಅಲೆಗಳನ್ನು ‘ಅರ್ಥ’ ಮಾಡಿಕೊಂಡು, ಅವನ್ನು ಚಿತ್ರ ರೂಪಕ್ಕೆ ಪರಿವರ್ತಿಸುತ್ತದೆ. ಹಾಗೆಯೇ ಎಲ್ಲ ದತ್ತಾಂಶವನ್ನು ಸಂಗ್ರಹಿಸಿಡುತ್ತದೆ.

3. ಪ್ರದರ್ಶಕ (ಡಿಸ್‌ಪ್ಲೇ): ಡಿಸ್‌ಪ್ಲೇ ಎನ್ನುವುದು ಒಂದು ಕಂಪ್ಯೂಟರ್ ಪರದೆ. ಸಿಪಿಯುವಿನಲ್ಲಿ ಸಂಗ್ರಹವಾಗಿರುವ ಚಿತ್ರಗಳನ್ನು ನೋಡಲು ಅವಕಾಶವನ್ನು ಮಾಡಿಕೊಡುತ್ತದೆ. ಭ್ರೂಣದ ವಿವರ ಗಳನ್ನು 2-ಡಿ, 3-ಡಿ ಅಥವಾ 4-ಡಿಗಳಲ್ಲಿ ನೋಡಲು ಸಾಧ್ಯವಾಗುತ್ತದೆ. 4-ಡಿ ತಂತ್ರಜ್ಞಾನವು ಗರ್ಭ ದೊಳಗಿರುವ ಜೀವಂತ ಮಗುವಿನ ಚಲನವಲನಗಳನ್ನು ನೋಡಲು ಅನುಕೂಲ ಮಾಡಿ ಕೊಡುವು ದರ ಜತೆಯಲ್ಲಿ ಅದನ್ನು ಸಿಡಿ ಇಲ್ಲವೇ ಡಿವಿಡಿ ರೂಪದಲ್ಲಿ ದಾಖಲಿಸಲು ಅವಕಾಶವನ್ನು ಮಾಡಿ ಕೊಡುತ್ತದೆ.

4. ನಿಯಂತ್ರಕ ಗುಂಡಿಗಳು (ಕಂಟ್ರೋಲಿಂಗ್ ನಾಬ್ಸ್) ಮತ್ತು ಕೀಲಿಮಣೆ (ಕೀ-ಬೋರ್ಡ್): ಅತ್ಯುತ್ತಮ ಚಿತ್ರಗಳನ್ನು ಪಡೆಯಲು ಅನುಕೂಲವನ್ನು ಮಾಡಿಕೊಡುವ ಹಲವು ರೀತಿಯ ಗುಂಡಿ ಗಳು ಈ ಸಾಧನದಲ್ಲಿರುತ್ತವೆ.

ಆಳ (ಡೆಪ್ತ್): ಶರೀರದ ಒಳಗೆ ಎಷ್ಟು ಆಳದವರೆಗೆ ಶಬ್ದದ ಅಲೆಗಳನ್ನು ರವಾನಿಸಬೇಕು ಎನ್ನುವು ದನ್ನು ನಿರ್ಧರಿಸುವ ಗುಂಡಿ.

ಪ್ರಖರತೆ (ಬ್ರೈಟ್‌ನೆಸ್): ಪರದೆಯ ಮೇಲೆ ಮೂಡುವ ಚಿತ್ರಗಳು ಎಷ್ಟು ಪ್ರಖರವಾಗಿರಬೇಕು ಹಾಗೂ ನಿಚ್ಚಳವಾಗಿರಬೇಕು ಎನ್ನುವುದನ್ನು ನಿಯಂತ್ರಿಸುವ ಗುಂಡಿ.

ಸ್ಥಗಿತ (ಫ್ರೀಜ಼್): ಚಲಿಸುತ್ತಿರುವ ಭ್ರೂಣದ ಅಗತ್ಯ ಚಿತ್ರಗಳನ್ನು ತೆಗೆದುಕೊಳ್ಳಲು ಸ್ಥಗಿತಗೊಳಿ ಸುವ ಅವಕಾಶವಿರುತ್ತದೆ. ಹೀಗೆ ಸ್ಥಗಿತಗೊಳಿಸಿ, ಭ್ರೂಣದ ಅಳತೆಯನ್ನು ತೆಗೆದುಕೊಳ್ಳುವುದರ ಜತೆಯಲ್ಲಿ, ಅಗತ್ಯ ಟಿಪ್ಪಣಿಯನ್ನು ಮಾಡಲು ಅವಕಾಶ ಮಾಡಿಕೊಡುತ್ತದೆ.

ಹಿಗ್ಗಲಿಕೆ (ಜ಼ೂಮ್): ಭ್ರೂಣದ ನಿಗದಿತ ಭಾಗವನ್ನು ಹಿಗ್ಗಲಿಸಿ, ಸಮೀಪ ನೋಟದಲ್ಲಿ ವಿವರ ಗಳನ್ನು ಅಧ್ಯಯನ ಮಾಡಲು ಅವಕಾಶ ಮಾಡಿಕೊಡುವ ಸೌಲಭ್ಯ.

5. ಕಲಿಲ (ಜೆಲ್): ಕಲಿಲವು ಅಲ್ಟ್ರಾಸೌಂಡ್ ಯಂತ್ರದ ಒಂದು ಭಾಗವಲ್ಲ. ಆದರೆ ಇದಿಲ್ಲದೆ ಸ್ಪಷ್ಟವಾದ ಚಿತ್ರಗಳನ್ನು ಪಡೆಯುವುದು ಅಸಾಧ್ಯ. ಇದು ಚರ್ಮ ಮತ್ತು ಪರಿವರ್ತಕದ ನಡುವೆ ಗಾಳಿಯು ಇರದಂತೆ ನೋಡಿಕೊಳ್ಳುತ್ತದೆ. ಆಗ ಶಬ್ದದ ಅಲೆಗಳು ಅತ್ತಿತ್ತ ಚಲಿಸದೆ ನೇರವಾಗಿ ಚರ್ಮದ ಒಳಗೆ ಸಾಗುತ್ತವೆ.

ಮೂರನೆಯ ಕಣ್ಣು: ಜಲಾಂತರ್ಗತ ನೌಕೆಗಳನ್ನು ಪತ್ತೆ ಹಚ್ಚಲು ಆವಿಷ್ಕರಿಸಿದ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ತಂತ್ರಜ್ಞಾನವು ಇಂದು ವೈದ್ಯರಿಗೆ ಮೂರನೆಯ ಕಣ್ಣನ್ನು ನೀಡಿದೆ. ಕೋಟಿ ಕೋಟಿ ತಾಯಂದಿರ ಗರ್ಭದಲ್ಲಿ ಬೆಳೆಯುತ್ತಿರುವ ಶಿಶುವಿನ ಆರೋಗ್ಯವನ್ನು ಮುಂಚಿತವಾಗಿಯೇ ತಿಳಿಸುವ ಒಂದು ಅದ್ಭುತ ಅವಕಾಶವನ್ನು ಇದು ಮಾಡಿಕೊಟ್ಟಿದೆ.

ನಾನಾ ರೀತಿಯ ಜನ್ಮದತ್ತ ವೈಕಲ್ಯಗಳಿರುವ ಭ್ರೂಣಗಳನ್ನು ಸಕಾಲದಲ್ಲಿ ಗುರುತಿಸಲು ಇದರಿಂ ದಾಗಿ ಸಾಧ್ಯವಾಗಿದೆ. ಇಂಥ ಒಂದು ಉಪಕರಣವನ್ನು ವೈದ್ಯರಿಗೆ ನೀಡಿದ ಎಲ್ಲ ವಿಜ್ಞಾನಿಗಳಿಗೂ ಹಾಗೂ ತಂತ್ರಜ್ಞಾನಿಗಳಿಗೂ ನಮೋನ್ನಮಃ..

ಡಾ.ನಾ. ಸೋಮೇಶ್ವರ

View all posts by this author