Gururaj Gantihole Column: ಆಡಳಿತದಲ್ಲಿ ಪಾರದರ್ಶಕತೆಯೇ ಗುಡ್ ಗವರ್ನೆನ್ಸ್
ಅಧಿಕಾರಕ್ಕೆ ಬಂದ ನಂತರದಲ್ಲಿ ಕೆಲವು ಅನುಷ್ಠಾನಕ್ಕೆ ಬಂದರೆ ಹಲವು ಪ್ರಣಾಳಿಕೆಯ ಉಳಿದು ಬಿಡು ತ್ತವೆ. ಪುನಃ ಅದು ನೆನಪಾಗುವುದು ಮುಂದಿನ ಚುನಾವಣೆಯ. ಇದೊಂದು ರೀತಿಯ ಕಾಮನ್ ಸೈಕಲ್ ಎಂಬಂತೆ ರಾಜಕೀಯ ವ್ಯವಸ್ಥೆಯಲ್ಲಿ ಸಾಗುತ್ತಿದೆ. ಚುನಾವಣಾಪೂರ್ವ ಘೋಷಣೆಗಳ ನಡುವೆಯೂ ಅಧಿಕಾರ ಹಿಡಿದ ಪಕ್ಷ ಸಾರ್ವಜನಿಕ ಆಡಳಿತ ವ್ಯವಸ್ಥೆಯನ್ನು ಸದೃಢಗೊಳಿಸುತ್ತಾ ಉತ್ತಮ ಆಡಳಿತ (Good Governance) ನೀಡುವುದು ಅಷ್ಟೇ ಮುಖ್ಯ.

ಅಂಕಣಕಾರ ಗುರುರಾಜ್ ಗಂಟಿಹೊಳೆ

ಗಂಟಾಘೋಷ
ಗುರುರಾಜ್ ಗಂಟಿಹೊಳೆ
ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ರಹಿತವಾದ ವ್ಯವಸ್ಥೆ ನಿರ್ಮಾಣ ಮಾಡುವುದು ಗುಡ್ ಗವರ್ನೆನ್ಸ್. ಹಿಂದೆಲ್ಲ ಯಾವುದೇ ಸರಕಾರ ಕೇಂದ್ರದಿಂದ ಯೋಜನೆಯ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿದರೆ ಅದರ ಶೇ.10ರಷ್ಟು ಫಲಾನು ಭವಿಗಳಿಗೆ ತಲುಪುತ್ತಿರಲಿಲ್ಲ. ಕಳೆದ 11 ವರ್ಷಗಳಲ್ಲಿ ದೊಡ್ಡ ಬದಲಾವಣೆ ನಾವು ಕಂಡಿ ದ್ದೇವೆ. ಕಿಸಾನ್ ಸಮ್ಮಾನ್ ಸಹಿತ ಕೇಂದ್ರದ ಯಾವುದೇ ಯೋಜನೆಯ ಶೇ.100ರಷ್ಟು ಹಣ ಫಲಾನುಭವಿಗೆ ನೇರ ತಲುಪುತ್ತಿದೆ.
ರಾಜಕೀಯ ವ್ಯವಸ್ಥೆಯನ್ನು ಯಾವುದೇ ಒಂದು ದೃಷ್ಟಿಕೋನದಲ್ಲಿ ವಿಶ್ಲೇಷಿಸುವುದು ಕಷ್ಟ. ಚುನಾ ವಣೆ ಸಂದರ್ಭದಲ್ಲಿ ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ನಾನಾ ತಂತ್ರಗಾರಿಕೆ ನಡೆಸುತ್ತವೆ. ಚುನಾವಣೆ ಗೆದ್ದರೆ ಮಾತ್ರ ಅಿಕಾರ ಎಂಬುದು ಎಲ್ಲರಿಗೂ ತಿಳಿದ ವಿಚಾರವೇ. ಇತ್ತೀಚಿನ ವರ್ಷ ಗಳಲ್ಲಿ ಅಧಿಕಾರಕ್ಕೆ ಏರಲು, ಚುನಾವಣೆ ಗೆಲ್ಲಲು ರಾಜಕೀಯ ಪಕ್ಷಗಳು ಉಚಿತ ಕೊಡುಗೆಗಳನ್ನು ಭರಪೂರ ಘೋಷಣೆ ಮಾಡುತ್ತಲೇ ಬಂದಿವೆ.
ಅಧಿಕಾರಕ್ಕೆ ಬಂದ ನಂತರದಲ್ಲಿ ಕೆಲವು ಅನುಷ್ಠಾನಕ್ಕೆ ಬಂದರೆ ಹಲವು ಪ್ರಣಾಳಿಕೆಯ ಉಳಿದು ಬಿಡುತ್ತವೆ. ಪುನಃ ಅದು ನೆನಪಾಗುವುದು ಮುಂದಿನ ಚುನಾವಣೆಯ. ಇದೊಂದು ರೀತಿಯ ಕಾಮನ್ ಸೈಕಲ್ ಎಂಬಂತೆ ರಾಜಕೀಯ ವ್ಯವಸ್ಥೆಯಲ್ಲಿ ಸಾಗುತ್ತಿದೆ. ಚುನಾವಣಾಪೂರ್ವ ಘೋಷಣೆಗಳ ನಡುವೆಯೂ ಅಧಿಕಾರ ಹಿಡಿದ ಪಕ್ಷ ಸಾರ್ವಜನಿಕ ಆಡಳಿತ ವ್ಯವಸ್ಥೆಯನ್ನು ಸದೃಢಗೊಳಿಸುತ್ತಾ ಉತ್ತಮ ಆಡಳಿತ (Good Governance) ನೀಡುವುದು ಅಷ್ಟೇ ಮುಖ್ಯ.
ಇದನ್ನೂ ಓದಿ: Gururaj Gantihole Column: ಕೆರೆಗಳ ಪುನಶ್ಚೇತನವು ದೇವರ ಸೇವೆ ಇದ್ದಂತೆ !
ಜನಕಲ್ಯಾಣದ ಮೂಲಕ ರಾಜ್ಯದ ಅಭಿವೃದ್ಧಿ, ದೇಶದ ಅಭಿವೃದ್ಧಿ, ಅಂತಾರಾಷ್ಟ್ರೀಯ ಮನ್ನಣೆ, ಎಲ್ಲ ವಲಯಗಳಲ್ಲೂ ಸಕಾರಾತ್ಮಕ ಬೆಳವಣಿಗೆ ತರುವುದೇ ಗುಡ್ ಗವರ್ನೆನ್ಸ್. ಆಡಳಿತದ ಚುಕ್ಕಾಣಿ ಹಿಡಿದು ತಮ್ಮ ನಾಯಕತ್ವ ಸ್ಥಾಪಿಸಲು, ಉನ್ನತ ಸ್ಥಾನದಲ್ಲಿ ಕುಳಿತುಕೊಳ್ಳುವಂತಹ ಅಧಿಕಾರಕ್ಕಾಗಿ ಹಂಬಲಿಸುವ ರಾಜಕೀಯ ನಾಯಕರು ಮೊದಲು ಯೋಚಿಸಬೇಕಾದದ್ದು ಸಮರ್ಪಕ ಆಡಳಿತದ ಬಗ್ಗೆ!
ಪಕ್ಕದ ಬಾಂಗ್ಲಾದಲ್ಲಿ ಅಧಿಕಾರದಲ್ಲಿದ್ದ ಹಸೀನಾ ಸರ್ಕಾರವು ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಕೆಲ ಜನರು ದಂಗೆಯೆದ್ದು, ಆ ಸರಕಾರವನ್ನು ಬಲವಂತವಾಗಿ ಕಿತ್ತೊಗೆದು ಏಕವ್ಯಕ್ತಿ ನೇತೃ ತ್ವದ ಸರಕಾರವನ್ನು ಒಪ್ಪಿಕೊಂಡರು, ಇದರ ಹಿಂದೆ ವಿದೇಶೀ ಶಕ್ತಿಗಳ ಕೈವಾಡ ಇದ್ದದ್ದು ಗುಟ್ಟಾ ಗೇನು ಉಳಿದಿಲ್ಲ. ಆದರೆ, ಈಗ ಅಧಿಕಾರದಲ್ಲಿರುವ ಸರಕಾರ ಮೊದಲಿನಕ್ಕಿಂತ ಹೆಚ್ಚಾಗಿ ಜನ ವಿರೋಧಿ ಧೋರಣೆ ತೋರುತ್ತಿದೆ.
ಕಾರಣ, ಆಡಳಿತದಲ್ಲಿ ನೀತಿ ತತ್ವಗಳಿಲ್ಲದಿರುವುದು, ಉತ್ತಮ ಆಡಳಿತದ ಮೌಲ್ಯಗಳನ್ನು ಕಡೆಗಣಿಸಿ ರುವುದು. ಪಕ್ಕದ ಪಾಕಿಸ್ತಾನ, ಅಫ್ಘಾನಿಸ್ತಾನದಲ್ಲೂ ಸ್ಥಿತಿ ಇದಕ್ಕಿಂತ ಭಿನ್ನವಾಗೇನಿಲ್ಲ. ಕಾರಣ ಸ್ಪಷ್ಟವಾಗಿದೆ. ಅಂದರೆ, ಅಧಿಕಾರಕ್ಕೆ ಬರುವವರು ಕೇವಲ ತಮ್ಮ ವೈಯಕ್ತಿಕ ಮಹತ್ವಾಕಾಂಕ್ಷೆ, ಉಡಾಫೆ ನಾಯಕತ್ವದ ಗುಣ, ಬಹುಜನರ ಮೌಲ್ಯ-ಆಚರಣೆಗಳ ಬಗ್ಗೆ ತಾತ್ಸಾರ ಹೊಂದಿದ್ದರೆ, ಎಷ್ಟೇ ಒಳ್ಳೆಯ ಆಡಳಿತ ಕೊಟ್ಟರೂ, ಕೊನೆಗೆ ಜನವಿರೋಧಿಯಾಗಿ ನಿರ್ಗಮಿಸಬೇಕಾಗುತ್ತದೆ.
ಈ ಸೂತ್ರ ಪ್ರಸ್ತುತ, ನಮ್ಮ ನಿಮ್ಮೆಲ್ಲರಿಗೂ ಅನ್ವಯಿಸುತ್ತದೆ. ಅಂದರೆ, ಅಧಿಕಾರಕ್ಕೆ ಬಂದ ಸರ್ಕಾರ ಗಳು ಸ್ಥಾನೀಯ ಜವಾಬ್ದಾರಿಗಳ ಜೊತೆಗೆ, ಮೌಲ್ಯಯುತ ನಡತೆ, ಉತ್ತಮ ಆಡಳಿತ ನೀಡುವ ಕಡೆಗೆ ಗಮನ ನೀಡುವುದು ಅತ್ಯಗತ್ಯವಾಗಿರುತ್ತದೆ. ಯಾವಾಗ, ಪಕ್ಷ ಕೇಂದ್ರಿತ ಆಡಳಿತ, ವ್ಯಕ್ತಿ ಪೂಜೆಗೆ ಆಡಳಿತ ಯಂತ್ರ ಬಹುಪರಾಕು ಹೇಳಲು ಆರಂಭಿಸುತ್ತದೋ, ಅಲ್ಲಿಗೆ ಆ ಸರಕಾರದ ಘನತೆ, ಜನರ ಮನ್ನಣೆ ಕಳೆದುಕೊಳ್ಳುತ್ತ ಹೋಗುತ್ತದೆ.
ಹಾಗೆಯೇ, ಕೆಲವೊಮ್ಮೆ ಜನಪರ, ಉತ್ತಮ ಆಡಳಿತ ನೀಡಿಯೂ ಕೆಲ ಸರಕಾರಗಳು ಜನರ ವಿರೋಧ ಎದುರಿಸುತ್ತವೆ. ಇದಕ್ಕೆ ಮೂಲಕಾರಣ, ನಮ್ಮ ಸಂವಿಧಾನದಲ್ಲಿ ಕೊಟ್ಟಿರುವ ರಾಜ್ಯನೀತಿ ನಿರ್ದೇ ಶಕ ತತ್ವಗಳನ್ನು ತಮ್ಮ ಆಡಳಿತದಲ್ಲಿ ಅಳವಡಿಸಿಕೊಳ್ಳದಿರುವುದೇ ಆಗಿದೆ. ಒಕ್ಕೂಟ ವ್ಯವಸ್ಥೆ ಯಲ್ಲಿ ಎಲ್ಲರನ್ನು ಸಮಾನ ದೃಷ್ಟಿಯಿಂದ ನೋಡುವುದಕ್ಕೆಂದೇ 37ನೇ ವಿಧಿಯಲ್ಲಿ ರಾಜ್ಯ ನಿರ್ದೇ ಶಕ ತತ್ವಗಳನ್ನು ಅಳವಡಿಸಿದ್ದಾರೆ.
ಯಾವಾಗ ಇವುಗಳನ್ನು ನಿರ್ಲಕ್ಷಿಸಲಾಗುತ್ತದೆಯೇ ಆವಾಗ, ಜನರ ಬೆಂಬಲವನ್ನು ಎಂತಹ ಉತ್ತಮ ವ್ಯಕ್ತಿಗಳ ಸರ್ಕಾರವಿದ್ದರೂ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಒಂದು ಆಡಳಿತ ವ್ಯವಸ್ಥೆ ಯಲ್ಲಿ ಇವುಗಳೆಲ್ಲದರ ಪ್ರಮುಖ ಬೆನ್ನೆಲುಬಾಗಿ ನಿಲ್ಲವುದು ‘ಗುಡ್ ಗವರ್ನೆನ್ಸ್’ ಅಥವಾ ಉತ್ತಮ ಆಡಳಿತ ಮಾತ್ರ! ನಮ್ಮ ಸಂವಿಧಾನವೇನೋ ರಾಜ್ಯ ನಿರ್ದೇಶಕ ತತ್ವಗಳನ್ನು ಕೊಟ್ಟಿದೆ.
ಇದರೊಟ್ಟಿಗೆ, ಈ ಉತ್ತಮ ಆಡಳಿತ ಹೊಂದಿರಲೇಬೇಕು ಎಂಬ ಪರಿಕಲ್ಪನೆಯ ಕುರಿತು ವಿವೇಚಿಸು ವುದಾದರೆ, ಆಡಳಿತವೆಂದರೆ, ನಿರ್ಧಾರ ತೆಗೆದುಕೊಳ್ಳುವ ಮತ್ತು ಅದನ್ನು ಕಾರ್ಯಗತಗೊಳಿಸುವ ಪ್ರಕ್ರಿಯೆ. ಜೊತೆಗೆ, ಕೆಲವೊಮ್ಮೆ ತೆಗೆದುಕೊಂಡ ನಿರ್ಧಾರಗಳು ತಪ್ಪೆಂದು ಅನಿಸಿದಾಗ, ಅಂತಹ ನಿರ್ಧಾರಗಳನ್ನು ಕಾರ್ಯಗತಗೊಳಿಸಬೇಕೆ ಬೇಡವೇ ಎಂಬುದೂ ಸಹ ಸೇರಿದೆ. ಕಾರ್ಪೊರೇಟ್ ಆಡಳಿತ, ಅಂತರರಾಷ್ಟ್ರೀಯ ಆಡಳಿತ, ರಾಷ್ಟ್ರೀಯ ಆಡಳಿತ ಮತ್ತು ಸ್ಥಳೀಯ ಆಡಳಿತದಂತಹ
ಹಲವಾರು ಸಂದರ್ಭಗಳು ಉತ್ತಮ ಆಡಳಿತದ ಭಾಗವಾಗಿ ಬರುತ್ತವೆ. ಅಭಿವೃದ್ಧಿಗಾಗಿ ದೇಶದ ಆರ್ಥಿಕ ಮತ್ತು ಸಾಮಾಜಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಅಧಿಕಾರವನ್ನು ಚಲಾಯಿಸುವ ವಿಧಾನವೇ ಉತ್ತಮ ಆಡಳಿತ ಎಂದು ಆಡಳಿತ ಮತ್ತು ಅಭಿವೃದ್ಧಿ ಕುರಿತಂತೆ, 1992ರಲ್ಲಿ ವಿಶ್ವ ಬ್ಯಾಂಕ್ ಈ ಒಂದು ವ್ಯಾಖ್ಯಾನ ನೀಡಿತು.
ಉತ್ತಮ ಆಡಳಿತವು 8 ಪ್ರಮುಖ ಗುಣಲಕ್ಷಣಗಳನ್ನು ಹೊಂದಿದೆ. ಭಾಗವಹಿಸುವಿಕೆ, ಕಾನೂನಿನ ನಿಯಮ, ಪಾರದರ್ಶಕತೆ, ಸ್ಪಂದನಶೀಲತೆ, ಸಹಮತ ಆಧಾರಿತ ನಿರ್ಧಾರ, ಸಮಾನತೆ ಮತ್ತು ಒಳ ಗೊಳ್ಳುವಿಕೆ, ದಕ್ಷತೆ ಮತ್ತು ಪರಿಣಾಮಕಾರಿ ಹಾಗೂ ಉತ್ತರದಾಯಿತ್ವ ಆಡಳಿತ ನಡೆಸುವ ಸರಕಾ ರದ ಹೊಂದಿದ್ದೇ ಆದಲ್ಲಿ ಗುಡ್ ಗವರ್ನೆನ್ಸ್ ತಾನಾಗಿಯೇ ಸೃಷ್ಟಿಯಾಗುತ್ತದೆ. ಜನರ ಸಹಭಾಗಿತ್ವ ಸರಕಾರಕ್ಕೆ ಬೇಕು. ಸರಕಾರ ಹಾಗೆಯೇ ಜನರೊಂದಿಗೆ ನಡೆದುಕೊಳ್ಳಬೇಕು.
ಉತ್ತಮ ಆಡಳಿತದಲ್ಲಿ ತೊಡಗಿರುವ ಎಲ್ಲಾ ಸಂಸ್ಥೆಗಳು ಸಮಾಜದ ಗುಣಮಟ್ಟವನ್ನು ಸುಧಾರಿ ಸುವ ಸಲುವಾಗಿ ಸಾರ್ವಜನಿಕರಿಗೆ ಉತ್ತರದಾಯಿತ್ವವನ್ನು ಹೊಂದಿರುತ್ತವೆ. ಪ್ರಸ್ತುತದಲ್ಲಿ ಈ ಸೂತ್ರ ಗಳನ್ನು ಜಾಗತಿಕ ಮಟ್ಟದಲ್ಲಿ ಅನುಸರಿಸಿಕೊಂಡು ಬರಲಾಗುತ್ತಿದೆ. ಇದರಂತೆಯೇ, ನಮ್ಮ ಭಾರತ ದಲ್ಲಿ ಆಡಳಿತ, ಅಭಿವೃದ್ಧಿ ಕುರಿತಂತೆ ಶತಮಾನಗಳ ಹಿಂದೆಯೇ ಸ್ಪಷ್ಟ ಮಾರ್ಗದರ್ಶನ ಗಳನ್ನು ಉಲ್ಲೇಖಿಸಿದ್ದಾರೆ.
ಭಗವದ್ಗೀತೆಯು ಉತ್ತಮ ಆಡಳಿತ, ನಾಯಕತ್ವ, ಕರ್ತವ್ಯ ನಿಷ್ಠೆ ಮತ್ತು ಸ್ವಯಂ-ಸಾಕ್ಷಾತ್ಕಾರಕ್ಕಾಗಿ ಹಲವಾರು ಮಾರ್ಗಗಳನ್ನು ತಿಳಿಸಿಕೊಡುತ್ತದೆ. ಕೌಟಿಲ್ಯನ ಅರ್ಥಶಾಸ್ತ್ರದಲ್ಲಿ, ರಾಜನ ಹೊಣೆ ಗಾರಿಕೆಯಲ್ಲಿ ಜನರ ಕ್ಷೇಮವೇ ಪ್ರಧಾನವೆಂದು ಪರಿಗಣಿಸಲಾಗಿದೆ. ಇದಕ್ಕಾಗಿಯೇ ಮಹಾತ್ಮ ಗಾಂಧಿ ಯವರು ಸರಳವಾಗಿ ಸು-ರಾಜ ಅನ್ನು ಒತ್ತಿ ಹೇಳಿದರು, ಇದರರ್ಥ ಉತ್ತಮ ಆಡಳಿತ. ಇವುಗಳನ್ನು ರಾಜರ ಆಡಳಿತದಿಂದ ಹಿಡಿದು ಆಧುನಿಕ ಸರ್ಕಾರಗಳು ಸಹಜವಾಗಿ ಅನುಸರಿಸಿಕೊಂಡು ಬರುತ್ತಿವೆ ಎನ್ನಬಹುದು.
ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯವನ್ನು ಪ್ರಜಾಪ್ರಭುತ್ವ, ಕಾನೂನಿನ ಆಳ್ವಿಕೆ ಮತ್ತು ಜನರ ಕಲ್ಯಾಣಕ್ಕೆ ಬದ್ಧವಾಗಿರುವ ಆವರಣದಲ್ಲಿ ನಿರ್ಮಿಸಲಾದ ಭಾರತೀಯ ಸಂವಿಧಾನದಲ್ಲಿ ಆಡಳಿತದ ಪ್ರಾಮುಖ್ಯತೆಯನ್ನು ಸ್ಪಷ್ಟವಾಗಿ ಹೇಳಲಾಗಿದೆ. ಹೀಗಾಗಿ, ಭಾರತದಲ್ಲಿ ಉತ್ತಮ ಆಡಳಿತಕ್ಕಾಗಿ ಕೆಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ.
ಅವುಗಳಲ್ಲಿ, ಮಾಹಿತಿ ಹಕ್ಕು: ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತಾರಾಷ್ಟ್ರೀಯ ಒಪ್ಪಂ ದದ ( (ICCPR ) ಪಕ್ಷವಾಗಿ, ICCPR ನ ಆರ್ಟಿಕಲ್ 19ರ ಪ್ರಕಾರ ನಾಗರಿಕರಿಗೆ ಮಾಹಿತಿಯ ಹಕ್ಕನ್ನು ಖಾತರಿಪಡಿಸುವ ಅಂತರರಾಷ್ಟ್ರೀಯ ಬಾಧ್ಯತೆಯಡಿ ಭಾರತವಿದೆ. ಆರ್‌ಟಿಐ ಕಾಯಿದೆ, 2005 ಭಾರತೀಯ ಪ್ರಜಾಪ್ರಭುತ್ವದಲ್ಲಿ ಮಹತ್ವದ ಬದಲಾವಣೆ ತಂದಿರುತ್ತದೆ.
ಇ-ಆಡಳಿತ: ರಾಷ್ಟ್ರೀಯ ಇ-ಆಡಳಿತ ಯೋಜನೆಯು ಸಾಮಾನ್ಯ ಸೇವಾ ವಿತರಣಾ ಮಳಿಗೆಗಳ ಮೂಲಕ ತನ್ನ ಪ್ರದೇಶದಲ್ಲಿ ಸಾಮಾನ್ಯ ಜನರಿಗೆ ಎಲ್ಲಾ ಸರಕಾರಿ ಸೇವೆಗಳನ್ನು ಸಿಗುವಂತೆ ಮಾಡ ಲು ಮತ್ತು ಅಂತಹ ಸೇವೆಗಳ ದಕ್ಷತೆ, ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಕೈಗೆಟುಕುವ ವೆಚ್ಚದಲ್ಲಿ ಖಚಿತಪಡಿಸುತ್ತದೆ. ಇ-ಆಡಳಿತದ ಅಡಿಯಲ್ಲಿ ಪ್ರಾರಂಭಿಸಲಾದ ಪ್ರೊ-ಕ್ಟಿವ್ ಗವರ್ನೆನ್ಸ್ ಮತ್ತು ಸಕಾಲಿಕ ಅನುಷ್ಠಾನ (ಪ್ರಗತಿ), ಡಿಜಿಟಲ್ ಇಂಡಿಯಾ ಪ್ರೋಗ್ರಾಂ, ಎಂಸಿಎ21, ಪಾಸ್ ಪೋರ್ಟ್ ಸೇವಾ ಕೇಂದ್ರ , ಆನ್‌ಲೈನ್ ಆದಾಯ ತೆರಿಗೆ ರಿಟರ್ನ್, ಇತ್ಯಾದಿ ಕಾರ್ಯಕ್ರಮಗಳು ಯಶಸ್ವಿಯಾಗಿವೆ.
ಕಾನೂನು ಸುಧಾರಣೆಗಳನ್ನು ಕೈಗೊಂಡು, ಪಾರದರ್ಶಕತೆ ಮತ್ತು ದಕ್ಷತೆಯನ್ನು ಸುಧಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಸುಮಾರು 1500 ಬಳಕೆಯಲ್ಲಿಲ್ಲದ ನಿಯಮಗಳು ಮತ್ತು ಕಾನೂ ನುಗಳನ್ನು ಈಗಾಗಲೇ ರದ್ದುಗೊಳಿಸಿದೆ.
ದೇಶದ ವ್ಯಾಪಾರ ಪರಿಸರ ಮತ್ತು ನೀತಿ ಪರಿಸರ ವ್ಯವಸ್ಥೆಗಳನ್ನು (ದಿವಾಳಿತನ ಸಂಹಿತೆ, ಸರಕು ಮತ್ತು ಸೇವಾ ತೆರಿಗೆ ಮತ್ತು ಮನಿ-ಲಾಂಡರಿಂಗ್-ವಿರೋಧಿ ಕಾನೂನು) ಸುಧಾರಿಸಲು ಉದ್ದೇಶಿಸಿ ರುವ ಕಾನೂನು ಸೇರಿದಂತೆ ವ್ಯಾಪಾರ ಪರಿಸ್ಥಿತಿಗಳನ್ನು ಸುಧಾರಿಸಲು ಸರ್ಕಾರವು ಕ್ರಮಗಳನ್ನು ತೆಗೆದುಕೊಂಡಿದೆ. ಹೀಗೆ, ಅಭಿವೃದ್ಧಿಯ ಭಾಗವಾಗಿ, ಸರ್ಕಾರವು ’ಮೇಕ್ ಇನ್ ಇಂಡಿಯಾ’ ಪ್ರಾರಂ ಭಿಸಿದೆ ಕೂಡ.
ವಿಕೇಂದ್ರೀಕರಣ: ನರೇಂದ್ರ ಮೋದಿಯವರ ಸರಕಾರ ಬಂದಮೇಲೆ, ಕೇಂದ್ರೀಕೃತ ಯೋಜನಾ ಆಯೋಗವನ್ನು ರದ್ದುಪಡಿಸಿ, ರಾಷ್ಟ್ರೀಯ ನೀತಿ ಆಯೋಗವನ್ನು ಸ್ಥಾಪಿಸಲಾಯಿತು, ಇದು ಸಹಕಾರಿ -ಡರಲಿಸಂ ಯುಗದ ಪ್ರಾರಂಭಿಕ ಹಂತವೆಂದೂ ಕರೆಯಲಾಗುತ್ತಿದೆ.
ಇನ್ನುಳಿದಂತೆ, ಪೊಲೀಸ್ ಸುಧಾರಣೆಗಳು, ಸಣ್ಣ ಅಪರಾಧಗಳಿಗೆ ಇ-ಎಫ್ ಐಆರ್‌ಗಳನ್ನು ಸಲ್ಲಿಸು ವುದು, ನೀತಿ ಆಯೋಗದಲ್ಲಿ ನಿರೂಪಿತವಾಗಿರುವ ಈ ಕಾರ್ಯಕ್ರಮವು ಆರೋಗ್ಯ ಮತ್ತು ಪೌಷ್ಟಿ ಕತೆ, ಶಿಕ್ಷಣ, ಕೃಷಿ ಮತ್ತು ನೀರು ನಿರ್ವಹಣೆ, ಆರ್ಥಿಕ ಸೇರ್ಪಡೆ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರ ದಲ್ಲಿ ಕೇಂದ್ರೀಕೃತ ಯೋಜನೆಗಳೊಂದಿಗೆ ಅಭಿವೃದ್ಧಿ ಸಾಧಿಸುವ ಮೂಲಕ, 25 ಡಿಸೆಂಬರ್ 2019 ರಂದು ಉತ್ತಮ ಆಡಳಿತ ದಿನವೆಂದು ಘೋಷಿಸಿದನ್ನು ಸಾರ್ಥಕಗೊಳಿಸುವುದೇ ಆಗಿದೆ.
ಒಟ್ಟಾರೆ, ಒಂದು ಸಾರ್ವಜನಿಕ ಆಡಳಿತ ವ್ಯಾಪ್ತಿಯಲ್ಲಿ ಯೋಚಿಸುವುದಾದರೆ, ಅದು ವಿಶ್ವದ ಯಾವುದೇ ಸರಕಾರವಿರಲಿ ಅಥವಾ ಭಾರತ, ಮತ್ತು ಕರ್ನಾಟಕದಲ್ಲಿ ಜನರಿಂದ ಚುನಾಯಿತರಾಗಿ ಅಧಿಕಾರದ ಚುಕ್ಕಾಣಿ ಹಿಡಿದ ಸರಕಾರವಾಗಲಿ, ಒಂದು ಉತ್ತಮ ಆಡಳಿತ ನೀಡಬೇಕೆಂದರೆ, ಅದು ಕೇವಲ ಪಕ್ಷವು ಅಧಿಕಾರ ಹಿಡಿಯಲು ಘೋಷಿಸಿದ ಪ್ರಣಾಳಿಕೆಯನ್ನು ಜಾರಿಗೊಳಿಸಿದರೆ ಸಾಕೆಂ ಬಂತಲ್ಲ ಅಥವಾ ಪಕ್ಷದ ವರಿಷ್ಠರನ್ನು ಮೆಚ್ಚಿಸಲು ಬೇಕಾಬಿಟ್ಟಿ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ತಾರತಮ್ಯ ಮಾಡುವುದಾಗಲಿ, ರಾಜ್ಯದ ಬೊಕ್ಕಸವನ್ನು ಖೋತಾಗೊಳಿಸುವುದಾಗಲಿ ಮಾಡುವುದಲ್ಲ!
ಹಾಗೆಯೇ, ಒಬ್ಬರು ಪಡೆಯಲು ಯೋಗ್ಯವಿದ್ದರೂ, ಇತರೆ ಕಾರಣಗಳನ್ನು ಹುಟ್ಟುಹಾಕಿ, ಒಂದಿಡೀ ಸಮುದಾಯವನ್ನು ಸರಕಾರಿ ಯೋಜನೆಗಳಿಂದ ಹೊರಗಿಡುವಂಥಾದ್ದೂ ಅಲ್ಲ. ಶತಶತಮಾನಗಳ ಕಾಲದ ಹಿಂದೆ ನಡೆದ ಸಾಮಾಜಿಕ ವ್ಯತ್ಯಯಗಳನ್ನು ನೆನೆದು, ಪ್ರಸ್ತುತ ತಲೆಮಾರಿನ ಸಮುದಾಯ ವನ್ನು ತುಳಿಯಲು ಯತ್ನಿಸುವುದಂತೂ ಸಮಗ್ರ ಆಡಳಿತದ ಮಹಾಪಾಪದ ಧ್ಯೋತಕವಾಗಿದೆ.
ಶರಣರು ಹೇಳಿದಂತೆ, ಇವನ್ಯಾರವ, ಇವನ್ಯಾರವ ಎಂದೆನಿಸದೆ, ಇವ ನಮ್ಮವ ಇವ ನಮ್ಮವ ಎಂದೆ ನಿಸಯ್ಯ ಎಂಬ ತಾತ್ವಿಕ ನುಡಿ ಪ್ರಸ್ತುತ ಸರಕಾರಗಳಿಗೆ ಹೇಳಿಮಾಡಿಸಿದಂತಿದೆ. ನಮ್ಮ ಶರಣರ ಮಾತನ್ನು ಪ್ರಸ್ತುತದ ಸಂದರ್ಭದ ಆಡಳಿತಕ್ಕೆ ತಾರ್ಕಿಕವಾಗಿ ಹೋಲಿಸಿ ಮಂಥನ ಮಾಡಿದಲ್ಲಿ, ಕಳಬೇಡ-ಕೊಲಬೇಡ-(ಜನರ ಸಂಪತ್ತನ್ನು ದುರುಪಯೋಗ ಮಾಡಬಾರದು, ಅಮಾಯಕರ ಜೀವ-ಜೀವನಕ್ಕೆ ರಕ್ಷಣೆಯ ಹೊಣೆ ಆಡಳಿತ ಸರಕಾರದ್ದು), ಹುಸಿಯ ನುಡಿಯಲು ಬೇಡ-(ಜನರ, ಸಮು ದಾಯದವರ ಮೆಚ್ಚಿಸಲು, ಚುನಾವಣೆಯಲ್ಲಿ ಜಯಗಳಿಸಲು ಸುಳ್ಳು ಭರವಸೆಗಳನ್ನು ನೀಡಬೇಡ), ಮುನಿಯಬೇಡ-(ದ್ವೇಷದ ಆಡಳಿತಕ್ಕೆ ಯತ್ನಿಸಬಾರದು), ಅನ್ಯರಿಗೆ ಅಸಹ್ಯ ಪಡಬೇಡ-(ಇತರ ರನ್ನು, ಸಹೋದ್ಯೋಗಿಗಳನ್ನು ಗೌರವಪೂರ್ವಕವಾಗಿ ಕಾಣುವುದನ್ನು ಆಡಳಿತದಲ್ಲಿರುವ ಹಿರಿಯ ರು ಕಲಿಯಬೇಕಿದೆ), ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ-(ನಾನು, ನನ್ನದು, ನನ್ನವರು ಎನ್ನುತ್ತ, ಇತರರ ಹಕ್ಕು-ಗೌರವಗಳನ್ನು ತುಚ್ಚವಾಗಿ ಕಾಣದೆ ಸಹವರ್ಥಿಯಾಗಿರಲು ಹೇಳಿದಂತಿದೆ) ಅತ್ಯಂತ ಸರಳ ಕನ್ನಡದಲ್ಲಿ ಹೇಳಿರುವ ಕೆಲವೇ ಸಾಲುಗಳನ್ನು ತಮ್ಮ ನಿತ್ಯ ನಡೆಯಲ್ಲಿ, ಸರ್ಕಾರದ ಚುಕ್ಕಾಣಿ ಹಿಡಿದವರು ಪಾಲಿಸಿದಲ್ಲಿ ಅಂತರಂಗ ಶುದ್ಧಿ-ಬಹಿರಂಗ ಶುದ್ಧಿಗಳು ಫಲಿಸಿ, ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬಂತಾಗಿ, ಕಾಲ ಕಾಲಕ್ಕೂ ಜನರು ನೆನಪಿಸಿಕೊಳ್ಳಬಲ್ಲರು!
ಜನರ ಆಶೋತ್ತರಗಳಿಗೆ ಸ್ಪಂದಿಸುವುದು, ಸಂವಿ ಧಾನದ ಆಶಯಗಳನ್ನು ಯಥಾಪ್ರಕಾರ ಅನು ಷ್ಠಾನ ಮಾಡುವುದು, ಕಾನೂನಿನನ್ವಯ ಆಡಳಿತ ನಡೆಸುವುದು ಸರಕಾರದ ಆದ್ಯತೆಯಾದರೂ ಆಡಳಿತ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ಭ್ರಷ್ಟಾಚಾರ ರಹಿತವಾದ ವ್ಯವಸ್ಥೆ ನಿರ್ಮಾಣ ಮಾಡುವುದು ಗುಡ್ ಗವರ್ನೆನ್ಸ್. ಹಿಂದೆಲ್ಲ ಯಾವುದೇ ಸರಕಾರ ಕೇಂದ್ರದಿಂದ ಯೋಜನೆಯ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿದರೆ ಅದರ ಶೇ.10ರಷ್ಟು ಫಲಾನುಭವಿಗಳಿಗೆ ತಲುಪುತ್ತಿರ ಲಿಲ್ಲ.
ಕಳೆದ 11 ವರ್ಷದಲ್ಲಿ ಬಹಳ ದೊಡ್ಡ ಬದಲಾವಣೆ ನಾವು ಕಂಡಿದ್ದೇವೆ. ಕಿಸಾನ್ ಸಮ್ಮಾನ್ ಸಹಿತ ಕೇಂದ್ರದ ಯಾವುದೇ ಯೋಜನೆಯ ಶೇ. 100ರಷ್ಟು ಹಣ ಫಲಾನುಭವಿಗೆ ನೇರ ತಲುಪುತ್ತಿದೆ. ಭ್ರಷ್ಟಾ ಚಾರಕ್ಕೆ ದಾರಿಯೇ ಇಲ್ಲ. ಡಿಜಿಟಲ್ ವ್ಯವಸ್ಥೆಯೇ ಎಲ್ಲ ಮಾಡಿಬಿಡುತ್ತದೆ. ಇದು ಗುಡ್ ಗವರ್ನೆನ್ಸ್‌ಗೆ ನಿದರ್ಶನ. ಇದನ್ನೇ ಹಲವು ರಾಜ್ಯಗಳು ಅನುಷ್ಠಾನ ಮಾಡಿಕೊಂಡಿವೆ. ಈ ರೀತಿಯ ಬದಲಾವಣೆಗೆ ಆಡಳಿತದಲ್ಲಿ ಬಂದಾಗ ಸುಸ್ಥಿರ ಅಭಿವೃದ್ಧಿಗೆ ಹಲವು ದಾರಿ ಕಾಣಸಿಗುತ್ತವೆ.