ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾಗೆ ಟರ್ನಿಂಗ್ ಪಾಯಿಂಟ್ ಆದ ಸಂಗತಿ ತಿಳಿಸಿದ ಶಿವಂ ದುಬೇ!
ICC Men's T20 World Cup 2026 ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ ಸೋಲು ಭಾರತ ತಂಡಕ್ಕೆ ಬಹು ದೊಡ್ಡ ತಿರುವು ತಂದುಕೊಟ್ಟಿತು ಎಂದು ಟೀಮ್ ಇಂಡಿಯಾ ಸ್ಟಾರ್ ಆಲ್‌ರೌಂಡರ್ ಶಿವಂ ದುಬೇ ಹೇಳಿದ್ದಾರೆ.
ಟಿ20 ವಿಶ್ವಕಪ್ ಟೂರ್ನಿಯಲ್ಲಿನ ಟರ್ನಿಂಗ್ ಪಾಯಿಂಟ್ ತಿಳಿಸಿದ ಶಿವಂ ದುಬೇ. -
ಅಹಮದಾಬಾದ್: ಇತ್ತೀಚೆಗೆ ಅಂತ್ಯಗೊಂಡ 2026ರ ಸಾಲಿನ ಐಸಿಸಿ ಟಿ20 ಕ್ರಿಕೆಟ್ ವಿಶ್ವಕಪ್ (IPL 2026) ಟೂರ್ನಿಯಲ್ಲಿ ಟೀಮ್ ಇಂಡಿಯಾದ ಟ್ರೋಫಿ ಗೆಲುವಿನ ಅಭಿಯಾನಕ್ಕೆ ಟರ್ನಿಂಗ್ ಪಾಯಿಂಟ್ ಆದ ಸಂಗತಿಯನ್ನು ಭಾರತ ತಂಡದ ಸ್ಟಾರ್ ಆಲ್‌ರೌಂಡರ್ ಶಿವಂ ದುಬೇ (Shivam Dube) ಬಹಿರಂಗಪಡಿಸಿದ್ದಾರೆ. ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾನುವಾರ (ಮಾರ್ಚ್ 8) ನಡೆದ ಫೈನಲ್‌ನಲ್ಲಿ (IND vs NZ) ನ್ಯೂಜಿಲೆಂಡ್ ಎದುರು ಭರ್ಜರಿ ಜಯ ದಾಖಲಿಸಿದ ಟೀಮ್ ಇಂಡಿಯಾ ಇತಿಹಾಸ ನಿರ್ಮಿಸಿತು.
ಟೂರ್ನಿಯ ಆರಂಭದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುತ್ತಿದ್ದರೂ, ಸೂಪರ್ 8 ಹಂತದಲ್ಲಿ ಏಡೆನ್ ಮಾರ್ಕ್ರಮ್ ಸಾರಥ್ಯದ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಭಾರಿ ಸೋಲುಂಡು ಕಂಗಾಲಾಗಿತ್ತು. ಆದರೆ ಆ ಸೋಲು ತಂಡಕ್ಕೆ ದೊಡ್ಡ ಪಾಠವಾಗಿ ಪರಿಣಮಿಸಿತು ಎಂದು ಶಿವಂ ದುಬೆ ತಿಳಿಸಿದ್ದಾರೆ.
IND vs NZ: ಸಂಜು ಸ್ಯಾಮ್ಸನ್ ಅಬ್ಬರ, ನ್ಯೂಜಿಲೆಂಡ್‌ಗೆ ಆಘಾತ ನೀಡಿ ಮೂರನೇ ಟಿ20 ವಿಶ್ವಕಪ್ ಗೆದ್ದ ಭಾರತ!
ಈ ಕುರಿತು ಮಾತನಾಡಿದ ದುಬೆ, "ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ನಂತರ ನಾವು ತಂಡವಾಗಿ ಇನ್ನಷ್ಟು ಒಗ್ಗಟ್ಟಾಗಿ ಆಡಲು ಪ್ರಾರಂಭಿಸಿದೆವು. ಆ ಪಂದ್ಯದ ನಂತರ ನಾವು ಸಂಪೂರ್ಣವಾಗಿ ಬದಲಾದೆವು. ಇದರಿಂದ ನಮ್ಮ ಅತ್ಯುತ್ತಮ ಆಟವನ್ನು ಫೈನಲ್‌ನಲ್ಲಿ ಪ್ರದರ್ಶಿಸಲು ಸಾಧ್ಯವಾಯಿತು," ಎಂದು ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಆ ಸೋಲಿನ ನಂತರ ಭಾರತ ತಂಡ ಟೂರ್ನಿಯಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿತು. ಜಿಂಬಾಬ್ವೆ ವಿರುದ್ಧ 256/4, ಇಂಗ್ಲೆಂಡ್ ವಿರುದ್ಧ 253/7 ಮತ್ತು ನ್ಯೂಜಿಲ್ಯಾಂಡ್ ವಿರುದ್ಧ 255/5 ರನ್‌ಗಳ ಬೃಹತ್ ಮೊತ್ತಗಳನ್ನು ದಾಖಲಿಸಿ ಪರಾಕ್ರಮ ಮೆರೆಯಿತು. ಪ್ರಮುಖವಾಗಿ ನಾಕ್‌ಔಟ್ ಮಹತ್ವ ಪಡೆದಿದ್ದ ಸೂಪರ್ 8 ಪಂದ್ಯದಲ್ಲಿ ಅಪಾಯಕಾರಿ ವೆಸ್ಟ್ ಇಂಡೀಸ್ ಎದುರು ಕೊಲ್ಕತ್ತಾದ ಈಡೆನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ 196 ರನ್‌ಗಳ ಗುರಿ ಬೆನ್ನತ್ತಿ 19.2 ಓವರ್‌ಗಳಲ್ಲಿ ಗೆಲುವಿನ ನಗಾರಿ ಬಾರಿಸಿತ್ತು.
IND vs NZ: 89 ರನ್ ಸಿಡಿಸಿ ವಿರಾಟ್ ಕೊಹ್ಲಿಯ ದಾಖಲೆ ಮುರಿದ ಸಂಜು ಸ್ಯಾಮ್ಸನ್!
ಇದೇ ವೇಳೆ ಭಾರತ ತಂಡದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡಿದ ದುಬೆ, ತಂಡದ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ತಮ್ಮ ಜವಾಬ್ದಾರಿ ಕುರಿತು ಸ್ಪಷ್ಟ ಮಾಹಿತಿ ನೀಡಿದ್ದರು ಎಂದು ಹೇಳಿದ್ದಾರೆ. "ನನ್ನ ಪಾತ್ರ ಸರಳವಾಗಿತ್ತು, ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟ್ ಮಾಡುವುದು. ಬೇಕಾದರೆ ಬೌಲಿಂಗ್‌ನಲ್ಲಿ ಕಟ್ಟು ನಿಟ್ಟಿನ ಲೈನ್ ಅಂಡ್ ಲೆನ್ತ್ ಕಾಯ್ದುಕೊಳ್ಳುವುದು," ಎಂದು ಅವರು ವಿವರಿಸಿದರು.
2026ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶಿವಂ ದುಬೇ ಮಹತ್ವದ ಪಾತ್ರವಹಿಸಿದ್ದರು. ಮುಂಬೈಕರ್ ಸ್ಪೋಟಕ ಬ್ಯಾಟಿಂಗ್ ನಡೆಸಿ 169ರ ಅದ್ಭುತ ಸ್ಟ್ರೈಕ್ ರೇಟ್‌ನೊಂದಿಗೆ ಒಟ್ಟು 235 ರನ್‌ಗಳನ್ನು ಗಳಿಸಿದ್ದು, ಅಗತ್ಯದ ಸಂದರ್ಭದಲ್ಲಿ ತಮ್ಮ ಮಧ್ಯಮ ವೇಗದ ಬೌಲಿಂಗ್ ದಾಳಿ ನಡೆಸಿ 5 ವಿಕೆಟ್‌ಗಳನ್ನೂ ಪಡೆದಿದ್ದಾರೆ. ಅವರ ಈ ಪ್ರದರ್ಶನ ಭಾರತ ತಂಡ ತನ್ನ ಚಾಂಪಿಯನ್ಸ್ ಪಟ್ಟ ಉಳಿಸಿಕೊಳ್ಳಲು ಪ್ರಮುಖ ಪಾತ್ರವಹಿಸಿದೆ.