ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Hari Paraak Column: ಆಫೀಸಿಗೆ ರಜೆ ಹಾಕಿದವ- ಕೆಲಸಕ್ಕೆ ಬರದೇ ಇರೋನು

ಅವುಗಳ ಗುಣಮಟ್ಟ ನೋಡಿಯೇ, ‘ಇಲ್ಲೇ ಇಂಥ ಸಿನಿಮಾಗಳನ್ನ ಆಯ್ಕೆ ಮಾಡ್ತಾರೆ ಅಂದ್ರೆ, ಇನ್ನು ಫಾರಿನ್ ಭಾಷೆಯ ಇನ್ನೆಷ್ಟು ಒಳ್ಳೆಯ ಸಿನಿಮಾಗಳನ್ನ ತೋರಿಸ್ತಾರೆ ಇವರು?’ ಅನ್ನೋ ಅಸಡ್ಡೆ ನಮ್ಮವರಿಗೆ ಇದ್ದೇ ಇದೆ.

Hari Paraak Column: ಆಫೀಸಿಗೆ ರಜೆ ಹಾಕಿದವ- ಕೆಲಸಕ್ಕೆ ಬರದೇ ಇರೋನು

ಹರಿ ಪರಾಕ್‌ ಹರಿ ಪರಾಕ್‌ Jan 12, 2025 8:03 AM

ತುಂಟರಗಾಳಿ

ಹರಿ ಪರಾಕ್‌

ಸಿನಿಗನ್ನಡ

ಬೆಂಗಳೂರು ಇಂಟರ್ ಫ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಮತ್ತೆ ಶುರುವಾಗಲಿದೆ. ಹಾಗೆ ನೋಡಿದ್ರೆ, ಈ ಫಿಲ್ಮ್‌ ಫೆಸ್ಟಿ ವಲ್‌ಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಂಥ ಮನ್ನಣೆ ಏನೂ ಇಲ್ಲ ಅನ್ನೋದು ಅದನ್ನು ಹತ್ತಿರದಿಂದ ನೋಡಿದ ವರಿಗೆ ಮಾತ್ರ ಅಲ್ಲ, ದೂರದಿಂದ ಬಂದ ವಿದೇಶಿಗರಿಗೂ ಗೊತ್ತು. ನಮ್ಮ ಕನ್ನಡ ಚಿತ್ರರಂಗದಿಂದ ಈ ಫಿಲ್ಮ್ ಫೆಸ್ಟಿ ವಲ್‌ಗೆ ಒಂದಷ್ಟು ಸಿನಿಮಾಗಳನ್ನು ಸೆಲೆಕ್ಟ್ ಮಾಡ್ತಾರೆ.‌

image-5fa8f28d-689b-4de8-b42a-005c47579383.jpg

ಅವುಗಳ ಗುಣಮಟ್ಟ ನೋಡಿಯೇ, ‘ಇಲ್ಲೇ ಇಂಥ ಸಿನಿಮಾಗಳನ್ನ ಆಯ್ಕೆ ಮಾಡ್ತಾರೆ ಅಂದ್ರೆ, ಇನ್ನು ಫಾರಿನ್ ಭಾಷೆಯ ಇನ್ನೆಷ್ಟು ಒಳ್ಳೆಯ ಸಿನಿಮಾಗಳನ್ನ ತೋರಿಸ್ತಾರೆ ಇವರು?’ ಅನ್ನೋ ಅಸಡ್ಡೆ ನಮ್ಮವರಿಗೆ ಇದ್ದೇ ಇದೆ. ಈ ಬಾರಿ ಕೂಡ ಅಂಥ ಕೆಲಸಕ್ಕೆ ಬಾರದ ಮಾಮೂಲಿ ಕನ್ನಡ ಚಿತ್ರಗಳು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಯೋಗ್ಯತೆ ತೋರಿಸಲು ಸಿದ್ಧವಾಗಿರುವ ಎಲ್ಲ ಸಾಧ್ಯತೆಗಳೂ ಇವೆ ಅನ್ನೋದು ವಿಪರ್ಯಾಸ, ಇನ್ನು ಈ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸಿನಿಮಾಗಿಂತ ರಾಜಕೀಯನೇ ಜಾಸ್ತಿ.

ಹಾಗಂತ ಪೊಲಿಟಿಕಲ್ ಸಿನಿಮಾ ಹಾಕ್ತಾರೆ ಅಂದ್ಕೊಬೇಡಿ. ನಮ್ಮ ಸಿನಿಮಾ ಮಂದಿಯ ರಾಜಕಾರಣ ಜಾಸ್ತಿ ಅಂತ ಅದರ ಅರ್ಥ. ಹಿಂದೊಮ್ಮೆ, ನಮ್ಮ ಹಿರಿಯ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ‘ಅಯ್ಯೋ, ಈ ಫಿಲ್ಮ್ -ಸ್ಟಿವಲ್ ಯಾಕ್ರೀ ಮಾಡ್ತಾರೆ, ಇವತ್ತು ಜಾಗತಿಕ ಸಿನಿಮಾ ಗಳೆಲ್ಲ ಆನ್‌ಲೈನ್‌ನಲ್ಲಿ, ಡಿವಿಡಿಯಲ್ಲಿ ಲಭ್ಯವಿವೆ. ಅಲ್ಯಾಕೆ ಹೋಗಿ ನೋಡಬೇಕು’ ಅಂತ ಕಾಲೆಳೆದಿದ್ದರು. ಆದರೆ ನಂತರ ಅದೇ ಸಿಂಗ್ ಬಾಬು ತಾವೇ ಅಕಾಡೆಮಿ ಅಧ್ಯಕ್ಷರಾಗಿ ತಮ್ಮಆಳ್ವಿಕೆಯಲ್ಲೂ ಇದೇ ಫಿಲ್ಮ್ ಫೆಸ್ಟಿವಲ್ ಆಯೋಜಿಸಿ ಅದೇ ಕೆಲಸ ಮಾಡಿದ್ದರು. ಒಟ್ಟಿನಲ್ಲಿ ಬೆಂಗಳೂರು ಫಿಲ್ಮ್‌ ಫೆಸ್ಟಿವಲ್‌ನ ಗುಣಮಟ್ಟ ಹೆಚ್ಚಾಗಲಿ, ಬ್ರಿಗೇಡ್ ರೋಡಲ್ಲಿ ಓಡಾಡೋ ಫಾರಿನರ್ಸ್‌ನ ತೋರಿಸಿ, ‘ಇವರೆಲ್ಲ ನಮ್ಮ ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ಗೆ ಬಂದೋರು’ ಅಂತ ಸುಳ್ಳು ಹೇಳ್ಕೊಂಡ್ ತಿರುಗೋ ಪರಿಸ್ಥಿತಿ ಬಾರದೇ ಇರಲಿ ಅನ್ನೋದು ಸಿನಿಪ್ರೇಮಿಗಳ ಆಶಯ.

ಲೂಸ್‌ ಟಾಕ್-‌ ಎಲ್ ಆಂಡ್ ಟಿ ಉದ್ಯೋಗಿ

ಏನ್ ಸರ್, ನಾರಾಯಣಮೂರ್ತಿ ಸರದಿ ಆಯ್ತು ಈಗ ನಿಮ್ಮೋರು ‘ಉದ್ಯೋಗಿಗಳು ವಾರಕ್ಕೆ 90 ಗಂಟೆ ಕೆಲಸ ಮಾಡಬೇಕು’ ಅಂತ ಕರೆ ಕೊಟ್ಟಿದ್ದಾರಲ್ಲ?

ಹೌದೌದು, ನಾವು ಜಾಸ್ತಿ ಕೆಲಸ ಮಾಡಿದ್ರೆ ಇವ್ರು ಇನ್ನೊಂದಷ್ಟು ಹೊಸ ಕಾರುಗಳನ್ನ ತಗೊಂಡು, ಮನೆಗಳನ್ನ ಕಟ್ಟಿಸಿಕೊಂಡು ಬ್ಯಾಂಕ್ ಬ್ಯಾಲೆ ಜಾಸ್ತಿ ಮಾಡಿಕೊಳ್ಳಬಹುದಲ್ಲ ಅದಕ್ಕೇ..

ಈ ಬಿಟ್ಟಿ ಉಪದೇಶದ ಹಿಂದಿನ ಉದ್ದೇಶ ಏನಿರಬಹುದು?

ಅದು ಅವ್ರಿಗೇ ಗೊತ್ತು. ಆದ್ರೆ, ಈಗ್ಲೇ ಸಿಕ್ಕಾಪಟ್ಟೆ ಕಷ್ಟದಲ್ಲಿ ‘ನಾಮ್ -ಕೇ-ವಾಸ್ತೇ’ ಬದುಕ್ತಾ ಇರೋ ಮಿಡ್ಲ್ ಕ್ಲಾಸ್ ಜನ‌ ನಾವು, ಇವ್ರ್ ನೋಡಿದ್ರೆ ನಮ್ಮನ್ನ ‘ಕಾಮ್ -ಕೇ-ವಾಸ್ತೇ’ ಬದುಕಿ ಅಂತ ಹೇಳ್ತಿದ್ದಾರೆ.

ಕೆಲಸವೇ ಕೈಲಾಸ ಅನ್ನೋ ಹೇಳಿಕೆ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ಕೆಲಸಕ್ಕೆ ಬಾರದೇ ಇರೋರು ಹೇಳೋ ಕೆಲಸಕ್ಕೆ ಬಾರದ ವಿಷಯಕ್ಕೆ ಜಾಸ್ತಿ ಪ್ರಾಮುಖ್ಯ ಕೊಡಬೇಕಾಗಿಲ್ಲ.

ಹಾಗಾದ್ರೆ ನೀವು ಅವರ ಮಾತು ಕೇಳಲ್ವಾ? ಯಾವುದಕ್ಕೂ ಒಂದಷ್ಟು ದಿನ ರಜಾ ಹಾಕಿಬಿಡಿ

ಹಂಗೆ ಮಾಡಿದರೆ ನನ್ನನ್ನ ‘ಕೆಲಸಕ್ಕೆ ಬರದೇ ಇರೋನು’ ಅಂತ ಹೇಳಿ ಕೆಲಸದಿಂದ ತೆಗೆದುಬಿಡ್ತಾರೆ ಅಷ್ಟೇ.

ಮನೇಲಿ ಹೆಂಡ್ತಿ ಮುಖ ಎಷ್ಟೂಂತ ನೋಡ್ತೀರಾ, ಆಫೀಸಿಗೆ ಬನ್ನಿ ಅಂದಿದ್ದರ ಬಗ್ಗೆ ನಿಮ್ಮ ಅನಿಸಿಕೆ?

ಅವರ ಹೆಂಡ್ತಿ ಮುಖ ನೋಡೋಕೆ ಚೆನ್ನಾಗಿಲ್ಲ ಅಂದ್ರೆ ನಾವೇನ್ ಮಾಡೋಕಾಗುತ್ತೆ. ಅದನ್ನ ಅವರುಮದುವೆ ಆಗೋ ಟೈಮಲ್ಲಿ ಯೋಚನೆ ಮಾಡಬೇಕಾಗಿತ್ತು.

ನೆಟ್‌ ಪಿಕ್ಸ್

ಖೇಮುಗೆ ವಿಮಾನದಲ್ಲಿ ಪ್ರಯಾಣ ಮಾಡಲೇಬೇಕಾದ ಅನಿವಾರ್ಯತೆ ಎದುರಾಗಿತ್ತು. ಹಾಗಾಗಿ ಖೇಮು ತನ್ನ ಮೊದಲ ವಿಮಾನ ಪ್ರಯಾಣಕ್ಕೆ ಸಿದ್ಧನಾದ. ಮನೆಯಲ್ಲಿ ಹೆಂಡತಿ ಅವನಿಗೆ ಸಾಕಷ್ಟು ಧೈರ್ಯ ತುಂಬಿ ಕಳಿಸಿದಳು. ‘ಚಿಕ್ಕಮಕ್ಕಳೆ ಹೋಗ್ತಾರೆ, ನೀವ್ಯಾಕ್ರೀ ಹೆದರ್ತೀರಾ?’ ಅಂತ ಗಂಡನಿಗೆ ಬುದ್ಧಿ ಹೇಳಿದಳು. ಸರಿ ಖೇಮು ಪ್ರಯಾಣದ ದಿನ ಧೈರ್ಯ ಮಾಡಿ ವಿಮಾನ ನಿಲ್ದಾಣಕ್ಕೆ ತೆರಳಿ, ಬೋರ್ಡಿಂಗ್ ಪಾಸ್ ತಗೊಂಡು ಹೋಗಿ ತನ್ನ ಸೀಟಿನಲ್ಲಿ ಕೂತು ಬೆಲ್ಟ ಹಾಕಿಕೊಂಡು ದೇವರನ್ನು ಸ್ಮರಿಸುತ್ತಾ ಕುಳಿತ. ಪ್ರಯಾಣ ಶುರುವಾಯಿತು. ಪೈಲಟ್ ಪ್ಲೇನ್ ಚಾಲೂ ಮಾಡಿದ. ‘ನಾವು ಈಗ ಟೇಕಾ- ಆಗುತ್ತಿದ್ದೇವೆ’ ಅಂತ ಅನೌನ್ಸ್ ಮೆಂಟ್ ಆಯ್ತು. ಪ್ರಯಾಣ ಮುಗಿತಾ ಬಂತು. ಖೇಮು, ಅಯ್ಯೋ ಇಷ್ಟಕ್ಕೆ ಎಷ್ಟೊಂದು ಹೆದರಿಕೊಂಡಿದ್ದೆ ಎಂದುಕೊಂಡು ತನ್ನಷ್ಟಕ್ಕೇ ತಾನೇ ನಗುತ್ತಿದ್ದ. ಅಷ್ಟರಲ್ಲಿ ಪೈಲಟ್ ಕಡೆಯಿಂದ ಅನೌಮೆಂಟ್ ಬಂತು- ‘ಈಗ ನಾವು ಲ್ಯಾಂಡ್ ಆಗ್ತಾ ಇದ್ದೀವಿ. ರಿಲ್ಯಾಕ್ಸ್..’ ಎನ್ನುತ್ತಿದ್ದಂತೆ, ಅದರ‌ ಜತೆಯ ಪೈಲಟ್, ‘ಓ ಮೈ ಗಾಡ್, ಓ ಮೈ ಗಾಡ್’ ಅಂತ ಕೂಗಿದ್ದು ಕೇಳಿಸಿತು. ಪ್ಲೇನ್‌ನಲ್ಲಿ ಇದ್ದವರೆ ಗಾಬರಿಯಾದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಪ್ಲೇನ್ ಸೇಫ್ ಆಗಿ ಲ್ಯಾಂಡ್ ಆಯ್ತು. ಕಾಕ್‌ಪಿಟ್‌ನಿಂದಹೊರಬಂದ ಪೈಲಟ್, ‘ನಿಮ್ಮನ್ನೆ ಹೆದರಿಸಿದ್ದಕ್ಕೆ ಸಾರಿ, ಅದೇನಾಯ್ತು‌ ಅಂದ್ರೆ ಏರ್ ಹೋಸ್ಟೆಸ್ ನನ್ನ ಪ್ಯಾಂಟ್ ಮೇಲೆ ಕಾಫಿ ಚೆಲ್ಲಿಬಿಟ್ಟಳು. ಅದಕ್ಕೆ ಕೂಗಿಕೊಂಡೆ, ನನ್ನ ಪ್ಯಾಂಟ್‌ನ ಮುಂಭಾಗ ನೋಡಬೇಕಿತ್ತು ನೀವು’ ಅಂದ.ಅದಕ್ಕೆ ಖೇಮು ಹೇಳಿದ ‘ಅದೇನ್ ಮಹಾ, ನಿಮ್ಮ ಅನೌಮೆಂಟ್ ಬಂದಕೂಡ್ಲೇ, ನೀವು ನನ್ನ ಪ್ಯಾಂಟ್‌ನ ಹಿಂಭಾಗ ನೋಡಬೇಕಿತ್ತು’.

ಲೈನ್‌ ಮ್ಯಾನ್

ತುಂಬಾ ಕುಡಿಯೋ ಚಟ‌ ಇರೋ ವ್ಯಕ್ತಿ’Spirit'ual man

ಡೈಲಾಗ್‌ನ ಎಳೆದೂ ಎಳೆದೂ ಹೇಳೋ ವಿಲನ್

‘ರಬ್ಬರ್’ ಸಿಂಗ್

ಕತ್ತಲಲ್ಲಿ ಮಾಡೋ ಮೋಸ

ಇರುಳು ಮರುಳು

ಆಶ್ಚರ್ಯ ಮತ್ತು ಅಸಹ್ಯಗಳ ನಡುವಿನ ವ್ಯತ್ಯಾಸ

ಒಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋದು, ಇನ್ನೊಂದು ಮೂಗಿನ ಒಳಗೆ ಬೆರಳಿಟ್ಟುಕೊಳ್ಳೋದು.

ವಿಪರ್ಯಾಸ

ರಸ್ತೆಯಲ್ಲಿ ಗಾಡಿ ಟಚ್ ಆಯ್ತು ಅಂದ್ರೆ ಓವರ್ ಎಮೋಷನಲ್ ಆಗಿ ರಿಯಾಕ್ಟ್ ಮಾಡ್ತೀವಿ. ಬದುಕಿನ ಪಥದಲ್ಲಿ ಹೃದಯಕ್ಕೆ‌ ಟಚ್ ಆಗಬೇಕಾದ ವಿಷಯಗಳಲ್ಲಿ ಮಾತ್ರ ನಿರ್ಭಾವುಕವಾಗಿ ಇದ್ದುಬಿಡ್ತೀವಿ.

ಹೊಸ ವರ್ಷ ಬಂತು ಅಂತ ಮನೆ ತುಂಬಾ ಎಲ್ಲಾ ಕಡೆ ಕ್ಯಾಲೆಂಡರ‍್ಸ್ ತಗಲಾಕೋದು

‘ತಗಲಾಕ್’ ದರ್ಬಾರ್

ಕಲಿಯುಗ ಅಂದ್ರೆ ಯಾವುದು?

ಜನ ಪ್ರೀತಿ ವಾಪಸ್ ಕೊಟ್ಟಷ್ಟೇ ನಿಯತ್ತಾಗಿ ಸಾಲನೂ ವಾಪಸ್ ಕೋಡೋ ಕಾಲ

ಶಾಲಾ ಕಾಲೇಜು ದಿನಗಳನ್ನು ಏನೆನ್ನಬಹುದು?

‘ಕಲಿ’ಯುಗ

ಭಯಾನಕವಾಗಿ ಗೊರಕೆ ಹೊಡೆಯುವವನು

‘ಖರ್ರಾಟೆ’ ಕಿಂಗ್

ಎಂಬಿಎ ಮಾಡಿದವರು ಬುಕ್ ಮಾಡೋ ಫ್ಲೈಟ್ ಟಿಕೆಟ್

‘ಬ್ಯುಸಿನೆಸ್’ ಕ್ಲಾಸ್

ಇದನ್ನು ಓದಿ: hari paraak column: ಕಂಗನಾ ಎಮರ್ಜೆನ್ಸಿ ಬ್ರೇಕ್‌