Harish Kera Column: ಕೈಬೀಸಿ ಕರೆವ ಕೇಡಿನ ಕಗ್ಗತ್ತಲು

ಅಪರಾಧಿಗಳೇ ಚುರುಕು ಎಂದರೆ ಪೊಲೀಸರು ಇನ್ನೂ ಚುರುಕು. ಪಾತಕಿಗಳನ್ನು ಪತ್ತೆ ಹಚ್ಚಿದರು. ಅವರಿಗೆ ಶಿಕ್ಷೆಯಾಯಿತೋ ಇಲ್ಲವೋ ಆ ಮಾತು ಬೇರೆ. ಸಿನಿಮಾಗಳು, ಕ್ರೈಂ ಟಿವಿ ಶೋಗಳು ಅಪರಾಧಕ್ಕೆ ಪ್ರೇರಣೆ ಎಂಬ ವಾದ ಇದರಿಂದಾಗಿ ಫಕ್ಕನೆ ಹುಟ್ಟುತ್ತದೆ. ಹಾಗೇ ಯಾವುದಾದರೂ ಕ್ರೈಂನ ಅಪರಾಧಿ ಯನ್ನು ಪೊಲೀಸರು ಸೆರೆ ಹಿಡಿದ ಸುದ್ದಿಯಲ್ಲಿ, ಅವನನ್ನು ಹೇಗೆ ಹಿಡಿದರು ಎಂಬ ವಿವರಗಳು ಇರುತ್ತವೆ

Harish Kera Column 300125
ಹರೀಶ್‌ ಕೇರ ಹರೀಶ್‌ ಕೇರ Jan 30, 2025 7:31 AM

ಜೀವವಿಕಾಸ ಶಾಸ್ತ್ರ ಜ್ಞರ ಪ್ರಕಾರ, ಕೊಲೆ, ಅತ್ಯಾಚಾರ ಮತ್ತು ಕಳ್ಳತನಗಳು ಮನುಷ್ಯ ಬೇಟೆ ಗಾರನಾಗಿದ್ದ ಆದಿಮಾನವನ ದಿನಗಳಿಂದಲೂ ಇದೆ ಮತ್ತು ಸಮಾಜದಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರಾಣಿಯ ಆಹಾರ ನಿದ್ರೆ ಭಯ ಮೈಥುನಗಳೆಂಬ ನಾಲ್ಕು ಮೂಲ ಸ್ವಭಾವಗಳಲ್ಲಿ ‘ಭಯ’ ಇಲ್ಲಿ ಕೆಲಸ ಮಾಡುತ್ತದೆ. ಸಹಜವಾಗಿಯೇ ಅಪರಾಧಿಗಳನ್ನು ಗುರುತಿಸಲು ಮತ್ತು ನಮ್ಮನ್ನು ರಕ್ಷಿಸಿಕೊಳ್ಳಲು ಇದು ಅಗತ್ಯ.

ದೃಶ್ಯಂ’ ಫಿಲಂ ಬಂದ ನಂತರ ಅಂಥದೇ ಕೆಲವು ಅಪರಾಧ ಕೃತ್ಯಗಳು ನಡೆದದ್ದನ್ನು ಮೀಡಿಯಾ ಗಳು ದಾಖಲಿಸಿದವು. ಅಪರಾಧಿ ಕೊಲೆ ಮುಚ್ಚಿಡಲು ದೃಶ್ಯಂ ಫಿಲಂ ಮಾದರಿಯಲ್ಲಿ ಮೊಬೈಲನ್ನು ಚಲಿಸುವ ವಾಹನದಲ್ಲಿ ಎಸೆದು ಟವಲ್ ಲೊಕೇಶನ್ ಎಲ್ಲಾ ಸಿಗುವಂತೆ ಮಾಡಿದ್ದು, ಕೊಲೆ ನಡೆದ ದಿನ ತಾನು ಬೇರೆ ಇದ್ದೆ ಎಂದು ಅಲಿಬಿ ಸೃಷ್ಟಿಸಲು ಯತ್ನಿಸಿದ್ದು- ಇವೆಲ್ಲ ಕಂಡುಬಂದವು.

ಅಪರಾಧಿಗಳೇ ಚುರುಕು ಎಂದರೆ ಪೊಲೀಸರು ಇನ್ನೂ ಚುರುಕು. ಪಾತಕಿಗಳನ್ನು ಪತ್ತೆ ಹಚ್ಚಿದರು. ಅವರಿಗೆ ಶಿಕ್ಷೆಯಾಯಿತೋ ಇಲ್ಲವೋ ಆ ಮಾತು ಬೇರೆ. ಸಿನಿಮಾಗಳು, ಕ್ರೈಂ ಟಿವಿ ಶೋಗಳು ಅಪರಾ ಧಕ್ಕೆ ಪ್ರೇರಣೆ ಎಂಬ ವಾದ ಇದರಿಂದಾಗಿ ಫಕ್ಕನೆ ಹುಟ್ಟುತ್ತದೆ. ಹಾಗೇ ಯಾವುದಾದರೂ ಕ್ರೈಂನ ಅಪರಾಧಿಯನ್ನು ಪೊಲೀಸರು ಸೆರೆ ಹಿಡಿದ ಸುದ್ದಿಯಲ್ಲಿ, ಅವನನ್ನು ಹೇಗೆ ಹಿಡಿದರು ಎಂಬ ವಿವರಗಳು ಇರುತ್ತವೆ.

ಇದನ್ನೂ ಓದಿ: Harish Kera Column: ಕವಿತೆಗೆ ಕಾಲುಗಳಿಲ್ಲ, ಆದರೆ ರೆಕ್ಕೆಗಳಿವೆ

ಇದು ಇನ್ನೊಬ್ಬ ಅಪರಾಧಿಗೆ, ಸಿಕ್ಕಿಬೀಳದಂತೆ ಹೇಗೆ ಕ್ರೈಂ ಮಾಡಬಹುದು ಎಂದು ಹೇಳಿಕೊಡುತ್ತ ದಲ್ಲವೇ ಎಂದು ವಾದಿಸಬಹುದು. ಈ ವಾದಗಳಲ್ಲಿ ಸತ್ಯವಿದೆ; ಆದರೆ ಕ್ರೈಂ ಶೋಗಳನ್ನು ವೀಕ್ಷಿಸುವ ಮನುಷ್ಯನ ಮನಸ್ಸಿನ ಆಳ ಇನ್ನೂ ಜಟಿಲವಾಗಿದೆ.

ಹಾಗೆ ನೋಡಿದರೆ ತಕ್ಷಣದ ಪ್ರಚೋದನೆಯಿಂದ (ಜಿಞmoಜಿqಛಿ) ಆಗುವ ಅಪರಾಧಗಳನ್ನು ಪತ್ತೆ ಹಚ್ಚುವುದು ಸುಲಭ. ಆದರೆ ತುಂಬಾ ಪ್ಲಾನ್ ಮಾಡಿ ಎಸಗಿದ ಅಪರಾಧಗಳ ಹಿಂದಿರುವವರನ್ನು ಪತ್ತೆ ಹಚ್ಚುವುದು ಕಷ್ಟ ಎಂಬ ಪರಿಸ್ಥಿತಿ ಹತ್ತು ವರ್ಷದ ಹಿಂದಿನವರೆಗೂ ಇತ್ತು. ಅಲ್ಲಿ ಪಾತಕಿಯ ವಿರುದ್ಧ ಪ್ರಮುಖ ಸಾಕ್ಷಿಯಾಗಿ ದಾಖಲಾಗುತ್ತಿದ್ದುದು ಬೆರಳಚ್ಚು ಒಂದೇ.

ಆದರೆ ಈಗ ಮೂರು ಸಂಗತಿಗಳು ಎಂಥ ಯೋಜಿತ ಅಪರಾಧಿಗೇ ಆದರೂ ಸವಾಲಾಗಿ ನಿಂತಿವೆ. ಅವು- ಡಿಎನ್‌ಎ ಪರೀಕ್ಷೆ, ಸಿಸಿಟಿವಿ ಕ್ಯಾಮೆರಾಗಳು ಹಾಗೂ ಮೊಬೈಲ್ ಲೊಕೇಶನ್. ಯಾವುದೇ ಅಪರಾಧದ ತನಿಖೆ ನಡೆಸುವ ಪೊಲೀಸ್ ಅಽಕಾರಿ ಈಗ ಮೊದಲು ಪರಿಶೀಲಿಸುವುದೇ ಸಿಸಿ ಕ್ಯಾಮೆರಾ ಫೂಟೇಜ್‌ಗಳನ್ನು. ಎರಡನೆಯದಾಗಿ ಮೊಬೈಲ್ ಟವರ್ ಲೊಕೇಶನ್ ಡಂಪ್.

ನಂತರ ಮುಂದುವರಿದ ಹಂತದಲ್ಲಿ ಡಿಎನ್‌ಎ ಸಾಕ್ಷಿ. ಇದೆಲ್ಲ ಅಪರಾಧಿಗಳಿಗೂ ಗೊತ್ತು. ಇದು ಕ್ರೈಂ ಕತೆಗಳನ್ನು ಬರೆಯುವವರಿಗೆ, ವೆಬ್ ಸೀರೀಸ್- ಸಿನಿಮಾ ಮಾಡುವವರಿಗೆ ಕೂಡ ಸವಾಲು. ಅವರೂ ಈ ಆಧುನಿಕ ಪತ್ತೇಗಾರಿಕೆಗೆ ಸಿಗದಂಥ ತಂತ್ರಗಳನ್ನು ಕತೆಗಳಲ್ಲಿ ಹೆಣೆಯಬೇಕಾಗಿದೆ. ಆದರೂ ಯೋಜಿತ ಅಪರಾಧಗಳು ನಡೆಯುತ್ತಿಲ್ಲವೆ? ನಡೆಯುತ್ತಿವೆ.

ಕೆಲವು ಕೇಸ್ ಗಳು ಬಗೆಹರಿಸಲಾಗದಷ್ಟು ಜಿಗುಟಾಗಿರುವುದೂ ಇದೆ. ಉದಾಹರಣೆಗೆ ಆರುಷಿ ಮರ್ಡರ್ ಕೇಸ್, ಶೀನಾ ಬೋರಾ, ಬುರಾರಿ ಫ್ಯಾಮಿಲಿ ಸಾಮೂಹಿಕ ಆತ್ಮಹತ್ಯೆ ಇತ್ಯಾದಿ. ಮನುಷ್ಯ ನಲ್ಲಿರುವ ಕೇಡು (ಛಿqಜ್ಝಿ) ಅವನ ಒಳ್ಳೆಯತನಗಳನ್ನೆಲ್ಲ ಮೀರಿ ಕೋರೆಹಲ್ಲು ತೋರಿ ಗಹಗಹಿಸು ತ್ತದೆ. ಮನುಷ್ಯ ಅದನ್ನು ಶಿಕ್ಷಿಸಲು ಹೊರಡುತ್ತಾನೆ. ಕ್ರೈಂ ಶೋಗಳನ್ನು ನಾವೆಲ್ಲ ಇಷ್ಟಪಟ್ಟು ನೋಡುವುದರ ಹಿನ್ನೆಲೆ ಇಲ್ಲಿದೆ.

ನೈಜ ಅಪರಾಧದ ವೆಬ್ ಶೋಗಳಿಗೆ ಇಂದು ನೀವು ಊಹಿಸಲಾರದಷ್ಟು ಬೇಡಿಕೆಯಿದೆ. ನೆನ್ ಫ್ಲಿಕ್ಸ್, ಅಮೆಜಾನ್ ಪ್ರೈಮ್‌ನಂಥ ಒಟಿಟಿಗಳನ್ನು ತೆರೆದು ನೋಡಿದರೆ ಟಾಪ್‌ನಲ್ಲಿ ಇವುಗಳೇ ಕಾಣಿಸುತ್ತವೆ. ನೆನ್‌ಫ್ಲಿಕ್ಸ್‌ನಲ್ಲಿ ಇತ್ತೀಚೆಗೆ ಏರ್ ಆಗಿರುವ ವೀರಪ್ಪನ್ ಕುರಿತ ಶೋ ಅನ್ನೇ ನೋಡಬಹುದು. ವೀರ ಪ್ಪನ್ ಕುರಿತು ಎಷ್ಟು ಪುಸ್ತಕಗಳು, ಸಿನಿಮಾಗಳು ಬಂದಿಲ್ಲ. ಆದರೆ ಮತ್ತೆ ಅದು ಹೊಸ ರೂಪದಲ್ಲಿ ಬಂದಾಗಲೂ ನಾವು ತಪ್ಪಿಸದೇ ನೋಡುತ್ತೇವೆ.

ಶೀನಾ ಬೋರಾ ಕೊಲೆ ಪ್ರಕರಣದ ಕುರಿತ ‘ಇಂದ್ರಾಣಿ ಸ್ಟೋರಿ’ ಕೂಡ ಪಾಪ್ಯುಲರ್. ಅಮೆರಿಕದಲ್ಲಿ ಹಾಗೂ ಯುರೋಪ್‌ನಲ್ಲಿ ಸೀರಿಯಲ್ ಕಿಲ್ಲರ್‌ಗಳ ಹಾವಳಿ ಬಹಳ. ಇವರ ಬಗೆಗಂತೂ ಪ್ರತಿದಿನ ಒಂದರಂತೆ ವೆಬ್ ಸೀರೀಸ್‌ಗಳು ಬಿಡುಗಡೆ ಆಗುತ್ತಲೇ ಇರುತ್ತವೆ. ಇತ್ತೀಚೆಗೆ ನಮ್ಮಲ್ಲೂ ಇವು ಬೇಡಿಕೆ ಹೊಂದಿವೆ. ದಿಲ್ಲಿಯ ದಿ ಬುಚ್ಚರ್ ಆಫ್ ದಿಲ್ಲಿ, ಉಮೇಶ್ ರೆಡ್ಡಿಯ ಕುರಿತ ಬೀ ಆಫ್‌ ಬ್ಯಾಂಗ ಲೋರ್, ಕೇರಳದ ಸೈನೈಡ್ ಕಿಲ್ಲರ್ ಇವುಗಳನ್ನು ಗಮನಿಸಬಹುದು.

ಯಾಕೆ ನಾವು ಇಷ್ಟೊಂದು ಅಪರಾಧದ ಶೋಗಳನ್ನು ನೋಡುತ್ತೇವೆ? ಸೈಕಾಲಜಿಸ್ಟ್‌ಗಳು ಹೇಳುವ ಪ್ರಕಾರ, ಈ ಶೋಗಳು ನಮ್ಮಲ್ಲಿ ಒಂದು ಸೆಫ್ಟಿ ಆಫ್ ಜಸ್ಟಿಸ್ ಅಥವಾ ನ್ಯಾಯದ ಪ್ರಜ್ಞೆಯನ್ನು ಬಿತ್ತುತ್ತವೆ. ಸಾಮಾನ್ಯವಾಗಿ ಈ ಜಗತ್ತು ಅನಿಶ್ಚಿತ. ಅಪರಾಧ ಯಾವುದೇ ಕ್ಷಣದಲ್ಲಿ ನಮಗೂ ಸಂಭವಿಸಬಹುದು. ಹಾಗಿರುವಾಗ ಈ ಶೋಗಳು ಒಂದು ಭರವಸೆಯ ಲಯವನ್ನು ಒದಗಿಸುತ್ತವೆ. ಅಪರಾಧ ಸಂಭವಿಸಿದಾಗ ಅದನ್ನು ತನಿಖೆ ಮಾಡಲಾಗುತ್ತದೆ ಮತ್ತು ಅಪರಾಧಿಯನ್ನು ಸಾಮಾನ್ಯ ವಾಗಿ ಹಿಡಿಯಲಾಗುತ್ತದೆ.

ಇದೊಂದು ಊಹಿಸಬಹುದಾದ ಘಟನಾಚಕ್ರ. ಇದು ನಮಗೆ ಸಾಂತ್ವನ ನೀಡುತ್ತದೆ. ದೈನಂದಿನ ಜೀವನದ ಅವ್ಯವಸ್ಥೆಯ ನಡುವೆ ಒಂದು ಕ್ರಮಗತಿಯ ಅರ್ಥವನ್ನು ನೀಡುತ್ತದೆ. ಈ ಶೋಗಳಲ್ಲಿ ಬೌದ್ಧಿಕ ಸವಾಲು ಅಥವಾ ಥ್ರಿಲ್ ಸಹ ಇರುತ್ತದೆ. ಪತ್ತೇದಾರಿಗಳ ಸುಳಿವು ಹಿಡಿದು ಹೋಗುವುದು ಒಂದು ಮಾನಸಿಕ ವ್ಯಾಯಾಮ. ಶೋ ನೋಡುತ್ತಿರುವಾಗಲೇ ನಮ್ಮ ಮೆದುಳು ಅಪರಾಧಿಯ ಪತ್ತೆಯಲ್ಲಿ ತೊಡಗಿಸಿಕೊಂಡಿರುತ್ತದೆ. ಕೆಲವೊಮ್ಮೆ ಇಂಥವನೇ ಅಪರಾಧಿ ಎಂದು ನಿರ್ಣಯಿಸಿ ಕೊಳ್ಳುತ್ತೇವೆ.

ಹಾಗೆ ನಾವು ಭಾವಿಸಿಕೊಳ್ಳುವಂತೆ ಇವುಗಳ ವಿನ್ಯಾಸ ಕೂಡ ಇರುತ್ತದೆ. ಆದರೆ ಕೊನೆಯಲ್ಲಿ ಅವನಲ್ಲ, ಬೇರಿನ್ಯಾರೋ ಅಪರಾಧಿ ಎಂದು ಗೊತ್ತಾಗುತ್ತದೆ. ಇದು ಎಲ್ಲ ಡಿಟೆಕ್ಟಿವ್ ಕಾದಂಬರಿ-ಸಿನಿಮಾಗಳ ವಿನ್ಯಾಸ. ಸಮಸ್ಯೆ ಪರಿಹಾರದ ಕಡೆಗೆ ತುಡಿಯುವ ನಮ್ಮ ಗುಣಕ್ಕೆ ಇಲ್ಲಿ ತೃಪ್ತಿ ಸಿಗು ತ್ತದೆ.

ಶರೋನ್ ಪ್ಯಾಕರ್ ಎಂಬ ಮನಶ್ಶಾಸಜ್ಞರು ಹೇಳುವ ಪ್ರಕಾರ, ನಮ್ಮೊಳಗಿನ ನಿಷಿದ್ಧ ಚಿಂತನೆ ಗಳಿಗೂ ಈ ಶೋಗಳಿಂದ ತೃಪ್ತಿ ದೊರೆಯುತ್ತದೆ. ಇದು ನಾವು ನೀವು ಒಪ್ಪಿಕೊಳ್ಳಲು ಅಂಜುವ ಮಾತು. ಮೂಲಭೂತವಾಗಿ ಮನುಷ್ಯನಲ್ಲಿ ಕೇಡಿನ ಚಿಂತನೆಗಳು ಸಾಕಷ್ಟಿವೆ. ಕ್ರೈಂ ಎಸಗುವ ಗಾಢವಾದ ಪ್ರಚೋದನೆಯೂ ಸಭ್ಯರ ಇರಬಹುದು. ಘೋರವಾದ ಕೊಲೆ ಮತ್ತಿತರ ಅಪರಾಧದ ಶೋಗಳು ಈ ಕರಾಳ ಆಲೋಚನೆಗಳು ಮತ್ತು ಪ್ರಚೋದನೆಗಳಿಗೆ ಹೊರಹರಿವುಗಳಾಗಿ ಕಾರ್ಯ ನಿರ್ವಹಿಸುತ್ತವೆ.

ಇದು ಲೈಂಗಿಕ ಕಲ್ಪನೆಗಳ ಹಾಗೆಯೇ. ಕಲ್ಪನೆಯಲ್ಲಿ ಏನನ್ನೂ ಎಸಗಬಹುದಲ್ಲವೆ? ಈ ಸಿದ್ಧಾಂತದ ಪ್ರಕಾರ ನಮ್ಮೆಲ್ಲರಲ್ಲೂ ಒಂದು ಕರಾಳ ಭಾಗವಿದೆ. ಅದು ಅಪರಾಧ ಅಥವಾ ಲೈಂಗಿಕತೆ ಅಥವಾ ಎರಡೂ ಆಗಿರಬಹುದು. ಇದನ್ನು ನಾನು ಎಸಗಿಲ್ಲ, ಇನ್ಯಾರೋ ಎಸಗಿದ್ದಾರೆ ಎಂದು ನಮ್ಮ ಒಳಮನಸ್ಸು ಹೇಳಿ ನಮಗೆ ತೃಪ್ತಿಯನ್ನು ಒದಗಿಸುತ್ತದೆ.

ಜೀವವಿಕಾಸ ಶಾಸ್ತ್ರಜ್ಞರ ಪ್ರಕಾರ, ಕೊಲೆ, ಅತ್ಯಾಚಾರ ಮತ್ತು ಕಳ್ಳತನಗಳು ಮನುಷ್ಯ ಬೇಟೆಗಾರ ನಾಗಿದ್ದ ಆದಿಮಾನವನ ದಿನಗಳಿಂದಲೂ ಇದೆ ಮತ್ತು ಸಮಾಜದಲ್ಲಿ ಮಹತ್ವದ ಪಾತ್ರ ವಹಿಸಿದೆ. ಪ್ರಾಣಿಯ ಆಹಾರ ನಿದ್ರೆ ಭಯ ಮೈಥುನಗಳೆಂಬ ನಾಲ್ಕು ಮೂಲ ಸ್ವಭಾವಗಳಲ್ಲಿ ‘ಭಯ’ ಇಲ್ಲಿ ಕೆಲಸ ಮಾಡುತ್ತದೆ. ಸಹಜವಾಗಿಯೇ ಅಪರಾಧಿಗಳನ್ನು ಗುರುತಿಸಲು ಮತ್ತು ನಮ್ಮನ್ನು ರಕ್ಷಿಸಿ ಕೊಳ್ಳಲು ಇದು ಅಗತ್ಯ.

ಇಲಿನಾಯ್ಸ ವಿಶ್ವವಿದ್ಯಾಲಯದಲ್ಲಿ 2010ರಲ್ಲಿ ನಡೆದ ಒಂದು ಅಧ್ಯಯನದ ಪ್ರಕಾರ, ಪುರುಷ ರಿಗಿಂತ ಹೆಚ್ಚಾಗಿ ಮಹಿಳೆಯರು ಈ ಟ್ರೂ ಕ್ರೈಂ ಕಥೆಗಳತ್ತ ಹೆಚ್ಚು ಆಕರ್ಷಿತರಾಗುತ್ತಾರೆ. ಸ್ಕಾಟ್ ಬಾನ್ ಎಂಬ ಮಾನಸಿಕ ತಜ್ಞರು ಹೇಳುವ ಪ್ರಕಾರವೂ ಇದು ನಿಜ. ಟ್ರೂ ಕ್ರೈಂ ಶೋಗಳನ್ನು ಅಮೆರಿಕದಲ್ಲಿ ಪುರುಷರಿಗಿಂತಲೂ ಅಧಿಕ ಮಹಿಳೆಯರು ನೋಡುತ್ತಾರೆ. ಇದಕ್ಕೆ ಒಂದು ಕಾರಣ ಅವರ ಸಹಾನುಭೂತಿಯ ಸ್ವಭಾವ.

ಮಹಿಳೆಯರು ನೈಜ ಅಪರಾಧ ಕಥೆಗಳ ಬಲಿಪಶುಗಳೊಂದಿಗೆ ಸಹಾನುಭೂತಿ ಹೊಂದುತ್ತಾರೆ. ಅದರಲ್ಲೂ ಹೆಚ್ಚಾಗಿ ಮಹಿಳೆಯರ ಬಗ್ಗೆ. ಬಲಿಪಶುವಿನ ಪಾತ್ರದಲ್ಲಿ ಸುಲಭವಾಗಿ ತಮ್ಮನ್ನು ತಾವು ಊಹಿಸಿಕೊಳ್ಳಬಹುದು. ಜತೆಗೆ, ಅಪರಿಚಿತ ಪುರುಷನಿಂದ ದಾಳಿಗೆ ತುತ್ತಾಗುವ ಭಯ ಇವರಲ್ಲಿ ಹೆಚ್ಚಿನವರಿಗೆ ಇರುತ್ತದೆ. ಈ ಶೋಗಳನ್ನು ನೋಡಿ ಇಂಥ ವಿಕೃತ ಪುರುಷರಿಂದ ಹೇಗೆ ರಕ್ಷಿಸಿಕೊಳ್ಳ ಬಹುದು ಎಂದು ಕಲಿಯಬಹುದು ಅಂತ ತುಂಬಾ ಸ್ತ್ರೀಯರು ಅಂದುಕೊಳ್ಳುತ್ತಾರಂತೆ.

ಹಾಗೇ ತಾವು ಒಡನಾಡುವ ಪುರುಷರಲ್ಲಿ ಇಂಥದರ ‘ರೆಡ್ ಫ್ಲ್ಯಾಗ್’ಗಳನ್ನು ಗುರುತಿಸಬಹುದು ಅಂದುಕೊಳ್ಳುತ್ತಾರೆ. ಹಾಗಿದ್ದರೆ, ಟ್ರೂ ಕ್ರೈಂ ಸ್ಟೋರಿ ಆನಂದಿಸುವವರಲ್ಲಿ ಮಾನಸಿಕ ನ್ಯೂನತೆ ಇದೆ ಎಂದು ತಿಳಿಯಬಹುದೇ? ಹಾಗೇನೂ ಇಲ್ಲ. ಅನೇಕ ಜನರ ನಡವಳಿಕೆ, ನ್ಯಾಯದ ಕಲ್ಪನೆ ಮತ್ತು ಅಪರಾಧ ಪತ್ತೆಯ ಸಂಕೀರ್ಣತೆಯ ಸರಳವಾದ ಕುತೂಹಲದಿಂದ ಕೂಡಿರುತ್ತಾರೆ.

ನಿಜವಾದ ಅಪರಾಧ ಟಿವಿ ಶೋಗಳನ್ನು ಆನಂದಿಸುವವರ ಮತ್ತು ಅವರ ಮಾನಸಿಕ ಆರೋಗ್ಯದ ನಡುವೆ ಯಾವುದೇ ನೇರ ಲಿಂಕ್ ಕಂಡುಬಂದಿಲ್ಲ. ಆದರೂ, ದಕ್ಷಿಣ ಕೊರಿಯಾದ ಒಂದು ಪ್ರಕರಣ ದಲ್ಲಿ, ಕ್ರೈಂ ಶೋಗಳು ಮತ್ತು ಕಾದಂಬರಿಗಳ ಗೀಳಿನಿಂದಾಗಿ ‘ಕುತೂಹಲದಿಂದ’ ಯಾರೋ ಅಪರಿಚಿತರನ್ನು ಒಬ್ಬಾಕೆ ಕೊಂದ ಪ್ರಕರಣ ವರದಿಯಾಗಿತ್ತು. ಈಕೆ ಸೈಕೋಪಾತ್ ಟೆಸ್ಟ್‌ನಲ್ಲೂ ಹೈ ಸ್ಕೋರ್ ಮಾಡಿದ್ದಳು. ಅದಿರಲಿ, ಕ್ರೈಂ ಸ್ಟೋರಿ ನೋಡುವುದು ಗೀಳು ಆಗುತ್ತಿದೆ ಎಂದು ಯಾವಾಗ ಗೊತ್ತಾಗುತ್ತದೆ? ನಿಮ್ಮ ಕಾರ್ಯನಿರ್ವಹಣೆ ದುರ್ಬಲಗೊಳ್ಳುವುದು, ಕೆಲಸ, ಸಂಬಂಧಗಳ ಮೇಲೆ ದುಷ್ಪರಿಣಾಮ ಬೀರುವುದು, ವಾಸ್ತವದಿಂದ ಕಾಲ್ಪನಿಕ ಕಥೆಯನ್ನು ಬೇರ್ಪಡಿಸುವಲ್ಲಿ ತೊಂದರೆ ಎದುರಿಸುವುದು, ಅಪರಾಧದ ಕುರಿತು ಆಸಕ್ತಿಯನ್ನೂ ಮೀರಿದ ಕುತೂಹಲ, ಅಪಾಯಕಾರಿ ಆಲೋಚನೆಗಳು, ಹಿಂಸೆಯ ಬಗೆಗೆ ಸಹಾನುಭೂತಿಯ ದೃಷ್ಟಿಕೋನ, ವೈಯಕ್ತಿಕ ಸುರಕ್ಷತೆ ಬಗ್ಗೆ ನಿರಂತರ ಆತಂಕ, ಅನ್ಯರ ಬಗ್ಗೆ ಅಪನಂಬಿಕೆ ಇವೆಲ್ಲ ಕಂಡುಬರುವುದು ಕೆಂಪು ಸಿಗ್ನಲ್ ಎಂದು ಅರ್ಥಮಾಡಿಕೊಳ್ಳಬೇಕು.

ಈ ಬಗ್ಗೆ ಮೊನ್ನೆ ಪುರಾಣಿಕರ ಜತೆ ಮಾತಾಡುತ್ತಿzಗ ಅವರೂ ಹೇಳಿದರು- ರಾಮಾಯಣ, ಮಹಾ ಭಾರತಗಳು ಇನ್ನೇನು? ಅವೂ ಕ್ರೈಂ ಸ್ಟೋರಿಗಳೇ. ರಾವಣ ಸೀತೆಯನ್ನು ಕದ್ದ, ಆಕೆ ಎಲ್ಲಿದ್ದಾಳೆ ಎಂದು ರಾಮ-ಹನುಮಂತ ಪತ್ತೇದಾರಿಕೆ ನಡೆಸಿ ರಾವಣನನ್ನು ಕೊಂದು ಸೀತೆಯನ್ನು ಮರಳಿ ಪಡೆದರು. ಮಹಾಭಾರತದಲ್ಲಿ ಧರ್ಮರಾಯನಿಗೆ ಸೇರಿದ್ದನ್ನು ದುರ್ಯೋಧನ ಮೋಸದಿಂದ ಅಪಹರಿಸಿದ. ಅಲ್ಲೂ ದುಷ್ಟನಿಗೆ ಶಿಕ್ಷೆ ನೀಡಿ ಭೂಮಿಯನ್ನು ಮರಳಿ ಪಡೆಯಲಾಯಿತು. ಎಲ್ಲ ಮಹಾಕಾವ್ಯಗಳ ಮೂಲದಲ್ಲೂ ಒಂದು ಅಪರಾಧ ಇರುತ್ತದೆ ಎಂದರು.

Kichcha Sudeep and Rajath Kishan
7:31 AM January 29, 2025

Rajath BBK 11: ಫಿನಾಲೆಯಲ್ಲಿ ಯುವನ್​ಗೆ ಸುದೀಪ್ ಗಿಫ್ಟ್ ಕೊಟ್ಟ ಚೈನ್ ಬೆಲೆ ಎಷ್ಟು?, ರಜತ್ ಏನಂದ್ರು?

Bus accident
6:06 PM January 25, 2025

Bus Accident: ಬಸ್‌ನಿಂದ ತಲೆ ಹೊರ ಹಾಕಿದ ಮಹಿಳೆ; ಲಾರಿ ಡಿಕ್ಕಿಯಾಗಿ ತುಂಡಾಗಿ ಬಿದ್ದ ರುಂಡ!

Robbery
3:26 PM January 28, 2025

Robbery: ತಿಪಟೂರು ಎಪಿಎಂಸಿ ಮಾರುಕಟ್ಟೆಯಿಂದ 3,635 ಕೆಜಿ ಕೊಬ್ಬರಿ ಹೊತ್ತೊಯ್ದ ಕಳ್ಳರು

Lokayukta Raid in T.Begur
10:22 PM January 24, 2025

Lokayukta Raid: 5 ಬಾರಿ ಸಸ್ಪೆಂಡ್‌ ಆದ್ರೂ ತೀರದ ಲಂಚದ ದಾಹ; 20 ಸಾವಿರ ಲಂಚ ಪಡೆಯುವಾಗ ಸಿಕ್ಕಿಬಿದ್ದ ಟಿ.ಬೇಗೂರು ಪಿಡಿಒ

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

BBK 11 Final Elimination (1)
7:49 PM January 25, 2025

BBK 11 Final: ಬಿಗ್ ಬಾಸ್ ಫಿನಾಲೆಯಲ್ಲಿ ನಡೆಯಿತು ಎರಡು ಶಾಕಿಂಗ್ ಎಲಿಮಿನೇಷನ್: ಔಟ್ ಆಗಿದ್ದು ಇವರೇ

Hanumantha BBK 11 Winner
8:44 PM January 26, 2025

BBK 11 Winner: ಅಧಿಕೃತ ಘೋಷಣೆಗು ಮುನ್ನವೇ ರಿವೀಲ್ ಆಯ್ತು ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರೆಂದು: ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?