ತುಂಟರಗಾಳಿ
ಸಿನಿಗನ್ನಡ
ಸಾಮಾನ್ಯವಾಗಿ ನಮ್ಮ ಸಮಾಜದಲ್ಲಿ ಕೇಳಿಬರುವ ಮಾತಿನಂತೆ, ಸಿನಿಮಾ ಸಮಾಜದಲ್ಲೂ ಕೇಳಿ ಬರುವ ಮಾತು ಅಂದ್ರೆ ‘ಇಲ್ಲಿ ಎಲ್ಲವೂ ಪುರುಷ ಪ್ರಧಾನ’ ಅನ್ನೋದು. ಅದು ತಕ್ಕ ಮಟ್ಟಿಗೆ ನಿಜ ಕೂಡ. ಆದ್ರೆ ಷರತ್ತುಗಳು ಅನ್ವಯಿಸುತ್ತವೆ ಅನ್ನೋ ಮಾತನ್ನು ಈ ಸಂಪ್ರದಾಯದೊಂದಿಗೆ ಸೇರಿಸಲೇಬೇಕಾಗುತ್ತದೆ. ಅದಕ್ಕೂ ಕಾರಣಗಳು ಹಲವು. ಇಲ್ಲಿ ನಾಯಕರಿಗೆ ಸಿಕ್ಕಷ್ಟು ಸಂಭಾವನೆ ನಾಯಕಿಯರಿಗೆ ಸಿಗೊಲ್ಲ ಅನ್ನೋ ಮಾತಿದೆ. ಅದು ನಿಜ ಕೂಡಾ.
ಅದಕ್ಕೆ ತಕ್ಕಂತೆ ಅವರಿಗೆ ಸಿಗೋ ಮರ್ಯಾದೆ ಕೂಡಾ ಇವರಿಗೆ ಸಿಗಲ್ಲ. ಆದರೆ ಕೆಲವೊಮ್ಮ ಇದು ನಾಯಕಿಯರಿಗೆ ವರದಾನ ಆಗಿರುವ ಉದಾಹರಣೆಗಳೂ ಉಂಟು. ಅದಕ್ಕೆ ಇಂಬು ಕೊಡುವಂತೆ ಇಲ್ಲಿ ಒಬ್ಬ ಸ್ಟಾರ್ ನಟನ ಸಿನಿಮಾದಲ್ಲಿ ಹೊಸ ನಟಿಯೊಬ್ಬಳಿಗೆ ಸುಲಭವಾಗಿ ಅವಕಾಶ ಸಿಗುತ್ತದೆ.
ಆದರೆ ಅದೇ ಒಬ್ಬ ಸ್ಟಾರ್ ಹೀರೋಯಿನ್ ಜತೆ ಹೊಸ ಹುಡುಗನಿಗೆ ಹೀರೋ ಆಗೋ ಅವಕಾಶ ಸಿಗುತ್ತಾ? ಅನ್ನೋದು ಪ್ರಶ್ನೆ. ಸಿಕ್ಕರೂ ನಾಯಕನ ಪಾತ್ರಕ್ಕೆ ಸ್ಕೋಪ್ ಇರಲ್ಲ, ಅದನ್ನು ಸ್ಟಾರ್ ನಟರು ಮಾಡಲ್ಲ ಅನ್ನೋ ಕಾರಣಕ್ಕೆ ಸಿಗಬಹುದು ಅಥವಾ ಯಾರೋ ದೊಡ್ಡ ಹೆಸರಿರುವ ಫ್ಯಾಮಿಲಿಯ ಹೀರೋಗೆ ಸಿಗಬಹುದು ಅಷ್ಟೇ.
ಅಲ್ಲದೆ, ಒಂದು ಸಿನಿಮಾ ಸೋತರೆ ನಿರ್ಮಾಪಕರು ಅದರ ಸೋಲನ್ನು ನಾಯಕಿಯ ತಲೆಗೆ ಕಟ್ಟೋದಿಲ್ಲ. ಅದರಿಂದ ನಾಯಕಿಯ ಮುಂದಿನ ಸಿನಿಮಾ ಸಂಭಾವನೆ ಕೂಡಾ ತೀರಾ ಕಡಿಮೆ ಆಗೋದಿಲ್ಲ. ಆದರೆ ನಾಯಕನ ಪರಿಸ್ಥಿತಿ ಹಾಗಲ್ಲ. ಹಿಂದಿನ ಸಿನಿಮಾ ಗೆದ್ರೆ ಹಬ್ಬ, ಸೋತ್ರೆ ‘ಮುಂದೈತೆ ಮಾರಿಹಬ್ಬ’ ಅನ್ನೋ ಪರಿಸ್ಥಿತಿ.
ಇದನ್ನೂ ಓದಿ: Hari Paraak Column: ಮೊಸಳೆಯ ಮರಿ: ಹಸುಳೆ ಮೊಸಳೆ, ಕಪ್ಪೆಯ ಮರಿ: ʼಭಾವಿʼ ಕಪ್ಪೆ
ನಾಯಕಿಗೆ ಸಂಭಾವನೆ ಕಮ್ಮಿ ಸಿಕ್ರೂ ಆಕೆ ಆ ಫ್ಲಾಪ್ ಸಿನಿಮಾದಲ್ಲಿ ನಟಿಸಿದ್ದಳು ಅನ್ನೋದು ಮೂರು ದಿನಕ್ಕೆ ಎಲ್ಲರಿಗೂ ಮರೆತುಹೋಗುತ್ತದೆ. ಆದೇ ನಾಯಕನಿಗೆ ಅದು ಜೀವನ ಪರ್ಯಂತ ಅವನೇ ಜವಾಬ್ದಾರಿ ಹೊತ್ತುಕೊಳ್ಳಬೇಕಾದ ಫ್ಲಾಪ್ ಸಿನಿಮಾ. ಅದರಿಂದ ಅವನ ಇಡೀ ಕೆರಿಯರ್ ನಲ್ಲಿ ಏರುಪೇರು ಆಗುತ್ತದೆ.
ನಿರ್ಮಾಪಕ ಈ ಸ್ಟಾರ್ ನಟನನ್ನು ‘ಮುಂದಿನ ಸಿನಿಮಾಗೆ ಕಡಿಮೆ ದುಡ್ಡಿಗೆ ಕಾಲ್ ಶೀಟ್ ಕೊಡು’ ಅಂತ ಕೇಳ್ತಾನೆ. ಆದರೆ ಅಪ್ಪಿ ತಪ್ಪಿ ಈ ಮಾತನ್ನ ಈತ ನಾಯಕಿಗೆ ಕೇಳೋದಿಲ್ಲ. ಬಾಕ್ಸ್ ಆಫೀಸ್ ನಲ್ಲಿ ಇಂಥ ನಟನ ಫ್ಲಾಪ್ ಸಿನಿಮಾ ಅಂತಲೇ ಅದು ದಾಖಲಾಗುತ್ತದೆ. ಇಷ್ಟೆಲ್ಲಾ ಇರುವಾಗ ಸಿನಿಮಾರಂಗವನ್ನು ಪುರುಷ ಪ್ರಧಾನ ಅನ್ನೋದು ಸರಿನಾ? ಹೋಗ್ಲಿ ಬಿಡಿ.
ನೆಟ್ ಪಿಕ್ಸ್
ಸೋಮು ಮತ್ತು ಖೇಮು ಮಾತಾಡ್ತಾ ಕೂತಿದ್ರು, ಖೇಮು ಹೇಳ್ದ- “ಸೋಮು, ಯಾಕೋ ಲೈಫ್ ಬೇಜಾರಾಗ್ತಿದೆ ಕಣೋ, ದಿನಾ ಅದೇ ಕೆಲಸ, ಅದೇ ಹೆಂಡ್ತಿ-ಮಕ್ಕಳು, ಅದೇ ರೊಟೀನ್; ಏನಾದ್ರೂ ಹೊಸಾದ್ ಮಾಡಬೇಕು ಅನ್ನಿಸಿದೆ ಕಣೋ.
ಲೈಫಲ್ಲಿ ಥ್ರಿಲ್ ಬೇಕು". ಅದಕ್ಕೆ ಸೋಮು “ಸರಿ, ನಾನು ನಿನ್ನ ಒಂದ್ ಹೊಸಾ ಜಾಗಕ್ಕೆ ಕರಕೊಂದು ಹೋಗ್ತಿನಿ" ಅಂದ. “ಎಲ್ಲಿಗೆ?" ಅಂತ ಕುತೂಹಲದಿಂದ ಕೇಳಿದ ಖೇಮು. “ಈ ನಾಚ್‌ವಾಲಿಗಳ ಘರ್ ಅಂತ ಇರುತ್ತೆ ಗೊತ್ತಾ ನಿಂಗೆ?" ಅಂದ ಸೋಮು. ಖೇಮುಗೆ ಅದೆಲ್ಲ ಗೊತ್ತಿರಲಿಲ್ಲ. ಸರಿ, ಸೋಮು “ಅಲ್ಲಿ ಚೆಂದದ ಹುಡುಗೀರು ಡ್ಯಾ ಮಾಡ್ತಾರೆ ಕಣೋ" ಅಂದ.
“ಹೌದಾ? ಹಂಗಾದ್ರೆ, ಯಾವಾಗ ಹೋಗೋಣ?" ಅಂತ ಖೇಮು ರೆಡಿ ಆಗಿ ಬಿಟ್ಟ. ಅವನ ಅವಸರ ನೋಡಿ ‘ಭಲೇ ರಸಿಕ’ ಅಂದ್ಕೊಂಡ ಸೋಮು, ಖೇಮುವನ್ನು ಕರಕೊಂಡು ಮರುದಿನವೇ ಒಂದು ಫೇಮಸ್ ನಾಚ್ ವಾಲಿ ಘರ್‌ಗೆ ಹೋದ. ಅಲ್ಲಿ ಇವರನ್ನು ಒಳಗೆ ಕರಕೊಂಡು ಹೋಗಿ, ಕಾರ್ಪೆಟ್ ಹಾಸಿ, ಕೈಗೊಂದು ಹೆಂಡದ ಬಟ್ಟಲು ಕೊಟ್ಟು ಕುಳಿತುಕೊಳ್ಳಲು ಹೇಳಿದರು.
ಸರಿ ಒಂದು ಚೆಂದದ ಹುಡುಗಿ ಬಂದು “ಡ್ಯಾ ಮಾಡೋಕೆ ಶುರು ಮಾಡ್ಲಾ ಹುಜೂರ್?" ಅಂತ ಕೇಳಿದಳು. “ಸರಿ ಶುರು ಹಚ್ಕ" ಅಂದ ಖೇಮು, ಸುಮಾರು ಒಂದೂವರೆ ಗಂಟೆ ಸತತವಾಗಿ ಆ ಹುಡುಗಿ ಖೇಮು, ಸೋಮು ಮುಂದೆ ಡ್ಯಾನ್ಸ್ ಮಾಡಿದಳು. ಖೇಮುಗೆ ಸಖತ್ ಖುಷಿ ಆಯ್ತು. ಅದನ್ನು ಗಮನಿಸಿದ ಆ ಹುಡುಗಿ ಡ್ಯಾನ್ಸ್ ಮಾಡಿದ ನಂತರ ಮೆಲ್ಲನೆ ಬಳುಕುತ್ತಾ ಖೇಮುನ ಬಳಿ ಬಂದು, “ಹುಜೂರ್, ಇಷ್ಟು ಹೊತ್ತು ನಾನು ನಿಮ್ಮನ್ನ ಖುಷಿಪಡಿಸಿದೆ. ಈಗ ನೀವು ಈ ನಿಮ್ಮ ಸೇವಕಿಯನ್ನು ಖುಷಿಪಡಿಸಬೇಕು" ಎಂದು ನಾಜೂಕಾಗಿ ಕೇಳಿದಳು. ಅದಕ್ಕೆ, ಖೇಮು ಹೇಳಿದ “ಅಯ್ಯೋ, ಅದರನೈತೆ ಬಿಡು ತಂಗ್ಯಮ್ಮ, ಈವಾಗ್ ನೀನು ಕೂತ್ಕಂಡ್ ನೋಡು, ನಾನ್ ಡ್ಯಾನ್ಸ್ ಮಾಡ್ತೀನಿ".
ಲೂಸ್ ಟಾಕ್- ದರ್ಶನ್ ಅಭಿಮಾನಿ
ನೋಡಪ್ಪಾ ಮೊದ್ಲೇ ಹೇಳ್ತಾ ಇದ್ದೀನಿ, ಇದು ಸೋಷಿಯಲ್ ಮೀಡಿಯಾ ಅಲ್ಲ, ಪೇಪರ್ ಇಂಟರ್‌ವ್ಯೂ, ಇಲ್ಲಿ ‘ದಾಸನ ಪದಗಳು’ ಬಳಸೋ ಹಾಗಿಲ್ಲ..
- ಅವ್ನ.. ಸಾರಿ, ಅದಿಲ್ಲ ಅಂದ್ರೆ ನಮ್ಗೆ ಮಾತಾಡೋಕೆ ಬರಲ್ಲ, ಆದ್ರೂ ಟ್ರೈ ಮಾಡ್ತೀನಿ..
ಸರಿ, ನಿಮ್ಮ ದರ್ಶನ್ ಎದೆ ಮೇಲೆ ಅಭಿಮಾನಿಗಳ ಹೆಸರನ್ನ ‘ಟ್ಯಾಟೂ’ ಹಾಕಿಸಿಕೊಂಡಿದ್ದಾರಲ್ಲ, ಖುಷಿನಾ?
- ಖುಷಿನೇ ಮತ್ತೆ, ನಿಮಗೆಲ್ಲ ಹೊಟ್ಟೆ ಉರಿ, ಬರೀ ನಮಗೆ ಮಾತ್ರ ‘ಹಚ್ಚೇ’ ದಿನ್ ಬಂತು ಅಂತ ಅಲ್ವಾ?
ಅದ್ಸರಿ, ದರ್ಶನ್ ಟ್ಯಾಟೂ ಹಾಕಿಸಿಕೊಂಡಿರೋದು ಏನಕ್ಕೆ?
- ಇನ್ನೇನಕ್ಕೆ, ಅವರಿಗೆ ಪಾಪ ಈಗ ಸಪೋರ್ಟ್ ಮಾಡೋಕೆ ಅಂತಿರೋದು ಬರೀ ನಾವ್ ಮಾತ್ರ, ಮೀಡಿಯಾ ಸೇರಿದಂತೆ ಬಹಳ ಜನ ಅವರಿಗೆ ಟೂ ಬಿಟ್ಟಿದ್ದಾರೆ.
ಅದಕ್ಕೆ ಅವರು ಈಗ ನಮ್ಮನ್ನ ಹೊತ್ತುಕೊಂಡು ಮೆರೆಸ್ತಾ ಇದ್ದಾರೆ.
ಈ ಟ್ಯಾಟೂ ಹಾಕಿಸಿಕೊಳ್ಳೋ ಐಡಿಯಾ ಪುನೀತ್ ರಾಜ್ ಕುಮಾರ್ ಅವರದ್ದು ಅಂತ ಒಬ್ಬ ನಿರ್ಮಾಪಕರು ತುಂಬಾ ಮುಂಚೆನೇ ಸಂದರ್ಶನ ಒಂದರಲ್ಲಿ ಹೇಳಿದ್ರಲ್ಲ. ಅವರ ಐಡಿಯಾನ ದರ್ಶನ್ ಕದ್ದಿದ್ದಾರೆ ಅನ್ಸಲ್ವಾ?
- ಅಯ್ಯೋ, ಐಡಿಯಾ ಯಾರದ್ದೇ ಆಗಿರ್ಲಿ, ಕದಿಯೋರು ನಾವಾಗಿರ್ಬೇಕು.
ಥೋ, ಹೋಗತ್ಲಾಗೆ ಈ ಡೈಲಾಗ್ನೂ ಕದಿತೀರಲ್ರೋ! ಸರಿ, ಅವನ್ಯಾರೋ ಪಾಪ ದರ್ಶನ್ ಸಿನಿಮಾಗೆ ಪ್ರಚಾರ ಮಾಡೋಕೋಗಿ ಆಫೀಸಲ್ಲಿ ಕೆಲಸ ಕಳ್ಕೊಂಡ್ನಂತೆ
- ಒಳ್ಳೇದೇ ಆಯ್ತು ಬಿಡಿ, ಈಗ ಅವನು ದರ್ಶನ್ ಅಭಿಮಾನಿ ಆಗೋಕೆ 100% ಲಾಯಕ್ಕು.
(ಕಾಲ್ಪನಿಕ ಸಂದರ್ಶನ)
ಲೈನ್ ಮ್ಯಾನ್
ಕುಕ್ಕರ್‌ನಲ್ಲಿ ಚಿಕನ್ ಇಟ್ಟು ಸ್ವಲ್ಪ ಹೊತ್ತಾದ ಮೇಲೆ..
- ಹೆಂಡತಿ: ರೀ ಎಷ್ಟ್ ಸಲ ಕೂಗ್ತು?
- ಗಂಡ: ತಗೊಂಡ್ ಬಂದ್ ಕೊಯ್ದು, ಸಾಂಬಾರ್ ಮಾಡೋಕಿಟ್ಟಿದ್ದೀಯ, ಅದೆಂಗೇ ಕೂಗುತ್ತೆ?
ಧ್ಯಾನೋಸ್ಮಿ
- ಶಿವರಾತ್ರಿ ದಿನ ಹುಡುಗ್ರು ‘ಶಿವ’ಧ್ಯಾನ ಮಾಡ್ತಾರೆ
- ವ್ಯಾಲೆಂಟೈ ದಿನ ‘ವ’ ಬಿಟ್ಟು ಬರೀ ’SHE’ ಧ್ಯಾನ ಮಾಡ್ತಾರೆ
ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್‌ಗೆ ಜಗ್ಗೇಶ್ ಅವರು ಬಂದ್ರೆ ಏನಾಗುತ್ತೆ?
- ‘ ಮಂಜ’ ಟಾಕೀಸ್ ಆಗುತ್ತೆ ಗಂಡ-ಹೆಂಡ್ತಿ ಮ್ಯಾಟ್ರು
- ಅಲ್ಲ ಕಣೇ, ಊಟಕ್ಕೆ ಉಪ್ಪಿನಕಾಯಿನೇ ಹಾಕಲ್ವಲ್ಲ
ನೀನು, ಅದನ್ನ ಹಂಗೇ ಇಟ್ಕೊಂಡು ಏನ್ ಮಾಡ್ತಿಯಾ.. ಏನ್ ಉಪ್ಪಿನಕಾಯಿ ಹಾಕ್ಕೊಂಡ್ ನೆಕ್ತೀಯಾ
ಮೂಗು ಔಟ್ ಆಫ್ ಆರ್ಡರ್ ಆಗಿದ್ರೆ ಅದು
- ‘ನಾಕ್’ ಔಟ್
ಮೂಗು ಕಟ್ಟಿಕೊಂಡ್ರೆ ಅದು
- ‘ನಾಕಾ’ ಬಂದಿ
ನೀವು ಸರಿಯಾಗಿ ಯೋಚನೆ ಮಾಡ್ತಾ ಇಲ್ಲ ಅನ್ನೋದನ್ನು ಕಣ್ಣು, ಮೂಗು ಪದಗಳನ್ನ ಬಳಸಿ ಹೇಳುವಾಗ ಆಗುವ ವ್ಯತ್ಯಾಸ
- ನೀವು ‘ವಕ್ರ’ದೃಷ್ಟಿ ಬೀರ‍್ತಾ ಇದ್ದೀರಿ.
- ನೀವು ನಿಮ್ಮ ಮೂಗಿನ ‘ನೇರಕ್ಕೆ’ ಮಾತಾಡ್ತಾ ಇದ್ದೀರಿ.
ಜನಸಂದಣಿಯಲ್ಲಿ ಸಮಯ ನೋಡಿ ಕಾದು ಹೊಂಚು ಹಾಕಿ ಜನರ ಪರ್ಸ್, ಮೊಬೈಲ್ ಎತ್ತೋನು
- ‘ವೆಯ್ಟ್’ ‘ಲಿಫ್ಟರ್’ ಬೇರೆಯವರು ಹೇಳಿದ್ದಕ್ಕೆಲ್ಲ ‘ಸರಿ’ ಅಂತ ಒಪ್ಪಿಕೊಳ್ಳೋನದ್ದು
- ‘ಅಗ್ರೀ’ಕಲ್ಚರ್ ಹೆಂಗಸರಿಗೆ ಮಾತ್ರ ಗೊತ್ತಿರೋ, ಗಂಡಸರಿಗೆ ಗೊತ್ತಿಲ್ಲದೇ ಇರೋ, ಕಾಮನಬಿಲ್ಲಿ ನಲ್ಲಿ ಇಲ್ಲದೇ ಇರೋ ಬಣ್ಣಗಳು ಯಾವುವು?
- ಗೋಲ್ಡ್, ಸಿಲ್ವರ್.