Hari Paraak Column: ಮೊಸಳೆಯ ಮರಿ: ಹಸುಳೆ ಮೊಸಳೆ, ಕಪ್ಪೆಯ ಮರಿ: ʼಭಾವಿʼ ಕಪ್ಪೆ
ಸರಿ ಅಂತ ಇಬ್ಬರೂ ಒಪ್ಪಿಕೊಂಡು ವೀಲ್ ಹತ್ತಿದರು. ಆ ರೈಡರ್, ಇವರನ್ನು ಹೆದರಿಸೋಕೆ ಅಂತ ಏನೆ ಸರ್ಕಸ್, ಗಿಮಿಕ್ ಮಾಡಿದ, ಪಲ್ಟಿ ಹೊಡೆಸಿದ. ಆದರೆ ಇಬ್ಬರೂ ಕಮಕ್-ಕಿಮಕ್ ಅನ್ನಲಿಲ್ಲ. ಕೊನೆಗೆ, ಸಾಕಾಗಿ ಕೆಳಗೆ ಇಳಿಸುತ್ತಾ ರೈಡರ್ ಹೇಳಿದ, “ಮೆಚ್ಚಬೇಕು ಕಣ್ರೀ, ನಾನು ಏನೇ ಸರ್ಕಸ್ ಮಾಡಿದ್ರೂ ನಿಮ್ಮನ್ನ ಹೆದರಿಸೋಕೆ ಆಗ್ಲಿಲ್ಲ. ಗುಡ್ ಜಾಬ್".
-
ನೆಟ್ ಪಿಕ್ಸ್
ಖೇಮು ಮತ್ತು ಖೇಮುಶ್ರೀ ಒಂದು ದಿನ ಅಮ್ಯೂಸ್‌ಮೆಂಟ್ ಪಾರ್ಕ್ʼ'ಗೆ ಹೋದ್ರು. ಅಲ್ಲಿ ಒಂದು ಜಯಂಟ್ ವೀಲ್ ನೋಡಿ ಖೇಮುಗೆ ಅದರಲ್ಲಿ ಕೂರಬೇಕು ಅಂತ ಆಸೆ ಆಯ್ತು. ಹಾಗಂತ ಖೇಮುಶ್ರೀಗೆ ಹೇಳಿದ. ಅದಕ್ಕೆ ಖೇಮುಶ್ರೀ, “ಅಲ್ಲಿ ಹಾಕಿರೋ ಬೋರ್ಡ್ ನೋಡಿ, ಒಂದ್ ರೈಡ್‌ಗೆ 500 ರುಪಾಯಿ. 50 ರುಪಾಯಿ ಏನು ಸುಮ್ನೆ ಬರುತ್ತಾ?" ಅಂದ್ಳು. ಸರಿ ಅಂತ ಖೇಮು ಸುಮ್ಮನೆ ಆದ. ಮುಂದಿನ ವರ್ಷ ಅದೇ ಸಮಯಕ್ಕೆ ಅಲ್ಲಿಗೆ ಹೋದ್ರು. ಖೇಮುಗೆ ಮತ್ತೆ ಜಯಂಟ್ ವೀಲ್‌ನಲ್ಲಿ ಕೂತ್ಕೊಳ್ಳೋ ಆಸೆ ಆಯ್ತು. ಹೆಂಡತಿಗೆ ಹೇಳಿದ. ಖೇಮುಶ್ರೀಯಿಂದ ಅದೇ ಉತ್ತರ ಬಂತು- “500 ರುಪಾಯಿ ಏನು ಸುಮ್ನೆ ಬರುತ್ತಾ?" ಅಂತ.
ಸರಿ ಹೀಗೇ ವರುಷಗಳು ಕಳೆದು ಖೇಮು ಮುದುಕ ಆದ. ಮತ್ತೆ ಇಬ್ಬರೂ ಅಲ್ಲಿಗೆ ಹೋದ್ರು. “ನಂಗೆ ವಯಸ್ಸು 70 ಆಯ್ತು, ಈ ಸಲನಾದ್ರೂ ಅದರಲ್ಲಿ ಕೂತ್ಕೊತೀನಿ ಕಣೇ. ಇಂದ್ರೆ ನನ್ನ ಆಸೆ ಯಾವತ್ತೂ ಈಡೇರಲ್ಲ" ಅಂದ ಖೇಮು.
ಅದಕ್ಕೆ ಖೇಮುಶ್ರೀ ಮತ್ತೆ ಅದೇ ಮಾತು ಹೇಳಿದ್ಳು- “500 ರುಪಾಯಿ ಏನು ಸುಮ್ನೆ ಬರುತ್ತಾ?". ಆಗ ಇದನ್ನ ಆ ಜಯಂಟ್‌ವೀಲ್ ರೈಡರ್ ಕೇಳಿಸಿಕೊಂಡ. “ನೋಡಿ, ನಾನು ನಿಮ್ಮನ್ನ ಫ್ರೀ ಆಗಿ ಜಯಂಟ್ ವೀಲ್‌ನಲ್ಲಿ ಕರ್ಕೊಂಡ್ ಹೋಗ್ತೀನಿ. ಆದ್ರೆ, ಒಂದ್ ಕಂಡೀಷನ್. ನಾನು ರೈಡ್ ಮಾಡುವಾಗ, ನೀವು ಹೆದರಿಕೊಂಡು ಬಾಯಲ್ಲಿ ಒಂದ್ ಪದ ಉಚ್ಚರಿಸಿದರೂ ನಿಮ್ಗೆ 500 ರುಪಾಯಿ ಫೈನ್ ಆಗುತ್ತೆ" ಅಂತ ಖೇಮು ದಂಪತಿಗೆ ಹೇಳಿದ.
ಸರಿ ಅಂತ ಇಬ್ಬರೂ ಒಪ್ಪಿಕೊಂಡು ವೀಲ್ ಹತ್ತಿದರು. ಆ ರೈಡರ್, ಇವರನ್ನು ಹೆದರಿಸೋಕೆ ಅಂತ ಏನೆ ಸರ್ಕಸ್, ಗಿಮಿಕ್ ಮಾಡಿದ, ಪಲ್ಟಿ ಹೊಡೆಸಿದ. ಆದರೆ ಇಬ್ಬರೂ ಕಮಕ್-ಕಿಮಕ್ ಅನ್ನಲಿಲ್ಲ. ಕೊನೆಗೆ, ಸಾಕಾಗಿ ಕೆಳಗೆ ಇಳಿಸುತ್ತಾ ರೈಡರ್ ಹೇಳಿದ, “ಮೆಚ್ಚಬೇಕು ಕಣ್ರೀ, ನಾನು ಏನೇ ಸರ್ಕಸ್ ಮಾಡಿದ್ರೂ ನಿಮ್ಮನ್ನ ಹೆದರಿಸೋಕೆ ಆಗ್ಲಿಲ್ಲ. ಗುಡ್ ಜಾಬ್". ಅದಕ್ಕೆ ಹಿಂದೆ ಕೂತಿದ್ದ ಖೇಮು ಮೆಲ್ಲಗೆ ಹೇಳಿದ “ಹಂಗೇನಿಲ್ಲ ಸರ್, ನೀವು ಮೊದಲ ಸಲ ಪಲ್ಟಿ ಹೊಡೆಸಿದಾಗಲೇ, ನನ್ನ ಹೆಂಡ್ತಿ ಕೆಳಗೆ ಬಿದ್ದುಹೋದಳು. ಆದ್ರೂ ಸುಮ್ಮನೆ ಕೂತಿದ್ದೆ, ಯಾಕಂದ್ರೆ 500 ರುಪಾಯಿ ಏನು ಸುಮ್ನೆ ಬರುತ್ತಾ?"
ಇದನ್ನೂ ಓದಿ: Hari Paraak Column: ಬುಮ್ರಾ ಆಡಬೇಕಾದ ಟೀಮು: ʼರೆಸ್ಟ್ʼ ಆಫ್ ಇಂಡಿಯಾ
ಲೂಟ್ ಟಾಕ್
ಅಲ್ರೀ ಚೇತನ್, ಯಾವಾಗ್ಲೂ ಏನಾದ್ರೂ ಸ್ಟೇಟ್‌ಮೆಂಟ್ ಕೊಡ್ತಾನೇ ಇರ್ತೀರಲ್ಲ ನೀವು?
- ನಾನು ಮೊದ್ಲು ‘ಸ್ಟೇಟ್ಸ್’ನಲ್ಲಿ ಇದ್ದಾನಲ್ವಾ, ಅದಕ್ಕೇ ಸ್ಟೇಟ್ಮೆಂಟ್ ಕೊಡೋದು ನನ್ನ ಹಾಬಿ
ನಿಮ್ಮ ಸ್ಟೇಟಸ್ ಏನೇ ಇರಬಹುದು, ಆದ್ರೆ, ನಮ್ಮ ಸ್ಟೇಟ್ ಕಂಡೀಷನ್ ನೋಡ್ಕೊಂಡ್ ಮಾತಾಡ್ಬೇಕಲ್ವಾ?
- ನಂಗೆ ಹಿಂಗೆ ಕಂಡೀಷನ್ ಹಾಕ್ಬಾರ್ದು, ನಾನ್ ಯಾವಾಗ್ಲೂ ಕಂಡೀಷನ್ ಆಗೇ ಮಾತಾಡ್ತೀನಿ.
ಏನ್ರೀ ಇದು? ಅಮೆರಿಕ ಇಂಗ್ಲಿಷ್ ಬಿಟ್ಟು ನಮ್ಮ ಬಟ್ಲರ್ ಇಂಗ್ಲಿಷ್ ಶುರುಮಾಡಿಬಿಟ್ರಿ? ಸರಿ, ಬರೀ ಇದೇ ಮಾಡ್ತೀರೋ ಇ ಸಿನಿಮಾನೂ ಮಾಡ್ತೀರೋ? ನಿಮ್ಮ ಲಾಸ್ಟ್ ಸಿನಿಮಾ ಯಾವುದು ಅಂತ ನಿಮಗಾದ್ರೂ ನೆನಪಿದೆಯಾ?
- ಅಲ್ರೀ, ಸಿನಿಮಾದಲ್ಲಿ ಆಕ್ಟ್ ಮಾಡೋಕೆ ಅವಕಾಶ ಸಿಕ್ಕಿದ್ದಿದ್ರೆ, ಇದೆ ಯಾಕ್ ಮಾಡ್ತಿದ್ದೆ?
ಅದೂ ಸರಿನೇ.. ಆದ್ರೆ ಮೊನ್ನೆ ಮಾತಾಡಿದ್ದೊಂದು, ಇವತ್ತು ಮಾತಾಡೋದೊಂದು ಅನ್ನೋ ಥರ ಆಡ್ತೀರಂತೆ ನೀವು?
- ಮತ್ತೆ, ‘ಆ ದಿನಗಳ’ಲ್ಲಿ ಮಾತಾಡಿದ್ದನ್ನ, ಮತ್ತೆ ಈ ದಿನಗಳಲ್ಲೂ ಮಾತಾಡೋಕಾಗುತ್ತಾ?
ಆಯ್ತಪ್ಪ, ಇಷ್ಟೆಲ್ಲಾ ಮಾತಾಡ್ತೀರಲ್ಲ, ನಿಮ್ಮ ಉದ್ದೇಶ ಏನು ಅಂತ ಅಟ್‌ಲೀಸ್ಟ್ ನಿಮಗಾದ್ರೂ ಸ್ಪಷ್ಟವಾಗಿ ಗೊತ್ತಿದೆಯಾ?
- ಉದ್ದೇಶದ್ ಮನೆ ಹಾಳಾಯ್ತು, ನಂಗೆ ನನ್ನ ದೇಶ ಯಾವ್ದು ಅಂತಾನೇ ಸರಿಯಾಗಿ ಗೊತ್ತಾಗ್ತಿಲ್ಲ.
ಓಹೋ, ನಿಮ್ಮನ್ನು ನೋಡಿನೇ, ‘ಓ ನನ್ನ ಚೇತನ, ಆಗು ನೀ ಅನಿಕೇತನ’ ಅಂತ ಕುವೆಂಪು ಅವರು ಹಾಡು ಬರೆದಿದ್ದು ಅನ್ಸುತ್ತೆ
- ಕುವೆಂಪುನಾ? ಅದ್ಯಾರು?
ನಿಮಗೆ ಪರ್ಮನೆಂಟ್ ದೇಶ ಇಲ್ಲ ಅನ್ನೋ ಕಾರಣಕ್ಕೆ, ನಿಮಗೆ ಕಾಲು ಒಂದ್ಕಡೆ ನಿಲ್ಲಲ್ಲ, ನೆಲದ ಮೇಲೆ ಕಾಲು ನಿಲ್ಲಲ್ಲ ಅಂತ ಜನ ಮಾತಾಡ್ಕೊತಾ ಇದ್ರು; ಈಗ ಹಿಂಗೆ ಕೇಳೋದ್ ನೋಡಿದ್ರೆ ಕುತ್ತಿಗೆ ಮೇಲೆ ತಲೆ ನಿಲ್ಲಲ್ಲ ಅನ್ಸುತ್ತೆ
- ಇದೇನ್ ಪ್ರಶ್ನೆನೋ, ಪ್ರಬಂಧನೋ ಗೊತ್ತಾಗ್ತಿಲ್ಲ. ಆದ್ರೂ, ಈ ನಿಲ್ಲೋ ವಿಷಯ ಬಂದ್ರೆ ನನ್ನದು ಅಂತ ಒಂದ್ ‘ಸ್ಟ್ಯಾಂಡ್’ ಇರುತ್ತೆ. ಅದಕ್ಕೆ ತಕ್ಕಂಗೆ ಮಾತಾಡ್ತೀನಿ ಅಷ್ಟೇ.
ಬರೀ ಸ್ಟ್ಯಾಂಡ್ ಇದ್ರೆ ಸಾಲದು, ಒಂದ್ ಸ್ಟ್ಯಾಂಡರ್ಡ್ ಇರಬೇಕು. ಅದು ಜನಕ್ಕೆ ಅಂಡರ್ ಸ್ಟ್ಯಾಂಡ್ ಕೂಡಾ ಆಗಬೇಕು ಅಲ್ವಾ?
- ಅವೆಲ್ಲಾ ಗೊತ್ತಿಲ್ರೀ, ಒಟ್ನಲ್ಲಿ ಈ ವಿಷಯದಲ್ಲಿ ‘ಐ ಸ್ಟ್ಯಾಂಡ್ ವಿಥ್ ಮೈ ಸೆಲ’ ಅಷ್ಟೇ.
ಅಯ್ಯೋ, ನೀವ್ ಎಲ್ಲಾದ್ರೂ ನಿಂತ್ಕೊಳಿ, ಈಗ ಸದ್ಯಕ್ಕೆ ಮಾತು ನಿಲ್ಲಿಸ್ರಪ್ಪಾ ಸಾಕು..
- ಹಲೋ, ಜಾಸ್ತಿ ಮಾತಾಡ್ತಿರೋದ್ ನಾನಾ, ನೀವಾ? 5 ಪ್ರಶ್ನೆ ಅಂತ ಹೇಳಿ 10 ಪ್ರಶ್ನೆಆಯ್ತು. ಒಂದ್ ಉತ್ತರಕ್ಕೆ ಎಷ್ಟು ಮಾರ್ಕ್ಸ್ ಅಂತಾನೂ ಹೇಳಿಲ್ಲ. ನಿಮಗೆ ‘ಮಾರ್ಕ್ಸ್’ವಾದ ಗೊತ್ತಾ?
(ಕಾಲ್ಪನಿಕ ಸಂದರ್ಶನ)
ಲೈನ್ ಮ್ಯಾನ್
ಇರೋ ಬರೋ ಫಿಲಾಸಫಿ
- ಯಾವಾಗಲೂ ಖುಷಿಯಾಗಿಯೇ ಇರಬೇಕು ಅಂತೇನಿಲ್ಲ. ಇನ್ನೂ ಇದೀವಲ್ಲ ಅಂತಾನೇ ಖುಷಿ ಯಾಗಿ ಇರಬಹುದು.
ಕೆಲವರಿಗೆ ಎಷ್ಟ್ ಹೇಳಿದ್ರೂ ಬುದ್ಧಿ ಬರಲ್ಲ ಅನ್ನೋದನ್ನು ಹಿಂಗೂ ಹೇಳಬಹುದು
- ಕುರುಡರ ಜತೆ ಕಣ್ಣಾಮುಚ್ಚಾಲೆ ಆಡೋಕಾಗುತ್ತಾ?
ಒಂದ್ ಡೌಟು
- ನಿಂಗೆ ‘ಇಗೋ’ ಜಾಸ್ತಿ ಅಂತ ಹೇಳಿದಾಗ, ‘ಹೌದು’ ಅಂತ ಒಪ್ಪಿಕೊಳ್ಳೋನಿಗೆ ‘ಇಗೋ’ ಇದೆ ಅಂತ ಅರ್ಥನಾ? ಇಲ್ಲ ಅಂತ ಅರ್ಥನಾ?
ಕೆಲವು ಪದಗಳನ್ನು ಹೆಂಗೆ ಉಪಯೋಗಿಸ್ತೀವಿ ಅನ್ನೋದು ಮುಖ್ಯ
- ಹುಟ್ಟುಹಬ್ಬ: ಕಾರ್ಯಕ್ರಮ
- ತಿಥಿ: ಕಾರ್ಯ
ಎಲ್ಲರೂ ಸಿನಿಮಾ ನೋಡಿ ಗೆದ್ರೆ- ಅದು unanimous hit.
- ಥಿಯೇಟರ್‌ನಲ್ಲಿ ಮೂರ್ ದಿನನೂ ಓಡದೇ ಇದ್ರೂ ಸೂಪರ್‌ಹಿಟ್ ಅಂತ ಬೋರ್ಡ್ ಹಾಕ್ಕೊಂಡಾಗ, ಇದ್ಯಾವಾಗ ಯಾರಿಗೂ ಗೊತ್ತಿಲ್ಲದಂಗೆ ಹಿಟ್ ಆಯ್ತು ಅನ್ಸುತ್ತಲ್ಲ- ಅದು anonymous hit
ಹಸುವಿನ ಮರಿಗೆ ಕರು ಅನ್ನೋದಾದ್ರೆ,
- ಮೊಸಳೆಯ ಮರಿ: ಹಸುಳೆ ಮೊಸಳೆ
- ಕಪ್ಪೆಯ ಮರಿ: ‘ಭಾವಿ’ ಕಪ್ಪೆ
ತೀರಾ ಕಡಿಮೆ ಸಂಬಳದ ಕೆಲಸಗಳು ಸಿಗೋ ಜಾಗ
- ಚಾಕರಿ ಡಾಟ್ ಕಾಮ್
ಟ್ರಾಫಿಕ್ ಬುದ್ಧನ ಸ್ವಗತ
- ಮನೆಯಿಂದ ಗಾಡಿ ತಗೊಂಡ್ ಹೊರಡುವಾಗ ಇವತ್ ಯಾರನ್ನೂ ಬೈಕೋಬಾರ್ದು ಅಂತ ಎಷ್ಟೇ ಡಿಸೈಡ್ ಮಾಡ್ಕೊಂಡ್ ಹೋದ್ರೂ, ವಾಪಸ್ ಬರೋ ಅಷ್ಟೊತ್ತಿಗೆ ಕಲ್ತಿರೋ ಬೈಗುಳಗಳೆಲ್ಲ ಬಾಯಲ್ಲಿ ಬಂದಿರ್ತವೆ.
ಅಗ್ನಿಶಾಮಕ ದಳದಲ್ಲಿ ಕೆಲಸ ಮಾಡುವವನನ್ನು ವಜಾ ಮಾಡಿದ್ರೆ, ಅದರರ್ಥ
- He is 'FIRE'd
ಅಹಿಂಸೆ ಬಗ್ಗೆ ಮಾತಾಡೋ ಚೇತನ್: ಚೇತನ್ ಅಹಿಂಸಾ
- ತಮ್ಮ ಸಿನಿಮಾಗಳಲ್ಲಿ ಬರೀ ಹಿಂಸೆ ಬಗ್ಗೆ ಮಾತಾಡೋ ವಿನೋದ್ ಪ್ರಭಾಕರ್: ಹಿಂಸಾ ವಿನೋದ