Basavaraj Shivappa Giraganvi Column: ಹೃದಯಾಘಾತದ ತಡೆಗೆ ಇಲ್ಲೊಂದು ಮದ್ದು
ವೈದ್ಯಕೀಯ ಸವಲತ್ತುಗಳು ಹೇಳಿಕೊಳ್ಳುವಷ್ಟೇನೂ ಇಲ್ಲದ ಹಿಂದಿನ ದಿನಮಾನದಲ್ಲಿ ಬಹುತೇಕ ಜನರು, ತಾವಿದ್ದ ಬಡತನದ ಪರಿಸ್ಥಿತಿಯಲ್ಲೂ ಆರೋಗ್ಯವಂತ ಬದುಕನ್ನು ಕಟ್ಟಿಕೊಂಡಿದ್ದರು. ಅಂದು ಉಪವಾಸ-ವನವಾಸ ಅನುಭವಿಸುತ್ತಲೇ, ಮೈದಣಿಯುವಷ್ಟು ದುಡಿದು ಕಣ್ತುಂಬ ನಿದ್ರಿಸುತ್ತಿದ್ದ ಬಡವರ ಸಮೀಪಕ್ಕೂ ಹೃದಯಾಘಾತ, ಮಧುಮೇಹ, ಕ್ಯಾನ್ಸರ್‌ನಂಥ ರೋಗಗಳು ಸುಳಿಯುತ್ತಿರಲಿಲ್ಲ; ಮಾನವೀಯತೆಯಿಲ್ಲದ ಹಾಗೂ ವಿಲಾಸಿ ಜೀವನ ನಡೆಸುತ್ತಿದ್ದ ಶ್ರೀಮಂತರಲ್ಲಿ ಮಾತ್ರವೇ ಈ ರೋಗ ಗಳು ಕಾಣಸಿಗುತ್ತಿದ್ದವು.


ಹೃದಯಗೀತೆ
ಬಸವರಾಜ ಶಿವಪ್ಪ ಗಿರಗಾಂವಿ
ವೈದ್ಯಕೀಯ ಸವಲತ್ತುಗಳು ಹೇಳಿಕೊಳ್ಳುವಷ್ಟೇನೂ ಇಲ್ಲದ ಹಿಂದಿನ ದಿನಮಾನದಲ್ಲಿ ಬಹುತೇಕ ಜನರು, ತಾವಿದ್ದ ಬಡತನದ ಪರಿಸ್ಥಿತಿಯಲ್ಲೂ ಆರೋಗ್ಯವಂತ ಬದುಕನ್ನು ಕಟ್ಟಿಕೊಂಡಿದ್ದರು. ಅಂದು ಉಪವಾಸ ಅನುಭವಿಸುತ್ತಲೇ, ಮೈದಣಿಯುವಷ್ಟು ದುಡಿದು ಕಣ್ತುಂಬ ನಿದ್ರಿಸುತ್ತಿದ್ದ ಬಡವರ ಸಮೀಪಕ್ಕೂ ಹೃದಯಾಘಾತ, ಮಧುಮೇಹದಂಥ ರೋಗಗಳು ಸುಳಿಯುತ್ತಿರಲಿಲ್ಲ.
ಹದಿಹರೆಯದವರಲ್ಲಿ ಇಂದು ಕಾಣಬರುತ್ತಿರುವ ಹೃದಯಾಘಾತದ ಪ್ರಸಂಗಗಳು ಬಹುಚರ್ಚಿತ ವಾಗುತ್ತಿವೆ. ಜನಸಮೂಹದ ಆರೋಗ್ಯವನ್ನು ಕಾಪಾಡಬೇಕಾದ ಸರಕಾರವು ಈ ಬೆಳವಣಿಗೆಗಳಿಂದ ಕೊಂಚ ಮುಜುಗರಕ್ಕೆ ಒಳಗಾಗಿದೆ. ಹೃದಯಾಘಾತ ಎಂಬುದು ಕ್ಷಣದಲ್ಲಿಯೇ ಬದುಕನ್ನು ಕೊನೆ ಗೊಳಿಸಬಹುದಾದ ಒಂದು ಭಯಾನಕ ಸಮಸ್ಯೆ ಅಥವಾ ತೊಂದರೆ.
‘ಆರೋಗ್ಯವಂತರು’ ಎನಿಸಿಕೊಂಡವರೂ ಹೃದಯಾಘಾತಕ್ಕೆ ಬಲಿಯಾಗುತ್ತಿರುವುದನ್ನು ನೋಡಿ ದಾಗ, ‘ಹಾಗಾದರೆ, ಜೀವನವೆಂಬುದು ನೀರಿನ ಮೇಲಿನ ಗುಳ್ಳೆಯೇ? ಹೀಗಾದರೆ ಆನಂದಮಯ ಬದುಕನ್ನು ಅನುಭವಿಸುವುದು ಹೇಗೆ?’ ಎಂಬ ಪ್ರಶ್ನೆಗಳು ಮುನ್ನೆಲೆಗೆ ಬರುತ್ತವೆ. ಹೃದಯಾಘಾತದ ಸಮಸ್ಯೆಯ ಕುರಿತು ವೈದ್ಯಕೀಯ ವಲಯದಿಂದ ಸಾಕಷ್ಟು ಅಭಿಪ್ರಾಯಗಳು ಈಗಾಗಲೇ ಹೊರ ಹೊಮ್ಮಿವೆ.
ಸಾಮಾಜಿಕವಾಗಿ ಹೇಳುವುದಾದರೆ, ಸಂತೃಪ್ತಿಯಿಲ್ಲದ ಧಾವಂತದ ಬದುಕು, ಮಿತಿಮೀರಿದ ದುಶ್ಚಟ ಗಳು, ಬದಲಾದ ಜೀವನಶೈಲಿ ಮತ್ತು ಶುದ್ಧ ಆಹಾರಗಳ ಕೊರತೆಯಿಂದಾಗಿ ಹೃದಯಾಘಾತ, ಮಧುಮೇಹ ಮತ್ತು ಕ್ಯಾನ್ಸರ್‌ನಂಥ ಕಾಯಿಲೆಗಳು ಹೆಚ್ಚುತ್ತಿರುವುದು ಸುಳ್ಳಲ್ಲ.
ಇದನ್ನೂ ಓದಿ: Basavaraj Shivappa Giraganvi Column: ಗೊತ್ತಿರಲಿ, ಭಾರತದ ಕಷ್ಟಕಾಲದ ಗೆಳೆಯ ರಷ್ಯಾ
ವೈದ್ಯಕೀಯ ಸವಲತ್ತುಗಳು ಹೇಳಿಕೊಳ್ಳುವಷ್ಟೇನೂ ಇಲ್ಲದ ಹಿಂದಿನ ದಿನಮಾನದಲ್ಲಿ ಬಹುತೇಕ ಜನರು, ತಾವಿದ್ದ ಬಡತನದ ಪರಿಸ್ಥಿತಿಯಲ್ಲೂ ಆರೋಗ್ಯವಂತ ಬದುಕನ್ನು ಕಟ್ಟಿಕೊಂಡಿದ್ದರು. ಅಂದು ಉಪವಾಸ-ವನವಾಸ ಅನುಭವಿಸುತ್ತಲೇ, ಮೈದಣಿಯುವಷ್ಟು ದುಡಿದು ಕಣ್ತುಂಬ ನಿದ್ರಿಸುತ್ತಿದ್ದ ಬಡವರ ಸಮೀಪಕ್ಕೂ ಹೃದಯಾಘಾತ, ಮಧುಮೇಹ, ಕ್ಯಾನ್ಸರ್‌ನಂಥ ರೋಗಗಳು ಸುಳಿಯುತ್ತಿರಲಿಲ್ಲ; ಮಾನವೀಯತೆಯಿಲ್ಲದ ಹಾಗೂ ವಿಲಾಸಿ ಜೀವನ ನಡೆಸುತ್ತಿದ್ದ ಶ್ರೀಮಂತರಲ್ಲಿ ಮಾತ್ರವೇ ಈ ರೋಗಗಳು ಕಾಣಸಿಗುತ್ತಿದ್ದವು.
ಅಂದಿನ ಕಾಲದಲ್ಲಿ ಶ್ರಮಿಕರ ಮೇಲೆ ಶ್ರೀಮಂತರು ಮತ್ತು ಜಮೀನ್ದಾರರು ಸಹನೆಯಿಲ್ಲದೆ ಸವಾರಿ ಮಾಡುತ್ತಿದ್ದರು. ಅಂದು ಸರಕಾರದಿಂದ ‘ಉಚಿತ’ ಮತ್ತು ‘ಗ್ಯಾರಂಟಿ’ಗಳೆಂಬ ಯಾವುದೇ ಸವಲತ್ತು ಗಳಿರಲಿಲ್ಲ, ಜನರೂ ಇವಕ್ಕೆಲ್ಲಾ ಸರಕಾರದ ಮೇಲೆ ಅವಲಂಬಿತರಾಗಿರಲಿಲ್ಲ. ಕೃಷಿಯೇ ಮುಖ್ಯ ಕಸುಬಾಗಿದ್ದ ಆ ಕಾಲಘಟ್ಟದಲ್ಲಿ ಬಡಜನರು ಬೆಳಗಿನಿಂದ ರಾತ್ರಿಯವರೆಗೂ ನೈಸರ್ಗಿಕವಾದ ಕೃಷಿಕಾಯಕದಲ್ಲೇ ಮಗ್ನರಾಗಿರುತ್ತಿದ್ದರು.
ಅಂದಿನ ಶ್ರಮಿಕ ಜನರಿಗೆ ಹೊಟ್ಟೆ ತುಂಬ ಉಣ್ಣಲು ಆಹಾರ ಸಿಗುತ್ತಿರಲಿಲ್ಲ, ಹೊಟ್ಟೆಪಾಡಿಗಾಗಿ ಕಠಿಣ ದುಡಿಮೆಯು ಕಡ್ಡಾಯವಾಗಿತ್ತು. ಇಷ್ಟಾಗಿಯೂ ಅವರಲ್ಲಿನ ತ್ಯಾಗ ಮನೋಭಾವ ಮತ್ತು ಪ್ರಾಮಾಣಿಕ ದುಡಿಮೆ ಮೆಚ್ಚುವಂತಿದ್ದವು. ಅಂದಿನವರ ವಿಶೇಷವೆಂದರೆ, ಇದ್ದುದರಲ್ಲೇ ತೃಪ್ತಿ ಯಾಗಿರುತ್ತಿದ್ದರು, ರಾಸಾಯನಿಕರಹಿತ ಪರಿಶುದ್ಧ ಮತ್ತು ನೈಸರ್ಗಿಕ ಆಹಾರವನ್ನು ದಿನನಿತ್ಯ ಸೇವಿಸುತ್ತಿದ್ದರು.
ಇವೆಲ್ಲಕ್ಕಿಂತ ಮಿಗಿಲಾಗಿ, ಅಂದಿನ ಜನರಲ್ಲಿ ಹೃದಯ ಶ್ರೀಮಂತಿಕೆ, ಹೃದಯ ವೈಶಾಲ್ಯದಂಥ ಗುಣ-ವೈಶಿಷ್ಟ್ಯಗಳು ಹೇರಳವಾಗಿದ್ದವು. ಹೀಗೆ ಎಲ್ಲ ರೀತಿಯಲ್ಲಿ ಹೃದಯವು ಬಹಳ ಆರೋಗ್ಯಕರ ವಾಗಿದ್ದುದರಿಂದ ಹೃದಯಾಘಾತದ ಪ್ರಕರಣಗಳು ತೀರಾ ವಿರಳವಾಗಿದ್ದವು. ಆದರೆ, ಇಂದು ಪರಿಸ್ಥಿತಿಯು ಸಂಪೂರ್ಣವಾಗಿ ಬದಲಾಗಿದೆ. ಸಾಕಷ್ಟು ವೈದ್ಯಕೀಯ ಸೇವೆಗಳು ಲಭ್ಯವಿದ್ದು ಶರೀರದ ಪ್ರತಿಯೊಂದು ಅಂಗಾಂಗಗಳಿಗೂ ಪ್ರತ್ಯೇಕ
ವೈದ್ಯರಿದ್ದಾರೆ. ಅಲ್ಲದೆ, ತಾಂತ್ರಿಕ ಜ್ಞಾನ ಮತ್ತು ಹಣದ ಹರಿವು ಹೆಚ್ಚಾಗಿದೆ. ಇಂದು ಜನರು ಉಪವಾಸ-ವನವಾಸ ಬೀಳುವಂಥ ಪ್ರಸಂಗಗಳು ಕಮ್ಮಿಯಾಗಿದ್ದು, ಬಹುತೇಕರು ಹೊಟ್ಟೆತುಂಬ ಊಟಮಾಡುತ್ತಿದ್ದಾರೆ. ಅವಶ್ಯಕ ಸೇವೆಗಳು ಮತ್ತು ಸೌಕರ್ಯಗಳು ಬಯಸಿದಾಕ್ಷಣ ಮನೆಯ ಬಾಗಿಲಿಗೇ ಬಂದೊದಗುತ್ತಿವೆ, ಅವಕ್ಕಾಗಿ ಮನೆಯವರೇ ಮುಂದೆ ನಿಂತು ಮೈಕೈ ನೋಯಿಸಿ ಕೊಳ್ಳಬೇಕು ಎಂದೇನಿಲ್ಲ.
ಹೀಗಾಗಿ ಶಾರೀರಿಕ ದುಡಿಮೆ ಮೂಲೆಗುಂಪಾಗಿದೆ. ಇನ್ನೊಂದೆಡೆ, ಹೃದಯದ ವೈರಿಗಳೆನಿಸಿದ ಕಪಟ, ಮೋಸ, ಕೋಪ, ಹತಾಶೆ ಮತ್ತು ಅಸೂಯೆಗಳು ಹೆಚ್ಚಾಗಿವೆ. ಹೊಟ್ಟೆ ತುಂಬ ಊಟ ಮಾಡಲಾಗು ತ್ತಿದೆಯಾದರೂ ಆಹಾರದ ಪರಿಶುದ್ಧತೆಯ ಬಗ್ಗೆ ಕಿಂಚಿತ್ತೂ ಗಮನವಿಲ್ಲ.
ಎಷ್ಟೇ ಸಿರಿ-ಸಂಪತ್ತು ಇದ್ದರೂ ಧನದಾಹ ಕಡಿಮೆಯಾಗಿಲ್ಲ. ಹೆಚ್ಚಿನವರಲ್ಲಿ ಹಸನ್ಮುಖವಿಲ್ಲ, ಧನ್ಯತಾಭಾವವಿಲ್ಲ. ಕೈಯಲ್ಲಿ ಸಾಕಷ್ಟು ದುಡ್ಡಿದ್ದರೂ ಕಷ್ಟಗಳು ತಪ್ಪಿಲ್ಲ. ಆತಂಕ ಮತ್ತು ಒತ್ತಡದ ನಡುವೆಯೇ ಬದುಕುವುದು ಸರ್ವೇಸಾಮಾನ್ಯವಾಗಿದೆ. ಇಂದಿನ ಪರಿಸ್ಥಿತಿ ಹೇಗಿದೆಯೆಂದರೆ, ತಿನ್ನುವಾಗ ಆಹಾರದ ರುಚಿಯನ್ನು ಗ್ರಹಿಸಲಾಗದಷ್ಟು ಒತ್ತಡದಲ್ಲಿ ಮತ್ತು ಧಾವಂತದಲ್ಲಿ ನಾವು ಸಿಲುಕಿದ್ದೇವೆ.
ಸ್ಮಾರ್ಟ್ ಫೋನ್ ಎಂಬ ಮಾಯಾಲೋಕವು ಮನುಷ್ಯರ ಸ್ನೇಹ-ಸಂಬಂಧಗಳನ್ನು, ಹೃದಯಾಂತ ರಾಳದ ಮಾತುಗಳನ್ನು ಆಡುವ ಚಿತ್ತಸ್ಥಿತಿಯನ್ನು ಆಪೋಶನಕ್ಕೆ ತೆಗೆದುಕೊಂಡು ಬಿಟ್ಟಿದೆ. ಮದುವೆ-ಮುಂಜಿ, ಹಬ್ಬ-ಹರಿದಿನಗಳಲ್ಲಿ ಅಪರೂಪಕ್ಕೆ ಎಂಬಂತೆ ಬಂಧು-ಮಿತ್ರರು ಒಂದೆಡೆ ಸೇರಿರುವಾಗಲೂ ಅವರೊಂದಿಗೆ ಸೌಹಾರ್ದಮಯ ಮಾತುಕತೆಯಲ್ಲಿ ತೊಡಗದೆ ಮೊಬೈಲ್ ವೀಕ್ಷಣೆಯಲ್ಲೇ ‘ಟೈಂಪಾಸ್’ ಮಾಡುವುದು ಬಹುತೇಕರ ಚಾಳಿಯಾಗಿ ಬಿಟ್ಟಿದೆ.
ಹಗಲಿನಲ್ಲಿ ಮಾಡಬೇಕಾದ ಹಗುರ ಕೆಲಸಗಳನ್ನು ರಾತ್ರಿಯಿಡೀ ಮಾಡುತ್ತ, ರಾತ್ರಿಯಲ್ಲಿನ ವಿಶ್ರಾಂತಿ ಅಂದರೆ ನಿದ್ರೆಯನ್ನು ಹಗಲು ಮಾಡುತ್ತ ಸೋಮಾರಿತನವನ್ನು ಮೈಗೂಡಿಸಿಕೊಂಡಿದ್ದೇವೆ. ದೈಹಿಕ ಶ್ರಮಕ್ಕಿಂತ ಮಾನಸಿಕ ವೇದನೆಗಳು ಹೆಚ್ಚಾಗಿ, ಪರಿಪೂರ್ಣ ನಿದ್ರೆಯಿಲ್ಲದೆ ರಾತ್ರಿಗಳನ್ನು ಕಳೆಯು ವಂತಾಗಿದೆ.
‘ಇರುವ ಭಾಗ್ಯವ ನೆನೆದು ಬಾರೆನೆಂಬುದನು ಬಿಡು, ಹರುಷಕ್ಕಿದೆ ದಾರಿ’ ಎಂಬ ಡಿ.ವಿ.ಗುಂಡಪ್ಪ ನವರ ಕಗ್ಗದಂತೆ ಇದ್ದುದರಲ್ಲಿಯೇ ತೃಪ್ತಿಹೊಂದದೆ ಒಣಚಿಂತೆಗಳನ್ನು ಮೈಯೆಲ್ಲಾ ಸುತ್ತಿಕೊಂಡಿ ದ್ದೇವೆ. ಹೀಗಾಗಿ ಬದುಕಿನಲ್ಲಿಂದು ಹೃದಯವಿದ್ರಾವಕ ಪ್ರಸಂಗಗಳನ್ನೇ ಹೆಚ್ಚಾಗಿ ಅನುಭವಿಸು ತ್ತಿದ್ದೇವೆ. ಇವುಗಳಿಂದ ಹ ದಯಾಘಾತ/ಹೃದಯ ಸ್ತಂಭನವಾಗದೆ ಮತ್ತೇನಾಗುತ್ತದೆ? ಮನುಷ್ಯರಂತೆ ಪ್ರಾಣಿಗಳೂ ಜೀವಿಗಳೇ, ಆದರೆ ಪ್ರಾಣಿಗಳಲ್ಲಿ ಹೃದಯಾಘಾತದಂಥ ಪ್ರಸಂಗಗಳು ಅಪರೂಪ. ಇದಕ್ಕೆ ಪ್ರಮುಖ ಕಾರಣವೆಂದರೆ, ಮನುಷ್ಯರನ್ನು ಹೊರತಪಡಿಸಿ ಮಿಕ್ಕ ಜೀವಿಗಳು ಆಸೆ-ಆಕಾಂಕ್ಷೆ ಗಳಿಲ್ಲದೆ ನೈಸರ್ಗಿಕವಾಗಿ ಬದುಕುತ್ತಿವೆ. ಬುದ್ಧಿಜೀವಿಯಾಗಿರುವ ಮಾನವನ ಅಭಿವೃದ್ಧಿಯು ಆರೋಗ್ಯಕರವಾಗಿರಬೇಕೇ ಹೊರತು ಅನಾರೋಗ್ಯಕರವಾಗಿ ಅಲ್ಲ.
ಇದು ಕೈಗೂಡಬೇಕೆಂದರೆ, ಪರರನ್ನು ಪ್ರೀತಿಸುವ-ಗೌರವಿಸುವ ಭಾವನೆ ಪ್ರತಿಯೊಬ್ಬರಲ್ಲೂ ನೆಲೆಯೂರಬೇಕು. ಕಷ್ಟದಲ್ಲಿರುವವರನ್ನು ಕರುಣೆಯಿಂದ ಕಾಣಬೇಕು. ನೈತಿಕ ಮತ್ತು ಮೌಲ್ಯಾ ಧಾರಿತ ಸಂಬಂಧಗಳು ಬೆಳೆಯಬೇಕು, ಗಟ್ಟಿಯಾಗಬೇಕು. ನೈಸರ್ಗಿಕ ಸವಲತ್ತುಗಳನ್ನು ಮಾತ್ರವೇ ಅನುಭವಿಸಬೇಕು, ಮತ್ತೊಬ್ಬರನ್ನು ಗೆಲ್ಲುವ ಪ್ರವೃತ್ತಿ ಹೆಚ್ಚಾಗಬೇಕು.
ಬದುಕಿನ ಬಹುದೊಡ್ಡ ಔಷಧಿಗಳಾಗಿರುವ ನಗು, ನೈಜತೆ, ಶಾಂತಿ, ಸತ್ಯ, ಸಮರ್ಪಣಾಭಾವ, ಸಹನೆ, ಉಪಕಾರಬುದ್ಧಿ, ಸತ್ಕಾರ್ಯ, ಸರಳತೆ, ಸ್ಪಷ್ಟತೆ, ಸ್ನೇಹ, ಸಹಬಾಳ್ವೆ, ಸಹಾನುಭೂತಿ, ಸಂಘಟನಾ ಪ್ರವೃತ್ತಿ, ಸಹಮತ, ಸಮಚಿತ್ತ, ಸಾಂತ್ವನ, ಸದ್ವಿಚಾರ ಇವೇ ಮುಂತಾದ, ಮನಸ್ಸನ್ನು ಹಗುರಾಗಿ ಸುವ ಮತ್ತು ಹೃದಯವನ್ನು ವಿಶಾಲವಾಗಿಸುವ ಭಾವನೆಗಳು ಹೆಚ್ಚಾಗಬೇಕು. ಆಗ ಮಾತ್ರ ಹೃದಯಾಘಾತದಂಥ ಸಮಸ್ಯೆಗಳನ್ನು ಒಂದು ಮಟ್ಟಿಗಾದರೂ ತಡೆಯಲು ಸಾಧ್ಯ.
(ಲೇಖಕರು ಕೃಷಿ ತಜ್ಞರು ಹಾಗೂ ಸಹಾಯಕ ಮಹಾಪ್ರಬಂಧಕರು)