ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Prasad G M Column: ಮಕ್ಕಳು ದಿನಪತ್ರಿಕೆ ಓದುವುದನ್ನು ರೂಢಿಸಿಕೊಳ್ಳುವುದು ಹೇಗೆ.. ?

ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ಸಮಯದಲ್ಲಿ ಕೆಲವೊಂದು ಶಾಲೆಗಳಲ್ಲಿ ದಿನಪತ್ರಿಕೆಗಳನ್ನು ಸಾರ್ವ ಜನಿಕವಾಗಿ ಓದುವ ಪರಿಪಾಠವಿದೆ. ತೀರಾ ಚಿಕ್ಕಮಕ್ಕಳನ್ನು ಹೊರತುಪಡಿಸಿ ಕನಿಷ್ಠ ಐದನೇ ತರಗತಿ ಮೇಲ್ಪಟ್ಟ ಮಕ್ಕಳು ದಿನಪತ್ರಿಕೆಯನ್ನು ಓದುವುದು, ವಾಚನ ಮಾಡುವುದನ್ನು ಕೇಳಿಸಿ ಕೊಂಡರೆ, ಓದುವ ಕಡೆ ಕುತೂಹಲ ಹೆಚ್ಚಾಗಬಹುದು.

ವರ್ತಮಾನ

ಪ್ರಸಾದ್‌ ಜಿ.ಎಂ.

ಉತ್ತರ ಪ್ರದೇಶ ಸರಕಾರವು ಶಾಲೆಗಳಲ್ಲಿ ಪ್ರತಿನಿತ್ಯ ವಿದ್ಯಾರ್ಥಿಗಳು ದಿನಪತ್ರಿಕೆಯನ್ನು ಓದುವು ದನ್ನು ಇತ್ತೀಚೆಗೆ ಕಡ್ಡಾಯಗೊಳಿಸಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉತ್ತರ ಪ್ರದೇಶ ಸರಕಾರದ ಈ ನಡೆ ಸ್ವಾಗತಾರ್ಹವಾದುದು. ಹಿಂದುಳಿದ ರಾಜ್ಯಗಳಲ್ಲಿ ಉತ್ತರ ಪ್ರದೇಶವೂ ಒಂದಾ ಗಿದ್ದು, ವಿದ್ಯಾರ್ಥಿಗಳು ದಿನಪತ್ರಿಕೆ ಓದುವುದನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಿರುವುದು ಶೈಕ್ಷಣಿಕವಾಗಿ ಅನುಕೂಲಗಳು ಆಗಬಹುದು.

ಶಾಲೆಗಳಲ್ಲಿ ಬೆಳಗಿನ ಪ್ರಾರ್ಥನೆ ಸಮಯದಲ್ಲಿ ಕೆಲವೊಂದು ಶಾಲೆಗಳಲ್ಲಿ ದಿನಪತ್ರಿಕೆಗಳನ್ನು ಸಾರ್ವಜನಿಕವಾಗಿ ಓದುವ ಪರಿಪಾಠವಿದೆ. ತೀರಾ ಚಿಕ್ಕಮಕ್ಕಳನ್ನು ಹೊರತುಪಡಿಸಿ ಕನಿಷ್ಠ ಐದನೇ ತರಗತಿ ಮೇಲ್ಪಟ್ಟ ಮಕ್ಕಳು ದಿನಪತ್ರಿಕೆಯನ್ನು ಓದುವುದು, ವಾಚನ ಮಾಡುವುದನ್ನು ಕೇಳಿಸಿ ಕೊಂಡರೆ, ಓದುವ ಕಡೆ ಕುತೂಹಲ ಹೆಚ್ಚಾಗಬಹುದು.

ದಿನಪತ್ರಿಕೆಗಳನ್ನು ವಾಚನ ಮಾಡುವುದನ್ನು ಕೇಳಿಸಿಕೊಳ್ಳುವ ಮಕ್ಕಳಲ್ಲಿ ಬೇರೆಯವರು ಏನಾದರೂ ಹೇಳುವಾಗ ಅದನ್ನು ಕೇಳಿಸಿಕೊಳ್ಳುವ ತಾಳ್ಮೆ ಬರುತ್ತದೆ. ಇದರಿಂದ ಮಕ್ಕಳಿಗೆ ವಿಷಯದ ಗ್ರಹಿಕೆ ಉತ್ತಮಗೊಂಡು ಅದರಿಂದ ಉಪಯೋಗವಾಗುತ್ತದೆ.

ಮಕ್ಕಳು ದಿನಪತ್ರಿಕೆಗಳನ್ನು ಓದುವುದರಿಂದ ತಮ್ಮ ಸುತ್ತಮುತ್ತ ಏನೆ ಬೆಳವಣಿಗೆಗಳಾಗುತ್ತಿವೆ ಎಂಬ ಅರಿವು ಉಂಟಾಗುತ್ತದೆ. ಸ್ಥಳೀಯ, ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ವೈವಿಧ್ಯಮಯ ವಿಚಾರಗಳು ಮಕ್ಕಳಿಗೆ ತಿಳಿಯುತ್ತದೆ. ಉದಾ: ಮಕ್ಕಳು ದಿನಪತ್ರಿಕೆಯನ್ನು ಓದು ತ್ತಿದ್ದಾರೆ ಎಂದು ಭಾವಿಸೋಣ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಗುಣಮಟ್ಟ ಕುಸಿತ ಎಂಬ ಸುದ್ದಿಯನ್ನು ಓದುತ್ತಾರೆ, ಆ ಸಂದರ್ಭದಲ್ಲಿ ಅವರ ತಲೆಯಲ್ಲಿ ಎರಡು ವಿಚಾರಗಳು ಬರುತ್ತವೆ.

ಇದನ್ನೂ ಓದಿ: Keshava Prasad B Column: ಭಾರತೀಯ ಸ್ಟಾಕ್‌ ಮಾರ್ಕೆಟ್‌ಗೆ ದೇಸಿ ಹೂಡಿಕೆದಾರರ ಅಭಯ

ಒಂದು, ನಮ್ಮ ದೇಶದ ರಾಜಧಾನಿ ದೆಹಲಿ ಅಂತ, ಇನ್ನೊಂದು ಅಲ್ಲಿನ ವಾಯುಗುಣಮಟ್ಟದ ಬಗ್ಗೆ ಗೊತ್ತಾಗುತ್ತದೆ. ಈ ರೀತಿ ಮಕ್ಕಳು ದಿನಪತ್ರಿಕೆಗಳನ್ನು ಓದುವುದರಿಂದ ಸಾಮಾನ್ಯ ಜ್ಞಾನವು ಅವರಿಗೆ ಅರಿವಿಲ್ಲದಂತೆ ಹೆಚ್ಚುತ್ತದೆ. ಇದು ಶಾಲೆಯಲ್ಲಿ ನಡೆಯುವ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಪರೀಕ್ಷೆಗಳು ಮುಂತಾದ ಕಡೆಗಳಲ್ಲಿ ಸಹಾಯಕ್ಕೆ ಬರುತ್ತವೆ.

ಮಕ್ಕಳು ದಿನಪತ್ರಿಕೆಗಳನ್ನು ಓದುವುದರಿಂದ ಅವರ ಭಾಷಾ ಕೌಶಲ್ಯ, ಪದಸಂಪತ್ತು ವೃದ್ಧಿಸುತ್ತದೆ. ಸಾಮಾನ್ಯವಾಗಿ ಮಕ್ಕಳು ಪ್ರತಿದಿನ ಸಾಮಾನ್ಯವಾಗಿ ಪಠ್ಯಪುಸ್ತಕಗಳನ್ನು ಮಾತ್ರ ಓದುತ್ತಿರುತ್ತಾರೆ. ಹಿಂದೆ ಚಿಕ್ಕಮಕ್ಕಳಿಗೆ ಬಾಲಮಂಗಳ, ಚಂದಾಮಾಮ ಮುಂತಾದ ಪುಸ್ತಕಗಳನ್ನು ಪೋಷಕರು ಕೊಡಿಸುತ್ತಿದ್ದರು, ಇವುಗಳನ್ನು ಓದುತ್ತಿದ್ದ ಮಕ್ಕಳಿಗೆ ಅದರಿಂದ ಪ್ರಯೋಜನಗಳು ಆಗುತ್ತಿದ್ದವು.

ಪ್ರಸ್ತುತ ಮಕ್ಕಳು ಪಠ್ಯಪುಸ್ತಕಗಳನ್ನು ಬಿಟ್ಟು ಬೇರೆನನ್ನೂ ಓದುತ್ತಿಲ್ಲ. ಒಮ್ಮೆ ಅವರು ದಿನಪತ್ರಿಕೆ ಗಳನ್ನು ಓದಲು ಶುರು ಮಾಡಿದರೆ ಅವರಿಗೆ ಹೊಸದೊಂದು ಜ್ಞಾನ ಪ್ರಪಂಚ ತೆರೆದುಕೊಳ್ಳುತ್ತದೆ. ಪ್ರತಿದಿನ ಬರೀ ಪಠ್ಯಪುಸ್ತಕಗಳು ಮತ್ತು ಇತರ ವಿಚಾರಗಳನ್ನು ತಿಳಿದುಕೊಳ್ಳುವ ಮಕ್ಕಳು ಹೊಸ ವಿಷಯ, ವಿಚಾರಗಳನ್ನು ತಿಳಿದುಕೊಳ್ಳಲು ಆರಂಭಿಸುತ್ತಾರೆ.

ಕನ್ನಡ, ಇಂಗ್ಲಿಷ್ ಮತ್ತು ಇತರ ಯಾವುದೇ ಭಾಷೆಗಳ ದಿನಪತ್ರಿಕೆಗಳನ್ನು ಓದುತ್ತಾ, ಓದುತ್ತಾ ಹೋದಂತೆ ಇದುವರೆಗೂ ಓದಿರದ ಎಷ್ಟೋ ಪದಗಳು ಗೊತ್ತಾಗುತ್ತವೆ. ಒಂದು ಭಾಷೆಯ ಉಳಿವಿಗೆ ಇದೂ ಕೂಡ ಕೊಡುಗೆ ನೀಡುತ್ತದೆ. ವಿದ್ಯಾರ್ಥಿಯು ಆರನೇ ತರಗತಿಯಿಂದ ತಾನು ಪದವಿ ವ್ಯಾಸಂಗ ಮುಗಿಸುವ ಹಂತಕ್ಕೆ ಬರುವವರೆಗೆ ಪ್ರತಿದಿನವೂ ಒಂದೊಂದು ಪದವನ್ನು ತಿಳಿದು ಕೊಂಡರೂ ಆ ವಿದ್ಯಾರ್ಥಿಯ ಪದಸಂಪತ್ತು ಒಂದು ನಿಘಂಟಿಗೆ ಸಮವಾಗುತ್ತದೆ.

ಎಲ್ಲಾ ವಿದ್ಯಾರ್ಥಿಗಳಿಂದ ಇದು ಸಾಧ್ಯವೇ ಎಂಬ ಪ್ರಶ್ನೆ ಮೂಡಬಹುದು. ಅದಕ್ಕೆ ಪರಿಹಾರ - ವಿದ್ಯಾರ್ಥಿಗಳು ದಿನಪತ್ರಿಕೆಯನ್ನು ಓದುವಂತೆ ಉತ್ತೇಜನ ನೀಡಬೇಕು, ಓದುವ ಪರಿಸರ ಸೃಷ್ಟಿಸ ಬೇಕು. ಮಕ್ಕಳು ಚಿಕ್ಕವಯಸ್ಸಿನ ದಿನಪತ್ರಿಕೆಗಳನ್ನು ಓದುವುದನ್ನು ರೂಢಿಸಿಕೊಂಡರೆ ಅದರಿಂದ ಆಗುವ ಲಾಭಗಳು ಸಾಕಷ್ಟು.

ದಿನಪತ್ರಿಕೆಗಳ ಓದು ಉತ್ತೇಜಿಸುವುದು ಹೇಗೆ..?

ಸರಕಾರಗಳೇನೋ ಶಾಲೆಗಳಲ್ಲಿ ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವುದನ್ನು ಕಡ್ಡಾಯಗೊಳಿಸಿದೆ. ಆದರೆ, ಅದನ್ನು ಹೊರತುಪಡಿಸಿ ಬೇರೆ ಮಾರ್ಗಗಳ ಬಗ್ಗೆ ಚಿಂತಿಸುವ ಅಗತ್ಯವಿದೆ. ಮನೆಯೇ ಮೊದಲ ಪಾಠಶಾಲೆ ಎಂಬ ನಾಣ್ಣುಡಿಯ ಹಾಗೆ ಯಾವುದೇ ಮಗು ಶಾಲೆಗೆ ಸೇರುವ ಮೊದಲು ಆ ಮಗುವಿಗೆ ತನ್ನ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು.

ಈ ನಿಟ್ಟಿನಲ್ಲಿ ಮೊದಲು ಪೋಷಕರಾದವರು ಮನೆಯಲ್ಲಿ ದಿನಪತ್ರಿಕೆಗಳನ್ನು ಓದಲು ಅಭ್ಯಾಸ ಮಾಡಿಕೊಂಡರೆ ಚಿಕ್ಕಮಕ್ಕಳು ಅದನ್ನು ನೋಡಿ ಮುಂದೆ ಬೆಳೆಯುತ್ತಾ ಹೋದಂತೆ ದಿನಪತ್ರಿಕೆ ಗಳನ್ನು ಓದುವ ಪ್ರಯತ್ನ ಮಾಡಬಹುದು. ಇದು ಎಲ್ಲಾ ಪೋಷಕರಿಗೂ ಸಾಧ್ಯವೇ ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.

ಆದರೆ ಅಕ್ಷರಸ್ಥ ಪೋಷಕರಲ್ಲಿ ಕೆಲವರಾದರೂ ಈ ಕೆಲಸವನ್ನು ಮಾಡಬಹುದು, ಅದು ಸಾಧ್ಯವಿದೆ, ಮಾಡುವ ಇಚ್ಛಾಶಕ್ತಿ, ಮಾಡುವ ಸಂಕಲ್ಪ ಇರಬೇಕಷ್ಟೆ. ಮಾಹಿತಿ ತಂತ್ರಜ್ಞಾನದ ಆಗಮನದಿಂದ ಮನುಷ್ಯನ ಜೀವನ ಸಾಕಷ್ಟು ಬದಲಾವಣೆಯನ್ನು ಕಂಡಿದೆ. ಕೊರೊನಾ ನಂತರವಂತೂ ವಿದ್ಯಾರ್ಥಿಗಳು, ಮಕ್ಕಳು ಶೈಕ್ಷಣಿಕ ಕಾರಣಗಳ ಹೊರತಾಗಿ ಮೊಬೈಲ್ ಬಳಸುವುದನ್ನು ಹೆಚ್ಚೆಚ್ಚು ರೂಢಿ ಮಾಡಿಕೊಂಡಿದ್ದಾರೆ.

ಇದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ. ಇದರಿಂದ ಹೊರಬರಲು ದಿನಪತ್ರಿಕೆಗಳನ್ನು ಓದುವ ಅಭ್ಯಾಸವನ್ನು ರೂಢಿಸಿಕೊಳ್ಳ ಬಹುದು.

ಗ್ರಂಥಾಲಯಕ್ಕೆ ಹೋಗುವುದು

ಮಕ್ಕಳು ತಮಗೆ ಹತ್ತಿರವಿರುವ ಯಾವುದಾದರೂ ಗ್ರಂಥಾಲಯಕ್ಕೆ ಹೋದರೆ ಅಲ್ಲಿ ಸಿಗುವುದು ಗಾಢ ಮೌನ, ತೆರೆಯದೇ ಇರುವ ದಿನಪತ್ರಿಕೆಗಳು, ನಿಯತಕಾಲಿಕೆಗಳು ಹಾಗೂ ಪುಸ್ತಕಗಳು. ಇದರಿಂದಾ ಗುತ್ತಿರುವ ನಷ್ಟಕ್ಕೆ ಬೆಲೆಕಟ್ಟಲು ಆಗುವುದಿಲ್ಲ. ಈ ನಿಟ್ಟಿನಲ್ಲಿ ಪೋಷಕರು ಅಥವಾ ಶಿಕ್ಷಕರು ಮಕ್ಕಳು ಗ್ರಂಥಾಲಯಕ್ಕೆ ಹೋಗುವುದನ್ನು ಉತ್ತೇಜಿಸಬೇಕು.

ಗ್ರಂಥಾಲಯದಲ್ಲಿ ವಿವಿಧ ಭಾಷೆಗಳ ಸಾಕಷ್ಟು ಪುಸ್ತಕಗಳು, ದಿನಪತ್ರಿಕೆಗಳು ಹಾಗೂ ನಿಯತಕಾಲಿಕೆ ಗಳು ಸಿಗುತ್ತವೆ. ಮಕ್ಕಳು ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಇಂದು ಹದಿಹರೆಯ ದವರು ಕೂಡ ಸಾಮಾಜಿಕ ಜಾಲತಾಣಗಳ ದಾಸರಾಗಿರುವುದು ಆತಂಕದ ಸಂಗತಿ.

ನಿತ್ಯಜೀವನಕ್ಕೆ ಬೇಡದ ಅನವಶ್ಯಕವಾದುದನ್ನು ಇಂದಿನ ಯುವ ಪೀಳಿಗೆ ನೋಡುತ್ತಿದೆ. ಇದರಿಂದ ಹೊರಬರಲು ದಿನಪತ್ರಿಕೆ, ಪುಸ್ತಕಗಳ ಓದು ಪರಿಹಾರವಾಗಬಲ್ಲದು. ಈ ಎಲ್ಲಾ ಬೆಳವಣಿಗೆಗಳು ಒಂದೇ ದಿನಕ್ಕೆ ಆಗದಿರಬಹುದು, ಆದರೆ ಎಲ್ಲರೂ ಪ್ರಯತ್ನಿಸಿದರೆ ಹೊಸ ವ್ಯವಸ್ಥೆಯನ್ನು ಕಟ್ಟಲು ಸಾಧ್ಯ.

ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದದ್ದು ಸಾಕಷ್ಟು ವರ್ಷಗಳ ಹೋರಾಟ, ಪ್ರಯತ್ನದ ಫಲವಾಗಿ. ಆದ್ದರಿಂದ ಮಕ್ಕಳು/ವಿದ್ಯಾರ್ಥಿಗಳು ದಿನಪತ್ರಿಕೆ, ಪುಸ್ತಕ, ನಿಯತಕಾಲಿಕೆಗಳನ್ನು ಓದುವುದನ್ನು ಸ್ವಲ್ಪವಾದರೂ ರೂಢಿಸಿಕೊಳ್ಳಬೇಕು. ಒಂದು ಬದಲಾವಣೆ ಒಂದೆರಡು ದಿನಕ್ಕೆ ಆಗದಿರಬಹುದು. ಆದರೆ ಪ್ರಯತ್ನವನ್ನು ನಿಲ್ಲಿಸಬಾರದು. ಒಳ್ಳೆಯ ಕಾರಣಕ್ಕೆ ಆಗುವ ಬದಲಾವಣೆ ಕಾಲ ಹಿಡಿಯು ತ್ತದೆ. ಆದರೆ ವಿದ್ಯಾರ್ಥಿಗಳು ಕೈಚೆಲ್ಲಬಾರದು.

ಸ್ವಾಮಿ ವಿವೇಕಾನಂದರು ಮರಳಿ ಯತ್ನವ ಮಾಡು ಗೆಲುವು ನಿನ್ನದೇ ಎಂದು ಹೇಳಿದ ಹಾಗೆ ವಿದ್ಯಾರ್ಥಿಗಳು ಒಳ್ಳೆಯ ಬದಲಾವಣೆಗೆ ನಿರಂತರ ಪ್ರಯತ್ನ ಮಾಡಬೇಕು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಸಾಮಾಜಿಕ ಉನ್ನತಿ ಹಾಗೂ ಅಂತಿಮವಾಗಿ ದೇಶಕ್ಕೆ ಒಳ್ಳೆಯದಾಗುತ್ತದೆ.

ಮಕ್ಕಳಲ್ಲಿ ದಿನಪತ್ರಿಕೆ ಓದುವುದನ್ನು ಉತ್ತೇಜನ ನೀಡುವುದರ ಜೊತೆಗೆ ನಿಯಮಿತವಾಗಿ ಪುಸ್ತಕ ವನ್ನು ಓದುವಂತೆ ಉತ್ತೇಜಿಸಬೇಕು. ಇಂದು ನಮ್ಮ ಶಿಕ್ಷಣ ವ್ಯವಸ್ಥೆ ಕೇವಲ ಪಠ್ಯಕ್ರಮ ಆಧಾರಿತ, ಉತ್ತಮ ಅಂಕಗಳನ್ನು ಗಳಿಸುವುದರ ಮೇಲೆ ಕೇಂದ್ರೀಕೃತವಾಗಿದೆ.

ಇದರಿಂದ ದೀರ್ಘಕಾಲಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲಗಳಿಲ್ಲ. ವಿದ್ಯಾರ್ಥಿಗಳಲ್ಲಿ ಸಚ್ಚಾರಿತ್ರ್ಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ದಿನಪತ್ರಿಕೆ, ನಿಯತಕಾಲಿಕೆ, ಪುಸ್ತಕಗಳ ಓದು ನೆರವಾಗುತ್ತದೆ. ಇದರ ಜೊತೆಗೆ ದಿನಪತ್ರಿಕೆಯನ್ನು ಓದುವ ಅಭ್ಯಾಸವನ್ನು ಚೆನ್ನಾಗಿ ರೂಢಿಸಿಕೊಂಡ ವಿದ್ಯಾರ್ಥಿ ಯನ್ನು ಪ್ರಶಂಸಿಸಬೇಕು.

ಇದರಿಂದ ಇತರ ವಿದ್ಯಾರ್ಥಿಗಳು ಪ್ರೇರೇಪಿತರಾಗಿ ತಾವು ಓದುವುದನ್ನು ರೂಢಿಸಿಕೊಳ್ಳುವ ಸಾಧ್ಯತೆ ಹೆಚ್ಚು. ಸರಕಾರ ಶಾಲೆಗಳಲ್ಲಿ ದಿನಪತ್ರಿಕೆಗಳನ್ನು ಓದುವಂತೆ ನಿಯಮವನ್ನು ರೂಪಿಸಿದರೂ, ಅಂತಿಮವಾಗಿ ಶಾಲೆಗಳಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು ಪ್ರೋತ್ಸಾಹವನ್ನು ನೀಡಬೇಕು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಅಭ್ಯಾಸದ ರೀತಿಯ ಮೊದಮೊದಲು ಕಷ್ಟವಾಗಬಹುದು, ಮುಂದೆ ಎಲ್ಲವೂ ಸರಿಹೋಗುತ್ತದೆ.

ಲೇಖಕರು, ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠ

ಪ್ರಕಟನ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.