ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roopa Gururaj column: ತಪ್ಪಿತಸ್ಥರನ್ನು ಶಿಕ್ಷಿಸುವ ಕ್ರಮ

ರಾಮನೇ ನಾಯಿಯನ್ನು ‘ಯಾಕೆ ಇಂತಹ ಶಿಕ್ಷೆ ಕೊಡಲು ಹೇಳಿದೆ’ ಎಂದು ಕೇಳಿದನು. ನಾಯಿ ವಿವ ರಿಸಿತು, “ನನ್ನ ಹಿಂದಿನ ಜನ್ಮದಲ್ಲಿ, ನಾನು ಅದೇ ಮಠದ ಮುಖ್ಯನಾಗಿದ್ದೆ. ನಾನು ಮೊದಮೊದಲು ನಿಷ್ಠೆಯಿಂದ ನನ್ನ ಕೆಲಸ ಮಾಡುತ್ತಿದ್ದೆ. ನನ್ನ ಕೈಲಾದಷ್ಟು ಸೇವೆಯನ್ನೂ ಮಾಡುತ್ತಿದ್ದೆ. ಆದರೆ ದಿನ ಕಳೆದಂತೆ, ನನ್ನ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳು ಬರ ಹತ್ತಿದವು.

ತಪ್ಪಿತಸ್ಥರನ್ನು ಶಿಕ್ಷಿಸುವ ಕ್ರಮ

ಒಂದೊಳ್ಳೆ ಮಾತು

rgururaj628@gmail.com

ಇದು ರಾಮಾಯಣದಲ್ಲಿನ ನ್ಯಾಯ ಕೇಳುವ ನಾಯಿಯ ಅಪರೂಪದ ಕಥೆ. ಸೂರ್ಯವಂಶದ ಎಲ್ಲಾ ರಾಜರಂತೆ ರಾಮನೂ ನ್ಯಾಯದಲ್ಲಿ ಕಟುವಾದ ನಿಷ್ಠೆ ಇದ್ದ ರಾಜ. ಪ್ರತಿದಿನವೂ ತಾಳ್ಮೆ ಯಿಂದ ಕುಳಿತು ನ್ಯಾಯಕ್ಕಾಗಿ ತನ್ನ ಬಳಿಗೆ ಬರುವ ಎಲ್ಲ ಜನರ ಕಷ್ಟಗಳನ್ನು ಆಲಿಸುತ್ತಿದ್ದ. ಒಂದು ದಿನ, ಅವನು ತನ್ನ ಸಹೋದರ ಲಕ್ಮಣನಿಗೆ, “ಯಾರಾದರೂ ವಿಚಾರಣೆಗಾಗಿ ಕಾಯುತ್ತಿದ್ದಾರೆಯೇ ಎಂದು ನೋಡಿ ಕರೆದುಕೊಂಡು ಬಾ" ಎಂದು ಹೇಳಿದನು. ಅವನ ಸಹೋದರ ಲಕ್ಷ್ಮಣ ಹೊರಗೆ ಹೋಗಿ ನೋಡಿದಾಗ, ಅವನಿಗೆ ತಲೆಗೆ ತೀವ್ರವಾಗಿ ಗಾಯ ಗೊಂಡ ದುಃಖದ ಮುಖದೊಂದಿಗೆ ಕುಳಿತಿದ್ದ ನಾಯಿಯು ಅರಮನೆಯ ಬಾಗಿಲಿನ ಬಳಿ ತಾಳ್ಮೆ ಯಿಂದ ಕಾಯುತ್ತಿರುವ ದೃಶ್ಯ ಕಂಡು ಬಂದಿತು. ಅದನ್ನು ವಿಚಾರಿಸಲಾಗಿ ನಾಯಿ ಹೇಳಿತು, “ನನಗೆ ನ್ಯಾಯ ಬೇಕು. ಓರ್ವ ವ್ಯಕ್ತಿ ನಿರಪರಾಧಿಯಾದ ತನಗೆ ವಿನಾಕಾರಣ ತಲೆಗೆ ಗಾಯವಾಗುವಂತೆ ಹೊಡೆದಿದ್ದಾನೆ".

ಲಕ್ಷ್ಮಣನು ನಾಯಿಯನ್ನು ರಾಮನ ಬಳಿ ಆಸ್ಥಾನಕ್ಕೆ ಕರೆದೊಯ್ಯುತ್ತಾನೆ. ನಾಯಿ ಹೇಳಿತು, “ಓ ರಾಮಾ, ನನಗೆ ನ್ಯಾಯ ಬೇಕು. ವಿನಾಕಾರಣ ನನ್ನ ಮೇಲೆ ದೌರ್ಜನ್ಯ ಎಸಗಲಾಗಿದೆ. ಸರ್ವಾರ್ಥ ಸಿದ್ದಿ ಎಂಬ ವ್ಯಕ್ತಿ ಯಾವುದೇ ಪ್ರಚೋದನೆ ಇಲ್ಲದೆ ನನ್ನ ತಲೆಗೆ ಹೊಡೆದನು ರಾಜಾರಾಮನು ತನ್ನ ಆಸ್ಥಾನಿಕರನ್ನು ಕರೆದು ಸರ್ವಾರ್ಥ ಸಿದ್ಧಿಯನ್ನು ಕರೆಸುವಂತೆ ಕೇಳಿದನು.

ಸರ್ವಾರ್ಥ ಸಿದ್ಧಿ, ತಾನು ನಿಜವಾಗಿಯೂ ಕೋಪದಿಂದ ನಾಯಿಯನ್ನು ಹೊಡೆದಿದ್ದೇನೆ ಎಂದು ಒಪ್ಪಿಕೊಂಡನು ಮತ್ತು “ನಾನು ಅಪರಾಧಿ. ನೀವು ನನಗೆ ತಕ್ಕ ಶಿಕ್ಷೆ ಕೊಡಬಹುದು" ಎಂದು ಹೇಳಿದನು. ರಾಮನು ತನ್ನ ಮಂತ್ರಿಗಳತ್ತ ತಿರುಗಿ ‘ಈ ಅಪರಾಧಿಗೆ ಏನು ಶಿಕ್ಷೆಯನ್ನು ನೀಡಬೇಕೆಂದು ನೀವು ಭಾವಿಸುತ್ತೀರಿ?’ ಎಂದು ಕೇಳುತ್ತಾನೆ.

ಇದನ್ನೂ ಓದಿ: Roopa Gururaj Column: ಹಣ ಆಸ್ತಿ ಅಂತಸ್ತನ್ನು ಅವಲಂಬಿಸಿದ ಸಂಬಂಧಗಳು

ಅವರೆಲ್ಲರೂ ಸ್ವಲ್ಪ ಸಮಯ ಯೋಚಿಸಿ ಉತ್ತರಿಸಿದರು ‘ಈ ರಾಜ್ಯದಲ್ಲಿ ಎಲ್ಲಾ ನಿಯಮಗಳು ಮನುಷ್ಯರಿಗೆ ಮಾತ್ರ. ಇದೊಂದು ಸಂಕೀರ್ಣ ಪ್ರಕರಣವಾಗಿದ್ದು, ಇದರಲ್ಲಿ ಮನುಷ್ಯ ಮತ್ತು ನಾಯಿ ಭಾಗಿಯಾಗಿದೆ. ಈ ಬಗ್ಗೆ ಯಾವುದೇ ನಿಯಮ ಇಲ್ಲದಿರುವುದರಿಂದ, ನಾವು ಯಾವುದೇ ತೀರ್ಪು ನೀಡಲು ಅಸಾಧ್ಯ. ನೀವು ರಾಜನಾಗಿರುವುದರಿಂದ, ನೀವೇ ತೀರ್ಪು ನೀಡಬೇಕು" ಎಂದರು.

ರಾಮನು ನಾಯಿಯಲ್ಲಿ “ನಿನ್ನಲ್ಲಿ ಏನಾದರೂ ಸಲಹೆ ಇದೆಯೇ? ನಿನ್ನ ಪ್ರಕಾರ ಯಾವ ಶಿಕ್ಷೆ ವಿಧಿಸಲಿ?" ಎಂದು ವಿಚಾರಿಸುತ್ತಾನೆ. ಅದಕ್ಕೆ ನಾಯಿ, “ಹೌದು, ನನ್ನಲ್ಲಿ ತಕ್ಕ ಶಿಕ್ಷೆ ಇದೆ. ಅವನನ್ನು ಒಂದು ಮಠದ ಮುಖ್ಯ ಧರ್ಮಾಧಿಕಾರಿಯನ್ನಾಗಿ ಮಾಡು" ಎಂದು ಹೇಳಿತು.

ರಾಮನು “ಹಾಗೆಯೇ ಆಗಲಿ" ಎಂದನು. ಸರ್ವಾರ್ಥ ಸಿದ್ಧಿಯನ್ನು ತಕ್ಷಣವೇ ಮಠದ ಮುಖ್ಯಸ್ಥ ರನ್ನಾಗಿ ನೇಮಿಸಲಾಯಿತು, ಆಗ ಎಲ್ಲರೂ ಆಶ್ಚರ್ಯಚಕಿತರಾದರು. ರಾಮನೇ ನಾಯಿಯನ್ನು ‘ಯಾಕೆ ಇಂತಹ ಶಿಕ್ಷೆ ಕೊಡಲು ಹೇಳಿದೆ’ ಎಂದು ಕೇಳಿದನು. ನಾಯಿ ವಿವರಿಸಿತು, “ನನ್ನ ಹಿಂದಿನ ಜನ್ಮದಲ್ಲಿ, ನಾನು ಅದೇ ಮಠದ ಮುಖ್ಯನಾಗಿದ್ದೆ. ನಾನು ಮೊದಮೊದಲು ನಿಷ್ಠೆಯಿಂದ ನನ್ನ ಕೆಲಸ ಮಾಡುತ್ತಿದ್ದೆ. ನನ್ನ ಕೈಲಾದಷ್ಟು ಸೇವೆಯನ್ನೂ ಮಾಡುತ್ತಿದ್ದೆ. ಆದರೆ ದಿನ ಕಳೆದಂತೆ, ನನ್ನ ಮನಸ್ಸಿನಲ್ಲಿ ಕೆಟ್ಟ ಯೋಚನೆಗಳು ಬರ ಹತ್ತಿದವು.

ನಾನು ಅಹಂಕಾರ ಮತ್ತು ಸೊಕ್ಕಿನವನಾದೆ. ನಾನು ನನ್ನನ್ನೇ ದೇವರು ಎಂದು ಭಾವಿಸಲು ಪ್ರಾರಂಭಿಸಿದೆ. ಹಣದ ಮೇಲಿನ ಆಸೆ ಹೆಚ್ಚಾಗುತ್ತಾ ಹೋದಂತೆ ಭಕ್ತರಿಂದ ಬಂದ ಹಣವನ್ನೂ ಅಪಹರಿಸ ಹತ್ತಿದೆ. ನನ್ನ ಆಧ್ಯಾತ್ಮಿಕ ಬದ್ಧತೆ ಕಡಿಮೆಯಾಯಿತು. ನನ್ನ ಈ ಅಪರಾಧಗಳಿಂದಾಗಿ ಈಗ ನಾನು ನಾಯಿಯಾಗಿ ಮರುಜನ್ಮ ಪಡೆದಿದ್ದೇನೆ. ಈತನೂ ಖಂಡಿತ ನಾನು ಮಾಡಿದಂತಹ ಅಪರಾಧ ಮಾಡುತ್ತಾನೆ. ಅವನಿಗೆ ಅವನ ಶಿಕ್ಷೆ ಸಲ್ಲುತ್ತದೆ" ಎಂದಿತು.

ಬದುಕಿನಲ್ಲಿ ನಮ್ಮ ವಿರುದ್ಧ ಕೆಟ್ಟದು ಮಾಡಿದವರಿಗೆಲ್ಲ ನಾವೇ ಶಿಕ್ಷೆ ಕೊಡುವ ಪ್ರಯತ್ನ ಮಾಡಿ ದರೆ ನಾವು ಕೂಡ ಆ ಪಾಪದ ಕೂಪಕ್ಕೆ ಇಳಿದು ಬಿಡುತ್ತೇವೆ. ತಪ್ಪು ಮಾಡಿದವರನ್ನು ನೋಡಿ ಕೊಳ್ಳಲು ಭಗವಂತನಿದ್ದಾನೆ. ಅವರಿಗೆ ಅವರ ಶಿಕ್ಷೆ ಆಗದೇ ಇರುವುದಿಲ್ಲ. ಅದಕ್ಕಾಗಿ ನಾವು ಹೀನ ಸ್ಥಿತಿಗೆ ಇಳಿಯುವುದು ಬೇಡ.