ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishweshwar Bhat Column: ಎಐ ಯುಗದಲ್ಲಿ ಮನುಷ್ಯ

ನಿತಿನ್ ಸೇಠ್ ಈ ಪುಸ್ತಕದಲ್ಲಿ ಒಂದು ಆಶಾದಾಯಕ ಸಂದೇಶ ನೀಡುತ್ತಾರೆ: ‘ಎಐ’ಗೆ ‘ಪ್ರೋಗ್ರಾ ಮಿಂಗ್’ ಇದೆ, ಆದರೆ ಮನುಷ್ಯನಿಗೆ ‘ಪರ್ಪಸ್’ (ಉದ್ದೇಶ) ಇದೆ. ಸೇಠ್ ಮನುಷ್ಯನ ಶಕ್ತಿಯನ್ನು ‘Human Edge’ ಎಂದು ಕರೆಯುತ್ತಾರೆ. ಇದು ಕೇವಲ ಮಿದುಳಿನ ಶಕ್ತಿಯಲ್ಲ, ಜತೆಗೆ ಹೃದಯ ಮತ್ತು ಆತ್ಮದ ಶಕ್ತಿ. ಈ ಪುಸ್ತಕದಲ್ಲಿ ಬರುವ ಒಂದು ಪ್ರಸಿದ್ಧ ದೃಷ್ಟಾಂತ ವೆಂದರೆ ಚೆಸ್ ಆಟಗಾರ ಗ್ಯಾರಿ ಕಾಸ್ಪರೋವ್ ಕಥೆ.

ಸಂಪಾದಕರ ಸದ್ಯಶೋಧನೆ

ನಿತಿನ್ ಸೇಠ್ ಅವರು ಬರೆದ ‘The Human Edge in the AI Age’ ಎಂಬ ಕೃತಿಯನ್ನು ಇತ್ತೀಚೆಗೆ ಓದುತ್ತಿದ್ದೆ. ಇದು Mastering the Data Paradox ಪುಸ್ತಕದ ನಂತರದ ಅತ್ಯಂತ ಪ್ರಮುಖ ಕೃತಿ. ಈ ಪುಸ್ತಕವು ಇಂದಿನ ತಾಂತ್ರಿಕ ಯುಗದಲ್ಲಿ ಕೇವಲ ‘ಬುದ್ಧಿವಂತಿಕೆ’ ಇದ್ದರೆ ಸಾಲದು, ಬದಲಿಗೆ ಮನುಷ್ಯರಲ್ಲಿ ಮಾತ್ರ ಇರುವ ವಿಶಿಷ್ಟ ‘ಮಾನವೀಯ ಗುಣಗಳು’ ಹೇಗೆ ನಮ್ಮನ್ನು ಯಶಸ್ಸಿನತ್ತ ಕೊಂಡೊಯ್ಯುತ್ತವೆ ಎಂಬುದನ್ನು ವಿವರಿಸುತ್ತದೆ.

ಕೃತಕ ಬುದ್ಧಿಮತ್ತೆ (AI) ಇಂದು ಮನುಷ್ಯನಿಗಿಂತ ವೇಗವಾಗಿ ಕೆಲಸ ಮಾಡುತ್ತಿದೆ, ಸಂಕೀರ್ಣ ಲೆಕ್ಕಾಚಾರಗಳನ್ನು ಮಾಡುತ್ತಿದೆ ಮತ್ತು ಕವಿತೆಗಳನ್ನೂ ಬರೆಯುತ್ತಿದೆ. ಇಂಥ ಸಂದರ್ಭದಲ್ಲಿ ನಮ್ಮ ಕೆಲಸ ಉಳಿಯುತ್ತದೆಯೇ? ಎಂಬ ಆತಂಕ ಎಲ್ಲರಲ್ಲಿದೆ.

ನಿತಿನ್ ಸೇಠ್ ಈ ಪುಸ್ತಕದಲ್ಲಿ ಒಂದು ಆಶಾದಾಯಕ ಸಂದೇಶ ನೀಡುತ್ತಾರೆ: ‘ಎಐ’ಗೆ ‘ಪ್ರೋಗ್ರಾಮಿಂಗ್’ ಇದೆ, ಆದರೆ ಮನುಷ್ಯನಿಗೆ ‘ಪರ್ಪಸ್’ (ಉದ್ದೇಶ) ಇದೆ. ಸೇಠ್ ಮನುಷ್ಯನ ಶಕ್ತಿಯನ್ನು ‘Human Edge’ ಎಂದು ಕರೆಯುತ್ತಾರೆ. ಇದು ಕೇವಲ ಮಿದುಳಿನ ಶಕ್ತಿಯಲ್ಲ, ಜತೆಗೆ ಹೃದಯ ಮತ್ತು ಆತ್ಮದ ಶಕ್ತಿ. ಈ ಪುಸ್ತಕದಲ್ಲಿ ಬರುವ ಒಂದು ಪ್ರಸಿದ್ಧ ದೃಷ್ಟಾಂತ ವೆಂದರೆ ಚೆಸ್ ಆಟಗಾರ ಗ್ಯಾರಿ ಕಾಸ್ಪರೋವ್ ಕಥೆ.

ಇದನ್ನೂ ಓದಿ: Vishweshwar Bhat Column: ಫ್ಯಾಂಟಮ್‌ʼಗೆ ತೊಂಬತ್ತು

1997ರಲ್ಲಿ ಐಬಿಎಂನ ‘ಡೀಪ್ ಬ್ಲೂ’ ಕಂಪ್ಯೂಟರ್ ವಿರುದ್ಧ ಅವರು ಸೋತಾಗ, ಜಗತ್ತು ಮನುಷ್ಯನ ಸೋಲನ್ನು ಸಂವೇದಿಸಿತು. ಆದರೆ ನಂತರದ ವರ್ಷಗಳಲ್ಲಿ ‘ಅಡ್ವಾನ್ಸ್ಡ್ ಚೆಸ್’ ಎಂಬ ಹೊಸ ಪದ್ಧತಿ ಜಾರಿಗೆ ಬಂದಿತು. ಇಲ್ಲಿ ಮನುಷ್ಯ ಒಬ್ಬನೇ ಆಡುವುದಿಲ್ಲ ಅಥವಾ ಕಂಪ್ಯೂಟರ್ ಒಂದೇ ಆಡುವುದಿಲ್ಲ.

ಬದಲಿಗೆ ಮನುಷ್ಯ ಮತ್ತು ಕಂಪ್ಯೂಟರ್ ಸೇರಿ ತಂಡವಾಗಿ ಆಡುತ್ತಾರೆ. ಇಲ್ಲಿ ಸೋಲಿಸ ಲಾಗದ ಶಕ್ತಿ ಯಾವುದು ಗೊತ್ತೇ? ಅದು ಅತ್ಯಂತ ಶಕ್ತಿಶಾಲಿ ಕಂಪ್ಯೂಟರ್ ಅಲ್ಲ, ಬದಲಿಗೆ ‘ಸಾಮಾನ್ಯ ಕಂಪ್ಯೂಟರ್ ಬಳಸುವ ಒಬ್ಬ ಸ್ಮಾರ್ಟ್ ಮನುಷ್ಯ’. ‘ಎಐ’ ಎನ್ನುವುದು ಮನುಷ್ಯನಿಗೆ ಪರ್ಯಾಯವಲ್ಲ, ಅದು ಮನುಷ್ಯನ ಸಾಮರ್ಥ್ಯವನ್ನು ಹೆಚ್ಚಿಸುವ ಒಂದು ‘ಎಕ್ಸ್‌ಟೆನ್ಷನ್’.

ಹಿಂದಿನ ಕಾಲದಲ್ಲಿ ನಾಯಕ ಎಂದರೆ ‘ಕಮಾಂಡರ್’ ತರಹ ಇರಬೇಕಿತ್ತು. ಅಂದರೆ ಆದೇಶ ನೀಡುವವನು. ಆದರೆ ‘ಎಐ’ ಯುಗದಲ್ಲಿ ಎಲ್ಲ ಮಾಹಿತಿಯೂ ಯಂತ್ರಗಳ ಬಳಿ ಇರುವು ದರಿಂದ, ಆದೇಶ ನೀಡುವ ನಾಯಕನಿಗಿಂತ ‘ಕೋಚ್’ನಂತಿರುವ ನಾಯಕನಿಗೆ ಬೆಲೆ ಹೆಚ್ಚು ಎಂದು ಸೇಠ್ ವಿವರಿಸುತ್ತಾರೆ.

ಒಬ್ಬ ಕಂಪನಿಯ ಮ್ಯಾನೇಜರ್ ತನ್ನ ಉದ್ಯೋಗಿಗಳಿಗೆ ‘ಏನು ಮಾಡಬೇಕು’ ಎಂದು ಹೇಳು ವುದಕ್ಕಿಂತ, ಅವರು ತಮ್ಮ ಕೆಲಸದಲ್ಲಿ ಹೇಗೆ ಉತ್ತಮವಾಗಬಹುದು ಎಂದು ಪ್ರೇರೇಪಿಸು ವುದು ಮುಖ್ಯ. ‘ಎಐ’ಗೆ ಡೇಟಾ ವಿಶ್ಲೇಷಣೆ ಮಾಡಲು ಬರಬಹುದು, ಆದರೆ ಒಬ್ಬ ಉದ್ಯೋಗಿ ಯ ವೈಯಕ್ತಿಕ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಅವನಲ್ಲಿ ಸ್ಪೂರ್ತಿ ತುಂಬಲು ಸಾಧ್ಯವಿಲ್ಲ.

ಇದನ್ನೇ ಲೇಖಕರು ‘Empathy-led Leadership’ ಎನ್ನುತ್ತಾರೆ. ‘ಎಐ’ಗೆ ನಾವು ನೀಡುವ ಡೇಟಾದ ಆಧಾರದ ಮೇಲೆ ಅದು ಉತ್ತರ ನೀಡುತ್ತದೆ. ಒಂದು ವೇಳೆ ನಾವು ನೀಡುವ ಡೇಟಾ ತಪ್ಪಾಗಿದ್ದರೆ ಅಥವಾ ಪಕ್ಷಪಾತದಿಂದ ಕೂಡಿದ್ದರೆ, ‘ಎಐ’ ನೀಡುವ ಉತ್ತರವೂ ಅಪಾಯ ಕಾರಿಯಾಗಿರುತ್ತದೆ. ಅಮೆರಿಕದಲ್ಲಿ ಅಪರಾಧಿಗಳಿಗೆ ಶಿಕ್ಷೆ ನೀಡುವ ಪ್ರಮಾಣವನ್ನು ಅಳೆಯಲು ಒಂದು ‘ಎಐ’ ತಂತ್ರಜ್ಞಾನ ಬಳಸಲಾಗಿತ್ತು.

ಆದರೆ ಆ ಸಿಸ್ಟಮ್ ಕೇವಲ ಹಳೆಯ ರೆಕಾರ್ಡ್‌ಗಳನ್ನು ನೋಡಿ ಒಂದು ನಿರ್ದಿಷ್ಟ ಸಮುದಾಯದವರೇ ಹೆಚ್ಚು ತಪ್ಪು ಮಾಡುತ್ತಾರೆ ಎಂದು ತೀರ್ಪು ನೀಡಲು ಶುರು ಮಾಡಿತು. ಇಲ್ಲಿ ಮನುಷ್ಯನ ಹಸ್ತಕ್ಷೇಪ ಬೇಕಾಯಿತು. ಏಕೆಂದರೆ ಮನುಷ್ಯನಿಗೆ ಮಾತ್ರ ಆ ತೀರ್ಪಿನ ಹಿಂದಿರುವ ಸಾಮಾಜಿಕ ಮತ್ತು ಮಾನವೀಯ ಆಯಾಮಗಳನ್ನು ಅರ್ಥಮಾಡಿ ಕೊಳ್ಳುವ Contextual Intelligence (ಸಂದರ್ಭೋಚಿತ ಬುದ್ಧಿವಂತಿಕೆ) ಇರುತ್ತದೆ.

ನಿತಿನ್ ಸೇಠ್ ಸೃಜನಶೀಲತೆಯನ್ನು ಎರಡು ಭಾಗಗಳಾಗಿ ವಿಂಗಡಿಸುತ್ತಾರೆ. ಮೊದಲನೆ ಯದು, ಅಸ್ತಿತ್ವದಲ್ಲಿರುವುದನ್ನು ಸ್ವಲ್ಪ ಬದಲಾಯಿಸುವುದು (ಇದನ್ನು ಅಐ ಮಾಡಬಲ್ಲದು) ಹಾಗೂ ಎರಡನೆಯದು, ಸಂಪೂರ್ಣವಾಗಿ ಹೊಸತನ್ನು ಸೃಷ್ಟಿಸುವುದು (ಇದು ಮನುಷ್ಯನಿಗೆ ಮಾತ್ರ ಸಾಧ್ಯ).

ಸ್ಟೀವ್ ಜಾಬ್ಸ್ ಐಫೋನ್ ಕಂಡುಹಿಡಿದಾಗ ಜಗತ್ತಿನಲ್ಲಿ ಅಂಥ ಯಾವುದೇ ಸಾಧನ ವಿರಲಿಲ್ಲ. ಜನರು ‘ನಮಗೆ ಇಂಥ ಫೊನ್ ಬೇಕು’ ಎಂದು ಕೇಳಿರಲಿಲ್ಲ. ಆದರೆ ಜಾಬ್ಸ್ ತಮ್ಮ ಅಂತಃಪ್ರeಯ ಮೂಲಕ ಅದನ್ನು ಸೃಷ್ಟಿಸಿದರು. ‘ಎಐ’ ಯಾವತ್ತೂ ಮಾರುಕಟ್ಟೆಯಲ್ಲಿ ಇಲ್ಲದ ಹೊಸದನ್ನು ಊಹಿಸಲಾರದು; ಅದು ಕೇವಲ ಹಳೆಯ ಅಂಕಿ-ಅಂಶಗಳನ್ನು ಮರು ಸಂಸ್ಕರಿಸಬಲ್ಲದು.

‘ಎಐ’ ಯುಗದಲ್ಲಿ ನಾವು ಕಲಿತ ಪದವಿಗಳು ಐದು ವರ್ಷಗಳಲ್ಲಿ ಹಳತಾಗುತ್ತವೆ. ಆದ್ದರಿಂದ, ‘ಏನು ಕಲಿತಿದ್ದೇವೆ’ ಎನ್ನುವುದಕ್ಕಿಂತ, ‘ಎಷ್ಟು ವೇಗವಾಗಿ ಹೊಸದನ್ನು ಕಲಿಯುತ್ತೇವೆ’ ಎನ್ನುವುದು ಮುಖ್ಯ.

ವಿಶ್ವೇಶ್ವರ ಭಟ್‌

View all posts by this author