ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Sudhakar Hosalli Column: ಮತಾಂತರವಾದರೆ ಮೋಸ ಹೋಗುತ್ತೀರಿ

ಕರ್ನಾಟಕ ಸರಕಾರವು ಈಚೆಗೆ ಜಾತಿ ಸಮೀಕ್ಷೆಗೆ (ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಪರಾಮರ್ಶೆ) ಮುಂದಡಿ ಇಟ್ಟಿದ್ದು ಗೊತ್ತಿರುವ ಸಂಗತಿಯೇ. ‘ಇದು ಹಿಂದೂಗಳನ್ನು ವಿಭಜಿ ಸುವ, ಹಿಂದೂ ಧರ್ಮವನ್ನು ವಿಘಟಿಸುವ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಮತಾಂತರ ಚಟುವಟಿಕೆಗಳಿಗೆ ನೆರವಾಗಲು ಹಮ್ಮಿಕೊಳ್ಳಲಾಗಿರುವ ಸಮೀಕ್ಷೆ’ ಎಂಬು ದಾಗಿ ವಿರೋಧ ಪಕ್ಷಗಳು ಆರೋಪಿಸಿವೆ.

ಚರ್ಚಾವೇದಿಕೆ

ಡಾ.ಸುಧಾಕರ ಹೊಸಳ್ಳಿ

ಕರ್ನಾಟಕ ಸರಕಾರವು ಈಚೆಗೆ ಜಾತಿ ಸಮೀಕ್ಷೆಗೆ (ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಪರಾಮರ್ಶೆ) ಮುಂದಡಿ ಇಟ್ಟಿದ್ದು ಗೊತ್ತಿರುವ ಸಂಗತಿಯೇ. ‘ಇದು ಹಿಂದೂಗಳನ್ನು ವಿಭಜಿಸುವ, ಹಿಂದೂ ಧರ್ಮವನ್ನು ವಿಘಟಿಸುವ, ಕ್ರೈಸ್ತ ಮತ್ತು ಇಸ್ಲಾಂ ಧರ್ಮಗಳ ಮತಾಂತರ ಚಟುವಟಿಕೆಗಳಿಗೆ ನೆರವಾಗಲು ಹಮ್ಮಿಕೊಳ್ಳಲಾಗಿರುವ ಸಮೀಕ್ಷೆ’ ಎಂಬು ದಾಗಿ ವಿರೋಧ ಪಕ್ಷಗಳು ಆರೋಪಿಸಿವೆ.

ಸಂವಿಧಾನಬದ್ಧವಾಗಿ ಜಾತಿ ಸಮೀಕ್ಷೆ ಮಾಡಲು ಕೇಂದ್ರ ಸರಕಾರಕ್ಕೆ ಮಾತ್ರವೇ ಅಧಿಕಾರ ವಿದ್ದರೂ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಪರಾಮರ್ಶೆಯನ್ನು ಮುಂದು ಮಾಡಿ ರಾಜ್ಯ ಸರಕಾರವು ಈ ಸಮೀಕ್ಷೆಯನ್ನು ಸಮರ್ಥಿಸಿಕೊಂಡಿದೆ.

ಮತ್ತೊಂದೆಡೆ, ಕೆಲವು ಮತಾಂಧ ಮುಸ್ಲಿಮರು ‘ಐ ಲವ್ ಯೂ ಮೊಹಮದ್’ ಎಂಬ ಬ್ಯಾನರ್ ಹಿಡಿದು ದೇಶದೆಲ್ಲೆಡೆ ಗಲಭೆ ಸೃಷ್ಟಿಸುವ ಹುನ್ನಾರವನ್ನೂ ಮಾಡುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ತೀವ್ರತರವಾಗಿ ಹಬ್ಬಿದ ಈ ಕಾನೂನೇತರ ಚಟುವಟಿಕೆ ಕರ್ನಾಟಕ ದವರೆಗೂ ಪಸರಿಸಿದೆ.

ಇಷ್ಟರ ನಡುವೆ ಎಡಪಂಥೀಯರು, ‘ಹಿಂದೂ ಧರ್ಮದಲ್ಲಿ ಅಸಮಾನತೆ ಇದೆ, ಜಾತೀಯತೆ ಇದೆ; ಹಾಗಾಗಿ ಮತಾಂತರ ಅನಿವಾರ್ಯ’ ಎಂಬ ಅಪ್ರೋಚ್ ಅನ್ನು ವಿಸ್ತರಿಸಲು ಪ್ರಯತ್ನಿಸುತ್ತಿದ್ದಾರೆ. ಇಂಥ ಕ್ಷುದ್ರ ಯೋಜನೆಗೆ ಅವರು ಬಾಬಾ ಸಾಹೇಬ್ ಅಂಬೇಡ್ಕರರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ.

religion

ಇಂಥ ಕಾಲಘಟ್ಟದಲ್ಲಿ, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ಕುರಿತು ಅಂಬೇಡ್ಕರರು ಮಂಡಿ ಸಿದ್ದ ಸಂಶೋಧಿತ ಲಿಖಿತ ದಾಖಲೆಗಳ ಈ ಸಾರವನ್ನು ಅವಲೋಕಿಸಬೇಕಾದ ಅನಿವಾ ರ್ಯತೆ ಉದಯಿಸಿದೆ: ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ವಿಸ್ತರಣೆಯ ದಾಹಕ್ಕೆ ಸ್ವಾತಂತ್ರ್ಯ ಪೂರ್ವದಿಂದಲೂ ಲಕ್ಷಾಂತರ ಹಿಂದೂಗಳ ಜೀವಬಲಿಯಾಗಿದ್ದು ಈ ನೆಲದ ದೌರ್ಭಾಗ್ಯ.

ಕ್ರೈಸ್ತರು ಆಧುನಿಕ ಶಿಕ್ಷಣ ಮತ್ತು ಆರ್ಥಿಕ ಸಹಕಾರದ ನೆಪದಲ್ಲಿ ನಿರಂತರವಾಗಿ ಹಿಂದೂ ಗಳನ್ನು ತಮ್ಮ ಮೂಲಧರ್ಮವನ್ನು ತ್ಯಜಿಸುವಂತೆ ಪ್ರೇರೇಪಿಸುತ್ತಲೇ ಇದ್ದಾರೆ. ಈ ಕಾರ್ಯ ದಲ್ಲಿ, ಹಿಂದೂಗಳ ಹೋರಾಟದ ನಡುವೆಯೂ ಕ್ರೈಸ್ತರು ಯಶಸ್ಸನ್ನು ಪಡೆದಿದ್ದಾರೆ, ಪಡೆಯುತ್ತಲೇ ಇದ್ದಾರೆ.

ಮುಸ್ಲಿಮರಂತೂ ತಮ್ಮ ಧರ್ಮದ ಬೋಧನೆ ಎಂದು ‘ಕಾಫಿರ ಪದ್ಧತಿ’ಯ (ಇಸ್ಲಾಂ ಅನ್ನು ಒಪ್ಪದವರನ್ನು, ಮೂರ್ತಿಪೂಜಕರನ್ನು ಕೊಲ್ಲುವ ಸಿದ್ಧಾಂತ) ಅನುಷ್ಠಾನಕ್ಕಾಗಿ, ಮುಸ್ಲಿಮ ರಾಗಿ ಮತಾಂತರಗೊಳ್ಳದ ಹಿಂದೂಗಳನ್ನು ಕಗ್ಗೊಲೆ ಮಾಡಲೂ ಹಿಂಜರಿಯುತ್ತಿಲ್ಲ. ಅದು ಸ್ವಾತಂತ್ರ್ಯಪೂರ್ವದಲ್ಲಿರಬಹುದು, ದೇಶವಿಭಜನೆಯ ಸಂದರ್ಭದಲ್ಲಿರಬಹುದು ಅಥವಾ ಭಾರತದ ಸಂವಿಧಾನೋತ್ತರ ಕಾಲಘಟ್ಟದಲ್ಲಿರಬಹುದು, ಇಂಥ ಸಾವಿರಾರು ಪ್ರಕರಣಗಳು ದಾಖಲೆಯಾಗಿ ಸಿಗುತ್ತವೆ.

ಇಷ್ಟೆಲ್ಲದರ ನಡುವೆ ಎಡಪಂಥೀಯರು ತಮ್ಮದೇ ಆದ ದೃಷ್ಟಿಯಲ್ಲಿ ‘ಮುಸ್ಲಿಂ-ದಲಿತ್ ಭಾಯಿ ಭಾಯಿ’ ಎಂಬ ಘೋಷಣೆಯೊಂದಿಗೆ ಶೋಷಿತರನ್ನು, ಹಿಂದುಳಿದ ವರ್ಗದವರನ್ನು ಇಸ್ಲಾಂ ಕಡೆಗೆ ಸೆಳೆಯುವ ತಂತ್ರಗಳನ್ನು ರೂಪಿಸುತ್ತಿದ್ದಾರೆ.

ಆದರೆ ಕೆಲವರು, ‘ಕೇವಲ ಶೋಷಿತರನ್ನಲ್ಲದೆ ಉಳಿದವರಿಗೂ ಇಸ್ಲಾಂ ಧರ್ಮವು ಶಾಂತಿ ತತ್ವವನ್ನು, ಜಾತ್ಯತೀತತೆಯ ತತ್ವವನ್ನು ಬೋಧಿಸುತ್ತದೆ; ಸ್ವತಃ ಬಾಬಾ ಸಾಹೇಬ್ ಅಂಬೇ ಡ್ಕರರು ಇಸ್ಲಾಂನ ಮೂಲತತ್ವಗಳನ್ನು ಶ್ಲಾಘಿಸಿದ್ದರು, ಅಭಿನಂದಿಸುತ್ತಿದ್ದರು’ ಎಂಬ ಅಸತ್ಯದ ನೀತಿಯನ್ನು ನಿರೂಪಿಸುತ್ತಿದ್ದಾರೆ. ಇವರು ಮತಾಂಧ ಮುಸ್ಲಿಮರಿಗಿಂತಲೂ ಅಪಾಯಕಾರಿಯಾಗಿ ಹಿಂದೂಧರ್ಮದ ಮೇಲೆ ಎರಗುತ್ತಿದ್ದಾರೆ ಎಂಬುದು ಕಟುಸತ್ಯ.

ಇಂಥ ವಾಮಯೋಜನೆಗಳನ್ನು ತುಂಡರಿಸಲು ಬಾಬಾ ಸಾಹೇಬರ ಮೂಲ ಸಂದೇಶ ಗಳನ್ನು ಸಮಾಜದ ಮುಂದಿಸಿರಬೇಕಿದೆ. ಇಸ್ಲಾಂ ಮತಾಂಧತೆಯ ಹಪಹಪಿತನಕ್ಕೆ ಬದುಕನ್ನು ಕಳೆದುಕೊಂಡ ಸಹಸ್ರಾರು ಹಿಂದೂಗಳು, ಈ ಮತಾಂಧತೆಯ ಪೂರ್ಣ ಆಯಾಮವನ್ನು ಮೂಲಭೂತವಾಗಿ ಅರ್ಥೈಸಿಕೊಳ್ಳುವಲ್ಲಿ ವಿಫಲರಾಗಿರುವುದು ವಿಸ್ತರಣಾವಾದಕ್ಕೆ ಗ್ರಾಸವನ್ನು ಒದಗಿಸುತ್ತದೆ.

‘ಇಸ್ಲಾಂ ಅನ್ನು ಒಪ್ಪದವರು ಬದುಕಲು ಅರ್ಹತೆಯನ್ನೇ ಪಡೆದಿಲ್ಲ; ಮುಸ್ಲಿಂ ಆಗಿ ಮತಾಂ ತರಗೊಳ್ಳದವರನ್ನು ಕೊಲ್ಲುವುದೇ ಪರಮಶ್ರೇಷ್ಠ ಧರ್ಮಕಾರ್ಯ’ ಎನ್ನುವ ಕಾಫಿರ ಚಿಂತನೆಯನ್ನು ವ್ಯಾಪಕವಾಗಿ ಬಗೆದು ನೋಡದ ಕಾರ್ಯವು, ಮತಾಂಧತೆಗೆ ನೀರೆರೆಯುವ ಬಗೆಯೇ ಆಗಿದೆ.

ಹಿಂದೂಗಳನ್ನು ಮತಾಂತರ ಮಾಡಲು ಇಸ್ಲಾಂ ಮತ್ತು ಕ್ರೈಸ್ತ ಮತಗಳು ಪೈಪೋಟಿ ಗಿಳಿದಿವೆ. ಇತ್ತೀಚೆಗೆ, ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಅಧ್ಯಯನವನ್ನು ಸಾರ್ವತ್ರಿಕವಾಗಿ ಕಡ್ಡಾಯಗೊಳಿಸಿದ ಪ್ರಕರಣವು ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟು ಹಾಕಿತ್ತು. ಈ ಕಡ್ಡಾಯದ ಸಂಬಂಧದ ಷರತ್ತುಪತ್ರಕ್ಕೆ ಸಹಿ ಹಾಕುವಂತೆ ವಿದ್ಯಾರ್ಥಿಗಳನ್ನು ಆಗ್ರಹಿಸುವ ಮತ್ತು ಅಂಥವರಿಗೆ ಮಾತ್ರವೇ ಪ್ರವೇಶಾತಿ ನೀಡುವ ಹಂತಕ್ಕೂ ಈ ವಿದ್ಯಮಾನ ತಲುಪಿದ್ದನ್ನು ನೋಡಬಹುದು.

ಅಂಬೇಡ್ಕರರು, ಇಸ್ಲಾಂ ಮತ್ತು ಕ್ರೈಸ್ತ ಮತದ ಬಗ್ಗೆ ನಡೆಸಿದ ದೀರ್ಘ ಅಧ್ಯಯನದಿಂದ ತಾವು ಪಡೆದ ಫಲಿತಾಂಶದ ಅನುಸಾರ ಕಟುವಾದ ಟೀಕೆಯನ್ನು ಮಾಡಿದ್ದಾರೆ; ಹಿಂದೂ ಗಳು ಯಾವುದೇ ಕಾರಣಕ್ಕೂ ಇಸ್ಲಾಂ ಮತ್ತು ಕ್ರೈಸ್ತ ಧರ್ಮದವರ ಪ್ರಲೋಭನೆಗಳಿಗೆ ಮಣಿಯಬಾರದು ಎಂಬ ನಿಖರ ನಿರ್ದೇಶನವನ್ನೂ, ಎಚ್ಚರಿಕೆಯನ್ನೂ ನೀಡಿದ್ದಾರೆ.

ಇಷ್ಟಾಗಿಯೂ ಕೆಲವರು ಪ್ರಸಕ್ತ ಕಾಲಘಟ್ಟದಲ್ಲೂ, ಮತಾಂತರಕ್ಕೆ ಪೂರಕವಾಗಿ ವಿವಿಧ ರೂಪಗಳನ್ನು ಒದಗಿಸುತ್ತಿದ್ದಾರೆ; ‘ಇಸ್ಲಾಂ ಮತ್ತು ಕ್ರೈಸ್ತ ಮತಕ್ಕೆ ಹಿಂದೂಗಳು ಮತಾಂತರ ವಾಗುವುದು ಅಂಬೇಡ್ಕರರ ಅಭಿಮತ’ ಎಂಬಂತೆ ವ್ಯವಹರಿಸುವವರನ್ನು ವಿರೋಧಿಸ ಬೇಕಿದೆ ಮತ್ತು ಧರ್ಮಜಾಗೃತಿಯನ್ನು ಮೂಡಿಸಿಕೊಳ್ಳಬೇಕಿದೆ. ಇಂಥ ಪಕ್ವತೆಯನ್ನು ಅಂಬೇಡ್ಕರರ ಸಂಶೋಧನೆಗಳೇ ನಮ್ಮಲ್ಲಿ ಮೈಗೂಡಿಸುತ್ತವೆ.

1936ರ ಮೇ 11ರಂದು ಅಂಬೇಡ್ಕರರು ವಾರ್ಧಾಗೆ ಭೇಟಿ ಕೊಟ್ಟು, ನಿಮ್ನ ವರ್ಗದ ಜನರ ಕುರಿತು ಮಾತನಾಡಿದರು. ‘ನಿರ್ಭಯ ತರುಣ್ ಸಂಘ’ವು ಈ ಭೇಟಿಯ ಒಟ್ಟು ಯೋಜನೆ ಯನ್ನು ರೂಪಿಸಿತ್ತು. ಇದೇ ಸಂದರ್ಭದಲ್ಲಿ ನಿಮ್ನ ವರ್ಗದ ಮುಖಂಡರಾದ ಪುರುಷೋ ತ್ತಮ ಖರ್ಪದೆ, ಶಂಕರ್ ರಾವ್ ಸೋನಾವಣೆ, ಗೋಮಾಜಿ ತೆಂಬಾರೆ ಮುಂತಾದವರ ಜತೆ ಅಂಬೇಡ್ಕರರು ದೀರ್ಘ ಸಮಾಲೋಚನೆ ನಡೆಸಿದರು ಹಾಗೂ ಮತಾಂತರದ ಅಪಾಯ ವನ್ನು ಹೇಗೆ ಎದುರಿಸಬೇಕೆಂಬ ಮಾರ್ಗದರ್ಶನವನ್ನೂ ನೀಡಿದರು.

ಆಗಿನ ಅವರ ಸ್ಪಷ್ಟ ಮಾತುಗಳು ಹೀಗಿವೆ: “ಇಸ್ಲಾಂ ಅಥವಾ ಕ್ರೈಸ್ತ ಮತವನ್ನು ಈಗಲೇ ಸೇರುವಂತೆ ನಾನು ಯಾರಿಗೂ ಓಲೈಸುತ್ತಿಲ್ಲ, ಆಗ್ರಹಿಸುತ್ತಿಲ್ಲ. ಯಾರೇ ಆಗಲಿ, ಇಸ್ಲಾಂ ಅಥವಾ ಬೇರಾವುದೇ ಮತವನ್ನು ಸೇರುವಂತೆ ಇನ್ನೊಬ್ಬರಿಗೆ ಶಿಫಾರಸು ಮಾಡಿದರೆ, ಆ ಶಿಫಾರಸನ್ನು ಪಾಲಿಸುವವರು ಮೋಸಹೋಗುತ್ತಾರೆ. ಅದಕ್ಕೆ ನಾನು ಹೊಣೆಗಾರನಾಗುವು ದಿಲ್ಲ.

ನಾನು ಮತಾಂತರದ ಬಗ್ಗೆ ಘೋಷಣೆ ಮಾಡಿರುವುದು ವಾಸ್ತವ; ಆದರೆ ಯಾವುದೇ ನಿರ್ದಿಷ್ಟ ಮತಕ್ಕೆ ಸೇರಿಕೊಳ್ಳಿ ಎಂದು ಇದುವರೆಗೆ ಹೇಳಿಲ್ಲ. ಅಲ್ಲಿಯವರೆಗೂ ಎಲ್ಲರೂ ಮತಾಂತರದ ಬಗ್ಗೆ ಪ್ರಚಾರ ಮಾಡಲೇಬೇಕು, ಆದರೆ ಇಂಥದ್ದೇ ಮತಕ್ಕೆ ಮತಾಂತರ ಆಗಬೇಕೆಂದು ಪ್ರಚಾರ ಮಾಡಬೇಡಿ. ನಾನು ಘೋಷಣೆ ಮಾಡಿದ ನಂತರವೇ ಅಸ್ಪೃಶ್ಯ ರೆಲ್ಲರೂ ಮುಂದುವರಿಯಬೇಕು".

ಅಂಬೇಡ್ಕರರು ಮತಾಂತರದ ಬಗ್ಗೆ ಪ್ರಸ್ತಾಪ ಮಾಡುತ್ತಿದ್ದಂತೆ ಮುಸ್ಲಿಮರು ಮತ್ತು ಕ್ರೈಸ್ತರು ದೊಡ್ಡ ದೊಡ್ಡ ಆಮಿಷಗಳನ್ನು ಮುಂದಿಟ್ಟು ತಂತಮ್ಮ ಮತಕ್ಕೆ ಸೇರುವಂತೆ ದುಂಬಾಲುಬಿದ್ದರೂ, ಶ್ರೇಷ್ಠ ರಾಷ್ಟ್ರಪ್ರೇಮಿಯಾದ ಅಂಬೇಡ್ಕರರು, “ನಾನು ಇಸ್ಲಾಂ ಅಥವಾ ಕ್ರೈಸ್ತ ಮತಕ್ಕೆ ಸೇರುವುದು ಧರ್ಮಾಂತರವಾಗುವುದಿಲ್ಲ, ಬದಲಿಗೆ ಅದು ರಾಷ್ಟ್ರಾಂ ತರವಾಗುತ್ತದೆ. ನಾನು ರಾಷ್ಟ್ರಾಂತರವನ್ನು ಎಂದಿಗೂ ಒಪ್ಪುವುದಿಲ್ಲ" ಎಂದು ಹೇಳಿ ಅವರ ಆಹ್ವಾನವನ್ನು ತಿರಸ್ಕರಿಸಿದ್ದರು.

ಶೋಷಿತರು ಸೇರಿದಂತೆ ನಾಡಿನ ಯುವಕರು, ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳ ವಿಷಯ ದಲ್ಲಿ ಅಂತರ ಕಾಯ್ದುಕೊಳ್ಳಬೇಕು, ಆ ಧರ್ಮಗಳು ಅಪಾಯಕಾರಿ ಎಂದು ಅಂಬೇಡ್ಕರರು ನೀಡಿದ ಅಧ್ಯಯನದ ತಳಹದಿಯುಳ್ಳ ದೂರದೃಷ್ಟಿಯ ಸಂದೇಶವನ್ನು ಎಚ್ಚರಿಕೆಯಾಗಿ ಪರಿಗಣಿಸಿ, ಆ ಕುರಿತು ತೀವ್ರ ಗಮನ ಹರಿಸುವ ಅಗತ್ಯವಿದೆ.

(ಆಧಾರ: ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು. ಸಂಪುಟ ೧೮; ಪುಟ ೩೪೨-೩೪೩)

(ಲೇಖಕರು ಸಂವಿಧಾನ ತಜ್ಞರು)