ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಟ್ಟಿದರೆ ಕಪ್ಪಾಗಿಸುವ ಮಸಿವಾಳ !

ಸಂಡೂರು ಭಾಗದ ಗುಡ್ಡ ಮತ್ತು ಕಾಡುಗಳಲ್ಲಿ ಒಂದು ಪ್ರಭೇದದ ಮರವಿದೆ; ಇದರ ಹೆಸರು ‘ಮಸಿವಾಳ’! ಮನುಷ್ಯರು ಮುಟ್ಟಿದರೆ, ಅವರ ಕೈ ಕಪ್ಪಾಗಿಸುವ ಗುಣದಿಂದಲೇ ಈ ಮರ ಜನರಲ್ಲಿ ಕುತೂಹಲ ಮೂಡಿಸುತ್ತದೆ. ಕಪ್ಪು ತೊಗಟೆಯ ವಿಚಿತ್ರ ಸ್ವಭಾವ ಸುಮಾರು 15 ಅಡಿ ಎತ್ತರದವರೆಗೆ ಬೆಳೆಯುವ ಮಸಿವಾಳ ಮರದ ತೊಗಟೆ ಕಪ್ಪು ಬಣ್ಣದ್ದಾಗಿದ್ದು ಕಾರ್ಕ್‌ನಂತೆ ದಪ್ಪವಾಗಿರುತ್ತದೆ.

ಜಿ.ನಾಗೇಂದ್ರ ಕಾವೂರು

ಪ್ರಕೃತಿಯಲ್ಲಿ ಕೆಲ ಮರಗಳು ಕೇವಲ ನೆರಳು ನೀಡುವುದಕ್ಕಷ್ಟೇ ಅಲ್ಲ, ತಮ್ಮ ವೈಶಿಷ್ಟ್ಯ ಪೂರ್ಣ ಗುಣಗಳಿಂದ ಮಾನವನಲ್ಲಿ ಆಶ್ಚರ್ಯವನ್ನು ಮೂಡಿಸುತ್ತವೆ. ಮುಳ್ಳುಗಳಿಂದ ಆವರಿಸಿದ ಕಾಂಡಗಳಿರುವ ಮರಗಳು, ತೊಗಟೆ ಕೆತ್ತಿದರೆ ಹಾಲು ಸ್ರವಿಸುವ ಮರಗಳು, ಎಲೆ ಮುದುಡಿಸುವ ಮುಟ್ಟಿದರೆ ಮುನಿ, ಎಲೆಯಲ್ಲೇ ಬೇರುಗಳನ್ನು ಸೃಷ್ಟಿಸುವ ಗಿಡ, ಮರಕ್ಕೆ ಮರವೇ ಹೂವಿನಿಂದ ಕಂಗೊಳಿಸುವುದು ಇಂತಹ ಹಲವು ವಿದ್ಯಮಾನಗಳು ಸಸ್ಯಲೋಕ ದಲ್ಲಿವೆ.

ಸಂಡೂರು ಭಾಗದ ಗುಡ್ಡ ಮತ್ತು ಕಾಡುಗಳಲ್ಲಿ ಒಂದು ಪ್ರಭೇದದ ಮರವಿದೆ; ಇದರ ಹೆಸರು ‘ಮಸಿವಾಳ’! ಮನುಷ್ಯರು ಮುಟ್ಟಿದರೆ, ಅವರ ಕೈ ಕಪ್ಪಾಗಿಸುವ ಗುಣದಿಂದಲೇ ಈ ಮರ ಜನರಲ್ಲಿ ಕುತೂಹಲ ಮೂಡಿಸುತ್ತದೆ. ಕಪ್ಪು ತೊಗಟೆಯ ವಿಚಿತ್ರ ಸ್ವಭಾವ ಸುಮಾರು 15 ಅಡಿ ಎತ್ತರದವರೆಗೆ ಬೆಳೆಯುವ ಮಸಿವಾಳ ಮರದ ತೊಗಟೆ ಕಪ್ಪು ಬಣ್ಣದ್ದಾಗಿದ್ದು ಕಾರ್ಕ್‌ನಂತೆ ದಪ್ಪವಾಗಿರುತ್ತದೆ.

ಅನೇಕ ಬಿರುಕುಗಳನ್ನು ಹೊಂದಿರುವ ಈ ತೊಗಟೆ ಸ್ಪರ್ಶಕ್ಕೆ ಬೆಣ್ಣೆಯಂತೆ ಮೃದು ವಾಗಿರುತ್ತದೆ. ಕೈಯಿಂದ ಮುಟ್ಟಿದ ಕ್ಷಣದಲ್ಲೇ ಕಾಡಿಗೆಯಂತಹ ಕಪ್ಪು ಪುಡಿ ಕೈಗೆ ಅಂಟಿ ಕೊಳ್ಳುತ್ತದೆ. ಇದೇ ಕಾರಣಕ್ಕೆ ಇದನ್ನು ಇಂಗ್ಲಿಷ್‌ನಲ್ಲಿ “ಈಸ್ಟ್ ಇಂಡಿಯನ್ ಸ್ಟೇನ್ ವುಡ್" ಎಂದು ಕರೆಯಲಾಗುತ್ತದೆ. ಸಂಡೂರು ಜನರು ಮಸಿವಾಳ ಎಂದು ಸೂಕ್ತವಾಗಿ ಕರೆದಿದ್ದಾರೆ.

ಇದನ್ನೂ ಓದಿ: Shashidhara Halady Column: ಸ್ಪೂರ್ತಿ ತುಂಬುವ ಶಿಕ್ಷಕರಿವರು !

ಹಳೆಯ ಕಾಲದಲ್ಲಿ ಬೇಟೆಗೆ ತೆರಳುವ ಜನರು ಮಸಿವಾಳದ ಮಸಿಯನ್ನು ಮುಖಕ್ಕೆ ಬಳಿದು ಕೊಳ್ಳುತ್ತಿದ್ದರೆಂದು ಹಿರಿಯರು ಹೇಳುತ್ತಾರೆ. ಇದರಿಂದ ಕಾಡು ಪ್ರಾಣಿಗಳು ಮನುಷ್ಯರನ್ನು ಗುರುತಿಸಲು ಕಷ್ಟಪಟ್ಟು ದಾಳಿ ಮಾಡುವ ಸಾಧ್ಯತೆ ಕಡಿಮೆಯಾಗುತ್ತದೆ ಮತ್ತು ಬೇಟೆಯೂ ಬೇಗನೆ ಸಿಗುತ್ತದೆ ಎಂಬ ನಂಬಿಕೆ. ಹೀಗಾಗಿ ಈ ಮರ ಕಾಡುಜೀವನದ ಭಾಗವೇ ಆಗಿದೆ.

ಗುಡ್ಡಗಳ ಇಳಿಜಾರಿನಲ್ಲಿ ಬೆಳೆಯುವ ಮಸಿವಾಳ ಮರದ ದಾರುವು ಬಲಿಷ್ಠ ವಾಗಿರುವು ದರಿಂದ ಪೀಠೋಪಕರಣ, ಕ್ಯಾಬಿನೆಟ್, ಫ್ಲೋರಿಂಗ್, ಬಾಕ್ಸ್ ಮತ್ತು ಕ್ರೇಟ್ಸ್ ತಯಾರಿಕೆಗೆ ಬಳಸಲಾಗುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಇದನ್ನು ದೀರ್ಘಕಾಲ ಬಾಳಿಕೆ ಬರುವ ಮರ ವೆಂದು ಪರಿಗಣಿಸುತ್ತಾರೆ. ಜನಪದ ವೈದ್ಯಕೀಯದಲ್ಲಿ ಮಸಿವಾಳ ಮರಕ್ಕೆ ವಿಶೇಷ ಸ್ಥಾನ ವಿದೆ.

ಇದರ ಎಲೆಗಳನ್ನು ಗಾಯಗಳನ್ನು ಗುಣಪಡಿಸಲು ಹಾಗೂ ಸಂಧಿವಾತ ಚಿಕಿತ್ಸೆಗೆ ಬಳಸಲಾ ಗುತ್ತದೆ. ಬೇರಿನ ತೊಗಟೆಯನ್ನು ನಪುಂಸಕತ್ವ ನಿವಾರಣೆಗೆ ಉಪಯೋಗಿಸುವ ಪದ್ಧತಿಯು ನಾಟಿವೈದ್ಯದಲ್ಲಿದೆ. ಸಂಡೂರಿನ “ತಿಮ್ಮಪ್ಪನ ಗುಡ್ಡ" ಪ್ರದೇಶದಲ್ಲಿ ಕಾಣಿಸಿಕೊಂಡ ಈ ಮಸಿವಾಳ ಮರ ಪ್ರಕೃತಿಯ ಅದ್ಭುತ ಮತ್ತು ವೈವಿಧ್ಯತೆಯ ಜೀವಂತ ಉದಾಹರಣೆ. ನಮ್ಮ ಸುತ್ತಲೂ ಇರುವ ಕಾಡುಗಳಲ್ಲಿ ಇನ್ನೂ ಇಂತಹ ಅನೇಕ ರಹಸ್ಯಗಳು ಅಡಗಿವೆ ಎಂಬು ದನ್ನು ಇದು ತೋರಿಸಿಕೊಟ್ಟಿದೆ.