Vishweshwar Bhat Column: ಇಸ್ರೇಲ್ ಅಕ್ಷರಶಃ ಆಕಾಶದಲ್ಲಿ ಅಗೋಚರ ಕೋಟೆಯನ್ನು ಕಟ್ಟಿಕೊಂಡಿದೆ !
ಎಲ್ಲ ದೇಶಗಳೂ ತನ್ನ ಸುತ್ತಮುತ್ತ ಕೋಟೆ ಕಟ್ಟಿಕೊಂಡರೆ, ಇಸ್ರೇಲ್ ಆಕಾಶಕ್ಕೇ ಅಂಥ ವ್ಯವಸ್ಥೆ ಯನ್ನು ಮಾಡಿಕೊಂಡಿದೆ. ಇಸ್ರೇಲ್‌ನಲ್ಲಿ ಸುರಕ್ಷಿತ ಪ್ರದೇಶ ಅಂದ್ರೆ ಆಕಾಶ ಎಂಬ ಮಾತಿದೆ. ವಾಯುಮಾರ್ಗ ದಲ್ಲಿ ಬಂದು ಇಸ್ರೇಲ್ ಮೇಲೆ ದಾಳಿ ಮಾಡಿ ಜಯಿಸಲು ಸಾಧ್ಯವೇ ಇಲ್ಲ. ಇಸ್ರೇಲ್ ಅಕ್ಷರಶಃ ಆಕಾಶದಲ್ಲಿ ಅಗೋಚರ ಕೋಟೆಯನ್ನು ಕಟ್ಟಿಕೊಂಡಿದೆ!

-

ಇದೇ ಅಂತರಂಗ ಸುದ್ದಿ
vbhat@me.com
ವಿಶ್ವ ಭೂಪಟದಲ್ಲಿ ಇಸ್ರೇಲ್ ಎಲ್ಲಿದೆ ಎಂದು ಹುಡುಕುವುದು ಕಷ್ಟ. ಗೂಗಲ್ ಮ್ಯಾಪ್‌ನಲ್ಲಿ ಮಧ್ಯಪ್ರಾಚ್ಯ ರಾಷ್ಟ್ರಗಳತ್ತ ದೃಷ್ಟಿ ಹಾಯಿಸಿ, ಪಿಂಚ್ ಮಾಡಿದರೆ ಮಾತ್ರ ಇಸ್ರೇಲ್ ಕಾಣಿಸಬಹುದು. ಅಷ್ಟು ಸಣ್ಣ ದೇಶವನ್ನು ವೈರಿ ರಾಷ್ಟ್ರಗಳು ಸುತ್ತುವರಿದಿವೆ. ಅಷ್ಟೇ ಅಲ್ಲ, ಬಹುತೇಕ ಎಲ್ಲ ದೇಶಗಳೂ ಒಂದಿಂದು ನೆಪ ಹೇಳಿ ಇಸ್ರೇಲ್ ಜತೆ ಕಾದಾಟಕ್ಕೆ ನಿಂತಿವೆ.
ಜೋರ್ಡಾನ್ ಮತ್ತು ಇರಾಕ್ ಆಚೆ ಇರುವ ಇರಾನ್, ಇಸ್ರೇಲ್ ಮೇಲೆ ನಿರಂತರ ದಾಳಿಯಲ್ಲಿ ನಿರತವಾಗಿದೆ. ಇಸ್ರೇಲಿನಿಂದ ಸುಮಾರು 2227 ಕಿ.ಮೀ. ದೂರದಲ್ಲಿರುವ ಕತಾರ್ ಮತ್ತು ಇಷ್ಟೇ ದೂರದಲ್ಲಿರುವ ಯೆಮೆನ್ ಕೂಡ ಇರಾನಿನ ಆಣತಿಯ ಮೇರೆಗೆ, ಇಸ್ರೇಲ್ ಮೇಲೆ ದಾಳಿ ನಡೆಸುತ್ತಿವೆ.
ಲೆಬನಾನ್ ಮತ್ತು ಗಾಜಾದಲ್ಲಿರುವ ಹಮಾಸ್ ಉಗ್ರರು ಸಹ ಮಗ್ಗುಲ ಮುಳ್ಳುಗಳಂತೆ ಕಾಡುತ್ತಿದ್ದಾರೆ. ಈ ಎಲ್ಲ ದೇಶಗಳು ಏಕಕಾಲಕ್ಕೆ ಟೆಕೆಟ್ ಅಥವಾ ಕ್ಷಿಪಣಿ ದಾಳಿ ಮಾಡಿದ್ದೇ ಆದರೆ, ಇಸ್ರೇಲ್ ಏಕಾಂಗಿಯಾಗಿ ಹೋರಾಡುವುದು ಕಷ್ಟ ಮತ್ತು ಈ ಕದನದಲ್ಲಿ ಗೆದ್ದು ಬಚಾವ್ ಆಗುವುದೂ ಕಷ್ಟ. ಆದರೆ ಇಸ್ರೇಲ್ ಏಕಾಂಗಿಯಾಗಿ ಹೋರಾಡುತ್ತಿದೆ ಮತ್ತು ನಿರಂತರವಾಗಿ ಬಚಾವ್ ಆಗುತ್ತಿದೆ.
ವೈರಿ ದೇಶಗಳು ಇಸ್ರೇಲ್ ಮೇಲೆ ವೈಮಾನಿಕ ದಾಳಿಯನ್ನೇ ಮಾಡಬೇಕು. ಅವು ಮಾಡುತ್ತಿರುವುದು ಅದನ್ನೇ. ಕಳೆದ 6 ತಿಂಗಳುಗಳಿಂದ, ಯೆಮೆನ್‌ನಲ್ಲಿರುವ ಹೌತಿ ಉಗ್ರರು ಇಸ್ರೇಲ್‌ನ ಆಯಕಟ್ಟಿನ ಪ್ರದೇಶಗಳನ್ನು ಗುರಿಯಾಗಿರಿಸಿಕೊಂಡು, 2000 ಕಿ.ಮೀ. ದೂರದಿಂದ ನಿರಂತರ ಕ್ಷಿಪಣಿ ದಾಳಿಗಳನ್ನು ಮಾಡುತ್ತಿದ್ದಾರೆ. ಆದರೆ ವೈರಿರಾಷ್ಟ್ರಗಳ ಈ ದಾಳಿಯನ್ನು ಇಸ್ರೇಲ್ ವಿಫಲ ಗೊಳಿಸುತ್ತಿದೆ.
ಇದನ್ನೂ ಓದಿ: Vishweshwar Bhat Column: ವೃತ್ತಿ ಮತ್ತು ವ್ಯಕ್ತಿತ್ವದ ಘನತೆ ಕಾಪಾಡುವುದೇ ಆದರ್ಶವೆಂದು ನಂಬಿ ಬಾಳಿದ ಟಿಜೆಎಸ್ ಜಾರ್ಜ್
6 ತಿಂಗಳ ಹಿಂದೆ, ಒಂದು ಸಂದರ್ಭದಲ್ಲಿ ವೈರಿದೇಶಗಳು ಇಸ್ರೇಲಿನ ವಾಣಿಜ್ಯ ರಾಜಧಾನಿ ಟೆಲ್ ಅವಿವ್ ಅನ್ನು ಗುರಿಯಾಗಿಸಿಕೊಂಡು ಎಲ್ಲ ಕಡೆಗಳಿಂದ ಏಕಕಾಲಕ್ಕೆ ದಾಳಿಯನ್ನು ಆರಂಭಿಸಿದವು. ಇಸ್ರೇಲ್ ಬಚಾವ್ ಆಗುವುದು ಸುಲಭವಲ್ಲ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ ಆಗಲೂ ಇಸ್ರೇಲ್ ವೈರಿರಾಷ್ಟ್ರಗಳ ದುಸ್ಸಾಹಸವನ್ನು ಸದೆಬಡಿಯಿತು.
ಎಲ್ಲ ದೇಶಗಳೂ ತನ್ನ ಸುತ್ತಮುತ್ತ ಕೋಟೆ ಕಟ್ಟಿಕೊಂಡರೆ, ಇಸ್ರೇಲ್ ಆಕಾಶಕ್ಕೇ ಅಂಥ ವ್ಯವಸ್ಥೆ ಯನ್ನು ಮಾಡಿಕೊಂಡಿದೆ. ಇಸ್ರೇಲ್‌ನಲ್ಲಿ ಸುರಕ್ಷಿತ ಪ್ರದೇಶ ಅಂದ್ರೆ ಆಕಾಶ ಎಂಬ ಮಾತಿದೆ. ವಾಯುಮಾರ್ಗದಲ್ಲಿ ಬಂದು ಇಸ್ರೇಲ್ ಮೇಲೆ ದಾಳಿ ಮಾಡಿ ಜಯಿಸಲು ಸಾಧ್ಯವೇ ಇಲ್ಲ. ಇಸ್ರೇಲ್ ಅಕ್ಷರಶಃ ಆಕಾಶದಲ್ಲಿ ಅಗೋಚರ ಕೋಟೆಯನ್ನು ಕಟ್ಟಿಕೊಂಡಿದೆ!
ಈ ಕಾರಣದಿಂದ ಇಷ್ಟೆಲ್ಲ ಕ್ಷಿಪಣಿ, ರಾಕೆಟ್ ದಾಳಿಗಳಾಗುತ್ತಿದ್ದರೂ, ಇಸ್ರೇಲ್ ಸುರಕ್ಷಿತವಾಗಿದೆ. ಇಸ್ರೇಲಿನಲ್ಲಿ ಒಂದು ಮಾತಿದೆ- ಆಕಾಶದಲ್ಲಿ ಹಾರುವ ಹದ್ದನ್ನು ಸಹ ಶಂಕಿಸದೇ ಇರಬೇಡ. ಅದು ಸಹ ಗೂಢಚಾರ (ಸ್ಪೈ) ಆಗಿರಬಹುದು. ಪಕ್ಷಿಗಳನ್ನು ಸಾಯಿಸಲೆಂದೇ ಇಸ್ರೇಲ್ ಸೇನೆಯಲ್ಲಿ ಒಂದು ಘಟಕವಿದೆ.
ಅಷ್ಟರ ಮಟ್ಟಿಗೆ ಅಲ್ಲಿನ ಆಕಾಶವನ್ನು ಸ್ಯಾನಿಟೈಸ್ ಮಾಡಲಾಗುತ್ತದೆ. ಹೀಗಿರುವಾಗ ವೈಮಾನಿಕ ದಾಳಿಗೆ ಇಸ್ರೇಲ್ ಹೇಗೆ ಸಜ್ಜಾಗಿರಬಹುದು ಎಂಬುದನ್ನು ಊಹಿಸಬಹುದು. ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಯು ಇಷ್ಟೊಂದು ಅದ್ಭುತವಾಗಿರಬಹುದು ಮತ್ತು ತಾಂತ್ರಿಕವಾಗಿ ಅಷ್ಟೊಂದು ನಿಖರವಾಗಿರಬಹುದು ಎಂಬ ಕಲ್ಪನೆಯೇ ಇರಲಿಲ್ಲ. ಅದು ವಿಶ್ವದ ಅತ್ಯಾಧುನಿಕ ಮತ್ತು ಪರಿಣಾಮಕಾರಿ ರಕ್ಷಣಾತ್ಮಕ ವ್ಯವಸ್ಥೆಗಳಲ್ಲಿ ಒಂದು.
ಇಸ್ರೇಲ್ ತನ್ನ ಭೌಗೋಳಿಕ ಪರಿಸ್ಥಿತಿ ಮತ್ತು ಸುತ್ತಮುತ್ತಲಿನ ಬೆದರಿಕೆಗಳನ್ನು ಗಮನದಲ್ಲಿಟ್ಟು ಕೊಂಡು ಮೂರು-ಪದರದ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಈ ವ್ಯವಸ್ಥೆಯ ಪ್ರತಿಯೊಂದು ಪದರವೂ ನಿರ್ದಿಷ್ಟ ರೀತಿಯ ಬೆದರಿಕೆಗಳನ್ನು ತಟಸ್ಥಗೊಳಿಸಲು ವಿನ್ಯಾಸ ಗೊಂಡಿದೆ. ಇವೆಲ್ಲವೂ ಒಟ್ಟಾಗಿ ಇಸ್ರೇಲ್‌ನ ವಾಯುಕ್ಷೇತ್ರಕ್ಕೆ ಸಮಗ್ರ ರಕ್ಷಣೆ ನೀಡುತ್ತವೆ. ಈ ವ್ಯವಸ್ಥೆಗಳು ಕೇವಲ ಕ್ಷಿಪಣಿ ಗಳನ್ನು ನಾಶಪಡಿಸುವುದಲ್ಲದೇ, ಪ್ರತಿಯೊಂದು ಕ್ಷಿಪಣಿಯೂ ಎಲ್ಲಿ ಬೀಳುತ್ತದೆ ಎಂಬುದನ್ನು ಲೆಕ್ಕ ಹಾಕಿ, ಹೆಚ್ಚು ಜನನಿಬಿಢ ಪ್ರದೇಶಗಳಿಗೆ ಬರುವ ಕ್ಷಿಪಣಿಗಳನ್ನು ಮಾತ್ರ ಹೊಡೆದುರುಳಿಸಿ ಸಂಪನ್ಮೂಲಗಳನ್ನು ಉಳಿಸುವ ಗುರಿ ಹೊಂದಿವೆ.
ಐರನ್ ಡೋಮ್ ಇಸ್ರೇಲ್‌ನ ವಾಯುರಕ್ಷಣಾ ವ್ಯವಸ್ಥೆಯ ಮೊದಲ ಮತ್ತು ಪ್ರಮುಖ ಪದರವಾಗಿದೆ. 2011ರಲ್ಲಿ ಕಾರ್ಯಾಚರಣೆಗೆ ಬಂದ ಈ ವ್ಯವಸ್ಥೆಯನ್ನು, ಮುಖ್ಯವಾಗಿ ಶಾರ್ಟ್-ರೇಂಜ್ ರಾಕೆಟ್ ಗಳು ಮತ್ತು ಫಿರಂಗಿ ದಾಳಿಗಳನ್ನು ತಡೆಯಲು ವಿನ್ಯಾಸಗೊಳಿಸಲಾಗಿದೆ. ಇದರ ವ್ಯಾಪ್ತಿ 4 ರಿಂದ 70 ಕಿಲೋಮೀಟರ್‌ವರೆಗೆ ಇದೆ. ಐರನ್ ಡೋಮ್‌ನ ಕಾರ್ಯವಿಧಾನವು 3 ಪ್ರಮುಖ ಹಂತಗಳಲ್ಲಿ ನಡೆಯುತ್ತದೆ.
೧. ಶತ್ರುಗಳ ರಾಕೆಟ್ ಅಥವಾ ಶೆಲ್ ಅನ್ನು ರಾಡಾರ್ ವ್ಯವಸ್ಥೆಯು ಪತ್ತೆ ಮಾಡುತ್ತದೆ.
೨. ಈ ರಾಡಾರ್‌ಗಳು ಹಾರುತ್ತಿರುವ ರಾಕೆಟ್‌ನ ಪಥ ಮತ್ತು ವೇಗವನ್ನು ನಿಖರವಾಗಿ ಲೆಕ್ಕಾಚಾರ ಮಾಡಿ, ಅದು ಯಾವ ಪ್ರದೇಶದಲ್ಲಿ ಬೀಳುತ್ತದೆ ಎಂಬುದನ್ನು ನಿರ್ಧರಿಸುತ್ತವೆ. ಇಲ್ಲಿ ಒಂದು ಪ್ರಮುಖ ಅಂಶವೆಂದರೆ, ಈ ವ್ಯವಸ್ಥೆಯು ರಾಕೆಟ್ ಜನನಿಬಿಡ ಪ್ರದೇಶದ ಮೇಲೆ ಬೀಳುವ ಸಾಧ್ಯತೆ ಇದ್ದರೆ ಮಾತ್ರ ಅದನ್ನು ತಡೆಹಿಡಿಯಲು ಕ್ರಮ ಕೈಗೊಳ್ಳುತ್ತದೆ. ಅದು ಖಾಲಿ ಪ್ರದೇಶಕ್ಕೆ ಬೀಳುತ್ತಿದ್ದರೆ ಅದನ್ನು ತಡೆಯದೇ, ಸಂಪನ್ಮೂಲಗಳನ್ನು ಉಳಿಸುತ್ತದೆ.
೩. ರಾಕೆಟ್ ಜನನಿಬಿಡ ಪ್ರದೇಶಕ್ಕೆ ಬೀಳುತ್ತದೆ ಎಂದು ತಿಳಿದ ತಕ್ಷಣ, ಐರನ್ ಡೋಮ್ ತನ್ನ ತಮೀರ್ (Tamir) ಎಂಬ ಇಂಟರ್‌ಸೆಪ್ಟರ್ ಕ್ಷಿಪಣಿಯನ್ನು ಉಡಾಯಿಸುತ್ತದೆ. ಈ ಕ್ಷಿಪಣಿಯು ಶತ್ರು ರಾಕೆಟ್ ಅನ್ನು ಆಕಾಶದಲ್ಲಿಯೇ ಸ್ಫೋಟಿಸಿ ನಾಶಪಡಿಸುತ್ತದೆ. ಐರನ್ ಡೋಮ್‌ನ ಯಶಸ್ಸಿನ ಪ್ರಮಾಣ ಶೇ.90ಕ್ಕೂ ಹೆಚ್ಚು. ಇದು ಪ್ಯಾಲೆಸ್ತೀನ್‌ನ ಗಾಜಾ ಮತ್ತು ಲೆಬನಾನ್‌ನ ಹಿಜ್ಬೊ ಗುಂಪು ಗಳಿಂದ ಉಡಾಯಿಸಲ್ಪಟ್ಟ ಸಾವಿರಾರು ರಾಕೆಟ್ ಗಳಿಂದ ಇಸ್ರೇಲನ್ನು ರಕ್ಷಿಸಿದೆ.
ಎರಡನೆಯದು ಮಧ್ಯಮ ವ್ಯಾಪ್ತಿಯ ರಕ್ಷಣೆ. ಇದನ್ನು ಡೇವಿಡ್ಸ್ ಸ್ಲಿಂಗ್ (David's Sling) ಅಂತಾರೆ. 2017ರಿಂದ ಕಾರ್ಯಾಚರಣೆಯಲ್ಲಿರುವ ಈ ವ್ಯವಸ್ಥೆಯು, ಐರನ್ ಡೋಮ್ ನ ವ್ಯಾಪ್ತಿಗಿಂತ ಹೆಚ್ಚಿನ ದೂರದಲ್ಲಿರುವ ಬೆದರಿಕೆಗಳನ್ನು ನಿಭಾಯಿಸಲು ವಿನ್ಯಾಸಗೊಂಡಿದೆ. ಇದರ ಪರಿಣಾಮಕಾರಿ ವ್ಯಾಪ್ತಿ 70ರಿಂದ 300 ಕಿ.ಮೀ. ಡೇವಿಡ್ಸ್ ಸ್ಲಿಂಗ್ ವ್ಯವಸ್ಥೆಯನ್ನು ದೊಡ್ಡ ಕ್ಯಾಲಿಬರ್ ರಾಕೆಟ್‌ಗಳು, ಶಾರ್ಟ್-ರೇಂಜ್ ಬ್ಯಾಲಿಸ್ಟಿಕ್ ಕ್ಷಿಪಣಿಗಳು ಮತ್ತು ಕ್ರೂಸ್ ಕ್ಷಿಪಣಿಗಳನ್ನು ತಡೆಯಲು ನಿರ್ಮಿಸಲಾಗಿದೆ.
ಇದು ಐರನ್ ಡೋಮ್‌ಗಿಂತ ಹೆಚ್ಚು ಶಕ್ತಿಶಾಲಿ ಮತ್ತು ಹೆಚ್ಚಿನ ಎತ್ತರದಲ್ಲಿ ತಡೆಹಿಡಿಯುವ ಸಾಮರ್ಥ್ಯ ಹೊಂದಿದೆ. ಇದರ ಇಂಟರ್‌ಸೆಪ್ಟರ್ ಕ್ಷಿಪಣಿಗಳು ಹೆಚ್ಚು ವೇಗ ಮತ್ತು ನಿಖರತೆಯನ್ನು ಹೊಂದಿವೆ. ಈ ವ್ಯವಸ್ಥೆಯು ಶತ್ರು ಕ್ಷಿಪಣಿಗಳನ್ನು ಪತ್ತೆ ಹಚ್ಚಿ, ಅವುಗಳನ್ನು ತಡೆಯಲು ತನ್ನ ಇಂಟರ್‌ಸೆಪ್ಟರ್‌ಗಳನ್ನು ಉಡಾಯಿಸುತ್ತದೆ. ಇದನ್ನು ಅಮೆರಿಕದ ರಕ್ಷಣಾ ಸಂಸ್ಥೆ ರೇಥಿಯಾನ್ ( Raytheon) ಜತೆ ಸೇರಿ ಇಸ್ರೇಲ್ ಅಭಿವೃದ್ಧಿಪಡಿಸಿದೆ.
ಇನ್ನೊಂದು ದೀರ್ಘ-ವ್ಯಾಪ್ತಿಯ ರಕ್ಷಣೆಯ ಆರೋ ( Arrow ) ವ್ಯವಸ್ಥೆ. ಇದು ಇಸ್ರೇಲ್‌ನ ವಾಯು ರಕ್ಷಣಾ ವ್ಯವಸ್ಥೆಯ ೩ನೇ ಮತ್ತು ಅಂತಿಮ ಪದರವಾಗಿದೆ. ಇದು ದೂರದ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಮತ್ತು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಯಲು ವಿನ್ಯಾಸಗೊಂಡಿದೆ. ಈ ವ್ಯವಸ್ಥೆಯು 2 ಭಾಗಗಳನ್ನು ಹೊಂದಿದೆ: ಆರೋ-2 ಮತ್ತು ಆರೋ-3.
2017ರಿಂದ ಕಾರ್ಯನಿರ್ವಹಿಸುತ್ತಿರುವ ಆರೋ-2, 300ರಿಂದ 500 ಕಿ.ಮೀ. ವ್ಯಾಪ್ತಿಯಲ್ಲಿ ಹಾರುವ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಯುತ್ತದೆ. ಈ ಕ್ಷಿಪಣಿಗಳು ವಾತಾವರಣದೊಳಗೆ ( within the atmosphere ) ಇರುವಾಗಲೇ ಅವನ್ನು ನಾಶಪಡಿಸಲು ಇದು ವಿನ್ಯಾಸಗೊಂಡಿದೆ. ಈ ವ್ಯವಸ್ಥೆಯು ಶತ್ರು ಕ್ಷಿಪಣಿಯ ಉಡಾವಣೆಯನ್ನು ಪತ್ತೆ ಹಚ್ಚಲು ಮತ್ತು ಅದರ ಪಥವನ್ನು ಲೆಕ್ಕಾಚಾರ ಮಾಡಲು ಬೃಹತ್ ರಾಡಾರ್‌ಗಳನ್ನು ಬಳಸುತ್ತದೆ.
ಆರೋ-3 ವ್ಯವಸ್ಥೆಯು ಎಲ್ಲ ವಾಯುರಕ್ಷಣಾ ವ್ಯವಸ್ಥೆಗಳಲ್ಲಿ ಅತ್ಯಂತ ಮುಂದುವರಿದ ತಂತ್ರಜ್ಞಾನವನ್ನು ಹೊಂದಿದೆ. ಇದನ್ನು ಸಹ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ( ICBMs) ತಡೆಯಲು ವಿನ್ಯಾಸಗೊಳಿಸಲಾಗಿದೆ. ಈ ಕ್ಷಿಪಣಿಗಳು ವಾತಾವರಣದ ಹೊರಗೆ ಹಾರುತ್ತವೆ. ಆರೋ-3ರ ಇಂಟರ್ ಸೆಪ್ಟರ್ ಕ್ಷಿಪಣಿಯು ವಾತಾವರಣದ ಹೊರಗಡೆ ಹಾರುವ ಶತ್ರು ಕ್ಷಿಪಣಿ ಯನ್ನು ಗುರಿಯಾಗಿಸಿಕೊಂಡು, ಅದನ್ನು ನೇರವಾಗಿ ಡಿಕ್ಕಿ ಹೊಡೆದು ನಾಶಪಡಿಸುತ್ತದೆ ( hit-to-kill technology).
ಇದು ಸ್ಫೋಟಗೊಳ್ಳುವ ಬದಲು ನೇರವಾಗಿ ಘರ್ಷಣೆಗೊಂಡು ನಾಶಪಡಿಸುವುದರಿಂದ ಶತ್ರು ಕ್ಷಿಪಣಿಯ ಸ್ಫೋಟಕಗಳು ಇಸ್ರೇಲ್ ನ ಭೂಭಾಗದ ಮೇಲೆ ಬೀಳದಂತೆ ತಡೆಯುತ್ತದೆ.
ಈ 3 ಪದರಗಳೂ ಪರಸ್ಪರ ಸಂಪರ್ಕದಲ್ಲಿರುತ್ತವೆ ಮತ್ತು ಒಂದಕ್ಕೊಂದು ಪೂರಕವಾಗಿ ಕಾರ್ಯ ನಿರ್ವಹಿಸುತ್ತವೆ. ಉದಾಹರಣೆಗೆ, ದೀರ್ಘ ವ್ಯಾಪ್ತಿಯ ಕ್ಷಿಪಣಿಯು ಆರೋ ವ್ಯವಸ್ಥೆಯಿಂದ ತಪ್ಪಿಸಿ ಕೊಂಡರೆ ಅಥವಾ ಅದರ ವ್ಯಾಪ್ತಿಯನ್ನು ಪ್ರವೇಶಿಸಿದರೆ, ಡೇವಿq ಸ್ಲಿಂಗ್ ಅಥವಾ ಐರನ್ ಡೋಮ್ ಅದನ್ನು ತಡೆಹಿಡಿಯಲು ಪ್ರಯತ್ನಿಸುತ್ತವೆ. ಈ ಬಹುಪದರ ವ್ಯವಸ್ಥೆಯು ಇಸ್ರೇಲ್‌ನ ರಕ್ಷಣಾ ಭದ್ರತೆಗೆ ಭದ್ರ ಬುನಾದಿಯನ್ನು ಒದಗಿಸಿದೆ.
ಭವಿಷ್ಯದಲ್ಲಿ, ಇಸ್ರೇಲ್ ಈ ತಂತ್ರಜ್ಞಾನವನ್ನು ಇನ್ನಷ್ಟು ಸುಧಾರಿಸುತ್ತಿದೆ, ವಿಶೇಷವಾಗಿ ಲೇಸರ್ ಆಧಾರಿತ ವಾಯುರಕ್ಷಣಾ ವ್ಯವಸ್ಥೆಗಳ ( Laser-based air defense systems ) ಮೇಲೆ ಗಮನ ಹರಿಸಿದೆ. ಇವು ಕ್ಷಿಪಣಿಗಳನ್ನು ನಾಶಪಡಿಸಲು ಹೆಚ್ಚಿನ ದಕ್ಷತೆ ಮತ್ತು ಕಡಿಮೆ ವೆಚ್ಚದ ವಿಧಾನ ಗಳನ್ನು ಒದಗಿಸುತ್ತವೆ.
ಒಟ್ಟಾರೆಯಾಗಿ, ಇಸ್ರೇಲ್‌ನ ವಾಯುರಕ್ಷಣಾ ವ್ಯವಸ್ಥೆಯು ತಾಂತ್ರಿಕ ನಾವೀನ್ಯ ಮತ್ತು ನಿರಂತರ ರಕ್ಷಣಾ ಅವಶ್ಯಕತೆಗಳ ನಡುವಿನ ಸಮತೋಲನವನ್ನು ಪ್ರತಿಬಿಂಬಿಸುತ್ತದೆ. ಇದರ ಜತೆಗೆ, ಸ್ಕಾರ್ಪಿ ಯಸ್ ಇಲೆಕ್ಟ್ರಾನಿಕ್ ವಾರ್ ಫೇರ್ ( EW ) ವ್ಯವಸ್ಥೆ ಸಹ ಜಾಗೃತವಾಗಿದೆ. ಸ್ಕಾರ್ಪಿಯಸ್ ಎನ್ನುವುದು ಇಸ್ರೇಲ್‌ನ ಎಲ್ಬಿಟ್ ಸಿಸ್ಟಮ್ಸ್ ( Elbit Systems ) ಕಂಪನಿಯು ಅಭಿವೃದ್ಧಿ ಪಡಿಸಿದ ಮುಂದಿನ ತಲೆಮಾರಿನ ಒಂದು ಇಲೆಕ್ಟ್ರಾನಿಕ್ ವಾರ್ ಫೇರ್ ವ್ಯವಸ್ಥೆ. ಇದರ ಮುಖ್ಯ ಉದ್ದೇಶ ವೆಂದರೆ, ಇಲೆಕ್ಟ್ರೋಮ್ಯಾಗ್ನೆಟಿಕ್ ಸ್ಪೆಕ್ಟ್ರಮ್ (ವಿದ್ಯುತ್ಕಾಂತೀಯ ವರ್ಣಪಟಲ)ನ್ನು ಬಳಸಿಕೊಂಡು ಶತ್ರುಗಳ ಬೆದರಿಕೆಗಳನ್ನು ನಿಷ್ಕ್ರಿಯಗೊಳಿಸುವುದು.
ಇದು ಸಾಂಪ್ರದಾಯಿಕ ಕ್ಷಿಪಣಿಗಳು ಅಥವಾ ಬಾಂಬ್‌ಗಳ ಬದಲು ವಿದ್ಯುತ್ಕಾಂತೀಯ ರಂಗಗಳನ್ನು ಬಳಸುತ್ತದೆ. ಇದು ಒಂದು ರೀತಿಯಲ್ಲಿ ‘ಸಾಫ್ಟ್ -ಕಿಲ್’ ತಂತ್ರಜ್ಞಾನ. ಇದು ಒಂದೇ ಸಮಯದಲ್ಲಿ ಸಾವಿರಾರು ಗುರಿಗಳನ್ನು ಟ್ರ್ಯಾಕ್ ಮಾಡುತ್ತದೆ ಮತ್ತು ಅವುಗಳಿಗೆ ತಕ್ಕ ಪ್ರತಿಕ್ರಿಯೆಯನ್ನು ನೀಡುತ್ತದೆ. ಈ ವ್ಯವಸ್ಥೆಯನ್ನು ರೇಡಾರ್ ವ್ಯವಸ್ಥೆಗಳು, ಸಂವಹನ ಜಾಲಗಳು ಮತ್ತು ಇತರ ಇಲೆಕ್ಟ್ರಾನಿಕ್ ಉಪಕರಣಗಳ ಮೇಲೆ ದಾಳಿಮಾಡಲು ವಿನ್ಯಾಸಗೊಳಿಸಲಾಗಿದೆ.
ಇದು ಶತ್ರುಗಳ ಉಪಕರಣಗಳಿಗೆ ತಪ್ಪು ಸಂಕೇತಗಳನ್ನು ಕಳುಹಿಸುತ್ತದೆ, ಗೊಂದಲ ಸೃಷ್ಟಿಸುತ್ತದೆ ಅಥವಾ ಅವುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುತ್ತದೆ. ಸಾಂಪ್ರದಾಯಿಕ ಯುದ್ಧದಲ್ಲಿ, ಶತ್ರುಗಳ ಉಪಕರಣಗಳನ್ನು ನಾಶಮಾಡಲು ಕ್ಷಿಪಣಿಗಳನ್ನು ಬಳಸಲಾಗುತ್ತದೆ. ಆದರೆ ಈ ವಿಧಾನವು ಗಂಭೀರವಾದ ನಾಶಕ್ಕೆ ಕಾರಣವಾಗುತ್ತದೆ.
‘ಸಾಫ್ಟ್ -ಕಿಲ್’ ಎಂಬುದು ಯಾವುದೇ ಭೌತಿಕ ಹಾನಿಯಾಗದಂತೆ ಶತ್ರುಗಳ ಇಲೆಕ್ಟ್ರಾನಿಕ್ ಉಪಕರಣಗಳನ್ನು ನಿಷ್ಕ್ರಿಯಗೊಳಿಸಿ ಯುದ್ಧದ ನಿಯಮಗಳನ್ನು ಬದಲಾಯಿಸಬಹುದಾದ ಒಂದು ಪ್ರಮುಖ ತಂತ್ರಜ್ಞಾನವಾಗಿದೆ.
ಇಷ್ಟಾಗಿಯೂ 2024ರ ಅಕ್ಟೋಬರ್ 1ರಂದು ಇರಾನ್‌ನಿಂದ ಉಡಾಯಿಸಲಾದ ಕೆಲವು ಕ್ಷಿಪಣಿಗಳು ಜೆರುಸಲೆಮ್ ಮೇಲೆ ಕಾಣಿಸಿಕೊಂಡವು. ಈ ಘಟನೆಯು ಇಸ್ರೇಲ್‌ನ ರಕ್ಷಣಾ ವ್ಯವಸ್ಥೆಯಲ್ಲಿನ ಲೋಪವನ್ನು ಬಹಿರಂಗಗೊಳಿಸಿತು. ರಕ್ಷಣಾ ವ್ಯವಸ್ಥೆಯು ಯಶಸ್ವಿಯಾಗಿ ಕೆಲಸ ಮಾಡಿದರೂ, ಕೆಲವು ಕ್ಷಿಪಣಿಗಳು ಗುರಿಯನ್ನು ತಲುಪಿದವು. ಇದಕ್ಕೆ ಕಾರಣ, ದೊಡ್ಡ ಸಂಖ್ಯೆಯ ದಾಳಿ ಅಥವಾ ದಾಳಿಯ ವೇಗ ಮತ್ತು ಸಂಕೀರ್ಣತೆ.
ಶತ್ರುಗಳು ರಕ್ಷಣಾ ವ್ಯವಸ್ಥೆಯನ್ನು ನಿಭಾಯಿಸಲು ಹೊಸ ತಂತ್ರಗಳನ್ನು ಬಳಸುವುದನ್ನು ಮನಗಂಡ ಇಸ್ರೇಲ್, ಶೀಘ್ರವಾಗಿ ತನ್ನ ಲೋಪವನ್ನು ಸರಿಪಡಿಸಿಕೊಂಡಿತು.
ಜೇನುನೊಣಗಳಿಲ್ಲದೇ ಜೇನುತುಪ್ಪ
ಮೊನ್ನೆ ಇಸ್ರೇಲ್‌ಗೆ ಹೋದಾಗ ನಮ್ಮ ಗೈಡ್ ಒಂದು ಆಸಕ್ತಿಕರ ವಾದ ವಿಷಯವನ್ನು ಹೇಳಿದ. ಜೇನುತುಪ್ಪವನ್ನು ಜೇನುಹುಳುಗಳೇ ತಯಾರಿಸಬೇಕು ತಾನೇ? ಆದರೆ ಅಲ್ಲಿನ ವಿಜ್ಞಾನಿಗಳ ತಂಡವೊಂದು ಜೇನುಹುಳುಗಳನ್ನು ಬಳಸದೇ ಜೇನುತುಪ್ಪ ವನ್ನು ಉತ್ಪಾದಿಸಿದೆಯಂತೆ.
ಇದಕ್ಕಾಗಿ ಅವರು ಅಂತಾರಾಷ್ಟ್ರೀಯ ಪ್ರಶಸ್ತಿಯನ್ನೂ ಗೆದ್ದಿದ್ದಾರಂತೆ. ಇದನ್ನು ಕೇಳಿದಾಗ ನನ್ನ ಕಿವಿಗಳು ಆಂಟೇನಾಗಳಾದವು. ಆಗ ನಮ್ಮ ಗೈಡ್ ಈ ಕುರಿತು ತನ್ನ ಮೊಬೈಲಿನಲ್ಲಿರುವ ಒಂದು ಪುಟ್ಟ ವಿಡಿಯೋ ತೋರಿಸಿದ. ಹಾಗಾದರೆ, ಜೇನುನೊಣಗಳಿಲ್ಲದೇ ಜೇನುತುಪ್ಪ ತಯಾರಿಸುವುದು ಹೇಗೆ? ಈ ತಂಡದ ಪ್ರಮುಖ ಆವಿಷ್ಕಾರವೆಂದರೆ ಬ್ಯಾಸಿಲಸ್ ಸಬ್ಟಿಲಿಸ್ ( Bacillus subtilis ) ಎಂಬ ಬ್ಯಾಕ್ಟೀರಿಯಾವನ್ನು ಪರಿಣಾಮಕಾರಿಯಾಗಿ ಬಳಸಿರುವುದು.
ಜೇನುನೊಣಗಳು ಹೂವಿನ ಮಕರಂದವನ್ನು ಜೇನುತುಪ್ಪವಾಗಿ ಪರಿವರ್ತಿಸಲು ಕೆಲವು ನಿರ್ದಿಷ್ಟ ಕಿಣ್ವಗಳನ್ನು ( enzymes ) ಬಳಸುತ್ತವೆ. ಈ ವಿಜ್ಞಾನಿಗಳು ಆ ಕಿಣ್ವಗಳನ್ನು ಉತ್ಪಾದಿಸುವ ಜೀನ್ ಗಳನ್ನು ಗುರುತಿಸಿ, ಅವುಗಳನ್ನು ಬ್ಯಾಸಿಲಸ್ ಸಬ್ಟಿಲಿಸ್ ಬ್ಯಾಕ್ಟೀರಿಯಾದ ಡಿಎನ್‌ಎಗೆ ಸೇರಿಸಿದರು. ಹೀಗೆ, ಬ್ಯಾಕ್ಟೀರಿಯಾಗಳು ಜೇನುನೊಣಗಳ ಹೊಟ್ಟೆಯಲ್ಲಿ ನಡೆಯುವ ಪ್ರಕ್ರಿಯೆಯನ್ನು ಅನುಕರಿಸುವುದನ್ನು ಕಲಿತುಕೊಳ್ಳುತ್ತವೆ.
ಅವುಗಳು ಅದೇ ಕಿಣ್ವಗಳನ್ನು ಉತ್ಪಾದಿಸಿ ಸಕ್ಕರೆ ಮಿಶ್ರಣವನ್ನು ಜೇನುತುಪ್ಪವಾಗಿ ಪರಿವರ್ತಿಸು ತ್ತವೆ. ಈ ಪ್ರಕ್ರಿಯೆಯಿಂದ ತಯಾರಿಸಿದ ಜೇನುತುಪ್ಪವು ನಿಜವಾದ ಜೇನುತುಪ್ಪದಂತೆಯೇ ಸಕ್ಕರೆ ಅಂಶ ಮತ್ತು ಗುಣಲಕ್ಷಣಗಳನ್ನು ಹೊಂದಿದೆ. ಈ ಸಂಶೋಧನೆಯು ಹಲವಾರು ಕಾರಣಗಳಿಗಾಗಿ ಮಹತ್ವಪೂರ್ಣವಾಗಿದೆ. ಜಗತ್ತಿನಾದ್ಯಂತ ಜೇನುನೊಣಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಇದು ಪರಿಸರ ಮತ್ತು ಆಹಾರ ಸರಪಳಿಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.
ಜೇನುತುಪ್ಪವನ್ನು ತಯಾರಿಸಲು ನೊಣಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡುವುದು ಈ ಸಮಸ್ಯೆಗೆ ಒಂದು ಪರಿಹಾರ ನೀಡುತ್ತದೆ. ಜೇನುತುಪ್ಪವು ಪ್ರಾಣಿ ಮೂಲದ ಉತ್ಪನ್ನ ವಾಗಿರುವುದರಿಂದ, ವೇಗನ್‌ಗಳು ಅದನ್ನು ಬಳಸುವುದಿಲ್ಲ. ಆದರೆ ಈ ಬ್ಯಾಕ್ಟೀರಿಯಾದಿಂದ ತಯಾರಿಸಿದ ಜೇನುತುಪ್ಪ ಸಂಪೂರ್ಣವಾಗಿ ಪ್ರಾಣಿರಹಿತವಾಗಿದ್ದು, ವೇಗನ್‌ಗಳು ಅದನ್ನು ಬಳಸಬಹುದು. ಈ ತಂತ್ರಜ್ಞಾನದ ಮೂಲಕ, ತಯಾರಕರು ಜೇನುತುಪ್ಪದ ರುಚಿ, ಬಣ್ಣ ಮತ್ತು ಆರೋಗ್ಯ ಗುಣಗಳನ್ನು ನಿಯಂತ್ರಿಸಬಹುದು, ಆ ಮೂಲಕ ವಿಶಿಷ್ಟ ಉತ್ಪನ್ನಗಳನ್ನು ಸೃಷ್ಟಿಸ ಬಹುದು.
ಇದು ನೈಸರ್ಗಿಕ ಜೇನುತುಪ್ಪ ಉತ್ಪಾದನೆಯಾಗಿರುವುದರಿಂದ ಪರಿಸರಕ್ಕೆ ಹಾನಿ ಉಂಟು ಮಾಡುವುದಿಲ್ಲ. ಈ ಆವಿಷ್ಕಾರವು ಕೇವಲ ಒಂದು ವೈಜ್ಞಾನಿಕ ಸಾಧನೆಯಷ್ಟೇ ಅಲ್ಲ, ಬದಲಾಗಿ ಭವಿಷ್ಯದ ಆಹಾರ ತಂತ್ರಜ್ಞಾನದಲ್ಲಿ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಇದು ಜೇನುನೊಣಗಳ ಸಂರಕ್ಷಣೆಗೆ ಸಹಕಾರಿಯಾಗಿದೆ ಮತ್ತು ಜನರಿಗೆ ಪರಿಸರಸ್ನೇಹಿ ಪರ್ಯಾಯವನ್ನು ಒದಗಿಸಿದಂತಾ ಗಿದೆ.
ಚೆಕ್ ಮತ್ತು ಹೀಬ್ರೂ ಕ್ಯಾಲೆಂಡರ್
ಇಸ್ರೇಲಿಗಳು ತಮ್ಮ ಭಾಷೆಯನ್ನು ಅತಿಯಾಗಿ ಪ್ರೀತಿಸುವವರು. ಅವರಿಗೆ ಹೀಬ್ರೂ ಅಂದ್ರೆ ಪ್ರಾಣ. ಭಾಷೆಯ ವಿಷಯದಲ್ಲಿ ಯಾವ ಕಾರಣಕ್ಕೂ ಅವರು ರಾಜಿ ಆಗುವುದಿಲ್ಲ. ಇಸ್ರೇಲ್‌ನಲ್ಲಿ ಅಧಿಕೃತ ದಾಖಲೆಗಳು ಮತ್ತು ಚೆಕ್‌ಗಳ ಮೇಲೆ ಗ್ರೆಗೋರಿಯನ್ ದಿನಾಂಕದ ಜತೆಗೆ (ಅಥವಾ ಅದಕ್ಕೆ ಬದಲಾಗಿ) ಯಹೂದಿ (ಹೀಬ್ರೂ) ಕ್ಯಾಲೆಂಡರ್ ದಿನಾಂಕವನ್ನು ಬರೆಯುವುದು ಕಾನೂನುಬದ್ಧ ವಾಗಿದೆ. ಈ ಪದ್ಧತಿಯು ಆ ದೇಶದ ಸಾಂಸ್ಕೃತಿಕ ಮತ್ತು ಧಾರ್ಮಿಕ ಅನನ್ಯತೆಯ ಪ್ರತೀಕವೇ ಸರಿ.
ಇಸ್ರೇಲ್ ಒಂದು ಆಧುನಿಕ ರಾಷ್ಟ್ರವಾಗಿದ್ದರೂ, ತನ್ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ಅಧಿಕೃತವಾಗಿ, ಇಸ್ರೇಲ್‌ನಲ್ಲಿ ಎರಡು ಕ್ಯಾಲೆಂಡರ್‌ಗಳನ್ನು ಬಳಸಲಾಗುತ್ತದೆ. ಮೊದಲನೆಯದು, ಗ್ರೆಗೋರಿಯನ್ ಕ್ಯಾಲೆಂಡರ್. ಇದು ವಿಶ್ವದಾದ್ಯಂತ ವ್ಯಾಪಕವಾಗಿ ಬಳಸುವ ಸೌರ ಕ್ಯಾಲೆಂಡರ್. ವ್ಯಾಪಾರ, ಹಣಕಾಸು ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳಿಗೆ ಇದನ್ನು ಬಳಸಲಾಗುತ್ತದೆ.
ಎರಡನೆಯದು, ಯಹೂದಿ (ಹೀಬ್ರೂ) ಕ್ಯಾಲೆಂಡರ್. ಇದು ಯಹೂದಿ ಸಮುದಾಯದ ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನದ ಆಧಾರ. ಹಬ್ಬಗಳು, ಧಾರ್ಮಿಕ ಆಚರಣೆಗಳು ಮತ್ತು ಪ್ರಮುಖ ಘಟನೆಗಳ ದಿನಾಂಕಗಳನ್ನು ಈ ಕ್ಯಾಲೆಂಡರ್ ನಿರ್ಧರಿಸುತ್ತದೆ. ಇದು ಚಂದ್ರನ ಹಂತಗಳನ್ನು ಮತ್ತು ಸೂರ್ಯನ ಚಲನೆಯನ್ನು ಆಧರಿಸಿದ ಒಂದು ಚಂದ್ರ-ಸೌರ ಕ್ಯಾಲೆಂಡರ್.
ಇಸ್ರೇಲ್‌ನ ಕಾನೂನು ಪ್ರಕಾರ, ಸರಕಾರಿ ಕಚೇರಿಗಳು, ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳು ಹೀಬ್ರೂ ದಿನಾಂಕವನ್ನು ಸ್ವೀಕರಿಸಬೇಕು. ಆದ್ದರಿಂದ, ಒಬ್ಬ ವ್ಯಕ್ತಿ ಚೆಕ್ ಬರೆಯುವಾಗ, ಕೇವಲ ಹೀಬ್ರೂ ದಿನಾಂಕವನ್ನು ಬಳಸಿದರೆ ಅದು ಮಾನ್ಯವಾಗುತ್ತದೆ. ಇದು ಯಹೂದಿ ಸಂಸ್ಕೃತಿ ಯ ಭಾಗವಾಗಿದ್ದು, ದೇಶದ ಅಧಿಕೃತ ವ್ಯವಸ್ಥೆಗಳಲ್ಲಿ ಅದರ ಪ್ರಾಮುಖ್ಯವನ್ನು ತೋರಿಸುತ್ತದೆ.
ಉದಾಹರಣೆಗೆ, ಒಬ್ಬ ವ್ಯಕ್ತಿ ಜನವರಿ 1, 2025ರಂದು ಚೆಕ್ ಬರೆದರೆ, ಅದರ ಮೇಲೆ ಯಹೂದಿ ಕ್ಯಾಲೆಂಡರ್ ಪ್ರಕಾರ ’ 2 Tevet 5785 ’ ಎಂದು ಬರೆಯಬಹುದು. ಎರಡೂ ದಿನಾಂಕಗಳು ಮಾನ್ಯ ವಾಗಿರುತ್ತವೆ ಮತ್ತು ಬ್ಯಾಂಕುಗಳು ಅದನ್ನು ಅಂಗೀಕರಿಸುತ್ತವೆ. ಈ ನಿಯಮವು ಇಸ್ರೇಲ್‌ನ ಇತಿಹಾಸ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಅಲ್ಲಿ ಆಧುನಿಕತೆಯು ಸಾಂಪ್ರದಾಯಿಕ ಮೌಲ್ಯಗಳೊಂದಿಗೆ ಸಹಬಾಳ್ವೆ ನಡೆಸುತ್ತದೆ.
ಯಹೂದಿ ಪರಂಪರೆಯನ್ನು ಗೌರವಿಸುವುದು ಮತ್ತು ಅದನ್ನು ದೈನಂದಿನ ಜೀವನದಲ್ಲಿ ಸಕ್ರಿಯ ವಾಗಿ ಉಳಿಸಿಕೊಳ್ಳುವುದನ್ನು ಅಲ್ಲಿನ ಸರಕಾರ ಪ್ರೋತ್ಸಾಹಿಸುತ್ತಾ ಬಂದಿದೆ.
ಐನ್‌ಸ್ಟೈನ್ ಹಾಗೇಕೆ ಮಾಡಿದರು?
ನಿಮಗೆ ಗೊತ್ತಿರಬಹುದು, ಖ್ಯಾತ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್ ಪಕ್ಕಾ ಯಹೂದಿ ಎಂದು. ಆದರೆ ಅವರಿಗೆ ಇಸ್ರೇಲ್‌ನ ಅಧ್ಯಕ್ಷರಾಗುವಂತೆ ಆಹ್ವಾನವನ್ನು ನೀಡಲಾಗಿತ್ತು ಎಂಬ ಸಂಗತಿ ಗೊತ್ತಾ? 1952ರ ನವೆಂಬರ್‌ನಲ್ಲಿ, ಇಸ್ರೇಲ್‌ನ ಮೊದಲ ಅಧ್ಯಕ್ಷ ಚೈಮ್ ವೈಜ್ಮನ್ ನಿಧನರಾದ ನಂತರ, ಅವರ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಬೇಕಾಗಿತ್ತು. ಈ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಪ್ರಶ್ನೆ ಎದುರಾಯಿತು. ಹತ್ತಾರು ಹೆಸರುಗಳು ಪ್ರಸ್ತಾಪವಾದವು. ಇಸ್ರೇಲ್‌ನ ಪ್ರಧಾನ ಮಂತ್ರಿ ಯಾಗಿದ್ದ ಡೇವಿಡ್ ಬೆನ್-ಗುರಿಯನ್ ಅವರು ಆಲ್ಬರ್ಟ್ ಐನ್‌ಸ್ಟೈನ್ ಅವರಿಗೆ ಈ ಹುದ್ದೆಯನ್ನು ನೀಡಲು ನಿರ್ಧರಿಸಿದರು. ಈ ಪ್ರಸ್ತಾಪವನ್ನು ನ್ಯೂಯಾರ್ಕ್‌ನಲ್ಲಿರುವ ಇಸ್ರೇಲ್ ರಾಯಭಾರಿ ಮೂಲಕ ಐನ್‌ಸ್ಟೈನ್ ಅವರಿಗೆ ತಲುಪಿಸಲಾಯಿತು.
ಐನ್‌ಸ್ಟೈನ್ ಅವರ ಹೆಸರನ್ನು ಸೂಚಿಸುವುದರ ಹಿಂದೆ ಹಲವಾರು ಕಾರಣಗಳಿದ್ದವು. ಐನ್‌ಸ್ಟೈನ್ ಆಗಲೇ ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವರಿಗೆ ನೀಡುವ ಗೌರವವು ಇಸ್ರೇಲ್‌ಗೂ ಗೌರವ ತರುತ್ತದೆ ಎಂದು ಬೆನ್ -ಗುರಿಯನ್ ನಂಬಿದ್ದರು. ಮೂಲತಃ ಯಹೂದಿ ಜನಾಂಗಕ್ಕೆ ಸೇರಿದ್ದ ಐನ್‌ಸ್ಟೈನ್ ಜಿಯೋನಿಸಂ ಆಂದೋಲನಕ್ಕೆ ಬೆಂಬಲ ನೀಡಿದ್ದರು.
ಹೊಸದಾಗಿ ಸ್ಥಾಪಿತವಾದ ಇಸ್ರೇಲ್ ದೇಶಕ್ಕೆ ಅವರಂಥ ಜಾಗತಿಕ ವ್ಯಕ್ತಿತ್ವದ ನಾಯಕನ ಅಗತ್ಯವಿದೆ ಎಂದು ಬೆನ್ ಗುರಿಯನ್ ಭಾವಿಸಿದ್ದರು. ಐನ್‌ಸ್ಟೈನ್ ಈ ಪ್ರಸ್ತಾಪವನ್ನು ನಿರೀಕ್ಷಿಸಿರಲಿಲ್ಲ. ತಕ್ಷಣ ಅವರಿಗೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದು ತಿಳಿಯಲಿಲ್ಲ. ತಮ್ಮ ನಿಲುವೇನು ಎಂಬುದನ್ನು ಪತ್ರದ ಮುಖೇನ ತಿಳಿಸುವುದಾಗಿ ಹೇಳಿದರು. ಯೋಚಿಸಲು ತುಸು ಕಾಲಾವಕಾಶ ತೆಗೆದುಕೊಳ್ಳು ವುದು ಅವರ ಉದ್ದೇಶವಾಗಿತ್ತು.
ಇಸ್ರೇಲ್ ಪ್ರಧಾನಿ ಅವರ ಪ್ರಸ್ತಾಪಕ್ಕೆ ಐನ್‌ಸ್ಟೈನ್ ಗೌರವದಿಂದ ಪ್ರತಿಕ್ರಿಯಿಸುತ್ತಾ ಈ ಹುದ್ದೆಯನ್ನು ನಯವಾಗಿ ನಿರಾಕರಿಸಿದರು. ಆ ಪತ್ರದಲ್ಲಿ ಅವರು ತಮ್ಮ ನಿರಾಕರಣೆಗೆ ಕೆಲವು ಕಾರಣಗಳನ್ನು ನೀಡಿದ್ದರು. ಜನರೊಂದಿಗೆ ಸರಿಯಾಗಿ ವ್ಯವಹರಿಸಲು ಮತ್ತು ಅಧಿಕೃತ ಕಾರ್ಯಗಳನ್ನು ನಿರ್ವಹಿಸಲು ತಮಗೆ ಸಾಕಷ್ಟು ಅನುಭವವಿಲ್ಲ ಮತ್ತು ರಾಜಕೀಯಕ್ಕಿಂತ ವೈಜ್ಞಾನಿಕ ವಿಷಯ ಗಳಿಗೆ ತಮಗೆ ಹೆಚ್ಚು ಆಸಕ್ತಿ ಇರುವುದರಿಂದ ತಾವು ಈ ಕೋರಿಕೆಯನ್ನು ಒಪ್ಪಿಕೊಳ್ಳಲು ಸಾಧ್ಯ ವಾಗುತ್ತಿಲ್ಲ ಎಂದು ಐನ್‌ಸ್ಟೈನ್ ಸ್ಪಷ್ಟಪಡಿಸಿದ್ದರು.
ತಮ್ಮ ಜೀವನವನ್ನು ವಿಜ್ಞಾನ ಮತ್ತು ಭೌತಶಾಸ್ತ್ರಕ್ಕೆ ಮೀಸಲಿಟ್ಟಿರುವುದರಿಂದ, ರಾಜಕೀಯ ಹುz ತನ್ನ ವೈಜ್ಞಾನಿಕ ಕಾರ್ಯಗಳಿಗೆ ಅಡ್ಡಿಯಾಗಬಹುದು ಮತ್ತು ತಮಗೆ ಈಗ 73 ವರ್ಷ ವಯಸ್ಸಾಗಿ ರುವುದರಿಂದ ಆರೋಗ್ಯವೂ ಅಷ್ಟೇನೂ ಉತ್ತಮವಾಗಿಲ್ಲ. ಇಸ್ರೇಲ್‌ನ ಅಧ್ಯಕ್ಷರಂಥ ಒತ್ತಡದ ಹುದ್ದೆಯನ್ನು ನಿಭಾಯಿಸಲು ತಮಗೆ ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದರು.
ಅಂತಿಮವಾಗಿ, ಈ ಪತ್ರವು ಬೆನ್-ಗುರಿಯನ್ ಅವರಿಗೆ ತಲುಪಿತು ಮತ್ತು ಅವರು ಐನ್‌ಸ್ಟೈನ್‌ರ ನಿರ್ಧಾರವನ್ನು ಒಪ್ಪಿಕೊಂಡರು. ನಂತರ, ಯಿಟ್ಜಾಕ್ ಬೆನ್-ಜ್ವಿ ಇಸ್ರೇಲ್‌ನ ಎರಡನೇ ಅಧ್ಯಕ್ಷರಾಗಿ ಆಯ್ಕೆಯಾದರು. ಐನ್‌ಸ್ಟೈನ್ ಜಾಗದಲ್ಲಿ ಬೇರೆ ಯಾರೇ ಆಗಿದ್ದರೂ ಸ್ವತಃ ಪ್ರಧಾನಿಯವರ ಆಹ್ವಾನ ವನ್ನು ಒಪ್ಪಿಕೊಳ್ಳುತ್ತಿದ್ದರು. ಆದರೆ ಐನ್ ಸ್ಟೈನ್ ಅಧಿಕಾರ ಅಥವಾ ಪ್ರತಿಷ್ಠೆಯ ಹಿಂದೆ ಹೋಗದೇ, ತಮ್ಮ ಆಸಕ್ತಿಯ ವಿಷಯವಾದ ವಿeನಕ್ಕೆ ಬದ್ಧರಾಗಿ ಉಳಿದು, ತಮ್ಮ ಮಿತಿಗಳನ್ನು ಪ್ರಾಮಾಣಿಕ ವಾಗಿ ಒಪ್ಪಿಕೊಂಡರು. ಇದು ಇಂದಿಗೂ ಅವರ ನೈತಿಕತೆ ಮತ್ತು ಸರಳ ಜೀವನಶೈಲಿಗೆ ನಿದರ್ಶನ ವಾಗಿದೆ.