Vishweshwar Bhat Column: ಶೂನ್ಯದಿಂದಲೂ ಒಂದು ಬಲಿಷ್ಠ ರಾಷ್ಟ್ರ ಕಟ್ಟಬಹುದೆಂಬುದಕ್ಕೆ ಇಸ್ರೇಲ್ ನಿದರ್ಶನ
ಮೊದಲ ಮಹಾಯುದ್ಧದ ನಂತರ, ಈ ಪ್ರದೇಶ ಬ್ರಿಟಿಷರ ಅಧೀನಕ್ಕೆ ಬಂತು. 1917ರ ಬಾಲರ್ ಘೋಷ ಣೆಯು ಯಹೂದಿಗಳಿಗೆ ರಾಷ್ಟ್ರೀಯ ನೆಲೆಯನ್ನು ಸ್ಥಾಪಿಸಲು ಬ್ರಿಟನ್ ಬೆಂಬಲ ನೀಡಿತು. ಆದರೆ, ಇದು ಸ್ಥಳೀಯ ಅರಬ್ ಸಮುದಾಯ ಮತ್ತು ಯಹೂದಿಗಳ ನಡುವೆ ಸಂಘರ್ಷಕ್ಕೆ ಕಾರಣವಾಯಿತು. 1930ರ ದಶಕದಲ್ಲಿ ಜರ್ಮನಿಯಲ್ಲಿ ನಾಜಿಗಳಿಂದ ನಡೆದ ‘ಹೋಲೋಕಾಸ್ಟ್’ (ಯಹೂದಿಗಳ ಸಾಮೂಹಿಕ ಹತ್ಯೆ) ಇಸ್ರೇಲ್ ಸ್ಥಾಪನೆಯ ಅನಿವಾರ್ಯತೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿತು. ಲಕ್ಷಾಂತರ ಜನರು ಪ್ರಾಣ ಉಳಿಸಿಕೊಳ್ಳಲು ಪ್ಯಾಲೆಸ್ತೀನ್‌ಗೆ ಬರತೊಡಗಿದರು.
-
ಇದೇ ಅಂತರಂಗ ಸುದ್ದಿ
ಇಂದು ಇಸ್ರೇಲ್ ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲಿ ಒಂದು. ಅದು ಎದುರಿಸುತ್ತಿರುವ ಭದ್ರತಾ ಸವಾಲುಗಳು ಅಪಾರವಾಗಿದ್ದರೂ, ಶಿಕ್ಷಣ, ನಾವೀನ್ಯ ಮತ್ತು ರಾಷ್ಟ್ರೀಯತೆಯ ವಿಷಯ ದಲ್ಲಿ ಅದು ಮುಂಚೂಣಿಯಲ್ಲಿದೆ. ‘ನೆಲಕ್ಕಿಂತ ಮಿಗಿಲಾಗಿ ಜನರ ಮನಸ್ಸಿನಲ್ಲಿ ದೇಶದ ಬಗ್ಗೆ ಇರುವ ಕನಸು ದೊಡ್ಡದಾಗಿದ್ದರೆ, ಶೂನ್ಯದಿಂದಲೂ ಒಂದು ಬಲಿಷ್ಠ ರಾಷ್ಟ್ರವನ್ನು ಕಟ್ಟಬಹುದು’ ಎಂಬ ಮಾತು ಇಸ್ರೇಲ್‌ನ ಇತಿಹಾಸಕ್ಕೆ ಹಿಡಿದ ಕನ್ನಡಿ.
ಇಸ್ರೇಲ್ ಎಂಬ ದೇಶದ ಉಗಮವು ವಿಶ್ವ ಇತಿಹಾಸದ ಅತ್ಯಂತ ರೋಚಕ ಮತ್ತು ವಿಶಿಷ್ಟ ಅಧ್ಯಾಯ ಗಳಲ್ಲಿ ಒಂದು. ಸುಮಾರು ಎರಡು ಸಾವಿರ ವರ್ಷಗಳ ಕಾಲ ತಮ್ಮದೇ ಆದ ಭೂ ಪ್ರದೇಶವಿಲ್ಲದೇ, ಪ್ರಪಂಚದ ನಾನಾ ಮೂಲೆಗಳಲ್ಲಿ ಚದುರಿಹೋಗಿದ್ದ ಜನಾಂಗವೊಂದು ಮರಳಿ ಬಂದು ರಾಷ್ಟ್ರ ವೊಂದನ್ನು ನಿರ್ಮಿಸುವುದು ಕೇವಲ ರಾಜಕೀಯ ಪ್ರಕ್ರಿಯೆಯಲ್ಲ; ಅದು ಅದಮ್ಯ ಇಚ್ಛಾಶಕ್ತಿ ಮತ್ತು ಸಾಂಸ್ಕೃತಿಕ ಪುನರುತ್ಥಾನದ ಕಥೆ.
ಕ್ರಿ.ಶ.70ರಲ್ಲಿ ರೋಮನ್ನರು ಜೆರುಸಲೇಂನ ಎರಡನೇ ದೇವಾಲಯವನ್ನು ನಾಶಪಡಿಸಿದ ನಂತರ, ಯಹೂದಿಗಳು ತಮ್ಮ ನೆಲದಿಂದ ಸಾಮೂಹಿಕವಾಗಿ ಹೊರಹಾಕಲ್ಪಟ್ಟರು. ಇದರ ಪರಿಣಾಮ, ಯಹೂದಿಗಳು ಯುರೋಪ್, ಅರಬ್ ರಾಷ್ಟ್ರಗಳು ಮತ್ತು ಏಷ್ಯಾದ ವಿವಿಧ ಭಾಗಗಳಲ್ಲಿ ನೆಲೆಸಿದರು. ಆದರೆ, ಅವರು ಎಲ್ಲೇ ಇದ್ದರೂ ತಮ್ಮ ಪ್ರಾರ್ಥನೆಗಳಲ್ಲಿ ‘ಮುಂದಿನ ವರ್ಷ ಜೆರುಸಲೆಮ್‌ನಲ್ಲಿ’ ಎಂದು ಹೇಳುತ್ತಾ ತಮ್ಮ ಮೂಲ ನೆಲಕ್ಕೆ ಮರಳುವ ಕನಸನ್ನು ಜೀವಂತವಾಗಿಟ್ಟಿದ್ದರು.
ಹತ್ತೊಂಬತ್ತನೇ ಶತಮಾನದ ಅಂತ್ಯದ ವೇಳೆಗೆ ಯುರೋಪ್‌ನಲ್ಲಿ ಹೆಚ್ಚಾದ ಯಹೂದಿ ವಿರೋಧಿ ಧೋರಣೆ (Anti-Semitism) ಈ ಹಂಬಲವನ್ನು ಒಂದು ರಾಜಕೀಯ ಚಳವಳಿಯನ್ನಾಗಿ ರೂಪಿಸಿತು. 1890ರ ದಶಕದಲ್ಲಿ ಥಿಯೋಡರ್ ಹರ್ಜಲ್ ಎಂಬ ಪತ್ರಕರ್ತ ‘ಝಿಯೋನಿಸಂ’ ಎಂಬ ಸಿದ್ಧಾಂತ ವನ್ನು ಮುಂದಿಟ್ಟರು.
ಯಹೂದಿಗಳಿಗೆ ಸುರಕ್ಷಿತವಾಗಿರಲು ತಮ್ಮದೇ ಆದ ಸ್ವತಂತ್ರ ದೇಶದ ಅಗತ್ಯವಿದೆ ಎಂಬುದು ಇದರ ಮೂಲ ಉದ್ದೇಶವಾಗಿತ್ತು. 1897ರಲ್ಲಿ ಮೊದಲ ಝಿಯೋನಿಸ್ಟ್ ಕಾಂಗ್ರೆಸ್ ನಡೆಯಿತು. ಇಲ್ಲಿಂದ ಜಗತ್ತಿನಾದ್ಯಂತ ಇದ್ದ ಯಹೂದಿಗಳು ಅಂದಿನ ಒಟ್ಟೊಮನ್ ಸಾಮ್ರಾಜ್ಯದ ಅಧೀನದಲ್ಲಿದ್ದ ‘ಪ್ಯಾಲೆಸ್ತೀನ್’ ಪ್ರದೇಶಕ್ಕೆ ವಲಸೆ ಬರಲು ಆರಂಭಿಸಿದರು. ಇದನ್ನು ‘ಅಲಿಯಾ’ ಎಂದು ಕರೆಯ ಲಾಗುತ್ತದೆ.
ಇದನ್ನೂ ಓದಿ: Vishweshwar Bhat Column: 52 ವರ್ಷಗಳ ನಂತರವೂ ನೆನಪಾಗುವ, ಪ್ರಸ್ತಾಪವಾಗುವ, ಪ್ರಸ್ತುತವಾಗುವ ಆ ಮಾತು !
ಮೊದಲ ಮಹಾಯುದ್ಧದ ನಂತರ, ಈ ಪ್ರದೇಶ ಬ್ರಿಟಿಷರ ಅಧೀನಕ್ಕೆ ಬಂತು. 1917ರ ಬಾಲರ್ ಘೋಷಣೆಯು ಯಹೂದಿಗಳಿಗೆ ರಾಷ್ಟ್ರೀಯ ನೆಲೆಯನ್ನು ಸ್ಥಾಪಿಸಲು ಬ್ರಿಟನ್ ಬೆಂಬಲ ನೀಡಿತು. ಆದರೆ, ಇದು ಸ್ಥಳೀಯ ಅರಬ್ ಸಮುದಾಯ ಮತ್ತು ಯಹೂದಿಗಳ ನಡುವೆ ಸಂಘರ್ಷಕ್ಕೆ ಕಾರಣ ವಾಯಿತು. 1930ರ ದಶಕದಲ್ಲಿ ಜರ್ಮನಿಯಲ್ಲಿ ನಾಜಿಗಳಿಂದ ನಡೆದ ‘ಹೋಲೋಕಾಸ್ಟ್’ (ಯಹೂದಿಗಳ ಸಾಮೂಹಿಕ ಹತ್ಯೆ) ಇಸ್ರೇಲ್ ಸ್ಥಾಪನೆಯ ಅನಿವಾರ್ಯತೆಯನ್ನು ಜಗತ್ತಿಗೆ ಮನವರಿಕೆ ಮಾಡಿಕೊಟ್ಟಿತು. ಲಕ್ಷಾಂತರ ಜನರು ಪ್ರಾಣ ಉಳಿಸಿಕೊಳ್ಳಲು ಪ್ಯಾಲೆಸ್ತೀನ್‌ಗೆ ಬರ ತೊಡಗಿದರು.
ಎರಡನೇ ಮಹಾಯುದ್ಧದ ನಂತರ ಬ್ರಿಟನ್ ಈ ಪ್ರದೇಶವನ್ನು ತೊರೆಯಲು ನಿರ್ಧರಿಸಿತು. 1947 ರಲ್ಲಿ ವಿಶ್ವಸಂಸ್ಥೆಯು ಈ ಭೂಪ್ರದೇಶವನ್ನು ಯಹೂದಿ ಮತ್ತು ಅರಬ್ ರಾಷ್ಟ್ರಗಳಾಗಿ ವಿಭಜಿಸುವ ಯೋಜನೆಯನ್ನು ಮುಂದಿಟ್ಟಿತು. 1948ರ ಮೇ 14ರಂದು ಡೇವಿಡ್ ಬೆನ್-ಗುರಿಯನ್ ಅವರು ಇಸ್ರೇಲ್‌ನ ಸ್ವಾತಂತ್ರ್ಯವನ್ನು ಘೋಷಿಸಿದರು.
ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ನೆರೆಯ ಐದು ಅರಬ್ ರಾಷ್ಟ್ರಗಳು ಇಸ್ರೇಲ್ ಮೇಲೆ ದಾಳಿ ಮಾಡಿದವು. ಆದರೆ, ಹೊಸದಾಗಿ ರೂಪುಗೊಂಡ ಇಸ್ರೇಲಿ ಸೈನ್ಯವು ಈ ಯುದ್ಧವನ್ನು ಗೆದ್ದು ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿತು.
ಇಸ್ರೇಲ್ ಕೇವಲ ಯುದ್ಧದಿಂದ ಗೆದ್ದ ದೇಶವಲ್ಲ, ಅದನ್ನು ಒಳಗಿನಿಂದ ಕಟ್ಟಿದ ರೀತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಎರಡು ಸಾವಿರ ವರ್ಷಗಳಿಂದ ಕೇವಲ ಧಾರ್ಮಿಕ ಗ್ರಂಥಗಳಿಗೆ ಸೀಮಿತ ವಾಗಿದ್ದ ‘ಹೀಬ್ರೂ’ ಭಾಷೆಯನ್ನು ಎಲಿಜರ್ ಬೆನ್-ಯೆಹುಡಾ ಅವರ ಶ್ರಮದಿಂದ ಆಧುನಿಕ ಆಡು ಭಾಷೆಯನ್ನಾಗಿ ಪರಿವರ್ತಿಸಲಾಯಿತು. ಜಗತ್ತಿನ ಇತಿಹಾಸದಲ್ಲಿ ಸತ್ತಹೋದ ಭಾಷೆಯೊಂದು ರಾಷ್ಟ್ರದ ಅಧಿಕೃತ ಭಾಷೆಯಾಗಿ ಪುನರ್ಜನ್ಮ ಪಡೆದ ಏಕೈಕ ಉದಾಹರಣೆ ಇದು.
ಇಸ್ರೇಲ್ ರಚನೆಯಾದಾಗ ಅಲ್ಲಿಗೆ ಬಂದವರು ಕೇವಲ ಯುರೋಪಿಯನ್ ಯಹೂದಿಗಳಲ್ಲ. ಮೊರಾಕ್ಕೊ, ಇರಾಕ್, ಯೆಮೆನ್, ಇಥಿಯೋಪಿಯಾ ಮತ್ತು ಭಾರತದಿಂದಲೂ ಯಹೂದಿಗಳು ಬಂದರು. ಅದು ಜಗತ್ತಿನಾದ್ಯಂತ ಚದುರಿದ್ದ ವಿವಿಧ ಜನಾಂಗೀಯ ಗುಂಪುಗಳನ್ನು ಒಂದೆಡೆ ಸೇರಿಸಿದ ‘ಮೆಲ್ಟಿಂಗ್ ಪಾಟ್’ (Melting Pot) ಅಥವಾ ಸಾಂಸ್ಕೃತಿಕ ಸಂಗಮವಾಯಿತು.
ಇಸ್ರೇಲ್ ರಚನೆಯಾದ ನಂತರ ಮೊರಾಕ್ಕೊ, ಇರಾಕ್ ಮತ್ತು ಯೆಮೆನ್‌ನಂಥ ಮುಸ್ಲಿಂ ಬಹು ಸಂಖ್ಯಾತ ದೇಶಗಳಿಂದ ಲಕ್ಷಾಂತರ ಯಹೂದಿಗಳು ವಲಸೆ ಬಂದರು. ಯೆಮೆನ್ ನಿಂದ ಸುಮಾರು 49,000 ಜನರನ್ನು ‘ಆಪರೇಷನ್ ಮ್ಯಾಜಿಕ್ ಕಾರ್ಪೆಟ್’ ಎಂಬ ವಿಮಾನ ಕಾರ್ಯಾಚರಣೆಯ ಮೂಲಕ ಕರೆತರಲಾಯಿತು.
ಆಫ್ರಿಕಾದ ಇಥಿಯೋಪಿಯಾದಿಂದ ಸಾವಿರಾರು ಯಹೂದಿಗಳು ರಹಸ್ಯ ಮತ್ತು ಸಾಹಸಮಯ ಕಾರ್ಯಾಚರಣೆಗಳಾದ ‘ಆಪರೇಷನ್ ಮೋಸೆಸ್’ ಮತ್ತು ‘ಆಪರೇಷನ್ ಸೊಲೊಮನ್’ ಮೂಲಕ ಇಸ್ರೇಲ್ ಸೇರಿದರು. ಭಾರತದ ಮಹಾರಾಷ್ಟ್ರದ ‘ಬೆನೆ ಇಸ್ರೇಲ್’, ಕೇರಳದ ‘ಕೊಚ್ಚಿನ್ ಯಹೂದಿ ಗಳು’ ಮತ್ತು ಕೋಲ್ಕತ್ತಾದ ‘ಬಾಗ್ದಾದಿ ಯಹೂದಿಗಳು’ 1950ರ ದಶಕದಲ್ಲಿ ಇಸ್ರೇಲ್ʼಗೆ ತೆರಳಿದರು. ಇವರು ತಮ್ಮೊಂದಿಗೆ ಭಾರತೀಯ ಸಂಸ್ಕೃತಿ, ಆಹಾರ ಮತ್ತು ಮೌಲ್ಯಗಳನ್ನು ಕೊಂಡೊಯ್ದರು. ಈ ವೈವಿಧ್ಯಮಯ ವಲಸೆಯು ಇಸ್ರೇಲ್‌ನಲ್ಲಿ ಕೇವಲ ಒಂದು ಸಂಸ್ಕೃತಿ ಉಳಿಯದಂತೆ ಮಾಡಿತು.
ಇಂದು ಇಸ್ರೇಲ್‌ನಲ್ಲಿ ಅರೇಬಿಕ್ ಶೈಲಿಯ ಆಹಾರ, ಆಫ್ರಿಕನ್ ಸಂಗೀತ ಮತ್ತು ಭಾರತೀಯ ಸಂಪ್ರದಾಯಗಳ ಸುಂದರ ಸಮ್ಮಿಲನವನ್ನು ಕಾಣಬಹುದು. ಈ ವಿಭಿನ್ನ ಹಿನ್ನೆಲೆಯ ಜನರು ಒಟ್ಟಾಗಿ ಸೇರಿದಾಗಲೇ ಆಧುನಿಕ ಇಸ್ರೇಲ್ ಪರಿಪೂರ್ಣವಾಯಿತು.
ಈ ಎಲ್ಲ ವಿಭಿನ್ನ ಸಂಸ್ಕೃತಿಗಳು, ಆಹಾರ ಪದ್ಧತಿಗಳು ಮತ್ತು ಆಚಾರಗಳು ಒಂದಾಗಿ ಇಸ್ರೇಲ್ ಎಂಬ ಪೂರ್ಣ ಸಮಾಜ ನಿರ್ಮಾಣವಾಯಿತು. ಕೇವಲ ಧರ್ಮ ಅವರನ್ನು ಒಂದುಗೂಡಿಸಲಿಲ್ಲ, ಬದಲಿಗೆ ‘ನಮಗಾಗಿ ಒಂದು ಸುರಕ್ಷಿತ ನೆಲೆ ಬೇಕು’ ಎಂಬ ಅದಮ್ಯ ಚೇತನ ಅವರನ್ನು ಒಂದು ಮಾಡಿತು.
ಇಂದು ಇಸ್ರೇಲ್ ಜಗತ್ತಿನ ಪ್ರಬಲ ರಾಷ್ಟ್ರಗಳಲ್ಲಿ ಒಂದು. ಅದು ಎದುರಿಸುತ್ತಿರುವ ಭದ್ರತಾ ಸವಾಲು ಗಳು ಅಪಾರವಾಗಿದ್ದರೂ, ಶಿಕ್ಷಣ, ನಾವೀನ್ಯ ಮತ್ತು ರಾಷ್ಟ್ರೀಯತೆಯ ವಿಷಯದಲ್ಲಿ ಅದು ಮುಂಚೂಣಿಯಲ್ಲಿದೆ. ‘ನೆಲಕ್ಕಿಂತ ಮಿಗಿಲಾಗಿ ಜನರ ಮನಸ್ಸಿನಲ್ಲಿ ದೇಶದ ಬಗ್ಗೆ ಇರುವ ಕನಸು ದೊಡ್ಡದಾಗಿದ್ದರೆ, ಶೂನ್ಯದಿಂದಲೂ ಒಂದು ಬಲಿಷ್ಠ ರಾಷ್ಟ್ರವನ್ನು ಕಟ್ಟಬಹುದು’ ಎಂಬ ಮಾತು ಇಸ್ರೇಲ್‌ನ ಇತಿಹಾಸಕ್ಕೆ ಹಿಡಿದ ಕನ್ನಡಿ.
ಈ ರಾಷ್ಟ್ರದ ಉಗಮವು ಜಗತ್ತಿಗೆ ನೀಡುವ ಮೂರು ಪ್ರಮುಖ ಪಾಠಗಳನ್ನು ಹೇಳುತ್ತವೆ. ಮೊದಲನೆ ಯದು, ಸಂಕಲ್ಪದ ಶಕ್ತಿ. ಯಹೂದಿಗಳು ಎರಡು ಸಾವಿರ ವರ್ಷಗಳ ಕಾಲ ಪ್ರಪಂಚದಾದ್ಯಂತ ಅಲೆಮಾರಿಗಳಾಗಿದ್ದರೂ, ಅವರ ಮನಸ್ಸಿನಲ್ಲಿ ‘ನಮಗೊಂದು ದೇಶ ಬೇಕು’ ಎಂಬ ಕನಸು ಆರಿ ಹೋಗಿರಲಿಲ್ಲ. 1948ರಲ್ಲಿ ಅವರು ಇಸ್ರೇಲ್ ಘೋಷಿಸಿದಾಗ ಅವರಿಗೆ ಸಿಕ್ಕಿದ್ದು ಬಂಜರು ಭೂಮಿ ಮತ್ತು ಶತ್ರುಗಳ ನಡುವಿನ ಅಸುರಕ್ಷಿತ ನೆಲೆ. ಆದರೆ ಆ ಎರಡು ಸಾವಿರ ವರ್ಷಗಳ ಹಳೆಯ ‘ಕನಸು’ ಅವರಲ್ಲಿ ಎಂಥ ಚೈತನ್ಯ ತುಂಬಿತ್ತೆಂದರೆ, ಯಾವುದೇ ಸಿದ್ಧತೆಗಳಿಲ್ಲದಿದ್ದರೂ ಅವರು ಅತ್ಯಂತ ಬಲಿಷ್ಠ ರಾಷ್ಟ್ರವನ್ನು ಕಟ್ಟಲು ಸಾಧ್ಯವಾಯಿತು.
ಎರಡನೆಯದು, ಕೊರತೆಯೇ ಆವಿಷ್ಕಾರದ ಮೂಲ ಎಂಬ ಪಾಠ. ಇಸ್ರೇಲ್ ನಿರ್ಮಾಣವಾದಾಗ ಅಲ್ಲಿ ಕೃಷಿ ಮಾಡಲು ಫಲವತ್ತಾದ ಭೂಮಿ ಇರಲಿಲ್ಲ, ಕುಡಿಯಲು ನೀರಿರಲಿಲ್ಲ. ಆದರೆ ಆ ದೇಶದ ಜನರು ‘ನಮ್ಮಲ್ಲಿ ಏನಿಲ್ಲ’ ಎಂದು ಕೊರಗುವ ಬದಲು, ‘ಇರುವುದನ್ನೇ ಹೇಗೆ ಬಳಸಿಕೊಳ್ಳಬಹುದು’ ಎಂದು ಯೋಚಿಸಿದರು. ಇದರ ಫಲವಾಗಿ ಜಗತ್ತಿಗೆ ‘ಹನಿ ನೀರಾವರಿ’ ಎಂಬ ಅದ್ಭುತ ತಂತ್ರಜ್ಞಾನ ಸಿಕ್ಕಿತು. ಅವರು ಮರುಭೂಮಿಯನ್ನು ಹಸಿರುಮಯಗೊಳಿಸಿದರು.
ಇದು ಕಲಿಸುವ ಪಾಠವೇನೆಂದರೆ, ಸಂಪನ್ಮೂಲಗಳಿಗಿಂತ ‘ಬುದ್ಧಿವಂತಿಕೆ’ ಮತ್ತು ‘ಹಠ’ ದೊಡ್ಡದು. ಮೂರನೆಯದು, ಏಕತೆಯ ಸಂಸ್ಕೃತಿ. ಜಗತ್ತಿನ ವಿವಿಧ ಮೂಲೆಗಳಿಂದ ಬಂದ ಯಹೂದಿಗಳು ಬೇರೆ ಬೇರೆ ಭಾಷೆ ಮಾತನಾಡುತ್ತಿದ್ದರು. ಆದರೆ ದೇಶ ಕಟ್ಟುವ ಹಂತದಲ್ಲಿ ಅವರೆಲ್ಲರೂ ತಮ್ಮ ವೈಯಕ್ತಿಕ ಭಿನ್ನಾಭಿಪ್ರಾಯ ಬದಿಗಿಟ್ಟು ಹೀಬ್ರೂ ಭಾಷೆಯ ಅಡಿಯಲ್ಲಿ ಒಂದಾದರು.
ಶೂನ್ಯದಿಂದ ಬಲಿಷ್ಠ ಸೇನೆ ಮತ್ತು ಆರ್ಥಿಕತೆಯನ್ನು ಕಟ್ಟಲು ಈ ಸಾಂಸ್ಕೃತಿಕ ಏಕತೆಯೇ ಅಡಿಪಾಯವಾಯಿತು. ಇಸ್ರೇಲ್ ಎಂಬುದು ಕೇವಲ ಒಂದು ದೇಶವಲ್ಲ; ಅದು ಆ ಜನರ ಅದಮ್ಯ ವಾದ ಇಚ್ಛಾಶಕ್ತಿ ಯಿಂದ ನಿರ್ಮಾಣವಾದ ‘ಮನಸ್ಸಿನ ದೇಶ’. ಅದು ಚದುರಿ ಹೋಗಿದ್ದ ಹನಿಗಳು ಸೇರಿ ಸಾಗರವಾದ ಕಥೆ. ತನ್ನ ಅಸ್ತಿತ್ವಕ್ಕಾಗಿ ಪ್ರತಿದಿನ ಹೋರಾಡುತ್ತಲೇ ಅಭಿವೃದ್ಧಿಯ ಶಿಖರ ಏರುತ್ತಿರುವ ಇಸ್ರೇಲ್ ಇತಿಹಾಸದ ಒಂದು ಅದ್ಭುತ ಪವಾಡವೇ ಸರಿ.
ಇದು ವಲಸಿಗರ ಕಥೆ
ಇಸ್ರೇಲಿನ ಇಮಿಗ್ರೇಷನ್ (ವಲಸೆ) ಇತಿಹಾಸ ಮತ್ತು ಅದು ಹೇಗೆ ವಿವಿಧ ಸಂಸ್ಕೃತಿಗಳ ಸಂಗಮ ವಾಯಿತು ಎಂಬುದನ್ನು ತಿಳಿಯಲು ಇಸ್ರೇಲ್ ಪ್ರಧಾನಿಗಳ ಹುಟ್ಟಿದ ಸ್ಥಳಗಳ ಕಥೆಗಳನ್ನು ಗಮನಿಸ ಬೇಕು. ಇಸ್ರೇಲ್‌ನ ಹದಿನೈದು ಪ್ರಧಾನಿಗಳಲ್ಲಿ ಕೇವಲ ಮೂವರು ಮಾತ್ರ ಸ್ವತಂತ್ರ ಇಸ್ರೇಲ್‌ನಲ್ಲಿ ಜನಿಸಿದವರು. ಉಳಿದವರೆಲ್ಲ ಬೇರೆ ಬೇರೆ ದೇಶಗಳಲ್ಲಿ ಹುಟ್ಟಿ, ಇಸ್ರೇಲಿಗೆ ವಲಸೆ ಬಂದವರು!
ಇಸ್ರೇಲ್ ಪ್ರಧಾನಿಗಳ ಹುಟ್ಟಿದ ಸ್ಥಳಗಳ ಬಗ್ಗೆ ತಿಳಿಯುವ ಮೊದಲು, ‘ಅಲಿಯಾ’ ಎಂಬ ಪದದ ಅರ್ಥ ತಿಳಿಯಬೇಕು. ಯಹೂದಿಗಳು ಜಗತ್ತಿನ ಯಾವುದೇ ಮೂಲೆಯಿಂದ ತಮ್ಮ ಮೂಲನೆಲೆಗೆ ಮರಳಿ ಬರುವುದನ್ನು ‘ಅಲಿಯಾ’ ಎನ್ನಲಾಗುತ್ತದೆ. ಹತ್ತೊಂಬತ್ತನೇ ಶತಮಾನದ ಅಂತ್ಯದಲ್ಲಿ ಯುರೋಪ್ʼನಲ್ಲಿ ಹೆಚ್ಚಾದ ಯಹೂದಿ ವಿರೋಧಿ ಧೋರಣೆ ಮತ್ತು ಝಿಯೋನಿಸ್ಟ್ ಚಳವಳಿಯ ಪ್ರಭಾವದಿಂದ ಸಾವಿರಾರು ಯಹೂದಿಗಳು ಪ್ಯಾಲೆಸ್ತೀನ್ ಪ್ರದೇಶಕ್ಕೆ ವಲಸೆ ಬಂದರು.
ಅಂದು ಈ ಪ್ರದೇಶ ಒಟ್ಟೊಮನ್ ಸಾಮ್ರಾಜ್ಯದ ಅಧೀನದಲ್ಲಿತ್ತು, ನಂತರ 1920ರಲ್ಲಿ ಬ್ರಿಟಿಷ್ ಮ್ಯಾಂಡೇಟ್ ಆಯಿತು. ಹೀಗಾಗಿ, ಇಸ್ರೇಲ್‌ನ ಮೊದಲ ತಲೆಮಾರಿನ ನಾಯಕರೆಲ್ಲರೂ ರಷ್ಯಾ, ಪೋಲೆಂಡ್ ಮತ್ತು ಜರ್ಮನಿಗಳಂಥ ದೇಶಗಳಿಂದ ಬಂದ ‘ಇಮಿಗ್ರಂಟ್’ (ವಲಸಿಗರು)ಗಳಾಗಿದ್ದರು.
ಇಸ್ರೇಲ್‌ನ ಮೊದಲ ಎಂಟು ಪ್ರಧಾನಿಗಳು ಹುಟ್ಟಿದ್ದು ಯುರೋಪ್‌ನಲ್ಲಿ. ಅವರು ಇಸ್ರೇಲ್ ಎಂಬ ಕನಸನ್ನು ಹೊತ್ತು ಬಂದವರು. ಅದನ್ನು ಸಾಕಾರಗೊಳಿಸುವ ಆಶಯವನ್ನು ಹೊಂದಿದವರು. ‘ಇಸ್ರೇಲ್‌ನ ಪಿತಾಮಹ’ ಎಂಬ ಗೌರವವಕ್ಕೆ ಪಾತ್ರರಾದ ಮೊದಲ ಪ್ರಧಾನಿ ಡೇವಿಡ್ ಬೆನ್-ಗುರಿಯನ್ ಹುಟ್ಟಿದ್ದು ಪೋಲೆಂಡ್‌ನಲ್ಲಿ (ಅಂದಿನ ರಷ್ಯನ್ ಸಾಮ್ರಾಜ್ಯ).
ಅವರು 1906ರಲ್ಲಿ ಪ್ಯಾಲೆಸ್ತೀನ್‌ಗೆ ವಲಸೆ ಬಂದರು. ಇಸ್ರೇಲ್‌ನ ‘ಉಕ್ಕಿನ ಮಹಿಳೆ’ ಗೋಲ್ಡಾ ಮೀರ್ ಹುಟ್ಟಿದ್ದು ಉಕ್ರೇನ್‌ನ ಕೀವ್‌ನಲ್ಲಿ. ನಂತರ ಅಮೆರಿಕಕ್ಕೆ ವಲಸೆ ಹೋಗಿ, ಅಲ್ಲಿಂದ ಇಸ್ರೇಲ್‌ಗೆ ಬಂದರು. ಮೆನಾಚೆಮ್ ಬೆಗಿನ್ ಹುಟ್ಟಿದ್ದು ಬೆಲಾರಸ್‌ನಲ್ಲಿ. ರಕ್ಷಣಾ ಮಂತ್ರಿ, ವಿದೇಶಾಂಗ ಮಂತ್ರಿ, ಪ್ರಧಾನಿ ಮತ್ತು ಅಧ್ಯಕ್ಷರಾದ ಶಿಮೋನ್ ಪೆರೆಸ್ ಹುಟ್ಟಿದ್ದು ಪೋಲೆಂಡ್‌ನಲ್ಲಿ.
ಈ ನಾಯಕರ ವೈಶಿಷ್ಟ್ಯವೆಂದರೆ, ಇವರೆಲ್ಲರೂ ತಮ್ಮ ತಾರುಣ್ಯದಲ್ಲಿ ಕಠಿಣ ಶ್ರಮ ಪಟ್ಟು, ಕಿಬ್ಬುಟ್ಜ್ ಗಳಲ್ಲಿ (ಸಾಮುದಾಯಿಕ ಕೃಷಿ ಪದ್ಧತಿ) ಕೆಲಸ ಮಾಡುತ್ತಾ ದೇಶವನ್ನು ಕಟ್ಟಿದರು. ಇವರ ಮಾತೃ ಭಾಷೆ ಹೆಚ್ಚಾಗಿ ರಷ್ಯನ್ ಅಥವಾ ಪೋಲಿಷ್. ಆದರೆ ಅವರು ಹೀಬ್ರೂ ಭಾಷೆಯನ್ನು ಕಲಿತು ಅಳವಡಿಸಿಕೊಂಡರು.
ಸ್ವತಂತ್ರ ಇಸ್ರೇಲ್ ಸ್ಥಾಪನೆಯಾಗುವ ಮುನ್ನ (1948ಕ್ಕಿಂತ ಮೊದಲು) ಅದೇ ಭೂಪ್ರದೇಶದಲ್ಲಿ ಹುಟ್ಟಿದ ನಾಯಕರು ನಂತರದ ಹಂತದಲ್ಲಿ ಅಧಿಕಾರಕ್ಕೆ ಬಂದರು. ತಾಂತ್ರಿಕವಾಗಿ ಇವರು ಇಸ್ರೇಲ್ ನಲ್ಲಿ ಹುಟ್ಟಿದವರಾದರೂ, ಆಗ ಇಸ್ರೇಲ್ ಎಂಬ ಸ್ವತಂತ್ರ ರಾಷ್ಟ್ರವಿರಲಿಲ್ಲ. ಇಟ್ಜಾಕ್ ರಾಬಿನ್ 1922ರಲ್ಲಿ ಜೆರುಸಲೆಮ್‌ನಲ್ಲಿ ಹುಟ್ಟಿದರು. ಇವರು ಇಸ್ರೇಲ್‌ನಲ್ಲಿ ಜನಿಸಿದ (ಸಬ್ರಾ) ಮೊದಲ ಪ್ರಧಾನಿ ಎನಿಸಿಕೊಂಡರೂ, ಅವರು ಹುಟ್ಟುವಾಗ ಅದು ಬ್ರಿಟಿಷ್ ಮ್ಯಾಂಡೇಟ್ ಆಗಿತ್ತು. ಎಹುದ್ ಬರಾಕ್ ಕೂಡ ಇಸ್ರೇಲಿನಲ್ಲಿಯೇ ಜನಿಸಿದವರು. ಈ ತಲೆಮಾರಿನ ನಾಯಕರು ಯುರೋಪ್‌ನ ಕಷ್ಟಗಳನ್ನು ಕೇಳಿ ಬೆಳೆದವರಾದರೂ, ಇಸ್ರೇಲ್ ನೆಲದ ಮೇಲೆ ನೇರ ಹೋರಾಟ ನಡೆಸಿದವರು. ಇವರು ವಲಸೆ ಬಂದವರಿಗಿಂತ ಭಿನ್ನವಾಗಿ, ಈ ನೆಲದ ಸಂಸ್ಕೃತಿಯಲ್ಲೇ ಬೆಳೆದವರು.
1948ರ ಮೇ 14ರ ನಂತರ ಸ್ವತಂತ್ರ ಇಸ್ರೇಲ್‌ನಲ್ಲಿ ಜನಿಸಿದ ಪ್ರಧಾನಿಗಳ ಸಂಖ್ಯೆ ಕೇವಲ ಮೂರು. ಬೆಂಜಮಿನ್ ನೆತನ್ಯಾಹು (1949, ಟೆಲ್ ಅವಿವ್) ಸ್ವತಂತ್ರ ಇಸ್ರೇಲ್‌ನಲ್ಲಿ ಜನಿಸಿದ ಮೊಟ್ಟ ಮೊದಲ ಪ್ರಧಾನಿ. ಇವರು ಇಸ್ರೇಲ್‌ನ ಸುದೀರ್ಘ ಕಾಲದ ಪ್ರಧಾನಿಯೂ ಹೌದು. ಇವರ ಜನನದ ವೇಳೆಗೆ ಇಸ್ರೇಲ್ ಒಂದು ಸಾರ್ವಭೌಮ ರಾಷ್ಟ್ರವಾಗಿತ್ತು.
ಯೈರ್ ಲಾಪಿದ್ ಪತ್ರಕರ್ತನಾಗಿ ವೃತ್ತಿ ಆರಂಭಿಸಿದ ಇವರು ಆಧುನಿಕ ಇಸ್ರೇಲ್‌ನ ಪ್ರಮುಖ ನಾಯಕರಲ್ಲಿ ಒಬ್ಬರು. ನಾಫ್ಟಲಿ ಬೆನೆಟ್ ಸ್ವತಂತ್ರ ಇಸ್ರೇಲ್‌ನಲ್ಲಿ ಜನಿಸಿದ ಹೈಟೆಕ್ ಉದ್ಯಮಿ ಯಾಗಿ ಬೆಳೆದು ನಾಯಕರಾದವರು. ಇಸ್ರೇಲ್ ಅನ್ನು ಬಹು ಸಂಸ್ಕೃತಿಗಳ ಸಮ್ಮಿಲನ ಎಂದು ಕರೆಯುತ್ತಾರೆ. ಯುರೋಪ್, ಅರಬ್ ರಾಷ್ಟ್ರಗಳು, ಅಮೆರಿಕ ಮತ್ತು ಆಫ್ರಿಕಾದಿಂದ ಬಂದ ಯಹೂದಿ ಗಳು ತಮ್ಮೊಂದಿಗೆ ವಿವಿಧ ಭಾಷೆಗಳನ್ನು ತಂದರು.
ಆದರೆ ರಾಜಕೀಯ ನಾಯಕತ್ವವು ಇವರೆಲ್ಲರನ್ನೂ ‘ಹೀಬ್ರೂ’ ಭಾಷೆಯ ಅಡಿಯಲ್ಲಿ ಒಂದು ಗೂಡಿಸಿತು. ಯುರೋಪ್‌ನಲ್ಲಿ ನಾಜಿಗಳ ದೌರ್ಜನ್ಯ ಅನುಭವಿಸಿ ಬಂದವರು ಒಂದು ಕಡೆಯಾದರೆ, ಅರಬ್ ರಾಷ್ಟ್ರಗಳಿಂದ ಹೊರಹಾಕಲ್ಪಟ್ಟು ಬಂದ ಮಿಜ್ರಾಹಿ ಯಹೂದಿಗಳು ಇನ್ನೊಂದು ಕಡೆ. ಈ ಎಲ್ಲ ನೋವು ಮತ್ತು ಹೋರಾಟಗಳ ಮಿಶ್ರಣವೇ ಇಸ್ರೇಲ್‌ನ ರಾಜಕೀಯ ಶಕ್ತಿ.
ಮೊದಲಿನ ಶೇ.80ರಷ್ಟು ನಾಯಕರು ಹೊರಗಿನಿಂದ ಬಂದವರಾಗಿದ್ದರಿಂದ, ಅವರಲ್ಲಿ ದೇಶವನ್ನು ‘ಶೂನ್ಯದಿಂದ ನಿರ್ಮಿಸುವ’ ಹಠವಿತ್ತು. ಆದರೆ ಇತ್ತೀಚಿನ ಶೇ.20ರಷ್ಟು ನಾಯಕರಲ್ಲಿ ‘ದೇಶವನ್ನು ರಕ್ಷಿಸುವ ಮತ್ತು ಅಭಿವೃದ್ಧಿಪಡಿಸುವ’ ಛಲವಿದೆ, ದೃಷ್ಟಿಕೋನವಿದೆ.ಇಸ್ರೇಲ್ ಪ್ರಧಾನಿಗಳ ವಲಸೆ ಯ ಕಥೆ ಆ ದೇಶದ ವಿದೇಶಾಂಗ ನೀತಿಯ ಮೇಲೆಯೂ ಪ್ರಭಾವ ಬೀರಿದೆ.
ನಾಯಕರ ಮೂಲ ಮತ್ತು ಅವರು ಬಂದ ಹಾದಿಯು ಜಗತ್ತಿನ ಇತರ ದೇಶಗಳೊಂದಿಗೆ ಇಸ್ರೇಲ್ ಹೇಗೆ ವ್ಯವಹರಿಸಬೇಕು ಎಂಬುದನ್ನು ನಿರ್ಧರಿಸಿದೆ. ಇಸ್ರೇಲ್‌ನ ಆರಂಭಿಕ ಪ್ರಧಾನಿಗಳಾದ ಡೇವಿಡ್ ಬೆನ್-ಗುರಿಯನ್, ಗೋಲ್ಡಾ ಮೇಯರ್ ಮತ್ತು ಲೆವಿ ಎಶ್ಕೋಲ್ ಅವರು ಯುರೋಪ್‌ನಲ್ಲಿ ಜನಿಸಿ ದವರು.
ಇವರಿಗೆ ಯುರೋಪಿಯನ್ ರಾಜಕೀಯ, ಸಂಸ್ಕೃತಿ ಮತ್ತು ಭಾಷೆಗಳ ಮೇಲೆ ಹಿಡಿತವಿತ್ತು. ಇದು ಇಸ್ರೇಲ್ ಆರಂಭಿಕ ವರ್ಷಗಳಲ್ಲಿ ಜರ್ಮನಿ, ಫ್ರಾನ್ಸ್ ಮತ್ತು ಬ್ರಿಟನ್‌ನಂಥ ದೇಶಗಳೊಂದಿಗೆ ರಾಜ ತಾಂತ್ರಿಕ ಸಂಬಂಧ ಬೆಳೆಸಲು ನೆರವಾಯಿತು. ಯುರೋಪಿಯನ್ ಹಿನ್ನೆಲೆಯು ಇಸ್ರೇಲ್ ಅನ್ನು ಒಂದು ’ಪಾಶ್ಚಿಮಾತ್ಯ ಪ್ರಜಾಪ್ರಭುತ್ವ’ ರಾಷ್ಟ್ರವಾಗಿ ಜಗತ್ತಿಗೆ ಪರಿಚಯಿಸಲು ಸುಲಭವಾಯಿತು.
ಹೆಚ್ಚಿನ ಪ್ರಧಾನಿಗಳು ಯುರೋಪ್‌ನಲ್ಲಿ ಯಹೂದಿ ವಿರೋಧಿ ದೌರ್ಜನ್ಯಗಳನ್ನು (Holocaust) ಕಂಡವರು ಅಥವಾ ಕೇಳಿ ಬೆಳೆದವರು. ಈ ನೋವು ಇಸ್ರೇಲ್‌ನ ವಿದೇಶಾಂಗ ನೀತಿಯಲ್ಲಿ ’ಆತ್ಮರಕ್ಷಣೆ’ಗೆ ಮೊದಲ ಆದ್ಯತೆ ನೀಡುವಂತೆ ಮಾಡಿತು.
ಇಸ್ರೇಲ್ ತನ್ನ ಭದ್ರತೆಯ ವಿಷಯದಲ್ಲಿ ಯಾವುದೇ ದೇಶದ ಮೇಲೆ ಅವಲಂಬಿತವಾಗಬಾರದು ಎಂಬ ತತ್ವ ಅವರ ವಲಸೆಯ ಕಹಿ ನೆನಪುಗಳಿಂದ ಬಂದಿದ್ದು. ಯಾವುದೇ ಬೆಲೆ ತೆತ್ತಾದರೂ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವ ಇಸ್ರೇಲ್‌ನ ‘ಕಠಿಣ ನಿಲುವು’ ಈ ನಾಯಕರ ಹಿನ್ನೆಲೆಯ ಪ್ರತಿಫಲನ.
ಬೆಂಜಮಿನ್ ನೆತನ್ಯಾಹು ಅವರಂಥ ನಾಯಕರು ಇಸ್ರೇಲ್ʼನಲ್ಲಿ ಜನಿಸಿದರೂ, ಅವರ ಶಿಕ್ಷಣ ಮತ್ತು ಬೆಳವಣಿಗೆಯ ಹೆಚ್ಚಿನ ಭಾಗ ಅಮೆರಿಕದಲ್ಲಿ ನಡೆಯಿತು. ಅವರು ಅಮೆರಿಕದ ರಾಜಕೀಯ ವ್ಯವಸ್ಥೆ ಯನ್ನು ಚೆನ್ನಾಗಿ ಅರಿತಿದ್ದರು. ಇದು ಅಮೆರಿಕದ ಕಾಂಗ್ರೆಸ್ ಮತ್ತು ಶ್ವೇತಭವನದ ಮೇಲೆ ಪ್ರಭಾವ ಬೀರಲು ಅವರಿಗೆ ಸಹಕಾರಿಯಾಯಿತು. ಅಚ್ಚುಕಟ್ಟಾದ ಇಂಗ್ಲಿಷ್ ಭಾಷೆ ಮತ್ತು ಪಾಶ್ಚಿಮಾತ್ಯ ಮಾಧ್ಯಮಗಳನ್ನು ಬಳಸಿಕೊಳ್ಳುವ ಅವರ ಕಲೆ ಇಸ್ರೇಲ್ ಪರವಾದ ಜಾಗತಿಕ ಅಭಿಪ್ರಾಯ ರೂಪಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆ.
ಇಂದಿಗೂ ಇಸ್ರೇಲ್‌ನಲ್ಲಿ ವಲಸೆ ಬಂದವರ ಮಕ್ಕಳು ಅಥವಾ ಮೊಮ್ಮಕ್ಕಳೇ ಅಧಿಕಾರದಲ್ಲಿದ್ದಾರೆ. ಉದಾಹರಣೆಗೆ, ನೆತನ್ಯಾಹು ಅವರ ತಂದೆ ಪೋಲೆಂಡ್‌ನಿಂದ ಬಂದವರಾಗಿದ್ದರು. ಹೀಗಾಗಿ, ಪ್ರತಿಯೊಬ್ಬ ಇಸ್ರೇಲಿ ನಾಯಕನ ಮನೆಯಲ್ಲೂ ಒಂದು ‘ವಲಸಿಗರ ಕಥೆ’ ಇದ್ದೇ ಇರುತ್ತದೆ. ವಲಸಿಗ ನಾಯಕರು ಇಸ್ರೇಲ್‌ಗೆ ಜಾಗತಿಕ ದೃಷ್ಟಿಕೋನವನ್ನು ನೀಡಿದರೆ, ಸ್ಥಳೀಯವಾಗಿ ಜನಿಸಿದ ನಾಯಕ ರು ಪ್ರಾದೇಶಿಕ ವಾಸ್ತವದೊಂದಿಗೆ ದೇಶವನ್ನು ಮುನ್ನಡೆಸುತ್ತಿದ್ದಾರೆ.
ಹೀಗೆ, ಪ್ರಧಾನಿಗಳ ಹುಟ್ಟಿದ ಸ್ಥಳವು ಇಸ್ರೇಲ್‌ನ ರಾಯಭಾರ ಕಚೇರಿಗಳಿಂದ ಹೊರ ಬರುವ ಪ್ರತಿಯೊಂದು ನಿರ್ಧಾರದ ಮೇಲೂ ತನ್ನ ಮುದ್ರೆಯನ್ನು ಒತ್ತಿದೆ. ಪ್ರಪಂಚದ ಬೇರೆಲ್ಲ ದೇಶಗಳಲ್ಲಿ ಆ ನೆಲದವರೇ ನಾಯಕರಾಗುವುದು ಸಹಜ, ಆದರೆ ಇಸ್ರೇಲ್‌ನಲ್ಲಿ ‘ವಲಸಿಗರೇ ದೇಶದ ನಿರ್ಮಾತೃ ಗಳು’. ಇಂದು ಇಸ್ರೇಲ್ ತನ್ನ ಸ್ವಂತ ನೆಲದಲ್ಲಿ ಹುಟ್ಟಿದ ನಾಯಕರ ಕೈಗೆ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗುತ್ತಿದೆ.
ಈ ಬದಲಾವಣೆಯು ಇಸ್ರೇಲ್‌ನ ಸಮಾಜವು ವಲಸಿಗರ ಸ್ಥಿತಿಯಿಂದ ‘ಸ್ಥಾಪಿತ ಸಮಾಜ’ದತ್ತ ಸಾಗುತ್ತಿರುವುದನ್ನು ಸೂಚಿಸುತ್ತದೆ. ಈ ಕಥೆಯು ಕೇವಲ ರಾಜಕೀಯವಲ್ಲ, ಬದಲಿಗೆ ಅಲೆಮಾರಿ ಗಳಾಗಿದ್ದ ಒಂದು ಜನಾಂಗದವರು ನಾಯಕರಾಗಿ ರೂಪಾಂತರಗೊಂಡ ಸ್ಪೂರ್ತಿದಾಯಕ ಯಾನವಾಗಿದೆ.