ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Yagati Raghu Naadig Column: ಕಲಬೆರಕೆ ದುನಿಯಾ ಇದು...

ಮದರಂಗಿಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿವೆ. ಈ ಮಾಹಿ ತಿಯ ಹಿನ್ನೆಲೆಯಲ್ಲಿ ‘ಅದರಲ್ಲಿರೋದು ಕ್ಯಾನ್ಸರ್ ರಂಗು ಕಣ್ರೀ, ಮನಸಿನ ರಂಗು ಅಲ್ಲ’ ಎಂಬ ತಿದ್ದುಪಡಿ ಮಾಡಿ ಕೊಳ್ಳಬೇಕಾಗಿ ಬಂದಿದೆ. ಮೆಹಂದಿ ಅಥವಾ ಮದರಂಗಿಯು ತ್ವಚೆಯ ಸ್ವಾಸ್ಥ್ಯಕ್ಕೆ ಮತ್ತು ಸೌಂದ ರ್ಯಕ್ಕೆ ಮತ್ತಷ್ಟು ಇಂಬುಕೊಡುವ ಉತ್ಪನ್ನವೇನೋ ಹೌದು; ಆದರೆ ಆ ಹೆಸರಿನಲ್ಲಿ ಕೆಲವರು ಮಾರುತ್ತಿರುವ ಕಳಪೆ ಸರಕಿನಿಂದಾಗಿ, ಮದರಂಗಿ ಯ ಪರಿಕಲ್ಪನೆಗಿರುವ ರಂಗು ಮಸುಕಾಗು ವಂತಾಗಿದೆ

ಕಲಬೆರಕೆ ದುನಿಯಾ ಇದು...

Profile Ashok Nayak Mar 3, 2025 9:44 AM

ನಾರದ ಸಂಚಾರ

ಕಲಹಪ್ರಿಯ

ಮದರಂಗಿಯಲ್ಲಿ ಮನಸಿನ ರಂಗು ತುಂಬಿದೇ..’ ಎಂಬ ಜನಪ್ರಿಯ ಚಿತ್ರಗೀತೆಯನ್ನು ಮತ್ತೆ ಮತ್ತೆ ಗುನುಗುತ್ತಿದ್ದವರು, ತಮ್ಮ ಆ ಧಾಟಿ ಮತ್ತು ಧೋರಣೆಯನ್ನು ಬದಲಿಸಿಕೊಳ್ಳಬೇಕಾಗಿ ಬಂದಿದೆ. ಕಾರಣ, ಮದರಂಗಿಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿವೆ. ಈ ಮಾಹಿ ತಿಯ ಹಿನ್ನೆಲೆಯಲ್ಲಿ ‘ಅದರಲ್ಲಿರೋದು ಕ್ಯಾನ್ಸರ್ ರಂಗು ಕಣ್ರೀ, ಮನಸಿನ ರಂಗು ಅಲ್ಲ’ ಎಂಬ ತಿದ್ದುಪಡಿ ಮಾಡಿಕೊಳ್ಳಬೇಕಾಗಿ ಬಂದಿದೆ. ಮೆಹಂದಿ ಅಥವಾ ಮದರಂಗಿಯು ತ್ವಚೆಯ ಸ್ವಾಸ್ಥ್ಯಕ್ಕೆ ಮತ್ತು ಸೌಂದರ್ಯಕ್ಕೆ ಮತ್ತಷ್ಟು ಇಂಬುಕೊಡುವ ಉತ್ಪನ್ನವೇನೋ ಹೌದು; ಆದರೆ ಆ ಹೆಸರಿನಲ್ಲಿ ಕೆಲವರು ಮಾರುತ್ತಿರುವ ಕಳಪೆ ಸರಕಿನಿಂದಾಗಿ, ಮದರಂಗಿ ಯ ಪರಿಕಲ್ಪನೆಗಿರುವ ರಂಗು ಮಸುಕಾಗುವಂತಾಗಿದೆ.

ಮೆಹಂದಿ ಹಣೆಪಟ್ಟಿಯ ಕೆಲ ಉತ್ಪನ್ನಗಳಲ್ಲಿ ರಾಸಾಯನಿಕ/ಕ್ಯಾನ್ಸರ್‌ಕಾರಕ ಅಂಶಗಳು ಪತ್ತೆಯಾಗಿರುವುದರಿಂದ ಚರ್ಮದಲ್ಲಿ ಕೆರೆತ, ಅಲರ್ಜಿ, ಗಾಯಗಳಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆಯಂತೆ.

ಇದನ್ನೂ ಓದಿ: Narada Sanchara: ಮೂಲೆಗುಂಪಾದ ಹಿರಿಯ ನಾಯಕ

ಇವೆಲ್ಲಾ ಕಲಬೆರಕೆ ಸಾಮ್ರಾಟರ ಕೈಚಳಕ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಕಾಫಿ ಪುಡಿಗೆ ಹುರಿದ ಹುಣಿಸೇಬೀಜದ/ಉತ್ತುತ್ತೆ ಬೀಜದ ಪುಡಿ, ಧನಿಯಾ ಪುಡಿಗೆ ಕುದುರೆಯ ಲದ್ದಿ, ಕರಿ ಮೆಣಸಿನ ಕಾಳಿಗೆ ಪಪ್ಪಾಯಿ ಬೀಜ, ಒಗ್ಗರಣೆಗೆ ಹಾಕೋ ಸಾಸಿವೆಯಲ್ಲಿ ರಾಗಿ ಕಾಳು ಹೀಗೆ ಬೆರಕೆ ಮಾಡೋ ಮೂಲಕ ಕಲಬೆರಕೆಯ ಆಸಾಮಿಗಳು ಆಡುತ್ತಿರುವ ಆಟ ಗಳು ಒಂದೆರಡಲ್ಲ. ಅವುಗಳ ಸಾಲಿಗೆ ಮದರಂಗಿಯೂ ಸೇರಿಕೊಂಡಿರುವುದು ಈಗ ಗೊತ್ತಾ ಗಿದೆಯಷ್ಟೇ!

ಈ ಕಲಬೆರಕೆ ಕಥಾನಕಗಳನ್ನು ಓದಿದಾಗ, ಪುಟ್ಟ ಪ್ರಸಂಗವೊಂದು ನೆನಪಾಗುತ್ತೆ. ಜೀವನ ದಲ್ಲಿ ತೀರಾ ಜುಗುಪ್ಸೆ ಹೊಂದಿದ ಆಸಾಮಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲೆಂದು ಕಟು ವಿಷವನ್ನು ಗಟಗಟನೆ ಕುಡಿದು ಬಿಟ್ಟನಂತೆ. ಹಾಗೆ ಕುಡಿಯುವಾಗ, “ಅಬ್ಬಾ, ಎಲ್ಲಾ ಟೆನ್ಷನ್ ಮಟಾಷ್, ಇನ್ಮೇಲೆ ನಾನು ಈ ಭೂಮಿ ಮೇಲೇ ಇರಲ್ಲ.

ಸಮಸ್ಯೆಗಳೆಲ್ಲಾ ಫಿನಿಷ್" ಎಂದೇ ಕಲ್ಪಿಸಿಕೊಂಡು ಮನದಲ್ಲೇ ವಿಲಕ್ಷಣವಾಗಿ ಸುಖಿಸು ತ್ತಿದ್ದನಂತೆ. ಆದರೆ ವಿಷದ ಬಾಟಲಿಯನ್ನು ಖಾಲಿ ಮಾಡಿ ಸಾಕಷ್ಟು ಹೊತ್ತಾದರೂ ‘ಢರ್’ ಎಂದು ತೇಗು ಬಂತೇ ವಿನಾ, ಆತ ಸಾಯಲಿಲ್ಲ... ಕಾರಣ ಗೊತ್ತೇ? ಆ ವಿಷವೂ ಕಲಬೆರಕೆ ಯಾಗಿತ್ತು, ತನ್ನ ಮೂಲಗುಣವನ್ನು ಅದು ಕಳೆದುಕೊಂಡಿತ್ತು!