ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ravi Sajangadde Column: ಕೃತಘ್ಞ ಬಾಂಗ್ಲಾದೇಶದ ಬಾಲ ಕತ್ತರಿಸಲು ಇದು ಸಕಾಲ !

ಕಾಲು ಕೆರೆದು ಜಗಳಕ್ಕೆ ಬರುವುದು, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ-ದೌರ್ಜನ್ಯ, ಮಾರಣಹೋಮ ನಡೆಸುವುದನ್ನು ನಿರಂತರ ಕಸುಬಾಗಿ ಮಾಡಿಕೊಂಡು ತೊಂದರೆ ಕೊಡುತ್ತಿವೆ. ಪರಿಸ್ಥಿತಿ ಹೀಗಿರುವಾಗ, ಭಾರತಕ್ಕೆ ಆ ವಿಷಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏನೂ ಮಾಡಲಾಗದ ಪರಿಸ್ಥಿತಿ ಒದಗಿದೆ.

ಕೃತಘ್ಞ ಬಾಂಗ್ಲಾದೇಶದ ಬಾಲ ಕತ್ತರಿಸಲು ಇದು ಸಕಾಲ !

-

Ashok Nayak
Ashok Nayak Dec 27, 2025 8:07 AM

ಹಣಾಹಣಿ

ರವೀ ಸಜಂಗದ್ದೆ

ಬಾಂಗ್ಲಾದೇಶದಲ್ಲಿ ದೀಪು ಚಂದ್ರದಾಸ್ ಎಂಬಾತನನ್ನು ಹಿಂದೂ ಎನ್ನುವ ಕಾರಣ ಕ್ಕಾಗಿ ಇಸ್ಲಾಮಿಕ್ ಮೂಲಭೂತವಾದಿಗಳು ಕ್ರೂರವಾಗಿ ಹತ್ಯೆ ಮಾಡಿರುವುದು ಅತ್ಯಂತ ಆತಂಕಕಾರಿ ಘಟನೆ. ಸ್ಥಳೀಯ ಪೊಲೀಸರ ವಶದಲ್ಲಿ ಇದ್ದ ಈತನನ್ನು, ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ್ದ ಮತಾಂಧರ ಗುಂಪಿನ ವಶಕ್ಕೆ ನೀಡಲಾ ಯಿತು. ಆತನಿಗೆ ಥಳಿಸಿ, ಮರಕ್ಕೆ ನೇತು ಹಾಕಿ, ಬೆಂಕಿ ಕೊಟ್ಟು ಅತ್ಯಂತ ಕ್ರೂರವಾಗಿ ಸಜೀವದಹನ ಮಾಡಿ ಜೀವ ತೆಗೆಯಲಾಯಿತು.

ಮನೆ, ಜಾಗ, ರಾಜ್ಯ, ದೇಶ- ಹೀಗೆ ನೆರೆಹೊರೆಯವರೊಂದಿಗೆ ಸ್ನೇಹ ಮತ್ತು ಸಂಬಂಧ ಚೆನ್ನಾಗಿದ್ದರೆ, ಪರಸ್ಪರ ಸಹಕಾರ-ಸಹಾಯ-ಉಪಕಾರದ ಮನಸ್ಥಿತಿ ಎರಡೂ ಕಡೆಯಿಂದ ಇದ್ದರೆ ಬದುಕು ಸುಂದರ, ಸರಳ, ಸುಲಲಿತ. ಒಂದು ವೇಳೆ ದ್ವೇಷ, ಪರಸ್ಪರ ವೈರತ್ವ ಇದ್ದರೆ ಎರಡೂ ಕಡೆಯವರಿಗೆ ಅದು ನಿತ್ಯ ಕಿರಿಕಿರಿ ಮತ್ತು ಅಂಥವರೊಂದಿಗೆ ಏಗುವುದು ಕಷ್ಟ. ಅಂಥ ನೆರೆಯವರು ಯಾವತ್ತಿಗೂ ಮಗ್ಗುಲಮುಳ್ಳು. ನೆರೆಹೊರೆಯವರನ್ನು ‘ಆಯ್ಕೆ ಮಾಡಿ ಕೊಂಡು’, ನಮಗೆ ಬೇಕಾದವರನ್ನು ಮಾತ್ರ ಪಕ್ಕದಲ್ಲಿ ಇರುವಂತೆ ನೋಡಿಕೊಂಡು ಜೀವಿಸಲು ಸಾಧ್ಯವಿಲ್ಲ; ನಮ್ಮ ಪಾಲಿಗೆ ದಕ್ಕಿರುವ ನೆರೆಹೊರೆಯವರೊಡನೆ ಒಗ್ಗಿಕೊಂಡು, ಆದಷ್ಟು ಹೊಂದಾಣಿಕೆಯಿಂದ ಬದುಕು ಸಾಗಿಸಬೇಕಾದ ಅನಿವಾರ್ಯತೆ ಇರುವಂಥದ್ದೇ.

ಮುಸ್ಲಿಂ ಸಮುದಾಯದವರು ಬಹುಸಂಖ್ಯಾತರಾಗಿರುವ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ, ಬಾಂಗ್ಲಾದೇಶಗಳು ಕಾಲಾಂತರದಲ್ಲಿ ಭಾರತಕ್ಕೆ ವಿವಿಧ ರೀತಿಯಲ್ಲಿ ತೊಂದರೆ ಕೊಡುತ್ತಾ, ತಮ್ಮ ತಮ್ಮ ದೇಶಗಳೊಳಗೆ ಮತ್ತು ಗಡಿಯಲ್ಲಿ ಕ್ಷೋಭೆ-ಅರಾಜಕತೆಗಳನ್ನು ಸೃಷ್ಟಿಸುತ್ತಾ ಬಂದಿವೆ.

ಕಾಲು ಕೆರೆದು ಜಗಳಕ್ಕೆ ಬರುವುದು, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದಾಳಿ-ದೌರ್ಜನ್ಯ, ಮಾರಣಹೋಮ ನಡೆಸುವುದನ್ನು ನಿರಂತರ ಕಸುಬಾಗಿ ಮಾಡಿಕೊಂಡು ತೊಂದರೆ ಕೊಡುತ್ತಿವೆ. ಪರಿಸ್ಥಿತಿ ಹೀಗಿರುವಾಗ, ಭಾರತಕ್ಕೆ ಆ ವಿಷಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಏನೂ ಮಾಡಲಾಗದ ಪರಿಸ್ಥಿತಿ ಒದಗಿದೆ.

ಇದನ್ನೂ ಓದಿ: Ravi Sajangadde Column: ರುಪಾಯಿ ಮೌಲ್ಯ ಕುಸಿತವನ್ನು ನಿಭಾಯಿಸಬೇಕಿದೆ

ಸದ್ಯಕ್ಕೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಆಂತರಿಕ ಗಲಭೆ, ಹಿಂದೂಗಳ ಮೇಲಿನ ದಾಳಿ-ದೌರ್ಜನ್ಯಗಳು ಭಾರತೀಯರಲ್ಲಿ ಒಂದಷ್ಟು ಕಸಿವಿಸಿ, ಬೇಸರ, ಆಕ್ರೋಶ ಸೃಷ್ಟಿಸಿವೆ. ಒಂದು ಕಾಲದಲ್ಲಿ ಬಾಂಗ್ಲಾದೇಶಕ್ಕೆ ಆರ್ಥಿಕ ನೆರವೂ ಸೇರಿದಂತೆ ಸರ್ವ ರೀತಿಯ ಸಹಕಾರ ನೀಡಿದ, ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಕಾರಣವಾಗಿದ್ದ ಭಾರತದ ವಿರುದ್ಧವೇ ಅಲ್ಲಿನ ಸರಕಾರ ಮತ್ತು ಪಟ್ಟಭದ್ರ ಹಿತಾಸಕ್ತಿಗಳು ವಿಷಕಾರುತ್ತಿರುವುದು, ವೈರತ್ವ ತೋರಿಸುತ್ತಿರು ವುದು ಅಚ್ಚರಿಯೇ ಸರಿ!

ಆಗ 2024ರಲ್ಲಿ ನಡೆದ ವಿದ್ಯಾರ್ಥಿ ನೇತೃತ್ವದ ಸಾಮೂಹಿಕ ದಂಗೆಯಲ್ಲಿ ಪದಚ್ಯುತಗೊಂಡ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿ, ಅಂದಿನಿಂದ ದೆಹಲಿಯಲ್ಲಿ ನೆಲೆಸಿದ್ದಾರೆ. ಹಸೀನಾ ಹಸ್ತಾಂತರಕ್ಕೆ ಬಾಂಗ್ಲಾದೇಶ ಪಟ್ಟು ಹಿಡಿದರೂ ಭಾರತ ಪೂರಕವಾಗಿ ಸ್ಪಂದಿಸು ತ್ತಿಲ್ಲ. ಹೀಗೆ ಹಂತ ಹಂತವಾಗಿ ಹಳಸಲು ಶುರುವಾದ ಭಾರತ-ಬಾಂಗ್ಲಾ ರಾಜತಾಂತ್ರಿಕ ಸಂಬಂಧ ಇತ್ತೀಚಿನ ದಿನಗಳಲ್ಲಿ ಮತ್ತಷ್ಟು ಹದಗೆಟ್ಟಿದೆ.

ಮೊನ್ನೆ ದುಷ್ಕರ್ಮಿಗಳು ಭಾರತದ ರಾಯಭಾರ ಕಚೇರಿಯ ಮೇಲೆ ದಾಳಿ ಮಾಡಿದಾಗ ಅಲ್ಲಿನ ಸಿಬ್ಬಂದಿಗಳು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ರಾಯ ಭಾರ ಕಚೇರಿಯನ್ನು ಮುಚ್ಚಲಾಗಿದೆ. ಅಲ್ಲಿನ ಹಿಂದೂಗಳನ್ನು ಗುರಿಯಾಗಿಸಿ ಕೊಂಡು ನಿರ್ದಯವಾಗಿ ಕೊಲ್ಲಲಾಗುತ್ತಿದೆ. ಸರಕಾರವು ಸ್ಥಳೀಯ ಹಿಂದೂಗಳ ಸುರಕ್ಷತೆಗೆ ಏನೂ ವ್ಯವಸ್ಥೆ ಮಾಡುತ್ತಿಲ್ಲ, ಅವರ ರಿಸ್ಥಿತಿ ಅಲ್ಲಿ ಚಿಂತಾಜನಕ ವಾಗಿದೆ!

ಧರ್ಮದ ಆಧಾರದಲ್ಲಿ ವ್ಯವಸ್ಥಿತ ವಾಗಿ ಹತ್ಯೆಗಳಾಗುತ್ತಿದ್ದರೂ ಮುಸ್ಲಿಂ ರಾಷ್ಟ್ರಗಳೂ ಸೇರಿದಂತೆ ಯಾವೊಂದು ದೇಶವೂ ಈ ಕ್ರೂರತೆಯನ್ನು ಖಂಡನೆ ಮಾಡುತ್ತಿಲ್ಲ. ಪ್ಯಾಲೆಸ್ತೀನ್‌ ನಲ್ಲಿ ಹತ್ಯೆಗಳಾದಾಗ ಬೊಬ್ಬಿರಿಯುವ ಮತ್ತು ಈಗ ಬಾಂಗ್ಲಾದೇಶದಲ್ಲಿ ಹಿಂದೂಗಳ ಕೊಲೆಗಳಾದಾಗ ಮೌನಕ್ಕೆ ಜಾರಿರುವ so called selective secular activist ಗಳ "double standard' ಮತ್ತೊಮ್ಮೆ ಬಯಲಾಗಿದೆ!

Screenshot_1 R

ಬಾಂಗ್ಲಾದೇಶದಲ್ಲಿ ದೀಪು ಚಂದ್ರದಾಸ್ ಹೆಸರಿನ ವ್ಯಕ್ತಿಯನ್ನು ಹಿಂದೂ ಎನ್ನುವ ಏಕೈಕ ಕಾರಣಕ್ಕಾಗಿ ಇಸ್ಲಾಮಿಕ್ ಮೂಲಭೂತವಾದಿಗಳು ಕ್ರೂರವಾಗಿ ಹತ್ಯೆ ಮಾಡಿರುವುದು ಅತ್ಯಂತ ಆತಂಕಕಾರಿ ಘಟನೆ. ಸ್ಥಳೀಯ ಪೊಲೀಸರ ವಶದಲ್ಲಿ ಇದ್ದ ಈತನನ್ನು, ಪೊಲೀಸ್ ಠಾಣೆಯ ಹೊರಗೆ ಜಮಾಯಿಸಿದ್ದ ಮತಾಂಧರ ಗುಂಪಿನ ಒತ್ತಾಯಕ್ಕೆ ಮಣಿದು, ಅವರ ವಶಕ್ಕೆ ನೀಡಲಾಯಿತು.

ಆತನಿಗೆ ಥಳಿಸಿ, ಮರಕ್ಕೆ ನೇತು ಹಾಕಿ, ಬೆಂಕಿ ಕೊಟ್ಟು ಅತ್ಯಂತ ಕ್ರೂರವಾಗಿ ಸಜೀವದಹನ ಮಾಡಿ ಜೀವ ತೆಗೆಯಲಾಯಿತು. ಮನುಷ್ಯತ್ವ, ಮಾನವೀಯತೆ ಎಲ್ಲವೂ ಅದೇ ಬೆಂಕಿಯಲ್ಲಿ ಸತ್ತು ಸಮಾಧಿಯಾದವು! ಧರ್ಮ-ಮತಾಂಧತೆಯ ಹೆಸರಿನಲ್ಲಿ ನಡೆಯುತ್ತಿರುವ ಈ ದುಷ್ಕೃತ್ಯಗಳು ನಾಗರಿಕ ಜಗತ್ತು ತಲೆಬಾಗುವಂತೆ ಮಾಡಿವೆ. ಇಂಥ ಧರ್ಮಾಂಧರ ಕ್ರೂರ ಮನಸ್ಧಿತಿ ಮತ್ತು ಇದನ್ನು ಖಂಡಿಸದೆ ಮೌನ ವಹಿಸಿರುವ ಎಲ್ಲರಿಗೂ ಧಿಕ್ಕಾರ, ಧಿಕ್ಕಾರ!

‘ಮತಾಂಧತೆ ಎಂದಿಗೂ ಕೇವಲ ಒಂದು ಪ್ರದೇಶ ಅಥವಾ ದೇಶಕ್ಕೆ ಸೀಮಿತವಾಗಿರುವುದಿಲ್ಲ’ ಎನ್ನುವುದನ್ನು ಇಂಥ ಘಟನೆಗಳು ಸಾರಿ ಹೇಳುತ್ತವೆ. ಅವಕಾಶ ಸಿಕ್ಕಾಗ ಅದು ಎಡೆ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸಿ, ಹಿಂಸೆಯನ್ನು ಪ್ರಚೋದಿಸುತ್ತಾ ಸಾಗುತ್ತದೆ. ಕೇರಳ ಮತ್ತು ಪಶ್ಚಿಮ ಬಂಗಾಳ ಇದೇ ಹಂತಕ್ಕೆ ತಲುಪಿರುವುದು ಆತಂಕದ ವಿಷಯ. ಅತ್ಯಂತ ಪ್ರಮುಖವಾದ ಈ ವಿಚಾರವನ್ನು ಭಾರತ ಸರಕಾರ ಬಹಳ ಗಂಭೀರವಾಗಿ ಪರಿಗಣಿಸಿ ಸೂಕ್ತವಾಗಿ ಕ್ರಿಯಾಶೀಲವಾಗಬೇಕು.

ಇದು ಆಂತರಿಕ ಭದ್ರತೆ, ವಿದೇಶಾಂಗ ನೀತಿಯ ಭಾಗವಾದ ವಿಷಯ ಮಾತ್ರವಲ್ಲ. ಇದು ರಾಷ್ಟೀಯ ಭದ್ರತೆ, ಸಾಮಾಜಿಕ ಸಾಮರಸ್ಯ, ಒಗ್ಗಟ್ಟು ಮತ್ತು ಭವಿಷ್ಯದ ತಲೆಮಾರಿನ ಸುರಕ್ಷತೆಗೆ ಸಂಬಂಧಿಸಿದ ನಿರ್ಣಾಯಕ ಪ್ರಶ್ನೆ-ವಿಚಾರ.

ಕಳೆದೊಂದು ದಶಕದಿಂದ ಮೊದಲ್ಗೊಂಡು, ಇತ್ತೀಚಿನ 18 ತಿಂಗಳುಗಳಿಂದ ಬಾಂಗ್ಲಾದೇಶ ದಲ್ಲಿ ಮತ್ತಷ್ಟು ತೀವ್ರವಾಗಿ ನಡೆಯುತ್ತಿರುವ ಆಂತರಿಕ ಗಲಭೆ, ಹಿಂಸೆ, ಹಿಂದೂಗಳ ಮೇಲಿನ ದಾಳಿ-ದೌರ್ಜನ್ಯಗಳನ್ನು ನೋಡಿದಾಗ ಒಂದು ಕಾಲದಲ್ಲಿ ಭಾರತದಿಂದ ಉಪ ಕೃತವಾದ ಈ ದೇಶ, ನಾವೇ ಜತನದಿಂದ ಸಾಕಿದ ಗಿಣಿ ಈಗ ಹದ್ದಾಗಿ ಯಾಕೆ ಕುಕ್ಕುತ್ತಿದೆ? ಎನ್ನುವ ಉತ್ತರವಿಲ್ಲದ ಪ್ರಶ್ನೆ ಮೂಡುತ್ತದೆ.

ಐದೂವರೆ ದಶಕಗಳಷ್ಟು ಹಿಂದಕ್ಕೆ ಹೋಗೋಣ. 1971ರ ಬಾಂಗ್ಲಾದೇಶ ವಿಮೋಚನಾ ಯುದ್ಧದ ಫಲಿತಾಂಶವಾಗಿ, ಪಶ್ಚಿಮ ಪಾಕಿಸ್ತಾನದಿಂದ ಬೇರ್ಪಟ್ಟು, ಸ್ವತಂತ್ರ ರಾಷ್ಟ್ರವಾಗಿ ಹೊಸ ಬಾಂಗ್ಲಾದೇಶ ಸೃಷ್ಟಿಯಾಯಿತು. ಭಾರತವು ಅಂದಿನ ಬಾಂಗ್ಲಾದೇಶದ ಪ್ರತಿರೋಧ ಚಳವಳಿಗೆ (ಮುಕ್ತಿ ಬಾಹಿನಿ) ಸಹಾಯ ಮಾಡಿ, ಪಾಕಿಸ್ತಾನವು ಭಾರತಕ್ಕೆ ಶರಣಾಗುವಂತೆ ಮಾಡಿ, ಹಲವಾರು ಮಾತುಕತೆ ಮತ್ತು ಒಪ್ಪಂದಗಳ ತರುವಾಯ 1972ರಲ್ಲಿ ಬಾಂಗ್ಲಾ ದೇಶದ ಉದಯವಾಯಿತು.

ಆಗಿನ ಬಾಂಗ್ಲಾ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಮನೆ-ಮಠ ಕಳೆದುಕೊಂಡ ನಿರಾಶ್ರಿತರಿಗೆ ಆಶ್ರಯ, ವಸತಿ, ಊಟ ನೀಡಿ ಲಕ್ಷಾಂತರ ಜನ ರನ್ನು ಭಾರತವು ರಕ್ಷಿಸಿತ್ತು. ಈ ಆಶ್ರಯ ಯೋಜನೆಯು ಆಧುನಿಕ ಜಗತ್ತಿನ ಅತಿದೊಡ್ಡ ನಿರಾಶ್ರಿತರ ಪುನರ್ವಸತಿಯಾಗಿ ಚರಿತ್ರೆಯಲ್ಲಿ ದಾಖಲಾಗಿದೆ. ಆ ಸಂದರ್ಭದಲ್ಲಿ ಭಾರತ ನೀಡಿದ ವಿವಿಧ ರೀತಿಯ ಸಹಾಯ-ಸಹಕಾರಗಳಲ್ಲಿ ಆರ್ಥಿಕ ಸ್ವರೂಪದ ಸಹಕಾರಕ್ಕೆ ಅದರದ್ದೇ ಆದ ವೈಶಿಷ್ಟ್ಯ ಮತ್ತು ಮಹತ್ವವಿದೆ!

1970-71ರ ಸಮಯದಲ್ಲಿ ಅಂದಿನ ಬಾಂಬೆ ನಗರದ ‘ಬೆಸ್ಟ್ ಬಸ್’ನ ಲಕ್ಷಾಂತರ ಪ್ರಯಾ ಣಿಕರು ‘ಬಾಂಗ್ಲಾದೇಶ ಪರಿಹಾರ ನಿಧಿ’ಗಾಗಿ ಹೆಚ್ಚು ಕಡಿಮೆ ಐದು ವರ್ಷಗಳಷ್ಟು ಕಾಲ ಪ್ರತಿ ಬಸ್ ಟಿಕೆಟ್ ಖರೀದಿಗೆ ಐದು ಪೈಸೆಯಷ್ಟು ಹಣವನ್ನು ಹೆಚ್ಚುವರಿಯಾಗಿ ಪಾವತಿಸ ಬೇಕಾಗಿತ್ತು.

ದೇಶದ ವಿವಿಧ ಸಿನಿಮಾ ಮಂದಿರದಲ್ಲಿ ಇದೇ ‘ಬಾಂಗ್ಲಾದೇಶ ಪರಿಹಾರ ನಿಧಿ’ಗಾಗಿ ಪ್ರತಿ ಸಿನಿಮಾ ಟಿಕೆಟ್‌ಗೆ ಇಪ್ಪತೈದು ಪೈಸೆಗಳನ್ನು ಹೆಚ್ಚುವರಿಯಾಗಿ ಪಾವತಿಸಬೇಕಾಗಿತ್ತು. ಭಾರತೀಯ ಅಂಚೆ ಇಲಾಖೆಯು ತನ್ನ ಎಲ್ಲಾ ಸೇವೆಗಳ ಮೇಲೆ ಐದು ಪೈಸೆ ಸೆಸ್ ಹಾಕಿ, ಹಾಗೆ ಸಂಗ್ರಹಿಸಿದ ಹಣವನ್ನು ಬಾಂಗ್ಲಾದ ನೆರವಿಗಾಗಿ ಕೇಂದ್ರ ಸರಕಾರಕ್ಕೆ ನೀಡಿದ ವಿವರ ಗಳು ಸಿಗುತ್ತವೆ.

ಹೀಗೆ 1970ರ ದಶಕದಲ್ಲಿ ಹಲವು ವರ್ಷಗಳ ಕಾಲ ಲಕ್ಷಾಂತರ ಭಾರತೀಯರು ಪಾವತಿಸಿದ ಈ ಮೊತ್ತವನ್ನು ಸಂಗ್ರಹಿಸಿ ಬಾಂಗ್ಲಾದೇಶಕ್ಕೆ ಆರ್ಥಿಕ ನೆರವು ನೀಡಿದ, ಆ ಮೂಲಕ ಅಲ್ಲಿನ ಜನರಿಗೆ ಸಹಕಾರ ನೀಡಿದ, ಸಮಾಜಮುಖಿ ಮೇರುಚಿಂತನೆಯ ಉತ್ಕೃಷ್ಟ ಉದಾಹರಣೆ ನಮ್ಮೆದುರು ಇದೆ. ದುರಂತ ಎಂದರೆ, ಬಾಂಗ್ಲಾದೇಶಲ್ಲಿ ನಡೆಯುತ್ತಿರುವ ಇತ್ತೀಚಿನ ದೀಪು ಕ್ರೂರ ಹತ್ಯೆ, ಭಾರತ ವಿರೋಧಿ ಘೋಷಣೆ-ಪ್ರತಿಭಟನೆಗಳು, ಹಿಂದೂಗಳು ಮತ್ತು ಹಿಂದೂ ಶ್ರದ್ಧಾ ಕೇಂದ್ರಗಳ ಮೇಲಿನ ನಿರಂತರ ದಾಳಿಯಂಥ ಘಟನೆಗಳು ಬಾಂಗ್ಲಾದೇಶದ ಕೃತಘ್ನತೆ ಯನ್ನು, ಕಷ್ಟಕಾಲದಲ್ಲಿ ಸಹಕಾರ ನೀಡಿದ ಭಾರತದ ಕುರಿತಾದ ಅದರ ದ್ವಂದ್ವ ನಿಲುವು ಗಳನ್ನು ಎತ್ತಿ ತೋರಿಸುತ್ತವೆ. ‘ಹಮಾರೆ ಬಿಲ್ಲಿ ಹಂಕೋ ಮಿಯಾವ್ ಮಿಯಾವ್’!

ಸಹಕಾರ ನೀಡಿದವರಿಗೆ ಅವಕಾಶ ಸಿಕ್ಕಾಗ ಕೈಲಾದ ಸಹಾಯ-ಸಹಕಾರ ಮಾಡುವುದು, ಸಾಧ್ಯವಾಗದಿದ್ದಲ್ಲಿ ಕೃತಜ್ಞತೆ ತೋರಿ, ಅಂಥವರನ್ನು ಗೌರವದಿಂದ ಕಾಣುವುದು ಸನಾತನ ಧರ್ಮದ ಮೂಲ ಆಶಯ. ಮೂಲಭೂತವಾದಿಗಳ ಕಪಿಮುಷ್ಟಿಯಲ್ಲಿರುವ, ಧರ್ಮಾಧಾ ರಿತ ಆಶಯಗಳ ಮೇಲೆ ಅಧಿಕಾರದಲ್ಲಿ ಇರುವ ಬಾಂಗ್ಲಾದೇಶದ ಸರಕಾರ ಇದೆಲ್ಲವನ್ನೂ ಗಾಳಿಗೆ ತೂರಿ ಕ್ರೂರತೆ-ಕೃತಘ್ನತೆ ಮೆರೆದು ಭಾರತದ ಮೇಲೆ ಮತ್ತು ಅಲ್ಲಿನ ಹಿಂದೂಗಳ ಮೇಲೆ ದ್ವೇಷ ಸಾಧಿಸುತ್ತಿರುವುದು ಅಕ್ಷಮ್ಯ!

ಮುಂದಿನ ದಿನಗಳಲ್ಲಿ ಈ ತಪ್ಪಿಗೆ ಅಲ್ಲಿನ ಸರಕಾರ ದೊಡ್ಡ ಪ್ರಮಾಣದಲ್ಲಿ ದಂಡ ತೆರ ಬೇಕಾಗುತ್ತದೆ. ಅಸಹಿಷ್ಣುತೆಯನ್ನು ಸಹಿಸಲಸಾಧ್ಯ. ಬಾಂಗ್ಲಾದ ಈ ಗಲಭೆ, ದೊಂಬಿ, ಭಾರತ ವಿರೋಧಿ ನೀತಿಯನ್ನು ಹತ್ತಿಕ್ಕಲು ಅದರ ಕಿವಿ ಹಿಂಡುವ ಕೆಲಸ ಭಾರತದ ಕಡೆಯಿಂದ ತುರ್ತಾಗಿ ಆಗಬೇಕಾಗಿದೆ.

ಅಲ್ಲಿನ ಹಿಂದೂಗಳನ್ನು ರಕ್ಷಿಸುವುದು ಸದ್ಯದ ಆದ್ಯತೆ. ಗಡಿಯಲ್ಲಿ ಈಗಾಗಲೇ ಗರಿಷ್ಠ ಕಟ್ಟೆಚ್ಚರ ವಹಿಸಲಾಗಿದೆ. ಮತಾಂಧತೆಯ ಕಪಿಮುಷ್ಟಿಯಲ್ಲಿರುವ ಬಾಂಗ್ಲಾದೇಶವು, ತಾನು ಈಗ ಮಾಡುತ್ತಿರುವ ಅಪಸವ್ಯಗಳನ್ನು ತಿದ್ದಿಕೊಂಡು, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮರುಸ್ಥಾಪಿಸಿ, ನಿಕಟ ಭವಿಷ್ಯದಲ್ಲಿ ಭಾರತದೊಂದಿಗೆ ಸ್ನೇಹದಿಂದ ವರ್ತಿಸಿ-ವ್ಯವಹರಿಸಿ ದರೆ ಆ ದೇಶಕ್ಕೇ ಹಿತ.

ಇಲ್ಲವಾದಲ್ಲಿ ಇದಕ್ಕೆ ಸೂಕ್ತ ಮತ್ತು ಗರಿಷ್ಠ ಬೆಲೆಯನ್ನು ಅದು ತೆರಬೇಕಾದೀತು, ಮುಟ್ಟಿ ನೋಡಿಕೊಳ್ಳುವ ಹೊಡೆತಗಳನ್ನೂ ತಿನ್ನಬೇಕಾದೀತು. ನೋಡುವಷ್ಟು ನೋಡಿ, ಕೊನೆಗೆ ಈ ದಾಳಿ-ಹಿಂಸೆ-ಅನಾಚಾರಗಳಿಗೆ ಪೂರ್ಣವಿರಾಮ ಹಾಕಲು ಬದ್ಧವಾಗಿರುವ, ದೇಶ, ಪ್ರಜೆ ಗಳು ಮತ್ತು ಎಲ್ಲರ ಹಿತಾಸಕ್ತಿಯೇ ಮೂಲ ಮಂತ್ರವಾಗಿರುವ ಸದೃಢ-ಸುಭದ್ರ ಮತ್ತು ಬಲಾಢ್ಯ ಕೇಂದ್ರ ಸರಕಾರ ಭಾರತದಲ್ಲಿದೆ ಎನ್ನುವ ನೆನಪು ಮತ್ತು ಅರಿವು ಬಾಂಗ್ಲಾದ ಧರ್ಮಾಂಧ ಪುಂಡ-ಪೋಕರಿಗಳಿಗೆ ಇರಲಿ.

ಭಾರತದ ಹಿತ ಕಾಪಾಡಲು, ಬಾಂಗ್ಲಾದೇಶದಲ್ಲಿರುವ ಹಿಂದೂ ಶ್ರದ್ಧಾ ಕೇಂದ್ರಗಳ, ಹಿಂದೂ ಗಳ ರಕ್ಷಣೆಗೆ ಭಾರತ ಸರಕಾರ ಕಟಿಬದ್ಧವಾಗಿದೆ ಎಂದು ತೋರಿಸುವ, ಕಾರ್ಯಪ್ರವೃತ್ತ ವಾಗಬೇಕಾದ ಕಾಲ ಸನ್ನಿಹಿತವಾಗಿದೆ. ‘ದಂಡಂ ದಶಗುಣಂ ಭವೇತ್’ ಎಂಬುದು ಈಗ ಜಪಿಸಬೇಕಿರುವ ಮಂತ್ರವಾಗಿದೆ...

(ಲೇಖಕರು ಪ್ರಚಲಿತ ವಿದ್ಯಮಾನಗಳ ವಿಶ್ಲೇಷಕರು)