ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Roopa Gururaj Column: ಕಥಾಸರಿತ್ಸಾಗರ: ಶ್ರೀಮಂತರನ್ನು ದೋಚುವ ವಿದಗ್ಧ ಚೋರನ ಕಥೆ

ಪ್ರಧಾನ ಮಂತ್ರಿಯು ತನಿಖೆಗೆಂದು ಖಜಾನೆಗೆ ತೆರಳಿ, ನೆಲದ ಮೇಲೆ ಬಿದ್ದಿದ್ದ ಆ ಮೂರನೆಯ ಅಮೂಲ್ಯ ರತ್ನವನ್ನು ಕಂಡು, ಆಸೆಯ ಅಮಲಿನಲ್ಲಿ ಅದನ್ನು ತನ್ನ ಜೇಬಿಗೆ ಇಳಿಸಿಕೊಂಡು ರಾಜನಿಗೆ, ಮೂರು ರತ್ನಗಳೂ ಕಳವಾಗಿವೆ ಎಂದು ಸುಳ್ಳು ವರದಿ ಒಪ್ಪಿಸಿದನು! ರಾಜನು ತಕ್ಷಣವೇ ನಗರದ ಸಕಲ ಕಳ್ಳರನ್ನೂ ಬಂಽಸಲು ಆeಪಿಸಿ, ಚತುರನನ್ನೂ ಸಭೆಗೆ ತರಿಸಿದನು.

ಒಂದೊಳ್ಳೆ ಮಾತು

ಕನಕಪುರ ನಗರದ ರಾಜ ವೀರಸೇನನ ಆಳ್ವಿಕೆಯಲ್ಲಿ ಚತುರನೆಂಬ ಯುವಕನೊಬ್ಬನಿದ್ದನು. ಆತ ಅಪ್ರತಿಮ ಬುದ್ಧಿಶಾಲಿ, ಶಾಸ್ತ್ರಜ್ಞಾನ ಮತ್ತು ಚತುರೋಪಾಯಗಳಲ್ಲಿ ನಿಸ್ಸೀಮ. ಆದರೆ ಬಡತನ ಮತ್ತು ಅನ್ಯಾಯದ ಸಾಮಾ ಜಿಕ ವ್ಯವಸ್ಥೆಯ ಮೇಲಿನ ಸಿಟ್ಟಿನಿಂದ ಆತ ಕಳ್ಳತನದ ಹಾದಿ ಹಿಡಿದಿ ದ್ದನು. ಆತನ ಕಳ್ಳತನ ಸಾಮಾನ್ಯವಾದದ್ದಾಗಿರಲಿಲ್ಲ. ಕೇವಲ ಅಕ್ರಮವಾಗಿ ಸಂಪತ್ತು ಕೂಡಿಹಾಕಿದ ಧನಿಕರ ಮನೆಗಳನ್ನಷ್ಟೇ ಆತ ದೋಚುತ್ತಿದ್ದನು. ಆತನ ತಂತ್ರಗಾರಿಕೆ ಎಷ್ಟು ನಿಖರವಾ ಗಿತ್ತೆಂದರೆ, ರಾಜಭಟರಿಗೆ ಆತನ ನೆರಳನ್ನೂ ಮುಟ್ಟಲಾಗುತ್ತಿರಲಿಲ್ಲ.

ಹೀಗಾಗಿ ಆತನಿಗೆ ‘ವಿದಗ್ಧ ಚೋರ’ (ಬುದ್ಧಿವಂತ ಕಳ್ಳ) ಎಂಬ ಹೆಸರು ಬಂದಿತ್ತು. ಒಮ್ಮೆ ರಾಜ ವೀರಸೇನನು ತನ್ನ ಭಟರ ಅಸಹಾಯಕತೆಯನ್ನು ಕಂಡು, ತಾನೇ ಸಾಮಾನ್ಯ ನಾಗರಿಕನ ವೇಷ ಧರಿಸಿ ರಾತ್ರಿ ಕಳ್ಳನ ಶೋಧಕ್ಕೆ ಹೊರಟನು. ದಾರಿಯಲ್ಲಿ ಆತನಿಗೆ ಚತುರನೇ ಎದುರಾದನು. ರಾಜನು ತಾನೂ ಒಬ್ಬ ಕಳ್ಳನೆಂದು ನಟಿಸಿ, ನಾನೂ ಕಳ್ಳತನ ಮಾಡಲು ಹೊರಟಿದ್ದೇನೆ, ಜೊತೆಯಾಗಿ ಹೋಗೋಣ ಎಂದನು.

ಇದನ್ನೂ ಓದಿ: Roopa Gururaj Column: ಕಥಾ ಸರಿತ್ಸಾಗರ: ಸೌಂದರ್ಯದ ಜೊತೆಗೆ ಬುದ್ದಿವಂತಿಕೆಗೆ ಹೆಸರಾದ ಉಪಕೋಶೆ

ಚತುರನು ನಗುತ್ತಾ, ನಾನು ಕಳ್ಳನೇ ಆದರೂ ನನ್ನದೊಂದು ನಿಯಮವಿದೆ- ಕಷ್ಟಪಟ್ಟು ದುಡಿಯು ವವರನ್ನು, ಬಡವರನ್ನು ನಾನು ಮುಟ್ಟುವುದಿಲ್ಲ. ನಾಳೆಯೇ ರಾಜನ ಅರಮನೆಯ ಬೊಕ್ಕಸವನ್ನು ದೋಚುವುದು ನನ್ನ ಗುರಿ ಎಂದನು. ಇಬ್ಬರೂ ಮಧ್ಯರಾತ್ರಿ ಅರಮನೆಯ ಖಜಾನೆಯನ್ನು ಸುಲಭ ವಾಗಿ ಪ್ರವೇಶಿಸಿದರು. ಖಜಾನೆಯಲ್ಲಿದ್ದ ಕೋಟ್ಯಂತರ ರೂಪಾಯಿ ಬೆಲೆಬಾಳುವ ಮೂರು ದಿವ್ಯ ರತ್ನಗಳನ್ನು ಚತುರನು ಹೊರತೆಗೆದನು. ರಾಜನಿಗೆ ಆಶ್ಚರ್ಯ ವಾಯಿತು. ಏಕೆಂದರೆ ಚತುರನು ಅದರಲ್ಲಿ ಕೇವಲ ಎರಡನ್ನು ತೆಗೆದುಕೊಂಡು, ಮೂರನೆಯದನ್ನು ಅ ನೆಲದ ಮೇಲೆ ಬಿಟ್ಟನು!

ಕಾರಣ ಕೇಳಿದಾಗ ಚತುರನು, ನಾವಿಬ್ಬರೇ ಬಂದಿರುವುದು; ಇಬ್ಬರಿಗೆ ತಲಾ ಒಂದೊಂದು ರತ್ನ ಸಾಕು. ಮೂರನೆಯದನ್ನು ತೆಗೆದುಕೊಂಡರೆ ನಮ್ಮಿಬ್ಬರಲ್ಲಿ ಜಗಳವಾಗುತ್ತದೆ ಅಥವಾ ಅದು ದುರಾಶೆಯಾಗುತ್ತದೆ. ನಮ್ಮ ಹೊಟ್ಟೆಪಾಡಿಗೆ ಮೀರಿದ ದುರಾಶೆ ಸರ್ವನಾಶಕ್ಕೆ ದಾರಿ ಎಂದು ಹೇಳಿ ಒಂದು ರತ್ನವನ್ನು ವೇಷದಲ್ಲಿದ್ದ ರಾಜನಿಗೆ ಕೊಟ್ಟು ಹೊರಟುಹೋದನು. ಮಾರನೆಯ ದಿನ ಬೆಳಿಗ್ಗೆ ಖಜಾನೆ ಕಳವಾಗಿರುವುದು ರಾಜಸಭೆಗೆ ತಿಳಿಯಿತು.

ಪ್ರಧಾನ ಮಂತ್ರಿಯು ತನಿಖೆಗೆಂದು ಖಜಾನೆಗೆ ತೆರಳಿ, ನೆಲದ ಮೇಲೆ ಬಿದ್ದಿದ್ದ ಆ ಮೂರನೆಯ ಅಮೂಲ್ಯ ರತ್ನವನ್ನು ಕಂಡು, ಆಸೆಯ ಅಮಲಿನಲ್ಲಿ ಅದನ್ನು ತನ್ನ ಜೇಬಿಗೆ ಇಳಿಸಿಕೊಂಡು ರಾಜನಿಗೆ, ಮೂರು ರತ್ನಗಳೂ ಕಳವಾಗಿವೆ ಎಂದು ಸುಳ್ಳು ವರದಿ ಒಪ್ಪಿಸಿದನು! ರಾಜನು ತಕ್ಷಣವೇ ನಗರದ ಸಕಲ ಕಳ್ಳರನ್ನೂ ಬಂಽಸಲು ಆeಪಿಸಿ, ಚತುರನನ್ನೂ ಸಭೆಗೆ ತರಿಸಿದನು. ಸಭೆಯಲ್ಲಿ ಚತುರನು ನಿಲ್ಲುತ್ತಿದ್ದಂತೆ, ರಾಜನು ಕಳವಾದ ರತ್ನಗಳ ಲೆಕ್ಕ ಕೇಳಿದನು. ಚತುರನು ಕಿಂಚಿತ್ತೂ ಅಂಜದೆ, ಪ್ರಭು, ನಾನು ಕದ್ದದ್ದು ಕೇವಲ ಎರಡು ರತ್ನಗಳನ್ನು ಮಾತ್ರ; ಒಂದನ್ನು ನನ್ನ ಜೊತೆಗಿದ್ದ ಅಪರಿಚಿತನಿಗೆ ಕೊಟ್ಟೆ, ಇನ್ನೊಂದು ನನ್ನ ಬಳಿಯಿದೆ. ಮೂರನೆಯ ರತ್ನವನ್ನು ನಾನು ಅ ಬಿಟ್ಟುಬಂದಿದ್ದೆ. ಅದನ್ನು ನಿಮ್ಮ ಮಂತ್ರಿಯವರೇ ಕದ್ದು ತಮ್ಮ ಜೇಬಿನ ಲ್ಲಿಟ್ಟುಕೊಂಡಿದ್ದಾರೆ! ಎಂದು ಗುಡುಗಿದನು.

ಮಂತ್ರಿಯನ್ನು ಪರೀಕ್ಷಿಸಿದಾಗ ಆ ರತ್ನ ಹೊರಬಿತ್ತು! ರಾಜನ ಎದುರೇ ಮಂತ್ರಿಯ ಕಪಟ ಮುಖವಾ ಡ ಕಳಚಿ ಬಿದ್ದಿತು. ರಾಜನು ತನ್ನ ವೇಷದ ರಹಸ್ಯವನ್ನು ಸಭೆಗೆ ತಿಳಿಸಿ, ಚತುರನ ಅಪ್ರತಿಮ ಜಾಣ್ಮೆ, ನಿರ್ಭಯತೆ ಮತ್ತು ದುರಾಶೆಯಿಲ್ಲದ ನಡವಳಿಕೆಗೆ ಬೆರಗಾದನು. ಆತನ ಕಳ್ಳತನದ ಅಪರಾಧವನ್ನು ಮನ್ನಿಸಿ, ನಿನ್ನಂತಹ ತೀಕ್ಷ್ಣ ಬುದ್ಧಿವಂತ ಕತ್ತಲೆಯ ಹಾದಿಯಲ್ಲಿರುವುದು ನಾಡಿಗೆ ನಷ್ಟ ಎಂದು ಹೇಳಿ, ಆತನಿಗೆ ಆಸ್ಥಾನದ ಪ್ರಮುಖ ಅಧಿಕಾರವನ್ನು ನೀಡಿ ಗೌರವಿಸಿದನು.

ಚತುರನು ಕಣ್ಣೀರಿಡುತ್ತಾ ಕಳ್ಳತನದ ಮಾರ್ಗವನ್ನು ಶಾಶ್ವತವಾಗಿ ತೊರೆದು, ರಾಜನಿಷ್ಠೆಯಿಂದ ಪ್ರಜೆಗಳ ಸೇವೆಗೆ ತನ್ನ ಬುದ್ಧಿಯನ್ನು ಮುಡಿಪಾಗಿಟ್ಟನು. ನಮಗೆ ಬುದ್ಧಿ ಅಥವಾ ಪ್ರತಿಭೆಯಿರು ವುದು ದೊಡ್ಡದಲ್ಲ ಅದು ಸಮಾಜದ ಒಳಿತಿಗೆ ಬಳಕೆಯಾಗುತ್ತಿದೆಯೇ ಅಥವಾ ಕೆಡುಕಿಗೋ ಎಂಬುದು ಮುಖ್ಯ. ಹರಿತವಾದ ಚಾಕುವನ್ನು ಹಣ್ಣು ಹೆಚ್ಚಲೂ ಬಳಸಬಹುದು ಹಾಗೆ ಇನ್ನೊಬ್ಬರ ಪ್ರಾಣ ತೆಗೆಯಲೂ ಬಳಸಬಹುದು.

ನಮ್ಮ ಬುದ್ಧಿವಂತಿಕೆಯಿಂದ ನಾಲ್ಕು ಜನಕ್ಕೆ ಉಪಕಾರವಾಗಬೇಕು ಮತ್ತೊಬ್ಬರಿಗೆ ತೊಂದರೆ ಆಗುತ್ತಿದೆ ಎಂದರೆ, ಅದು ಖಂಡಿತ ಕೆಟ್ಟದ್ದೇ. ಅನೇಕ ಪ್ರತಿಭಾವಂತರು ಜೀವನದಲ್ಲಿ ಒಳ್ಳೆಯ ಸ್ಥಾನ ಗಳಿಸಲಾಗದೆ ಇರುವುದು ಇದೇ ಕಾರಣದಿಂದ. ಒಳ್ಳೆಯ ಪ್ರತಿಭೆಯ ಜೊತೆ ಒಳ್ಳೆಯ ಮನಸ್ಸು, ಪ್ರಾಮಾಣಿಕತೆ ಇದ್ದಾಗ ಮಾತ್ರ ಅದು ನೂರಾರು ಜನರ ಕಣ್ಣಿಗೆ ಕಾಣುತ್ತದೆ. ಬೆಳೆಯುವುದು ದೊಡ್ಡದಲ್ಲ ಆದರೆ ಆತ್ಮವಿಶ್ವಾಸ ದಿಂದ ನಮ್ಮ ಸ್ವಂತ ಪರಿಶ್ರಮದಿಂದ ಬೆಳೆದು ಬೆಳಗಿದಾಗ ಅದಕ್ಕೊಂದು ಅರ್ಥ.

ರೂಪಾ ಗುರುರಾಜ್

View all posts by this author